ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 16-05-2019

By blogger on ಗುರುವಾರ, ಮೇ 16, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 16-05-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 79/2019 ಕಲಂ 379 ಐಪಿಸಿ:-ದಿನಾಂಕ 16/05/2019 ರಂದು ಬೆಳಿಗ್ಗೆ 7-30 ಎ.ಎಂ.ಕ್ಕೆ ಎಮ್.ಹೊಸಳ್ಳಿ ತಾಂಡಾದ ಸೀಮೆಯಲ್ಲಿ ಬರುವ ಸರಕಾರಿ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತರಾದ ಟಿಪ್ಪರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿಕೊಂಡು ತಮ್ಮ ಟಿಪ್ಪರ ನಂ ಕೆ.ಎ-01-ಎಜಿ-7187 ನೆದ್ದರಲ್ಲಿ ಮರಳು ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಮತ್ತು ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.

 ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 82/2019 ಕಲಂ: 143, 147, 148, 307, 504, 506, 509 ಸಂಗಡ 149 ಐಪಿಸಿ:-ದಿನಾಂಕ 16.05.2019 ರಂದು ಮದ್ಯಾಹ್ನ 1.30 ಪಿ.ಎಂ ಕ್ಕೆ ಪಿರ್ಯಾಧಿ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ  ಪಿರ್ಯಾಧಿಗೆ ಸೇರಿದ ಚಿಂತನಪಲ್ಲಿ ಗ್ರಾಮದ ಸೀಮಾಂತರದ 10 ಎಕರೆ 13 ಗುಂಟೆ ಜಮೀನು ಮತ್ತು 5 ಕೊಣೆ ಮನೆ ಆಸ್ತಿ ವಿಷಯವಾಗಿ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಪಿರ್ಯಾಧಿ ಏಕಾಂತದಲ್ಲಿದ್ದಾಗ ಏಕಾಏಕಿಯಾಗಿ ಲೇ ಸೂಳಿ ಮಗಲೇ ಬೋಸಡಿ ರಂಡಿ ಅಂತಾ ಅವಾಚ್ಯವಾಗಿ ಬೈದು ನಿನ್ನನ್ನು ಸಣ್ಣ ಕಡಿದು ಹಳ್ಳದಲ್ಲಿ ಊತು ಹಾಕುತ್ತೇವೆ ನಿನಗೆ ಮತ್ತು ನಿನ್ನ ಮಗಳಿಗೆ ಬಿಡಿವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿದ್ದು ಅಲ್ಲದೆ ದಿನಾಂಕ 06.05.2019 ರಂದು ರಾತ್ರಿ 1.15 ಗಂಟೆ ಸುಮಾರಿಗೆ ಪಿರ್ಯಾಧಿ ಅಳಿಯ ಮೂತ್ರ ವಿಸರ್ಜನೆ ಮಾಡಲು ಹೋದಾಗ ಪರಿಚಿತರಲ್ಲದ ವ್ಯಕ್ತಿಗಳು ಚಾಕುವಿನಿಂದ ಕೊಲ್ಲಲ್ಲು ಪ್ರಯತ್ನಿಸಿದ ಬಗ್ಗೆ ಅಪರಾಧ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 126/2019 ಕಲಂ 87  ಕೆ.ಪಿ ಆಕ್ಟ:- ದಿನಾಂಕ 16/04/2019 ರಂದು 12:30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ .ಜಿ. ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು 07 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ 16/04/2019 ರಂದು 08:00 ಎ.ಎಂ ಠಾಣೆಯಲ್ಲಿದ್ದಾಗ  ಚಟನಳ್ಳಿ ಗ್ರಾಮದ ಹನುಮಾನ ಗುಡಿಯ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯ್ಲಲಿ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ಸಿಬ್ಬಂದಿ ಶ್ರೀ ದುರ್ಗಪ್ಪ ಸಿಪಿಸಿ-190 ರವರು ತನಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ಹೇಳಿದ್ದು, ಫಿರ್ಯಾದಿಯವರು ಠಾಣೆಯ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ 07 ಜನ ಆಪಾಧಿತರನ್ನು ಹಿಡಿದು ಆಪಾಧಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1250=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 35/2018 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 13:00 ಪಿ.ಎಮ್.ಕ್ಕೆ  ಫಿರ್ಯಾದಿಯವರ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 126/2019 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.  

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 127/2019.ಕಲಂಃ 78(3) ಕೆ.ಪಿ.ಆ್ಯಕ್ಟ:- ದಿನಾಂಕ 16/05/2019 ರಂದು 15-30 ಗಂಟೆಗೆ ಸ|| ತ|| ಪಿಯರ್ಾದಿ ನಾಗರಾಜ. ಜಿ, ಪಿ.ಐ. ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 16/05/2019 ರಂದು 12-40 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ರಸ್ತಾಪೂರ ಗ್ರಾಮದ ಚರಬಶವೇಶ್ವರ ಕ್ರಾಸ್ ಹತ್ತಿರ ಇರುವ ಸಾರ್ವಜನಿಕ ಖುಲಾ ಜಾಗದಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದಾನೆ ಅಂತ ಮಾಹಿತಿ ಬಂದಮೇರೆಗೆ ಠಾಣೆಯ ಸಿಬ್ಬಂದಿಯವರೊಂದಿಗೆ ಮತ್ತು ಪಂಚರೊಂದಿಗೆ ಹೋಗಿವ ಸದರಿಯವನು ಸಾರ್ವಜನಿಕರಿಂದ ಹಣಪಡೆದು ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು 13-25 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಸಾರ್ವಜನಿಕರಿಗೆ ಕೂಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವನು ಸಿಕ್ಕಿಬಿದ್ದಿದ್ದು, ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ. ನಾನು, ಪಂಚರ ಸಮಕ್ಷಮದಲ್ಲಿ ದಾಳಿಯಲ್ಲಿ ಸಿಕ್ಕ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಲ್ಲಪ್ಪ ತಂದೆ ಶರಬಣ್ಣ ಗಿರಣಿ ವ|| 20 ಜಾ|| ಕುರುಬುರ ಉ|| ಮಟಕಾಬರೆದುಕೊಳ್ಳುವದು ಸಾ|| ರಸ್ತಾಪೂರ, ಅಂತ ಹೇಳಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 1210/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ: 00-00 ರೂ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 13-30 ರಿಂದ 14-30 ರವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 15-00 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ ಒಂದು ವರದಿಯನ್ನು ತಯಾರಿಸಿ 15-30 ಗಂಟೆಗೆ ಮುಂದಿನ ಕ್ರಮಕೈಕೊಳ್ಳುವಂತೆ ವರದಿ ಹಾಜರಪಡಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ,ನಂ 36/2019 ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ದಾಖಲಿಸಿಕೊಂಡು. ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಹುಲಗಪ್ಪ ಪಿ.ಸಿ. 344. ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 16-00 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 127/2019 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 128/2019 ಕಲಂ 32, 34 ಕೆ.ಇ ಆಕ್ಟ:- ದಿನಾಂಕ 16/05/2019 ರಂದು ಸಾಯಂಕಾಲ 19-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ್ ಠಾಣೆ ರವರು ಮೂಲ ಜಪ್ತಿ ಪಂಚನಾಮೆ,  ಮುದ್ದೆಮಾಲಿನೊಂದಿಗೆ ವರದಿ ಹಾಜರ ಪಡಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 16/05/2019 ರಂದು 15-40 ಗಂಟೆಗೆ ಠಾಣೆಯಲ್ಲಿದ್ದಾಗ ತಂಗಡಿಗಿ ಗ್ರಾಮದ ಅಡಿಕಟ್ಟಿ ಹತ್ತಿರ ಹೊಟೇಲ್ ಮುಂದೆ ಒಬ್ಬ ವ್ಯಕ್ತಿ ಅಕ್ರಮವಾಗಿ ಲೈಸೇನ್ಸ್ ಹೊಂದದೆ ಸಾರ್ವಜನಿಕರಲ್ಲಿ ಮದ್ಯ ಮಾರಾಟ ಮಾಡುತಿದ್ದಾನೆ ಅಂತ ನನಗೆ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರು ಪಂತ್ತು ಪಂಚರೊಂದಿಗೆ ಸದರಿ ಗ್ರಾಮಕ್ಕೆ ಹೋಗಿ ಅಡಿಕಟ್ಟಿ ಹತ್ತಿರ ಹೋಟೆಲ್ ಮುಂದೆ ಒಬ್ಬ  ವ್ಯಕ್ತಿ ಮದ್ಯದ ಪಾಕೇಟಗಳನ್ನು ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸದರಿಯವನ ಮೇಲೆ 16-50 ಗಂಟೆಗೆ ದಾಳಿ ಮಾಡಿದಾಗ ಸದರಿ ವ್ಯಕ್ತಿಯು ಓಡಿ ಹೋಗಿದ್ದು ಹಿಂಬಾಲಿಸಿದರು ಸಿಕ್ಕಿರುವುದಿಲ್ಲ. ನಂತರ ಸದರಿ ಹೋಟೆಲ್ ಮುಂದೆ ಬಂದು ನಾನು ಪಂಚರ ಸಮಕ್ಷಮದಲ್ಲಿ ಪರೀಶಿಲಿಸಿ ನೋಡಲಾಗಿ ಒಂದು ಬಿಳಿ ಪ್ಲಾಸ್ಟೀಕ ಚೀಲವಿದ್ದು ಅದರಲ್ಲಿ ಮದ್ಯದ ಪಾಕೇಟಗಳು ಇದ್ದು ಮದ್ಯದ ಪಾಕೇಟ ಪರಿಶೀಲಿಸಿನೋಡಲಾಗಿ 90 ಎಮ್.ಎಲ್.ನ್ 56 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ ಇದ್ದು, ಒಂದು 90 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 30 ರೂಪಾಯಿ 32 ಪೈಸೆ ಇರುತ್ತದೆ. ಒಟ್ಟು 56 ಮದ್ಯದ ಪಾಕೇಟಿನ ಕಿಮ್ಮತ್ತ 1697/- ರೂಪಾಯಿ 92 ಪೈಸೆ ಆಗುತ್ತದೆ. ಒಂದು ಬಿಳಿ ಪ್ಲಾಸ್ಟೀಕ ಚೀಲದ ಅಂ:ಕಿ: 00=00 ನೇದ್ದು, ಸದರಿ ವ್ಯಕ್ತಿಯು ಮದ್ಯ ಮಾರಾಟ ಪರವಾನಿಗೆ ಪತ್ರ ಪಡೆಯದೆ ಮಾರಾಟ ಮಾಡುತಿದ್ದ ಬಗ್ಗೆ ದೃಡಪಟ್ಟಿರುತ್ತದೆ. 90 ಎಮ್.ಎಲ್.ನ. 56 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟಗಳಲ್ಲಿ ಒಂದು 90 ಎಂ.ಎಲ್ ನ ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟನ್ನು, ತಜ್ಞರ ಪರೀಕ್ಷೆಗಾಗಿ ಕಳುಹಿಸುವ ಸಲುವಾಗಿ ಒಂದು ಬಿಳಿ ಬಟ್ಟೆಯ ಚೀಲಗದಲ್ಲಿ ಹಾಕಿ ಅದರ ಮೇಲೆ ಠಾಣೆಯ ಇಂಗ್ಲೀಷ ಅಕ್ಷರದ ಖಊಕ  ಮಾದರಿ ಶಿಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿಗಳು ಅಂಟಿಸಿ ಮುಂದಿನ ತನಿಖೆಗಾಗಿ ತಾಬೆಗೆ ತೆಗೆದುಕೊಂಡು, ಮದ್ಯ ಮಾರಾಟ ಮಾಡುವ ವ್ಯಕ್ತಿಯ ಬಗ್ಗೆ ಅಡಿಕಟ್ಟಿ ಹತ್ತಿರ ಕುಳಿತಿದ್ದ ಮಂಜು ತಂದೆ ಮಲ್ಲಣ್ಣ ಬುದೂರ ವ|| 25 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ತಂಗಡಿಗಿ ಈತನಿಗೆ ಓಡಿ ಹೋದ ವ್ಯಕ್ತಿಯ ಹೆಸರು ವಿಳಾಸದ ಬಗ್ಗೆ ವಿಚಾರಿಸಿದಾಗ ಸಿನಪ್ಪ ತಂದೆ ಖಂಡಪ್ಪ ಶಹಾಪೂರ ವ|| 52 ಜಾ|| ಕಬ್ಬಲಿಗ ಉ|| ಹೋಟೆಲ್ ಕೆಲಸ ಸಾ|| ತಂಗಡಿಗಿ ಅಂತ ಹೇಳಿದನು. ಉಳಿದ ಮುದ್ದೆ ಮಾಲನ್ನು 17-00 ಗಂಟೆಯಿಂದ 18-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿರುತ್ತದೆ. ಸದರಿ ವ್ಯಕ್ತಿಯು ಓಡಿ ಹೋಗುವಾಗ ನೋಡಿದ್ದು ಪುನಃ ನೋಡಿದಲ್ಲಿ ಗುರುತಿಸುತ್ತೆನೆ. ನಂತರ ಜಪ್ತಿ ಪಡಿಸಿಕೊಂಡ ಮುದ್ದೆಮಾಲು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 18-40 ಗಂಟೆಗೆ ಬಂದ್ದಿದ್ದು, ಠಾಣೆಯಲ್ಲಿ ವರದಿ ತಯಾರಿಸಿ ವರದಿಯೊಂದಿಗೆ ಮೂಲ  ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ಕಲಂ 32, 34 ಕೆ.ಇ ಅಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ನಾನು 19-30 ಗಂಟೆಗೆ ಸರಕಾರದ ಪರವಾಗಿ ವರದಿಯ ಮೂಲಕ ಸದರಿ ವ್ಯಕ್ತಿಯ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 128/2019 ಕಲಂ 32, 34 ಕೆ.ಇ. ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 114/2019 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ: 16-05-2019 ರಂದು 1 ಪಿ.ಎಂ. ಸುಮಾರಿಗೆಠಾಣೆಯಎಸ್ ಹೆಚ್ ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಗುರುಬಸಪ್ಪ ಕೆ. ಪಾಟೀಲ್ಕಂದಾಯ ನಿರೀಕ್ಷಕರು ಸುರಪುರಇವರುಠಾಣೆಗೆಒಂದು ಮರಳು ತುಂಬಿದಟಿಪ್ಪರದೊಂದಿಗೆಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ:16-05-2019 ರಂದು ಮುಂಜಾನೆ 10 ಎ.ಎಮ್ದಲ್ಲಿ ನಾನು ಮತ್ತು ತಹಸೀಲ್ದಾರರು ಸುರಪುರ ಸುರೇಶಆರ್ ಅಂಕಲಗಿ ಸರ್ ಹಾಗೂ ಅರಕೇರಾ(ಕೆ) ಗ್ರಾಮದಗ್ರಾಮ ಲೇಕಪಾಲಕರು ಮತ್ತುಗ್ರಾಮ ಸಹಾಯಕರುಕೂಡಿ ಬೆಳೆ ಪರಿಹಾರ ಸಲುವಾಗಿ ದಾಖಲೆಗಳನ್ನು ಸಂಗ್ರಹಿಸಲು ಗ್ರಾಮಕ್ಕೆ ತೆರಳುತ್ತಿದ್ದಾಗ ನಮ್ಮ ತಹಸೀಲ್ದಾರರ ಕಾಯರ್ಾಲದಜೀಪ್ ನಂಬರ ಕೆಎ-33, ಜಿ-0233 ನೇದ್ದರಡ್ರೈವರನಾದ ಹಣಮಂತನು ನಮ್ಮ ಸಂಗಡವೆ ಹಾಜರುಇದ್ದನು ಸಮಯ 10-15 ಎ.ಎಮ್ ಕ್ಕೆ ಲಕ್ಷ್ಮಿಪೂರಕ್ರಾಸ ಹತ್ತಿರ ಹೋಗುತ್ತಿರುವಾಗ ಹೇಮನೂರ ಸಿಮಾಂತರದ ಕೃಷ್ಣಾ ನದಿ ಪಾತ್ರದಿಂದಟಿಪ್ಪರ ಚಾಲಕನು ಸರಕಾರಕ್ಕೆರಾಜಧನವನ್ನುತುಂಬದೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುವುದನ್ನು ನಾವೆಲ್ಲರೂ ಸದರಿಟಿಪ್ಪರನ್ನು ನಿಲ್ಲಿಸಲು ಕೈ ಮಾಡಿದೆವುಟಿಪ್ಪರಡ್ರೈವರನನ್ನು ಕೆಳಗೆ ಇಳಿಸಿ ಸದರಿಟಿಪ್ಪರನ್ನು ಪರಿಶೀಲಿಸಿದಾಗ ಈ ಕೆಳಗಿನಂತೆ ಇರುತ್ತದೆಟಿಪ್ಪರ ನಂಬರ ಕೆಎ-33, ಎ-2159 ನೇದ್ದರಚಾಲಕನಾದ ಸಿದ್ದಣ್ಣ ತಂದೆಚಂದ್ರಶೇಖರ ಸಾಹು ವಯಾ: 25 ವರ್ಷ ಉ:ಡ್ರೈವರ ಜಾ:ಲಿಂಗಾಯತ ಸಾ:ಹೊಸಕೇರಾಅಂತಾ ತಿಳಿಸಿದನು ಸದರಿಯವನಿಗೆ ಮರಳು ತುಂಬಿದ ಬಗ್ಗೆ ದಾಖಲಾತಿ ವಿಚಾರಿಸಲುಯಾವುದೆದಾಖಲಾತಿಇರುವದಿಲ್ಲ ಅಂತಾ ತಿಳಿಸಿ ನಮ್ಮಿಂದ ತಪ್ಪಿಸಿಕೊಂಡು ಓಡಿಹೊದನು. ಸದರಿಟಿಪ್ಪರ ಮುಖಾಂತರ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಬರುತ್ತಿರುವುದನ್ನು ಪರಿಶೀಲಿಸಿದಾಗ 6 ಘನ ಮೀಟರ ಮರಳು ಇದ್ದುಅಂದಾಜುಕಿಮ್ಮತ್ತು 4800/- ರೂಇದ್ದು ಸದರಿಟಿಪ್ಪರನ್ನು ನಾನೆ ಚಲಾಯಿಸಿಕೊಂಡು 1 ಪಿ.ಎಮ್ ಗೆ ಸುರಪುರ ಪೊಲೀಸ್ಠಾಣೆಗೆತಂದು ಒಪ್ಪಿಸಿದು ಸದರಿಟಿಪ್ಪರ ಚಾಲಕನ ಮೇಲೆ ಸೂಕ್ತ ಕಾನೂನು  ಪ್ರಕಾರಕ್ರಮಜರುಗುಸಬೇಕೇಂದು ವರದಿ ನಿಡಿದ ಮೇರೆಗೆಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!