ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-05-2019

By blogger on ಬುಧವಾರ, ಮೇ 15, 2019

          
 ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-05-2019       
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 30/2019  ಕಲಂ 279, 337, 338, 304(ಎ) ಐಪಿಸಿ:-ದಿನಾಂಕ 15/05/2019 ರಂದು ಸಮಯ 12-15 ಪಿ.ಎಂ.ಕ್ಕೆ  ಯಾದಗಿರಿ ಜಿಜಿಎಚ್ನಿಂದ ಪೋನ್ ಮೂಲಕ ಆರ್.ಟಿ.ಎ/ ಡೆತ್ ಎಮ್.ಎಲ್.ಸಿ ಅಂತಾ ಮಾಹಿತಿ ಮೇರೆಗೆ ಆಸ್ಪತ್ರೆಗೆ 12-30 ಪಿ.ಎಂ.ಕ್ಕೆ ಬೇಟಿ ನೀಡಿದ್ದು, ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ ಮೃತ ಗೋಬ್ರಿಬಾಯಿ ಈಕೆಯ ಮಗಳಾದ  ಶ್ರೀಮತಿ ಗೀತಾಬಾಯಿ ಗಂಡ ನಕ್ಕು ರಾಠೋಡ ವಯ;25 ವರ್ಷ, ಜಾ;ಲಂಬಾಣಿ, ಉ;ಕೂಲಿ ಕೆಲಸ, ಸಾ;ಅಚೋಲಾ ತಾಂಡ, ತಾ;ಜಿ;ಯಾದಗಿರಿ ಇವರು ತಮ್ಮದೊಂದು ಹೇಳಿಕೆ ಫಿಯರ್ಾದನ್ನು  ಸಮಯ 1-45 ಪಿ.ಎಂ. ದಿಂದ 2-45 ಪಿ.ಎಂ. ದ ವರೆಗೆ ನೀಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನನಗೆ ನಮ್ಮ ತಾಂಡಾದಲ್ಲಿಯೇ ಕೊಟ್ಟು ಮದುವೆ ಮಾಡಿದ್ದು ನನಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ. ಹೀಗಿದ್ದು ಇಂದು ದಿನಾಂಕ 15/05/2019 ರಂದು ಬೆಳಿಗ್ಗೆ ಅಂದಾಜು 10 ಎ.ಎಂ. ಸುಮಾರಿಗೆ ನಾನು ಮತ್ತು ನನ್ನ ತಾಯಿಯವರಾದ ಗೋಬ್ರಿಬಾಯಿ ಗಂಡ ಗಂಗಾರಾಮ ಚವ್ಹಾಣ ಮತ್ತು ನನ್ನ ಮಕ್ಕಳೊಂದಿಗೆ ಯಾದಗಿರಿಗೆ ಹೋಗಿ  ಸಂತೆ ಮಾಡಿಕೊಂಡು ಬಂದರಾಯಿತು ಅಂತಾ ತಯಾರಾಗಿ ನನ್ನ ತಂದೆಯಾದ ಗಂಗಾರಾಮ ಚವ್ಹಾಣ ಇವರಿಗೆ ಹೇಳಿ ಮನೆಯಿಂದ ಹೊರಟೆವು.   ನಮ್ಮ ತಾಂಡಾದ ಆಟೋ ಸ್ಟ್ಯಾಂಡಿಗೆ ಬಂದಾಗ ಆಗ ನಮ್ಮ ತಾಂಡಾದ ಆಟೋ ಟಂ,ಟಂ ನಂಬರ ಕೆಎ-33, ಎ-4936 ನೇದ್ದು ನಿಂತಿದ್ದು, ಅದರ ಚಾಲಕ ನಮ್ಮ ತಾಂಡಾದವರೇ ಆದ ರಾಮು ತಂದೆ ಸೇವು ರಾಠೋಡ ಈತನು ಯಾದಗಿರಿಗೆ ಹೋಗುತ್ತದೆ ಬರ್ರಿ ಅಂದಾಗ ನಾವುಗಳು ಎಲ್ಲರೂ ಆಟೋ ಟಂ,ಟಂ ದಲ್ಲಿ ಕುಳಿತೆವು ನಮ್ಮಂತೆಯೇ ಸದರಿ ಆಟೋದಲ್ಲಿ ನಮ್ಮ ತಾಂಡಾದ ಚಂದ್ರು ತಂದೆ ನಂದು ರಾಠೋಡ, ದೇವಿಬಾಯಿ ಗಂಡ ಬಾಲಿ ರಾಠೋಡ, ಬಾಲಿ ತಂದೆ ನಂದು ರಾಠೋಡ ಇವರು ಕೂಡ ಯಾದಗಿರಿಗೆ ಹೋಗುವ ಕುರಿತು ಕುಳಿತಿದ್ದರು. ಆಟೋವನ್ನು ಚಾಲಕ ರಾಮು ಈತನು ಚಾಲು ಮಾಡಿಕೊಂಡು ನಮ್ಮ ತಾಂಡಾದಿಂದ ಯಾದಗಿರಿ ಕಡಗೆ ಹೊರಟನು ಮಾರ್ಗ ಮದ್ಯೆ ಕ್ಯಾಸಪ್ಪನಳ್ಳಿ ಗ್ರಾಮದ ಹಣಮಂತ ತಂದೆ ಭೀಮರಾಯ ಮತ್ತು ಖಾನಳ್ಳಿ ಗ್ರಾಮದಲ್ಲಿ ಮಲ್ಲಪ್ಪ ತಂದೆ ಹಣಮಂತ ನಾಯಿಕೊಡಿ ಹಾಗೂ ಅವರ ಇಬ್ಬರು ಗಂಡು ಮಕ್ಕಳು ಆಟೋದಲ್ಲಿ ಏರಿ ಕುಳಿತರು ಆಟೋವನ್ನು ರಾಮು ಈತನು ಅಲ್ಲಿಪುರ ಕ್ರಾಸ್ ದಾಟಿದ ನಂತರ ಅತೀವೇಗವಾಗಿ ನಡೆಸಿಕೊಂಡು ಹೊರಟಾಗ ಆಗ ಆಟೋದಲ್ಲಿದ್ದ ನಾವುಗಳು ಆಟೋ ಚಾಲಕನಿಗೆ ನಿದಾನವಾಗಿ ನಡೆಸಿಕೊಂಡು  ಹೋಗು ಅಂತಾ ಹೇಳಿದರೂ ಕೂಡ ಕೇಳದೇ ಅದೇ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಾಗ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ವಾಡಿ-ಯಾದಗಿರಿ ಮುಖ್ಯ ರಸ್ತೆ ಮೇಲೆ ಬರುವ ಮುದ್ನಾಳ ಸೀಮಾಂತರದ ಎಸ್ಸಾರ್ ಪೆಟ್ರೋಲ್ ಬಂಕ್ ಮುಂದಿನ ಮುಖ್ಯ ರಸ್ತೆ ಮೇಲೆ ಆಟೋವನ್ನು ಪಲ್ಟಿ ಮಾಡಿ ಅಪಘಾತ ಮಾಡಿದನು ಸದರಿ ಅಪಘಾತದಲ್ಲಿ ನನಗೆ ಯಾವುದೇ ಗಾಯಗಳಾಗಿರುವುದಿಲ್ಲ ನನ್ನ ಮಗ ಕೃಷ್ಣ  ವಯ;03 ವರ್ಷ, ಈತನಿಗೆ ತಲೆಗೆ ಭಾರೀ ರಕ್ತಗಾಯವಾಗಿದ್ದು ಮತ್ತು ನನ್ನ ತಾಯಿ ಗೋಬ್ರಿಬಾಯಿಗೆ ನೋಡಲು ಆಕೆಗೆ ಎದೆಗೆ, ತಲೆಯ ಹಿಂಬಾಗಕ್ಕೆ ಬಾರೀ ಗುಪ್ತಗಾಯವಾಗಿ ಮತ್ತು ಎಡಪಕ್ಕೆಗೆ ರಕ್ತಗಾಯವಾಗಿ  ಪ್ರಜ್ಞೆ ತಪ್ಪಿ ಬಿದ್ದಿರುತ್ತಾರೆ ಆಟೋದಲ್ಲಿ ಇದ್ದ ಉಳಿದವರಿಗೆ ಭಾರೀ ರಕ್ತಗಾಯ ಮತ್ತು ತರಚಿದ ರಕ್ತಗಾಯ ಹಾಗು ಗುಪ್ತಗಾಯಗಳಾಗಿರುತ್ತವೆ. ಸದರಿ ಘಟನೆಯು ಇಂದು ದಿನಾಂಕ 15/05/2019 ರಂದು ಬೆಳಿಗ್ಗೆ ಅಂದಾಜು 11-15 ಎ.ಎಂ. ಕ್ಕೆ ಜರುಗಿದ್ದು ಇರುತ್ತದೆ  ಆಗ ಘಟನಾ ಸ್ಥಳಕ್ಕೆ ಯಾದಗಿರಿ ಪೋಲಿಸರ ಹೈವೆ ಪೆಟ್ರೋಲ್ ವಾಹನ ಬಂದು  ಅದರಲ್ಲಿ ಮತ್ತು ಒಂದು ಖಾಸಗಿ ಆಟೋದಲ್ಲಿ ನಮಗೆ ಉಪಚಾರ ಕುರಿತು ಯಾದಗಿರಿ ಸಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ನನ್ನ ತಾಯಿ ಗೋಬ್ರಿಬಾಯಿ ಈಕೆಗೆ ಉಪಚಾರ ಕುರಿತು ಪರೀಕ್ಷಿಸಿದ ವೈದ್ಯರು ಈಕೆಯು ರಸ್ತೆ ಅಪಘಾತದಲ್ಲಾದ ಗಾಯಗಳಿಂದ ಈಗಾಗಲೇ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. ಆಗ ಸಮಯ 11-45 ಎ.ಎಂ. ಆಗಿರುತ್ತದೆ. ಈ ಘಟನೆ ಬಗ್ಗೆ ನಾನು ನನ್ನ ತಂದೆ ಗಂಗಾರಾಮ ಇವರಿಗೆ ತಿಳಿಸಿದ್ದು  ಅವರು ಸ್ವಲ್ಪ ಸಮಯದ ನಂತರ ಆಸ್ಪತ್ರೆಗೆ ಬಂದು ಅಪಗಾತದ ಬಗ್ಗೆ ನನ್ನಿಂದ ವಿಚಾರಿಸಿದ್ದು ಇರುತ್ತದೆ. ಆಗ ನನ್ನ ತಾಯಿ ಮೃತದೇಹವನ್ನು ನಾನು ಮತ್ತು ನನ್ನ ತಂದೆ ಗಂಗಾರಾಮ ಇಬ್ಬರು ಗುತರ್ಿಸಿರುತ್ತೇವೆ.  ಹೀಗಿದ್ದು ಇಂದು ದಿನಾಂಕ  15/05/2019 ರಂದು ಸಮಯ 11-15 ಎ.ಎಂ ದ ಸುಮಾರಿಗೆ ವಾಡಿ-ಯಾದಗಿರಿ  ಮುಖ್ಯ  ರಸ್ತೆಯ  ಮೇಲೆ ಬರುವ ಮುದ್ನಾಳ ಸೀಮಾಂತರದ ಎಸ್ಸಾರ್ ಪೆಟ್ರೋಲ್ ಬಂಕ್ ಹತ್ತಿರ  ಮುಖ್ಯ ರಸ್ತೆ ಮೇಲೆ ಆಟೋ ಟಂ,ಟಂ ನಂಬರ ಕೆಎ-33, ಎ-4936 ನೇದ್ದನ್ನು ಅದರ ಚಾಲಕ ರಾಮು ತಂದೆ ಸೇವು ರಾಠೋಡ ಸಾ;ಅಚೋಲಾ ತಾಂಡ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಪಲ್ಟಿ ಮಾಡಿದ್ದರಿಂದ ಅಪಘಾತ ಜರುಗಿದ್ದು, ಸದರಿ ಅಪಘಾತದಲ್ಲಿ ನನ್ನ ತಾಯಿ ಗೋಬ್ರಿಬಾಯಿ ವಯ;55 ವರ್ಷ ಇವರು  ಅಪಘಾತದಲ್ಲಾದ ಗಾಯಗಳ ಬಾದೆಯಿಂದ ಮೃತಪಟ್ಟಿದ್ದು ಮತ್ತು ಆಟೋದಲ್ಲಿದ್ದ ಉಳಿದವರಿಗೆ ಭಾರೀ ರಕ್ತಗಾಯ, ಗುಪ್ತಗಾಯ ಹಾಗೂ ತರಚಿದ ರಕ್ತಗಾಯಗಳಾಗಿದ್ದು ಆಟೋ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 3 ಪಿ.ಎಂ.ಕ್ಕೆ ಬಂದು ಫಿಯರ್ಾದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 30/2019 ಕಲಂ 279, 337, 338, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 124/2019.ಕಲಂ 87 ಆ್ಯಕ್ಟ:- ದಿನಾಂಕ 15/05/2019 ರಂದು 14-30 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 6 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 15/05/2019  ರಂದು ಬೆಳಿಗ್ಗೆ 11-00 ಗಂಟೆಗೆ ಠಾಣೆಯಲ್ಲಿದ್ದಾಗ ಸುಮಾ ಡಬ್ಲೂ,ಪಿ,ಸಿ,307, ರವರಿಗೆ ಹೋಸ ಬೀಟ್ ಪದ್ದತಿ ಹೈಯಾಳ (ಕೆ) ಗ್ರಾಮವು ಹಂಚಿಕೆಯಾಗಿದ್ದು ಸದರಿವರಿಗೆ ಹೈಯಾಳ (ಕೆ) ಗ್ರಾಮದ ಹನುಮಾನ ಗುಡಿಯ ಮುಂದೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ್ದಿದ್ದರ ಮೇರೆಗೆ ನನಗೆ ಬಾತ್ಮೀ ವಿಷಯ ತಿಳಿಸಿದ್ದು. ನಾನು ನಮ್ಮ ಠಾಣೆಯ ಸಿಬ್ಬಂದಿಯವರಿಗೆ ಬಾತ್ಮೀ ವಿಷಯ ತಿಳಿಸಿ ಬಾಬು ಹೆಚ್,ಸಿ,162 ರವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ 11-20 ಗಂಟೆಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ಬಾತ್ಮೀ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಸಹಕರಿಸಿ ಪಂಚರಾಗಲು ಕೇಳಿಕೊಂಡ ಮರೇಗೆ ಪಂಚರಾದಲು ಒಪ್ಪಿಕೊಂಡರು. ದಾಳೀ ಕರಿತು ಹೋಗಿ ನಿಗಾಮಾಡಿ ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 30 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 30 ರೂಪಾಯಿ ಅಂತ ಹೇಳಿ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು, 12-20 ನಾವೆಲ್ಲರೂ ಸದರಿಯವರ ಮೇಲೆ ದಾಳಿ ಮಾಡಿದಾಗ 6 ಜನರು ಸಿಕ್ಕಿದ್ದು. ಪಿ,ಐ,ಸಾಹೇಬರು ಪಂಚರ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಿ ಅಂಗಸೋದನೆ ಮಾಡಲಾಗಿ ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ ಹೇಳಿರುತ್ತಾರೆ. 1] ನಿಂಗಣ್ಣಗೌಡ ತಂದೆ ಬಸಣ್ಣಗೌಡ ಪೊಲೀಸ್ ಪಾಟೀಲ್ ವ|| 48 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹೈಯಾಳ (ಕೆ) ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 680/- ರೂಪಾಯಿ ಸಿಕ್ಕವು 2] ಶಿವಣ್ಣಗೌಡ ತಂದೆ ಭೀಮರಾಯ ಮಾಲಿ ಪಾಟೀಲ್ ವ|| 65 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹೈಯಾಳ (ಕೆ) ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 360/- ರೂಪಾಯಿ ಸಿಕ್ಕವು 3] ಭಿಮರಾಯ ತಂದೆ ನಿಂಗಣ್ಣಗೌಡ ಬಿರೇದಾರ ವ|| 32 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹೈಯಾಳ (ಕೆ) ಈತನ ಅಂಗಶೋಧನೆ ಮಾಡಿದಾಗ ನಗದು ಹಣ 410/- ರೂಪಾಯಿ ಸಿಕ್ಕವು 4] ಬಸವರಾಜ ತಂದೆ ಸಿದ್ದಣ್ಣ ಶಹಾಪೂರ ವ|| 28 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹೈಯಾಳ (ಕೆ) ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 330/- ರೂಪಾಯಿ ಸಿಕ್ಕವು 5] ನಿಂಗಣ್ಣ ತಂದೆ ಮಲ್ಲಣ್ಣ ಬರೇದಾರ ವ|| 38 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹೈಯಾಳ (ಕೆ) ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 260/-ರೂಪಾಯಿ ಸಿಕ್ಕವು 6] ಚಂದ್ರಗೌಡ ತಂದೆ ಭಿಮರಾಯಗೌಡ ಬೀರೆದಾರ ವ|| 45 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹೈಯಾಳ (ಕೆ) ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 3100/- ರೂಪಾಯಿ ಸಿಕ್ಕವು ಕಣದಲ್ಲಿ ಪಣಕ್ಕೆ ಇಟ್ಟ ಹಣ 120/- ಸಿಕ್ಕವು ಹೀಗೆ ಒಟ್ಟು 2470/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 12-30  ಗಂಟೆಯಿಂದ 13-30 ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 6 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 14-00 ಗಂಟೆಗೆ ಬಂದು ವರದಿಯನ್ನು ತಯ್ಯಾರಿಸಿ 14-30 ಗಂಟೆಗೆ 6  ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ, ನಂ,34/2019 ಕಲಂ 87 ಕೆ.ಪಿ.ಯಾಕ್ಟ ನೋಂದಣಿ ಮಾಡಿಕೊಂಡಿದ್ದು. ಕಲಂ 87 ಕೆ.ಪಿ.ಯಾಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ಮುಂದಿನ ಕ್ರಮ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಹುಲಗಪ್ಪ .ಪಿ.ಸಿ. 344 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 15-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 124/2019 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 125/2019 ಕಲಂ 32, 34 ಕೆ.ಇ ಆಕ್ಟ:- ದಿನಾಂಕ 15/05/2019 ರಂದು ಸಾಯಂಕಾಲ 17-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ್ ಠಾಣೆ ರವರು ಮೂಲ ಜಪ್ತಿ ಪಂಚನಾಮೆ,  ಮುದ್ದೆಮಾಲಿನೊಂದಿಗೆ ವರದಿ ಹಾಜರ ಪಡಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 15/05/2019 ರಂದು 15-00 ಗಂಟೆಗೆ ಠಾಣೆಯಲ್ಲಿದ್ದಾಗ ತಂಗಡಿಗಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಕಿರಾಣಿ ಅಂಗಡಿಯ ಮುಂದೆ ಒಬ್ಬ ವ್ಯಕ್ತಿ ತನ್ನ ಅಕ್ರಮವಾಗಿ ಲೈಸೇನ್ಸ್ ಹೊಂದದೆ ಸಾರ್ವಜನಿಕರಲ್ಲಿ ಮದ್ಯ ಮಾರಾಟ ಮಾಡುತಿದ್ದಾನೆ ಅಂತ ಠಾಣೆಯ ಹುಲಗಪ್ಪ ಸಿ.ಪಿ.ಸಿ 344 ಇವರು ತನಗೆ ಬಂದ ಮಾಹಿತಿಯನ್ನು ನನಗೆ ತಿಳಿಸಿದ್ದರ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಬಾಬು ಹೆಚ್.ಸಿ 162 ಹಾಗೂ ಜೀಪ್ ಚಾಲಕ ನಾಗರೆಡ್ಡಿ ಎ.ಪಿ.ಸಿ 161  ರವರಿಗೆ ವಿಷಯ ತಿಳಿಸಿ, ಮೇಲ್ಕಂಡ ಸಿಬ್ಬಂದಿಯವರೊಂದಿಗೆ ದಾಳಿ ಕುರಿತು ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಠಾಣೆಯಿಂದ 15-15 ಗಂಟೆಗೆ ಹೊರಟೆವು. ಸದರಿ ವಾಹನ ನಾಗರೆಡ್ಡಿ ಎ.ಪಿ.ಸಿ 161 ಇವರು ಚಲಾಯಿಸುತಿದ್ದರು. 16-50 ತಂಗಡಿಗಿ ಕ್ರಾಸ್ ಹತ್ತಿರ  ಹೋಗಿ ನಿಂತಾಗ ಅಲ್ಲಿ ಇಬ್ಬರು ನಿಂತಿದ್ದು, ಆಗ ನಾನು ಸದರಿಯವರಿಗೆ  ಪಂಚರಂತ ಬರಮಾಡಿಕೊಂಡು ಸದರಿಯವರ ಹೆಸರು ವಿಳಾಸ ವಿಚಾರಿಸಲು 1) ಮಹಾಂತಗೌಡ ತಂದೆ ಬಸಣ್ಣಗೌಡ ದಳಪತಿ ವ|| 38 ಜಾ|| ಲಿಂಗಾಯತರೆಡ್ಡಿ ಉ|| ಒಕ್ಕಲುತನ ಸಾ|| ಚಟ್ನಳ್ಳಿ 2] ಮಲ್ಲಿಕಾಜರ್ುನ ತಂದೆ ಬಸ್ಸಣ್ಣ ಆಸಪಕರ ವ|| 38 ಜಾ|| ಲಿಂಗಾಯತ ರೆಡ್ಡಿ ಉ|| ಒಕ್ಕಲುತನ ಸಾ|| ಚಟ್ನಳ್ಳಿ ಅಂತ ಹೇಳಿದರು. ಸದರಿಯವರಿಗೆ ಸಿಬ್ಬಂದಿಯವರಿಗೆ ಪರಿಚಯ ಮಾಡಿಸಿ ಬಾತ್ಮೀ ವಿಷಯ ತಿಳಿಸಿ ದಾಳಿ ಕುರಿತು ನಮ್ಮ ಜೊತೆಯಲಿ ಬಂದು ಜಪ್ತಿ ಪಂಚನಾಮೆಯ ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು. ಸದರಿ ಪಂಚರನ್ನು ಜೀಪನಲ್ಲಿ ಕೂಡಿಸಿಕೊಂಡು 16-00 ಗಂಟೆಗೆ ಹೊರಟು ತಂಗಡಿಗಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಅಂದಾಜು 50 ಮೀಟರ ದೂರದಲ್ಲಿ 16-10 ಗಂಟೆಗೆ ಹೋಗಿ ಜೀಪ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಬಸ್ಸ ನಿಲ್ದಾಣದ ಹತ್ತಿರ ಹೋಗಿ ಮರೆಯಲಿ ನಿಂತು ನಿಗಾಮಾಡಿ ನೋಡಲಾಗಿ ಒಬ್ಬ ವ್ಯಕ್ತಿ ತನ್ನ ಕಿರಾಣಿ ಅಂಗಡಿಯ ಮುಂದೆ   ಒಂದು ಪ್ಲಾಸ್ಟಿಕ್ ಚಿಲದಲ್ಲಿ ಮದ್ಯದ ಪಾಕೇಟಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತಿದ್ದನು. ಸದರಿ ವ್ಯಕ್ತಿ ಮದ್ಯದ ಪಾಕೇಟಗಳನ್ನು ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸದರಿಯವನ ಮೇಲೆ 16-20 ಗಂಟೆಗೆ ದಾಳಿ ಮಾಡಿದಾಗ ಸದರಿ ವ್ಯಕ್ತಿಯು ಓಡಿ ಹೋಗಿದ್ದು ಹಿಂಬಾಲಿಸಿದರು ಸಿಕ್ಕಿರುವುದಿಲ್ಲ. ನಂತರ ಸದರಿ ಕಿರಾಣಿ ಅಂಗಡಿಯ ಮುಂದೆ ಬಂದು ನಾನು ಪಂಚರ ಸಮಕ್ಷಮದಲ್ಲಿ ಪರೀಶಿಲಿಸಿ ನೋಡಲಾಗಿ ಒಂದು ಬಿಳಿ ಪ್ಲಾಸ್ಟೀಕ ಚೀಲವಿದ್ದು ಅದರಲ್ಲಿ ಮದ್ಯದ ಪಾಕೇಟಗಳು ಇದ್ದು ಮದ್ಯದ ಪಾಕೇಟ ಪರಿಶೀಲಿಸಿನೋಡಲಾಗಿ 90 ಎಮ್.ಎಲ್.ನ್ 54 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ ಇದ್ದು, ಒಂದು 90 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 30 ರೂಪಾಯಿ 32 ಪೈಸೆ ಇರುತ್ತದೆ. ಒಟ್ಟು 54 ಮದ್ಯದ ಪಾಕೇಟಿನ ಕಿಮ್ಮತ್ತ 1637/- ರೂಪಾಯಿ 28 ಪೈಸೆ ಆಗುತ್ತದೆ.  ಒಂದು ಬಿಳಿ ಪ್ಲಾಸ್ಟೀಕ ಚೀಲದ ಅಂ.ಕಿ 00=00 ನೇದ್ದು, ಸದರಿ ವ್ಯಕ್ತಿಯು ಮದ್ಯ ಮಾರಾಟ ಪರವಾನಿಗೆ ಪತ್ರ ಪಡೆಯದೆ ಮಾರಾಟ ಮಾಡುತಿದ್ದ ಬಗ್ಗೆ ದೃಡಪಟ್ಟಿರುತ್ತದೆ. 90 ಎಮ್.ಎಲ್.ನ 54 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟಗಳಲ್ಲಿ ಒಂದು 90 ಎಂ.ಎಲ್ ನ ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟನ್ನು, ತಜ್ಞರ ಪರೀಕ್ಷೆಗಾಗಿ ಕಳುಹಿಸುವ  ಸಲುವಾಗಿ  ಒಂದು ಬಿಳಿ ಬಟ್ಟೆಯ ಚೀಲಗದಲ್ಲಿ ಹಾಕಿ ಅದರ ಮೇಲೆ ಠಾಣೆಯ ಇಂಗ್ಲೀಷ ಅಕ್ಷರದ ಖಊಕ  ಮಾದರಿ ಶಿಲ್ ಹಾಕಿ ಪಂಚರು ಸಹಿ ಮಾಡಿದ ಚೀಟಿಗಳು ಅಂಟಿಸಿ ಮುಂದಿನ ತನಿಖೆಗಾಗಿ ತಾಬೆಗೆ ತೆಗೆದುಕೊಂಡು, ಮದ್ಯ ಮಾರಾಟ ಮಾಡುವ ವ್ಯಕ್ತಿಯ ಬಗ್ಗೆ ಬಸ್ಸ ನಿಲ್ದಾಣದ ಹತ್ತಿರ ಕುಳಿತಿದ್ದ ಈಶಣ್ಣ ತಂದೆ ಮಲ್ಲೇಶಪ್ಪ ಕ್ವಾಣೆರ ವ|| 50 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ತಂಗಡಿಗಿ ಈತನಿಗೆ ಓಡಿ ಹೋದ ವ್ಯಕ್ತಿಯ ಹೆಸರು ವಿಳಾಸದ ಬಗ್ಗೆ ವಿಚಾರಿಸಿದಾಗ ಸಿದ್ದು ತಂದೆ ಮಲ್ಲಣ್ಣ ಬೂದೂರ ವ|| 31 ಜಾ|| ರೆಡ್ಡಿ  ಉ|| ಕಿರಾಣಿ ವ್ಯಾಪಾರ ಸಾ|| ತಂಗಡಿಗಿ ಅಂತ ಹೇಳಿದನು. ಉಳಿದ ಮುದ್ದೆ ಮಾಲನ್ನು 16-30 ಗಂಟೆಯಿಂದ 17-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿರುತ್ತದೆ. ಸದರಿ ವ್ಯಕ್ತಿಯು ಓಡಿ ಹೋಗುವಾಗ ನೋಡಿದ್ದು ಪುನಃ ನೋಡಿದಲ್ಲಿ ಗುರುತಿಸುತ್ತೆವೆ. ನಂತರ ಜಪ್ತಿ ಪಡಿಸಿಕೊಂಡ ಮುದ್ದೆಮಾಲು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 18-10 ಗಂಟೆಗೆ ಬಂದ್ದಿದ್ದು, ಠಾಣೆಯಲ್ಲಿ ವರದಿ ತಯಾರಿಸಿ ವರದಿಯೊಂದಿಗೆ ಮೂಲ  ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ಕಲಂ 32, 34 ಕೆ.ಇ ಅಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ನಾನು 19-00 ಗಂಟೆಗೆ ಸರಕಾರದ ಪರವಾಗಿ ವರದಿಯ ಮೂಲಕ ಸದರಿ ವ್ಯಕ್ತಿಯ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 125/2019 ಕಲಂ 32, 34 ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 112/2019 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ. ಆರ್.ಆಕ್ಟ 1957:- ದಿನಾಂಕ:15-05-2019 ರಂದು 9 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿ ಐ ಸಾಹೇಬರು ಒಂದು ಮರಳು ತುಂಬಿದ ಟಿಪ್ಪರ ಮತ್ತು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:15-05-2019 ರಂದು 06:00 ಎ.ಎಮ್ ಸುಮಾರಿಗೆ  ಠಾಣೆಯಲ್ಲಿದ್ದಾಗ ಮಹಿತಿ ಬಂದ್ದಿದ್ದೆನೆಂದರೆ ಯಾರೋ ತಮ್ಮ ಟಿಪ್ಪರ ವಾಹನದಲ್ಲಿ ಹೇಮನೂರ ಸೀಮಾಂತರದ ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಲಕ್ಷ್ಮಿಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಮರೆಪ್ಪ ತಂದೆ ಪರಮಪ್ಪ ತಳವಾರ ವಯಾ:42 ವರ್ಷ ಉ:ಗ್ರಾಮ ಸಹಾಯಕ ಜಾತಿ:ಹರಿಜನ ಸಾ:ನಾಗರಾಳ  2) ಶ್ರೀ ಬಂದಗಿಸಾಬ ತಂದೆ ಶರಿಫಸಾಬ ಪಿಂಜಾರ ವಯಾ:35 ವರ್ಷ ಉ:ಗ್ರಾಮ ಸಹಾಯಕ ಜಾತಿ:ಮುಸ್ಲಿಂ ಸಾ:ಕೋನಾಳ  ಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಮತ್ತು ಸಿಬ್ಬಂದಿಯವರಾದ 1) ಶ್ರೀ ಸೋಮಯ್ಯಾ ಸಿಪಿಸಿ-235 2) ಶ್ರೀ ದಯಾನಂದ ಸಿಪಿಸಿ -337  ಹಾಗೂ ಜೀಪ ಚಾಲಕನಾದ 3) ಶ್ರೀ ಮೈಹೀಬೂಬ  ಎಲ್ಲರೂ ಕೂಡಿ ಸದರಿ ಪಂಚರೊಂದಿಗೆ ಸರಕಾರಿ ಠಾಣೆಯ ಸರಕಾರಿ ಜೀಪ್ ನಂ: ಕೆಎ-33, ಜಿ-0238 ವಾಹನದಲ್ಲಿ ಠಾಣೆಯಿಂದ 06-30 ಎ.ಎಮ್ಕ್ಕೆ ಹೊರಟು 07:00 ಎ.ಎಮ್ ಕ್ಕೆ ಬೈಪಾಸ ರಸ್ತೆಯ ಲಕ್ಷ್ಮಿಪೂರ ಕ್ರಾಸ ಹತ್ತಿರ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಲಕ್ಷ್ಮಿಪೂರ ಗ್ರಾಮದ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ನಮ್ಮ ಜೀಪನ್ನು ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದು ಸದರಿ ಟಿಪ್ಪರನ್ನು ಕೈ ಮಾಡಿ ತಡೆದು ನಿಲ್ಲಿಸಲಾಗಿ ಸದರಿ ಟಿಪ್ಪರ ಚಾಲಕನು ನಾವು ಕೈ ಮಾಡುತ್ತಿದಂತೆ ನಮ್ಮನ್ನು ನೋಡಿ ಸ್ವಲ್ಪ ದೂರದಲ್ಲಿಯೆ ಟಿಪ್ಪರನ್ನು ಸೈಡಿಗೆ ನಿಲ್ಲಿಸಿ ಟಿಪ್ಪರ ಬಿಟ್ಟು ಕೆಳಗೆ ಇಳಿದು ಓಡಿಹೊದನು ಸದರಿ ನಂತರ ನಾವು ಟಿಪ್ಪರ ಹತ್ತಿರ ಹೋಗಿ ಪರೀಶಿಲಿಸಲು ಒಂದು ಅಶೋಕ ಲೈಲೆಂಡ ಕಂಪನಿಯ ಟಿಪ್ಪರ ನಂಬರ ಕೆಎ-32 ಸಿ-0434 ನೇದ್ದು ಇರುತ್ತದೆ.  ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು, ಅದರ ಅ.ಕಿ 10400/- ರೂಗಳು ಆಗುತ್ತದೆ. ಸದರಿ ಟಿಪ್ಪರ ಚಾಲಕನು ಹೇಮನೂರ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟಿಪ್ಪರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ 07:00 ಎ.ಎಮ್ ದಿಂದ 08-00 ಎ.ಎಮ್ ದವರೆಗೆ ಪಂಚನಾಮೆಯನ್ನು ಬರೆದುಕೊಂಡು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಓಡಿ ಹೋದ ಚಾಲಕನ ಹೆಸರು ಮರೆಪ್ಪ ತಂದೆ ಮಲ್ಲಪ್ಪ ಕುಂಬಾರ ವಯಾ:37 ವರ್ಷ ಉ:ಡ್ರೈವರ ಜಾತಿ:ಕುಂಬಾರ ಸಾ: ಚೆನ್ನೂರ  ಅಂತಾ ನಂತರ ಗೊತ್ತಾಗಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟಿಪ್ಪರದಲ್ಲಿ ಒಟ್ಟು 10400/- ರೂ ಕಿಮ್ಮತ್ತಿನ ಅಂದಾಜು 13 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಮರಳು ತುಂಬಿದ ಟಿಪ್ಪರನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ ಅಂತಾ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 113/2019 ಕಲಂ 379 ಐ.ಪಿ.ಸಿ. ಮತ್ತು ಕಲಂ.21(3)21(4)22  ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:15-05-2019 ರಂದು 09-45 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಕಿರಣ್ ಡಿ ಆರ್ ವಯಾ:35 ವರ್ಷ ಉ:ಬೂ ವಿಜ್ಷಾನಿ ಗಣಿ ಮತ್ತು ಬೂ ವಿಜ್ಷಾನ ಇಲಾಖೆ ಯಾದಗಿರಿ ರವರು ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿದ್ದು ಒಂದು ಅಜರ್ಿ ನಿಡಿದ್ದು ಸಾರಾಂಶವೆನೆಂದರೆಇಂದು ಇಂದು ದಿನಾಂಕ: 15-05-2019 ರಂದು ಬೆಳಗಿನ ಸಮಯದಲ್ಲಿ ನಾನು ಮತ್ತು ಶ್ರೀ ದಿಗಂಬರ ಕಿರಿಯ ಅಭಿಯಂತರರು ಲೋಕೊಪಯೋಗಿ ಇಲಾಖೆ ಸುರಪೂರ ಉಪ-ವಿಭಾಗ, ಶ್ರೀ ಗುರುಬಸಪ್ಪ ಪಾಟೀಲ ಕಂದಾಯ ನಿರೀಕ್ಷಕರು ಸುರಪೂರ, ಶ್ರೀ ಶ್ರೀನಿವಾಸ ದೇಸಪಾಂಡೆ ಗ್ರಾಮ ಲೇಖಪಾಲಕರು ಸುಗೂರ, ಶ್ರೀ ದುಶ್ಯಂತ ಕಮ್ಮಾರ ಗ್ರಾಮ ಲೇಖಪಾಲಕರು ಚೌಡೇಶ್ವರಹಾಳ, ಕನರ್ಾಳ, ಹೆಮ್ಮರಡಗಿ, ಹಾಗೂ ಶ್ರೀ ಶಿವಕುಮಾರ ಗ್ರಾಮ ಲೇಖಪಾಲಕರು, ಶ್ರೀ ಮಲ್ಲಪ್ಪ ಗ್ರಾಮ ಸಹಾಯಕರು ಸೂಗುರ ಮತ್ತು ಶ್ರೀ ಯಂಕಪ್ಪ ಗ್ರಾಮ ಸಹಾಯಕರು ಚೌಡೇಶ್ವರಹಾಳ ಎಲ್ಲರೂ ಸುರಪೂರ ತಹಸೀಲ ಕಾಯರ್ಾಲಯದಲ್ಲಿದ್ದಾಗ ಸುರಪೂರ ತಾಲೂಕಿನ ಸೂಗುರ, ಚೌಡೇಶ್ವರಹಾಳ, ಹೆಮ್ಮರಡಗಿ, ಕನರ್ಾಳ ಗ್ರಾಮದ ನಧಿ ಪಾತ್ರದ ಜಮೀನುಗಳಲ್ಲಿ ಹತ್ತಿರ ಕೃಷ್ಣಾ ನದಿಯ ಮರಳು ಕಾನೂನು ಬಾಹಿರವಾಗಿ ತಮ್ಮ ತಮ್ಮ ಜಮೀನುಗಳಲ್ಲಿ ಮಾರಾಟ ಮಾಡಲು ಸಂಗ್ರಹ ಮಾಡಿರುತ್ತಾರೆ ಅಂತಾ ಬಾತ್ಮಿ ಮೇರೆಗೆ ಇಬ್ಬರು ಪಂಚ ಜನರಾದ 1 ಶ್ರೀ ಖುಷರ್ಿದ ಪಾಶಾ ತಂದೆ ಅಬ್ದುಲ್ ಹಮೀದ ಕೆಲಸ ನಿರೀಕ್ಷಕರು ಲೋಕೊಪಯೋಗಿ ಇಲಾಖೆ ಸುರಪೂರ 2) ಶ್ರೀ ಪ್ರಕಾಶ ತಂದೆ ಸೋಮ್ನೆಲಪ್ಪ ರಾಠೋಡ ಗ್ರಾಮ ಲೇಖಪಾಲಕರು ಇವರಿಗೆ 8-30 ಎ.ಎಂ.ಕ್ಕೆ ಬರಮಾಡಿಕೊಂಡು ಸದರಿಯವರಿಗೆ ಮತ್ತು ಸಂಗಡ ವಿದ್ದ ಅಧಿಕಾರಿ/ಸಿಬ್ಬಂಧಿ ಜನರಿಗೆ ಬಾತ್ಮಿ ವಿಷಯವನ್ನು ತಿಳಿಸಿ ಮರಳು ಸಂಗ್ರಹಣೆ ತಪಾಸಣೆ ಕುರಿತು ನಮ್ಮ ಇಲಾಖೆ ಜೀಪ ನಂಬರ ಕೆಎ-04 ಜಿ-1490 ನೇದ್ದರಲ್ಲಿ ಎಲ್ಲರನ್ನು ಕರೆದುಕೊಂಡು 9 ಎ.ಎಂ.ಕ್ಕೆ ಸೂರಪೂರ ತಹಸೀಲ ಕಾರ್ಯಲಯದಿಂದ ಹೊರಟು ಸೂಗುರು ಗ್ರಾಮದ ಸವರ್ೇ ನಂಬರ 76 ರಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ 09-30 ಎ.ಎಂ.ಕ್ಕೆ ಸ್ಥಳಕ್ಕೆ ಬೇಟಿ ನೀಡಿದೇವು ಸದರಿ ಜಮೀನು ಬಸವರಾಜ ತಂದೆ ಚೆನ್ನಪ್ಪ ಸಾ:ಸೂಗುರ ಇವರದಿದ್ದು, ಜಮೀನುನಲ್ಲಿ 448 ಘನ ಮೀಟರ ಮರಳು ಅದರ ಅ.ಕಿ 358400/- ರೂ ಬೆಲೆ ಬಾಳುವ ಮರಳನ್ನು ಪಂಚರ ಸಮಕ್ಷಮ 9-30 ಎ.ಎಂ.ದಿಂದ 10 ಎ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು. ನಂತರ ಅಲ್ಲಿಂದ ಹೆಮ್ಮರಡಿ ಗ್ರಾಮದ ಸವರ್ೇ ನಂಬರ 234 ನೇದ್ದರಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ ಕಂದಾಯ ದಾಖಲೆಗಳ ಪ್ರಕಾರ ಸದರಿ ಜಮೀನು ಶ್ರೀಮತಿ ನೀಲಮ್ಮ ಗಂಡ ಹಯ್ಯಾಳಪ್ಪ ಮೊಟಿಪಲ್ಲಿ ಸಾ: ಹೆಮ್ಮರಡಗಿ ಇವರ ಹೆಸರಿನಿಂದ ಇದ್ದು ಸದರಿ ಜಮೀನಿನಲ್ಲಿ 560 ಘನ ಮೀಟರ ಮರಳು ಅ.ಕಿ 4,48,000/- ರೂ ಬೆಲೆ ಬಾಳುವ ಮರಳು ಸಂಗ್ರಹಣೆ ಮಾಡಿದ್ದು ಸದರಿ ಮರಳನ್ನು 10-15 ಎ.ಎಂ.ದಿಂದ 10-45 ಎ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು.ನಂತರ ಅಲ್ಲಿಂದ ಚೌಢೇಶ್ವರಹಾಳ ಗ್ರಾಮದ ಸವರ್ೇ ನಂಬರ 20/2 ನೇದ್ದರಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ ಕಂದಾಯ ದಾಖಲೆಗಳ ಪ್ರಕಾರ ಸದರಿ ಜಮೀನು ಶ್ರೀಮತಿ ಅಮೀನಾಬಿ ಗಂಡ  ಫಕರುದ್ದಿನ @ ಬಾಸುಮಿಯ್ಯಾ, ಮಹ್ಮದ ಅಪ್ಪಾಕ ಅಲೀ ತಂದೆ ಫಕರುದ್ದಿನ @ ಬಾಸುಮಿಯ್ಯಾ,  ಷಪಕತ್ತ ಅಲೀ ತಂದೆ ಪಕರುದ್ದಿನ @ ಬಾಸುಮಿಯ್ಯಾ, ಮಹ್ಮದ ಸಾಧಿಖ ತಂದೆ ಪಕರುದ್ದಿನ @ ಬಾಸುಮಿಯ್ಯಾ   ಇವರ ಹೆಸರಿನಿಂದ ಜಂಟಿ ಪಾಣಿ ಪತ್ರಿಕೆ ಇದ್ದು ಸದರಿಯವರೆಲ್ಲರೂ ತಮ್ಮ ಜಮೀನಿನಲ್ಲಿ 14 ಘನ ಮೀಟರ ಮರಳು ಅ.ಕಿ 11200/- ರೂ ಬೆಲೆ ಬಾಳುವ ಮರಳು ಸಂಗ್ರಹಣೆ ಮಾಡಿದ್ದು ಸದರಿ ಮರಳನ್ನು 11:15 ಎ.ಎಂ.ದಿಂದ 11:45 ಎ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು. ನಂತರ ಅಲ್ಲಿಂದ ಚೌಡೇಶ್ವರಹಾಳ ಗ್ರಾಮದ ಸವರ್ೇ ನಂಬರ 21 ನೇದ್ದರ ಜಮೀನಿನಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ ಕಂದಾಯ ದಾಖಲೆಗಳ ಪ್ರಕಾರ ಜಮೀನು ಹಣಮಂತ್ರಾಯ ತಂದೆ ರಾಮಸ್ವಾಮಿ ಮತ್ತು ರಾಮಸ್ವಾಮಿ ತಂದೆ ದೇವಿಂದ್ರಪ್ಪ ಸಾ:ಚೌಡೇಶ್ವರ  ಇವರ ಹೆಸರಿನಿಂದ ಜಂಟಿ ಪಹಣೆ ಪತ್ರಿಕೆ ಇದ್ದು ಇವರು ತಮ್ಮ ಜಮೀನಿನಲ್ಲಿ 71 ಘನ ಮೀಟರ ಮರಳು ಅ.ಕಿ 56800/- ರೂ ಬೆಲೆ ಬಾಳುವ ಮರಳು ಸಂಗ್ರಹಣೆ ಮಾಡಿದ್ದು ಸದರಿ ಮರಳನ್ನು 12 ಪಿ.ಎಂ.ದಿಂದ 12-30 ಪಿ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು ನಂತರ ಚೌಡೇಶ್ವರಹಾಳ ಗ್ರಾಮದ ಸವರ್ೇ ನಂಬರ 12/2.2 ನೇದ್ದರ ಜಮೀನಿನಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ ಕಂದಾಯ ದಾಖಲೆಗಳ ಪ್ರಕಾರ ಜಮೀನು ರಾಮಣ್ಣ ತಂದೆ ಕಂಟೆಪ್ಪ ಸಾ:ಚೌಡೇಶ್ವರಹಾಳ  ಇವರ ಹೆಸರಿನಿಂದ ಪಹಣೆ ಪತ್ರಿಕೆ ಇದ್ದು ಇವರು ತಮ್ಮ ಜಮೀನಿನಲ್ಲಿ 85 ಘನ ಮೀಟರ ಮರಳು ಅ.ಕಿ 68000/- ರೂ ಬೆಲೆ ಬಾಳುವ ಮರಳು ಸಂಗ್ರಹಣೆ ಮಾಡಿದ್ದು ಸದರಿ ಮರಳನ್ನು 1 ಪಿ.ಎಂ.ದಿಂದ 01-30 ಪಿ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು ನಂತರ ಚೌಡೇಶ್ವರಹಾಳ ಗ್ರಾಮದ ಸವರ್ೇ ನಂಬರ 71 ಪೊರ್ಟ3/2 ನೇದ್ದರ ಜಮೀನಿನಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ ಕಂದಾಯ ದಾಖಲೆಗಳ ಪ್ರಕಾರ ಜಮೀನು ಖಾಸಿಂಸಾಬ ತಂದೆ ದೊಂಗ್ರಸಾಬ ಸಾ:ಚೌಡೇಶ್ವರಹಾಳ  ಇವರ ಹೆಸರಿನಿಂದ ಪಹಣೆ ಪತ್ರಿಕೆ ಇದ್ದು ಇವರು ತಮ್ಮ ಜಮೀನಿನಲ್ಲಿ 108 ಘನ ಮೀಟರ ಮರಳು ಅ.ಕಿ 86400/- ರೂ ಬೆಲೆ ಬಾಳುವ ಮರಳು ಸಂಗ್ರಹಣೆ ಮಾಡಿದ್ದು ಸದರಿ ಮರಳನ್ನು 1:45 ಪಿ.ಎಂ.ದಿಂದ 2-15 ಪಿ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು ನಂತರ ಅಲ್ಲಿಂದ ಕನರ್ಾಳ ಗ್ರಾಮದ ಸವರ್ೇ ನಂಬರ 43/3 ನೇದ್ದರ ಜಮೀನಿನಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ ಅಲ್ಲಿಗೆ ಬೇಟಿ ನೀಡಿದ್ದು ಕಂದಾಯ ದಾಖಲೆಗಳ ಪ್ರಕಾರ ಜಮೀನು ಲಕ್ಷ್ಮಣ ತಂದೆ ಹಣಮಯ್ಯಾ ಸಾ:ಕನರ್ಾಳ ಇವರ ಹೆಸರಿನಿಂದ ಪಹಣೆ ಪತ್ರಿಕೆ ಇದ್ದು ಇವರು ತಮ್ಮ ಜಮೀನಿನಲ್ಲಿ 240 ಘನ ಮೀಟರ ಮರಳು ಅ.ಕಿ 1,92,000/- ರೂ ಬೆಲೆ ಬಾಳುವ ಮರಳು ಸಂಗ್ರಹಣೆ ಮಾಡಿದ್ದು ಸದರಿ ಮರಳನ್ನು 2-45 ಪಿ.ಎಂ.ದಿಂದ 3-15 ಪಿ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು ನಂತರ ಅಲ್ಲಿಂದ ಕನರ್ಾಳ ಗ್ರಾಮದ ಸವರ್ೇ ನಂಬರ 44 ನೇದ್ದರ ಜಮೀನಿನಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ ಅಲ್ಲಿಗೆ ಬೇಟಿ ನೀಡಿದ್ದು ಕಂದಾಯ ದಾಖಲೆಗಳ ಪ್ರಕಾರ ಜಮೀನು ಬಾಲಮ್ಮ ಗಂಡ ಬಾಲಯ್ಯಾ ಸಾ:ಕನರ್ಾಳ ಇವರ ಹೆಸರಿನಿಂದ ಪಹಣೆ ಪತ್ರಿಕೆ ಇದ್ದು ಇವರು ತಮ್ಮ ಜಮೀನಿನಲ್ಲಿ 52 ಘನ ಮೀಟರ ಮರಳು ಅ.ಕಿ 41600/- ರೂ ಬೆಲೆ ಬಾಳುವ ಮರಳು ಸಂಗ್ರಹಣೆ ಮಾಡಿದ್ದು ಸದರಿ ಮರಳನ್ನು 3-30 ಪಿ.ಎಂ.ದಿಂದ 4 ಪಿ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು ನಂತರ ಅಲ್ಲಿಂದ ಕನರ್ಾಳ ಗ್ರಾಮದ ಸವರ್ೇ ನಂಬರ 30 ನೇದ್ದರ ಜಮೀನಿನಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ ಅಲ್ಲಿಗೆ ಬೇಟಿ ನೀಡಿದ್ದು ಕಂದಾಯ ದಾಖಲೆಗಳ ಪ್ರಕಾರ ಜಮೀನು ಬೀಮಪ್ಪ ತಂದೆ ಸಂಜೀವಪ್ಪ ಈತನ ಹೆಸರಿನಿಂದ ಇದ್ದು ಸದರಿಯವರನು ಮೃತ ಪಟ್ಟಿದ್ದು ಹಾಲಿ ಜಮೀನು ಅವನ ಮಗನಾದ ತಿಮ್ಮಣ್ಣ ತಂದೆ ಬೀಮಣ್ಣ ಚೌಡೇಶ್ವರಾಳ ಈತನ ಉಪಬೋಗದಲ್ಲಿದ್ದು ಸದರಿ ಜಮೀನಿನಲ್ಲಿ 134 ಘನ ಮೀಟರ ಮರಳು ಅ.ಕಿ 107200/- ರೂ ಬೆಲೆ ಬಾಳುವ ಮರಳು ಸಂಗ್ರಹಣೆ ಮಾಡಿದ್ದು ಸದರಿ ಮರಳನ್ನು 4-15 ಪಿ.ಎಂ.ದಿಂದ 5 ಪಿ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು  ನಂತರ ಅಲ್ಲಿಂದ ಕನರ್ಾಳ ಗ್ರಾಮದ ಸವರ್ೇ ನಂಬರ 31 ನೇದ್ದರ ಜಮೀನಿನಲ್ಲಿ ಮರಳು ಸಂಗ್ರಹಣೆ ಮಾಡಿದ್ದನ್ನು ನೋಡಿ ಅಲ್ಲಿಗೆ ಬೇಟಿ ನೀಡಿದ್ದು ಕಂದಾಯ ದಾಖಲೆಗಳ ಪ್ರಕಾರ ಜಮೀನು ಬಸಣ್ಣ ತಂದೆ ಮಹಾದೇಪ್ಪ ಕನ್ನಳ್ಳಿ ಸಾ:ಕನರ್ಾಳ ಇವರ ಹೆಸರಿನಿಂದ ಪಹಣೆ ಪತ್ರಿಕೆ ಇದ್ದು ಇವರು ತಮ್ಮ ಜಮೀನಿನಲ್ಲಿ 132 ಘನ ಮೀಟರ ಮರಳು ಅ.ಕಿ 105600/- ರೂ ಬೆಲೆ ಬಾಳುವ ಮರಳು ಸಂಗ್ರಹಣೆ ಮಾಡಿದ್ದು ಸದರಿ ಮರಳನ್ನು 5-15 ಪಿ.ಎಂ.ದಿಂದ 5-45 ಪಿ.ಎಂ. ದವರೆಗೆ ಜಪ್ತಿ ಮಾಡಿಕೊಂಡೆನು ಸದರ ಮೇಲೆ ನಮೂಧಿಸಿದ ಆಪಾಧಿತರು ಸರಕಾರಕ್ಕೆ ಯಾವುದೆ ರಾಜಧನ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಒಟ್ಟು 1844 ಘನ ಮೀಟರ ಮರಳು ಅ.ಕಿ 1475200/- ರೂಗಳ ಬೆಲೆ ಬಾಳುವ ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಕೃಷ್ಣಾ ನಧಿಯ ತೀರದಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ತಮ್ಮ ಹೊಲಗಳಲ್ಲಿ ಸಂಗ್ರಹಣೆ ಮಾಡಿದ ಮೇಲೆ ಹೇಳಿದ ಎಲ್ಲರ ಮೇಲೆ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!