ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-05-2019

By blogger on ಸೋಮವಾರ, ಮೇ 13, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-05-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:-46/2019 ಕಲಂ.143,147,341,323,324,326,504,506:- ದಿನಾಂಕ 13/05/2019 ರಂದು 10-45 ಎಎಂಕ್ಕೆ ಶ್ರೀ ಆನಂದ ತಂದೆ ಶಂಕರ ಪಾಮಳ್ಳಿ ವಯಾ:23 ಜಾತಿ: ಕಬ್ಬಲಿಗ ಉ: ಚಾಲಕ ಸಾ:ಕೋಟಗರವಾಡ ಹೋರಪೇಟ ಯಾದಗಿರಿ  ಈತನು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ಕೊಟ್ಟಿದ್ದು ಸದರಿ ಹೇಳಿಕೆಯ ಸಾರಾಂಶವೆನೆಂದರೆ  ನಾನು ಈ ಮೇಲಿನ ವಿಳಾಸದವನಿದ್ದು, ಚಾಲಕ ಅಂತಾ ಕೆಲಸ ಮಾಡಿಕೊಂಡು ಇರುತ್ತೇನೆ. ನಿನ್ನೆ ದಿನಾಂಕ 12/05/2019 ರಂದು ರಾತ್ರಿವೇಳೆಯಲ್ಲಿ ಯಾರೋ ನಮ್ಮ ಓಣಿಯಲ್ಲಿ ಇರುವ ಡಾ|| ಬಿ.ಆರ್ ಅಂಬೇಡ್ಕರ ಕಟ್ಟೆಯ ಮೇಲೆ ಚಪ್ಪಲ ಹಾಕಿಕೊಂಡು ಕುಳಿತಿರುತ್ತಾರೆ ಅಂತಾ ಜಗಳವಾಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 13/05/2019 ರಂದು 10:15 ಎ.ಎಮ್ ಸುಮಾರಿಗೆ ನಾನು ಮತ್ತು ಭೀಮು ತಂದೆ ದೇವಿಂದ್ರಪ್ಪ ಪಾಮಳ್ಳಿ ಇಬ್ಬರು ಕೂಡಿಕೊಂಡು ಮನೆಯಿಂದ ಎ.ಪಿ.ಎಂ.ಸಿ ಗಂಜ್ಗೆ ಕೆಲಸಕ್ಕೆ ಹೋಗುತ್ತಿರುವಾಗ, ನಮ್ಮ ಓಣಿಯವರಾದ ದಶರಥ ಕೂಡ್ಲೂರು, ಮಲ್ಲು ನಾಟೇಕಾರ, ಶಿವ್ಯ, ನವೀನ ಕೂಡ್ಲುರು, ರಾಮ್ಯ, ರಾಕೇಶ, ನಿಂಗಪ್ಪ@ನಿಂಗ್ಯ, ಹಾಗೂ ಇನ್ನೂ 5-6 ಜನರು ಕೂಡಿಕೊಂಡು ಅಕ್ರಮ ಕೂಟ ಕಟ್ಟಿಕೊಂಡು ಬಂದವರೆ ನಮಗೆ ತಡೆದು ನಿಲ್ಲಿಸಿ ಏ ಬೋಸಡಿ ಮಕ್ಕಳೆ ನಿನ್ನೆ ನಿಮ್ಮವರು ನಮ್ಮ ಡಾ:ಬಿ.ಆರ್ ಅಂಬೇಡ್ಕರ ಫಲಕದ ಕಟ್ಟೆಯ ಮೇಲೆ ಚಪ್ಪಲಿ ಹಾಕಿಕೊಂಡು ಕುಳಿತು ಅವಮಾನ ಮಾಡಿದ್ದಾರೆ ಇವತ್ತು  ನಿಮಗೆ ಜೀವ ಸಹಿತ ಬಿಡುವದಿಲ್ಲಾ ಅಂದವರೇ ಅವರಲ್ಲಿ, ದಶರತ ಈತನು ನನಗೆ ಬಡಿಗೆಯಿಂದ ಬಲಗಾಲಿನ ತೊಡೆಗೆ, ಮೊಳಕಾಲಿನ ಕೆಳಗೆ ಹೊಡದು ಗುಪ್ತು ಪೆಟ್ಟು ಮಾಡಿದ್ದು, ಮಲ್ಲು ನಾಟೇಕಾರ ಈತನು ಕೈ ಮುಷ್ಟಿ ಮಾಡಿ ಬಲಮೇಲಕಿಗೆ, ಬಲಗಣ್ಣಿಗೆ ಗುದ್ದಿದನು. ಶಿವ್ಯಾ ಈತನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ಬೆನ್ನಿಗೆ ಒದ್ದನು. ಆಗ ಸಂಗಡ ಇದ್ದ ಭೀಮು ಈತನು ಜಗಳ ಬಿಡಿಸಲು ಬಂದಾಗ ನವೀನ ಕೂಡ್ಲೂರು ಇತನು ಭೀಮುಗೆ ಕೈ ಮುಷ್ಟಿ ಮಾಡಿ ಎಡ ಕಣ್ಣಿಗೆ  ಜೋರಾಗಿ ಗುದ್ದಿದ್ದು ರಾಮ್ಯ ಈತನು ಭೀಮುಗೆ ನೆಲಕ್ಕೆ ಹಾಕಿ, ಕೈ ಮುಷ್ಟಿ ಮಾಡಿ ಬಾಯಿಗೆ ಗುದ್ದಿದ್ದು ಹಲ್ಲುಗಳು ಮುರಿದಿರುತ್ತವೆ. ಮತ್ತು ಬಾಯಿಗೆ ಗುಪ್ತ ಪೆಟ್ಟಾಗಿರುತ್ತದೆ. ರಾಕೇಶ ಈತನು ಭಿಮುಗೆ ಬೆನ್ನಿಗೆ ಕಾಲಿನಿಂದ ಒದ್ದು ಕೈಯಿಂದ ಕಪಾಳಕ್ಕೆ ಹೊಡೆದನು. ನಿಂಗಪ್ಪ ಈತನು ಈ ಸೂಳೆ ಮಕ್ಕಳಿಗೆ ಇವತ್ತು ಜೀವ ಸಹಿತ ಬಿಡಬಾರದು ಅಂತಾ ನನಗೆ ಬೆನ್ನಿಗೆ ಕಾಲಿನಿಂದ ಒದ್ದನು. ಆಗ ಇನ್ನೂಳಿದ 5-6 ಜನರು ಕೂಡಿಕೊಂಡು ನಮಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ನಾವು ಚಿರಾಡುತ್ತಿರುವಾಗ ಅಲ್ಲೆ ಗಂಜ್ ಗೇಟಿನಲ್ಲಿ ಇದ್ದ ಹಣಮಂತ ತಂದೆ ಮಹಾದೇವಪ್ಪ ಅರಕೇರಾ, ಸಾಬರೆಡ್ಡಿ ತಂದೆ ಮಲ್ಲಪ್ಪ ಪಾಮಳ್ಳಿ, ಸಿದ್ದು ತಂದೆ ಮಲ್ಲಪ್ಪ ಗಾದಿಗೇರ, ಇವರು ಬಂದು ಜಗಳ ಬಿಡಿಸಿದಾಗ ಅವರು ಅಲ್ಲಿಂದ ಹೋದರು. ಕಾರಣ ನಿನ್ನೆ ರಾತ್ರಿ ಯಾರೋ ಡಾಃ ಬಿ.ಆರ್.ಅಂಬೇಡ್ಕರ ನಾಮ ಫಲಕ ಇರುವ ಕಟ್ಟೆಯ ಮೇಲೆ ಚಪ್ಪಲಿಗಳನ್ನು ಹಾಕಿಕೊಂಡು ಕುಳಿತ್ತಿದ್ದಕ್ಕೆ ಜಗಳವಾಗಿದ್ದು, ಅದೇ ವೈಶಮ್ಯ ಕಟ್ಟಿಕೊಂಡು ಇಂದು ಬೆಳಿಗ್ಗೆ 10-15 ಗಂಟೆಯ ಸುಮಾರಿಗೆ ಮೇಲ್ಕಂಡ ಆರೋಪಿತರು ಅಕ್ರಮಕೂಟ ಕಟ್ಟಿಕೊಂಡು ಬಂದು ನನಗೆ ಮತ್ತು ಭೀಮು, ಈತನಿಗೆ ಹೊಡೆ ಬಡೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.46/2019 ಕಲಂ.143,147,341,323,324,326,504,506, ಸಂ.149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 79/2019 ಕಲಂ: 341, 323, 354, 504, 506 ಸಂಗಡ 34 ಐಪಿಸಿ ಮತ್ತು ಕಲಂ: 3(1)(ಆರ್)(ಎಸ್)(ಡಬ್ಲೂ)-ಎಸ್ಸಿ/ಎಸ್ಟಿ ಆಕ್ಟ್-1989:- ದಿನಾಂಕ 13.05.2019 ರಂದು ಮದ್ಯಾಹ್ನ 3:30 ಗಂಟೆಗೆ ಫಿರ್ಯಾದಿದಾರನಾದ ಶಂಕರ ತಂದೆ ಸಣ್ಣಟೀಕ್ಯಾ ರಾಠೋಡ ವ||55 ವರ್ಷ ಜಾ|| ಲಂಬಾಣಿ ಉ||ಒಕ್ಕಲುತನ ಸಾ||ಬೆಟ್ಟದಳ್ಳಿ ತಾ|| ಗುರುಮಠಕಲ್ ಜಿ||ಯಾದಗಿರಿ ಈತನು ಖುದ್ದಾಗಿ ಠಾಣೆಗೆ ಬಂದು ಒಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೇಂದರೆ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಶಂಕರ ತಂದೆ ಸಣ್ಣಟೀಕ್ಯಾ ರಾಠೋಡ ವಯಸ್ಸು:55 ವರ್ಷ ಜಾತಿ:ಲಂಬಾಣಿ ಉದ್ಯೋಗ: ಒಕ್ಕಲುತನ ಮುಕ್ಕಾಂ: ಬೆಟ್ಟದಳ್ಳಿ ತಾಲೂಕ: ಗುರುಮಠಕಲ್ ಜಿಲ್ಲಾ: ಯಾದಗಿರಿ ಆದ ನಾನು ತಮ್ಮಲ್ಲಿ ಕೇಳಿಕೊಳ್ಳುವುದೆನೇಂದರೆ, ನನಗೆ 1]ರಾಮು(32 ವರ್ಷ), 2]ಲಕ್ಷ್ಮಣ(27 ವರ್ಷ), 3]ಸುಶಿಲಾಬಾಯಿ(25), 4]ವಿಶಾಲ್(23 ವರ್ಷ),  5]ಕಮಲಿಬಾಯಿ(21 ವರ್ಷ) ಅಂತಾ ಐದು ಜನ ಮಕ್ಕಳಿರುತ್ತಾರೆ. ಇವರಲ್ಲಿ ಕಮಲಿಬಾಯಿ ನಮ್ಮೂರಿನ ಇರಫಾನ ತಂದೆ ಹುಸೇನ ಪಟೇಲ್ ಇವನೊಂದಿಗೆ ಎಲ್ಲಿಗೋ ಹೋಗಿ ಎಲ್ಲೋ ಇರುತ್ತಾರೆ. ಆ ಬಗ್ಗೆ ನಾನು ಮತ್ತು ನನ್ನ ಹೆಂಡತಿ ದಿನಾಂಕ 23.04.2019 ರಂದು ಸಂಜೆ 5:00 ಗಂಟೆಯ ಸುಮಾರಿಗೆ ಹುಸೇನ್ ಪಟೇಲ್ ರವರ ಮನೆಗೆ ಹೋಗಿ ಎಲ್ಲಿದ್ದಾರೆ ಹೇಗಿದ್ದಾರೆ ಎಂದು ಹೇಳಲು ಹೋಗುತ್ತಿದ್ದಾಗ ನಮ್ಮೂರಿನ ಗುಂಜಲಪ್ಪ ಹೊಟೇಲ್ ಮುಂದೆ ರೋಡಿನ ಮೇಲೆ ನಮ್ಮ ಎದರಿಗೆ ಬಂದ ನಮ್ಮೂರಿನ ರಾಜು ತಂದೆ ಲಕ್ಷ್ಮಪ್ಪ ಬಾತಕೋರಿ ಜಾತಿ: ಕಬ್ಬಲಿಗ ಈತನು ನಮಗೆ ತಡದು ನಿಲ್ಲಿಸಿ ಲೇ ಲಂಬಾಣಿ ಸೂಳೆ ಮಕ್ಕಳೆ ನಿಮ್ಮ ಮಗಳು ಮತ್ತು ನನ್ನ ಗೆಳೆಯ ಇರಫಾನ್ ಇಬ್ಬರು ಸೇರಿ ಹೋಗ್ಯಾರ ನೀವ ಎಲ್ಲಿಗೆ ಹೋಗಿ ನೋಡತಿರಿ ಅವರಿಗೆ 2-3 ಮಕ್ಕಳಾದ ಮೇಲೆ ಊರಿಗೆ ಬರತಾರ ಅಂತಾ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದನು. ಅದೇ ಸಮಯಕ್ಕೆ ನಾವಿದ್ದಲಿಗೆ ಬಂದ 1] ಹುಸೇನಪಟೇಲ್ ತಂದೆ ಖಾಸಿಂ ಪಟೇಲ್, 2] ನಬೀಸಾಬ ತಂದೆ ಖಾಸಿಂ ಪಟೇಲ್, 3]ಮೌಲನಬಿ ಗಂಡ ಹುಸೇನಪಟೇಲ್, ಇವರು ನಮ್ಮೊಂದಿಗೆ ಜಗಳಕ್ಕೆ ಬಿದ್ದರು. ಆಗ ನಾನು ಹುಸೇನಪಟೇಲ್ಗೆ ನನ್ನ ಮಗಳು ಮತ್ತು ನಿಮ್ಮ ಮಗ ಹೇಗಿದ್ದಾರೆ, ಎಲ್ಲಿದ್ದಾರೆ ಎಂದು ಕೇಳಿದಾಗ ಹುಸೇನಪಟೇಲ್ ಈತನು ಅದೇನ ಕೇಳತಿಲೇ ಲಂಬಾಣಿ ಸೂಳೆ ಮಗನೆ ಅಂತಾ ಹೇಳಿದ್ದು ಆಗ ಹುಸೇನಪಟೇಲ್, ನಬಿಸಾಬ, ಮೌಲನಬಿ ಮೂರು ಜನರು ಸೇರಿ ನನಗೆ ಮತ್ತು ನನ್ನ ಹೆಂಡತಿಗೆ ಕೈಯಿಂದ ಹೊಡೆ-ಬಡೆ ಮಾಡಿದರು. ಆಗ ಅಲ್ಲಿದ್ದ ಲಕ್ಷ್ಮಣ ತಂದೆ ನಾರಾಯಣ ರಾಠೋಡ, ನೇಹರು ತಂದೆ ಲಕ್ಷ್ಮಣ ರಾಠೋಡ, ಇತರರು ಸೇರಿ ಅವರಿಂದ ನಮಗೆ ಬಿಡಿಸಿಕೊಂಡರು. ಆಗ ಹುಸೇನಪಟೇಲ್ ಈತನು ಲೇ ಸೂಳೆ ಮಕ್ಕಳೆ ಇವರು ಬಂದು ಬಿಡಿಸಿಕೊಂಡಾರ ಅಂತಾ ಉಳಕೊಂಡಿದ್ದಿರಿ ಇಮ್ಮೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದರು. ನಂತರ ನಾನು ಮತ್ತು ನನ್ನ ಹೆಂಡತಿ ಮನೆಗೆ ಹೋಗಿ ನಮಗೆ ಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ಬೈದು, ಹೊಡೆ-ಬಡೆ ಮಾಡಿದವರ ಮೇಲೆ ಕೇಸ್ ಮಾಡುವ ವಿಚಾರದಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿದ ನಂತರ ಇಂದು ದಿನಾಂಕ 13.05.2019 ರಂದು ಗುರುಮಠಕಲ್ ಪೊಲೀಸ್ ಸ್ಟೇಷನ್ಗೆ ಬಂದು ಅಜರ್ಿ ಸಲ್ಲಿಸುತ್ತಿರುತ್ತೇವೆ. ಕಾರಣ ಈ ಮೇಲಿನವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 79/2019 ಕಲಂ: 341, 323, 354, 504, 506 ಸಂಗಡ 34 ಐಪಿಸಿ ಮತ್ತು ಕಲಂ: 3(1)(ಆರ್)(ಎಸ್)(ಡಬ್ಲೂ) ಎಸ್.ಸಿ/ಎಸ್.ಟಿ ಪಿ.ಎ. ಆಕ್ಟ್-1989 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 80/2019 ಕಲಂ: 341, 323, 324, 354, 427, 504, 506 ಸಂಗಡ 34 ಐಪಿಸಿ:-ದಿನಾಂಕ 23.04.2018 ರಂದು ಸಂಜೆ 5:00 ಗಂಟೆಗೆ ಫಿರ್ಯಾದಿ ಮತ್ತು ಆತನ ಹೆಂಡತಿ ಹಾಗೂ ಆತನ ಮಗ ಮೂರು ಜನರು ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಗುಂಜಲಪ್ಪ ಈತನ ಹೊಟೇಲ ಮುಂದೆ ಎದುರಿಗೆ ಬಂದ ಆರೋಪಿತರು ಅವರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ, ಕುಂಟ ಮೇಳಿಯಿಂದ, ಹೊಡೆ-ಬಡೆ ಮಾಡಿದ್ದು ಅಲ್ಲದೇ ಫಿರ್ಯಾದಿಯ ಹೆಂಡತಿಗೆ ಕೈಹಿಡಿದು ಎಳೆದು ನೂಕಿ ಕೊಟ್ಟಿದ್ದು, ಅದೇ ಸಮಯಕ್ಕೆ ಅಲ್ಲಿಗೆ ಬಂದ ರಾಜು ಈತನಿಗೂ ಸಹ ಹೊಡೆ-ಬಡೆ ಮಾಡಿದ್ದು ಅಲ್ಲದೇ ಆರೋಪಿತರೇಲ್ಲಾರು ಸೇರಿ ಫಿರ್ಯಾದಿಯ ಮನೆಗೆ ಹೋಗಿ ಆತನ ಮನೆಯ ಕಂಪೌಂಡ ಗೋಡೆಯನ್ನು ಹೊಡೆದು ಹಾಕಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ತಡವಾಗಿ ಠಾಣೆಗೆ ಬಂದು ನೀಡಿದ ಹೇಳೀಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 80/2019 ಕಲಂ: 341, 323, 324, 354, 427, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 34/2019 ಕಲಂ. 324 354 448 ಐಪಿಸಿ:-ದಿನಾಂಕ:13/05/2019 ರಂದು 17.30 ಗಂಟೆಯ ಸುಮಾರಿಗೆ  ಪಿಯರ್ಾದಿ ತನ್ನ ಗಂಡನೊಂದಿಗೆ ತಮ್ಮ ಮನೆಯಲ್ಲಿದ್ದಾಗ ಆರೋಪಿತನು ಬಂದು ಪಿಯರ್ಾದಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಬಂದು ಪಿಯರ್ಾದಿಯ ತೆಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿರುತ್ತಾನೆ ಮತ್ತು ಪಿಯರ್ಾದಿ ಗಂಡನಾದ ನೀಲಕಂಠರಾಯನಿಗೆ ಕಾಲಿಗೆ ಮತ್ತು ಕೈಗೆ ಆರೋಪಿತನು ಕಲ್ಲಿನಿಂದಾ ಹೊಡೆದರಿತ್ತಾನೆ ಅಂತಾ ಇತ್ಯಾದಿ ಲಿಖಿತ ದೂರಿನ ಸಾರಾಂಶದ ಮೇಲಿಂದಾ  ಕ್ರಮ ಜರುಗಿಸಲಾಗಿದೆ.   

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 35/2019 279, 429, 304(ಎ) ಐಪಿಸಿ & 187 ಐಎಂವಿ  ಕಾಯ್ದೆ:- ದಿನಾಂಕ: 13/05/2019  ರಂದು  ಸಾಯಂಕಾಲ 7.00 ಗಂಟೆಯ ಸುಮಾರಿಗೆ ಮೃತನು ತನ್ನ ಕುರಿಗಳನ್ನು ಹುಣಸಗಿ-ದೇವಾಪುರ ರೋಡಿನ ಮೇಲೆ ಹೊಡೆದುಕೊಂಡು ದೇವತ್ಕಲ್ ಕಡೆಗೆ ಹೊರಟಾಗ ವಾಯುಪುತ್ರ ಇವರ ಹೊಲದ ಹತ್ತಿರ ಹಿಂದಿನಿಂದಾ ಅಂದರೆ ಬೆನಕನಳ್ಳಿ ಕಡೆಯಿಂದಾ ಒಂದು ಟಾಟಾ ಎಸ್ ನಂ. ಕೆಎ-33 ಎ-0622 ನೇದ್ದನ್ನು ಅದರ ಚಾಲಕ ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಹಿಂದಿನಿಂದಾ ಮೃತನಿಗೆ ಹಾಗೂ ಕುರಿಗಳಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ  ಒಂದು ಕುರಿ ಹಾಗೂ ಒಂದು ಕುರಿಮರಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತ ಮಲ್ಲಿಕಾಜರ್ುನನಿಗೆ ತೆಲೆಯ ಬಲಬಾಗಕ್ಕೆ ಭಾರಿ ರಕ್ತಗಾಯ ಹಾಗೂ ಬಲಗಾಲ ಪಾದ ಮತ್ತು ಹಿಂಬಡಿಗೆ ಭಾರಿ ರಕ್ತಗಾಯವಾಗಿದ್ದು, ಮೃತನಿಗೆ ದೇವತ್ಕಲ್ ಖಾಸಗಿದವಾಖಾನೆಯಲ್ಲಿ ಪ್ರಥಮ ಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆಂದು ವಿಜಯಪುರ ದವಾಖಾನೆಗೆ ತೆಗೆದುಕೊಂಡು ಹೊರಟಾಗ ಹುಣಸಗಿ ದಾಟಿ ರಾತ್ರಿ 9.30 ಗಂಟೆಯ ಸುಮಾರಿಗೆ ಮಾರ್ಗ ಮದ್ಯ ಮೃತಪಟ್ಟಿರುತ್ತಾನೆ ಅಂತಾ ಇತ್ಯಾದಿ ಕೊಟ್ಟ ಹೇಳಿಕೆ ದೂರಿನ ಮೇಲಿಂದಾ ಕ್ರಮ ಜರುಗಿಸಿದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!