ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-05-2019

By blogger on ಶನಿವಾರ, ಮೇ 11, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-05-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:-78/2019 ಕಲಂ 323, 448, 427, 354 504, 506 ಸಂಗಡ 34 ಐ.ಪಿಸಿ:- ದಿನಾಂಕ 11-05-2019 ರಂದು 6-30 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಕಾಳಮ್ಮಾ ಗಂಡ ರಾಮಲಿಂಗಪ್ಪಾ ಹಲಗೇರ ವಯಾ:50 ಉ: ಕೂಲಿ ಜಾ: ಮಾದಿಗ ಸಾ: ಮುದ್ನಾಳ ಗ್ರಾಮ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದ ಸಾರಾಂಶವೆನೆಂದರೆ ನಮ್ಮ ಗ್ರಾಮದ ನಮ್ಮ ಅಣ್ಣತಮಕಿಯವರಾದ ಹಣಮಂತ ತಂದೆ ಭೀಮರಾಯ ಹಲಗೇರ  ಇತನ ಮಗನಾದ ಸುಖಮುನಿ ಹಾಗೂ ನನ್ನ ಮೊಮ್ಮಗನಾದ ಮಾರ್ತಂಡಪ್ಪಾ ತಂದೆ ಮಲ್ಲಯ್ಯಾ ಇವರಿಬ್ಬರೂ ಯಾವುದೋ ವಿಷಯದಲ್ಲಿ ತಕರಾರು ಮಾಡಿಕೊಂಡು ಜಗಳಾ ಮಾಡಿಕೊಂಡಿದ್ದರಿಂದ  ನಮಗೂ ಹಾಗೂ ಹಣಮಂತ ತಂದೆ ಭೀಮರಾಯ ಹಲಗೇರ ಇಬ್ಬರಿಗೂ ದಿನಾಂಕ 09-05-2019 ರಂದು ರಾತ್ರಿ 9 ಗಂಟೆಗೆ ಬಾಯಿಮಾತಿನ ಜಗಳ ಆಗಿತ್ತು ನಾವು ನಮ್ಮಷ್ಟಕ್ಕೆ ಸುಮ್ಮನಾಗಿದ್ದೆವು. ಹೀಗಿದ್ದು ದಿನಾಂಕ 10-05-2019 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಸೋಸೆಯಂದಿರರಾದ  ಹಣಮಂತಿ ಗಂಡ ಚನ್ನಮಲ್ಲಪ್ಪಾ , ಶಾಂತಮ್ಮಾ ಗಂಡ ಮಲ್ಲಯ್ಯಾ ಎಲ್ಲರೂ ಕೂಡಿ ಮನೆ ಮುಂದಿನ ಕಸ ಹೊಡೆಯುತ್ತಾ ಮನೆಯ ಮುಂದೆ ಕುಳಿತಿದ್ದೆವು. ಅದೇ ವೇಳೆಗೆ ಈ ಮೊದಲು ನಮ್ಮ ಜೋತೆಗೆ ಜಗಳ ಮಾಡಿಕೊಂಡಿದ್ದ ಹಣಮಂತ ತಂದೆ ಭೀಮರಾಯ ಹಲಗೇರ ಹಾಗೂ ಆತನ ಮಗನಾದ ಸುಖಮುನಿ ಇಬ್ಬರೂ ಬಂದವರೇ ನಮಗೆಲ್ಲರಿಗೆ ಅವಾಚ್ಯವಾಗಿ ಲೇ ಬೋಸಡೇರ ಎಲ್ಲಿದ್ದಾನೆ ಆ ಮಾತರ್ಾಂಡ್ಯಾ ಸೂಳಿ ಮಗ, ಅವನಿಗೆ ಹೊರಗ ಕಳಿಸಿರಿ ಅವನಿಗೆ ಇವತ್ತ ಒಂದು ಗತಿ ಕಾಣಿಸುತ್ತೆವೆ ಅಂತಾ ಕೂಗಾಡುತ್ತಾ ನಮ್ಮ ಮನೆಯ ಹತ್ತಿರ ಬಂದರು. ಆಗ ನಾವು ಅವರಿಗೆ ಚಿಕ್ಕ ಮಕ್ಕಳು ಜಗಳಾಡಿದ್ದಾರೆ ಹೋಗಲಿ ಬಿಡಿರಿ ಇದನ್ನು ದೊಡ್ಡದು ಮಾಡುವುದು ಬೇಡ ಅಂತಾ  ಅವರಿಗೆ ಸಮಾಧಾನಪಡಿಸುತ್ತಿದ್ದಾಗ ಅವರಿಬ್ಬರೂ ಒಮ್ಮೇಲೆ ಆ ಮಗ ಮಾರ್ತಂಡನಿಗೆ ಇವತ್ತು ಜೀವ ಸಹಿತ ಉಳಿಸುವುದಿಲ್ಲಾ ಅಂತಾ ನಮ್ಮ ಮನೆಯ ಮುಂದೆ ಇದ್ದ ಕಟ್ಟಿಗೆಯ ಗುಪ್ಪಿಯಲ್ಲದ್ದ ತಲಾ ಒಂದೊಂದು ಕಟ್ಟಿಗೆ ಬಡಿಗೆಯನ್ನು ತೆಗೆದುಕೊಂಡು ನಮ್ಮ ಮನೆಯೊಳಗೆ ಅತೀಕ್ರಮ ಪ್ರವೇಶ ಮಾಡಿ ಮನೆಯೊಳಗಿದ್ದ ನಮ್ಮ ಟಿ.ವ್ಹಿ ಗೆ ಬಡಿಗೆಯಿಂದ ಹೊಡೆದು ಒಡೆದು ಹಾಕಿ ಹಾನಿ ಮಾಡಿದರು. ಆಗ ನಾನು ಮತ್ತು ನಮ್ಮ ಸೊಸೆಯಂದಿರರು ಅವರಿಗೆ ಈ ರೀತಿ ಮಾಡುವುದು ಸರಿಯಲ್ಲಾ ಕುಳಿತು ಮಾತಾಡೋಣ ಅಂತಾ ಹೇಳಿದಾಗ ಅವರು ನಮ್ಮ ಮಾತನ್ನು ಕೇಳದೇ ಅವರಿಬ್ಬರೂ ರಂಡೇರ ನಮಗೆ ಬುದ್ದಿ ಹೇಳಲಿಕ್ಕೆ ಬರತಿರೇನು ಅಂತಾ ಅನ್ನುತ್ತಾ ನನಗೆ ಹಾಗೂ ನಮ್ಮ ಸೊಸೆಯಂದಿರರಿಗೆ ಕೈಯಿಂದ ಹೊಡೆಬಡಿ ಮಾಡಿ ನಮ್ಮ ಸೊಸೆಯರಾದ ಹಣಮಂತಿ ಹಾಗೂ ಶಾಂತಮ್ಮಾ ಇವರ ಸೀರೆಯನ್ನು ಹಿಡಿದು ನೆಲದ ಮೇಲೆ ಎಳೆದಾಡಿ ಅವರಿಗೆ ಮಾನಭಂಗ ಮಾಡಲು ಪ್ರಯತ್ನಿಸಿದರು. ಆಗ ಪಕ್ಕದ ಮನೆಯವರಾದ ಮರೆಮ್ಮಾ ಗಂಡ ಬೀಮರಾಯ ಹಲಗೇರಾ ಇವರು ಮತ್ತು ಅಷ್ಟರಲ್ಲಿ ನನ್ನ ಮಗ ಚನ್ನಮಲ್ಲಯ್ಯಾ ತಂದೆ ರಾಮಲಿಂಗಪ್ಪಾ ಇವರಿಬ್ಬರೂ ಬಂದು ಅವರನ್ನು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿದರು. ನಂತರ ಈ ವಿಷಯದ ಬಗ್ಗೆ ನಾವೆಲ್ಲರೂ ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಈ ರೀತಿಯಾಗಿ ನಮ್ಮ ಮನೆಯಲ್ಲಿಲ ಅತೀಕ್ರಮ ಪ್ರವೇಶ ಮಾಡಿ ನಮ್ಮ ಮನೆಯಲ್ಲಿದ್ದ ಟಿ.ವ್ಹಿಯನ್ನು ಹಾನಿ ಮಾಡಿ ನನ್ನ ಸೋಸೆಯಂದಿರರಿಗೆ ಮಾನಭಂಗ ಮಾಡಲು ಪ್ರಯತ್ನಿಸಿದ ಹಣಮಂತ ತಂದೆ ಭೀಮರಾಯ ಹಲಗೇರ ಹಾಗೂ ಆತನ ಮಗನಾದ ಸುಖಮುನಿ ಇವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 78/2019 ಕಲಂ 323, 448, 427, 504, 506, 354 ಸಂಗಡ  34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 77/2019 ಕಲಂ 143, 147, 323, 324, 504, 506 ಸಂ 149 ಐಪಿಸಿ:-ದಿನಾಂಕ 10-05-2019 ರಂದು ಬೆಳಿಗ್ಗೆ 6-00 ಗಂಟೆಗೆ ಫಿರ್ಯಾದಿಯು ತನ್ನ ಮನೆ ಹತ್ತಿರ ಇರುವಾಗ ್ಕ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಬಂದು ಕಲ್ಲು ಮತ್ತು ಬಡಿಗೆ ತೆಗೆದಕೊಂಡು ಬಂದು ನಿನ್ನೆ ನಮ್ಮ ಮಗನ ಜೋತೆಗೆ ಯಾಕೆ ತಕರಾರು ಮಾಡಿದ್ದಿ ಬೋಸಡಿ ಮಗನೇ ಅಂತಾ ಅವಾಚ್ಯವಾಗಿ ಬೈದು, ಕಲ್ಲಿನಿಂದ, ಕಟ್ಟಿಗೆಯಿಂದ ಮತ್ತು ಕೈಯಿಂದ  ಹೊಡಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿ, ಜೀವದ ಭಯ ಹಾಕಿದ ಬಗ್ಗೆ,  ತಡವಾಗಿ ಠಾಣೆಗೆ ಬಂದು ಹೇಳಿಕೆ ಕೊಟ್ಟ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 76/2019  ಕಲಂ 323, 354 504, 506 ಐ.ಪಿಸಿ:- ದಿನಾಂಕ 11-05-2019 ರಂದು 3 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಲಲಿತಾ ಗಂಡ ಸುಭಾಸ ರಾಠೊಡ ವಯಾ:27 ಉ: ಅಂಗನವಾಡಿ ಕಾರ್ಯಕತರ್ೆ ಜಾ: ಲಂಬಾಣಿ ಸಾ: ವೆಂಕಟೇಶ ನಗರ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ಈ ಹಿಂದೆ ನಮ್ಮ ತಾಂಡಾದ ಹಾಗೂ ನಮ್ಮ ಮನೆಯ ಪಕ್ಕದ ಮನೆಯವರಾದ ಮಂಗಿಲಾಲ @ ಮಂಗೇಶ ತಂದೆ ಪತ್ತು ರಾಠೋಡ ಹಾಗೂ ಆತನ ಹೆಂಡತಿ ಇಬ್ಬರೂ ತಮ್ಮ ಮನೆಯ ಸಂಸಾರದ ವಿಷಯದಲ್ಲಿ ಜಗಳಾ ಮಾಡಿಕೊಂಡಾಗ ನಮ್ಮ ತಂದೆಯಾದ ಗೋಬ್ರ್ಯಾ ತಂದೆ ಹರಿಶ್ಚಂದ್ರ ರಾಠೋಡ ಇವರು ಮಂಗಿಲಾಲ್ @ಮಂಗೇಶ ಇತನಿಗೆ ಬುದ್ದಿವಾದ ಹೇಳಿದಾಗ ಆತನು ನಮ್ಮ ತಂದೆಯ ಜೋತೆಯಲ್ಲಿ ತಕರಾರು ಮಾಡಿಕೊಂಡು ನಮ್ಮ ತಂದೆಯ ಜೋತೆಗೆ ವೈಮನಸ್ಸು ಬೆಳೆಸಿಕೊಂಡು ಬಂದಿದ್ದನು. ಹೀಗಿದ್ದು ದಿನಾಂಕ 03-05-2019 ರಂದು ರಾತ್ರಿ 10 ಗಂಟೆಗೆ ನಾನು ನನ್ನ ಗಂಡ ಹಾಗೂ ನಮ್ಮ ತಂದೆಯಾದ ಗೋಬ್ರ್ಯಾ ಎಲ್ಲರೂ ನಮ್ಮ ಮನೆಯ ಹತ್ತಿರ ಇದ್ದಾಗ ಅದೇ ವೇಳೆಗೆ ಸದರಿ ಮಂಗಿಲಾಲ @ ಮಂಗೇಶ ತಂದೆ ಪತ್ತು ರಾಠೋಡ ಇತನು ನಮ್ಮ ಮನೆಯ ಹತ್ತಿರ ಬಂದು ನಮ್ಮ ತಂದೆಗೆ ಎಲೇ ಭೊಸಡಿ ಮಗನೇ ನಿಮಗೆ ನಮ್ಮ ಮನೆಯ ಹತ್ತಿರ ಕಟ್ಟಿಗೆಗಳು ಹಾಕಬೇಡಿರಿ ಅಂತಾ ಹೇಳುತ್ತಾ ಬಂದರೂ ಕೂಡಾ ನೀವು ಅದೇ ನಮ್ಮ ಜ್ಯಾಗೆಯಲ್ಲಿ ಕಟ್ಟಿಗೆ ಹಾಕಿ ನಮಗೆ ತೊಂದರೆ ಕೊಡುತ್ತಿದ್ದಿ ಅಂತಾ ಬೈಯ್ಯಹತ್ತಿದನು. ಆಗ ಅಲ್ಲಿಯೇ ಇದ್ದ ನಾನು ನಮ್ಮ ತಂದೆ ಹಾಗೂ ನನ್ನ ಗಂಡ ಮೂವರು ಕೂಡಿ ಮಂಗಿಲಾಲ @ ಮಂಗೇಶ ಇತನಿಗೆ ಮೊದಲಿನಿಂದಲೂ ಇದೇ ಜ್ಯಾಗೆಯಲ್ಲಿ ಕಟ್ಟಿಗೆ ಹಾಕುತ್ತೆವೆ, ಈಗ ಇಲ್ಲಿ ಕಟ್ಟಿಗೆ ಹಾಕಬೇಡ ಎಂದರೇ ಎಲ್ಲಿ ಹಾಕಬೇಕು ಅಂತಾ ಅಂದಾಗ ಒಮ್ಮೇಲೆ ಮಂಗೇಶ ತಂದೆ ಪತ್ತು ರಾಠೋಡ ಇತನು ನಮ್ಮ ತಂದೆಗೆ ರಂಡಿ ಮಗನೇ ಬೇಕಾದರೇ ನಿನ್ನ ಮನೆಯಲ್ಲಿ ಹಾಕಿಕೋ ಇಲ್ಲಿ ಹಾಕಬೇಡ ಅಂತಾ ಅಂದಾಗ ಆಗ ನಾನು ಮಧ್ಯ ಹೋಗಿ ದೊಡ್ಡವರಿಗೆ ಹೀಗೇಲ್ಲಾ ಮಾತಾಡುವುದು ಸರಿಯಲ್ಲಾ ಅಂತಾ ಅಂದಾಗ ಮಂಗಿಲಾಲ @ ಮಂಗೇಶ ಇತನು ನನಗೂ ಏ ಭೋಸಡಿ ನನಗೆ ಬುದ್ದಿ ಹೇಳಿಲಿಕ್ಕೆ ಬರಬೇಡ ಅಂತಾ ನನಗೆ ಅವಾಚ್ಯ ಶಬ್ದಗಳಿಂದ ಬೈದನು. ಆಗ ಆತನಿಗೆ ನೀನು ಬಾಯಿಗೆ ಬಂದಂತೆ ಮಾತಾಡಬೇಡ ಸ್ವಲ್ಪ ವಿಚಾರ ಮಾಡು ಅಂತಾ ಅನ್ನುವಾಗ ಅವನು ಒಮ್ಮೇಲೆ ಚೀನಾಲಿ ನನಗೆ ಎದರು ಮಾತಾಡುತ್ತಿ ಅಂತಾ ಅಂದವನೇ ನನಗೆ ಬೆನ್ನಿಗೆ ಕೈಯಿಂದ ಹೊಡೆದು ನನ್ನ ಸೀರೆಯನ್ನು ಹಿಡಿದು ನೆಲದ ಮೇಲೆ ಎಳೆದಾಡಿ ನನಗೆ ಮಾನಭಂಗ ಮಾಡಲು ಪ್ರಯತ್ನಿಸಿದನು. ಮತ್ತು ನನ್ನ ತಂಟೆಗೆ ಬಂದರೇ ನಿಮಗೆ ಒಬ್ಬೊಬ್ಬರಿಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಭಯ ಹಾಕಿದನು. ಆಗ ಅಲ್ಲಿಯೇ ಇದ್ದ  ನನ್ನ ಗಂಡನಾದ ಸುಭಾಸ ಹಾಗೂ ನಮ್ಮ ತಂದೆಯಾದ ಗೋಬ್ರ್ಯಾ ಇಬ್ಬರೂ ಮಂಗಿಲಾಲ @ ಮಂಗೇಶ ತಂದೆ ಪತ್ತು ರಾಠೋಡ ಇತನಿಗೆ ಸಮಾಧಾನ ಪಡಿಸಿದರೂ ಕೂಡಾ ಅವನು ಮಕ್ಕಳೇ ನಿಮಗೆ ನೋಡಿಕೊಳ್ಳುತ್ತೆನೆ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಅಲ್ಲಿಂದ ಹೊರಟು ಹೋದನು. ಈ ವಿಷಯದ ಬಗ್ಗೆ  ನಾನು ಮನೆಯಲ್ಲಿ ನನ್ನ ಗಂಡ ಹಾಗೂ ನಮ್ಮ ತಂದೆ ಹಾಗೂ ನಮ್ಮ ಹಿರಿಯರಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾಧಿ ಸಲ್ಲಿಸುತ್ತಿದ್ದು ಈ ಬಗ್ಗೆ ಮಂಗೇಶ ತಂದೆ ಪತ್ತು ರಾಠೋಡ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ಫಿರ್ಯಾಧಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 76/2019 ಕಲಂ 323, 354, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 75/2019 ಕಲಂ 379 ಐಪಿಸಿ:-ದಿನಾಂಕ 11/05/2019 ರಂದು ಬೆಳಿಗ್ಗೆ 11-30 ಎ.ಎಂ.ಕ್ಕೆ ಹತ್ತಿಕುಣಿ   ಗ್ರಾಮದ ಸೀಮೆಯಲ್ಲಿ ಬರುವ ಸರಕಾರಿ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತರಾದ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿಕೊಂಡು ತಮ್ಮ ಟ್ರ್ಯಾಕ್ಟರ ಇಂಜಿನದ ಚೆಸ್ಸಿ ನಂ ಒಃಓಂಂಂಗಃಊಏಚಏ01135 ಮತ್ತು ಇಂಜಿನ ನಂ  ಚಏಏ4ಙಂಂ2449 ಮತ್ತು ಟ್ರ್ಯಾಲಿ ನಂ ಕೆ.ಎ-33-ಟಿ-8737 ನೆದ್ದರಲ್ಲಿ ಮರಳು ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 74/2019 ಕಲಂ 379 ಐಪಿಸಿ:-ದಿನಾಂಕ 11/05/2019 ರಂದು ಬೆಳಿಗ್ಗೆ 9-00 ಎ.ಎಂ.ಕ್ಕೆ ಮುಂಡರಗಿ  ಗ್ರಾಮದ ಸೀಮೆಯಲ್ಲಿ ಬರುವ ಸರಕಾರಿ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತರಾದ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿಕೊಂಡು ತಮ್ಮ ಟ್ರ್ಯಾಕ್ಟರ ಇಂಜಿನ ನಂ ಕೆ.ಎ-33-ಟಿಎ-0775 ಮತ್ತು ಟ್ರ್ಯಾಲಿ ಚೆಸ್ಸಿ ನಂ 034/2011 ನೆದ್ದರಲ್ಲಿ ಮರಳು ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ. 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:-73/2019 ಕಲಂ 379 ಐಪಿಸಿ:-ದಿನಾಂಕ 11/05/2019 ರಂದು ಬೆಳಿಗ್ಗೆ 6-45 ಎ.ಎಂ.ಕ್ಕೆ ಮುಂಡರಗಿ  ಗ್ರಾಮದ ಸೀಮೆಯಲ್ಲಿ ಬರುವ ಸರಕಾರಿ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತರಾದ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿಕೊಂಡು ತಮ್ಮ ಟ್ರ್ಯಾಕ್ಟರ ಇಂಜಿನ ನಂ ಕೆ.ಎ-33-ಟಿಎ-0874 ಮತ್ತು ಟ್ರ್ಯಾಲಿ ನಂ ಕೆ.ಎ-33-ಟಿಎ-0875 ನೆದ್ದರಲ್ಲಿ ಮರಳು ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ. 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 29/2019  ಕಲಂ 279, 337 ಐಪಿಸಿ:-ಸದರಿ ಪ್ರಕರಣದ ಫಿಯರ್ಾದಿಯವರ  ಬೂದಿ ಟ್ಯಾಂಕರ್ ನಂಬರ ಕೆಎ-36, ಎ-4891 ನೇದ್ದನ್ನು ಶಕ್ತಿನಗರದಿಂದ ಬೂದಿ ಲೋಡ್ ಮಾಡಿಕೊಂಡು ಸೇಡಂ ಸಿಮೆಂಟ್ ಕಂಪನಿಗೆ ತೆಗೆದುಕೊಂಡು ಹೊರಟಾಗ ಮಾರ್ಗ ಮದ್ಯೆ ನಿನ್ನೆ  ದಿನಾಂಕ 10/05/2019 ರಂದು ಸಾಯಂಕಾಲ  6-15 ಪಿ.ಎಂ.ಕ್ಕೆ ಯಾದಗಿರಿ ಕೆ.ಎಸ್.ಆರ್.ಟಿ.ಸಿ ವರ್ಕ ಶಾಪ್ ಹತ್ತಿರ ಆರೋಪಿತ ಚಾಲಕ ಹುಸೇನ್ ಬಾಷಾ ಈತನು ಬೂದಿ ಟ್ಯಾಂಕರ್ ನೇದ್ದನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ರಸ್ತೆ ಮೇಲೆ ಪಲ್ಟಿ ಮಾಡಿದ್ದು  ಚಾಲಕನಿಗೆ ಸಣ್ಣ ಪುಟ್ಟ ತರಚಿದ ರಕ್ತಗಾಯಗಳಾಗಿದ್ದು ಇರುತ್ತದೆ  ಸದರಿ ಘಟನೆಯು ಚಾಲಕನ ಅತೀವೇಗ ಮತ್ತು ಅಲಕ್ಷ್ಯತನದಿಂದ ಜರುಗಿದ್ದು  ಆತನ ಮೇಲೆ ಕಾನೂನಿನ ಕ್ರಮ ಜರುಗಿಸುವ ಕುರಿತು  ತಡವಾಗಿ ಇಂದು ಠಾಣೆಗೆ ಹಾಜರಾಗಿ ಫಿಯರ್ಾದಿ ನೀಡಿದ್ದು  ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.   

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 50/2019 ಕಲಂ. 143,147,323,341,504,506 ಸಂಗಡ 149 ಐಪಿಸಿ:-ದಿನಾಂಕ 11-05-2019 ರಂದು ಮದ್ಯಾಹ್ನ 2-00 ಪಿ,ಎಮ್ ಕ್ಕೆ ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಹೆಚ್,ಸಿ-68 ಹಸನಪಟೇಲ ರವರು ಎಮ್,ಎಲ್,ಸಿ ಪಿಯರ್ಾದಿಯಾದ ಶ್ರೀಧರ ತಂದೆ ರವಿಂದ್ರರೆಡ್ಡಿ ಪಲರ್ೆ ವ|| 26 ವರ್ಷ ಜಾ|| ಲಿಂಗಾಯತ ಉ|| ಗುತ್ತಿಗೆದಾರರು ಸಾ|| ಶೇಟ್ಟಹಳ್ಳಿ ತಾ,ಜಿ|| ಯಾದಗಿರ ರವರಿಂದ ಹೇಳಿಕೆ ಪಡೇದು ಇದರ ಸಾರಾಶವೆನೆಂದರೆ ನನ್ನ ಟ್ರ್ಯಾಕ್ಟರದಲ್ಲಿ ಗೂಡುರ ಬ್ರೀಜನಲ್ಲಿ ಜಿ, ಶಂಕರ ಕಂಪನಿಗೆ ಆಗಾಗ ಕಂಕರನ್ನು ಹಾಕುತ್ತಿದ್ದೆನು. ದಿನಾಂಕ 09-05-2019 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ಟ್ರ್ಯಾಕ್ಟರದಲ್ಲಿ ಕಂಕರನ್ನು ತುಂಬಿಕೊಂಡು ಜಿ, ಶಂಕರ ಕಂಪನಿಗೆ ಹಾಕಲು ಹೋದಾಗ 1)ರವಿಕುಮಾರ ತಂದೆ ಯಂಕಣ್ಣಗೌಡ ಮಲ್ಲಾರ 2)ಬಸಲಿಂಗಪ್ಪ ಕದರಾಪೂರ 3)ಸುರೇಶಗೌಡ ಗುರುಸಣಗಿ ಇವರು ಅಡ್ಡ ಬಂದು ಇಲ್ಲಿಯಾಕೇ ಕಂಕರ ಹಾಕತ್ತಿಯಾ ಇಲ್ಲಿ ಕಂಕರ ಹಾಕಬೇಡಾ ಎಂದು ನನ್ನ ಜೋತೆ ಬಾಯಿಮಾತಿನಿಂದ ತಕರಾರು ತೆಗೆದಿರುತ್ತಾರೆ. ದಿನಾಂಕ 10-05-2019 ರಂದು ನಾನು ಸಾಯಂಕಾಲ 4-00 ಗಂಟೆ ಸುಮಾರಿಗೆ ನಮ್ಮೂರಿನಿಂದ ಯಾದಗಿರಿಗೆ ನನ್ನ ಮೋಟರ ಸೈಕಲ ಮೇಲೆ ಹೋಗುವಾಗ ಕರಿಬೆಟ್ಟ ಕ್ರಾಸ ತಾಯಮ್ಮನ ಗುಡಿಯ ಹತ್ತಿರ 1)ರವಿಕುಮಾರ ತಂದೆ ಯಂಕಣ್ಣಗೌಡ ಮಲ್ಲಾರ 2)ಬಸಲಿಂಗಪ್ಪ ಕದರಾಪೂರ 3)ಸುರೇಶಗೌಡ ಗುರುಸಣಗಿ ಹಾಗೂ ಇವರ ಸಂಗಡ ಇನ್ನೂ ಇಬ್ಬರೂ ಕೂಡಿಕೊಂಡು ನನ್ನ ಮೋಟರ ಸೈಕಲನ್ನು ತಡೆದು ನಿಲ್ಲಿಸಿ ರವಿಕುಮಾರ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಲೆ ಭೋಸಡಿ ಮಗನೇ ನಿನ್ನೆ ಎನೆನೋ ಮಾತಾಡಿದ್ದಿ ಈಗ ಮಾತಾಡಲೇ ಮಗನೇ ಎಂದು ಕೈಯಿಂದ ಕಪಾಳಕ್ಕೆ ಮತ್ತು ಕಾಲಿನಿಂದ ನನ್ನ ಹೊಟ್ಟೆಗೆ ಹೋಡೆದು ಕೆಳಗೆ ಬೀಳಿಸಿದನು. ಬಸಲಿಂಗಪ್ಪ ಬಂದು ಅವಾಚ್ಯವಾಗಿ ಬೈದು ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು ಆಗ ಸುರೇಶಗೌಡ ಬಂದು ಈ ಭೋಸಡಿ ಮಗಂದ ಬಹಳ ಆಗ್ಯಾದ ಅಂತಾ ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದನು ಮತ್ತು ಇವರ ಸಂಗಡ ಇದ್ದ ಇತರರು ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಕಾಲಿನಿಂದ ಹೊಟ್ಟೆಗೆ, ತೊಡೆಗೆ ಹೊಡೆದಿರುತ್ತಾರೆ. ನಾನು ಬಿಡಿಸಿಕೊಂಡು ಹೋಗುವಗ ರವಿಕುಮಾರ ಇತನು ಅವಾಚ್ಯವಾಗಿ ಬೈದು ಇನ್ನೊಂದು ಸಲ ನನ್ನ ತಂಟೆಗೆ ಬಂದರೆ ನೀನಗೆ ಜೀವ ಸಹಿತ ಬೀಡುವುದಿಲ್ಲಾ ಅಂತಾ ಹೇಳುತ್ತಿರುವಾಗ ರಸ್ತೆಯ ಮುಖಾಂತರ ಹೋಗುತ್ತಿರುವ ರಾಜಶೇಖರ ತಂದೆ ಶಿವಶರಣಪ್ಪ ಸಾ|| ಕನ್ಯಾಕವಳುರ ಮತ್ತು ಆಕಾಶ ತಂದೆ ಶ್ರೀಶೈಲ್ ಗುಡುಗುಡಿ ಸಾ|| ಯಾದಗಿರ ಇವರು ಬಂದು ಜಗಳವನ್ನು ಬಿಡಿಸಿರುತ್ತಾರೆ. ಆಗ ಇವರೇಲ್ಲರೂ ಹೋಗುವಾಗ ನನಗೆ ಇನ್ನೋಂದು ಸಲ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬೀಡುವುದಿಲ್ಲಾ ಎಂದು ಹೇಳುತ್ತಾ ಜೀವದ ಬೆದರಿಕೆ ಹಾಕುತ್ತಾ ಹೋದರು. ಅವರು ಹೋದ ಮೇಲೆ ನಾನು ಖಾಸಗಿ ಲಾರಿಯನ್ನು ಹಿಡಿದುಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಯಾದಗಿರಿಗೆ ಬಂದು ಸೇರಿಕೆ ಯಾಗಿರುತ್ತೆನೆ. ಕಾರಣ ನನಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ - ಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿ ಲ್ಯಾಪಟಾಪನಲ್ಲಿ ಮಾಡಿಸಿದ್ದ ಹೇಳಿಕೆ ಪಿಯರ್ಾದಿಯ ಮೆಲಿಂದ ಠಣಾ ಗುನ್ನೆ ನಂ 50/2019 ಕಲಂ 143,147,323,341,504,506 ಸಂಗಡ 149 ಐಪಿಸಿ ನೇದ್ದರ ಮೆಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 122/2019.ಕಲಂ 323 324 354 504 506 ಸಂ 34 ಐ.ಪಿ.ಸಿ:- ದಿನಾಂಕ 11/05/2019 ರಂದು ರಾತ್ರಿ 19-00 ಗಂಟೆಗೆ ಶ್ರೀಮತಿ, ಮರಿಲಿಂಗಮ್ಮ ಗಂಡ ಮಲ್ಲಣ್ಣ ಟಣಕೆದಾರ ವ|| 25 ಜಾ|| ಬೇಡರ ಉ|| ಮನೆಕೆಲಸ ಸಾ|| ಎವೂರ ಹಾ||ವ|| ಎಂ, ಕೊಳ್ಳೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಅದರಿ ಅಜರ್ಿಯ ಸಾರಾಂಶ ವೆನೆಂದರೆ. ದಿನಾಂಕ 09/05/2019 ರಂದು ನನ್ನ ಗಂಡನ ಮೆನೆಯಿಂದ ನನ್ನ ತವರು ಮನೆ ಎಂ,ಕೊಳ್ಳೂರಕ್ಕೆ ಬಂದು ನನ್ನ ಅಜ್ಜಿಯಾದ ತಾಯಮ್ಮ ಗಂಡ ವೆಂಕುಬಾ ಇವರ ಮನೆಗೆ ಬಂದಿದ್ದೆನು, ದಿನಾಂಕ 10/05/2019 ರಂದು 11-30 ಗಂಟೆಗೆ ನಾನು ನನ್ನ ತಂದೆಯ ಮೆನೆಗೆ ಹೊದಾಗ ನನ್ನ ಮಲತಾಯಿ ಪದ್ದಮ್ಮ ಗಂಡ ನಾಗಪ್ಪ ಈಕೆಯು ನನ್ನನೋಂದಿಗೆ ತಕರಾರು ಮಾಡಿದು ಇರುತ್ತದೆ, ನಾನು ಹೋಗಲಿ ಅಂತ ಸುಮ್ಮನೆ ಆಗಿದ್ದೆನು, ದಿನಾಂಕ 11/05/2019 ರಂದು 2-30 ಗಂಟೆಗೆ ನಾನು ನಮ್ಮ ಅಜ್ಜಿ ಮನೆಯಿಂದ ನನ್ನ ತಂದೆಯ ಮನೆಗೆ ಹೋದಾಗ ನನ್ನ ಮಲತಾಯಿ ಪದ್ದಮ್ಮ ಈಕೆಯು ಮತ್ತು ನನ್ನ ಗಂಡನ ತಂದೆ ಶರಣಪ್ಪ ಟಣಕೆದಾರ ಸಾ|| ಎವೂರ ಇಬ್ಬರು ಮನೆಯ ಮುಂದೆ ನಿಂತ್ತಿದ್ದರು, ನನ್ನ ಮಲತಾಯಿ ಪದ್ದಮ್ಮ ಈಕೆಯು ನನಗೆ ನೋಡಿ ಲೆ ಸೂಳಿ ನಿನು ನಮ್ಮ ಮನೆಗೆ ಎಕೆಬರುತ್ತಿ ನಿನು ನನ್ನ ಮನೆಗೆ ಬಂದರೆ ನಿನಗೆ ನಮ್ಮ ಆಸ್ತಿಯಲ್ಲಿ ಪಾಲು ಕೊಡಬೆಕಾಗುತ್ತದೆ, ನಿನು ನಮ್ಮ ಮನೆಗೆ ಬರಬೇಡ ಅಂತ ಬೈದಳು, ಆಗ ನಾನು ನಿಮ್ಮೋಂದಿಗೆ ತಕರಾರು ಮಾಡಲು ಬಂದಿರುವದಿಲ್ಲಾ ಅಂತ ಅಂದಾಗ ನನ್ನ ಮಾವ ಶರಣಪ್ಪನು ಎದರು ಮಾತನಾಡುತ್ತಿ ಅಂತ ಅಂದವನೆ ಅಲ್ಲೆ ಬಿದ್ದ ಒಂದು ಕಲ್ಲಿನಿಂದ ಬಲಗೈ ಜುಬ್ಬದ ಹತ್ತಿರ ಹೋಡೆದು ಗುಪ್ತಗಾಯ ನಾಡಿದನು, ತನ್ನ ಕೈಯಿಂದ ನನಗೆ ಕುತ್ತಿಗೆಗೆ, ತಲೆಗೆ, ಹೋಡೆದು ಗುಪ್ತಗಾಯ ಮಾಡಿದನು, ಆಗ ಪದ್ದಮ್ಮಳು ತನ್ನ ಕೈಯಿಂದ ನನಗೆ ಬೆನ್ನಿಗೆ, ಬಲಗೈ ಜುಬ್ಬದ ಹತ್ತಿರ ಹೋಡೆದು ಗುಪ್ತಗಾಯ ಮಾಡಿದಳು, ಆಗ ಅಲ್ಲೆ ಇದ್ದ ಶಿವು ತಂದೆ ಸಾಬಯ್ಯ ಕುರಿಕಳ್ಳೆರ, ಶಿನಪ್ಪ ತಂದೆ ಚಂದಯ್ಯ ನರಬೋಳ, ಇವರು ಸದರಿ ಜಗಳವನ್ನು ನೋಡಿ ಬಂದು ಬಿಡಿಸಿಕೊಂಡರು, ಆಗ ಶರಣಪ್ಪ ಮತ್ತು ಪದ್ದಮ್ಮ ಇಬ್ಬರು ನನಗೆ ಇನ್ನೋಮ್ಮಿ ನಮ್ಮ ತಂಟೆಗೆ ಬಂದರೆ ನಿನ್ನ ಜಿವಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿದರು, ಸದರಿ ಜಗಳವು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ನನ್ನ ತಂದೆ ನಾಗಪ್ಪನ ಮನೆಯ ಮುಂದೆ ಜರುಗಿರುತ್ತದೆ, ನಂತರ ನಾನು ಉಪಚಾರಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಪಡೆದು ಠಾಣೆಗೆ ಬಂದು ದೂರು ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾನೆಯ ಗುನ್ನೆ ನಂ 122/2019 ಕಲಂ 323.324.354.504.506.ಸಂ.34 ಐ.ಪಿ.ಸಿ. ನ್ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ.:- 14/2019 ಕಲಂ: 323, 354, 355, 448, 504, 506 ಸಂಗಡ 34 ಐಪಿಸಿ:-ಪಿಯರ್ಾದಿದಾರಳ ಗಂಡ ಮಾವ ಅತ್ತೆ, ಮೈದುನಾ ತಾಂಡಾದ ಮನೆಯಿಂದ ಹೊಲದ ಮನೆಗೆ ಹೋಗುತ್ತಿರುವಾಗ ದಾರಿಯಲ್ಲಿ ಅಡ್ಡಗಟ್ಟಿ 6-7 ಜನರು ಸೇರಿ ರಕ್ತ ಬರುವ ಹಾಗೇ ಹೊಡೆದಿರುತ್ತಾರೆ ಆಗ ಗಂಡ ಮನೆಯವರೆಲ್ಲ ಪೊಲೀಸ್ ಠಾಣೆಗೆ ದೂರನ್ನು ನೀಡಲು ಹೊದಾಗ ಮನೆಯಲ್ಲಿ ತಾನು ಮತ್ತು ತನ್ನ 6ತಿಂಗಳ ಮಗುವನ್ನು ನೋಡಿ ಮನೆಯೊಳಗೆ ಬೂದಪ್ಪ ತಂದೆ ಶಿವಪ್ಪ ರಾಠೋಡ, ಗಂಗಾದರ ತಂದೆ ಬೂದಪ್ಪ ರಾಠೋಡ, ಗಂಗಪ್ಪ ತಂದೆ ತಂದೆ ಬೂದಪ್ಪ ರಾಠೋಡ ಸಾ|| ಎಲ್ಲಾರು ನಾರಾಯಣಪುರ ಐಬಿ ತಾಂಡಾ ಇವರುಗಳು ದಿನಾಂಕ:10/05/2019 ರಂದು ಸಾಯಂಕಾಲ 6:35ಕ್ಕೆ ಬಂದು ಹಲ್ಲೆ ಮಾಡಿರುತ್ತಾರೆ. ಅವಾಚ್ಯ ಪದಗಳಾದ ಏ ಸೂಳಿ ಎಲ್ಲಿದಿಯಾ ನಿನ್ನ ಗಂಡನನ್ನು ಸಾಯಿಸುತ್ತೇವೆ, ನಿನ್ನನ್ನು, ನಿನ್ನ ಮಗುವನ್ನು ಬಿಡುವುದಿಲ್ಲ ಎಂದು ಬೈಯುತ್ತಾ ಒಳಗಡೆ ಬಂದು ತನ್ನನ್ನು ಎಳೆದಾಡಿ ಹೊಡೆದಿರುತ್ತಾರೆ. ತನ್ನ ಬಟ್ಟೆಗಳನ್ನು ಹರಿದಿರುತ್ತಾರೆ. ತಾನು ಕೆಳಗಡೆ ಬಿದ್ದಾಗ ತನಗೆ ಹಾಗೂ ತನ್ನ ಮಗುವನ್ನು ತುಳಿದಿರುತ್ತಾರೆ. ಜನರು ಅವರನ್ನು ಹೊರಗೆ ಎಳೆದುಕೊಂಡು ಹೋದಾಗ ಮನೆಯ ಮುಂದಿನ ಚಪ್ಪಲಿಯಿಂದ ನಮ್ಮ ಮೇಲೆ ಎಸೆದಿರುತ್ತಾರೆ ಹಾಗೂ ನಿಮ್ಮನ್ನು ಬಿಡುವುದಿಲ್ಲ ಕೊಂದೆ ತಿರುತ್ತೇವೆ ಎಂದು ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆ ಆದ ಕಾರಣ ನೀವು ರಕ್ಷಣೆ ನೀಡಬೇಕು, ಮೇಲೆ ಹಲ್ಲೆ ಮಾಡಿದವರಿಗೆ ಸರಿಯಾದ ಶಿಕ್ಷೆಯಾಗಲೇ ಬೆಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೆನೆ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.  

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ.:- 15/2019 ಕಲಂ: 143, 147, 148, 341, 323, 324, 354, 504, 506 ಸಂಗಡ 149 ಐಪಿಸಿ:-ಪಿಯರ್ಾದಿಯು ತನ್ನ ಮಕ್ಕಳು ಮತ್ತು ಹೆಂಡತಿಯೊಂದಿಗೆ ದಿನಾಂಕ:10/05/2019 ರಂದು ಸಂಜೆ 5:30 ಗಂಟೆಯ ಸುಮಾರಿಗೆ ನಾರಾಯಣಪೂರ ಐಬಿ ತಾಂಡಾದ ಮನೆಯಿಂದ ತೋಟದ ಮನೆಗೆ ಮೋಟರ್ ಸೈಕಲ್ಗಳ ಮೇಲೆ ಥಾವರೆಪ್ಪ ತಂದೆ ಶಿವಪ್ಪ ರಾಠೋಡ ಇವರ ಮನೆಯ ಮುಂದೆ ರಸ್ತೆಯಲ್ಲಿ ಹೋಗುತ್ತಿರುವಾಗ ಆರೋಪಿತರು ತಮ್ಮ ಬೈಕಗಳನ್ನು ಅಡ್ಡಗಟ್ಟಿ ಪಿಯರ್ಾದಿಗೆ ಮತ್ತು ಇತರರಿಗೆ ತಡೆದು ನಿಲ್ಲಿಸಿ ಬೂದೆಪ್ಪನು ಈ ಬೈಕನ್ನ ಯಾವ ಸೂಳಿ ಮಗ ಸರಿಸುತ್ತಾನೆ ನಾನು ನೋಡುತ್ತೇನೆ ಆಕಸ್ಮಾತ ಸರಿಸಿದರೆ ಅವರನ್ನು ಕೊಲೆ ಮಾಡುತ್ತೇನೆ ಅಂತಾ ಹೇಳಿದ್ದು ಆಗ ತಾರಾಬಾಯಿ ಇವಳು ಅವರಿಗೆ ದಯವಿಟ್ಟು ತೆಗೆಯಪ್ಪ ಆಗೆ ಹೇಳಬೇಡ ಎಂದು ಸಮಜಾಯಿಸಿದಾಗ ಏ ಸೂಳಿ ನೀನು ಯಾರು ನನಗೆ ಹೇಳೊಕೆ ಅಂತಾ ಹೇಳಿ ಎದೆಯ ಮೇಲೆ ಒದ್ದು ಕಣ್ಣಿಗೆ ಕಾರದ ಪುಡಿ ಎರಚಿ ಕಟ್ಟಿಗೆಯಿಂದ ತಲೆಗೆ ಮತ್ತು ಕಾಲಿಗೆ ಹೊಡೆದಿದ್ದು ಗಂಗಾದರ ರಾಠೋಡ, ಗಂಗಪ್ಪ ರವರು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಪಿಯರ್ಾದಿಗೆ ಮತ್ತು ಪಿಯರ್ಾದಿಯ ಹೆಂಡತಿಗೆ ಕಟ್ಟಿಗೆಯಿಂದ ಹಲ್ಲೆ ನಡಿಸಿದರು. ಬಟ್ಟೆ ಹಿಡಿದು ಎಳೆದಾಡಿದರು ಅದೇ ಸಮಯಕ್ಕೆ ಬಂದ ಶಾರದಾ ಇವಳಿಗೆ ಅವಳ ಬಟ್ಟೆಯನ್ನು ಹರಿದು ಥಾವರೆಪ್ಪ, ಗುಂಡುರಾವ್, ಗೋವಿಂದ ಇವರು ಕಟ್ಟಿಗೆ ಮತ್ತು ಬೆಲ್ಟದಿಂದ ಹಲ್ಲೆ ನಡೆಸಿ ನಿನ್ನ ಮಗಳನ್ನು ನಮ್ಮ ಜೊತೆ ಕರೆದುಕೊಂಡು ಹೋಗುತ್ತೇವೆ ಮತ್ತು ನಿಮ್ಮನ್ನ ಸಾಯಿಸುತ್ತೇವೆ ಎಂದು ಬೇದರಿಕೆ ಹಾಕಿದ್ದು ಇರುತ್ತದೆ. ಪಿಯರ್ಾದಿಗೆ ತಲೆಗೆ ಹಣೆಯ ಮೇಲ್ಬಾಗದಲ್ಲಿ ರಕ್ತಗಾಯ ಮತ್ತು ಗುಪ್ತಪೆಟ್ಟಾಗಿರುತ್ತದೆ. ಶಾಂತಪ್ಪ ಚಿನ್ನಾರಾಠೋಡ ಈತನಿಗೆ ಗೋವಿಂದ, ಗುಂಡುರಾವ, ಗೋಪಾಲಕೃಷ್ಣ ಇವರು ಮನೆಗೆ ಹೋಗಿ ಕ್ರಿಕೆಟ ಬ್ಯಾಟದಿಂದ ತಲೆಗೆ ರಕ್ತ ಬರುವಂತೆ ಹೊಡೆದು ರಕ್ತಗಾಯ ಪಡೆಸಿದ್ದು ಪಿಯರ್ಾದಿಯ ಹೆಂಡತಿಯ ಮೇಲೆ ಚಪ್ಪಲಿಯಿಂದ ಗೋವಿಂದ ಈತನು ಹೊಡೆದು ಎಳದಾಡಿದನು. ನಂತರ ಪಿಯರ್ಾದಿಯ ಬೆನ್ನಿಗೆ ಗಂಗಾದರ, ಬೂದೆಪ್ಪ ಇವರು ಬೆನ್ನಿಗೆ ಗುದ್ದುತ್ತಾ ಇವತ್ತು ನಿಮ್ಮನ್ನು ಸಾಯಿಸಿ ಬಿಡುತ್ತೇನೆ ಎಂದು ಬೇದರಿಕೆ ಹಾಕಿರುತ್ತಾರೆ ಅಂತಾ ಲಿಖಿತ ದೂರಿನ ಸಾರಾಂಶ ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!