ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 10-05-2019

By blogger on ಶುಕ್ರವಾರ, ಮೇ 10, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 10-05-2019 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 108/2019 ಕಲಂ. 143,147,148,323,324,307,504,506 ಸಂ.149 ಐಪಿಸಿ:-ದಿನಾಂಕ:10-05-2019 ರಂದು 8-15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ  ಶ್ರೀ ಪರಸಪ್ಪ ತಂದೆ ಬೀಮಣ್ಣ ಯಾದವ್ ಸಾ: ಚಿಕ್ಕನಳ್ಳಿ ಇವರು ಠಾಣೆಗೆ ಬಂದು ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ: 09-05-2019 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ಅಣ್ಣನಾದ ಹಣಮಂತ ತಂ/ ಭೀಮರಾಯ ಮಾವನಾದ ಹಯ್ಯಾಳಪ್ಪ ತಂದೆ ನಿಂಗಪ್ಪ ಇಬ್ಬರು ಕುಡಿಯುವ ನೀರಿನ ಸಲುವಾಗಿ ನಮ್ಮ ಮನೆಯ ಮುಂದಿನ ಬೋರವೆಲ್ಲಗೆ ನಮ್ಮ ಸಂಬಂಧಿಕರಾದ 1) ಶ್ರೀ ನಿಂಗಪ್ಪ ತಂ/ ಶಿವಣ್ಣ ಯಾದವ ವಯಸ್ಸು 30 ವರ್ಷ 2) ನಿಂಗಪ್ಪ ತಂ/ ಬಸ್ಸಣ್ಣ 30 ವರ್ಷ ಹಾಗೂ 3) ನಿಂಗಪ್ಪ ತಂ/ ತಿಮ್ಮಯ್ಯ  ನಮ್ಮ ಅಣ್ಣ ಮತ್ತು ಮಾವನೊಂದಿಗೆ ವಾಗ್ವಾವಾದ ನಡೆಸಿದರು ಸದರಿ ವಿಷಯದ ಕುರಿತು ಇಂದು ದಿನಾಂಕ:10-05-2019 ರಂದು ಬೆಳಿಗ್ಗೆ 8-30 ಗಂಟೆಗೆ ಗ್ರಾಮದ ಹಿರಿಯರು ಗ್ರಾಮದ ಮಾರುತೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ವಾಗ್ವಾದ ನಡೆದ ವಿಷಯ ಕುರಿತು ಬುದ್ದಿ ಮಾತು ಹೇಳುವ ಕುರಿತು ಕರೆದಾಗ ಅದೆ ಸಮಯದಲ್ಲಿ ಏಕಾ ಏಕಿ 1) ಶ್ರೀ ನಿಂಗಪ್ಪ ತಂ/ ಶಿವಣ್ಣ ಯಾದವ ವಯಸ್ಸು 30 ವರ್ಷ 2) ನಿಂಗಪ್ಪ ತಂ/ ಬಸ್ಸಣ್ಣ 30 ವರ್ಷ ಹಾಗೂ 3) ನಿಂಗಪ್ಪ ತಂ/ ತಿಮ್ಮಯ್ಯ   4) ಶ್ರೀ ಮರೆಪ್ಪ ತಂ/ ತಿಮ್ಮಯ್ಯ 35 ವರ್ಷ, 5) ನಿಂಗಪ್ಪ ತಂ/ ನಿಂಗಯ್ಯ 30 ವರ್ಷ, 6) ಹಣಮಂತ ತಂ/ ಗೂಳಪ್ಪ 25 ವರ್ಷ, 7) ಯಂಕಪ್ಪ ತಂ/ ಬೊಜಪ್ಪ 25 ವರ್ಷ, 8) ಬೊಜಪ್ಪ ತಂ/ ಕೊಂಡಯ್ಯ 45 ವರ್ಷ ಇವರೆಲ್ಲರು ಸೇರಿ ಬಡಿಗೆ ಹಾಗೂ ಕಲ್ಲುಗಳೊಂದಿಗೆ ಹೊಡೆಬಡೆ ನಡೆಸಿದರು ಈ ಸಮಯದಲ್ಲಿ ನಿಂಗಪ್ಪ ತಂ/ ಶಿವಣ್ಣ ಹಾಗೂ ಯಂಕಪ್ಪ ತಂ/ ಬೊಜಪ್ಪ ಎಂಬುವರು ಬಡಿಗೆಯನ್ನ ತೆಗೆದುಕೊಂಡು ನಮ್ಮ ಮಾವನಾದ ಹಯ್ಯಾಳಪ್ಪ ಈತನ ಬಲ ಭುಜದ ಮೂಳೆ ಮುರಿಯುವ ಹಾಗೆ ಬಡಿಗೆಯಿಂದ ಹೊಡೆದು ಹಾಗೂ ಸೋಳೆ ಮಕ್ಕಳೆ ನಿಮ್ಮ ಇಬ್ಬರದು ಬಾಳಾಗ್ಯಾದಲೆ ನಿಮ್ಮನ ಖಲಾಸ ಮಾಡಿಬಿಡುತ್ತೇವೆ ಅಂತಾ ಕೊಲೆ ಮಾಡುವ ಉದ್ದೇಶದಿಂದ ನನ್ನ ಅಣ್ಣನಾದ ಹಣಮಂತ ಈತನ ತಲೆಗೆ ಹೊಡೆದರು ಆಗ ತಲೆಯಿಂದ  ರಕ್ತಸುರಿದು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದನು ನಾನು ಅವನನ್ನು ಎಬ್ಬಿಸಲು ಹೊದಾಗಾ ಇನ್ನುಳಿದವರು ನನಗೆ ಬಡಿಗೆಯಿಂದ ಮೈ ಕೈಗೆ ಹೊಡೆದು ಒಳಪೆಟ್ಟು ಪಡಿಸಿದ್ದು ಹಾಗೂ ನನ್ನ ಮಾವನ ಕುತ್ತಿಗೆಯ ಮೇಲೆ ಕಾಲಿಟ್ಟು ನಮ್ಮನ್ನು ಖಲಾಸ ಮಾಡಲು ಕಲ್ಲಿನಿಂದ ಹಾಗೂ ಕಾಲಿನಿಂದ ನೆಲಕ್ಕೆ ಹಾಕಿ ಹೊಡೆಬಡೆ ಮಾಡತೊಡಗಿದರು ಈ ಸಮಯದಲ್ಲಿ ನಮ್ಮೂರಿನವರಾದ ಯಲ್ಲಪ್ಪ ಲಾಯರ್, ಭೀಮಣ್ಣ ಸಂಗವಾರ, ಯಂಕಪ್ಪ ಹುಣಸಗಿ, ದೇವಿಂದ್ರಪ್ಪ ಹುಲಕಲ್ ಇವರುಗಳು ಹೊಡೆಬಡೆ ಮಾಡುವವರಿಂದ ನಮ್ಮ ಬಿಡಿಸಿದರು ಇವರುಗಳು ಈ ಜಗಳವನ್ನು ಬಿಡಿಸದಿದ್ದರೆ ನಮ್ಮಿಬ್ಬರನ್ನು ಖಲಾಸ ಮಾಡಿಬಿಡುತ್ತಿದ್ದರು. ನಂತರ ಅವರು ಹಕಾರಿ ಹೊಡೆಯುತ್ತ ಇವತ್ತ ಖಲಾಸ ಮಾಡಿವಿ ಇನ್ಯಾರ ನಮಗೇನ ಮಾಡತಾರ ಇಂದಿನಿಂದ ಈ ಊರಿಗೆ ನಾವೆ ರಾಜರ ನಮ್ಮದೇ ನಡಿಬೇಕೆ ಎಂದು ಹಕಾರಿ ಹೊಡೆಯುತ್ತಾ ಹೊದರು. ನಂತರ ನಾನು ಇಬ್ಬರನ್ನು ಕರೆದುಕೊಂಡು ಸರಕಾರಿ ಆಸ್ಪತ್ರೆ ಸೂರಪೂರಕ್ಕೆ ಬಂದು ಉಪಚಾರ ಮಾಡಿಸಿ ವೈಧ್ಯಾಧಿಕಾರಿಗಳ ಸಲಹೇ ಮೆರೆಗೆ ಹೆಚ್ಚಿನ ಉಪಚಾರ ಕುರಿತು ನಮ್ಮ ಅಣ್ಣ ಮತ್ತು ಮಾವನನ್ನು ಕಲಬುರಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಮರಳಿ ಸುರಪೂರಕ್ಕೆ ದೂರು ನೀಡಲು ತಡವಾಗಿರುತ್ತದೆ. ಕಾರಣ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಈ ಮೇಲೆ ತೋರಿಸಿದ ಹೇಸರಿನ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ಹೊಡೆ ಮಾಡಿದ್ದರಿಂದ ನನ್ನ ಮೈ ಕೈ ನೊವಾಗಿದ್ದು ನನಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕಳುಹಿಸಿ ನನಗೆ ನ್ಯಾಯವದಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ೆ ಅಂತಾ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 106/2019 ಕಲಂ. 295, 153 ಐಪಿಸಿ:-ದಿನಾಂಕ:10-05-2019 ರಂದು 3 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಭಿಮಾಶಂಕರ ಬಿಲ್ಲವ ಅಧ್ಯಕ್ಷರು ಕನರ್ಾಟಕ ಮಾದಿಗರ ಸಂಘ ಹಸನಾಪೂರ ಸುರಪೂರ ಇವರು ಠಾಣೆಗೆ ಬಂದು ಒಂದು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ:09-05-2019 ರ ರಾತ್ರಿ ಸಮಯದಲ್ಲಿ  ಭಾರತದ ಮಾಜಿ ಉಪಪ್ರಧಾನಿ ರಾಷ್ಟ್ರನಾಯಕ ಡಾ|| ಬಾಬು ಜಗಜೀವನರಾಮ್ರವರ ಭಾವಚಿತ್ರಕ್ಕೆ ಕೆಲವು ಕಿಡಿಗೆಡಿಗಳು ಹರಿದು ಹಾಕಿ ಅವಮಾನ ಮಾಡಿದ್ದು ತಾಲೂಕಿನ ಅಡ್ಡೊಡಗಿ ಗ್ರಾಮದಲ್ಲಿ ನಡೆದಿರುತ್ತದೆ. ಹರಿದು ಹಾಕಿರುವ ಕಿಡಿಗೇಡಿಗಳಾದ ರಂಗಪ್ಪ ತಂದೆ ಸಾಯಬಯ್ಯಾ ದೊರಿ ಹಾಗೂ ಇತರರು ಸೇರಿಕೊಂಡು ಈ ಕೃತ್ಯವೆಸಗಿರುತ್ತಾರೆ. ಇವರನ್ನು ಗಡಿಪಾರು ಮಾಡಿ ಶಿಕ್ಷಿಸಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆ ರಾಜ್ಯಾಧ್ಯಾಂತ ಉಗ್ರವಾದ ಪ್ರತಿಭಟನೆ ನಡೆಸಲಾಗುವದು. ಆದ್ದರಿಂದ ದಯಾಳುಗಳಾದ ತಾವುಗಳು ರಾಷ್ಟ್ರನಾಯಕ ಭಾರತದ ಮಾಜಿ ಉಪ ಪ್ರಧಾನಿ ಡಾ|| ಬಾಬು ಜಗಜೀವನರಾಮ್ರವರ ಭಾವಚಿತ್ರವನ್ನು ಹರಿದು ಹಾಕಿ ಅವಮಾನ ಮಾಡಿರುವ ಸದರಿ ಕಿಡಿಗೆಡಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಈ ದೂರನ್ನು ತಮಗೆ ಸಲ್ಲಿಸುತ್ತಿದ್ದೆವ.ೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 107/2019 ಕಲಂ. 143,147,148,323,324,307,504,506 ಸಂ.149 ಐಪಿಸಿ:-ದಿನಾಂಕ:10-05-2019 ರಂದು 4-15 ಪಿ.ಎಂ.ಕ್ಕೆ ಠಾಣೆಯ ಶ್ರೀ ಯಂಕಪ್ಪ ಖಾನಕೇರಿ ಇವರು ಠಾಣೆಗೆ ಬಂದು ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:10-05-2019 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಪ್ರತಿ ನಿತ್ಯದಂತೆ ಕುಡಿಯುವ ನೀರಿಗಾಗಿ ಗ್ರಾಮದ ಸಿದ್ದಪ್ಪ ತಂದೆ ಶಿವಣ್ಣ ತೋಟಾಟಿ ಇವರ ಮನೆಯ ಮುಂದೆ ಇರುವ ಬೊರವೆಲ್ಗೆ ನೀರು ತಗೆದುಕೊಂಡು ಬರಲು ನಮ್ಮ ಮಾವನಾದ ನಿಂಗಪ್ಪ ತಂದೆ ಶಿವಪ್ಪ ಈತನು ಹೋಗಿದ್ದನು. ಆಗ ಸಿದ್ದಪ್ಪ ತೋಟಾಟಿ ಈತನು ಲೇ ಬೊಸಡಿ ಸುಳೆ ಮಗನ್ಯಾ ನೀನು ನಮ್ಮ ಬೊರವೆಲ್ಗೆ ಬರುವುದಕ್ಕೆ ನಾಚಿಗೆ ಇಲ್ಲವೆ ಸೂಳಿ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಮ್ಮ ಮಾವನು ಅಂಜಿ ಖಾಲಿ ಕೊಡ ತಗೆದುಕೊಂಡು ಮರಳಿ ಮನೆಗೆ ಬಂದು ನಡೆದ ಘಟನೆಯನ್ನು ನನಗೆ ತಿಳಿಸಿದನು. ಆಗ ನಾನು ಮತ್ತು ನಮ್ಮ ಸಂಬಂಧಿಕರಾದ ನಿಂಗಪ್ಪ ತಂದೆ ಶಿವಣ್ಣ ತೊಟಾಟಿ, ನಿಂಗಪ್ಪ ತಂದೆ ತಿಮ್ಮಯ್ಯಾ ತೊಟಾಟಿ, ಯಲ್ಲಪ್ಪ ತಂದೆ ಬಸಣ್ಣ ತೊಟಾಟಿ, ನಿಂಗಪ್ಪ ತಂದೆ ಬಸಣ್ಣ ತೋಟಾಟಿ, ನಿಂಗಯ್ಯಾ ತಂದೆ ನಿಂಗಪ್ಪ ತೋಟಾಟಿ ಎಲ್ಲರೂ ಕೂಡಿಕೊಂಡು ಊರಿನ ಹಿರಿಯರ ಮುಂದೆ ಹೇಳಿದಾಗ ಹಿರಿಯರೆಲ್ಲರೂ ಸಿದ್ದಪ್ಪನಿಗೆ ಮತ್ತು ನಮಗೂ ಗ್ರಾಮದ ಅಗಸಿಗೆ ಬೆಳಿಗ್ಗೆ 08:30 ಗಂಟೆಗೆ ಕರೆಯಿಸಿದಾಗ ನಮ್ಮ ಗ್ರಾಮದ ಮುಖಂಡರಾದ ಗೌಡಪ್ಪಗೌಡ ಪೊಲೀಸ್ ಪಾಟೀಲ ಮತ್ತು ದೇವಿಂದ್ರಪ್ಪ ಹುಲಕಲ್, ನಂದಪ್ಪಗೌಡ ಬಿರೆದಾರ ಇವರೆಲ್ಲರೂ  ನೀರು ತರಲು ನಿಮ್ಮ ಮನೆ ಮುಂದಿನ ಬೊರವೆಲ್ಲಗೆ ಬಂದಿದ್ದ ನಿಂಗಪ್ಪ ತಂದೆ ಶಿವಪ್ಪ ಈತನಿಗೆ ನೀನು ಏಕೆ ಬೈದಿ ಎಂದು ಸಿದ್ದಪ್ಪನಿಗೆ ವಿಚಾರಣೆ ಮಾಡುತ್ತಿರುವಾಗ 1) ಸಿದ್ದಪ್ಪ ತಂದೆ ಶಿವಣ್ಣ ಈತನ ಜೊತೆಗೆ ಬಂದಿರುವ 2) ಹಣಮಂತ ತಂದೆ ನರಸಪ್ಪ 3) ನಿಂಗಪ್ಪ ತಂದೆ ನಾಗಪ್ಪ ತೊಟ್ಟಾಟಿ 4) ಬೈಲಪ್ಪ ತಂದೆ ನರಸಪ್ಪ ಗೋಗ್ಗಿ 5) ರಾಯಪ್ಪ ತಂದೆ ನರಸಪ್ಪ ಗೋಗ್ಗಿ 6) ಸೋಪಣ್ಣ ತಂದೆ ನಾಗಪ್ಪ ಮಂಗಳೂರ 7) ಪರಸಪ್ಪ ತಂದೆ ಭೀಮಣ್ಣ ಮಂಗಳೂರ 8) ಕೃಷ್ಣಾ ತಂದೆ ಸಿದ್ದಪ್ಪ ತೊಟ್ಟಾಟ ಇದ್ದವರೆ ಅವರಲ್ಲಿಯ ಹಣಮಂತ ತಂದೆ ನರಸಪ್ಪ ಈತನು ತನ್ನ ಕೈಯಲ್ಲಿ ತಂದಿದ್ದ ರಾಡಿನಿಂದ ಬಲವಾಗಿ ನಿಂಗಪ್ಪ ತಂದೆ ಶಿವಣ್ಣ ತೋಟ್ಟಾಟಿ ಈತನ ತಲೆಗೆ ಹೊಡೆದಾಗ ಅವನಿಗೆ ದೊಡ್ಡ ರಕ್ತಗಾಯವಾಗಿ ಮೂಛರ್ೇ ಹೋಗಿ ನೆಲಕ್ಕೆ ಬಿದ್ದನು. ನಾವು ಆತನ ಪ್ರಜ್ಷೆಸ್ಥಿತಿಯನ್ನು ನೋಡಿ ಅಳುವುದು ಕರೆಯುವದು ಮಾಡುತ್ತಿರುವಾಗ ನನಗೂ ಕೂಡಾ ಸೋಪಣ್ಣ ತಂದೆ ನಾಗಪ್ಪ ಮಂಗಳೂರ ಈತನು ಒಂದು ಬಡಿಗೆಯಿಂದ ನನ್ನ ಬಿನ್ನಿಗೆ ಹೊಡೆದು ಒಳಪಟ್ಟು ಪಡಿಸಿದನು. ನಿಂಗಪ್ಪ ತಂದೆ ಬಸಣ್ಣ ತೋಟಾಟೆ ಈತನ ತಲೆಗೆ  ಸಿದ್ದಪ್ಪ ತಂದೆ ಶಿವಣ್ಣ ಈತನು ಒಂದು ಬಡಿಗೆಯಿಂದ ತಲೆಗೆ ಹೊಡೆದು ಬಾರಿ ರಕ್ತಗಾಯಪಡಿಸಿದನು.  ನನ್ನ ತಮ್ಮನಾದ ಯಲ್ಲಪ್ಪ ತಂದೆ ಬಸಣ್ಣನಿಗೆ ನಿಂಗಪ್ಪ ತಂದೆ ನಾಗಪ್ಪ ತೋಟಾಟಿ ಈತನು ಬಡಿಗೆಯಿಂದ ಬಲ ಕಪಾಳಕ್ಕೆ ರಕ್ತ ಮಾಡಿದನು. ನಿಂಗಪ್ಪ ತಂದೆ ತಿಮ್ಮಯ್ಯಾ ಈತನಿಗೆ  ಬೈಲಪ್ಪ ತಂದೆ ನರಸಪ್ಪ ಗೊಗ್ಗಿ ಈತನು ಬಡಿಗೆಯಿಂದ ಬೆನ್ನಿಗೆ ಹೊಡೆದನು. ನಂತರ  ಕೃಷ್ಣಾ ತಂದೆ ಸಿದ್ದಪ್ಪ ತೊಟ್ಟಾಟ, ಪರಸಪ್ಪ ತಂದೆ ಭೀಮಣ್ಣ ಮಂಗಳೂರ, ಇವರೆಲ್ಲರೂ ತಮ್ಮ ಕೈಯಲ್ಲಿದ್ದ ಬಡಿಗೆಗಳಿಂದ ನಿಂಗಯ್ಯಾ ತಂದೆ ನಿಂಗಪ್ಪ ತೋಟಾಟಿ ಈತನಿಗೆ ಹೊಡೆ ಬಡೆ ಮಾಡಿ ಗುಪ್ತಗಾಯ ಪಡಿಸಿ ಬಿಡುವದಿಲ್ಲ ನಿಂಗ್ಯಾ ಸೂಳಿ ಮಗನೆ ನಾವು ಇವತ್ತು ನಿನ್ನನ್ನು ಮತ್ತು ನಿನ್ನ ಅಳಿಯನಾದ ಯಂಕಪ್ಪನನ್ನು ಖಲಾಸ್ ಮಾಡಿ ಬಿಡುತ್ತೇವೆ ಎಂದು ಕೂಗುಡುತ್ತಾ ಜೀವ ಬೆದರಿಕೆ ಹಾಕಿದ್ದು ಇನ್ನು ಇತರರು ಇರುತ್ತಾರೆ. ಅಷ್ಟರಲ್ಲಿ ನಮ್ಮ ಗ್ರಾಮದವರಾದ ರೇಣುಕಾರಾಜ, ಯಂಕಪ್ಪ, ಹುಲಕಲ್,ಗೌಡಪ್ಪ ಮಾಲಿ ಪಾಟೀಲ, ಮಹಾನಿಂಗಪ್ಪ ಇವರೆಲ್ಲರೂ  ಬಂದು ಜಗಳ ಬಿಡಿಸಿದರು. ಆಗ ಸದರಿ ಆರೋಪಿತರು ಇವತ್ತು ಸುಮ್ಮನೆ ಬಿಟ್ಟಿದ್ದೆವೆ ಇವತ್ತೆಲ್ಲಾ ನಾಳೆ ನಿಮ್ಮನ್ನು ಸುಮ್ಮನೆ ಬಿಡುವದಿಲ್ಲವೆಂದು ಕೂಗಾಡುತ್ತಾ ಜೀವ ಬೇದರಿಕೆ ಹಾಕಿ ಹೊದರು ಆಗ ನಾವು ರಕ್ತಗಾಯಾಳುಗಳನ್ನು ಹಾಕಿಕೊಂಡು ಸುರಪುರ ಆಸ್ಪತ್ರೆಗೆ ಹೋಗುವುದಕ್ಕೆ 108 ಅಂಬುಲೇನ್ಸಗೆ ದೂರವಾಣಿ ಮೂಲಕ ಕರೆ ಮಾಡಿ ಅಂಬುಲೇನ್ಸದಲ್ಲಿ ಗಾಯಾಳುದಾರರನ್ನು ಹಾಕಿಕೊಂಡು ಬಂದು ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ಸೇರಿಕೆ ಮಾಡಿದ್ದು ನಿಂಗಪ್ಪ ತಂದೆ ಶಿವಪ್ಪ ಈತನಿಗೆ ಭಾರಿಗಾಯವಾಗಿದ್ದರಿಂದ ವೈಧ್ಯರು ಅವನನ್ನು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕಳಿಸಿತ್ತಾರೆ. ನಾನು ನಿನ್ನೆ ರಾತ್ರಿಯಾಗಿದ್ದರಿಂದ ವಿಚಾರ ಮಾಡಿ ಇಂದು ಠಾಣೆಗೆ ತಡವಾಗಿ ಬಂದು ದೂರು ಸಲ್ಲಿಸುತ್ತಿದ್ದೆನೆೆ ಅಂತಾ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 121/2019 ಕಲಂ 78[3] ಕೆ.ಪಿ ಆಕ್ಟ:- ದಿನಾಂಕ 10/05/2019 ರಂದು ಮದ್ಯಾಹ್ನ 15-00 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ಒಬ್ಬ ವ್ಯಕ್ತಿಯನ್ನು, ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 10/05/2019 ರಂದು ಮುಂಜಾನೆ 11-45 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ಹಳಿ ಪೇಠ ಏರಿಯಾದ ಉದರ್ು ಶಾಲೆಯ ಹತ್ತಿರ  ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ದಾಳಿ ಕುರಿತು ಉದರ್ು ಶಾಲೆಯ ಹತ್ತಿರ  ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಸದರಿ ವ್ಯಕ್ತಿ ಸಿಕ್ಕಿದ್ದು, ಹೆಸರು ವಿಳಾಸ ವಿಚಾರಿಸಲು ವಿರೇಶ ತಂದೆ ಶರಣಪ್ಪ ದೇವಿಕೇರಿ ವಯ 30 ವರ್ಷ ಜಾತಿ ಕುರುಬ ಉಃ ಕೂಲಿ ಕೆಲಸ ಸಾಃ ಹಳಿ ಪೇಠ  ಶಹಾಪೂರ ಅಂತ ಹೇಳಿದ್ದು ಸದರಿಯವನ ಅಂಗಶೋಧನೆ ಮಾಡಿದಾಗ ನಗದು ಹಣ 470=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಮದ್ಯಾಹ್ನ 13-00 ಗಂಟೆಯಿಂದ 14-00 ಗಂಟೆಯ ಅವಧಿಯಲ್ಲಿ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ದ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 33/2019 ಕಲಂ 78(3)  ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 16-00 ಗಂಟೆಗೆ  ಠಾಣೆ ಗುನ್ನೆ ನಂಬರ 121/2019 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!