ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-05-2019

By blogger on ಗುರುವಾರ, ಮೇ 9, 2019


                       ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-05-2019 

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ:- 71/2019 ಕಲಂ 379 ಐಪಿಸಿ;- ದಿನಾಂಕ 09/05/2019 ರಂದು ರಾತ್ರಿ 1-45 ಎ.ಎಂ.ಕ್ಕೆ ಹತ್ತಿಕುಣಿ ಗ್ರಾಮದ ಸೀಮೆಯಲ್ಲಿ ಬರುವ ಸರಕಾರಿ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತರಾದ ಟಿಪ್ಪರ ಮಾಲೀಕರು, ಚಾಲಕರು ಮತ್ತು ಜೆಸಿಬಿ ಮಾಲೀಕ ಮತ್ತು ಚಾಲಕರು ಕೂಡಿಕೊಂಡು 1)ಟಿಪ್ಪರ ನಂ  ಕೆ.ಎ-32-ಬಿ-8234 ಮತ್ತು 2)ಟಿಪ್ಪರ ನಂ ಕೆ.ಎ-33-ಎ-1676 ನೆದ್ದವುಗಳಲ್ಲಿ ಜೆಸಿಬಿ ನಂ ಕೆ.ಎ-41-ಝಡ್-4799 ನೆದ್ದರ ಸಹಾಯದಿಂದ ಮರಳನ್ನು ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ:- 72/2019 ಕಲಂ 143, 147, 323, 324, 504, 506 ಸಂ 149 ಐಪಿಸಿ ;- ದಿನಾಂಕ 03-05-2019 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿಯು ತನ್ನ ಮನೆ ಹತ್ತಿರ ನಿಂತು ಆರೋಪಿಯನ್ನು ಕರೆದು ನೀವು ನಮ್ಮ ಮನೆಯ ಹತ್ತಿರ ಯಾಕೆ ಕಟ್ಟಿಗೆಗಳನ್ನು ಇಟ್ಟಿದ್ದಿರಿ ನಿಮ್ಮ ಕಟ್ಟಿಗೆ ನೀವು ತೆಗೆದುಕೊಂಡು ಹೋಗಿರಿ ಅಂತಾ ಹೇಳಿದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಬಂದು ಕಲ್ಲು ಮತ್ತು ಬಡಿಗೆ ಮತ್ತು ಕೈಯಿಂದ  ಫಿರ್ಯಾದಿಗೆ ಅವಾಚ್ಯವಾಗಿ ಬೈದು, ಜಗಳ ತೆಗೆದು ಹಳೇದ್ವೇಶದಿಂದ ಹೊಡಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿ, ಜೀವದ ಭಯ ಹಾಕಿದ ಬಗ್ಗೆ,  ತಡವಾಗಿ ಠಾಣೆಗೆ ಬಂದು ಹೇಳಿಕೆ ಕೊಟ್ಟ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.  

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 120/2019 ಕಲಂ 143,147,323,504,506 ಸಂ 149 ಐಪಿಸಿ;- ದಿನಾಂಕ: 09/05/2019 ರಂದು 4.30 ಪಿಎಂ ಕ್ಕೆ ಠಾಣೆಗೆ ಫಿಯರ್ಾದಿದಾರರಾದ ಶ್ರೀಮತಿ ಅಯ್ಯಮ್ಮ ಗಂಡ ಭೀಮಪ್ಪ ನಾಸಿಗಿರಿ ವ|| 45ವರ್ಷ ಜಾ|| ಹಿಂದೂ ಮಾದರ(ಎಸ್.ಸಿ) ಉ|| ಕೂಲಿ ಸಾ|| ಹತ್ತಿಗುಡೂರ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕೈಬರಹದಿಂದ ಬರೆದ ಅಜರ್ಿಯನ್ನು ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ,  ನಾನು ಕೂಲಿ ಕೆಲಸ ಮಾಡಿಕೊಂಡು ಕುಟುಂಬದವರೊಂದಿಗೆ ಇರುತ್ತಿದ್ದೇನೆ. ಹೀಗಿದ್ದು ನಮ್ಮ ಮಗಳಾದ ನಿಂಗಮ್ಮ ತಂದೆ ಭೀಮಪ್ಪ ಇವಳಿಗೆ ಹಾಲಗೇರಾ ಗ್ರಾಮಕ್ಕೆ ಮದುವೆ ಮಾಡಿಕೊಡಬೇಕೆಂದು ನೋಡಿ ಬಂದಿರುತ್ತೇವೆ ಆದರೆ ನಮ್ಮೂರ ನಮ್ಮ ಸಂಬಂಧಿಕರ ಮದುವೆಗೆಂದು ಹೋಗಿದ್ದೆನು. ಅಲ್ಲಿ ನಮ್ಮೂರ ನಮ್ಮ ಜಾತಿಯ ಪ್ರಭು ತಂದೆ ಮಲ್ಲಪ್ಪ ಗ್ಯಾಂಗಿನ್ ಈತನು ನಮ್ಮ ಕುಟುಂಬದ ಬಗ್ಗೆ, ನಮ್ಮ ಮಗಳ ಬಗ್ಗೆ ಕೆಟ್ಟದಾಗಿ ಹೇಳಿ ಬೀಗಸ್ತಾನ ಮುರಿಯಲು ಪ್ರಯತ್ನಿಸಿದ್ದು ಇದರ ಬಗ್ಗೆ ದಿನಾಂಕ 03/05/2019 ರಂದು ಮುಂಜಾನೆ 8.30 ಗಂಟೆಗೆ ಪ್ರಭು ಈತನಿಗೆ ಕೇಳಲು ಹೋದಾಗ 1)ಪ್ರಭು ತಂದೆ ಮಲ್ಲಪ್ಪ ಗ್ಯಾಂಗಿನ್ ಈತನು ನನಗೇನು ಕೇಳುತ್ತಿರಿ ಬೋಸಡಿ ಮಕ್ಕಳೆ ಅಂತ ಅವಾಚ್ಯವಾಗಿ ಬೈದಿದ್ದು, 2)ಹೊನ್ನಪ್ಪ ತಂದೆ ಮಲ್ಲಪ್ಪ ಗ್ಯಾಂಗಿನ್ ಈತನು ಮಲ್ಲಪ್ಪ ತಂದೆ ಭೀಮಪ್ಪ ಈತನಿಗೆ 3)ಹಣಮಂತ ತಂದೆ ಮಲ್ಲಪ್ಪ ಈತನು ಹೊನ್ನಪ್ಪ ತಂದೆ ಮಹಾದೇವಪ್ಪ ಈತನಿಗೆ 4)ಮಲ್ಲಪ್ಪ ತಂದೆ ಹೊನ್ನಪ್ಪ ಈತನು ಸುರೇಶ ತಂದೆ ಹಯ್ಯಾಳಪ್ಪ ಈತನಿಗೆ 5)ದೇವಮ್ಮ ಗಂಡ ಹೊನ್ನಪ್ಪ ಇವಳು ಲಕ್ಷ್ಮೀ ಗಂಡ ಮಲ್ಲಪ್ಪ ಇವಳಿಗೆ 6)ಸಣ್ಣದೇವಮ್ಮ ಗಂಡ ಹಣಮಂತ ಇವಳು ಗಂಗಮ್ಮ ಗಂಡ ಮಾನಪ್ಪ ಇವಳಿಗೆ 7)ಶರಣಪ್ಪ ತಂದೆ ಕೇಮಪ್ಪ ಈತನು ರೆಡ್ಡೆಪ್ಪ ತಂದೆ ಹಯ್ಯಾಳಪ್ಪ ಈತನಿಗೆ 8)ಕೇಮಪ್ಪ ತಂದೆ ಹೊನ್ನಪ್ಪ ಈತನು ಶರಣಪ್ಪ ತಂದೆ ಮಾನಪ್ಪ ಈತನಿಗೆ 9)ಗುರುಲಿಂಗಮ್ಮ ಗಂಡ ಕೇಮಪ್ಪ ಇವಳು ನಿಂಗಮ್ಮ ಗಂಡ ಮಹಾದೇವಪ್ಪ ಇವಳಿಗೆ 10)ಯಲ್ಲಮ್ಮ ಗಂಡ ಮಲ್ಲಪ್ಪ ಇವಳು ನನಗೆ ಮತ್ತು  11)ಚನ್ನಮ್ಮ ತಂದೆ ಕೇಮಪ್ಪ ಇವಳು ಭೀಮಪ್ಪ ತಂದೆ ಮಲ್ಲಪ್ಪನಿಗೆ ಕಾಲಿನಿಂದ ಒದ್ದಿರುತ್ತಾಳೆ. ಹೀಗೆ ಇವರೆಲ್ಲರೂ ಕೂಡಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ.
     ಕಾರಣ ನಾವು ಹಿರಿಯರಲ್ಲಿ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ನಮಗೆ ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 120/2019 ಕಲಂ: 143,147,323,504,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 59/20191 ಕಲಂ: 448,354.504,506 ಐಪಿಸಿ;- ದಿ: 09.05.2019 ರಂದು 11.30 ಎ.ಎಮ್ಕ್ಕೆ ಪಿರ್ಯಾಧಿದಾರರಾದ ಮಹಾದೇವಿ ಗಂಡ ಬಸಲಿಂಗಪ್ಪ ಕಟ್ಟಿಮನಿ ವಯಾ|| 36 ಜಾ|| ಪ.ಜಾತಿ ಉ|| ಕೂಲಿಕೆಲಸ ಸಾ|| ಕೆಂಗೇರಿ ಕೆಂಭಾವಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೆನೆಂದರೆ  ನನಗೆ ಸುಮಾರು 16 ವರ್ಷಗಳ ಹಿಂದೆ ಕೆಂಭಾವಿ ಪಟ್ಟಣದ ಬಸಲಿಂಗಪ್ಪ ತಂದೆ ಜೆಟ್ಟೆಪ್ಪ ಕಟ್ಟಿಮನಿ ಈತನಿಗೆ ಕೊಟ್ಟು ಮದುವೆ ಆಗಿದ್ದು ಸದ್ಯ ನನಗೆ 15 ವರ್ಷದ ಶಿವು ಎಂಬ ಹುಡುಗ ಇರುತ್ತಾನೆ. ನನ್ನ ಗಂಡ ಸುಮಾರು 6 ವರ್ಷಗಳ ಹಿಂದೆ ಇನ್ನೊಂದು ಮದುವೆ ಆಗಿರುತ್ತಾನೆ. ಸದ್ಯ ನಾನು ನನ್ನ ಮಗನೊಂದಿಗೆ ಕೆಂಭಾವಿಯ ಕೆಂಗೇರಿಯಲ್ಲಿ ಪತರಾ ಶೇಡ್ಡ ಹಾಕುಕೊಂಡು ಇರುತ್ತೇನೆ. 
      ಹೀಗಿದ್ದು ದಿನಾಂಕ 08.05.2019 ರಂದು ರಾತ್ರಿ 10.00 ಗಂಟೆಗೆ ನಾನು ಮತ್ತು ನನ್ನ ಮಗನು ಇಬ್ಬರೂ ಕೂಡಿ ಊಟ ಮಾಡಿ ನನ್ನ ಮಗನು ಹೋರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು. ರಾತ್ರಿ ನಾನು ಮನೆಯಲ್ಲಿ ಮಲಗಿಕೊಂಡಾಗ ರಾತ್ರಿ 01.00 ಘಂಟೆ ಸುಮಾರಿಗೆ ಕೆಂಭಾವಿಯ ಪಟ್ಟಣದ ಸುಭಾಸ ಮ್ಯಾಗೇರಿ ಈತನು ನನ್ನ ಮನೆಯು ಅಕ್ರಮವಾಗಿ ಪ್ರವೇಶ ಮಾಡಿ ಒಳಗೆ ಬಂದು ಮನೆಯಲ್ಲಿದ್ದ ಲೈಟ ಬಂದ ಮಾಡಿ ಸಾವಕಾಶವಾಗಿ ನನ್ನ ಹತ್ತಿರ ಬಂದು ನನಗೆ ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಸೀರೆಯನ್ನು ಹಿಡಿದು ಎಳೆಯುತ್ತಿದ್ದಾಗ ನನಗೆ ಎಚ್ಚರವಾಗಿ ನೋಡಲಾಗಿ ಯಾರು ನೀವು ಅಂತಾ ಕೇಳಿದಾಗ ನಾನು ಸುಭಾಸ ಮ್ಯಾಗೇರಿ ಇದ್ದೇನೆ ಅಂತಾ ಹೆಳಿದಾಗ ನಾನು ಗಾಬರಿಯಾಗಿ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆ ಹೋರಗಡೆ ಬಂದು ಅವನಿಗೆ ಅಂಜಿ ನಮ್ಮ ಮನೆಯ ಪಕ್ಕದ ರೇವಣಸಿದ್ದ ಯಾಳಗಿ ರವರ ಮೆನೆಗೆ ಹೋಗಿ ಈ ವಿಷಯ ತಿಳಿಸಿದಾಗ ಅವನು ನಮ್ಮ ಮನೆಯಲ್ಲಿ ಇರು ಅಂತಾ ಅಂದಾಗ, ಆಗ ಸುಮಾರು ಎರಡು ಗಂಟೆ ನಂತರ ಸುಭಾಸ ಈತನು ನಮ್ಮ ಮನೆಯಿಂದ ಹೋರಗಡೆ ಬಂದು ಬೋಸಡಿ ಮಗಳೆ ನಾನು ನಿಮ್ಮ ಮನೆಗೆ ಬಂದರೆ ನೀನು ಪಕ್ಕದ ಮನೆಯಲ್ಲಿ ಹೋಗಿ ಇರುತ್ತಿ, ನಾನು ನಿನ್ನ ಮನೆಗೆ ಬಂದ ವಿಷಯ ಯಾರಾದರು ಮುಂದೆ ಹೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ನನಗೆ ಜೀವದ ಬೇದರಿಕೆ ಹಾಕಿ ಹೋಗಿರುತ್ತಾನೆ.  ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ಸಲ್ಲಿಸಿದ್ದು ಇರುತ್ತದೆ.
     ಕಾರಣ ಸುಭಾಸ ಮ್ಯಾಗೇರಿ ಈತನು ನಮ್ಮ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಅಕ್ರಮವಾಗಿ ಪ್ರವೇಶಿಸಿ ನನ್ನ ಸೀರೆ ಹಿಡಿದು ಎಳೆದಾಡಿ ಮಾನಬಂಗ ಮಾಡಲು ಪ್ರಯತ್ನಿಸಿ ಸದರ ವಿಷಯವನ್ನು ಯಾರಾದರು ಮುಂದೆ ಹೇಳಿದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ಸದರಿಯವನ ವಿರುದ್ದ ಸೂಕ್ತ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 59/2019 ಕಲಂ: 448,354,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕ್ಯಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 50/2019 ಕಲಂ: 279, 338 ಐಪಿಸಿ ದಿನಾಂಕ 09/05/2019 ರಂದು ಕಲಂ 304(ಎ) ಅಳವಡಿಸಿಕೊಳ್ಳಲಾಗಿದೆ;- ದಿನಾಂಕ: 08/05/2019 ರಂದು ಶ್ರೀ ಭೀಮರಾಯ ಹೆಚ್.ಸಿ-09 ರವರು ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಯಿಂದ ಆರ್.ಟಿ.ಎ ಎಂ.ಎಲ್.ಸಿ ಮೇಲಿಂದ ಪಿಯರ್ಾದಿ ಶ್ರೀ. ಆನಂದ ತಂದೆ ಶಿವಪ್ಪ ಪೊಲೀಸ್ ಪಾಟೀಲ ವ|| 21 ವರ್ಷ ಉ|| ವಿದ್ಯಾಥರ್ಿ ಜಾ|| ಕುರಬರು ಸಾ|| ರಾಜಾಪೂರ ತಾ|| ಶಹಾಪೂರ ಜಿ: ಯಾದಗಿರಿ ರವರ ಹೇಳಿಕೆ ಪಡೆದುಕೊಂಡು ಬಂದು 07.40 ಪಿಎಂ ಕ್ಕೆ ಹಾಜರ ಪಡಿಸಿದ್ದು, ಸದರಿ ಹೇಳಿಕೆಯ ಸಾರಂಶವೆನಂದರೆ, ದಿನಾಂಕ:07/05/2019 ರಂದು ಸಾಯಾಂಕಾಲ 07.00 ಗಂಟೆ ಸುಮಾರಿಗೆ ನಮ್ಮ ತಂದೆಯವರಾದ ಶಿವಪ್ಪ ತಂದೆ ಧರ್ಮಣ್ಣಗೌಡ ಪೊಲೀಸ್ ಪಾಟಿಲ ವ||58 ಉ|| ಒಕ್ಕಲುತನ ಜಾ|| ಕುರಬರು ಸಾ|| ರಾಜಾಪೂರ(ಬಿ) ಇವರು ನಮ್ಮ ಸ್ವಂತ ಮೋಟಾರ ಸೈಕಲ ನಂ. ಏಂ-32 ಇಕಿ-2901 ಊಈ ಆಇಐಗಘಿ ನೇದ್ದನ್ನು ತೆಗಿದುಕೊಂಡು ಸ್ವಲ್ಪ ಕೆಲಸ ಇದೆ ಕಾರಣ ನಾನು ಚಾಮನಾಳಕ್ಕೆ ಹೋಗಿ ಬರುತ್ತೆನೆ ಎಂದು ಹೋಗುತ್ತಿದ್ದಾಗ ನಾವೂ ರಾತ್ರಿಯಾಗಿದೆ ಸರಿಯಗಿ ರೋಡು  ಕಾಣುವದಿಲ್ಲಾ ಹೋಗಬೇಡ ಅಂದರು ಜಲ್ದಿ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು ಇರುತ್ತದೆ. 
 ನಂತರ ನಾನು ಮನೆಯಲ್ಲಿ ಇದ್ದಾಗ 07:45 ಪಿ.ಎಂ ಸುಮಾರಿಗೆ ನಮ್ಮೂರಿನ ಶ್ರೀಕಾಂತಗೌಡ ತಂದೆ ಬಸವರಾಜಪ್ಪಗೌಡ ವ|| 24 ವರ್ಷ ಜಾ: ಕುರಬರು ಉ: ವಿದ್ಯಾಥರ್ಿ ಇವರು ಪೋನ ಮಾಡಿ ತಿಳಿಸಿದ್ದೇನಂದರೆ,  ನಾನು ಮತ್ತು ಲೋಹಿತ ತಂದೆ ಬಸವರಾಜ ಹುಲಕಲ ವ|| 23 ವರ್ಷ ಉ|| ಒಕ್ಕಲುತನ ಜಾ|| ಕುರಬರು ಸಾ|| ರಾಜಪೂರ ಇಬ್ಬರು ಇಂದು ದಿನಾಂಕ:07/05/2019 ರಂದು ಚಾಮನಾಳ ಗ್ರಾಮದ ಹತ್ತಿರ ಇರುವ ಲೋಕೆಶ ರಾಠೋಡ ಇವರ ಪೇಟ್ರೊಲ ಬಂಕ ಹತ್ತಿರ ನಿಂತಿದ್ದಾಗ ಅಂದಾಜು ಸಮಯ 7:40 ಪಿ.ಎಂ ಸುಮಾರಿಗೆ ಎದರಿಗೆ ಉಕ್ಕನಾಳ ಕಡೆಯಿಂದ ಚಾಮನಾಳ ಕಡೆಗೆ ಬರುತ್ತಿರುವ ಯವೋದೋ ಒಂದು ಮೋಟಾರ್ ಸೈಕಲ್ ವಾಹನವು ಒಮ್ಮಲೆ ರೋಡಿನಲ್ಲಿ ಸ್ಕೀಡಿಯಾಗಿ ಕೇಳಗೆ ಬಿದ್ದಿದ್ದು ನೋಡಿ ನಾನು ಮತ್ತು ಲೋಹಿತ ತಂದೆ ಬಸವರಾಜ ಹುಲಕಲ ನಮ್ಮ ವಾಹನ ನಿಲ್ಲಿಸಿ ಒಡಿ ಹೋಗಿ ನೋಡಲಾಗಿ ಸದರ ಮೋಟಾರ್ ಸೈಕಲ್ ಸವಾರ ನಿಮ್ಮ ತಂದೆಯಾದ ಶಿವಪ್ಪ ತಂದೆ ಧರ್ಮಣ್ಣಗೌಡ ಪೊಲೀಸ್ ಪಾಟೀಲ ಇವರು ಇದ್ದರು, ಸದರಿಯವರಿಗೆ ತಲೆಯ ಮೇಲೆ ಅಳತ್ತಿಯ ಮೇಲೆ ಭಾರಿ ಗುಪ್ತ ್ತಗಾಯವಾಗಿದ್ದು ಕಪಾಳದ ಮೇಲೆ ಮೂಗಿನ ಕಂಬ ಕಚ್ ಆಗಿದ್ದು, ಬಲಗಡೆ ಕಿವಿಯಿಂದರಕ್ತ ಸ್ರಾವವಗಿದ್ದು ಆಗುತ್ತಿತ್ತು. ಸದರಿ ನಿಮ್ಮ ತಂದೆಯವರಿಗೆ ನಾವು ನಮ್ಮ ಕಾರಿನಲ್ಲಿ ಶಹಾಪೂರ ಸಕರ್ಾರಿ ಆಸ್ಪತ್ರೆ  ಕರೆದುಕೊಂಡು ಹೋಗುತ್ತಿದ್ದೇ ಬಾ ಅಂತಾ ತಿಳಿಸಿದ ಮೆರೆಗೆ, ನಾನು ಗೋಗಿ ಹತ್ತಿರ ಮೆನ್ ರೊಡಿನ ಹತ್ತಿರ ಬಂದು ಸದರಿ ಕಾರಿನಲ್ಲಿ ನಮ್ಮ ತಂದೆಯವರಿಗೆ ಶಹಾಪೂರ ಸಕರ್ಾರ ಆಸ್ಪತ್ರೆಗೆ ಸೇರಿಕೆ ಮಾಡಿದೇವು ನಂತರ ವೈದ್ಯಾಧೀಕಾರಿಗಳ ಸಲಹೇ ಮೇರೆಗೆ ಅಲಿಂದ ಕಲಬುರಗಿಯ ವಾತ್ಸ್ಯಾಲ ಆಸ್ಪತ್ರೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ.
   ನಮ್ಮ ತಂದೆಯವರು ಬೇಹೋಸ್ ಇದ್ದು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರುವದಿಲ್ಲ. ನಮ್ಮ ತಂದೆಯವರಾದ ಶಿವಪ್ಪ ತಂದೆ ಧರ್ಮಣ್ಣಗೌಡ ಪೊಲೀಸ್ ಪಾಟೀಲ ವಯಾ:58 ವರ್ಷ ಇವರು ಚಾಮನಾಳಕ್ಕೆ ಹೋಗಿದ್ದಾಗ ಲೈಟಿನ ಬೆಳಕಿನಲ್ಲಿ ವಾಹನ ನಿಯಂತ್ರಣ ತಪ್ಪಿ ಸ್ಕೀಡ್ ಆಗಿ ಬಿದ್ದರಿಂದ ನಮ್ಮ ತಂದೆ ಯವರಿಗೆ ತಲೆಗೆ, ಮುಖಕ್ಕೆ ಮತ್ತು ಮೂಗಿಗೆ ಭಾರಿ ಗಾಯವಾಗಿದ್ದು ಇರುತ್ತದೆ. 

ಕಾರಣ ಮಾನ್ಯರವರು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2019 ಕಲಂ:279, ,338 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ನಂತರ ದಿನಾಂಕ 09/05/2019 ರಂದು ರಾತ್ರಿ 00.15 ಎಎಂ ಕ್ಕೆ ಪಿಯರ್ಾದಿ ಆನಂದ ತಂದೆ ಶಿವಪ್ಪ @ ಶಿವಪ್ಪಗೌಡ ಪೊಲೀಸ್ ಪಾಟೀಲ ವ|| 21 ವರ್ಷ ಉ|| ವಿದ್ಯಾಥರ್ಿ ಜಾ|| ಕುರಬರು ಸಾ|| ರಾಜಾಪೂರ ತಾ|| ಶಹಾಪೂರ ಜಿ: ಯಾದಗಿರಿ ಇವರು ಠಾಣಗೆ ಹಾಜರಾಗಿ ಪುರವಣಿ ಹೇಳಿಕೆ ನೀಡಿದ್ದು ಏನಂದರೆ, ತಮ್ಮ ತಂದೆಯವರಿಗೆ ವಾತ್ಸಲ್ಯ ಆಸ್ಪತ್ರೆ ಕಲಬುರಗಿಯಿಂದ ಇನ್ನು ಹೆಚ್ಚಿನ ಉಪಚಾರಕ್ಕೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾವು ನಮ್ಮ ತಂದೆಯವರಿಗೆ ಬೆಂಗಳೂರಿಗೆ ಕರೆದುಕೊಂಡು ಹೋದರಾಯಿತು ಅಂತಾ ಹೋಗುತ್ತಿದ್ದಾಗ ಅಂದಾಜು ದಿನಾಂಕ:08/05/2019 ರಂದು 10.45 ಪಿಎಂ ಸುಮಾರಿಗೆ ಮದ್ರಿಕಿ ಸಮೀಪ ಶಹಾಪೂರ ಕಡೆಗೆ ಬರುತ್ತಿರುವಾಗ ನಮ್ಮ ತಂದೆಯವರು ತಮಗಾದ ಘಾಯ ಪೆಟ್ಟಿನಿಂದ ದಾರಿಯಲ್ಲಿಯೇ ಮೃತಪಟ್ಟಿರುತ್ತಾರೆ ಕಾರಣ ಮುಂದಿನ ಕ್ರಮ ಜರುಗಿಸಿರಿ ಅಂತಾ ಇತ್ಯಾದಿ ಪುನಃ ಹೇಳಿಕೆ ನೀಡಿದ್ದಿರಂದ ಸದರಿ ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!