ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-05-2019

By blogger on ಮಂಗಳವಾರ, ಮೇ 7, 2019


                        ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-05-2019 

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 28/2019  ಕಲಂ 279, 304(ಎ) ಐಪಿಸಿ;- ದಿನಾಂಕ 07/05/2019 ರಂದು ಸಮಯ ಮದ್ಯಾಹ್ನ 1 ಪಿ.ಎಂ.ಕ್ಕೆ  ಯಾದಗಿರಿ ಜಿಜಿಎಚ್ನಿಂದ ಪೋನ್ ಮೂಲಕ ಆರ್.ಟಿ.ಎ/ ಡೆತ್ ಎಮ್.ಎಲ್.ಸಿ ಅಂತಾ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿದ್ದು, ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಮೃತ ಮಹಾದೇವ ಈತನ ತಂದೆಯಾದ ಶ್ರೀ ಭೀಮಣ್ಣ ಮತ್ತು ಮೃತ ವೆಂಕಟೇಶನ ತಾಯಿಯಾದ ಶ್ರೀಮತಿ ಚಂದ್ರಮ್ಮ ಇವರಿಗೆ ವಿಚಾರಿಸಿದ್ದು ನಂತರ ಪಿಯರ್ಾದಿ ಶ್ರೀ ಬೀಮಣ್ಣ ತಂದೆ ಭೀಮರಾಯ ಸಾಧುರ್  ವಯ;40 ವರ್ಷ, ಜಾ;ಕಬ್ಬಲಿಗ, ಉ;ಕೂಲಿ ಕೆಲಸ, ಸಾ;ಬಂದಳ್ಳಿ, ತಾ;ಜಿ;ಯಾದಗಿರಿ ಇವರು ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನನಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಹೀಗಿದ್ದು ಇಂದು ದಿನಾಂಕ 07/05/2019 ರಂದು ಬೆಳಿಗ್ಗೆ ಅಂದಾಜು 11-45 ಎ.ಎಂ. ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಹಿರಿಮಗನಾದ ಮಹಾದೇವ ವಯ;20 ವರ್ಷ ಈತನು ನಮ್ಮ ಸಂಬಂಧಿಕರ ಮದುವೆಯು ಅಬ್ಬೆತುಮಕುರ ಗ್ರಾಮದಲ್ಲಿದ್ದು ಆ ಮದುವೆಗೆ ನಮ್ಮ ಸಂಬಂಧಿಯಾದ ಶ್ರೀ ವೆಂಕಟೇಶ ತಂದೆ ಹಣಮಂತ ಸಾಧುರ್ ಈತನನ್ನು ಸಂಗಡ ಕರೆದುಕೊಂಡು ಹೋಗಿ ಬರುತ್ತೇನೆಂದು  ನನಗೆ ಹೇಳಿ ನಮ್ಮ ಮೋಟಾರು ಸೈಕಲ್ ನಂಬರ ಕೆಎ-53, ಇಯು-3474 ನೇದ್ದನ್ನು ತೆಗೆದುಕೊಂಡು  ತನ್ನ ಸಂಗಡ ವೆಂಕಟೇಶನಿಗೆ  ಕರೆದು  ಆತನಿಗೆ ನಮ್ಮ ಮೋಟಾರು ಸೈಕಲ್ ನಡೆಸಲು  ಕೊಟ್ಟು ತಾನು ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು  ನನ್ನ ಮುಂದೆ ನಮ್ಮುರಿನಿಂದ ಅಬ್ಬೆತುಮಕುರಕ್ಕೆ ಮೋಟಾರು ಸೈಕಲ್ ಮೇಲೆ ಹೋಗಿದ್ದು ಇರುತ್ತದೆ. ಸ್ವಲ್ಪ ಸಮಯದ ನಂತರ ನಮ್ಮೂರಿನ ಶ್ರೀ ಚಂದ್ರಶೇಖರ ತಂದೆ ಬೀಮರಾಯ ತೆಲಗರ ಈತನು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಯಾದಗಿರಿಯಿಂದ ಬಂದಳ್ಳಿ ಗ್ರಾಮಕ್ಕೆ ಬರುವಾಗ ಮಾರ್ಗ ಮದ್ಯೆ ನಮ್ಮೂರ ಸಾಬಣ್ಣ ಕೊಂಡಾನೋರ ಈತನ ಹೊಲದ ಹತ್ತಿರ ಕರ್ವದಲ್ಲಿ ನಾನು ನನ್ನ ಮೋಟಾರು ಸೈಕಲ್ ಮೇಲೆ ನಿಧಾನವಾಗಿ ಹೊರಟಿದ್ದಾಗ ನಾನು ನೋಡು ನೋಡುತ್ತಿದ್ದಂತೆ ನನ್ನೆದುರಿಗೆ ಬರುತ್ತಿದ್ದ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿರುವ ಬೋಟು ಗಲ್ಲಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದನು ಆಗ ನಾನು ನನ್ನ ಮೋಟಾರು ಸೈಕಲ್ ನಿಲ್ಲಿಸಿ ಅವರ ಹತ್ತಿರ ಹೋಗಿ ನೋಡಲಾಗಿ ಮೋಟಾರು ಸೈಕಲ್ ನಡೆಸುತ್ತಿದ್ದ ನಮ್ಮೂರಿನ ನಮ್ಮ ಸಂಬಂಧಿಯಾದ ವೆಂಕಟೇಶ  ತಂದೆ ಹಣಮಂತ ಸಾಧುರ್ ಈತನು ಇದ್ದು ಅಪಘಾತದ ರಭಸಕ್ಕೆ ಅವನು ರಸ್ತೆ ಬದಿಯಲ್ಲಿ ಬಿದ್ದಾಗ ಅವನಿಗೆ ರಸ್ತೆ ಬದಿಯಲ್ಲಿನ ಬೋಟು ಗಲ್ಲು ತಲೆಗೆ ಬಡಿದು ಭಾರೀ ರಕ್ತಗಾಯವಾಗಿ ಎರಡು ಕಿವಿಗಳಿಂದ ರಕ್ತ ಬಂದಿದ್ದು ಅಲ್ಲದೇ ಮುಖಕ್ಕೆ, ಎಡಭುಜಕ್ಕೆ, ಬಲಗೈ, ಎಡಗೈ ಮುಂಗೈಗಳಿಗೆ ತರಚಿದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಮೋಟಾರು ಸೈಕಲ್ ಹಿಂಬದಿ ಕುಳಿತಿದ್ದ ಹುಡುಗ ನಿನ್ನ ಮಗ ಮಹಾದೇವ ಈತನು ಇದ್ದು ನಿನ್ನ ಮಗನಿಗೆ ಕೂಡ ಸದರಿ ಅಪಘಾತದಲ್ಲಿ ತಲೆಗೆ, ಎದೆಗೆ, ಸೊಂಟಕ್ಕೆ  ಭಾರೀ ಗುಪ್ತಗಾಯ ಮತ್ತು ರಕ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಹಾಗೂ ಎಡಗಾಲಿನ ತೊಡೆಗೆ, ಗುಪ್ತಾಂಗಕ್ಕೆ ಪೆಟ್ಟಾಗಿ ಈತನು ಕೂಡ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಸದರಿ ಘಟನೆಯು ಇಂದು ದಿನಾಂಕ 07/05/2019 ರಂದು ಸಮಯ 12-15 ಪಿ.ಎಂ.ಕ್ಕೆ ಜರುಗಿದ್ದು, ಘಟನೆ ಜಾಗದಲ್ಲಿ ಜನರು ಜಮಾ ಆಗುತ್ತಿದ್ದು  ನೀನು ಕೂಡಲೇ ಘಟನಾ ಸ್ಥಳಕ್ಕೆ ಬರಬೇಕು ಅಂತಾ ಹೇಳಿದಾಗ ನನಗೆ ಗಾಬರಿಯಾಗಿ ವೆಂಕಟೇಶನ ತಾಯಿ ಚಂದ್ರಮ್ಮ, ವೆಂಕಟೇಶನ ಅಣ್ಣ ಶಂಕ್ರೆಪ್ಪ ಮತ್ತು ನಮ್ಮ ಸಂಬಂಧಿ ಶ್ರೀ ಚಂದಪ್ಪ ತಂದೆ ರಾಮಣ್ಣ ಸಾಧುರ್ ಇವರಿಗೆ ಘಟನೆ ಜರುಗಿದ ಬಗ್ಗೆ ಹೇಳಿ ಅವರನ್ನು ನನ್ನ ಸಂಗಡ ಕರೆದುಕೊಂಡು  ಒಂದು ಖಾಸಗಿ ಆಟೋದಲ್ಲಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನಮಗೆ ಈ ಮೇಲೆ ಪೋನಿನಲ್ಲಿ ಚಂದ್ರಶೇಖರ ಇವರು ತಿಳಿಸಿದಂತೆ ಘಟನೆ ಜರುಗಿದ್ದು,   ಸದರಿ ಅಪಗಾತದಲ್ಲಿ ನನ್ನ ಮಗ ಮಹಾದೇವ ಮತ್ತು ನಮ್ಮ ಸಂಬಂಧಿ ವೆಂಕಟೇಶ ಇಬ್ಬರು ಅಪಘಾತದಲ್ಲಿ ಆದ ಗಾಯಗಳ ಭಾಧೆಯಿಂದ ಮೃತಪಟ್ಟಿದ್ದು ನಿಜವಿರುತ್ತದೆ. ನನ್ನ ಮಗ ಮಹಾದೇವನ ಶವವನ್ನು ನಾನು ಗುತರ್ಿಸಿದ್ದು ಇರುತ್ತದೆ. ಇಬ್ಬರ ಶವಗಳನ್ನು ಮುಂದಿನ ಕ್ರಮಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದಿರುತ್ತೇವೆ. ಹೀಗಿದ್ದು ಇಂದು ದಿನಾಂಕ  07/05/2019 ರಂದು ಸಮಯ 12-15 ಪಿ.ಎಂ ದ ಸುಮಾರಿಗೆ ಸೇಡಂ-ಯಾದಗಿರಿ  ಮುಖ್ಯ  ರಸ್ತೆಯ  ಮೇಲೆ ಬರುವ ನಮ್ಮೂರಿನ ಸಾಬಣ್ಣ ಕೊಂಡಾನೋರ ಇವರ ಹೊಲದ ಹತ್ತಿರದ ಮುಖ್ಯ ರಸ್ತೆ ಮೇಲೆ ಬರುವ ಕರ್ವದಲ್ಲಿ ಮೋಟಾರು ಸೈಕಲ್ ನಂಬರ ಕೆಎ-53, ಇಯು-3474 ನೇದ್ದನ್ನು ವೆಂಕಟೇಶ ಈತನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿಕೊಟ್ಟಿದ್ದರಿಂದ ಅಪಘಾತ ಜರುಗಿದ್ದು, ಸದರಿ ಅಪಘಾತದಲ್ಲಿ ನನ್ನ ಮಗ ಮಹಾದೇವ ಹಾಗೂ ನಮ್ಮ ಸಂಬಂಧಿ ವೆಂಕಟೇಶ್ ಇವರು  ಅಪಘಾತದಲ್ಲಾದ ಗಾಯಗಳ ಬಾದೆಯಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಘಟನೆಯ ಬಗ್ಗೆ ಮುಂದಿನ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 2-15 ಪಿ.ಎಂ.ಕ್ಕೆ ಬಂದು ಫಿಯರ್ಾದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 28/2019 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.   
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ:- 68/2019  ಕಲಂ 323, 498(ಎ) 504, 506  ಸಂಗಡ 149 ಐ.ಪಿಸಿ;- ದಿನಾಂಕ 07-05-2019 ರಂದು 3 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಶಿಲ್ಪಾ ಗಂಡ ರವಿ ಚವ್ಹಾಣ ವಯಾ25 ಜಾ: ಲಂಬಾಣಿ ಉ: ಕೂಲಿ ಸಾ:ಮುದ್ನಾಳ ದೊಡ್ಡ ತಾಂಡಾ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದರ ಸಾರಾಂಸವೆನೆಂದರೆ ನನ್ನ ತವರು ಮನೆಯು ಗುಂಡಳ್ಳಿ ತಾಂಡಾವಿದ್ದು ನನಗೆ 6 ವರ್ಷಗಳ ಹಿಂದೆ ಮುದ್ನಾಳ ದೊಡ್ಡ ತಾಂಡಾದ ರವಿ ತಂದೆ ನರಸಿಂಗ ಚವ್ಹಾಣ ಎಂಬುವವನೊಂದಿಗೆ ಮದುವೆಯಾಗಿರುತ್ತದೆ. ನಮಗೆ ಈಗ ಮಾನಸಿ ಅಂತಾ 5 ವರ್ಷದ ಮಗಳಿರುತ್ತಾಳೆ. ನಮ್ಮ ಮನೆಯಲ್ಲಿ ನಾನು ನನ್ನ ಗಂಡನಾದ 1) ರವಿ ತಂದೆ ನರಸಿಂಗ ಚವ್ಹಾಣ ಮಾವನಾದ 2) ನರಸಿಂಗ ತಂದೆ ಜಾತ್ರು ಚವ್ಹಾಣ  ಅತ್ತೆಯಾದ 3) ಮೋತಿಬಾಯಿ ಗಂಡ ನರಸಿಂಗ ಚವ್ಹಾಣ ಬಾವಂಧಿರರಾರ 4) ಸುರೇಶ ತಂದೆ ನರಸಿಂಗ ಚವ್ಹಾಣ 5) ನೇಹರು ತಂದೆ ನರಸಿಂಗ ಚವ್ಹಾಣ ಮೈದುನ 6) ಗೋವಿಂದ ತಂದೆ ನರಸಿಂಗ ಚವ್ಹಾಣ ನೆಗೆಣ್ಣಯರಾದ 7) ಹಿರೀಬಾಯಿ ಗಂಡ ಸುರೇಶ ಚವ್ಹಾಣ 8) ಮಂಜುಳಾ ಗಂಡ ನೇಹರು ಚವ್ಹಾಣ ಎಲ್ಲರೂ ಒಟ್ಟಾಗಿಯೇ ಇರುತ್ತೆವೆ. ನನಗೆ ಮದುವೆಯಾಗಿ ಸುಮಾರು 4-5 ವರ್ಷಗಳವರೆಗೆ ನಾನು ಮತ್ತು ನನ್ನ ಗಂಡ ಬಸಪ್ಪ ಅನೋನ್ಯವಾಗಿ ಸಂಸಾರ ಮಾಡಿಕೊಂಡು ಹೋಗಿರುತ್ತೆವೆ, ನಂತರ ಮೇಲ್ಕಂಡವರೆಲ್ಲರೂ ಕೂಡಿಕೊಂಡು ನೀನು ನೋಡುವದಕ್ಕೆ ಸರಿಯಾಗಿ ಇಲ್ಲಾ, ನೀನು ನಮ್ಮ ಮನೆಯಲ್ಲಿ ಮತ್ತು ಹೊಲದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲಾ, ನೀನು ನಮ್ಮ ಮನೆಗೆ ತಕ್ಕ ಸೊಸೆಯಲ್ಲಾ, ನೀನು ನಮ್ಮ ಮನೆ ಬಿಟ್ಟು ಎಲ್ಲಾದರೂ ಹೋಗು ರಂಡಿ, ಬೋಸಡಿ ಅಂತಾ ದಿನಾಲು ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೊಳ ಕೊಟ್ಟಿದ್ದು ಅಲ್ಲದೇ ದಿನಾಂಕ 05-05-2019 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಕೂಡಿಕೊಂಡು ಬೋಸಡಿ ನೀನು ನಮ್ಮ ಮನೆಯಲ್ಲಿ ಇರಬೇಡ ನಿನಗೆ ಮುಂದೆಯೂ ಗಂಡು ಮಕ್ಕಳಾಗುವುದಿಲ್ಲಾ ಹಾಗೂ ನೀನು ನಮ್ಮ ಮನೆತನಕ್ಕೆ ಯೋಗ್ಯವಾದ ಸೋಸೆಯಲ್ಲಾ ನಿನ್ನ ಮಗಳನ್ನು ಕರೆದುಕೊಂಡು ಎಲ್ಲಿಯಾದರೂ ಹೋಗಿ ಸಾಯಿ, ಒಂದು ಕ್ಷಣ ನೀನು ನಮ್ಮ ಮನೆಯಲ್ಲಿದ್ದರೇ ನಿನಗೆ ಇಲ್ಲಿಯೇ ಖಲಾಸ ಮಾಡುತ್ತೆವೆ ಅಂತಾ ಜೀವದ ಭಯ ಹಾಕಿ ಹೊಡೆಬಡಿ ಮಾಡಿ ಮಗಳೊಂದಿಗೆ ಬಲವಂತವಾಗಿ ಮನೆಯಿಂದ ಆಚೆ ಹಾಕಿದ್ದು ಆದ್ದರಿಂದ ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 68/2019 ಕಲಂ 323, 504, 506, 498(ಎ) ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 118/2018 ಕಲಂ 498(ಎ) 323 354 504 506 ಸಂ 149 ಐ.ಪಿ.ಸಿ;- ದಿನಾಂಕ 07/05/2019 ರಂದು ಮದ್ಯಾಹ್ನ  15-00 ಗಂಟೆಗೆ ಫಿಯರ್ಾದಿ ಶ್ರೀಮತಿ ಈರಮ್ಮ ಗಂಡ ಗಣೇಶ ಬುಡಗಜಂಗಮ ಸಾಃಸ್ಟೇಶನ್ ಗಾಣಗಾಪೂರ ತಾಃಅಫಜಲಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತನಗೆ 2016 ನೇ ಸಾಲಿನ ಏಪ್ರೀಲ್ ತಿಂಗಳಲ್ಲಿ ಕಲಬುರಗಿ ಜಿಲ್ಲೆಯ ಸ್ಟೇಶನ ಗಣಗಾಪೂರ ನಿವಾಸಿತನಾದ ಗಣೇಶ ತಂದೆ ಬಸವರಾಜ ಬುಡಗ ಜಂಗಮ ಇವರೊಂದಿಗೆ ತಂಗಡಗಿ ಗ್ರಾಮದಲ್ಲಿ ಮದವೆಯಾಗಿದ್ದು ತನಗೆ 18 ತಿಂಗಳ ಭವಾನಿ ಅಂತ ಹೆಣ್ಣು ಮಗಳಿರುತ್ತಾಳೆ. ಹೆಣ್ಣು ಮಗು ಹುಟ್ಟಿದ ಕೆಲವು ತಿಂಗಳಲ್ಲಿ ಗಂಡ ಮತ್ತು ಗಂಡನ ಕುಟುಂಬದವರು ವಿನಾಕಾರಣ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಕುಳ ನೀಡಿ ಹೊಡೆ ಬಡೆ ಮಾಡುತಿದ್ದರು, ಫಿಯರ್ಾದಿಯ ಗಂಡನು ವ್ಯಾಪಾರಕ್ಕೆಂದು ತನ್ನ ತಂದೆ ತಾಯಿವರ ಕಡೆಯಿಂದ ಕೈಗಡ ಅಂತ 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲದಿದ್ದರೆ ನಾನು ಬೇರೊಂದು ಮದುವೆ ಮಾಡಿಕೊಳ್ಳುತ್ತೆನೆ ಅಂತ ಬೆದರಿಕೆ ಹಾಕಿ ಕಿರಿ-ಕಿರಿ ಮಾಡುತಿದ್ದರು. ಫಿಯರ್ಾದಿಯು ತನ್ನ ಗಂಡ ಮತ್ತು ಗಂಡನ ಕುಟುಂಬದವರು ಕೊಡುತಿದ್ದ ಕಿರಕುಳ ತಾಳಲಾರದೆ ಅಂದಾಜು 7-8 ತಿಂಗಳದಹಿಂದೆ ತನ್ನ ಮಗಳೊಂದಿಗೆ ಗಂಡನ ಮನೆಯಿಂದ ತವರು ಮನೆಗೆ ಬಂದಿರುತ್ತಾಳೆ.
      ಹೀಗಿರುವಾಗ ದಿನಾಂಕ 02/05/2019 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ಫಿಯರ್ಾದಿಯ ಗಂಡ ಮತ್ತು ಗಂಡನ ಕುಟುಂಬದವರೆಲ್ಲರೂ ನ್ಯಾಯ ಪಂಚಾಯತಿ ಮಾಡುವ ಸಂಬಂಧ ಫಿಯರ್ಾದಿಯ ತವರುಮನೆಯಾದ ತಂಗಡಗಿ ಗ್ರಾಮಕ್ಕೆ ಬಂದು ನ್ಯಾಯ ಪಂಚಾಯಿತಿ ಮಾಡುವ ಕಾಲಕ್ಕೆ ಫಿಯರ್ಾದಿಗೆ ಫಿಯರ್ಾದಿಯ ಗಂಡ ಗಣೇಶ, ಮತ್ತು ಗಂಡನ ಕುಟುಂಬದವರಾದ ಅತ್ತೆ ಮಲ್ಲಮ್ಮ,  ನೇಗೆಣಿ ಶಾಂತಮ್ಮ,  ನಾದಿನಿಯರಾದ ಶಿವಮ್ಮ, ಕಸ್ತೂರಿ, ಪಾರ್ವತಿ, ತಾಯಮ್ಮ ಹಾಗೂ ನಾದಿನಿ ಶಿವಮ್ಮ ಇವಳ ಮಗಳಾದ ಶ್ರೀದೇವಿ,  ಎಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡುತಿದ್ದಾಗ ಫಿಯರ್ಾದಿಯ ಭಾವನು ತಲೆಯ ಕೂದಲು ಹಿಡಿದು ಜಗ್ಗಾಡಿ ಮೈಮೇಲಿನ ಬ್ಲೌಜ್ ಹರಿದು ಮಾನಹಾನಿ ಮಾಡಿ  ಜೀವ ಬೆದರಿಕೆ ಹಾಕಿ ತನ್ನ 18 ತಿಂಗಳದ ಮಗಳನ್ನು ಜೊತೆಯಲಿ ಕರೆದುಕೊಂಡು ಹೋಗಿರುತ್ತಾರೆ ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 118/2019 ಕಲಂ 498(ಎ) 323 354 504 506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 119/2018 ಕಲಂ 143,147,148,323,324,355,504,506 ಸಂ 149 ಐಪಿಸಿ;- ದಿನಾಂಕ: 07/05/2019 ರಂದು 5.00 ಪಿಎಂ ಕ್ಕೆ ಠಾಣೆಗೆ ಫಿಯರ್ಾದಿದಾರರಾದ ಶ್ರೀ ಪ್ರಭು ತಂದೆ ಮಲ್ಲಪ್ಪ ಗ್ಯಾಂಗಿನ್ ವ|| 22ವರ್ಷ ಜಾ|| ಹಿಂದೂ ಮಾದರ(ಎಸ್.ಸಿ) ಉ|| ಕೂಲಿ ಸಾ|| ಹತ್ತಿಗುಡೂರ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ,  ನಾನು ಕೂಲಿ ಕೆಲಸ ಮಾಡಿಕೊಂಡು ಕುಟುಂಬದವರೊಂದಿಗೆ ಇರುತ್ತಿದ್ದೇನೆ. ಹೀಗಿದ್ದು ದಿನಾಂಕ 28/04/2019 ರಂದು ನಾನು ಹಾಲಗೇರಾ ಗ್ರಾಮಕ್ಕೆ ನಮ್ಮ ಸಂಬಂಧಿಕರ ಮದುವೆಗೆಂದು ಹೋಗಿದ್ದೆನು. ಅಲ್ಲಿ ನಮ್ಮೂರ ನಮ್ಮ ಜಾತಿಯ ಭೀಮಪ್ಪ ಅಳ್ಳಿ ಇವರ ಮಗಳನ್ನು ಹಾಲಗೇರಾ ಗ್ರಾಮಕ್ಕೆ ಎಂಗೇಜಮೆಂಟ ಮಾಡಿದ್ದು ಭೀಮಪ್ಪನ ಅಳಿಯನು ನನಗೆ ಪರಿಚಯ ಇಲ್ಲದಿದ್ದರೂ ಅವನೇ ನನಗೆ ಹಾಲಗೇರಾ ಗ್ರಾಮದ ಮದುವೆಯಲ್ಲಿ ಪರಿಚಯ ಮಾಡಿಕೊಂಡು ನನ್ನೊಂದಿಗೆ ಕುಳಿತು ಮಾತನಾಡಿದ್ದು ನಂತರ ನಾನು ಸಾಯಂಕಾಲ ನಮ್ಮೂರಿಗೆ ಬಂದಿದ್ದು ಇರುತ್ತದೆ. ನಂತರ ದಿನಾಂಕ 03/05/2019 ರಂದು ಮುಂಜಾನೆ 8.00 ಗಂಟೆಯ ಸುಮಾರಿಗೆ ನಾನು ನಮ್ಮೂರ ಹನುಮಾನ ಗುಡಿಯ ಮುಂದಿನ ಬಯಲು ಜಾಗೆಯಲ್ಲಿ ಕುಳಿತಿದ್ದಾಗ ನಮ್ಮೂರ ನಮ್ಮ ಜಾತಿಯವರಾದ 1)ಭೀಮಪ್ಪ ತಂದೆ ಚಂದ್ರಾಮಪ್ಪ ಅಳ್ಳಿ, 2)ಮಲ್ಲಪ್ಪ ತಂದೆ ಭೀಮಪ್ಪ ಅಳ್ಳಿ, 3)ಹೊನ್ನಪ್ಪ ತಂದೆ ಮಹಾದೇವಪ್ಪ ನಾಸಿಗಿರಿ, 4)ಸುರೇಶ ತಂದೆ ಹಯ್ಯಾಳಪ್ಪ ಮೀಸಿ 5)ರೆಡ್ಡೆಪ್ಪ ತಂದೆ ಹಯ್ಯಾಳಪ್ಪ 6)ಶರಣಪ್ಪ ತಂದೆ ಮಾನಪ್ಪ ನಾಸಿಗಿರಿ 7)ಭೀಮಪ್ಪ ತಂದೆ ಮಲ್ಲಪ್ಪ ವಾಚಮ್ಯಾನ 8)ಗಂಗಮ್ಮ ಗಂಡ ಮಾನಪ್ಪ 9)ಲಕ್ಷ್ಮೀ ಗಂಡ ಮಲ್ಲಪ್ಪ ಅಳ್ಳಿ 10)ನಿಂಗಮ್ಮ ಗಂಡ ಮಹಾದೇವಪ್ಪ ನಾಸಿಗಿರಿ 11)ಅಯ್ಯಮ್ಮ ಗಂಡ ಭೀಮಪ್ಪ ಅಳ್ಳಿ ಸಾ|| ಎಲ್ಲರೂ ಹತ್ತಿಗುಡೂರ ಇವರೆಲ್ಲರೂ ಕೂಡಿ ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ನಾನು ಕುಳಿತಲ್ಲಿಗೆ ಬಂದವರೇ ಏನಲೇ ಪ್ರಭ್ಯಾ ಸೂಳೆಮಗನೇ ನಿನಗೆ ಸೊಕ್ಕು ಜಾಸ್ತಿಯಾಗಿದೆ ನಮ್ಮ ಮಗಳು ಸರಿ ಇಲ್ಲ ಅಂತಾ ಹಾಲಗೇರಾ ಗ್ರಾಮದ ನಮ್ಮ ಅಳಿಯನಿಗೆ ಹೇಳಿ ನಮ್ಮ ಮಗಳ ಒಗೆತನಕ್ಕೆ ಧಕ್ಕೆ ತರುತ್ತಿಯಾ ಮಗನೇ ಅಂತಾ ಅಂದು ನಿನಗೆ ಒಂದು ಕೈ ನೋಡಿಯೇ ಬಿಡುತ್ತೇವೆ ಅನ್ನುತ್ತ ಮಲ್ಲಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು, ಆಗ ಹೊನ್ನಪ್ಪನು ತನ್ನ ಕೈಯಲ್ಲಿದ್ದ ಒಂದು ಹಿಡಿಗಾತ್ರದ ಕಲ್ಲಿನಿಂದ ನನ್ನ ಕಾಲಿಗೆ ಹೊಡೆದು ಗುಪ್ತಗಾಯ ಮಾಡಿದನು, ಆಗ ನಾನು ಯಾಕೆ ಹೊಡೆಯುತ್ತಿದ್ದೀರಿ ಅಂತಾ ಕೇಳಿದಾಗ ಭೀಮಪ್ಪ, ಸುರೇಶ, ಅಯ್ಯಮ್ಮ ಮತ್ತು ಗಂಗಮ್ಮ ಇವರು ಚಪ್ಪಲಿಯಿಂದ ನನ್ನ ಬೆನ್ನಿಗೆ ಕಪಾಳಕ್ಕೆ ಹೊಡೆದು ಗುಪ್ತಗಾಯ ಮಾಡಿದರು. ಆಗ ಜಗಳ ಬಿಡಿಸಲು ಬಂದ ನಮ್ಮ ಅಣ್ಣನಾದ ಹೊನ್ನಪ್ಪ ಗ್ಯಾಂಗಿನ್ ಈತನಿಗೆ ಶರಣಪ್ಪನು ಕೈಯಿಂದ ಬೆನ್ನಿಗೆ ಹೊಡೆದನು, ನಮ್ಮ ತಾಯಿಯಾದ ಯಲ್ಲಮ್ಮ ಗ್ಯಾಂಗಿನ್ ಇವರಿಗೆ ಲಕ್ಷ್ಮೀ ಮತ್ತು ನಿಂಗಮ್ಮ ಇವರು ಕೈಯಿಂದ ಕಪಾಳಕ್ಕೆ ಹೊಡೆದಿದ್ದು ಆಗ ನಮ್ಮೂರ ಹಣಮಂತ ತಂದೆ ಮಾನಪ್ಪ ಟಣಕೆದಾರ, ಮಾನಪ್ಪ ತಂದೆ ನಿಂಗಪ್ಪ ಯರಗಲ್ ಹಾಗೂ ಚಂದ್ರಶೇಖರ ತಂದೆ ಅಡಿವೆಪ್ಪ ಹೊಸಮನಿ ಇವರು ಬಂದು ಜಗಳ ಬಿಡಿಸಿದ್ದು ಆಗ ನಮಗೆ ಹೊಡೆಯಲು ಬಂದ ಭೀಮಪ್ಪ ಹಾಗೂ ಇತರರು ಇದೊಂದು ಸಾರಿ ಉಳಿದಿದ್ದೀರಿ ಮಕ್ಕಳೇ ಇನ್ನೊಮ್ಮೆ ನಮ್ಮ ವಿಷಯಕ್ಕೆ ಬಂದರೆ ನಿಮಗೆ ಜೀವ ಸಹಿತ ಹೊಡೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ನಂತರ ನಾವು ಸದರಿ ಜಗಳದ ವಿಷಯ ನಮ್ಮೂರ ಸಿದ್ದಲಿಂಗರೆಡ್ಡಿ ಸಾಹುಕಾರ ಇವರಿಗೆ ತಿಳಿಸಲು ಹೊರಟಾಗ ಮತ್ತೆ ಭೀಮಪ್ಪ ಹಾಗೂ ಇತರರು ಬಂದು ಹೊಡೆಬಡೆ ಮಾಡಿದ್ದು ಹೊಡೆಯುವುದನ್ನು ನೋಡಿದ ಸಿದ್ದಲಿಂಗರೆಡ್ಡಿ ಸಾಹುಕಾರ ಇವರು ಜಗಳ ಬಿಡಿಸಿಕೊಂಡಿದ್ದು ಇರುತ್ತದೆ. ನನಗೆ ಗಾಯಗಳಾಗಿದ್ದರಿಂದ ನಾನು ಅರಿವಿ ಆಸ್ಪತ್ರೆ ರಾಯಚೂರಿಗೆ ಹೋಗಿ ಉಪಚಾರ ಮಾಡಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದಿದ್ದು ನಮ್ಮ ಅಣ್ಣ ಮತ್ತು ತಾಯಿಯವರಿಗೆ ಅಷ್ಟೊಂದು ಗಾಯಗಳಾಗದ ಕಾರಣ ಆಸ್ಪತ್ರೆಗೆ ತೋರಿಸಿಕೊಂಡಿಲ್ಲ. ಕಾರಣ ಅಕ್ರಮಕೂಟದೊಂದಿಗೆ ಬಂದು ನನ್ನೊಂದಿಗೆ ಜಗಳ ತೆಗೆದು ಕೈಯಿಂದ, ಬಡಿಗೆಯಿಂದ, ಕಲ್ಲಿನಿಂದ, ಚಪ್ಪಲಿಯಿಂದ ಹೊಡೆದು ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಭೀಮಪ್ಪ ಅಳ್ಳಿ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 119/2019 ಕಲಂ: 143,147,148,323,324,355,504,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 58/2019 ಕಲಂ: 279,337,338 ಐ.ಪಿ.ಸಿ ಸಂ 187 ಐಎಮ್ವಿ ಆಕ್ಟ;- ದಿ: 07/05/19 ರಂದು 7.30 ಪಿಎಮ್ಕ್ಕೆ ಶ್ರೀ ಪಿರ್ಯಾದಿದಾರರಾದ ಶ್ರೀ ಇಮಾಮಸಾಬ ತಂದೆ ಮಕ್ತುಮಸಾಬ ಸೈಯದ್ ವಯಾ|| 55 ವರ್ಷ ಉ|| ಒಕ್ಕಲುತನ ಜಾ|| ಮುಸ್ಲಿಂ ಸಾ|| ಏವೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 05/05/2019 ರಂದು ಸಾಯಂಕಾಲ 06.00 ಗಂಟೆ ಸುಮಾರಿಗೆ ನಾನು ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ಸಿಂದಗಿ ಶಹಾಪೂರ ಮುಖ್ಯ ರಸ್ತೆಯ ಮೂಲಕ ಹಾದು ಕೆನಾಲ ದಾಟಿ ಅಲೋ ಬ್ಲಾಕ ಕಡೆ ಹೋಗುವ ಕುರಿತು ರೋಡ ದಾಟುತ್ತಿದ್ದಾಗ ಚಾಮನಾಳ ಕಡೆಯಿಂದ ಒಂದು ಮೋಟಾರ ಸೈಕಲ ಚಾಲಕನು ತನ್ನ ಮೋಟರ ಸೈಕಲನ್ನು ಅತೀ ವೇಗ ಹಾಗು ಅಲಕ್ಷತನದಿಂದ ನಡೆಯಿಸಿಕೊಂಡು ಬರುತ್ತಿದ್ದಾಗ ಅದೇ ಸಮಯಕ್ಕೆ ಏವೂರ ಕಡೆಯಿಂದಲೂ ಒಂದು ಟಿವ್ಹಿಎಸ್ ಎಕ್ಸಲ್ ಸೂಪರ ನೇದ್ದರ ಚಾಲಕನು ಸಹ ತನ್ನ ವಾಹನವನ್ನು ಅತೀ ವೇಗವಾಗಿ ತೆಗೆದುಕೊಂಡು ಬರುತ್ತಿದ್ದಾಗ ನಾನು ರೋಡ ದಾಟುತ್ತಿದ್ದಾಗ ಅಷ್ಟರಲ್ಲಿ ಎರಡು ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ ನನ್ನ ಮೇಲೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ಎಡಗಾಲ ಮೊಳಕಾಲಿಗೆ ಹಾಗು ಎಡಗೈಮೊಳಕೈಗೆ ಗುಪ್ತಗಾಯವಾಗಿದ್ದು ಇರುತ್ತದೆ. ನಂತರ ನನಗೆ ಅಪಘಾತ ಪಡಿಸಿದ ವಾಹನಗಳ ನಂಬರ ನೋಡಿ ತಿಳಿದುಕೊಳ್ಳಲಾಗಿ ಚಾಮನಾಳ ಕಡೆಯಿಂದ ಬಂದ ಮೋಟರ್ ಸೈಕಲ ನಂಬರ ನೋಡಲಾಗಿ ಕೆಎ-33 ಆರ್-5117 ಅಂತ ಇದ್ದು ಅದರ ಚಾಲಕನ ಬಗ್ಗೆ ವಿಚಾರಿಸಿ ತಿಳಿಯಲಾಗಿ ವಿಜಯಕುಮಾರ ತಂದೆ ಕನಕಪ್ಪ ಸಾ|| ಕೆಂಭಾವಿ ಅಂತ ಇದ್ದು ಆತನಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಆದರೆ ಆ ಮೋಟರ್ ಸೈಕಲ ಹಿಂದೆ ಕುಳಿತ ರಮೇಶ ತಂದೆ ನಿಂಗಪ್ಪ ನಾಟೀಕಾರ ಸಾ|| ಏವೂರ ಈತನಿಗೆ ತಲೆಯ ಹಿಂದೆ ಭಾರೀ ರಕ್ತಗಾಯವಾಗಿ ಎಡಕಿವಿಯಿಂದ ರಕ್ತಸ್ರಾವವಾಗಿದ್ದು ಇರುತ್ತದೆ. ಅದರಂತೆ ಏವೂರ ಕಡೆಯಿಂದ ಬಂದ ಟಿ ವ್ಹಿ ಎಸ್ ಎಕ್ಸಲ್ ನಂಬರ ನೋಡಲಾಗಿ ಕೆಎ-33 ಎಕ್ಸ್-1410 ಅಂತ ಇದ್ದು ಸದರಿ ವಾಹನದ ಚಾಲಕ ನಿಂಗಪ್ಪ ತಂದೆ ಶರಣಪ್ಪ ಸಾ|| ಕರಡಕಲ ಅಂತ ಇದ್ದು ಸದರಿಯವನಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು ಆದರೆ ಸದರ ಟಿವ್ಹಿ ಎಸ್ ಹಿಂದೆ ಕುಳಿತ ಬಸವರಾಜ ತಂದೆ ಕಾಶಿಪತಿ ಸಾ|| ಏವೂರ ಈತನಿಗೆ ಎಡಗಾಲ ಪಾದಕ್ಕೆ ಭಾರೀ ರಕ್ತಗಾಯವಾಗಿ ಎಡಗಡೆ ಪಕ್ಕಡಿಗೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ನಂತರ ನಾವೆಲ್ಲರೂ ನೆಲಕ್ಕೆ ಬಿದ್ದಾಗ ಅಲ್ಲಿಯೇ ಹೊರಟಿದ್ದ ಮಲ್ಲಪ್ಪ ತಂದೆ ಬಸಣ್ಣ ಸುರಪೂರ ಹಾಗು ಅಯ್ಯಪ್ಪ ತಂದೆ ಮಲ್ಲಪ್ಪ ನಾಟೀಕಾರ ಸಾ|| ಇಬ್ಬರೂ ಏವೂರ ಇವರು ಬಂದು ನಮಗೆ ನೋಡಿ ಸದರ ವಿಷಯ ಮನೆಯಲ್ಲಿ ತಿಳಿಸಿ ನನಗೆ ಹಾಗು ರಮೇಶ ನಾಟೀಕಾರ ನಾವೂ ಎರಡು ಜನರಿಗೆ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಕಲಬುಗರ್ಿಯ ಚಿರಾಯು ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಮತ್ತು ಬಸವರಾಜ ತಂದೆ ಕಾಶಿಪತಿ ಇವರು ಶಹಾಪೂರದ ಗಾಂವಳ್ಕರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ. ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 58/19 ಕಲಂ: 279, 337, 338 ಐಪಿಸಿ ಸಂ 187 ಐಎಮ್ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

ಶೋರಾಪುರ ಪೊಲೀಸ್ ಠಾಣೆ ಗುನ್ನೆ ನಂ:- 105/2019 ಕಲಂ323,341,504,506 ಐಪಿಸಿ;- ದಿನಾಂಕ:07-05-2019 ರಂದು 3-15 ಪಿ.ಎಂ.ಕ್ಕೆ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತಾ ಬಾತ್ಮಿ ಮೇರೆಗೆ ಆಸ್ಪತ್ರಗೆ 3-30 ಪಿ.ಎಮ್.ಕ್ಕೆ ಬೇಟಿ ನೀಡಿದ್ದು ಗಾಯಾಳುದಾರನಾದ ಬಾಬು ತಂದೆ ಪಂಪಣ್ಣ ರಾಠೋಡ ಇವರು ಒಂದು ಲಿಖಿತ ಅಜರ್ಿ ಬರೆದುಕೊಟ್ಟಿದ್ದು ಅದನ್ನು ಸ್ವೀಕರಿಸಿಕೊಂಡು 4 ಪಿ.ಎಮ್.ಕ್ಕೆ ಮರಳಿ ಠಾಣೆಗೆ ಬಂದು ಲಿಖಿತ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ ದಿನಾಂಕ:05-05-2019 ರಂದು ನಾನು ಎಂದಿನಂತೆ ನಿವರ್ಾಹಕ ಕರ್ತವ್ಯ ನಿರ್ವಹಿಸುವ ಕುರಿತು ಕಲಬುರಗಿ-ಸುರಪುರ ರೂಟ್ ನಂಬರ:73/74 ನೇದ್ದರಲ್ಲಿ ಕರ್ತವ್ಯ ಮುಗಿಸಿ ಸಾಯಂಕಾಲ 5 ಗಂಟೆಗೆ ಬಸ್ ಘಟಕದಲ್ಲಿ ಬಸ್ ನಂಬರ ಕೆಎ-33,ಎಫ್-0172 ನೇದ್ದನ್ನು ನಿಲ್ಲಿಸಿ ಕ್ಯಾಶ್ ಕಟ್ಟಿ ಅಲ್ಲೆ ಇದ್ದು ರಾತ್ರಿ ಅಂದಾಜು 9-45 ಪಿ.ಎಮ್.ಕ್ಕೆ ಸುಮಾರು ನಾನು ಹಸನಾಪುರ ಕ್ಯಾಂಪ ಹತ್ತಿರ ಇರುವ ನನ್ನ ರೂಮಿಗೆ ಹೋಗುವ ಕುರಿತು ವೆಂಕಟಪ್ಪನಾಯಕ ಸರ್ಕಲ್ದಿಂದ ಸ್ವಲ್ಪ ಮುಂದೆ ಗಾಳೇಪ್ಪ ಕಾಲೋನಿಯ ರಸ್ತೆ ಮುಖಾಂತರ ಜಹೀರ ಗ್ಯಾಸ್ ವೆಲ್ಡಿಂಗ್ ಗ್ಯಾರೇಜ ಹತ್ತಿರ ಹೋಗುವಾಗ ನಮ್ಮ ಘಟಕದಲ್ಲಿ ಟ್ರಾಫಿಕ್ ಇನ್ಸಸ್ಪೆಕ್ಟರ್ ಆಗಿರುವ ಗಿರೀಶ ಚಿನಮಳ್ಳಿ ಇವರು ಬೈಕಿನಲ್ಲಿ ಬಂದವರೆ ನನ್ನನ್ನು ತಡೆದು ನಿಲ್ಲಿಸಿ ನೀನು ಸರಿಯಾಗಿ ಕರ್ತವ್ಯ ನಿರ್ವಹಿಸುವದಿಲ್ಲ ನನಗೆ ತಿಂಗಳ ಮಂತ್ಲಿ ಮಾಮೂಲಿ ಕೊಡುವುದಿಲ್ಲ ಅಂತಾ ಮಗನೇ ಅಂತಾ ಅವಾಚ್ಯ ಬೈದು ಬಲಗಡೆ ಪಕ್ಕಿಗೆ ಕೈಯಿಂದ ಗುದ್ದಿ ಕಾಲಿನಿಂದ ಒದ್ದು ಹೊಡೆ ಬಡೆ ಮಾಡಿತ್ತಿರುವಾಗ ಅದೇ ರಸ್ತೆಯ ಮುಖಾಂತರ ಹೋಗುತ್ತಿದ್ದ ರಂಗಪ್ಪ ದೊರೆ, ಮಹಾಂತೇಶ ದೊರೆ ಡಿ/ಸಿ-430 ಹಾಗೂ ನಿಂಗಣ್ಣ ಚಾಲಕ 758 ಇವರು ಬಂದು ಜಗಳ ಬಿಡಿಸಿದರು ಆಗ ಅವನು ಇವತ್ತು ಉಳಿದಿ ಮಗನೇ ಇನ್ನೋಮ್ಮೆ ಸಿಕ್ಕರೆ ಖಲಾಸ ಮಾಡದೆ ಬಿಡುವುದಿಲ್ಲ ಅಂತಾ ಬೆದರಿಕೆ ಹಾಕಿ ಹೋದರು ನಿನ್ನೆ ನನ್ನ ಕರ್ತವ್ಯ ಇರುವದರಿಂದ ಹಾಗೂ ಇಂದು ನನ್ನ ಮೈ ನೋವಾಗಿರುವದರಿಂದ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇನೆ. ನನಗೆ ಹೊಡೆ ಬಡೆ ಮಾಡಿದ ಗಿರೀಶ ಇವರ ಮೇಲೆ ಕಾನೂನಿನ ಕ್ರಮ ಜರುಗಿಸಲು ವಿನಂತಿ. ಅಂತಾ ನಿಡಿದ ಹೇಳಿಕೆಯ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!