ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-05-2019

By blogger on ಭಾನುವಾರ, ಮೇ 5, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-05-2019 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 102/2019 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:05-05-2019 ರಂದು 9-30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಮಾನ್ಯ ಡಿಎಸ್ ಪಿ ಸಾಹೇಬರು ಸುರಪೂರ ರವರು ಒಂದು ಮರಳು ತುಂಬಿದ ಟಿಪ್ಪರ ಹಾಗೂ ಆರೋಪಿತನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:05-05-2019 ರಂದು 06:00 ಎ.ಎಮ್ ಸುಮಾರಿಗೆ  ಕಛೇರಿಯಲ್ಲಿದ್ದಾಗ ರುಕ್ಮಾಪೂರ ಕಡೆಯಿಂದ ಯಾರೋ ತಮ್ಮ ಟಿಪ್ಪರ ವಾಹನದಲ್ಲಿ ಕನರ್ಾಳ ಸೀಮಾಂತರದ ಕೃಷ್ಣಾ ನದಿ ತೀರದಿಂದ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:50 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ 2) ಶ್ರಿ ಮಹೀಬೂಬ ತಂದೆ ಮುಸ್ತಪಸಾಬ ಮಕ್ಕಾ ವಯಾ:27 ವರ್ಷ ಉ:ಡೈವರ್ ಜಾ:ಮುಸ್ಲಿಂ ಸಾ:ರುಕ್ಮಾಪುರ ಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ ದಾಳಿ ಕಾಲಕ್ಕೆ ಪಂಚರಾಗಿ ಹಾಜರಿದ್ದು ಪಂಚನಾಮೆ ಬರೆದುಕೊಡಲು ಕೆಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ನಾನು ಮತ್ತು  ಸಿಬ್ಬಂದಿಯವರಾದ 1) ಶ್ರೀ ಉಮಾಕಾಂತ ಸಿಹೆಚ್ಸಿ-192 2)  ನಿಂಗಣಗೌಡ ಸಿ.ಪಿಸಿ-365  ಹಾಗೂ ಜೀಪ ಚಾಲಕನಾದ 3) ಶ್ರೀ ಚಂದಪ್ಪಗೌಡ ಎಪಿಸಿ-143 ಎಲ್ಲರೂ ಕೂಡಿ ಸದರಿ ಪಂಚರೊಂದಿಗೆ ಸರಕಾರಿ ಠಾಣೆಯ ಸರಕಾರಿ ಜೀಪ್ ನಂ:ಕೆಎ-33, ಜಿ-0253 ವಾಹನದಲ್ಲಿ ಠಾಣೆಯಿಂದ 06-30 ಎ.ಎಮ್ಕ್ಕೆ ಹೊರಟು ರುಕ್ಮಾಪೂರ ಗ್ರಾಮದ ಹತ್ತಿರ 07:00 ಎ.ಎಮ್ ಕ್ಕೆ ರಸ್ತೆಯಲ್ಲಿ ಹೋಗುತ್ತಿರುವಾಗ   ಕನರ್ಾಳ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ನಮ್ಮ ಜೀಪನ್ನು ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದು ಸಿಬ್ಬಂಧಿಯವರ ಸಹಾಯದಿಂದ ಸದರಿ ಟಿಪ್ಪರನ್ನು ಕೈ ಮಾಡಿ ತಡೆದು ನಿಲ್ಲಿಸಲಾಗಿ ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ನಿಲ್ಲಿಸಿದ್ದು, ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಲ್ಲಿಕಾಜರ್ುನ ತಂದೆ ಮಡಿವಾಳಪ್ಪ ಮೇಲಗೇರಿ ವಯಾ:35 ವರ್ಷ ಜಾತಿ:ಕುರುಬರ ಉ:ಡ್ರೈವರ ಸಾ:ಮಲ್ಲಾಭಾದ ತಾ:ಜೇವರಗಿ ಅಂತಾ ತಿಳಿಸಿದ್ದು, ಸದರಿಯವರಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರ ಕೇಳಲು ಯಾವುದೆ ಕಾಗದ ಪತ್ರ ಇರುವದಿಲ್ಲ ಟಿಪ್ಪರ ಮಾಲೀಕನಾದ ಅಶೋಕ ಎಸ್ ಪಾಟೀಲ ಶಹಾಪೂರ ಇವರು ಹೇಳಿದಂತೆ ಕನರ್ಾಳ ಸಿಮಾಂತರದ ಕೃಷ್ಣಾ ನದಿಯಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಹೋರಟಿರುವದಾಗಿ ತಿಳಿಸಿದನು. ಟಿಪ್ಪರನ್ನು ಪರೀಶಿಲಿಸಿ ನೋಡಲು ಒಂದು ಬಾರತಬೆಂಜ ಕಂಪನಿಯ ಟಿಪ್ಪರ ಇದ್ದು ಅದರ ನಂಬರ ಕೆಎ-32 ಡಿ-2336 ನೇದ್ದು ಇರುತ್ತದೆ. ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು, ಅದರ ಅ.ಕಿ 10400/- ರೂಗಳು ಆಗುತ್ತದೆ. ಸದರಿ ಟಿಪ್ಪರ ಚಾಲಕನು ಕನರ್ಾಳ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟಿಪ್ಪರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ 07:00 ಎ.ಎಮ್ ದಿಂದ 08-00 ಎ.ಎಮ್ ದವರೆಗೆ ಪಂಚನಾಮೆಯನ್ನು ಬರೆದುಕೊಂಡು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟಿಪ್ಪರದಲ್ಲಿ ಒಟ್ಟು 10400/- ರೂ ಕಿಮ್ಮತ್ತಿನ ಅಂದಾಜು 13 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಮರಳು ತುಂಬಿದ ಟಿಪ್ಪರನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ.ಅಂತಾ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:-75/2019 ಕಲಂ:279,337,338 ಐಪಿಸಿ:-ದಿನಾಂಕ 05.05.2019 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಫಿರ್ಯಾದಿ ಮರಗಪ್ಪ ಮತ್ತು ಆತನ ಹೆಂಡತಿ ಬಾಲಮ್ಮ ಹಾಗೂ ಆರೋಪಿ ಮಲ್ಲಿಕಾಜರ್ುನ @ ಮಲ್ಲಪ್ಪ ಮೂರು ಜನರು ಸೇರಿ ಫಿರ್ಯಾದಿಯ ಮಗಳು ಇಂದ್ರಮ್ಮಳಿಗೆ ಆಸ್ಪತ್ರೆಗೆ ತೋರಿಸುವ ಸಲುವಾಗಿ ಯದ್ಲಾಪೂರ ಗ್ರಾಮದಿಂದ ಪುಟಪಾಕ್ ಗ್ರಾಮದ ಮಾರ್ಗವಾಗಿ ನಾರಾಯಣಪೇಟ್ಗೆ ಹೋಗುತ್ತಿದ್ದಾಗ ಆರೋಪಿ ಮಲ್ಲಿಕಾಜರ್ುನ @ ಮಲ್ಲಪ್ಪ ಈತನು ತನ್ನ ಮೋಟಾರು ಸೈಕಲ್ ನಂ: ಕೆಎ-41-ಕೆ-9744 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು ಅದೇ ರೀತಿ ನಾರಾಯಣಪೇಟ ಕಡೆಯಿಂದ ಪುಟಪಾಕ್ ಕಡೆಗೆ ಬರುತ್ತಿದ್ದ ಆರೋಪಿ ಬಶೀರ ಅಹ್ಮದ ಈತನು ತನ್ನ ಟಿ.ವಿ.ಎಸ್ ಎಕ್ಸ್.ಎಲ್ 100 ಮೋಟಾರು ಸೈಕಲ ನಂ: ಟಿ.ಎಸ್.-06-ಇ.ಟಿ-5911 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದು ಇಬ್ಬರು ಚಾಲಕರು ಮುಖಾ-ಮುಖಿಯಾಗಿ ಡಿಕ್ಕಿಪಡಿಸಿದರ ಪರಿಣಾಮವಾಗಿ ಇಬ್ಬರು ಆರೋಪಿತರು ಸೇರಿದಂತೆ ಫಿರ್ಯಾದಿ ಮತ್ತು ಆತನ ಹೆಂಡತಿ ಎಲ್ಲಾ ನಾಲ್ಕು ಜನರಿಗೂ ಭಾರಿ ಹಾಗೂ ಸಾಧಾ ಸ್ವರೂಪದ ರಕ್ತಗಾಯಗಳು ಮತ್ತು ಗುಪ್ತಗಾಯಗಳಾಗಿದ್ದ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ನಂ: 75/2019 ಕಲಂ:279,337,338 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 32/2019 ಕಲಂ 279, 337 304(ಎ)  ಐಪಿಸಿ & 187 ಐಎಂವಿ  ಕಾಯ್ದೆ:- ದಿನಾಂಕ: 05/05/2019  ರಂದು ಪಿಯರ್ಾದಿ ಮತ್ತು ಮೃತ ಇಬ್ಬರೂ ಕೂಡಿ ತಮ್ಮೂರಿನಿಂದಾ ಸುರಪುರಕ್ಕೆ ಬೋರವೆಲ್ ನೀರಿನ ಸಲುವಾಗಿ ದೇವರ ಕೇಳುವ ಸಲುವಾಗಿ ಪಿಯರ್ಾದಿ ಮೋಟಾರ್ ಸೈಕಲ ನಂ. ಕೆಎ28 ಇಎಲ್-2156 ನೇದ್ದರ ಮೇಲೆ ಹೋಗಿ, ಸುರಪುರದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಅದೇ ಮೋಟಾರ್ ಸೈಕಲ ಮೇಲೆ ಮುದ್ದೇಬಿಹಾಳಕ್ಕೆ ಸುರಪುರ ದಿಂದಾ ತಿಂಥಣಿ ಬ್ರೀಜ್, ಕಕ್ಕೇರಾ ಮೇಲೆ ಹಾದು ಹೊರಟಿದ್ದು, ಮೋಟಾರ ಸೈಕಲನ್ನು ಮೃತನು ನಡೆಯಿಸುತ್ತಿದ್ದು, ಪಿಯರ್ಾದಿ ಹಿಂದೆ ಕಳಿತಿದ್ದು, ಸಾಯಂಕಾಲ 5.00 ಗಂಟೆಯ ಸುಮಾರಿಗೆ ಬಲಶೆಟ್ಟಿಹಾಳ ಸಮೀಪ್ ಕಕ್ಕೇರಾ ರೋಡಿನ ಮೇಲೆ ಕಾಮನಟಗಿ ಬಸವನಕಟ್ಟಿ ದಾಟಿ ಬಲಶೆಟ್ಟಿಹಾಳ ಕಡೆಗೆ ಹೊರಟಾಗ, ರೋಡಿನ ಎಡಬಾಗದ ಹೊಲದೊಳಗಿನಿಂದಾ ಒಬ್ಬ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಒಮ್ಮೇಲೆ ರೋಡಿಗೆ ಬಂದವನೇ ಮೃತನು ನಡೆಯಿಸುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದನು. ಅಪಘಾತದಲ್ಲಿ ಪಿಯರ್ಾದಿಗೆ ಎಡಗಾಲ ಮೋಳಕಾಲಿಗೆ ರಕ್ತಗಾಯ, ಬಲಗಾಲ ಹಿಂಬಡಿಗೆ ರಕ್ತಗಾಯವಾಗಿದ್ದು,  ಮೃತನಿಗೆ ಎಡಗಾಲ ತೊಡೆಯ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾನು ಉಪಚಾರಕ್ಕೆಂದು ಹುಣಸಗಿ ಸರಕಾರಿ ದವಾಖಾನೆಗೆ  108 ಅಂಬುಲೇನ್ಸ್ ವಾಹನದಲ್ಲಿ ಬಂದು ಸೇರಿಕೆಯಾಗಿದ್ದು, ಅಪಘಾತ ಮಾಡಿದ ಚಾಲಕನ ಮೇಲೆ ಕಾನೂನ ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ದೂರಿನ ಮೇಲಿಂದಾ ಕ್ರಮ ಜರುಗಿಸಿದೆ.

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 61/2019 ಕಲಂ 87 ಕೆಪಿ ಯ್ಯಾಕ್ಟ:- ದಿನಾಂಕ 05/05/2019 ರಂದು ಆರೋಪಿತರೆಲ್ಲರೂ ಕೂಡಿ ದಿಗ್ಗಿ ಗ್ರಾಮದ ಸಂಗಮೇಶ್ವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಎ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6.15 ಪಿ.ಎಮ್ ಕ್ಕೆ ದಾಳಿ ಮಾಡಿ 05 ಜನ ಆರೋಪಿತರಿಗೆ ಹಿಡಿದು ನಗದು ಹಣ 3300/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 8.10 ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 9.30 ಪಿಎಮ್.ಕ್ಕೆ ಠಾಣೆ ಗುನ್ನೆ ನಂ: 61/2019 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:-76/2019 ಕಲಂ. ಮನುಷ್ಯ ಕಾಣೆಯಾದ ಬಗ್ಗೆ :- ದಿನಾಂಕ 05.05.2019 ರಂದು ಸಮಯ ಮಧ್ಯಾಹ್ನ 3-30 ಗಂಟೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಯಾದಗಿರಿ ಉಪ-ವಿಭಾಗ ಯಾದಗಿರ ರವರ ಕಾರ್ಯಲದಿಂದ ಜ್ಞಾಪನ ಪತ್ರ ಸಂಖ್ಯೆ : 366/ವೈ.ಎಸ್.ಡಿ/2019 ದಿನಾಂಕ 02.05.2019 ನೇದ್ದು ವಸೂಲಾಗಿದ್ದು ಅದರ ಸಾರಾಂಶವೆನೇಂದರೆ  ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣದ ದಾಖಲಿಸಿಕೊಳ್ಳುವ ಕುರಿತು ನೇದ್ದರ ವಿಷಯದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ: 282/2017 ದಿನಾಂಕ 30.11.2017 ನೇದ್ದರ ಉಲ್ಲೇಖಕ್ಕೆ ಸಂಬಂಧಿಸಿದಂತೆ ನಾನು ಶರಣಪ್ಪ ಯು. ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ ಯಾದಗಿರಿ ಈ ಜ್ಞಾಪನ ಪತ್ರದ ಮೂಲಕ ಸೂಚಿಸುವುದೆನೇಂದರೆ, ದಿನಾಂಕ 30.11.2017 ರಂದು 2130 ಗಂಟೆಗೆ ಫಿರ್ಯಾಧಿ ಶ್ರೀಮತಿ ಮಾಣಿಕಮ್ಮ ಗಂಡ ಸೀತ್ಯಾ ಚವ್ಹಾಣ ವಯಾ|| 60 ವರ್ಷ ಜಾತಿ|| ಲಮಾಣಿ ಉ||ಕೂಲಿ ಕೆಲಸ ಸಾ||ಯಲ್ಹೇರಿ ಹಳ್ಳಿ ತಾಂಡಾ ಇವಳು ಗುರುಮಠಕಲ್ ಪೊಲೀಸ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಗುನ್ನೆ ನಂ: 282/2017 ಕಲಂ: 420, 504, 506 ಐಪಿಸಿ ಮತ್ತು ಕಲಂ: (1)(ಆರ್)(ಎಸ್) ಎಸ್.ಸಿ/ ಎಸ್.ಟಿ ಪಿ.ಎ ಆಕ್ಟ್ -1989 & ಕಲಂ: 16 ಜೀತ ಪದ್ದತಿ ನಿಮರ್ೂಲನ ಕಾಯ್ದೆ-1976 ಅಡಿಯಲ್ಲಿ ಗುನ್ನೆ ದಾಖಲಾಗಿದ್ದು ಇರುತ್ತದೆ. ಈ ಕೇಸಿನ ಎಫ್.ಐ.ಆರ್ ಪ್ರತಿಯನ್ನು ಈ ಕೂಡ ಲಗತ್ತಿಡಲಾಗಿದೆ. ನಂತರ ತನಿಖಾ ಕಾಲಕ್ಕೆ ಫಿರ್ಯಾದಿ ಶ್ರೀಮತಿ ಮಾಣಿಕಮ್ಮ ಇವಳು ತನ್ನ ಪುರವಣಿ ಹೇಳಿಕೆಯಲ್ಲಿ ಈ ಪ್ರಕರಣದಲ್ಲಿ ನೊಂದ ತನ್ನ ಮಗನಾದ ಶಂಕರ ತಂದೆ ಸೀತ್ಯಾ ನಾಯಕ ಈತನಿಗೆ ಪತ್ತೆ ಮಾಡಿ ಕೊಡಲು ಹೇಳಿತ್ತಾಳೆ. ಫರ್ಯಾದಿ ಮಾಣಿಕೆಮ್ಮ ಇವಳು ಕೊಟ್ಟ ಪುರವಣಿ ಹೇಳಿಕೆಯ ಪ್ರತಿಯನ್ನು ಈ ಕೂಡ ಲಗತ್ತಿಡಲಾಗಿದೆ. ನಂತರ ಮುಂದೆ ಫಿರ್ಯಾದಿಯ ಪುರವಣಿ ಹೇಳಿಕೆ ಆಧಾರದ ಮೇಲೆ ತನಿಖೆಯಲ್ಲಿ ಕಾಣೆಯಾದ ಶಂಕರ @ ಶಂಕ್ರ್ಯಾ @ ಡೀಕ್ಯಾ ತಂದೆ ಸೀತ್ಯಾ ಚವ್ಹಾಣ ವಯಾ|| 21 ವರ್ಷ ಜಾತಿ|| ಲಮಾಣಿ ಉ||ಕೂಲಿ ಕೆಲಸ ಸಾ||ಯಲ್ಹೇರಿ ಹಳ್ಳಿ ತಾಂಡಾ ತಾ||ಗುರುಮಠಕಲ್ ಜಿ||ಯಾದಗಿರಿ ಈತನ ಪತ್ತೆ ಕಾರ್ಯ ಕುರಿತು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ಯಾಗೂ ಕೂಡ ಇಲ್ಲಿಯವರೆಗೆ ಶಂಕರ ಈತನ ಇರುವಿಕೆಯ ಬಗ್ಗೆ ಯಾವುದೇ ಉಪಯುಕ್ತ ಮಾಹಿತಿ ಸಿಕ್ಕಿರುವಪದಿಲ್ಲಾ. ಈ ಪ್ರಕರಣದಿಂದ ಕಾಣೆಯಾದ ಶಂಕರ ಈತನ ಮಿಸ್ಸಿಂಗ್ ಪ್ರರಕಣ ಬೇರ್ಪಡಿಸುವ ಅವಶ್ಯಕತೆ ಇರುತ್ತದೆ. ಆದರಿಂದ ನೀವು ಕಾಣೆಯಾದ ಶಂಕರ ಈತನ ಬಗ್ಗೆ ನಿಮ್ಮ ಠಾಣೆಯಲ್ಲಿ ಪತ್ಯೇಕವಾಗಿ ಮಿಸ್ಸಿಗ ಕೇಸನ್ನು ದಾಖಲಿಸಿಕೊಂಡು ಪತ್ತೆ ಕಾರ್ಯ ಕೈಕೊಳ್ಳಲು ಆದೇಶಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 76/2019 ಕಲಂ: ಮನುಷ್ಯ ಕಾಣೆಯಾದ ಬಗ್ಗೆ (00 ಒಕ) ಪ್ರಕರಣ ದಾಖಲಿಸಿಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!