ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-05-2019

By blogger on ಶುಕ್ರವಾರ, ಮೇ 3, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-05-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:-71/2019 ಕಲಂ: 341, 323, 354, 504, 506 ಸಂ 149 ಐಪಿಸಿ:-ದಿನಾಂಕ 02.05.2019 ರಂದು ಸಂಜೆ 6:00 ಗಂಟೆಯ ಸುಮಾರಿಗೆ ಎ-1 ಆರೋಪಿತನು ಫಿರ್ಯಾದಿದಾರಳನ್ನು ನೊಡಿ ಏಲೆ ಸೂಳೆ ನಮ್ಮ ಜೊತೆಗೆ ಜಗಳ ಮಾಡಿದ ಹಾಲಗೇರಾ ಬೀಗರಜೊತೆ ಚೊಲೆ ನಕ್ಕಾಂತ-ಆಡಿಕೊಂತ ಇದಿರಿ ಅಂತಾ ಅವಾಚ್ಯವಾಗಿ ಬೈದಿದ್ದಕ್ಕೆ ಫಿರ್ಯಾದಿದಾರಳು ಯಾಕೆ ಬೈಯುತ್ತಿಯಾ ಅಂತಾ ಕೇಳಲು ಹೋದಾಗ ಎ-2 ರಿಂದ ಎ-6 ರವರು ಫಿರ್ಯಾದಿದಾರಳನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದು, ಫಿರ್ಯಾದಿದಾರಳ ಸೀರೆ-ಕುಪ್ಪಸ ಹಿಡಿದು ಎಳೆದಾಡಿ ಹರಿದು ಹಾಕಿ ಮಾನಭಂಗ ಮಾಡಲು ಯತ್ನಿಸಿ, ಕೂದಲು ಹಿಡಿದು ಎಳೆದಾಡಿದ್ದು ಎಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ತಡವಾಗಿ ಆಸ್ಪತ್ರೆಗೆ ದಾಖಲಾಗಿ ನೀಡಿದ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:71/2019 ಕಲಂ: 341, 323, 354, 504, 506 ಸಂ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:-72/2019 ಕಲಂ: 457, 380 ಐಪಿಸಿ:-ದಿನಾಂಕ 10.04.2019 ರಂದು ಸಂಜೆ 6:00 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಜಿಲ್ಲಾ ತರಬೇತಿ ಕೇಂದ್ರದಲ್ಲಿ ತರಬೇತಿ ಇದುದ್ದರಿಂದ ಅಲ್ಲಿಗೆ ಹೋಗುವ ಸಲುವಾಗಿ ಫಿರ್ಯಾದಿಯು ಶಿಕ್ಷಕರ ಕಲಿಕಾ ಕೇಂದ್ರದಲ್ಲಿಯ ಸಾಮಾಗ್ರಿಗಳನ್ನು ನೋಡಿಕೊಂಡು ಕೀಲಿ ಹಾಕಿ ಹೋಗಿದ್ದು ನಂತರ ದಿನಾಂಕ 02.05.2019 ರಂದು ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಫಿರ್ಯಾಧಿಯು ಯಾದಗಿರಿಯ ಜಿಲ್ಲಾ ಸಂಸ್ಥೆಯಲ್ಲಿದ್ದಾಗ ಶ್ರೀ ಶಶಿಕಾಂತ ಜನಾರ್ಧನ ಎಂಬ ಶಿಕ್ಷಕರು ಫಿರ್ಯಾದಿಗೆ ಫೋನ್ ಮಾಡಿ ಗುರುಮಠಕಲ್ ಪಟ್ಟಣದ ಶಿಕ್ಷಕರ ಕಲಿಕಾ ಕೇಂದ್ರದ ಬಾಗಿಲು ಮುರಿದಿದ್ದು ಒಳಗಿನ ಕಂಪ್ಯೂಟರಗೆ ಸಂಬಂದಿಸಿದ ಸಾಮಾಗ್ರಿಗಳು ಚಲ್ಲಾಪಿಲಿಯಾಗಿರುತ್ತವೆ ಅಂತಾ ವಿಷಯ ತಿಳಿಸಿದ್ದು ಕೂಡಲೆ ಫಿರ್ಯಾದಿ ಮತ್ತು ಇತರರು ಬಂದು ನೋಡಿದಾಗ ಗುರುಮಠಕಲ್ ಶಿಕ್ಷಕರ ಕಲಿಕಾ ಕೇಂದ್ರದ ಬಾಗಿಲು ಮುರಿದಿದ್ದು ಇತ್ತು. ನಂತರ ಒಳಗೆ ಹೋಗಿ ನೋಡಿದಾಗ ಕೇಂದ್ರದಲ್ಲಿ ಅಳವಡಿಸಿದ ಕಂಪ್ಯೂಟರಗಳ ಪೈಕಿ ಅಕಗ, ಒಠಟಿಣಜಡಿ, ಏಜಥಿಛಠಡಿಜ, ಚಿಟಿಜ ಒಠಣಜ ನೇದ್ದವುಗಳ ಅ.ಕಿ-10,000/- ರೂ ನೇದ್ದವುಗಳನ್ನು ದಿನಾಂಕ 10.04.2019 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ 02.05.2019 ರಂದು ಬೆಳಿಗ್ಗೆ 5:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಶಿಕ್ಷಕರ ಕಲಿಕಾ ಕೇಂದ್ರದ ಬಾಗಿಲು ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ನಮ್ಮ ಸಂಸ್ಥೆಯ ಮೇಲಾಧಿಕಾರಿಗಳೊಂದಿಗೆ ವಿಷಯವನ್ನು ತಿಳಿಸಿದ ನಂತರ ತಡವಾಗಿ ಇಂದು ದಿನಾಂಕ 03.05.2019 ರಂದು ಗುರುಮಠಕಲ್ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಇರುತ್ತದೆ ಅಂತಾ ನೀಡಿದ ಗಣಕೀಕೃತ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 72/2019 ಕಲಂ: 457, 380 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 45/2019 ಕಲಂ. ,341,323,324,354,504,506 ಸಂ34 ಐಪಿಸಿ:-ದಿನಾಂಕ: 03-05-2019 ರಂದು ಸಾಯಂಕಾಲ 4-00 ಗಂಟೆಗೆ ಪಿಯರ್ಾಧಿದಾರಳಾದ ಫಾತಿಮಾಬೀ ಗಂಡ ತಕೀರ ಅಹ್ಮದ ಕೋತ್ತಪಲ್ಲಿ ವ|| 60 ವರ್ಷ ಜಾ|| ಮುಸ್ಲಿಂ ಉ|| ಕೂಲಿಕೆಲಸ  ಸಾ|| ಚಂದಾಪೂರ ತಾ|| ಜಿ|| ಯಾದಗಿರಿ ಈಕೆಯು ಠಾಣೆಗೆ ಹಾಜರಾಗಿ ನನಗೆ ದಿನಾಂಕ: 01-05-2019 ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ಮನೆಯ ಹತ್ತಿರ ನಮ್ಮ ಜಾಗದಲ್ಲಿ ತಟ್ಟಿ ಕಟ್ಟುತ್ತಿರುವಾಗ ಆರೋಪಿತರು ನನಗೆ ಮತ್ತು ನನ್ನ ಗಂಡನಿಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ನನಗೆ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.45/2019 ಕಲಂ. 341,323,324,354,504,506 ಸಂ 34 ಐಪಿಸಿ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 65/2019  ಕಲಂ 323, 341, 504, 506  ಐ.ಪಿಸಿ:- ದಿನಾಂಕ 03-05-2019 ರಂದು 5 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಬಾಲಮ್ಮಾ ಗಂಡ ನಾಗಪ್ಪಾ ಗಡ್ಡಿಮನಿ ವಯಾ: 24 ಉ: ಹೋಲಮನೆಗೆಲಸ ಜಾ: ಕುರುಬರ ಸಾ: ಹತ್ತಿಕುಣಿ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ನೀಡಿದ್ದು ಅದರ ಸಾರಾಂಶವೆನೆಂದರೆ ನಮ್ಮ  ಗ್ರಾಮದ ಸೀಮಾಂತರದಲ್ಲಿ ನಮ್ಮ ಮಾವನಾದ ಮಲ್ಲಪ್ಪಾ ಮತ್ತು ಇವರ ಖಾಸ ತಮ್ಮನಾದ ಶರಣಪ್ಪಾ ತಂದೆ ನಾಗಪ್ಪಾ ಗಡ್ಡಿಮನಿ ಮತ್ತು ನಮ್ಮ ಇಬ್ಬರ ಹೋಲಗಳು ಅಕ್ಕಪಕ್ಕದಲ್ಲಿರುತ್ತವೆ. ನಮ್ಮ ಸಣ್ಣ ಮಾವ ಶರಣಪ್ಪಾ ಇತನು ಹೋದ ವರ್ಷ ಬೇಸಿಗೆ ಸಮಯದಲ್ಲಿ ಸುಮ್ಮನೇ ನಮ್ಮ ಹೋಲಗಳ ಮಧ್ಯ ಇರುವ ಡ್ವಾಣ ನಾವು ಹೊಡೆದುಕೊಂಡಿದ್ದೆವೆ ಅಂತಾ ನಮ್ಮ ಸಂಗಡ ತಕರಾರು ಮಾಡಿಕೊಂಡಿದ್ದರು ಆಗ ನಾಲ್ಕು ಜನ ಹಿರಿಯರು ಅವರಿಗೆ ಬುದ್ದಿವಾದ ಹೇಳಿದ್ದರು. ದಿನಾಂಕ 02-05-2019 ರಂದು ಮಧ್ಯಾಹ್ನ ಸುಮಾರಿಗೆ ನಾನು ಹಾಗೂ ನನ್ನ ಗಂಡ ಹಾಗೂ ನಮ್ಮ ಮಾವನಾದ ಮಲ್ಲಪ್ಪಾ ತಂದೆ ನಾಗಪ್ಪಾ ಗಡ್ಡಿಮನಿ ನನ್ನ ಅತ್ತೆಯಾದ ಕಾಳಮ್ಮಾ ಮತ್ತು ನಾದಿನಿಯಾದ ಶಾಂತಮ್ಮಾ ಹಾಗೂ ಮೈದುನ ಮಹಾದೇವಪ್ಪಾ ಎಲ್ಲರೂ ನಮ್ಮ ಹೋಲದಲ್ಲಿ ಕೆಲಸ ಮಾಡುತ್ತಿದ್ದೆವು. ಮತ್ತು ನಮ್ಮ ಹೋಲದಲ್ಲಿ ಟ್ರ್ಯಾಕ್ಟರದಿಂದ ಲೇವೆಲ್ ಮಾಡಿಸುತಿದ್ದೆವು. ಹೋಲ ಲೇವೆಲ್ ಮಾಡಿಸುತ್ತಾ ನಮ್ಮ ಹೋಲದ ಡ್ವಾಣದ ಹತ್ತಿರ ಟ್ರ್ಯಾಕ್ಟರ ಹೋದಾಗ ಅದೇ ವೇಳೆಗೆ ನಮ್ಮ ಸಣ್ಣ ಮಾವನಾದ ಶರಣಪ್ಪಾ ಇತನು ಡ್ವಾಣದ ಮೇಲೆ ಬಂದು ಡ್ವಾಣ ಹಾಳಾಗುತ್ತದೆ ಇಲ್ಲಿ ಹೊಡೆಯಬೇಡಿರಿ ಅಂತಾ ಬಾಯಿ ಮಾಡುತ್ತಾ ಬಂದನು. ಆಗ ನಾವು ಆತನಿಗೆ ಡ್ವಾಣದ ಮೇಲೆ ಹೊಡೆಯುವುದಿಲ್ಲಾ ನಮ್ಮ ಹೊಲದಲ್ಲಿ ಹೊಡೆದುಕೊಳ್ಳುತ್ತಿದ್ದೆವೆ ಅಂತಾ ಅವನಿಗೆ ಹೇಳಿ ನನ್ನ ಮಾವ ಮಲ್ಲಪ್ಪಾ ಹಾಗೂ ನನ್ನ ಗಂಡ ಇಬ್ಬರೂ ಅವನಿಗೆ ಸಮಾಧಾನಪಡಿಸಿ ಹೇಳಿ ಡ್ವಾಣದ ಮೇಲಿಂದ ಬರಬೇಕೆನ್ನುವಷ್ಟರಲ್ಲಿ ಶರಣಪ್ಪಾ ಇತನು ನನ್ನ ಮಾವ ಮಲ್ಲಪ್ಪಾ ಹಾಗೂ ನನ್ನ ಗಂಡನಿಗೆ ಅಡ್ಡಗಟ್ಟಿ ಅವರಿಗೆ ಭೋಸಡಿ ಮಕ್ಕಳೆ ನೀವು ಈ ಮೊದಲಿನಿಂದಲೂ ನಮಗೆ ತೊಂದರೆ ಕೊಡುತ್ತಾ ಬಂದಿದ್ದಿರಿ ಅಂತಾ ಬೈಯ್ಯುತ್ತಾ  ಇವತ್ತು ನಿಮಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ಅಂದವನೇ ಅವರಲ್ಲಿ ಶರಣಪ್ಪಾ ಇತನು ನನ್ನ ಗಂಡನಿಗೆ ಜೋರಾಗಿ ಬೆನ್ನಿಗೆ ಒದ್ದಾಗ ಅವನು ಕೆಳಗೆ ಬಿದ್ದನು ಆಗ ಅವನ ಬಲಮೊಳಕಾಲಿಗೆ ತರಚಿದ ಗಾಯವಾಯಿತು. ಆಗ ನನ್ನ ಮಾವ ಬಿಡಿಸಲು ಹೋದಾಗ ಅವನಿಗೂ ಶರಣಪ್ಪನೂ ಕೈಯಿಂದ ಕಪಾಳಕ್ಕೆ ಮತ್ತು ಹೊಟ್ಟೆಗೆ ಹೊಡೆದನು. ಆಗ ನಾವು ಒದರಾಡುವುದು ಮತ್ತು ಚೀರಾಡುವುದು ಮಾಡುತ್ತಿದ್ದಾಗ ನಮ್ಮ ಹೋಲದ ಪಕ್ಕದ ಹೋಲದವರಾದ ಸಾಬಣ್ಣಾ ತಂದೆ ಬೀಮರಾಯ ಚಟಾಕಿ ಹಾಗೂ ಸಣ್ಣದೇವಪ್ಪಾ ತಂದೆ ನರಸಪ್ಪಾ ಓರಂಚಾ ಇಬ್ಬರೂ ಮತ್ತು ನಾವು ಎಲ್ಲರೂ ಕೂಡಿ ಹೊಡೆಯುವುದನ್ನು ಬಿಡಿಸಿಕೊಂಡಾಗ ಅವರು ಇನ್ನೊಮ್ಮೆ ಸಿಗು ಸೂಳೆ ಮಗನೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿ ಹೋದರು. ಈ ರೀತಿಯಾಗಿ ನಮ್ಮ ಮಾವನಿಗೆ ಹಾಗೂ ನನ್ನ ಗಂಡನಿಗೆ ಅಡ್ಡಗಟ್ಟಿ ತಡೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡಿ ಮಾಡಿದ ಶರಣಪ್ಪಾ ತಂದೆ ನಾಗಪ್ಪಾ ಗಡ್ಡಿಮನಿ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 65/2019 ಕಲಂ 323, 341, 504, 506  ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 44/2019 ಕಲಂ 379 ಐಪಿಸಿ.:-ದಿನಾಂಕ; 03/05/2019 ರಂದು 6-30 ಎಎಮ್ ಕ್ಕೆ ಶ್ರೀ ಬಾಪುಗೌಡ ಪಾಟೀಲ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಂದು  ವರದಿಯನ್ನು ಒಪ್ಪಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ. 03/05/2019 ರಂದು  ನಾನು ಬೆಳೆಗ್ಗೆ 5-45 ಗಂಟೆಗೆ ವಾರದ ಕವಾಯತ್ತಿಗೆ ಹೋಗುವ ಕುರಿತು  ಯಾದಗಿರಿ ನಗರ ಪೊಲೀಸ ಠಾಣೆಗೆ ಬಂದು ವಾರದ ಕವಾಯತ್ತು ಪರೆಡ್ ಮೈದಾನಕ್ಕೆ ಹೋಗುವ ಕುರಿತು ಠಾಣೆಯಿಂದ  ಸಕರ್ಾರಿ ಜೀಪ್ ನಂಬರ ಕೆಎ-33, ಜಿ-0075 ನೆದ್ದರಲ್ಲಿ ಜೀಪ್ ಚಾಲಕ ಜಗದೀಶ ಪಿಸಿ.388, ಮತ್ತು ಈರಪ್ಪ ಪಿಸಿ-386 ರವರು ಕೂಡಿಕೊಂಡು ಹತ್ತಿಕುಣಿ ಕ್ರಾಸ ಕಡೆಗೆ ಹೋಗುತ್ತಿರುವಾಗ ಕ್ರಾಸಿನಲ್ಲಿ ರೋಡಿನ ಮೇಲೆ ನಮ್ಮ ಎದುರುಗಡೆ ಗಂಗಾನಗರ ರೋಡಿನ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬರುತ್ತಿದ್ದು 6-10 ಎಎಂ ಸುಮಾರಿಗೆ ಕೈ ಮಾಡಿ ನಿಲ್ಲಿಸಿದ್ದು ಚಾಲಕನು ಟಿಪ್ಪರನ್ನು ನಿಲ್ಲಿಸಿದಾಗ ಸಿಬ್ಬಂದಿಯವರ ಸಹಾಯದಿಂದ ಕೂಡಲೇ ಟಿಪ್ಪರ ಚಾಲಕನನ್ನು ಹಿಡಿದುಕೊಂಡು ವಿಚಾರಿಸಲಾಗಿ ತನ್ನ ಹೆಸರು ಲಕ್ಷ್ಮಣ ತಂದೆ ಪಾಂಡು ಚವ್ಹಾಣ ವ;50 ಜಾ; ಲಂಬಾಣಿ ಉ; ಟಿಪ್ಪರ ಚಾಲಕ ಸಾ; ಧಮರ್ಾನಾಯಕ ತಾಂಡಾ ನಾಲವಾರ ಸ್ಟೇಷನ ತಾ; ಚಿತ್ತಾಪೂರ ಜಿ; ಕಲಬುರಗಿ ಅಂತಾ ತಿಳಿಸಿದ್ದು, ತಾನು ಟಿಪ್ಪರ ನಂ.ಎಂಎಚ್.05-ಡಿಕೆ-3410 ನೇದ್ದರಲ್ಲಿ ಚಾಲಕ ಅಂತಾ ಕೆಲಸ ಮಾಡುತ್ತೇನೆ ಅಂತಾ ತಿಳಿಸಿದಾಗ, ನಾವು ಸದರಿ ಟಿಪ್ಪರನ್ನು ನೋಡಲಾಗಿ ಟಿಪ್ಪರದಲ್ಲಿ ಮರಳು ತುಂಬಿದ್ದು ಚಾಲಕನಿಗೆ ಮರಳನ್ನು ತುಂಬಿದ ಬಗ್ಗೆ ವಿಚಾರಿಸಲು ನಾನು ಮತ್ತು ಟಿಪ್ಪರ ಮಾಲೀಕರು ಕೂಡಿಕೊಂಡು ಮರಳನ್ನು ಅಕ್ರಮವಾಗಿ ಕದ್ದು ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತೇವೆ. ಇದಕ್ಕೆ ಯಾವುದೇ ಸಕರ್ಾರದ ಪರವಾನಿಗೆಯಾಗಲೀ, ರಾಯಲ್ಟಿಯಾಗಲೀ, ಇರುವುದಿಲ್ಲಾ ಅಂತಾ ತಿಳಿಸಿದನು. ಸದರಿ ಟಿಪ್ಪರ ಚಾಲಕ ಹಾಗೂ ಮಾಲೀಕರು ಕೂಡಿಕೊಂಡು ಮರಳನ್ನು ಕದ್ದು ಸಾಗಿಸುತ್ತಿದ್ದ ಬಗ್ಗೆ ಖಾತ್ರಿಯಾಯಿತು. ನಂತರ ಮರಳು ತುಂಬಿದ ಟಿಪ್ಪರ್ನ್ನು ನಮ್ಮ ವಶಕ್ಕೆ ಪಡೆದುಕೊಂಡಿದ್ದು ಸದರಿ ಟಿಪ್ಪರ್ ನಂ.ಎಂಎಚ್.05-ಡಿಕೆ-3410 ನೇದ್ದನ್ನು ಚಾಲಕನೊಂದಿಗೆ ಮುಂದಿನ ಕ್ರಮಕ್ಕಾಗಿ ಸಿಬ್ಬಂದಿಯವರ ಸಹಾಯದಿಂದ ಟಿಪ್ಪರ ಸಮೇತ ಠಾಣೆಗೆ ಬಂದು ವರದಿಯನ್ನು ಠಾಣೆಯ ಗಣಕಯಂತ್ರದಲ್ಲಿ ತಯ್ಯಾರಿಸಿ ಪ್ರೀಂಟ ತೆಗೆದು ನಾನು ಸಹಿ ಮಾಡಿದ ವರದಿಯನ್ನು 6-30 ಎಎಂಕ್ಕೆ ಎಸ್.ಎಚ್.ಓ ರವರಿಗೆೆ ಒಪ್ಪಿಸಿದ್ದು ಟಿಪ್ಪರ ಚಾಲಕ ಹಾಗೂ ಮಾಲೀಕರ ಮೇಲೆ ಮುಂದಿನ ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 44/2019 ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 31/2019 87  ಕೆ.ಪಿ ಯಾಕ್ಟ:- ದಿನಾಂಕ:02/05/2019 ರಂದು 17.00 ಗಂಟೆಯ ಸುಮಾರಿಗೆ ಆರೋಪಿತರು   ವಜ್ಜಲ ಗ್ರಾಮದ ಹಳೆಯ ಗೋಡಾವನ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪರಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಭದ ಇಸ್ಲೀಟ್ ಜೂಜಾಟವನ್ನು ಆಡುತ್ತಿದ್ದಾಗ ಸಿಬ್ಬಂದಿಯವರಾದ ಪಿಸಿ-233, 292, 288, 248 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತರಿಂದ 5490=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!