ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-05-2019
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 64/2019 ಕಲಂ 147, 148, 323, 324, 326, 504, 506 ಸಂ: 149 ಐ.ಪಿಸಿ:- ದಿನಾಂಕ 02-05-2019 ರಂದು 3-30 ಪಿ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ಶರಣಪ್ಪಾ ತಂದೆ ನಾಗಪ್ಪಾ ಗಡ್ಡಿಮನಿ ವಯಾ:60 ಉ:ಒಕ್ಕಲುತನ ಜಾ: ಕುರುಬರ ಸಾ: ಹತ್ತಿಕುಣಿ ತಾ:ಜಿ: ಯಾದಗಿರಿ ಇವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ಗ್ರಾಮದ ಸೀಮಾಂತರದಲ್ಲಿ ನನ್ನ ಖಾಸ ಅಣ್ಣನಾದ ಮಲ್ಲಪ್ಪಾ ತಂದೆ ನಾಗಪ್ಪಾ ಗಡ್ಡಿಮನಿ ಮತ್ತು ನನ್ನ ಇಬ್ಬರ ಹೋಲಗಳು ಅಕ್ಕಪಕ್ಕದಲ್ಲಿರುತ್ತವೆ. ನನ್ನ ಅಣ್ಣನು ಹೋದ ವರ್ಷ ಬೇಸಿಗೆ ಸಮಯದಲ್ಲಿ ಹೋಲ ಸಾಗುವಳಿ ಮಾಡುವ ಸಮಯದಲ್ಲಿ ನಮ್ಮ ಮಧ್ಯದಲ್ಲಿದ್ದು ಡ್ವಾಣ ಹೊಡೆದುಕೊಂಡಿದ್ದರಿಂದ ನಾವು ಆತನಿಗೆ ಕೇಳಿದರೇ ಅವನು ಮತ್ತು ಅವನ ಮಕ್ಕಳು ನನ್ನ ಜೋತೆ ತಕರಾರು ಮಾಡಿಕೊಂಡಿದ್ದರು ಆಗ ನಾಲ್ಕು ಜನ ಹಿರಿಯರು ಅವರಿಗೆ ಬುದ್ದಿವಾದ ಹೇಳಿದ್ದರು.ದಿನಾಂಕ 02-05-2019 ರಂದು ಮಧ್ಯಾಹ್ನ ಸುಮಾರಿಗೆ ನಾನು ಹಾಗೂ ನಮ್ಮ ಅಣ್ಣತಮಕಿಯ ದೊಡ್ಡಪ್ಪಾ ತಂದೆ ಕಾಡಪ್ಪಾ ಗಡ್ಡಿಮನಿ ಇಬ್ಬರೂ ನಮ್ಮ ಹೋಲಕ್ಕೆ ಸಜ್ಜೆಯ ಬೇಳೆಯನ್ನು ನೋಡಿಕೊಂಡು ಬರುವ ಸಲುವಾಗಿ ಹೋಗಿದ್ದೆವು. ಆಗ ನಮ್ಮ ಅಣ್ಣನಾದ 1) ಮಲ್ಲಪ್ಪಾ ತಂದೆ ನಾಗಪ್ಪಾ ಗಡ್ಡಿಮನಿ ಇತನು ಹಾಗೂ ಆತನ ಮಕ್ಕಳಾದ 2) ನಾಗಪ್ಪಾ ತಂದೆ ಮಲ್ಲಪ್ಪಾ 3) ಮಹಾದೇವಪ್ಪಾ ತಂದೆ ಮಲ್ಲಪ್ಪಾ 4)ಶಾಂತಮ್ಮಾ ತಂದೆ ಮಲ್ಲಪ್ಪಾ ಹಾಗೂ ಹೆಂಡತಿಯಾದ 5) ಕಾಳಮ್ಮಾ ಗಂಡ ಮಲ್ಲಪ್ಪಾ ಇವರೆಲ್ಲರೂ ತಮ್ಮ ಹೋಲದಲ್ಲಿ ಕೆಲಸ ಮಾಡುತ್ತಿದ್ದರು. ಮತ್ತು ತಮ್ಮ ಹೋಲದಲ್ಲಿ ಟ್ರ್ಯಾಕ್ಟರದಿಂದ ಹೋಲ ಲೇವೆಲ್ ಮಾಡಿಸುತ್ತಿದ್ದರು. ಹೋಲ ಲೇವೆಲೆ ಮಾಡಿಸುತ್ತಾ ಹೋದ ವರ್ಷದಂತೆ ಮತ್ತೆ ಟ್ರ್ಯಾಕ್ಟರದಿಂದ ಡ್ವಾಣವನ್ನು ಹೊಡೆಯುತ್ತಿದ್ದರು. ಆಗ ನಾನು ಮ್ಯಾರಿಯ ಮೇಲೆ ಹೋಗಿ ಡ್ವಾಣ ಹಾಳಾಗುತ್ತದೆ ಇಲ್ಲಿ ಹೊಡೆಯಬೇಡಿರಿ ಅಂತಾ ಅವರಿಗೆ ಹೇಳಿದಾಗ ಅವರೆಲ್ಲರೂ ಆಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದವರೇ ನನಗೆ ಭೋಸಡಿ ಮಗನೇ ನಿನ್ನಿಂದ ನಮಗೆ ಸಾಕಾಗಿ ಹೋಗಿದೆ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ಅಂದವರೇ ಅವರಲ್ಲಿ ಮಲ್ಲಪ್ಪಾ ತಂದೆ ನಾಗಪ್ಪಾ ಗಡ್ಡಿಮನಿ ಇತನು ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನ್ನೆ ಎಡಗಡೆ ಪಕ್ಕೆಗೆ ಮತ್ತು ಎಡಟೊಂಕಕ್ಕೆ ಹೊಡೆದು ಭಾರಿ ಗುಪ್ತಗಾಯ ಮಾಡಿದನು. ಮತ್ತು ಮಲ್ಲಪ್ಪನು ಅಲ್ಲಿಯೇ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಹಣೆಯ ಮೇಲೆ ಹೊಡೆದು ಭಾರಿ ರಕ್ತಗಾ ಮಾಡಿದನು. ಮಹಾದೇವಪ್ಪನು ಇನ್ನೊಂದು ಕಲ್ಲು ತೆಗೆದುಕೊಂಡು ನನ್ನ ಮೂಗಿನ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಆಗ ನಾನು ಸತ್ತೆನೆಪ್ಪಾ ಅಂತಾ ನೆಲಕ್ಕೆ ಬಿದ್ದಾಗ ಕಾಳಮ್ಮಾ ಗಂಡ ಮಲ್ಲಪ್ಪಾ ಹಾಗೂ ಶಾಂತಮ್ಮಾ ತಂದೆ ಮಲ್ಲಪ್ಪಾ ಇವರಿಬ್ಬರೂ ನನ್ನ ತೊರಡು ಬೀಜವನ್ನು ಬಿಗಿಯಾಗಿ ಹಿಡಿದುಕೊಂಡರು, ಅಲ್ಲದೇ ಎಲ್ಲರೂ ಕೂಡಿ ನನಗೆ ಮನಬಂದಂತೆ ಕೈಯಿಂದ ಹೊಡೆದು ಕಾಲಿನಿಂದ ಒದ್ದರು. ಆಗ ಚೀರಾಡುತ್ತಿದ್ದಾಗ ನನ್ನ ಜೋತೆಯಲ್ಲಿದ್ದ ದೊಡ್ಡಪ್ಪಾ ತಂದೆ ಕಾಡಪ್ಪಾ ಗಡ್ಡಿಮನಿ ಹಾಗೂ ಪಕ್ಕದ ಹೋಲದವರಾದ ಹಣಮಂತ ತಂದೆ ತಿಮ್ಮಯ್ಯಾ ಓರುಂಚಾ, ಸಿದ್ರಾಮ ತಂದೆ ಮರೆಪ್ಪಾ ಓರುಂಚಾ ಸಾ; ಎಲ್ಲರೂ ಹತ್ತಿಕುಣಿ ಮತ್ತು ಟ್ರ್ಯಾಕ್ಟರ ಚಾಲಕನಾದ ವಿಜಯ ತಂದೆ ಸುರಜಾ ನಾಯಕ ಸಾ; ರಾಮುನಾಯಕ ತಾಂಡಾ ಇವರೆಲ್ಲರೂ ಬಂದು ನನಗೆ ಹೋಡೆಯುವುದನ್ನು ನೋಡಿ ಬಿಡಿಸಿಕೊಂಡು ಅವರಿಗೆ ಸಮುಜಾಯಿಸಿ ಕಳಿಸುತ್ತಿದ್ದಾಗ ಅವರು ನನಗೆ ಇನ್ನೊಮ್ಮೆ ಸಿಗು ಸೂಳೆ ಮಗನೇ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಭಯ ಹಾಕಿದರು. ನಂತರ ನಾನು ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಈ ರೀತಿಯಾಗಿ ಮೇಲ್ಕಂಡವರು ಆಕ್ರಮಕೂಟ ಕಟ್ಟಿಕೊಂಡು ನನಗೆ ಕಲ್ಲು ಬಡಿಗೆಯಿಂದ ಹೊಡೆಬಡಿ ಮಾಡಿ ಭಾರಿ ಗಾಯಗೊಳಿಸಿ ಜೀವದ ಭಯ ಹಾಕಿದ ಮೇಲ್ಕಂಡ 5 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ 4-30 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 64/2019 ಕಲಂ 147, 148, 323, 324, 326, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 70/2019 ಕಲಂ. ಮನುಷ್ಯ ಕಾಣೆಯಾದ ಬಗ್ಗೆ :- ದಿನಾಂಕ 28.04.2019 ರಂದು ಬೆಳೀಗ್ಗೆ 10:30 ಗಂಟೆಯ ಸುಮಾರಿಗೆ ಕಾಣೆಯಾದ ವ್ಯಕ್ತಿಗೆ ಪೀಡ್ಸ್ ಕಾಯಿಲೆ ಇದ್ದುದ್ದರಿಂದ ಆತನ ಹೆಂಡತಿಯಾದ ಫಿರ್ಯಾದಿದಾರಳು ಕಾಣೆಯಾದ ವ್ಯಕ್ತಿಯನ್ನ ತೋರಿಸಿಕೊಂಡು ಬರಲು ಗುರುಮಠಕಲ್ ಪಟ್ಟಣದ ಮೇತ್ರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ತೋರಿಸಿದ ನಂತರ ಮೇಡಿಕಲಗೆ ಹೊಗಿ ಮಾತ್ರೆ ತೆಗೆದುಕೊಂಡು ಬರುವಾಗ ಕಾಣೆಯಾದ ವ್ಯಕ್ತಿಯು ಕಾಲುಮಡಿದು ಬರುವುದಾಗಿ ಹೇಳಿ ಹೋದವನು ಮರಳಿ ಬಾರದೇ ಇರುವುದರಿಂದ ಫಿರ್ಯಾದಿದಾರಳು ಎಲ್ಲಾ ಕಡೆಗೆ ಹುಡುಕಿದರು ಸಿಗದೇ ಇರುವುದರಿಂದ ಇಂದು ದಿನಾಂಕ 02.05.2019 ರಂದು ಠಾಣೆಗೆ ಬಂದು ತನ್ನ ಗಂಡ ಕಾಣೆಯಾದ ಬಗ್ಗೆ ದೂರು ನೀಡಿದ್ದು ಫಿರ್ಯಾದಿಯ ಬಾಯಿ ಮಾತಿನ ಹೇಳಿಕೆ ದೂರು ಸಾರಾಂಶದ ಮೇಲಿಂದ ಗುನ್ನೆ ನಂ. 70/2019 ಕಲಂ. ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 43/2019 ಕಲಂ. 143.147.148.341,323,324,,504,506 ಸಂಗಡ 149 ಐಪಿಸಿ:-ದಿನಾಂಕ: 02-04-2019 ರಂದು ಮದ್ಯಾಹ್ನ 02-30 ಗಂಟೆಗೆ ಪಿಯರ್ಾಧಿದಾರನಾದ ಬಸವರಾಜ ತಂದೆ ಹಣಮಂತರಾವ್ ಬಳಿಚಕ್ರ ವ|| 40 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಆನೂರ (ಬಿ) ತಾ|| ಜಿ|| ಯಾದಗಿರಿ ಇತನು ಠಾಣೆಗೆ ಹಾಜರಾಗಿ ನನಗೆ ದಿನಾಂಕ: 30-04-2019 ರಂದು ಸಾಯಂಕಾಲ 04-00 ಗಂಟೆಗೆ ಆನೂರ (ಬಿ) ಗ್ರಾಮದ ಅಗಸಿ ಹತ್ತಿರ ಆರೋಪಿತರೆಲ್ಲರು ಸೇರಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮಾಡಿ ಅಡ್ಡ ಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.43/2019 ಕಲಂ.143,147,148,341,323,324,504,506 ಸಂಗಡ 149 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 44/2019 ಕಲಂ. ,323,354,504,506 149 ಐಪಿಸಿ:-ದಿನಾಂಕ: 02-04-2019 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರಳಾದ ತಾಯಮ್ಮ ಗಂಡ ಮಲ್ಲಪ್ಪ ಬಳಿಚಕ್ರ ವ|| 45 ವರ್ಷ ಜಾ|| ಕಬ್ಬಲಿಗ ಉ|| ಹೊಲಮನೆಕೆಲಸ ಸಾ|| ಆನೂರ (ಬಿ) ತಾ|| ಜಿ|| ಯಾದಗಿರಿ ಈಕೆಯು ಠಾಣೆಗೆ ಹಾಜರಾಗಿ ನನಗೆ ದಿನಾಂಕ: 30-04-2019 ರಂದು ಸಾಯಂಕಾಲ 04-00 ಗಂಟೆಗೆ ಆನೂರ (ಬಿ) ಗ್ರಾಮದ ಅಗಸಿ ಹತ್ತಿರ ಆರೋಪಿತನು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಅವಮಾನ ಮಾಡಿ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.44/2019 ಕಲಂ. 323,354,504,506 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 48/2019 ಕಲಂ: 279, 338,283 ಐಪಿಸಿ 187 ಐ.ಎಂ.ವ್ಹಿ ಆಕ್ಟ್:- ದಿನಾಂಕ: 02/04/2019 ರಂದು 7.10 ಪಿಎಂ ಕ್ಕೆ ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಯಿಂದ ಇಂದು ಎಂ.ಎಲ್.ಸಿ ಹೇಳಿಕೆ ಪಡೆದುಕೊಂಡು ಬಂದು ಹಾಜರ ಪಡಿಸಿದ ಅಜರ್ಿಯ ಸಾರಂಶ ವೆನಂದರೆ, ಪಿಯರ್ಾದಿ ನಾನು ಅಯ್ಯಪ್ಪ ತಂದೆ ಗೋಪಣ್ಣ ಯರೆಣ್ಣೆನವರ ವ:38 ಉ: ಕುರಿ ಕಾಯುವದು ಜಾ: ಯಾದವ ಗೋಲ್ಲ ಸಾ: ರಸ್ತಾಪೂರ ತಾ: ಶಹಾಪೂರ ಜಿ: ಯಾದಗಿರಿ ನಾನು ಮೇಲಿನ ವಿಳಾಸದ ನಿವಾಸಿತನಿದ್ದು ಕುರಿ ಕಾಯುತ್ತಾ ಹೆಂಡತಿ ಮಕ್ಕಳ ಜೋತೆಯಲ್ಲಿ ಉಪಜೀವಿಸುತ್ತಿದ್ದು, ನನಗೆ ಒಬ್ಬಳು ಹೆಣ್ಣು ಮಗಳು, ಇಬ್ಬರು ಗಂಡು ಮಕ್ಕಳು ಇರುತ್ತಾರೆ. ಅರಳಳ್ಳಿ ಗ್ರಾಮದಲ್ಲಿ ಕುರಿಗಳನ್ನು ನಿಲ್ಲಿಸಿಕೊಂಡಿದ್ದು, ಕುರಿಗಳಿಗೆ ಮೇವು ನೊಡಿಕೊಂಡು ಬಂದರಾಯಿತು ಅಂತಾ ದಿನಾಂಕ 01/05/2019 ರಂದು ಬೆಳಿಗ್ಗೆ 08.00 ಗಂಟೆಗೆ ನಾನು ಮತ್ತು ನಮ್ಮ ಸಂಬಂದಿಕ ಮಲ್ಲಪ್ಪ ತಂದೆ ಹೊನ್ನಪ್ಪ ಹೊಟ್ಟೆನೋರ ಸಾ: ರತ್ತಾಳ ತಾ: ಸುರಪೂರ ಇಬ್ಬರು ಕೂಡಿ ಆಲ್ದಾಳ ಗ್ರಾಮಕ್ಕೆ ಹೋಗಿದ್ದೇವು, ಮರಳಿ ಬರುವಾಗ ವನದುಗರ್ಾಕ್ಕೆ ಬಂದು ಅಲ್ಲಿಂದ ವನದುಗರ್ಾ ದಿಂದ ಶಹಾಪೂರಕ್ಕೆ ಹೊಗುತ್ತಿದ್ದ ಅಟೋ ನಂ: ಕೆಎ-33 -8013 ನೇದ್ದರಲ್ಲಿ ಕುಳಿತು ಹೊರಟೆವು, ಸದರಿ ಅಟೋವನ್ನು ಸಿದ್ದಪ್ಪ ತಂದೆ ಬಸ್ಸಣ್ಣ ಮಡ್ಡಿ ಸಾ: ಚನ್ನೂರ ಈತನು ನಡೆಸುತ್ತಿದ್ದನು. ಅಟೊದಲ್ಲಿ ಬರುತ್ತಿದ್ದಾಗ ಸದರಿ ಅಟೊ ಚಾಲಕ ತನ್ನ ಅಟೋವನ್ನು ಅತೀವೇಗ ದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದನು, ಆಗ ನಾನು ನಿಧಾನವಾಗಿ ನಡೆಸು ಅಂತಾ ಹೇಳಿದರು ಕೇಳದೆ ಹಾಗೇಯೆ ಅತೀವೇಗವಾಗಿ ನಡೆಸಿಕೊಂಡು ಹೋಗುತ್ತಿದ್ದ, ಆಗ ಅಂದಾಜು ಸಮಯ 11.30 ಎಎಂ ಸುಮಾರಿಗೆ ಗೋಗಿ ಹತ್ತಿರ ಇರುವ ಡಾಂಬರ ಪ್ಲಾಂಟ ಹತ್ತಿರ ರೋಡಿನಲ್ಲಿ ಹೊಗುತ್ತಿದ್ದಾಗ ಎದಿರುಗಡೆಯಿಂದ ಒಂದು ಟ್ರ್ಯಾಕ್ಟರ ನೇದ್ದರ ಚಾಲಕ ತನ್ನ ಟ್ರ್ಯಾಕ್ಟರದ ಟ್ರಾಯಿಲಿಯಲ್ಲಿ ಲೈಟಿನ ಕಂಬಗಳನ್ನು ಹಾಕಿಕೊಂಡು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟ್ರ್ಯಾಕ್ಟರ ಟ್ರಾಯಲಿಯಲ್ಲಿನ ಲೈಟಿನ ಕಂಬಗಳಿಂದ ಅಟೋಕ್ಕೆ ತಾಗಿಸಿದ್ದು, ಅದರಿಂದ ಅಟೋ ಪಲ್ಟಿಯಾಗಿದ್ದು ಅದರಲ್ಲಿದ್ದ ನಾನು ಕೆಳಗೆ ಬಿದ್ದಿದ್ದು, ನನ್ನ ಎಡಗಾಲಿನ ಮೋಳಕಾಲಿನ ಮೇಲೆ ಅಟೋ ಬಿದ್ದು ಭಾರಿ ಗುಪ್ತಗಾಯ ಆಗಿದ್ದು ಎಲಬು ಮುರಿದಿರುತ್ತದೆ. ಟೊಂಕಕ್ಕೆ ಮತ್ತು ಗುಪ್ತಾಂಗಕ್ಕೆ ಗುಪ್ತ ಪೆಟ್ಟಾಗಿದ್ದು, ಎಡಗಾಲಿನ ಮೋಳಕಾಲಿನ ಕೆಳಗೆ ರಕ್ತಗಾಯ ಆಗಿರುತ್ತದೆ. ಉಳಿದವರಿಗೆ ಏನು ಆಗಿರುವದಿಲ್ಲ. ಆಗ ನನ್ನ ಜೋತೆಯಲ್ಲಿ ಇದ್ದ ಮಲ್ಲಪ್ಪ ತಂದೆ ಹೊನ್ನಪ್ಪ ಹೊಟ್ಟೆನೋರ ಸಾ: ರತ್ತಾಳ ತಾ: ಸುರಪೂರ ಮತ್ತು ಅಟೋ ಚಾಲಕ ನನಗೆ ಎತ್ತಿ ಕೂಡಿಸಿದರು. ನಮಗೆ ಅಪಘಾತ ಮಾಡಿದ ಟ್ರ್ಯಾಕ್ಟರ ನಂಬರ ನೋಡಲಾಗಿ ನಂ: ಕೆಎ-33-ಟಿಎ-7789 ಅಂತಾ ಇದ್ದಿತು. ಅದರ ಚಾಲಕನ ಹೆಸರು ವಿಚಾರಿಸಲಾಗಿ ಭೀಮಣ್ಣ ತಾಯಿ ಮಹಾಂತಮ್ಮ ದೋಡ್ಮನಿ ಸಾ: ಕಕ್ಕಸಗೇರಾ ಅಂತಾ ಗೋತ್ತಾಯಿತು. ಸದರಿಯವನು ಅಪಘಾತ ಮಾಡಿದ ನಂತರ ಜನರು ಬರುವದು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಆಗ ಅಪಘಾತ ಸುದ್ದಿ ನಮ್ಮ ಅಳಿಯ ಹೊನ್ನಪ್ಪ ತಂದೆ ನಿಂಗಪ್ಪ ದೇವಿಕೇರಿ ಇವರಿಗೆ ಯಾರೋ ಪೋನ ಮಾಡಿ ತಿಳಿಸಿದ್ದು, ನಮ್ಮ ಅಳಿಯ ಹೊನ್ನಪ್ಪ ಬಂದ ನಂತರ ನನಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಗೆ ತಂದು ಸೇರಿಕೆಮಾಡಿದ್ದು ಇರುತ್ತದೆ, ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಅಪಘಾತ ಪಡಿಸಿದ ಎರಡು ವಾಹನಗಳ ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 48/2019 ಕಲಂ:279,338,283 ಐಪಿಸಿ 187 ಐ ಎಂ.ವ್ಹಿ ಆಕ್ಡ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 49/2019ಕಲಂ: 279, 338 ಐಪಿಸಿ:-ದಿನಾಂಕ: 02/05/2019 ರಂದು ಶ್ರೀ ಶರಬಣ್ಣ ಹೆಚ್.ಸಿ-69 ರವರು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಆರ್.ಟಿ.ಎ ಎಂ.ಎಲ್.ಸಿ ಮೇಲಿಂದ ಪಿಯರ್ಾದಿ ಶ್ರೀಮತಿ. ಭೀಮಬಾಯಿ ಗಂಡ ಮಲ್ಲಪ್ಪ ಹೋಸ್ಮನಿ ವಯಾ:50 ವರ್ಷ ಉ: ಕೂಲಿ ಕೆಲಸ ಜಾ: ಮಾದರ ಸಾ: ದರ್ಶನಾಪೂರ ತಾ: ಶಹಾಪೂರ ಜಿ: ಯಾದಗಿರಿ ರವರ ಹೇಳಿಕೆ ಪಡೆದುಕೊಂಡು ಬಂದು 08.10 ಪಿಎಂ ಕ್ಕೆ ಹಾಜರ ಪಡಿಸಿದ್ದು, ಸದರಿ ಹೇಳಿಕೆಯ ಸಾರಂಶವೆನಂದರೆ, ಪಿಯರ್ಾದಿ ನಿನ್ನೆ ದಿನಾಂಕ:01/05/2019 ರಂದು 01.00 ಪಿಎಂ ಸುಮಾರಿಗೆ ನಮ್ಮ ಸಂಬಂದಿಕರಾದ ಮೌನೇಶ ತಂದೆ ಭೀಮಣ್ಣ ತಿಂಥಣಿ ಇವರ ಮದುವೆ ನಿಶ್ಚಯ ಕಾರಣಕ್ಕೆ ಅಂತಾ ನಾನು ಮತ್ತು ನಮ್ಮೂರಿನ ಶಾಂಭವಿ ಗಂಡ ಶರಣಪ್ಪ ಹೋಸ್ಮನಿ, ಹಣಮವ್ವ ಗಂಡ ಕರೆಪ್ಪ ಮಾದರ, ಈರಪ್ಪ ತಂದೆ ತಿಪ್ಪಣ್ಣ ಹಾದಿಮನಿ, ಯಮನಪ್ಪ ತಂದೆ ಬಸ್ಸಪ್ಪ ಹಾದಿಮನಿ ಎಲ್ಲರೂ ಕೂಡಿ ದಿಗ್ಗಿ ಗ್ರಾಮಕ್ಕೆ ನಮ್ಮೂರಿನ ಅಂಬ್ರೇಶ ತಂದೆ ಬಸ್ಸಣ್ಣ ಕಿಣಕೇರಿ ಇವರ ಅಟೋ ನಂ: ಕೆಎ-33-ಎ-5231 ನೇದ್ದರಲ್ಲಿ ಕುಳಿತು ಹೋಗಿದ್ದೇವು, ದಿಗ್ಗಿ ಗ್ರಾಮದಲ್ಲಿ ಮದುವೆ ನಿಶ್ಚಯ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ದರ್ಶನಾಪೂರಕ್ಕೆ ಬರುವಾಗ ದಿನಾಂಕ:01/05/2019 ರಂದು ಅಂದಾಜು ಸಮಯ 07.30 ಪಿಎಂ ಸುಮಾರಿಗೆ ಭೀ.ಗುಡಿ-ಗೋಗಿ ಮಧ್ಯದ ಗಣೇಶ ಗುಡಿ ಸಮೀಪ ಬ್ರಿಡ್ಜ ಹತ್ತಿರ ರೋಡಿನಲ್ಲಿ ನಮ್ಮ ಅಟೋ ಚಾಲಕ ತನ್ನ ವಾಹನವನ್ನು ನಿದಾನವಾಗಿ ನಡೆಸಿಕೊಂಡು ಹೋಗುವಾಗ, ಎದರುಗಡೆಯಿಂದ ಅಂದರೆ, ಗೋಗಿ ಕಡೆಯಿಂದ ಒಂದು ಅಶೋಕ ಲೆಲೆಂಡ ಮಿನಿ ಗೂಡ್ಸ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾವು ಕುಳಿತು ಹೊರಟಿದ್ದ ಟಂ.ಟಂ ಅಟೋ ನಂ: ಕೆಎ-33-ಎ-5231 ನೇದ್ದಕ್ಕೆ ಬಲಗಡೆ ಭಾಗದಲ್ಲಿ ಎದಿರುಗಡೆಯಿಂದ ಬಂದು ಡಿಕ್ಕಿ ಪಡೆಸಿದ್ದರಿಂದ ಬಲಭಾಗದಲ್ಲಿ ಕುಳಿತ ನನ್ನ ಬಲಗೈ ತೋಳಿಗೆ ಭಾರಿ ರಕ್ತಗಾಯ ಆಗಿ ಎಲಬು ಮುರಿದಿರುತ್ತದೆ. ನಮ್ಮ ಟಂ.ಟಂ ಅಟೋದಲ್ಲಿ ಇದ್ದ ಉಳಿದವರಿಗೆ ಯಾವುದೆ ಗಾಯಗಳು ಆಗಿರುವದಿಲ್ಲ. ಆಗ ನಮಗೆ ಡಿಕ್ಕ ಪಡೆಸಿದ ಅಶೋಕ ಲೆಲೆಂಡ ಮಿನಿ ಗೂಡ್ಸ ವಾಹನದ ನಂಬರ ನೊಡಲಾಗಿ ಕೆಎ-33-ಎ-7763 ಅಂತಾ ಇತ್ತು ಅದರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಅವನ ಹೆಸರು ಮಲ್ಲಣ್ಣ ತಂದೆ ಹಣಮಂತ ಕಬ್ಬೆರ ಸಾ: ಹಳಿಸಗರ ಅಂತಾ ಗೋತ್ತಾಯಿತು. ಆಪಘಾತ ಆದ ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದ ಕರೆಪ್ಪ ತಂದೆ ಹಣಮಂತ ಮತ್ತು ಶರಣಪ್ಪ ತಂದೆ ಅಂಬ್ಲಪ್ಪ ಹೋಸ್ಮನಿ ಸಾ:ಇಬ್ಬರು ದರ್ಶನಾಪೂರ ಇವರುಗಳು ಮತ್ತು ಈರಪ್ಪ ತಂದೆ ತಿಪ್ಪಣ್ಣ ಹಾದಿಮನಿ, ಯಮನಪ್ಪ ತಂದೆ ಬಸ್ಸಪ್ಪ ಹಾದಿಮನಿ ಎಲ್ಲರೂ ಕೂಡಿ ನನಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಸಿದರು. ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತ ಪಡಿಸಿದ ಅಶೋಕ ಲೆಲೆಂಡ ಮಿನಿ ಗೂಡ್ಸ ವಾಹನದ ನಂಬರ ನೊಡಲಾಗಿ ಕೆಎ-33-ಎ-7763 ನೇದ್ದರ ಚಾಲಕ ಮಲ್ಲಣ್ಣ ತಂದೆ ಹಣಮಂತ ಕಬ್ಬೆರ ಸಾ; ಹಳಿಸಗರ ಈತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 49/2019 ಕಲಂ:279, ,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 56/19 ಕಲಂ: 447, 323, 324, 504, 506 ಸಂ 34 ಐಪಿಸಿ:-ದಿ: 02/05/19 ರಂದು 11 ಎಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ನಾನಾಗೌಡ ತಂದೆ ಸಂಗಪ್ಪಗೌಡ ಹೊಸಮನಿ ವಯಾ|| 62 ಜಾ|| ಹಿಂದೂ ಗಾಣಿಗ ಉ|| ಒಕ್ಕಲುತನ ಸಾ|| ಕೂಡಲಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶವೇನೆಂದರೆ, ದಿ: 29/04/2019 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ನಮ್ಮ ಹೊಲ ಸವರ್ೇ ನಂ 144 ರಲ್ಲಿ ಇದ್ದಾಗ 1) ಬಸವರಾಜ ತಂದೆ ವಿಶ್ವನಾಥ ಬಾಕಲಿ 2) ರಾಜಪ್ಪ ತಂದೆ ವಿಶ್ವನಾಥ ಬಾಕಲಿ ಸಾ|| ಕೂಡಲಗಿ ಇವರು ನಮ್ಮ ಹೊಲದಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿ ಬಂದವರೆ ಏನಲೆ ನಾನ್ಯಾ ಸೂಳೆಮಗನೆ ನಾವು ನಮ್ಮ ಜಾಗದಲ್ಲಿ ಕಂಟಿ ಕಡೆದರೆ ಏನಾಯಿತು ಸೂಳೆಮಗನೆ ಅಂತ ಅವಾಚ್ಯವಾಗಿ ಬೈಯುತ್ತಿದಾಗ ನಾನು ಏಕೆ ಬೈಯುತ್ತೀರಿ ನಮ್ಮ ಜಾಗದಲ್ಲಿನ ಕಂಟಿ ಕಡಿದಿದ್ದರಿಂದ ನಾನು ಕೇಳಿದ್ದೇನೆ ಈಗ ಏನಾಯಿತು ಅಂತ ಅನ್ನುತ್ತಿದ್ದಾಗ ಇಬ್ಬರೂ ಅವಾಚ್ಯವಾಗಿ ಬೈದು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆಯುತ್ತಿದ್ದಾಗ, ರಾಜಪ್ಪ ಈತನು ಅಲ್ಲಿಯೇ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಗದ್ದಕ್ಕೆ ಹೊಡೆದು ರಕ್ತಗಾಯಪಡಿಸಿದನು. ಇಬ್ಬರೂ ನನಗೆ ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 56/2019 ಕಲಂ: 447, 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 57/19 ಕಲಂ: 448, 323, 354, 504, 506 ಸಂ 34 ಐಪಿಸಿ:-ದಿ: 02/05/19 ರಂದು 4 ಪಿಎಮ್ಕ್ಕೆ ಶ್ರೀಮತಿ ಹೊನ್ನಮ್ಮ ಗಂಡ ರಾಜಶೇಖರ ಬಾಕಲಿ ವಯಾ|| 30 ಜಾ|| ಕಬ್ಬಲಿಗ ಉ|| ಹೊಲಮನೆಗೆಲಸ ಸಾ|| ಕೂಡಲಗಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನಮ್ಮೂರ ನಾನಾಗೌಡ ತಂದೆ ಸಂಗಪ್ಪಗೌಡ ಹೊಸಮನಿ ಇವರ ಜಾಗದಲ್ಲಿ ನಾವು 30ಘಿ40 ಪ್ಲಾಟ್ ಖರೀದಿ ಮಾಡಿದ್ದು ಇರುತ್ತದೆ. ಆದರೆ ನಾನಾಗೌಡ ಇವರು 20ಘಿ30 ಮಾತ್ರ ಕೊಟ್ಟಿರುತ್ತೇನೆ ಅಂತ ಸದರಿ ಜಾಗದ ವಿಷಯವಾಗಿ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ದಿ: 29/04/2019 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಗಂಡ ರಾಜಶೇಖರ ತಂದೆ ವಿಶ್ವನಾಥ ಬಾಕಲಿ ಇಬ್ಬರು ಮನೆಯಲ್ಲಿದ್ದಾಗ 1) ನಾನಾಗೌಡ ತಂದೆ ಸಂಗಪ್ಪಗೌಡ ಹೊಸಮನಿ 2) ಸಂಗಪ್ಪಗೌಡ ತಂದೆ ನಾನಾಗೌಡ ಹೊಸಮನಿ ಇಬ್ಬರೂ ಏಕಾಏಕಿ ನಮ್ಮ ಮನೆಯಲ್ಲಿ ಬಂದವರೆ, ಏನಲೆ ಸೂಳಿ ನಮ್ಮ ಜಾಗದಲ್ಲಿ ಏಕೆ ಕಂಟಿ ಕಡಿದಿದ್ದೀರಿ ಅಂತ ಕೇಳಿದಾಗ ನಾನು ನಮ್ಮ ಜಾಗದಲ್ಲಿ ಕಂಟಿ ಕಡಿದು ಸ್ವಚ್ಚ ಮಾಡಿದ್ದೇವೆ ನಿಮ್ಮ ಜಾಗದಲ್ಲಿ ಕಂಟಿ ಕಡಿದಿರುವದಿಲ್ಲ ಅಂತ ಅಂದಾಗ ಅದು ನಮ್ಮ ಜಾಗ ಅದರಲ್ಲಿ ನೀವು ಏನು ಮಾಡುವಂತಿಲ್ಲ ಸೂಳೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ಅವರಲ್ಲಿಯ ಸಂಗಪ್ಪಗೌಡ ಈತನು ಗಭರ್ಿಣಿಯಾದ ನನಗೆ ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದು ಸೀರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ಅಲ್ಲಿಯೇ ಇದ್ದ ನನ್ನ ಗಂಡ ರಾಜಶೇಖರ ಈತನು ಬಿಡಿಸಲು ಬಂದಾಗ ಅವನಿಗೂ ಕೂಡ ನಾನಾಗೌಡ ಹಾಗೂ ಸಂಗಪ್ಪಗೌಡ ಇಬ್ಬರೂ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 57/2019 ಕಲಂ: 448, 323, 354, 504, 506 ಸಂ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 13/2019 ಕಲಂ: 279, 338 ಐಪಿಸಿ & 187 ಐ.ಎಂ.ವ್ಹಿ ಆಕ್ಟ:- ದಿನಾಂಕ:22/04/2019 ರಂದು ಖಾಸಗಿ ಕೆಲಸದ ಸಂಬಂದವಾಗಿ ಪರಸಪ್ಪ ತಂದೆ ಮಾಳಪ್ಪ ಇವರಿಗೆ ಕರೆದುಕೊಂಡು ತಮ್ಮ ಹೆಚ್.ಎಫ್. ಡಿಲಕ್ಸ್ ಮೋಟರ ಸೈಕಲ್ ನಂ. ಕೆಎ.33, ಡಬ್ಲ್ಯೂ-6231 ನೇದ್ದರ ಮೇಲೆ ನಾರಾಯಣಪೂರಕ್ಕೆ ಹೋಗುವ ಕುರಿತು ತಮ್ಮೂರನ್ನು ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಬಿಟ್ಟಿದ್ದು ಮೋಟರ್ ಸೈಕಲ್ನ್ನು ಪರಸಪ್ಪ ತಂದೆ ಮಾಳಪ್ಪ ಸಾ||ಹಣಮಸಾಗರ ಇವನು ಚಲಾಯಿಸಿದ್ದು ನಾರಾಯಣಪೂರ ಕಡೆ ಬರುತ್ತಿದ್ದಾಗ ಮಾರ್ಗಮದ್ಯದಲ್ಲಿ ಮೋಟರ ಸೈಕಲ್ ನಂ. ಕೆಎ.33, ಡಬ್ಲ್ಯೂ-6231 ನೇದ್ದನ್ನು ಪರಸಪ್ಪ ತಂದೆ ಮಾಳಪ್ಪ ಸಾ||ಹಣಮಸಾಗರ ಈತನು ಮೋಟರ ಸೈಕಲ್ನ್ನು ವೇಗವಾಗಿ ಚಲಾಯಿಸಿಕೊಂಡು ಬಂದನು ಕೊಡೇಕಲ್- ನಾರಾಯಣಪೂರ ಮುಖ್ಯರಸ್ತೆಯ ಮೇಲೆ ಬಸರಗಿಡದ ತಾಂಡಾದ ಕ್ರಾಸ್ ದಾಟಿದ ನಂತರ ಮೋಟರ್ ಸೈಕಲ್ ನಂ.ಕೆಎ.33, ಡಬ್ಲ್ಯೂ-6231 ನೇದ್ದನ್ನು ಪರಸಪ್ಪ ತಂದೆ ಮಾಳಪ್ಪ ಸಾ|| ಹಣಮಸಾಗರ ಇವನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಅಂದಾಜು 4:15 ಗಂಟೆಯ ಸುಮಾರಿಗೆ ಅಪಘಾತವಾಗಿ ಪಿಯರ್ಾದಿದಾರನು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು ಅಪಘಾತವಾದ ನಂತರ ಮೋಟರ್ ಸೈಕಲ್ ಚಲಾಯಿಸುತ್ತಿದ್ದ ಪರಸಪ್ಪ ತಂದೆ ಮಾಳಪ್ಪ ಸಾ||ಹಣಮಸಾಗರ ಈತನು ಓಡಿ ಹೋಗಿದ್ದು ಇರುತ್ತದೆ. ಅಪಘಾತದಲ್ಲಿ ಪಿಯರ್ಾದಿಗೆ ತಲೆಗೆ ಭಾರಿ ರಕ್ತಗಾಯ, ಕಿವಿಗೆ ರಕ್ತಗಾಯ, ಕುತ್ತಿಗೆಗೆ ಒಳಪೆಟ್ಟು ಆಗಿರುತ್ತದೆ. ಪಿಯರ್ಾದಿಯ ಸಂಬಂದಿಕರು 108 ಅಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಬಾಗಲಕೋಟಕ್ಕೆ ಹೋಗಿ ಕಟ್ಟಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿ ಉಪಚಾರ ಕೊಡಿಸಿದ್ದು ದಿನಾಂಕ:22/04/2019 ರಿಂದ ದಿನಾಂಕ: 01/05/2019 ರವೆರೆಗೆ ಬಾಗಲಕೋಟ ಕಟ್ಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಚಾರ ಪಡೆದುಕೊಂಡು ಸ್ವಲ್ಪ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯೊಂದಿ ಬಂದಿದ್ದು ಮೋಟರ್ ಸೈಕಲ್ ನಂ. ಕೆಎ.33, ಡಬ್ಲ್ಯೂ-6231 ನೇದ್ದನ್ನು ಪರಸಪ್ಪ ತಂದೆ ಮಾಳಪ್ಪ ಸಾ|| ಹಣಮಸಾಗರ ಇವನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆ ಅಪಘಾತ ಪಡೆಸಿ ಓಡಿ ಹೋಗಿದ್ದು ಅವನ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಲು ವಿನಂತಿ ಅಂತಾ ಲಿಖಿತ ಅಜರ್ಿಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
Hello There!If you like this article Share with your friend using