ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-05-2019

By blogger on ಬುಧವಾರ, ಮೇ 1, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-05-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 116/2019 ಕಲಂ 457, 380 ಐಪಿಸಿ:-ದಿನಾಂಕ: 01/05/2019 ರಂದು 11.00 ಎ.ಎಂ.ಕ್ಕೆ ಶ್ರೀ ದೇವರಡ್ಡಿ ತಂದೆ ಮಲ್ಲಾರಡ್ಡಿ ಹೊನ್ನಾರಡ್ಡಿ ವ|| 36 ವರ್ಷ ಜಾ|| ಲಿಂಗಾಯತ ಉ|| ಖಾಸಗಿ ನೌಕರ ಸಾ|| ಚನ್ನೂರ(ಕೆ) ಹಾ||ವ|| ಬಸವೇಶ್ವರ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದಿ ಸಾರಾಂಶವೇನೆಂದರೆ, ಇಂದು ದಿನಾಂಕ; 01/05/2019 ರಂದು ಬೆಳಿಗ್ಗೆ 5:45 ಎ.ಎಂ.ಕ್ಕೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ಮನೆಯ ಮಾಳಿಗೆಯಿಂದ ಕೆಳಗೆ ಬಂದು ಮನೆಯ ಕೀಲಿ ತಗೆಯಲು ಹೊದಾಗ ಕಿಲಿ ಇರಲಿಲ್ಲ ನಂತರ ಮನೆಯ ಒಳಗೆ ಹೊಗಿ ನೋಡಲಾಗಿ ಬಾಗಿಲ ಕೊಂಡಿ ಮುರಿದು ಮನೆಯೊಳಗಡೆ ಹೋಗಿ ನೋಡಲಾಗಿ ಬೆಡ್ ರೂಮಿನ ಬಾಗಿಲು ಓಪನ ಆಗಿದ್ದವು ರೂಮಿನಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ನಾನು ಒಳಗಡೆ ಹೊಗಿ ನೋಡಲಾಗಿ ಆಲಮಾರಿಯಲ್ಲಿದ್ದ 50 ಗ್ರಾಂ ಬಂಗಾರದ ಕಾಸಿನ್ ಸರ ಅ.ಕಿ|| 1,25,000=00 ರೂ. ನೇದ್ದನ್ನು ದಿನಾಂಕ:30/04/2019 ರಂದು ರಾತ್ರಿ 11.00 ಪಿ.ಎಂ ದಿಂದ ಇಂದು ದಿನಾಂಕ: 01/05/2019 ರಂದು ಬೆಳಿಗ್ಗೆ 5.45 ಎ.ಎಂ. ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮಾವನ ಮನೆಯ ಮುಖ್ಯ ಬಾಗಿಲ ಕೀಲಿಯನ್ನು ಮುರಿದು ಮನೆಯೊಳಗೆ ಹೋಗಿ ಮೇಲ್ಕಾಣಿಸಿದ ಬಂಗಾರದ ಆಭರಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಮನೆಯಲ್ಲಿ ಬಾಡಿಗೆಯಿದ್ದ ಶಿವಾನಂದ ಶಿಕ್ಷಕರು ಇವರ ಮನೆಯ ಬಾಗಿಲ ಕೀಲಿ ಮುರಿದ್ದು ಏನು ಕಳ್ಳತನ ವಾಗಿರುತ್ತದೆ ಸದ್ಯಕ್ಕೆ ಗೊತ್ತಿರುವುದಿಲ್ಲ ನಂತರ ತಿಳಿದುಕೊಂಡು ಹೇಳುತ್ತೇನೆ ಕಳ್ಳತನ ಮಾಡಿರುತ್ತಾರೆ. ನಮ್ಮ ಅಣ್ಣ ರಾಯಣ್ಣ ಹೊನ್ನಾರಡ್ಡಿ ಇವರ ಆಫೀಸ್ನ ಬಾಗಿಲಿಗೆ ಹಾಕಿದ ಕೀಲಿ ಮುರಿದಿರುತ್ತಾರೆ ಅಲ್ಲಿ ಏನು ಕಳ್ಳತನವಾಗಿರುತ್ತದೆ ಅಂತಾ ಗೊತ್ತಾಗಿರುವದಿಲ್ಲ. ಬಸವೇಶ್ವರ ನಗರದಲ್ಲಿದ್ದ ಅಯ್ಯಪ್ಪ ನಿವೃತ್ತ ಪಿ.ಎಸ್.ಐ ರವರ ಮನೆ ಕೀಲಿ ಮುರಿದಿದ್ದು ಅಲ್ಲಿ ಏನು ಕಳ್ಳತನವಾಗಿರುತ್ತದೆ ಅಂತಾ ಸದ್ಯಕ್ಕೆ ಗೊತ್ತಿರುವುದಿಲ್ಲ ನಂತರ ತಿಳಿದುಕೊಂಡು ಹೇಳುತ್ತೇನೆ. ಕಾರಣ ದಿನಾಂಕ: 30/04/2019 ರಂದು ರಾತ್ರಿ 11.00 ಪಿ.ಎಂ ರಿಂದ ಇಂದು ದಿನಾಂಕ: 01/05/2019 ರಂದು ಬೆಳಿಗ್ಗೆ 5.45 ಎ.ಎಂ. ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಬೆಡ್ ರೂಮಿನಲ್ಲಿದ್ದ ಅಲಮಾರಿಯೊಳಗೆ ಇಟ್ಟ ಒಟ್ಟು 1,25,000=00 ರೂ ಮೌಲ್ಯದ 50 ಗ್ರಾಂ ಬಂಗಾರದ ಆಭರಣ ಕಳ್ಳತನವಾಗಿರುತ್ತದೆ ಈಗ ಸದ್ಯಕ್ಕೆ ಕಂಡು ಬಂದಿರುತ್ತದೆ. ನಂತರ ಹೆಂಡತಿಯೊಂದಿಗೆ ಮತ್ತು ನಮ್ಮ ಮನೆಯಲ್ಲಿ ಬಾಡಿಗೆ ಇದ್ದ ಶಿವಾನಂದ ಶಿಕ್ಷಕರಿಗೆ, ನಮ್ಮ ಅಣ್ಣ ರಾಯಣ್ಣ ಹೊನ್ನಾರಡ್ಡಿ ಹಾಗೂ ಅಯ್ಯಪ್ಪ ನಿವೃತ್ ಪಿ.ಎಸ್.ಐ ರವರ ಮನೆಯವರೊಂದಿಗೆ ವಿಚಾರ ಮಾಡಿ ಇನ್ನೂ ಬೇರೆ ಏನಾದರು ಆಭರಣ, ಮತ್ತು ನಗದು ಹಣ ಇತ್ಯಾದಿ ಕಳ್ಳತನವಾಗಿದ್ದರೆ ನಂತರ ಬಂದು ತಿಳಿಸುತ್ತೇನೆ. ಕಾರಣ ಈ ಬಗ್ಗೆ ಕಾನೂನು ರೀತಿಯ ಕ್ರಮ ಕೈಕೊಂಡು, ಕಳುವಾದ ಬಂಗಾರದ ಆಭರಣ ಪತ್ತೆ ಹಚ್ಚಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.116/2019 ಕಲಂ 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.     

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 117/2019 ಕಲಂ  ಹುಡಗಿ ಕಾಣೆ :- ದಿನಾಂಕ 01/05/2019 ರಂದು ಸಾಯಂಕಾಲ 17-00 ಗಂಟೆಗೆ ಫಿಯರ್ಾದಿ ಶ್ರೀ ಬಾಬು ತಂದೆ ಮಲ್ಲಪ್ಪ ಬಂದಳ್ಳಿ ವಯ 42 ವರ್ಷ ಜಾತಿ ಪ.ಜಾತಿ(ಹೊಲೆಯ) ಉಃ ಒಕ್ಕಲುತನ ಸಾಃ ಸನ್ನತಿ ತಾಃ ಚಿತ್ತಾಪೂರ ಹಾಲಿವಸತಿ ಶರಣ ನಗರ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 30/04/2019 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಫಿರ್ಯಾದಿಯ  ಮಗಳು ಮೇಘಾ ವಯ 23 ವರ್ಷ ಇವಳು ಶರಣ ನಗರದಲ್ಲಿರುವ ತಮ್ಮ ಬಾಡಿಗೆ ಮನೆಯಿಂದ ಶಹಾಪೂರ ದೇವಿ ನಗರದಲ್ಲಿರುವ ಫಿಯರ್ಾದಿಯ  ತಂಗಿ ರೇಣುಕಾ ಗಂಡ ದೇವಿಂದ್ರಪ್ಪ ಬಲವಂತನೋರ ಇವರ ಮನೆಗೆ ಹೋಗಿ ಬರುತ್ತೆನೆ ಅಂತ ಹೇಳಿ ಹೋದವಳು ಫಿರ್ಯಾದಿಯ ತಂಗಿಯ  ಮನೆಗೆ ಹೋಗದೆ, ಮತ್ತು ಮರಳಿ ತಮ್ಮ ಮನೆಗೆ ಬಾರದೇ ಎಲ್ಲಿಯೋ ಕಾಣೆಯಾಗಿರುತ್ತಾಳೆ. ಕಾಣೆಯಾಗಿರುವ ತಮ್ಮ ಮಗಳು ಮೇಘಾ ಇವಳ ಬಗ್ಗೆ ಸಂಬಂಧಿಕರಲ್ಲಿ ವಿಚಾರಿಸಿದ್ದು, ಯಾವುದೇ ಸುಳಿವು ಸಿಕ್ಕಿರವುದಿಲ್ಲ. ಇಂದು ತಡವಾಗಿ ಠಾಣೆಗೆ ಬಂದು ಕಾಣೆಯಾಗಿರುವ ತಮ್ಮ  ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 117/2019 ಕಲಂ ಹುಡಗಿ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 26/2019  ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್:- ದಿನಾಂಕ 01/05/2019  ರಂದು ಬೆಳಿಗ್ಗೆ  8 ಎ.ಎಂ.ಕ್ಕೆ ಈ ಕೇಸಿನ ಫಿಯರ್ಾದಿಯ ಗಂಡನಾದ ಗಾಯಾಳು ಬಸವರಾಜ ಇವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಆರ್-5971 ನೇದ್ದರ ಮೇಲೆ ಯಾದಗಿರಿ ಕಡೆಯಿಂದ ಸಮನಾಪುರಕ್ಕೆ  ಹೋಗುತ್ತಿದ್ದಾಗ  ಯಾದಗಿರಿ-ಸೇಡಂ  ಮುಖ್ಯ ರಸ್ತೆ ಮೇಲೆ ಬರುವ  ಬಂದಳ್ಳಿ  ಗ್ರಾಮದ ಹತ್ತಿರದ ಮೊರಾಜರ್ಿ ಹಾಸ್ಟೆಲ್ ಹತ್ತಿರ ಮುಖ್ಯ ರಸ್ತೆ ಮೇಲೆ ಈ ಕೇಸಿನ ಆರೋಪಿತನು ತನ್ನ ಆಟೋ ಟಂ.ಟಂ ನಂಬರ ಕೆಎ-33, ಎ-7161 ನೇದ್ದನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಪಿಯರ್ಾದಿಯವರ ಮೋಟಾರು ಸೈಕಲ್ ನೇದ್ದಕ್ಕೆ ನೇರವಾಗಿ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಪಿಯರ್ಾದಿ ಗಂಡನಿಗೆ ತಲೆಗೆ, ಬಲಗೈ ನಡು ಬೆರಳಿಗೆ, ಎಡಗಾಲು ಮೊಣಕಾಲು ಕೆಳಗೆ ರಕ್ತಗಾಯಗಳಾಗಿದ್ದು, ಬಲಗಾಲಿನ ತೊಡೆಗೆ ಭಾರೀ ಗುಪ್ತಗಾಯವಾಗಿದ್ದು ಕಂಡು ಬರುತ್ತಿದ್ದು ಮತ್ತು ಆಟೋದಲ್ಲಿದ್ದ ಹುಡುಗರಾದ ಯಂಕಪ್ಪ ತಂದೆ ಬಸಲಿಂಗಪ್ಪ ಜೋಗೇರ ಸಾ;ಬಂದಳ್ಳಿ ಈತನಿಗೆ ಎಡಕಿವಿಯ ಹತ್ತಿರ ರಕ್ತಗಾಯವಾಗಿದ್ದು ಎಡಗಲು ತೊಡೆಗೆ ಗುಪ್ತಗಾಯವಾಗಿದ್ದು ಮತ್ತು ಸಾಬರೆಡ್ಡಿ ತಂದೆ ಬಸಲಿಂಗಪ್ಪ ಜೋಗೇರ ಸಾ;ಬಂದಳ್ಳಿ ಈತನಿಗೆ ತಲೆಗೆ, ಎರಡು ಮೊಣಕಾಲುಗಳಿಗೆ, ಸೊಂಟಕ್ಕೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಘಟನೆಯು ಆಟೋ ಟಂ.ಟಂ ನಂಬರ ಕೆಎ-33, ಎ-7161 ನೇದ್ದರ ಚಾಲಕನ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಜರುಗಿದ್ದು  ಚಾಲಕನು  ಅಪಘಾತ ಪಡಿಸಿ ವಾಹನವನ್ನು ಘಟನಾ ಸ್ಥಳದಲ್ಲಿ  ಬಿಟ್ಟು ಓಡಿ ಹೋಗಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸುವ ಕುರಿತು ಫಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.   

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 30/2019 ಕಲಂ. 295 504 ಸಂ.34 ಐ.ಪಿ.ಸಿ ಮತ್ತು  3(1) (ಖ) (ಖ) (ಖಿ) ಖಅ/ಖಖಿ ಕಔಂ. ಂಅಖಿ-1989 :- ದಿನಾಂಕ:30/04/2019 ರಂದು ರಾತ್ರಿ 10.45 ಗಂಟೆಯ ಸುಮಾರಿಗೆ ಆರೋಪಿತರು ಯಡಳ್ಳಿ ಗ್ರಾಮದ ಬಾಬಾ ಸಾಹೇಬ ಅಂಬೇಡ್ಕರ ಕಟ್ಟಿಯ ಮೇಲೆ ಚಪ್ಪಲಿ ಹಾಕಿಕೊಂಡು ಕುಳಿತು ಸರಾಯಿ ಬಾಟಲಿಯನ್ನು ಇಟ್ಟು ಕುಳಿತುಕೊಂಡು ಸರಾಯಿ ಕುಡಿದು ಅಂಬೇಡ್ಕರ್ ರವರಿಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ ಭಾವಚಿತ್ರಕ್ಕೆ ಹಾಕಿದಂತ ಹೂವಿನ ಹಾರವನ್ನು ಕಿತ್ತಿ ಎಸೆದು ಯಾರು ಬರುತ್ತಿ ಬರಿ ಸೊಳೆ ಮಕ್ಕಳೆ ರಂಡಿ ಮಕ್ಕಳೇ ಏನು ಕಿತ್ತಗೋತಿರಿ ಅಂತಾ ಬೈಯುತ್ತಿದ್ದಾಗ ಪಿಯರ್ಾದಿ ಯಾಕೆ ಗೌಡ್ರೆ ಈತರ ಮಾಡುತ್ತಿರಿ ಎಂದು ಕೇಳಿದಾಗ ಪಿಯರ್ಾದಿಗೆ ಲೇ ಹೊಲೆಯ ಜಾತಿ ನಿಂದೇನು ತಿಂಡಿ ಎಂದು ಆರೋಪಿ ನಂ. ಸಿದ್ದಪ್ಪ ರವರು ಬೈದು ಜಾತಿ ನಿಂದನೆ ಮಾಡಿದ್ದ, ಆ ಸಮಯಕ್ಕೆ ಆರೋಪಿ ತಾಯಿ ಮತ್ತು ಹೆಂಡತಿ ಕರೆದುಕೊಂಡು ಹೋದರು. ನಂತರ ಇಬ್ಬರು ಕೂಡಿ ತಮ್ಮ ಕೈಯಲ್ಲಿ ರಾಡು ಹಿಡಿದುಕೊಂಡು ಕಲ್ಲನ್ನು ತೂರುತ್ತಾ ದಲಿತ ಕೇರಿಯೊಳಗೆ ಬಂದು ಗಲಾಟೆ ಮಾಡಿರುತ್ತಾರೆ  ಅಂತಾ ಒಂದು ಟೈಪ್ ಮಾಡಿಸಿದ ದೂರು ಸಲ್ಲಿಸಿದ್ದರ ಸಾರಾಂಶದ ಮೇಲೆ ಕ್ರಮ ಜರುಗಿಸಿದ್ದು ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 43/2019 ಕಲಂ.323,341.504,506 ಸಂ. 34 ಐಪಿಸಿ:-ದಿನಾಂಕ.01/05/2019 ರಂದು 8-30 ಪಿಎಂಕ್ಕೆ ಪಿರ್ಯಾದಿ ಸಾಬಣ್ಣತಂದೆ ಸಾಬಣ್ಣ ಬ್ಯಾಟಿ ವಃ60 ಜಾಃ ಕುರುಬರು ಉಃ ಕೂಲಿ ಕೆಲಸ ಸಾಃ ಗೌಡಗೇರಾ ತಾಃ ಯಾದಗಿರಿ ಈತನ ಹೇಳೀಕೆ ಸಾರಾಂಶವೆನೆಂದರೆ, ನಾನು ಮೇಲಿನ ವಿಳಾಸದವನಿದ್ದು ಕೂಲಿಕೆಲಸ ಮಾಡಿಕೊಂಡು ಇರುತ್ತೇನೆ. ಹಿಗಿದ್ದು ನನ್ನ ಮಗನಾದ ಸಿದ್ದಪ್ಪ ತಂದೆ ಸಾಬಣ್ಣ ಬ್ಯಾಟಿ ಈತನಿಗೆ ಯಾದಗಿರಿಯ ಮಹಾದೇವಮ್ಮ ಗಂ.ಸಾಬಣ್ಣ ಪೂಜಾರಿ (ದೋರನಳ್ಳಿ) ಇವರ ಮಗಳಾದ ಮಮಿತಮ್ಮ ಎಂಬುವವಳನ್ನು ಮದುವೆ ಮಾಡಿದ್ದು, ಈಗ್ಗೆ ಏಳು ತಿಂಗಳ ಹಿಂದೆ ನಮ್ಮ ಸೊಸೆ ಮಮಿತಮ್ಮ ಇವಳು ಮೃತಪಟ್ಟಿದ್ದರಿಂದ ನಮ್ಮ ಸೊಸೆ ಮಮಿತಾಳ ಮನೆಯವರು ನಮ್ಮ ಮೇಲೆ ಸೈದಾಪೂರ ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿದ್ದು ಈಗ ಸದ್ಯ ನನ್ನ ಮಗ ಸಿದ್ದಪ್ಪ ತಂ. ಸಾಬಣ್ಣ ಈತನು ಯಾದಗಿರಿಯ ಕಾರಾಗೃಹದಲ್ಲಿ ಇರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ.30/04/2019 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ನಾನು ಯಾದಗಿರಿಗೆ ಬಂದು ನನ್ನ ಮಗನಿಗೆ ಮಾತನಾಡಿಸಿಕೊಂಡು, ಎಲ್.ಐ.ಸಿ. ಆಫೀಸಿಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೋದರಾಯ್ತು ಅಂತಾ ಹೊಸಳ್ಳಿ ಕ್ರಾಸಿನಲ್ಲಿ ನಿಂತಾಗ ನಮ್ಮ ಸಂಭಂದಿಕರಾದ ಯಾದಗಿರಿಯ ನಾಗಪ್ಪ ತಂ. ಸಾಬಣ್ಣ ಪೂಜಾರಿ, ದಂಡಪ್ಪ ತಂ. ಸಾಬಣ್ಣ ಪೂಜಾರಿ, ನಿಂಗಪ್ಪ ತಂ. ಸಾಬಣ್ಣ ಪೂಜಾರಿ ಸಾಃ ಹಿರೇ ಅಗಿಸಿ ಯಾದಗಿರಿ ರವರು ಬಂದಾಗ ನಾನು ಅವರಿಗೆ ನೋಡಿ ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಂತೆ ಅವರು ಏ ಬೋಸಡಿ ಮಗನೇ ಎಲ್ಲಿಗೆ ಹೋಗುತ್ತಿ ನಿಲ್ಲು ಅಂತಾ ತಡೆದು ನಿಲ್ಲಿಸಿ ಏ ಬೋಸಡಿ ಮಗನೇ ನಮ್ಮ ಮನೆ ಹೆಣ್ಣು  ಮಗಳ ಜೀವ ತಿಂದಿರಿ ಸೂಳಿ ಮಕ್ಕಳೆ ಅಂತಾ   ನನಗೆ ನಾಗಪ್ಪ ಈತನು ಕಾಲಿನಿಂದ ಎದೆಗೆ ಒದ್ದಾಗ ಓಳ ಪೆಟ್ಟಾಗಿದ್ದು, ದಂಡಪ್ಪ ಈತನು ಕೈಯಿಂದ ಎದೆಗೆ ಹೊಡೆದಿದ್ದು, ನಿಂಗಪ್ಪ ಈತನು ಈ ಬೋಸಡಿ ಮಗನಿಗೆ ಜೀವ ಸಹಿತ ಬಿಡಬಾರದು ಅಂತಾ ಜೀವದ ಬೆದರಿಕೆ ಹಾಕಿದನು ಆಗ ನಾನು ಚೀರಾಡುತ್ತಿರುವಾಗ ಯಾರೋ ಇಬ್ಬರು ಬಂದು ಜಗಳಾ ಬಿಡಿಸಿದ್ದು ಆಗ ನಾನು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇನೆ. ನಾನು ಉಪಚಾರ ಪಡೆಯುತ್ತಿದ್ದಾಗ ಪೊಲೀಸರು ಬಂದು ನನಗೆ ವಿಚಾರಿಸಲು, ನನ್ನದು ಸದ್ಯ ಯಾವುದೇ ಪಿರ್ಯಾಧಿ ಇರುವುದಿಲ್ಲ ಅಂತಾ ಹೇಳಿಕೆ ನೀಡಿರುತ್ತೇನೆ. ಸದರಿ ಘಟನೆ ನಿನ್ನೆ ದಿನಾಂಕ.30/04/2019 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಹೊಸಳ್ಳಿ ಕ್ರಾಸಿನ ಹತ್ತಿರ ಜರುಗಿದ್ದು  ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ದಿನಾಂಕ.01/05/2019 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ದೂರು ಕೊಡುತ್ತಿದ್ದು  ನನಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ನೀಡಿದ್ದರಿಂದ ಹೇಳಿಕೆಯ ಸಾರಾಂಶದ ಮೇಲೆ ಠಾಣೆ ಗುನ್ನೆ ನಂ.43/2019 ಕಲಂ.341,323,504,506,ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!