ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-04-2019

By blogger on ಭಾನುವಾರ, ಏಪ್ರಿಲ್ 28, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-04-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 69/2019 ಕಲಂ: 323, 354, 504, 506 ಸಂಗಡ 149 ಐಪಿಸಿ:-ದಿನಾಂಕ 27.4.2019 ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಫಿರ್ಯಾದಿಯ ಅಣ್ಣನ ಹೆಂಡತಿ ಮತ್ತು ಇತರರು ಯಲ್ಹೇರಿ ಗ್ರಾಮದ ಆರೋಪಿತರ ಮನೆಗೆ ಬಂದಿದ್ದ ವಿಷಯ ಗೊತ್ತಾಗಿ ಅವರಿಗೆ ತನ್ನ ಮನೆಗೆ ಕರೆದು ಚಹಾ ಕುಡಿಸಿ ಕಳುಹಿಸುವ ಸಲುವಾಗಿ ಭೀಮರಾಯ ಬೂಸಣ್ಣೋರ ಇವರ ಮನೆಗೆ ಹೋಗಿ ತನ್ನ ಅತ್ತಿಗೆಯನ್ನು ಕರೆಯಲು ಹೋದಾಗ ಆರೋಪಿತರೆಲ್ಲಾರು ಸೇರಿ ಫಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆ-ಬಡೆ ಮಾಡಿ ಕೂದಲು ಹಿಡಿದು ಎಳೆದಾಡಿ, ಕೈ ಹಿಡಿದು ತಿರುವಿ ಮಾನಭಂಗ ಮಾಡಲು  ಯತ್ನಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ತನ್ನ ಗಂಡ ಹಾಗೂ ಹಿರಿಯರೊಂದಿಗೆ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ: 69/2019 ಕಲಂ: 323, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 41/2019 ಕಲಂ 498(ಎ), 306  ಐಪಿಸಿ:-ದಿನಾಂಕ:02.04.2019 ರಂದು 02 ಪಿಎಂ ಕ್ಕೆ ಫಿಯರ್ಾದಿ ಶ್ರೀ ಚಂದ್ರಪ್ಪ ತಂದೆ ದೊಡ್ಡ ಮಲ್ಲಪ್ಪ ಭಂಗಿ ವಯಾ|| 50 ವರ್ಷ ಜಾ|| ಕುರಬ ಉ|| ಕೂಲಿಕೆಲಸ ಸಾ|| ಸಿಂಗಾರಂ, ತಾ||ಜಿ|| ನಾರಾಯಣಪೇಟ ಇವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಫಿಯಾದಿಯನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ ಕೂಲಿಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ  ಉಪಜೀವನ ಮಾಡಿಕೊಂಡಿರುತ್ತೇನೆ ನನಗೆ ಮಾಳಪ್ಪ ಅಂತಾ ಒಬ್ಬ ಮಗ ಮತ್ತು ಲಕ್ಷ್ಮೀ ಅಂತಾ ಒಬ್ಬ ಮಗಳು ಇರುತ್ತಾಳೆ, ನನ್ನ ಮಗಳು ಲಕ್ಷ್ಮೀ ಈಕೆಗೆ ಸುಮಾರು 09 ವರ್ಷಗಳಿಂದೆ ಯಾದಗಿರಿ ಜಿಲ್ಲೆಯ ಚಲೇರಿ ಗ್ರಾಮಕ್ಕೆ ಮಹಾದೇವಪ್ಪನ ಮಗನಾದ ತಾಯಪ್ಪ ಇತನಿಗೆ ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಮದುವೆಯಾದ ಒಂದು ವರ್ಷದ ನಂತರ ನನ್ನ ಮಗಳಿಗೆ ಒಂದು ಗಂಡು ಮಗು ಹುಟ್ಟುದ್ದು ಒಂದು ವರ್ಷ ಆದ ನಂತರ ಆ ಮಗು ಮೃತಪಟ್ಟಿರುತ್ತದೆ. ನಂತರ ಆಕೆಗೆ ಮತ್ತೆ ಮಕ್ಕಳಾಗಿರುವದಿಲ್ಲ. ನಂತರದ ದಿನಗಳಲ್ಲಿ ನನ್ನ ಅಳಿಯ ತಾಯಪ್ಪ ಇತನು ನನ್ನ ಮಗಳಿಗೆ ನಿನಗೆ ಮಕ್ಕಳಾಗಲ್ಲಾ ನೀನು ಇರಬೇಡಾ ನಮ್ಮ ಮನೆಯಲ್ಲಿ ನೀನು ಏನಾದರು ಮಾಡಿಕೊಂಡು ಸಾಯಿ ನೀನು ಸತ್ತರೆ ಬೇರೆ ಮದುವೆ ಮಾಡಿಕೊಳ್ಳತ್ತೆನೆ ನೀನು ಭಂಜೆ ಇದ್ದಿ ಅಂತಾ ಮಾನಸಿಕ ದೈಹಿಕ ಕಿರಕುಳ ನೀಡುತ್ತಾ ಬಂದಿದ್ದು. ಈ ವಿಷಯ ನನ್ನ ಮಗಳು ನಮ್ಮೂರಿಗೆ ಬಂದಾಗ ತಿಳಿಸುತ್ತಿದ್ದಳು. ನಾವು ಅವಳಿಗೆ ಇರಲಿ ಸಮಾಧಾನದಾನದಿಂದ ಇರು ಅಂತಾ  ಹೇಳಿದ್ದೆವು   ದಿನಾಂಕ: 27-04-2019 ರಂದು ಸಾಯಂಕಾಲ 04-00 ಗಂಟೆಗೆ ನನ್ನ ಅಳಿಯ ತಾಯಪ್ಪ ಇತನು ನನಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ ನಿನ್ನ ಮಗಳಿಗೆ ಊರಿಗೆ ಕರೆದುಕೊಂಡು ಹೋಗು  ಮನೆಯಲ್ಲಿ ಕಿರಿ ಕಿರಿ ಹೆಚ್ಚಾಗಿದೆ ಅಂತಾ ಹೇಳಿದನು ಅದಕ್ಕೆ ನಾನು ಆಯಿತು ಬರುತ್ತೇನೆ ಅಂತಾ ಹೇಳಿ ಪೊನ್ ಕಟ್ಟ ಮಾಡಿದೆನು ನಂತರ ರಾತ್ರಿ 09-00 ಗಂಟೆಗೆ ಮತ್ತೆ ನನ್ನ ಅಳಿಯ ಪೊನ್ ಮಾಡಿ ತಿಳಿಸಿದ್ದೆನೆಂದರೆ ನಿನ್ನ ಮಗಳು ಲಕ್ಷ್ಮೀ ಈಕೆಯು ಎಣ್ಣೆ ಕುಡಿದು ಸತ್ತಿದ್ದಾಳೆ ಅಂತಾ ಪೊನ್ನಲ್ಲಿ ಹೇಳಿ ಪೊನ್ ಕಟ್ಟ ಮಾಡಿದನು ನಂತರ ನಾನು ಪೊನ್ ಹಚ್ಚಿದರೆ ಪೋನ್ ಎತ್ತಲಿಲ್ಲ ಆಗ ನಾನು ಈ ವಿಷಯ ನಮ್ಮ ಮನೆಯಲ್ಲಿ ಮತ್ತು ನಮ್ಮ ಹಿರಿಯರಿಗೆ ತಿಳಿಸಿದೆನು. ನಂತರ ದಿನಾಂಕ: 28-04-2019 ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮೂರಿನಿಂದ ನಾನು ನನ್ನ ಮಗ ಮಾಳಪ್ಪ ಮತ್ತು ನಮ್ಮೂರಿನ ಸಿದ್ರಾಮಪ್ಪ ತಂದೆ ಹಣಮಂತು ಮತ್ತು ಹಣಮಂತು ತಂದೆ  ಭೀಮಶಪ್ಪ ಎಲ್ಲರು ಕೂಡಿಕೊಂಡು ಚಲೇರಿ ಗ್ರಾಮಕ್ಕೆ ಬಂದು ನನ್ನ ಮಗಳ ಮನಗೆ ಹೊಗಿ ನೋಡಲಾಗಿ ನನ್ನ ಮಗಳ ಹೆಣ ಮನೆಯ ಮುಂದೆ ಇತ್ತು ಆಗ ನನ್ನ ಅಳಿಯನಿಗೆ ವಿಚಾರಿಲಾಗಿ ಆತನು ಏನು ಹೇಳಲಿಲ್ಲ ಮನೆಯ ಅಕ್ಕಪಕ್ಕದವರಿಗೆ ವಿಚಾರಿಸಲಾಗಿ ದಿನಾಂಕ: 27-04-2019 ರಂದು ರಾತ್ರಿ ಗಂಡ ಹೆಂಡತಿ ಇಬ್ಬರು ಜಗಳ ಮಾಡಿಕೊಂಡಿದ್ದರು ಅದಕ್ಕೆ ಆಕೆ ಎಣ್ಣೆ ಕುಡಿದು ಸತ್ತಿದ್ದಾಳೆ ಅಂತಾ ತಿಳಿಸಿದರು. ತಾಯಪ್ಪ ಇತನು ನನ್ನ ಮಗಳಿಗೆ ಮಕ್ಕಳಾಗಲ್ಲಾ. ಭಂಜೆ ಇದ್ದಿ ನೀನು ಏನಾದರೆ ಮಾಡಿಕೊಂಡು ಸಾಯಿ ಅಂತಾ ಅವಳಿಗೆ ಮಾನಸಿಕ ದೈಹಿಕ ಕಿರಕುಳ ನೀಡಿದ್ದರಿಂದ ನನ್ನ ಮಗಳಾದ ಲಕ್ಷ್ಮೀ ವ|| 28 ವರ್ಷ ಈಕೆಯು ದಿನಾಂಕ: 27-04-2019 ರಂದು ರಾತ್ರಿ 07-00 ಗಂಟೆಯ ಸುಮಾರಿಗೆ ಆಕೆಯು ಮನೆಯಲ್ಲಿ ಇದ್ದ ಯಾವುದೊ ಕ್ರಿಮಿನಾಶಕ ಔಷದಿ ಕುಡಿದು ಮೃತಳಾಗಿದ್ದು. ನನ್ನ ಮಗಳಿಗೆ ಮಾನಸಿಕ ದೈಹಿಕ ಕಿರುಕುಳ ನೀಡಿ ನನ್ನ ಮಗಳ ಸಾವಿಗೆ ಕಾರಣನಾದ ತಾಯಪ್ಪ ತಂದೆ ಮಹಾದೇವಪ್ಪ ಸಾ|| ಚಲೇರಿ ಇತನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು. ನಾನು ನನ್ನ ಮಗಳು ಸತ್ತ ದುಖಃದಲ್ಲಿ ಏನು ಮಾಡಬೇಕೆಂದು ತಿಳಿಯದೇ ತಡವಾಗಿ ಠಾಣೆಗೆ ಬಂದಿರುತ್ತೇನೆ ಅಂತಾ ಹೇಳಿಕೆ ಫಿಯರ್ಾದಿ ಸಾರಾಂಶದ ಮೇಲಿಂದ ಸೈದಾಪೂರ ಠಾಣಾ ಗುನ್ನೆ ನಂ:41/2019  ಕಲಂ 498(ಎ), 306 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 47/2019 ಕಲಂ: 366 (ಎ), 109 ಸಂ: 34  ಐಪಿಸಿ :- ದಿನಾಂಕ:28/04/2019 ರಂದು 06.25 ಪಿಎಂ ಕ್ಕೆ ಶ್ರೀಮತಿ. ರೇಣುಕಮ್ಮ ಗಂಡ ಯಮನಪ್ಪ ಬಿಳವಾರ ವಯಾ:40 ವರ್ಷ ಜಾ:ಹರಿಜನ ಉ: ಅಂಗನವಾಡಿ ಸಹಾಯಕಿ ಸಾ: ಹಾರಣಗೇರಾ ತಾ; ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ನೀಡಿದ್ದು ಅದರ ಸಾರಂಶ ಏನಂದರೆ, ನಾನು ರೇಣುಕಮ್ಮ ಗಂಡ ಯಮನಪ್ಪ ಬಿಳವಾರ ವಯಾ:40 ವರ್ಷ ಜಾ: ಹೊಲೆಯ ಉ: ಅಂಗನವಾಡಿ ಸಹಾಯಕಿ ಸಾ: ಹಾರಣಗೇರಾ ತಾ: ಶಹಾಪೂರ ಜಿ: ಯಾದಗಿರಿ ಇದ್ದು ಈ ಮೂಲಕ ಅಜರ್ಿ ನೀಡುವದೇನಂದರೆ, ನನಗೆ ಬಿಳವಾರಕ್ಕೆ ಕೊಟ್ಟಿದ್ದು, ಮದುವೆ ಆದಾಗಿನಿಂದ ಗಂಡ ಹೆಂಡತಿ ಇಬ್ಬರು ನಮ್ಮುರಾದ ಹಾರಣಗೇರಾದಲ್ಲಿಯೇ ಇರುತ್ತೇವೆ. ನನ್ನ ಗಂಡ ಯಮನಪ್ಪ ತಂದೆ ಯಲ್ಲಪ್ಪ ಈತನು ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದು ಇರುತ್ತದೆ. 1) ಬಸಮ್ಮ 15 ವರ್ಷ, 2) ಯಲ್ಲಪ್ಪಾ 13 ವರ್ಷ 3) ಅಯ್ಯಪ್ಪ 11 ವರ್ಷ ಹೀಗೆ ಒಟ್ಟು 3 ಜನ ಮಕ್ಕಳಿರುತ್ತಾರೆ. ಅಂಗನವಾಡಿ ಸಹಾಯಕಿ ಆಗಿ ಕೆಲಸ ಮಾಡಿಕೊಂಡು ಮಕ್ಕಳು ಮತ್ತು ನಮ್ಮ ತಾಯಿ ಶಂಕ್ರೆಮ್ಮ ಇವರ ಜೋತೆಯಲ್ಲಿ ಉಪಜೀವನ ನಡೆಸಿಕೊಂಡು ಇರುತ್ತೇನೆ. ಹೀಗಿದ್ದು ನಮ್ಮ ಮಗಳು ಕುಮಾರಿ ಬಸಮ್ಮ ಮನೆಯಲ್ಲಿ ಶಾಲೆ ಬಿಟ್ಟಿದ್ದು ಮನೆಯಲ್ಲಿ ಇರುತ್ತಿದ್ದಳು, ನಾನು ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆಗೆ ನೀರು ತರುವದು ಕಟ್ಟಿಗೆ ತರುವದು ಮಾಡುತ್ತಿದ್ದಳು, ಅವಳು ಆಗಾಗ ಹೊರಗೆ ಹೊದಾಗ ನಮ್ಮ ಪೈಕಿಯವನೆ ಆದ ನಮ್ಮೂರಿನ ಶರಣಪ್ಪ ತಂದೆ ಬಸ್ಸಪ್ಪ ಹೊಳೆಯರ ವಯಾ: 21 ವರ್ಷ ಉ: ಕೂಲಿ ಕೆಲಸ ಜಾ: ಹೊಲೆಯ ಸಾ: ಹಾರಣಗೇರಾ ಈತನು ನಮ್ಮ ಮಗಳಾದ ಬಸಮ್ಮ ಇವಳ ಜೋತೆ ಮಾತನಾಡಿಸುವದು, ನಗಾಡುವದು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅನ್ನುವದು ಮಾಡುತ್ತಿದ್ದ, ಈ ವಿಷಯ ನನಗೆ ಗೊತ್ತಾಗಿ ಶರಣಪ್ಪನ ಮನೆಗೆ ಹೋಗಿ ಶರಣಪ್ಪ ಈತನಿಗೆ ನಮ್ಮ ಮಗಳನ್ನು ನಿನಗೆ ಕೊಡುವದಿಲ್ಲ, ನಮ್ಮ ಮಗಳು ಇನ್ನು ಸಣ್ಣವಳು ಇದ್ದಾಳೆ ನೀನು ನಮ್ಮ ಮಗಳ ಜೋತೆ ಏನು ಮಾತಾಡುತ್ತಿ, ಹೀಗೆಲ್ಲ ಮಾತನಾಡಬೇಡ ಅಂತಾ ತಿಳುವಳಿಕೆ ಹೇಳಿ ಅವರ ಮನೆಯವರಿಗೆ ಕೂಡ ಹೇಳಿ ಬಂದಿದ್ದೆನು. ಆದರೂ ಶರಣಪ್ಪ ಈತನು ನಮ್ಮ ಮಗಳ ಜೋತೆಯಲ್ಲಿ ಮಾತಾಡುವದು ಮುಂದುವರೆಸಿದ್ದನು. ಹೀಗಿದ್ದು ದಿನಾಂಕ:06/04/2019 ರಂದು ನಮ್ಮುರ ಬಸವಣ್ಣಪ್ಪನ ಜಾತ್ರೆಯ ದಿವಸ ನಾನು ನಮ್ಮ ತಂಗಿ ಸಂಗೀತಾ ಗಂಡ ಚಂದ್ರಶೇಖರ ಸಾ: ಹೊನಗುಂಟಿ ನನ್ನ ಮಗಳು ಬಸಮ್ಮ ವ:15 ವರ್ಷ ಎಲ್ಲರೂ ನಮ್ಮುರಿನ ಜಾತ್ರೆಯ ತೇರಿಗೆ ಬಂದಿದೆವು, ಆ ಸಮಯದಲ್ಲಿ ಅಂದರೆ ತೆರು ಎಳೆದ ನಂತರ ಅಂದಾಜು 08.30 ಪಿಎಂ ಸುಮಾರಿಗೆ ನಾವು ಜಾತ್ರೆಯಲ್ಲಿ ಜನಜಂಗುಳಿಯಲ್ಲಿ ಇದ್ದಾಗ ನಮ್ಮ ಜೋತೆಯಲ್ಲಿ ಇದ್ದ ನಮ್ಮ ಮಗಳು ಬಸಮ್ಮ ತಂದೆ ಯಮನಪ್ಪ ಬಿಳವಾರ ವ:15 ವರ್ಷ ಜಾ:ಹೊಲೆಯ ಸಾ: ಹಾರಣಗೇರಾ ಇವಳು ಕಾಣಿಸಲಿಲ್ಲ. ಆಗ ನಾನು ನಮ್ಮ ತಂಗಿ ಸಂಗೀತಾ ಇಬ್ಬರು ಜಾತ್ರೆಯಲ್ಲಿ ನಮ್ಮ ಮಗಳಿಗೆ ಹುಡುಕಾಡುವಾಗ ನಮ್ಮ ತಾಯಿ ನಮ್ಮ ಕಡೆಗೆ ಬಂದು ಬಸ್ಸಮ್ಮ ಇವಳನ್ನು ಶರಣಪ್ಪ ತಂದೆ ಬಸ್ಸಪ್ಪ ಹೊಳೆಯರ ಇತನು ಬಸಮ್ಮ ಇವಳನ್ನು ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ನನ್ನ ಮುಂದಿನಿಂದಲೆ ಗೋಗಿ ಕಡೆಗೆ ಹೋಗಿರುತ್ತಾನೆ ನಾನು ಲೈಟಿನ ಬೆಳಕಿನಲ್ಲಿ ನೊಡಿರುತ್ತೇನೆ ಅಂತಾ ತಿಳಿಸಿದಳು, ಆಗ ನಾನು ನಮ್ಮ ತಂಗಿ ಇಬ್ಬರು ಗೋಗಿ ವರೆಗೆ ಹೋಗಿ ನೊಡಿ ಬಂದೆವು ನಮ್ಮ ಮಗಳು ಸಿಗಲಿಲ್ಲ. ಮರುದಿವಸ ನಾನು ಮತ್ತು ನಮ್ಮ ತಾಯಿ ಶೆಂಕ್ರೆಮ್ಮ ಹಾಗೂ ನಮ್ಮ ತಂಗಿ ಸಂಗೀತಾ ಎಲ್ಲರೂ ಶರಣಪ್ಪನ ಮನೆಗೆ ಹೋಗಿ ವಿಚಾರಿಸಂಬೇಕು ಅಂತಾ ಹೋದಾಗ ಶರಣಪ್ಪನ ತಂದೆ ತಾಯಿಯವರಾದ ಬಸ್ಸಪ್ಪ ತಂದೆ ಈರಪ್ಪ ಹೊಳೆಯರ ಮತು ಮರೆಮ್ಮ ಗಂಡ ಬಸ್ಸಪ್ಪ ಹೊಳೆಯರ ಇವರುಗಳು ಇಲ್ಲಿಗೆ ಯಾಕೆ ಬಂದಿದ್ದೀರಿ ನಿಮ್ಮ ಮಗಳಿಗೆ ಕೋಟ್ಟು ಮದುವೆ ಮಾಡುವದಿಲ್ಲ ಅಂತಾ ಹೇಳಿದ್ದರಿಂದ ನಾವೆ ನಮ್ಮ ಮಗನಿಗೆ ನಿಮ್ಮ ಮಗಳಿಗೆ ಓಡಿಸಿಕೊಂಡು ಹೋಗಲು ಹೇಳಿದ್ದೇವೆ, ನೀವು ಏನು ಮಾಡುತ್ತೀರಿ ಮಾಡರಿ ಅಂತಾ ಅಂದರು. ನಾನು ಇಲ್ಲಿಯವರೆಗೆ ನಮ್ಮ ಮನೆಯಲ್ಲಿ ನಮ್ಮ ಮಗಳ ಮಯರ್ಾದೆಯ ಸಲುವಾಗಿ ವಿಚಾರ ಮಾಡಿ, ತಡವಾಗಿ ಇಂದು ದಿನಾಂಕ: 28/04/2019 ರಂದು ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ನನ್ನ 15 ವರ್ಷದ ಮಗಳಾದ ಕು. ಬಸ್ಸಮ್ಮ ಇವಳನ್ನು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅಪಹರಣ ಮಾಡಿದ ಶರಣಪ್ಪ ತಂದೆ ಬಸಪ್ಪ ಹೊಳೆಯರ ಮತ್ತು ಅದಕ್ಕೆ ಪ್ರಚೋದನೆ ಮಾಡಿದ ಅವನ ತಂದೆ ತಾಯಿಯವರಾದ ಬಸ್ಸಪ್ಪ ತಂದೆ ಈರಪ್ಪ ಹೊಳೆಯರ ಮತು ಮರೆಮ್ಮ ಗಂಡ ಬಸ್ಸಪ್ಪ ಹೊಳೆಯರ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ನೀಡಿದ್ದರ ಸಾರಂಶದ ಮೇಲಿಂದ ಗೋಗಿ ಪೊಲೀಸ ಠಾಣೆ ಗುನ್ನೆ ನಂ: 47/2019 ಕಲಂ: 366 (ಎ), 109 ಸಂ: 34  ಐಪಿಸಿ  ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನೀಖೆ ಕೈಕೊಳ್ಳಲಾಗಿದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!