ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-04-2019

By blogger on ಶುಕ್ರವಾರ, ಏಪ್ರಿಲ್ 26, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-04-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 110/2019 ಕಲಂ 279, 337, 338, 304[ಎ] ಐ.ಪಿ.ಸಿ ಮತ್ತು 187 ಐಎಂವಿ ಯ್ಯಾಕ್ಟ:- ದಿನಾಂಕ:26/04/2019 ರಂದು ರಾತ್ರಿ 13:30 ಪಿ.ಎಂ.ಕ್ಕೆ ನಿಂಗಮ್ಮ ಗಂ/ ಅಯ್ಯಪ್ಪ ಲಂಕೆಪ್ಪನೋರ ಸಾ|| ಬಸವಂತಪುರ ತಾ|| ಶಹಾಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಪಿಯರ್ಾದಿ ಸಲ್ಲಿಸಿದರ ಸಾರಾಂಶವೆನೇಂದರೆ, ಇಂದು ದಿನಾಂಕ:26/04/2019 ರಂದು ಬೆಳಿಗ್ಗೆ 11.00 ಎ.ಎಂ.ಕ್ಕೆ ನಾನು ಮತ್ತು ನನ್ನ ಮಗಳು ಮರೆಮ್ಮ ಗಂ/ ಶರಣಪ್ಪ ಲಂಕೆಪ್ಪನೋರ ಇಬ್ಬರೂ ಕೂಡಿಕೊಂಡು ನಮ್ಮೂರ ಅಟೋ ಸ್ಟ್ಯಾಂಡಿಗೆ ಬಂದಾಗ ಅಲ್ಲಿದ್ದ ನಮ್ಮೂರ ಮಂಜುನಾಥ ತಂದೆ ಭೀಮಣ್ಣ ಕೆಂಭಾವಿ ಇವನ ಅಟೋ.ನಂ.ಕೆಎ-33 ಎ-4231 ನೇದ್ದು ನಿಂತಿದ್ದು, ಅದರಲ್ಲಿ ನಾವಿಬ್ಬರು ಕುಳಿತೆವು ನಮ್ಮಂತೆ, ನಮ್ಮ ಅಣತಮಕಿಯ ಶರಣಮ್ಮ ಗಂ/ ಬಸವರಾಜ ಲಂಕೆಪ್ಪನೋರ ಮತ್ತು ನಮ್ಮೂರ ಅಯ್ಯಪ್ಪ ತಂ/ ಭೀಮಪ್ಪ ದೊಡ್ಡಮನಿ ಇಬ್ಬರು ಅಟೋದಲ್ಲಿ ಕುಳಿತಾಗ ಅಟೋವು ಬಸವಂತಪುರದಿಂದ ಶಹಾಪುರಕ್ಕೆ ಹೊರಟು ಹತ್ತಿಗುಡೂರ ಹತ್ತಿರ ಬಂದಾಗ ಹತ್ತಿಗುಡೂರ ಬಸ್ ನಿಲ್ದಾಣದ ಹತ್ತಿರ ಒಬ್ಬ ಮಹಿಳೆಯು ಅಟೋದಲ್ಲಿ ಹತ್ತಿದಳು 11.30 ಎ.ಎಂ ಸುಮಾರಿಗೆ ಹತ್ತಿಗುಡೂರ-ಶಹಾಪುರ ಮುಖ್ಯ ರಸ್ತೆಯಲ್ಲಿರವ ಅಯ್ಯಪ್ಪ ನಿವೃತ್ತ ಪಿ.ಎಸ್.ಐ ರವರ ಹೊಲದ ಹತ್ತಿರ ಹೊರಟಿದ್ದಾಗ ಹಿಂದಿನಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನು ತನ್ನ ಬಸನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಬಸನ್ನು ನಡೆಸಿಕೊಂಡು ಬಂದು ನಮ್ಮ ಅಟೋದ ಬಲ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಅಟೋವು ರೋಡಿನಿಂದ ಪಲ್ಟಿಯಾಗಿ ಹೊಲದಲ್ಲಿ ಬಿದ್ದ ಪರಿಣಾಮ ಅಟೋದಲ್ಲಿದ್ದ ನನ್ನ ಮಗಳಿ ಮರೆಮ್ಮ ಗಂ/ ಶರಣಪ್ಪ ಲಂಕೆಪ್ಪನೋರ ಈಕೆಗೆ ಹಣೆಗೆ ಬಾರಿ ರಕ್ತಗಾಯ, ಎಡ ಮೆಲಕಿನ ಹತ್ತಿರ ರಕ್ತಗಾಯ, ಮೇಲ್ ತುಟಿ ಹರಿದು ರಕ್ತಗಾಯವಾಗಿ ಬಾಯಿಯಲ್ಲಿನ ಒಂದು ಹಲ್ಲು ಮುರಿದಿರುತ್ತದೆ. ಅಯ್ಯಪ್ಪ ತಂ/ ಭೀಮಪ್ಪ ದೊಡ್ಡಮನಿ ಈತನಿಗೆ ತಲೆಗೆ ಭಾರೀ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದಿದ್ದು, ಎಡಗೈ ಮಣಿಕಟ್ಟಿನ ಮೇಲೆ ಮುರಿದ ಗಾಯ, ಎಡಗಾಲ ಮೊಳಕಾಲ ಕೆಳಗೆ ಕಟ್ಟಾದ ರಕ್ತಗಾಯ, ಬಲಗಾಲ ಮೊಳಕಾಲಿಗೆ ಗುಪ್ತಗಾಯವಾಗಿದ್ದು, ಹತ್ತಿಗುಡೂರನಲ್ಲಿ ಅಟೋದಲ್ಲಿ ಹತ್ತಿದ ಮಹಿಳೆಗೆ ಎದೆಗೆ ಗುಪ್ತಗಾಯ, ಮುಖಕ್ಕೆ ತರಚಿದ ಗಾಯ, ಬಲ ಬುಜಕ್ಕೆ ಮುರಿದ ಗಾಯ, ಬಲಗೈ ಮೊಳಕೈ ಕೆಳಗೆ ಮುರಿದ ಗಾಯವಾಗಿದ್ದು ಅವಳ ಹೆಸರು ವಿಚಾರಿಸಲಾಗಿ ವಿಶಾಲಮ್ಮ ಗಂ/ ವೀರಣ್ಣ ಪೊಲೀಸ್ ಪಾಟೀಲ್ ಸಾ|| ಸಾವೂರ ಅಂತಾ ಹೇಳಿದ್ದು ಇರುತ್ತದೆ. ಘಟನೆಯಲ್ಲಿ ನನಗೆ ಮತ್ತು ನಮ್ಮ ಶರಣಮ್ಮ ಗಂ/ ಬಸವರಾಜ ಲಂಕೆಪ್ಪನೋರ ಹಾಗೂ ಅಟೋ ಚಾಲಕ ನಿಂಗಪ್ಪನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲ ನಂತರ ಘಟನೆ ಸ್ಥಳಕ್ಕೆ 108 ವಾಹನ ಬಂದು ಗಾಯಾಳುಗಳಿಗೆ ವಾಹನದಲ್ಲಿ ಹಾಕಿಕೊಂಡು 12.00 ಪಿ.ಎಂ.ಕ್ಕೆ ಶಹಾಪುರ ಸರಕಾರಿ ಆಸ್ಪತ್ರೆಗೆ ಬಂದಾಗ ಪರೀಕ್ಷೆ ಮಾಡಿದ ವೈಧ್ಯಾಧಿಕಾರಿಗಳು ಅಯ್ಯಪ್ಪ ತಂ/ ಭೀಮಪ್ಪ ದೊಡ್ಡಮನಿ ಈತನು ಆಸ್ಪತ್ರೆಗೆ ಬರುವುದಕ್ಕಿಂತ ಮೊದಲು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು ಇರುತ್ತದೆ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.110/2019 ಕಲಂ 279, 337, 338, 304[ಎ] ಐ.ಪಿ.ಸಿ ಮತ್ತು 187 ಐಎಂವಿ ಯ್ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.    

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 66/2019 ಕಲಂ:143, 147, 148, 323, 326, 354, 504,506 ಸಂಗಡ 149 ಐಪಿಸಿ:-ದಿನಾಂಕ 25.04.2019 ರಂದು ಸಂಜೆ 6:30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಆಕೆಯ ಮಗಳು ತಮ್ಮ ಮನೆಯ ಮುಂದಿನ ಕಲ್ಲು-ಕಂಕರಗಳನ್ನು ಒಂದೇ ಕಡೆ ಬಳೆದು ಕೂಡಿ ಹಾಕುತ್ತಿದ್ದಾಗ ಅಕ್ರಮ ಕೂಟ ರಚಿಸಿಸಿಕೊಂಡು ಕೈಯಲ್ಲಿ ಕಲ್ಲು-ಬಡಿಗೆ, ರಾಡು ಹಿಡಿದುಕೊಂಡು ಬಂದು ಫಿರ್ಯಾದಿ ಹಾಗೂ ಗಾಯಾಳುದಾರರೊಂದಿಗೆ ಜಗಳ ತೆಗೆದು ಕಲ್ಲು, ಕಟ್ಟಿಗೆ, ರಾಡು ಮತ್ತು ಕೈಯಿಂದ ಹೊಡೆ-ಬಡೆ ಮಾಡಿ ಸಾಧಾ ಹಾಗೂ ಭಾರಿ ಸ್ವರೂಪದ ಗುಪ್ತ ಮತ್ತು ರಕ್ತಗಾಯಗೊಳಿಸಿ ಫಿರ್ಯಾದಿಗೆ ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೇ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾಹಿತಿ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 66/2019 ಕಲಂ:143, 147, 148, 323, 326, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 67.2019 ಕಲಂ.143.147.148.323.324.326.354,504.506 ಸಂಗಡ 149 ಐಪಿಸಿ:-ದಿನಾಂಕ.25.04.2019 ರಂದು ರಾತ್ರಿ.9.00 ಗಂಟೆಗೆ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಗುರುಮಠಕಲ ಠಾಣೆಗೆ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಚಿತ್ರಶೇಖರ ಎ.ಎಸ್.ಐ ಸಂಗಡ ತಿಪ್ಪಣ್ಣ ಪಿಸಿ-121 ರವರನ್ನು ಕರೆದುಕೊಂಡು ಹೋಗಿ ಜಗಳದಲ್ಲಿ ಗಾಯಗೊಂಡ ಶ್ರೀ ಯಂಕಪ್ಪ ತಂದೆ ರಾಜಪ್ಪ ನಾಟೇಕಾರ ವಯಃ 33 ವರ್ಷ, ಜಾತಿಃ ಕ್ರಿಶ್ಚಿಯನ್ ಉಃ ಒಕ್ಕಲುತನ  ಸಾಃ ಹೊಸಳ್ಳಿ.ಕೆ. ತಾಃಜಿಃ ಯಾದಗಿರಿ ಈತನ ಫಿಯರ್ಾದಿ ಹೇಳಿಕೆ ಪಡೆದಿದ್ದು, ಸದರಿಯವನ ಹೇಳಿಕೆ ಸಾರಾಂಶವೇನೆಂದರೆ, ದಿನಾಂಕ 25.04.2019 ರಂದು ಸಾಯಂಕಾಲ 6.30 ಗಂಟೆ ಸುಮಾರಿಗೆ ಫಿಯರ್ಾದಿಯ ಎದುರಿನ ಮನೆಯ ಜಯವಂತ ಇವರು ಮನೆ ಕಟ್ಟಲು ರಸ್ತೆ ಮೇಲೆ ಹಾಕಿದ ಕಲ್ಲು, ಕಂಕರ ತೆಗೆಯಲು ತಿಳಿಸಿದರೆ, ನನ್ನ ಹೆಂಡತಿಗೆ ಅವಾಚ್ಯವಾಗಿ ಬೈದು, ತಲೆಕೂದಲು ಹಿಡಿದು ಎಳೆದಾಡಿ ಅವಮಾನಗೊಳಿಸಿ, ಅಕ್ರಮ ಕೂಟ ರಚಿಸಿಕೊಂಡು ಬಂದು ಮೇಲಿನ ಎಲ್ಲರು ಸೇರಿ ಕೈಯಲ್ಲಿ ಕಬ್ಬಿಣದ ರಾಡು, ಬಡಿಗೆ, ಕಲ್ಲು ಹಿಡಿದುಕೊಂಡು ಬಂದು,ನನಗೆ ಕಬ್ಬಿಣದ ರಾಡು, ಬಡಿಗೆ, ಕಲ್ಲಿನಿಂದ ಕೈಯಿಂದ ಹೊಡೆದು, ತಲೆಗೆ ರಕ್ತಗಾಯ ಮಾಡಿ, ಕಾಲಿಗೆ, ತಲೆಗೆ, ಹೊಟ್ಟೆಗೆ ಗುಪ್ತಗಾಯ ಮಾಡಿದ್ದು,ಸಾಲೋಮನ ಈತನಿಗೆ ಕಲ್ಲಿನಿಂದ ಬಾಯಿಗೆ ಹೊಡೆದು ಹಲ್ಲು ಮುರಿಯುವಂತೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿರುತ್ತಾರೆ. ನಮಗೆ ಜೀವದ ಬೆದರಿಕೆ ಹಾಕಿದ ಮೇಲಿನ ಎಲ್ಲರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಜಗಳದಲ್ಲಿ ನನ್ನ ಹೆಂಡತಿ ಕೊರಳಲ್ಲಿನ ತಾಳಿ ಸರ ಹರಿದು ಬಿದ್ದಿರುತ್ತದೆ, ಅಂತ ಹೇಳಿ ಹೇಳಿಕೆ ನಿಡಿದ್ದು   ಮರಳಿ ದಿನಾಂಕ; 26.04.2019 ರಂದು ಬೆಳಿಗ್ಗೆ 6.00 ಗಂಟೆಗೆ ಪೊಲೀಸ್ ಠಾಣೆಗೆ ಬಂದು ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಗುರುಮಠಕಲ ಪೊಲೀಸ್ ಠಾಣೆ ಗುನ್ನೆ ನಂ.67.2019 ಕಲಂ.143.147.148.323.324.326.354,504.506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 68.2019 ಕಲಂ.341,323,289,504.506 ಸಂಗಡ 149 ಐಪಿಸಿ:-ದಿನಾಂಕ. 26.04.2019 ರಂದು ರಾತ್ರಿ 12.15 ಗಂಟೆಗೆ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್.ಎಲ್.ಸಿ ವಸೂಲಾದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳೂ ಸ್ಯಾಮಸನ್ ತಂದೆ ಸಾಲೇಮನ ವ:16 ವರ್ಷ ಜಾ:ಕ್ರಿಶ್ಚಿಯನ್ ಉ;ವಿಧ್ಯಾಭ್ಯಾಸ ಸಾ:ಕೆ,ಹೊಸಳ್ಳಿ ತಾ;ಜಿ;ಯಾದಗಿರ ಈತನ ಹೇಳಿಕೆ ಪಡೆದಿದ್ದು ಸದರಿಯವನ ಹೇಳಿಕೆ ಸಾರಾಂಶವೇನೆಂದರೆ, ರಾತ್ರಿ 09-00 ಗಂಟೆಗೆ ಕೆ ಹೊಸಳ್ಳಿ ಗ್ರಾಮಕ್ಕೆ ಹೋದಾಗ ಜ್ಞಾನಮಿತ್ರ ಇವರ ಮನೆಯ ಮುಂದಿನ ರಸ್ತೆಯ ಮೇಲೆ ಹೊರಟಾಗ ಜ್ಞಾನಮಿತ್ರ  ಇವರ ನಾಯಿ ಬಂದು ನನಗೆ ಬಲಗಾಲ ಮತ್ತು ಎಡಗಾಲ ತೊಡೆ ಹಿಂದುಗಡೆ, ಕಚ್ಚಿ ರಕ್ತಗಾಯಗೊಳಿಸಿದ್ದು ಮತ್ತು ಕಾಲಿಗೆ ಚೂರಿದ್ದು ಅದರಿಂದ ತಪ್ಪಿಸಿಕೊಳ್ಳಲು, ನಾಯಿಗೆ ಹೊಡೆಯಲು ಹೋದ ನನಗೆ ಜ್ಞಾನಮಿತ್ರ, ಕಲ್ಲಮ್ಮ, ಡೇವಿಡ, ಯೇಸು, ಇಂದ್ರಮ್ಮ, ಎಸ್ತರಮ್ಮ, ಇವರು ನನಗೆ ಹಿಡಿದು ಹೊಡೆಬಡೆ ಮಾಡಿರುತ್ತಾರೆ, ಕೈಯಿಂದ ತಲೆಗೆ ಬೆನ್ನಿಗೆ ಕಪಾಳಕ್ಕೆ ಹೊಡೆದಿರುತ್ತಾರೆ, ಈ ಮಗನಿಗೆ ಹೊಡೆದು ನಾಲಿಯೊಳಗೆ ಹಾಕಿ ಸಾಯಿಸರಿ ಅಂತ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ,  ಅಂತ ನೀಡಿದ ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಗುರುಮಠಕಲ ಪೊಲೀಸ್ ಠಾಣೆ ಗುನ್ನೆ ನಂ.68.2019ಕಲಂ.341,323,289,504.506ಸಂ.149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
  
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 40/2019 ಕಲಂ. 323,325,504,506 ಐಪಿಸಿ ಮತ್ತು 3(1) 3(1)ಖ,3(1)ಖ, 3(1)ಘ 2(ಗಿ)   ಖಅ/ಖಖಿ ಂಅಖಿ 1989:- ದಿನಾಂಕ: 26-04-2019 ರಂದು ಬೆಳಿಗ್ಗೆ 07-00 ಗಂಟೆಗೆ ನಮ್ಮ ಠಾಣೆಯ ಗೌತಮ ಹೆಚ್.ಸಿ-95 ರವರು ರಾಯಚೂರಿನ ರೀಮ್ಸ ಆಸ್ಪತ್ರೆಯಿಂದ ಒಂದು ಹೇಳಿಕೆ ಪಿಯರ್ಾಧಿ ತಂದು ಹಾಜರುಪಡಿಸಿದ್ದು ಅದರ ಸಾರಂಶವೆನೆಂದರೆ ಪಿಯರ್ಾಧಿದಾರಳು ದಿನಾಂಕ: 24-04-2019 ರಂದು ಸಾಯಂಕಾಲ 05-30 ಗಂಟೆಗೆ ಬಳಿಚಕ್ರ ಗ್ರಾಮದ ಭೀಮರಾಯ ಇತನ ಹೊಟಲ್ ಹತ್ತಿರ ಹೊಗುತ್ತಿರುವಾಗ ತಾಂಡಕ್ಕೆ ಹೋಗುತ್ತಿರುವಾಗ ಅದೆ ಸಮಯಕ್ಕೆ ಆರೋಪಿತನು ಬಂದುಾಕೆಗೆ ನನಗೆ ಸರಾಯಿ ತೆಗೆದುಕೊಂಡು ಬಾ ಅಂದರೆ ಬಂದಿಲ್ಲ ರಂಡಿ ಸೂಳೆ ಬಸವಿ ಅಂತಾ ಬೈದು ನೂಕಿಸಿಕೊಟ್ಟು ಕೆಳಗೆ ಬಿಳಿಸಿ ಕಾಲಿನಿಂದ ಆಕೆಯ ತೊಡೆಯ ಮೇಲೆ ಹೊದ್ದು ಒಳ ಪೆಟ್ಟು ಜಾತಿ ನಿಂದನೆ ಮಾಡಿ  ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ. 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-97/2019 ಕಲಂ 143,147,148,109,323,324,354,504,506 ಸಂ.149 ಐಪಿಸಿ:- ಮನ್ಯರವರಲ್ಲಿ ವಿನಂತಿಸಿಕೊಳ್ಳವುದೇನೆಂದರೆ, ಎಮ್.ಎಲ್.ಸಿ ಆದಾರದ ಮೇಲೆ ದಿನಾಂಕ:26-04-2019 ರಂದು ಕಲಬುರಗಿಜಿಲ್ಲಾ ಸರಕರಿಆಸ್ಪತ್ರೆಗೆ ನೀಡಿ ಪಿಯರ್ಾದಿದಾರಲ ಹೇಳಿಕೆಯನ್ನು ಪಡೆದಕೊಂಡಿದ್ದರ ಸಾರಾಂಶವೆನೆಮದರೆ, ದಿನಾಂಕ:24-04-2019 ರಂದು  ಮಧ್ಯಾಹ್ನ 1 ಗಂಟೆಗೆ ತಳವಾರಗೇರಾ ಗ್ರಾಮದ ಪಿಯರ್ಾದಿಯ ಮನೆಯ ಮುಂದೆ ಸಾರ್ವಜನಿಕರಸ್ತೆಯಲ್ಲಿ ಶರಣಪ್ಪತಾಯಿತಿಪ್ಪವ್ವದೊಡ್ಡಮನಿ ಜಾತಿ:ಹರಿಜನ ಸಂಗಡ 6 ಜನರುಎಲ್ಲರು ಸಾ:ತಳವಾರಗೇರಾ ಗ್ರಾಮದವರಿದ್ದು ಮನೆಯಜಾಗದ ಬಗ್ಗೆ ಜಗಳ ತೆಗೆದು  ಪಿಯರ್ಾದಿಗೆ ಮತ್ತು ಜಗಳ ಬಿಡಿಸಲು ಬಂದ ಮೇಲೆ ಹೆಲಿದ ಭೀಮವ್ವ, ನಗಮ್ಮ,ಯಲ್ಲಪ್ಪಇವರ ಸಂಗಡ  ಜಗಳ ತೆಗೆದುಅವಾಚ್ಯ ಶಬ್ದಗಳಿಮದ ಬೈದುಕೈಯಿಂದ, ಕಾಲಿನಿಂದ, ಬಡಿಗೆಗಳಿಂದ ಹೊಡೆ ಬಡೆ ಮಾಡಿಗಾಯ ಪೆಟ್ಟು ಪಡೆಸಿದ ಬಗ್ಗೆ ಇತ್ಯಾದಿ ಪಿಯರ್ಾದುಆಧಾರದ ಮೇಲೆ ಆರೋಪಿತರ ವಿರುದ್ಧಠಾಣೆಗುನ್ನೆ ನಂಬರ.97/2019 ಕಲಂ. 143,147,148,109,323,324,354,504,506 ಸಂಗಡ 149 ಐಪಿಸಿ ನೇದ್ದರಅಡಿಯಲ್ಲಿಗುನ್ನೇದಾಖಲು ಮಾಡಿಕೊಂಡುತನಿಖೆಕೈಕೊಂಡೆನು.    


ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 58/2019 ಕಲಂ 279, 338 ಐ.ಪಿ.ಸಿ:- ದಿನಾಂಕ:26/04/2019 ರಂದು 4.30 ಪಿ.ಎಮ್ ಸುಮಾರಿಗೆ ಫಿಯರ್ಾದಿಯ ಅಣ್ಣ ಮಾಳಪ್ಪ ಈತನು ಶಹಾಪುರದಲ್ಲಿ ಮದುವೆ ಕಾರ್ಡಗಳನ್ನು ಪ್ರಿಂಟ್ ಹಾಕಿಸುವ ಆರ್ಡರ್ ಕೊಟ್ಟು ಶಹಾಪುರದಿಂದ ಸೈದಾಪುರಕ್ಕೆ ಆರೋಪಿತನ ಮೋಟರ್ ಸೈಕಲ್ ನಂ:ಕೆಎ-33, ಎಲ್-3443 ನೇದ್ದರ ಮೇಲೆ ಕುಳಿತು ಶಹಾಪುರ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಶಕಾಪುರ ಕ್ರಾಸ್ ಹತ್ತಿರ ಹೊರಟಾಗ ಆರೋಪಿತನು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ಮೋಟರ್ ಸೈಕಲ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದಲ್ಲಿ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಮಾಳಪ್ಪ ಈತನ ತಲೆಗೆ ಭಾರಿ ರಕ್ತಗಾಯವಾಗಿದ್ದು, ಬಲಗೈಗೆ ಭಾರಿ ರಕ್ತಗಾಯವಾಗಿ ಕೈ ಎಲುಬು ಮುರಿದಿದ್ದು, ಬಲಗಾಲ ಮಳಕಾಲಿಗೆ, ಬಲಗಾಲ ಪಾದಕ್ಕೆ ರಕ್ತಗಾಯವಾಗಿರುತ್ತದೆ. ಕಾರಣ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ ಇರುತ್ತದೆ.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 98/2019 ಕಲಂ 143,147,323,324,354,504,506 ಸಂ.149 ಐಪಿಸಿ:- ?????ರವರಲ್ಲಿ ವಿನಂತಿಸಿಕೊಳ್ಳವುದೇನೆಂದರೆ, ಇಂದು ದಿನಾಂಕ: 26/04/2019 ರಂದು 8:15 ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀಮತಿ ತಿಪ್ಪಮ್ಮ ಗಂಡ ಹಯ್ಯಾಳಪ್ಪ ದೊಡ್ಡಮನಿ ವ: 45 ವರ್ಷ ಜಾತಿ: ಹೊಲೆಯ ಉ: ಕೂಲಿ ಕೆಲಸ ಸಾ: ತಳವಾರಗೇರಾ ತಾ: ಸುರಪುರ ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅಜರ್ಿಯನ್ನು ಹಾಜರಪಡಿಸಿದ್ದು, ಸದರಿ ಫಿರ್ಯಾದಿ ಸಾರಾಂಶವೇನೆಂದರೆ, ತಳವಾರಗೇರಾ ಗ್ರಾಮದಲ್ಲಿ, ಕುಂಬಾರಪೇಠದಿಂದ-ಅಮ್ಮಾಪೂರ ಗ್ರಾಮಕ್ಕೆ ಹೋಗುವ ರೋಡಿನ ಪಕ್ಕದಲ್ಲಿ ನಮ್ಮ ಚಿಕ್ಕಪ್ಪನಾದ ಮರೆಪ್ಪ ತಂದೆ ಅಂಬ್ರಪ್ಪ ದೊಡ್ಡಮನಿ ಇತನ ಹೆಸರಿನಲ್ಲಿ 2-7/2 ಮನೆ ಇರುತ್ತದೆ. ಸದರಿ ಮನೆಯ ಜಾಗವು 25'ಥ50' ಅಳತೆಯ ಮನೆ ಇರುತ್ತದೆ. ಸದರಿ ಜಾಗದಲ್ಲಿ ಅರ್ದ ಮನೆ ಕಟ್ಟಿದ್ದು ಇನ್ನೂಳಿದ ಅರ್ದ ಜಾಗವು ಮನೆ ಮುಂದೆ ಖುಲ್ಲಾ ಬಿಟ್ಟಿದ್ದು ಇರುತ್ತದೆ.  ಸದರಿ ಖುಲ್ಲಾ ಜಾಗದಲ್ಲಿ ನಾವು ಗೋಡೆ ಕಟ್ಟಲು ಹೋದರೆ ನಮ್ಮ ಮನೆಯ ಹಿಂದಿನವರಾದ ಬಸಪ್ಪ ತಂದೆ ತಿಪ್ಪಣ್ಣ ತಳವಾರ ಇವರ ಮನೆಯವರು ಸದರಿ ಜಾಗವು ನಮ್ಮದಿರುತ್ತದೆ ಈ ಜಾಗದಲ್ಲಿ ಗೋಡೆಯನ್ನು ಕಟ್ಟಬೇಡಿರಿ ಅಂತಾ ನಮ್ಮೊಂದಿಗೆ ತಕರಾರು ಮಡುತ್ತಾ ಬಂದಿದ್ದು ಇರುತ್ತದೆ. ಈಗ್ಗೆ ಒಂದು ವಾರದ ಹಿಂದೆ ನಮ್ಮ ಮನೆಯ ಮುಂದೆ ನಾವು ನಮ್ಮ ಜಾಗದಲ್ಲಿ ಮನೆಯನ್ನು ಕಟ್ಟಲು ಬುನಾದಿ ಹಾಕಿ, ಸದರಿ ಜಾಗದಲ್ಲಿ ಸಣ್ಣ ಗೋಡೆಯನ್ನು ಕಟ್ಟಿದ್ದು ಇರುತ್ತದೆ. ಹೀಗಿದ್ದು ದಿನಾಂಕ: 24/04/2019 ರಂದು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ನಾನು ಮತ್ತು ಚಿಕ್ಕಮ್ಮಳಾದ ನಂದಮ್ಮ ಗಂಡ  ಭೀಮಪ್ಪ ದೊಡ್ಡಮನಿ, ನನ್ನ ತಾಯಿಯಾದ ಭೀಮವ್ವ ಗಂಡ ಬಸಪ್ಪ ದೊಡ್ಡಮನಿ ಮೂವರು ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಮಾತನಾಡುತ್ತಾ ಕುಳಿತಿದ್ದಾಗ, ಅದೇ ಸಮಯಕ್ಕೆ ನಮ್ಮೂರ 1, ಬಸಪ್ಪ ತಂದೆ ತಿಪ್ಪಣ್ಣ ತಳವಾರ 2, ಲಕ್ಷೀ ಗಂಡ ನಿಂಗಪ್ಪ ತಳವಾರ 3. ಭೀಮವ್ವ ಗಂಡ ನಿಂಗಪ್ಪ ಯಕ್ಷಂತಿ 4, ನಾಗವ್ವ ಗಂಡ ಬಸಪ್ಪ ತಳವಾರ 5, ಶರಣಪ್ಪ ತಂದೆ ತಿಪ್ಪಣ್ಣ ತಳವಾರ 6, ಯಲ್ಲಪ್ಪ ತಂದೆ ಹಣಮಂತ ಯಕ್ಷಂತಿ, 7, ಮರಿಲಿಂಗಮ್ಮ ತಂದೆ ನಿಂಗಪ್ಪ ಯಕ್ಷಂತಿ ಎಲ್ಲರು ಕೂಡಿಕೊಂಡು ತಮ್ಮ ಮನೆ ಕಡೆಯಿಂದ ಬಂದವರೇ, ನಮ್ಮನ್ನು ಉದ್ದೇಶಿಸಿ ಲೇ ಸೂಳಿ ಮಕ್ಕಳ್ಯಾ ಈ ಜಾಗದಲ್ಲಿ ಗೋಡೆಯನ್ನು ಕಟ್ಟಬೇಡಾ ಅಂದರೂ ನಮ್ಮ ಜಾಗದಲ್ಲಿ ಗೋಡೆಯನ್ನು ಕಟ್ಟಿದ್ದಿರೆನಲೇ ಬೋಸಡಿ ಮಕ್ಕಳೇ ನಿಮಗೆಷ್ಟು ಸೊಕ್ಕಲೇ ಅಂತಾ ಅಂದವರೇ ಅವರಲ್ಲಿ ಬಸಪ್ಪ ತಳವಾರ ಇವನು ನನ್ನ ಕೂದಲೂ ಹಿಡಿದು ಎಳೆದಾಡಿ ಅಲ್ಲಿಯೇ ಬಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯಪಡಿಸಿದನು. ನಾಗವ್ವ ಇವಳು ಕೈಯಿಂದ ನನ್ನ ಕಪಾಳಕ್ಕೆ ಹೊಡೆದಳು. ಲಕ್ಷ್ಮೀ, ಭೀಮವ್ವ ಮತ್ತು ಶರಣಪ್ಪ ಇವರು ಚಿಕ್ಕಮ್ಮಳಾದ ನಂದಮ್ಮ ಇವಳಿಗೆ ಲೇ ಸೂಳಿ ಜಾಗದಲ್ಲಿ ಏಕೆ ಗೋಡೆ ಕಟ್ಟಿದ್ದೀರಿ ಅಂತಾ ಕೂದಲು ಹಿಡಿದು ಎಳೆದಾಡಿ ಕೈಯಿಂದ ಮೈ ಮೇಲೆ ಹೊಡೆಬಡೆ ಮಾಡಿದರು. ಶರಣಪ್ಪ, ಯಲ್ಲಪ್ಪ ಮತ್ತು ಮರಿಲಿಂಗಮ್ಮ ನಮ್ಮ ಮನೆಯ ಮುಂದೆ ರಸ್ತೆಯಲ್ಲಿ ಕುಳಿತ್ತಿದ್ದ ನನಗೆ ಮತ್ತು  ನನ್ನ ತಾಯಿಯಾದ ಭಿಮವ್ವ ಯಲ್ಲಪ್ಪ ಮತ್ತು ಮರಿಲಿಂಗಮ್ಮ ಇವರು ನನ್ನ ತಾಯಿಯಾದ ಭೀಮವ್ವ ಇವಳಿಗೆ ಲೇ ಮೂದಿ ಸೂಳಿ ನಿನಗೇಷ್ಟು ಸಾರಿ ಹೇಳಬೇಕು ಈ ಗಾಗ ನಮ್ಮದು ಅಂತಾ ಇಲ್ಲಿ ಗೋಡೆ ಕಟ್ಟಲು ನಿಮಗೆಷ್ಟು ಸೊಕ್ಕು ಅಂತಾ ಕೈಯಿಂದ ಹೊಡೆಬಡೆ ಮಾಡಿದರು. ಆಗ ಅಲ್ಲಿಯೇ ಇದ್ದ ಮರೆಪ್ಪ ತಂದೆ ಅಂಬ್ರಪ್ಪ ದೊಡ್ಡಮನಿ, ಲಕ್ಷ್ಮೀ ತಂದೆ ಮರೆಪ್ಪ ದೊಡ್ಡಮನಿ, ದೇವಕೆಮ್ಮ ಗಂಡ ಮರೆಪ್ಪ ದೊಡ್ಡಮನಿ ಇವರು ಬಂದು ಜಗಳ ಬಿಡಿಸಿಕೊಂಡಾಗ, ಸದರಿಯವರೆಲ್ಲರೂ ನಮಗೆ ಲೇ ಸೂಳಿ ಮಕ್ಕಳೆ ಇವತ್ತು ಉಳಿದುಕೊಂಡಿರಿ ಇನ್ನೋಮ್ಮೆ ಈ ಜಾಗದಲ್ಲಿ ಏನಾದರೂ ಕಟ್ಟಿದರೇ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಹೋದರು. ನಂತರ ಜಗಳದಲ್ಲಿ ಒಳಪೆಟ್ಟು ಗಾಯಗಳಾದ ನಾನು ಮತ್ತು ನಂದಮ್ಮ, ಭೀಮವ್ವ ಮೂವರು ಕೂಡಿ ಉಪಚಾರ ಕುರಿತು ಸುರಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚರಿಸಿಕೊಂಡು, ಮನೆಗೆ ಹೋಗಿ, ಘಟನೆಯ ಬಗ್ಗೆ ಮನೆಯಲ್ಲಿ ನನ್ನ ಮಕ್ಕಳಾದ ಶರಣಪ್ಪ ತಂದೆ ಹಯ್ಯಾಳಪ್ಪ, ಮುದುಕಪ್ಪ ತಂದೆ ಹಯ್ಯಾಳಪ್ಪ ಇವರೊಂದಿಗೆ ಚಚರ್ೆ ಮಾಡಿ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ಮತ್ತು ನನ್ನ ಚಿಕ್ಕಮ್ಮ ಮತ್ತು ನನ್ನ ತಾಯಿಗೆ ಜಾಗದ ಸಂಬಂದವಾಗಿ ಕೈಯಿಂದ, ಬಡಿಗೆಯಿಂದ ಹೊಡೆಬಡೆ ಮಾಡಿ, ಜೀವ ಬೆದರಿಕೆ ಹಾಕಿದ ಮೇಲ್ಕಂಡ 7 ಜನರರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಸಲ್ಲಿಸಿದ ಫಿರ್ಯಾದಿ ಅಜರ್ಿಯನ್ನು ಪಡೆದುಕೊಂಡು, ಸದರಿ ಫಿರ್ಯಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 98/2019 ಕಲಂ: 143, 147, 323, 324, 354, 504, 506 ಸಂಗಡ 149 ಐಪಿಸಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!