ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-04-2019

By blogger on ಗುರುವಾರ, ಏಪ್ರಿಲ್ 25, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-04-2019 

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 10/2019 ಕಲಂ: 279, 304(ಎ)  ಐಪಿಸಿ :- ದಿನಾಂಕ 19.02.2019 ರಂದು ರಾತ್ರಿ 10.00 ಪಿಎಮ್ ಕ್ಕೆ ಪಿರ್ಯಾದಿ ಶ್ರೀ. ಸಿದ್ದು ನಾಯಕ ತಂದೆ ತಿರುಪತಿ ನಾಯಕ ಚವ್ಹಾಣ ವ:38 ವರ್ಷ ಉ: ಒಕ್ಕಲುತನ ಜಾ: ಲಂಬಾಣಿ ಸಾ: ಬೈಲಾಪೂರ ತಾಂಡಾ ತಾ: ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾಧಿ ಅಜರ್ಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಂದೆ-ತಾಯಿಗೆ ನಾವು ನಾನು, ರಮೇಶ, ಕಾಳಪ್ಪ ಅನೀಲ ಅಂತಾ ನಾಲ್ಕು ಜನ ಗಂಡು ಮಕ್ಕಳಿದ್ದು ನಮ್ಮೆಲ್ಲರದು ಮದುವೆಯಾಗಿದ್ದು. ನಾವೆಲ್ಲರು ನಮ್ಮ ತಂದೆ ತಾಯಿಯೊಂದಿಗೆ ಕೂಡಿ ಇದ್ದು ನಮ್ಮದೊಂದು ಹಿರೋ ಹೋಂಡಾ ಗ್ಲಾಮರ್ ಮೋಟಾರ್ ಸೈಕಲ್ ಇದ್ದು ಅದನ್ನು ನಾವು ನಾಲ್ಕು ಜನ ಅಣ್ಣತಮ್ಮಂದಿರು ಮತ್ತು ನನ್ನ ತಂದೆಯವರು ಉಪಯೋಗಿಸುತ್ತೇವೆ. ಹೀಗಿರುವಾಗ ಮೊನ್ನೆ ರವಿವಾರ ದಿನಾಂಕ 17.02.2019 ರಂದು ನನ್ನ ತಂದೆ ತಿರುಪತಿಯವರು ತಿಂಥಣಿ ಜಾತ್ರಗೆ ಹೋಗಿ ಬರುತ್ತೇನೆಂದು. ನಮ್ಮ ಮೋಟರ್ ಸೈಕಲ್ ನಂ: ಕೆಎ-33 ಯು-3589 ನೇದ್ದನ್ನು ತೆಗೆದುಕೊಂಡು ನಮ್ಮ ತಾಂಡದಿಂದ ಮಧ್ಯಾಹ್ನ 2.00 ಗಂಟೆಯ ಸುಮಾರಿಗೆ ಹೋಗಿದ್ದು. ನನ್ನ ತಂದೆಯ ಜೋತೆಗೆ ತಿಂಥಣಿ ಜಾತ್ರ್ರೆಗೆ ನನ್ನ ತಂಗಿ ಶಕುಂತಲಾ ರವರ ಗಂಡನಾದ ಅಳಿಯ ಸುರೇಶ ತಂದೆ ಮನ್ನಪ್ಪ ರಾಠೋಡ ಹಾಗೂ ಅವರ ಸಂಬಂಧಿ ಸಿದ್ದು ತಂದೆ ಪೂಲಸಿಂಗ ಚವ್ಹಾಣ ಇವರು ಕೂಡಾ ಮತ್ತೊಂದು ಮೋಟಾರ್ ಸೈಕಲ್ ಮೇಲೆ ನನ್ನ ತಂದೆ ಜೋತೆಗೆ ತಿಂಥಣಿ ಜಾತ್ರೆಗೆ ಹೋಗಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ:17.02.2019 ರಂದು ರಾತ್ರಿ 8.15 ಗಂಟೆಯ ಸುಮಾರಿಗೆ ನಾನು ನಮ್ಮ ತಾಂಡಾದಲ್ಲಿ ಮನೆಯಲ್ಲಿದ್ದಾಗ. ನನ್ನ ತಂದೆ ಜೋತೆಗೆ ತಿಂಥಣಿ ಜಾತ್ರೆಗೆ ಹೋಗಿದ್ದ ಅಳಿಯ ಸುರೇಶ ರವರು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ. ನಾನು ಮತ್ತು ಸಿದ್ದು ಚವ್ಹಾಣ ರವರು ನಮ್ಮ ಮೋಟಾರ್ ಸೈಕಲ್ ಮೇಲೆ ಮತ್ತು ಮಾವ ತಿರುಪತಿ ನಾಯಕ್ ತನ್ನ ಮೋಟಾರ್ ಸೈಕಲ್ ನಂ:ಕೆಎ-33 ಯು-3589 ನೇದ್ದರ ಮೇಲೆ ತಿಂಥಣಿಯಿಂದ ನಮ್ಮ ತಾಂಡಾಕ್ಕೆ ಬರಲು ಕಕ್ಕೇರಾ-ಹುಣಸಗಿ ರಸ್ತೆಯ ಮೇಲೆ ಗುಮ್ಮೇದಾರ ದೊಡ್ಡಿಯ ಹತ್ತಿರ 8.00 ಗಂಟೆಯ ಸುಮಾರಿಗೆ ಬರುತ್ತಿರುವಾಗ ನಿಮ್ಮ ತಂದೆಯು ನಮ್ಮ ಮೋಟಾರ್ ಸೈಕಲ್ ಮುಂದೆ ಇದ್ದು. ನಾವು ಅವನ ಹಿಂದೆ ಬರುತ್ತಿರುವಾಗ ಎದುರುಗಡೆಯಿಂದ ಒಬ್ಬ ಕಾರು ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದು ನಿಮ್ಮ ತಂದೆಯ ಮೋಟರ್ ಸೈಕಲ್ಗೆ ಡಿಕ್ಕಿ ಪಡಿಸಿದ್ದು. ಇದರಿಂದ ಮಾವನು ಮೋಟರ್ ಸೈಕಲ್ ಸಮೇತ ಬಿದ್ದಿದ್ದು.  ನಾನು ಮತ್ತು ಸಿದ್ದು ರವರು ನಮ್ಮ ಮೋಟರ್ ಸೈಕಲ್ನ್ನು ನಿಲ್ಲಿಸಿ ಹೋಗಿ ಮಾವನಿಗೆ ನೋಡಲಾಗಿ ಮಾವನ ಬಲಗಣ್ಣಿನ ಹತ್ತಿರ ಮತ್ತು ನಾಲಿಗೆಗೆ ಹಾಗೂ ಎಡಗೈ ಕಿರು ಬೆರಳಿಗೆ ಭಾರಿ ರಕ್ತಗಾಯಗಳಾಗಿದ್ದು. ಹಾಗೂ ತೆಲೆಯ ಮೇಲೆ ಬಲಬಾಜುವಿಗೆ ಭಾರಿ ಒಳಪೆಟ್ಟಾಗಿ ಗುಮ್ಮಟಿ ಬಂದಿದ್ದು ಬಲಗೈ ಮೊಳಕೈ ಕೆಳಗೆ ಭಾರಿ ಗುಪ್ತಗಾಯವಾಗಿ ಮುರಿದಂತೆ ಕಾಣಿಸುತ್ತಿದ್ದು. ಅಪಘಾತ ಪಡಿಸಿದ ಕಾರು ಸ್ವಲ್ಪ ಮುಂದೆ ಹೋಗಿ ನಿಂತಿದ್ದು ನೋಡಲಾಗಿ ಕಾರ ನಂ:ಕೆಎ-42 ಎಮ್-9482 ಇದ್ದು ಅದರ ಚಾಲಕನು  ನನಗೆ ಪರಿಚಯದ ಪರಶುರಾಮ ತಂದೆ ಲಚಮು ರಾಠೋಡ ಸಾ: ಯಲಗೂಡ ತಾಂಡಾ ತಾ:ಸಿಂದಗಿ ಇದ್ದು. ಮಾವನನ್ನು ನಾನು ಮತ್ತು ಸಿದ್ದು ಚವ್ಹಾಣ ಇಬ್ಬರೂ ಕೂಡಿ ಅಪಘಾತ ಪಡಿಸಿದ ಕಾರಿನಲ್ಲಿಯೇ ಕೂಡಿಸಿಕೊಂಡು ಉಪಚಾರಕ್ಕಾಗಿ ಕಕ್ಕೇರಾ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು. ಮಾವನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು. ಕೂಡಲೇ ಬರಬೇಕು ಅಂತಾ ತಿಳಿಸಿದ್ದರಿಂದ. ನಾನು ಮತ್ತು ನನ್ನ ತಾಯಿ ಉಮಭಾಯಿ ಇಬ್ಬರೂ ಕೂಡಿ ಸ್ವಲ್ಪ ಹೊತ್ತಿನಲ್ಲಯೇ ಕಕ್ಕೇರಾ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ. ಆಸ್ಪತ್ರೆಯಲ್ಲಿ ನನ್ನ ತಂದೆಯು ಉಪಚಾರ ಹೊಂದುತ್ತಿದ್ದು. ಅಳಿಯ ಸುರೇಶ ರವರು ಪೋನ್ನಲ್ಲಿ ತಿಳಿಸಿದಂತೆ ನನ್ನ ತಂದೆಯ ಮೈಮೇಲೆ ಅಪಘಾತದಲ್ಲಿ ಗಾಯಗಳಾಗಿದ್ದು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದು ನನ್ನ ತಂದೆಗೆ ಅಪಘಾತ ಪಡಿಸಿದ ಕಾರ ನಂ:ಕೆಎ-42 ಎಮ್ 9482 ರ ಚಾಲಕನು ಮತ್ತು ಅಳಿಯ ಸುರೇಶ ಹಾಗು ಸಿದ್ದು ಚವ್ಹಾಣರವರು ಅಲ್ಲಿಯೇ ಇದ್ದು ನನ್ನ ಅಳಿಯ ಸುರೇಶನಿಗೆ  ವಿಚಾರಿಸಲಾಗಿ ಪೋನಿನಲ್ಲಿ ತಿಳಿಸಿದಂತೆ ಹೇಳಿದ್ದು ಈ ಅಪಘಾತವು ಕಾರ ಚಾಲಕ ಪರಶುರಾಮ ತಂದೆ ಲಚಮು ರಾಠೋಡ ಇತನ ನಿರ್ಲಕ್ಷತನದಿಂದಲೇ ಸಂಬವಿಸಿದ್ದು. ಕಕ್ಕೇರಾ ಸಕರ್ಾರಿ ಆಸ್ಪತ್ರೆಯ ವೈದ್ಯರು ನನ್ನ ತಂದೆಯಾದ ತಿರುಪತಿ ನಾಯಕ ತಂದೆ ಗೋವಿಂದ ನಾಯಕ ಚವ್ಹಾಣ ವ:60 ವರ್ಷ ರವರಿಗೆ ಪ್ರಥಮೋಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದಂದ ನಾನು ಮತ್ತು ನನ್ನ ತಾಯಿ ಉಮಾಭಾಯಿ ಹಾಗೂ ಅಳಿಯ ಸುರೇಶ ರವರು ಕೂಡಿ ಅದೇ ದಿನಾ ರಾತ್ರಿ ವಿಜಯಪೂರದ ಯಶೋಧರಾ ಆಸ್ಪತ್ರೆಗೆ ನನ್ನ ತಂದೆಯನ್ನು  ಕರೆದುಕೊಂಡು ಹೋಗಿ ಉಪಚಾರಕ್ಕೆ ಸೇರಿಕೆ ಮಾಡಿದ್ದು. ನನ್ನ ತಂದೆಯು ಇನ್ನೂ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ನನ್ನ ತಂದೆಗೆ ಆಸ್ಪತ್ರೆಯಲ್ಲಿ  ನಾನು ಉಪಚಾರ ಮಾಡಿಸಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು. ನನ್ನ ತಂದೆಗೆ ಅಪಘಾತ ಪಡಿಸಿದ ಕಾರ ನಂ:ಕೆಎ-42 ಎಮ್ 9482 ರ ಚಾಲಕ ಪರಶುರಾಮ ರಾಠೋಡ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 10/2019 ಕಲಂ 279, 338 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡಿದ್ದು ಇರುತ್ತದೆ. ದಿನಾಂಕ: 25.04.2019 ರಂದು ಬೆಳಗ್ಗೆ 05:20 ಎಎಮ್ ಕ್ಕೆ ಜಿಲ್ಲಾ ನಿಸ್ಸಂತು ಕೋಣೆ ಯಾದಗಿರಿ ರವರು ಠಾಣೆಗೆ ಫೋನ್ ಮಾಡಿ ಈ ಪ್ರಕರಣದಲ್ಲಿಯ ರಸ್ತೆಯ ಅಪಘಾತದಲ್ಲಿ ಗಾಯ ಹೊಂದಿದ  ಗಾಯಾಳು ತಿರುಪತಿ ನಾಯಕ ತಂದೆ ಗೋವಿಂದ ನಾಯಕ ಚವ್ಹಾಣ ವ:60 ವರ್ಷ ಜಾ: ಲಂಬಾಣಿ ಸಾ: ಬೈಲಾಪೂರ ತಾಂಡಾ ತಾ: ಹುಣಸಗಿ ಇವರು ಉಪಚಾರ ಫಲಿಸದೆ ಯಶೋದರ ಆಸ್ಪತ್ರೆ ವಿಜಯಪುರದಲ್ಲಿ ಈ ದಿವಸ ಬೆಳಗ್ಗಿನ 02:00 ಗಂಟೆ ಸುಮಾರಿಗೆ ಮೃತ ಪಟ್ಟಿರುವದಾಗಿ ಯಶೋದರ ಆಸ್ಪತ್ರೆಯಿಂದ ಎಮ್ ಎಲ್ ಸಿ ವಸೂಲಾಗಿದ್ದು ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ  ಆದರ್ಶನಗರ ಪೊಲೀಸ್ ಠಾಣೆ ವಿಜಯಪುರ ರವರು ತಿಳಿಸಿದ್ದಾಗಿ ತಿಳಿಸಿದ್ದು ಎಸ್ ಹೆಚ್ ಓ ರವರು ನನಗೆ ಫೋನ್ ಮಾಡಿ ಈ ವಿಷಯವನ್ನು ತಿಳಿಸಿದ್ದು ನಾನು ಠಾಣೆಗೆ ಬಂದು ಈ ಪ್ರಕರಣದಲ್ಲಿಯ ಗಾಯಾಳು ತಿರುಪತಿ ನಾಯಕ ತಂದೆ ಗೋವಿಂದ ನಾಯಕ ಚವ್ಹಾಣ ಸಾ: ಬೈಲಾಪೂರ ತಾಂಡಾ  ಇತನು ಉಪಚಾರ ಫಲಿಸದೆ ಯಶೋದರ ಆಸ್ಪತ್ರೆ ಬಿಜಾಪುರದಲ್ಲಿ ಮೃತಪಟ್ಟಿದ್ದರಿಂದ ಈ ಪ್ರಕರಣದಲ್ಲಿ ಇಂದು ದಿನಾಂಕ 25.04.2019 ರಂದು ಕಲಂ: 304 (ಎ) ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳಲು ಮಾನ್ಯ ಜೆ ಎಮ್ ಎಫ್ ಸಿ ಕೋರ್ಟ ಸುರಪುರ ರವರಲ್ಲಿ ಪತ್ರದ ಮುಖಾಂತರ ವಿನಂತಿಸಿಕೊಂಡಿದ್ದು ಇರುತ್ತದೆ,  ತನಿಖೆ ಜಾರಿಯಲ್ಲಿದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 108/2019 ಕಲಂ 78[3] ಕೆ.ಪಿ ಆಕ್ಟ :- ದಿನಾಂಕ 25/04/2019 ರಂದು ಮದ್ಯಾಹ್ನ 14-00 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ಒಬ್ಬ ವ್ಯಕ್ತಿಯನ್ನು, ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 25/04/2019 ರಂದು ಮುಂಜಾನೆ 11-45 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಗಾಂಧಿ ಚೌಕ ಹತ್ತಿರ  ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ದಾಳಿ ಕುರಿತು ಗಾಂಧಿ ಚೌಕ ಹತ್ತಿರ ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಸದರಿ ವ್ಯಕ್ತಿ ಸಿಕ್ಕಿದ್ದು, ಹೆಸರು ವಿಳಾಸ ವಿಚಾರಿಸಲು ತಾಯಪ್ಪ ತಂದೆ ಮರೆಪ್ಪ ಕೊರಬಾರ ವಯ 22 ವರ್ಷ ಜಾತಿ ಪ.ಜಾತಿ(ಹೊಲೆಯ) ಉಃ ಮಟಕಾ ಅಂಕಿ ಬರೆದುಕೊಳ್ಳುವದು ಸಾಃ ಮಡಿವಾಳೇಶ್ವರ ನಗರ ಶಹಾಪೂರ ಅಂತ ಹೇಳಿದ್ದು ಸದರಿಯವನ ಅಂಗಶೋಧನೆ ಮಾಡಿದಾಗ ನಗದು ಹಣ 360=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಮದ್ಯಾಹ್ನ 12-10 ಗಂಟೆಯಿಂದ 13-10 ಗಂಟೆಯ ಅವಧಿಯಲ್ಲಿ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ದ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 32/2019 ಕಲಂ 78(3)  ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 19-15 ಗಂಟೆಗೆ  ಠಾಣೆ ಗುನ್ನೆ ನಂಬರ 108/2019 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 109/2019 ಕಲಂ 279, 337, 338, 304[ಎ] ಐ.ಪಿ.ಸಿ ಮತ್ತು 187 ಐಎಂವಿ ಯ್ಯಾಕ್ಟ:- ದಿನಾಂಕ:25/04/2019 ರಂದು ರಾತ್ರಿ 10:00 ಪಿ.ಎಂ.ಕ್ಕೆ ದಾವಲಗೌಡ ತಂದೆ ಭೀಮರಾಯ ಶೇಟ್ಟಿ ವ|| 24 ವರ್ಷ ಜಾ|| ಯಾದವ ಉ|| ಕೂಲಿಕೆಲಸ ಸಾ|| ರಂಗಮಪೇಠ ಸುರಪೂರ ಇವರು ಠಾಣೆಗೆ ಹಾಜರಾಗಿ ಪಿಯರ್ಾದಿ ಸಲ್ಲಿಸಿದರ ಸಾರಾಂಶವೆನೇಂದರೆ, ಇಂದು ದಿನಾಂಕ: 25/04/2019 ರಂದು ಮದ್ಯಾಹ್ನ 12:00 ಪಿಎಂ ಸುಮಾರಿಗೆ ರಂಗಮಪೇಠ ದಿಂದ ನನ್ನ ಮಗಳಾದ ಮಾನಸಾ ಗೆ ಆರಮ ಇಲ್ಲೆದೆ ಇದ್ದುದರಿಂದ ನನ್ನ ಹೆಂಡತಿ ಮತ್ತು ನಮ್ಮ ಅಕ್ಕ ಮರೆಮ್ಮ ಇಬ್ಬರು ಕೂಡಿ ಶಹಾಪೂರ ಮಕ್ಕಳ ಆಸ್ಪತ್ರೆಗೆ ತೊರಿಸಿಕೊಂಡು ಬರಲು ಬಂದಾಗ, 1:20 ಪಿಎಂ ಸುಮಾರಿಗೆ ನನ್ನ ಹೆಂಡತಿಯಾದ ಹೊನ್ನಮ್ಮ ಗಂಡ ದವಲಗೌಡ ಶೇಟ್ಟಿ ಇವಳು ಪೋನ ಮಾಡಿ ವಿಷಯ ತಿಳಿಸಿದೆನೆಂದರೆ 1:00 ಪಿಎಂ ಸುಮಾರಿಗೆ ಶಹಾಪೂರ-ಹತ್ತಿಗುಡುರ ಮುಖ್ಯ ರಸ್ತೆಯ ಕನಕ ವೇಬ್ರಿಜ್ ಹತ್ತಿರ ನಾವು ಕುಳಿತುಕೊಂಡು ಹೊರಟು ನಂ. ಕೆಎ-33 ಎ-4522 ನೇದ್ದರ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಎದರುಗಡೆ ಅಂದರೆ ಶಹಾಪೂರ ಕಡೆಯಿಂದ ಬರುತಿದ್ದ ಲಾರಿ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಲಾರಿ ಚಾಲಕ ಮತ್ತು ಆಟೋ ಚಾಲಕ ಇಬ್ಬರು ರಸ್ತೆ ಮದ್ಯದಲ್ಲಿ ಡಿಕ್ಕಿ ಪಡಿಸಿ ಅಪಘಾಮಾಡಿದ್ದರಿಂದ ಸದರಿ ಅಪಘಾತದಲ್ಲಿ ಆಟೋದಲ್ಲಿ ಕೂಳಿತ ನಮ್ಮ ಚಿಕ್ಕಮ್ಮ ಮರೆಮ್ಮ ಇವಳಿಗೆ ಹಣೆಗೆ ರಕ್ತಗಾಯ ತಲೆಗೆ ಗುಪ್ತಗಾಯ, ಬೆನ್ನಿಗೆ ತರಚಿದ ಗಾಯ, ಬಲಗೈ ಮೊಳಕೈ ಕೆಳಗೆ ಮುರಿದ ರಕ್ತಗಾಯ, ಎಡಗೈ ಹಸ್ತದ ಮೇಲೆ ರಕ್ತಗಾಯ, ಎಡ ಹೊಟ್ಟೆಗೆ ರಕ್ತಗಾಯ, ಎದೆಗೆ ತರಚಿದಗಾಯ, ಎರಡು ಕಾಲುಗಳಿಗೆ ತೊಡೆಯ ಕೇಳಗಡೆ ನುಜ್ಜುಗುಜ್ಜಾಗಿ ಭಾರಿ ರಕ್ತಾಯವಾಗಿರುತ್ತವೆ. ಖಾಜಾಬಿ ಗಂಡ ಶಬ್ಬಿರ ಹಮ್ಮದ ಖುರೇಷಿ ಸಾ|| ದಖನಿಮೊಹಲ್ಲ ಸುರಪೂರ ಇವರಿಗೆ ಬಲಗಾಲ ಮೋಳಕಾಲ ಕೆಳಗೆ ಭಾರಿ ರಕ್ತಗಾಯ, ಬಲ ಮೊಳಕೈಗೆ ಭಾರಿ ರಕ್ತಗಾಯ, ಬೆನ್ನಿಗೆ ಗುಪ್ತಗಾಯ, ಅಮೃತಾ ಗಂಡ ಭೀಮರಡ್ಡಿ ಕಡ್ಡಿಮನಿ ಸಾ|| ಹಳಿಸಗರ ಇವರಿಗೆ ಎಡಗಾಲ ತೊಡೆಗೆ, ಎಡಗಾಲ ಪಾದದ ಹತ್ತಿರ ಗುಪ್ತಗಾಯ, ಪಂಡಿತ ತಂದೆ ಅಡಿವೇಪ್ಪ ನಿಂಬೂರ ಸಾ|| ಸುರಪುರ ಇವರಿಗೆ ಬಲಗಾಲ ತೋಡೆಗೆ ತರಚಿದ ರಕ್ತಗಾಯ, ಹಣೆಯ ಮೇಲೆ ತರಚಿದ ಗಾಯ, ಮೂಗಿಗೆ ಒಳ ಪೆಟ್ಟಾಗಿ ರಕ್ತ ಬಂದಿರುತ್ತದೆ, ನನಗೆ ಮತ್ತು ನನ್ನ ಮಾನಸಗೆ ಯಾವುದೇ ಗಾಯವಾಗಿರುವದಿಲ್ಲ ಸದರಿ ಅಪಘಾತ ಮಾಡಿದ ಲಾರಿ ನಂಬರ ನೋಡಲಾಗಿ ಟಿಎನ್-28 ಬಿಎಕ್ಸ-7845 ನೇದ್ದರ ಚಾಲಕನ ಹೆಸರು ವಿಚಾರಿಸಲಾಗಿ ಆತನು ತನ್ನ ಹೆಸರು ವೆಂಕಟಾಚಲಂ ತಂದೆ ಚಿನ್ನತಂಬಿ ತೋರವೇಡ್ ಸಾ|| ಮುರಂಗಪಟ್ಟಿ ತಾ|| ರಾಶಿಪುರಂ ಅಂತಾ ತಿಳಿಸಿದನು ನಾವು ಕುಳಿತುಕೊಂಡ ಹೊರಟ ಟಂಟಂ ಆಟೋ ನಂ. ಕೆಎ-33 ಎ-4522 ನೇದ್ದರ ಚಾಲಕ ಹಣಮಂತ ಸಾ||ರಂಗಪೇಟ್ ಅಂತಾ ತಿಳಿಸದ್ದು ಯಾರೋ 108 ವಾಹನಕ್ಕೆ ಪೋನ ಮಾಡಿದ್ದಾರೆ 108 ವಾಹನ ಬಂದ ನಂತರ ನಾವು ಶಹಾಪುರ ಸರಕಾರಿ ಆಸ್ಪತ್ರೆಗೆ ಹೊಗುತ್ತೇವೆ. ನಿನು ಬಾ ಅಂತಾ ಅಂದಾಗ ನಾನು ಸರಕಾರಿ ಆಸ್ಪತ್ರೆ ಶಹಾಪುರಕ್ಕೆ ಬಂದು ನೋಡಲಾಗಿ ನಮ್ಮ ಅಕ್ಕಳೂ ಉಪಚರ ಪಡೆಯುತ್ತಿದ್ದಳು ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರಕೆಂದ ಕಲಬುರಗಿಗೆ ಕಳುಹಿಸಿದ್ದು ಇರುತ್ತದೆ. ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಪಘಾತದಲ್ಲಿ ಗಾಯ ಪೆಟ್ಟು ಹೊಂದಿ ಉಪಚಾರ ಫಲಕಾರಿಯಾದಗೆ 4:00 ಪಿಎಂ ಸುಮಾರಿಗೆ ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿದ್ದು ಇರುತ್ತದೆ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.109/2019 ಕಲಂ 279, 337, 338, 304[ಎ] ಐ.ಪಿ.ಸಿ ಮತ್ತು 187 ಐಎಂವಿ ಯ್ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 54/2019 ಕಲಂ 363, 109, ಸಂಗಡ 149 ಐ.ಪಿ.ಸಿ :- ದಿ: 25/04/19 ರಂದು 9 ಪಿಎಮ್ಕ್ಕೆ ಶ್ರೀಮತಿ ಶರಣಮ್ಮ ಗಂಡ ರಾಜು ವಾಲಿಕಾರ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನನಗೆೆ ಒಟ್ಟು ಮೂರು ಜನ ಮಕ್ಕಳಿರುತ್ತಾರೆ. ಅವರಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಗಂಡು ಮಗನಿರುತ್ತಾನೆ. ನನ್ನ ಮದಲನೇಯ ಮಗಳಾದ ಕುಮಾರಿ ನೇಹಾ ತಂದೆ ರಾಜು ವಾಲಿಕಾರ ವ|| 18 ವರ್ಷ ಇವಳು ಈ ವರ್ಷ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಬರೆದು ಪಾಸಾಗಿರುತ್ತಾಳೆ. ನಮ್ಮ ಮನೆಯಲ್ಲಿ ಸದಬ ಗ್ರಾಮದ ನಮ್ಮ ಜನಾಂಗದವನೇ ಆದ ಹಣಮಂತ್ರಾಯ ಸದಬ ಇವರ ಮಗನಾದ ರಮೇಶ ತಂದೆ ಹಣಮಂತ್ರಾಯ ಸದಬ ಈತನು ಸುಮಾರು ನಾಲ್ಕು ವರ್ಷಗಳಿಂದ ದುಡಿಯಲು ಇದ್ದನು. ಸದರಿಯವನು ಆಗಾಗ ನಮ್ಮ ಮಗಳಾದ ಕುಮಾರಿ ನೇಹಾ ಇವಳೊಂದಿಗೆ ಬಹಾಳ ಸಲುಗೆಯಿಂದ ಇರುತ್ತಿದ್ದನು ನಾವು ಹುಡುಗರು ಇರಲಿ ಬಿಡು ಅಂತ ಸುಮ್ಮನಿದ್ದೆವು. ಹೀಗಿದ್ದು ದಿನಾಂಕ 10/04/2019 ರಂದು ಬೆಳಿಗ್ಗೆ 4 ಗಂಟೆಗೆ ನಾನು ಹಾಗು ನನ್ನ ಮಗಳು ನೇಹಾ ಇಬ್ಬರೂ ಕೂಡಿ ನೀರು ತರುತ್ತಿದ್ದೇವು. ಆಗ ನಾನು ಮನೆಗೆ ನೀರು ತುಂಬಲು ಹೋಗಿ ಮರಳಿ ನಳದ ಹತ್ತಿರ ಬಂದಾಗ ಅಲ್ಲಿ ಮಗಳು ನೇಹಾ ಇರಲಿಲ್ಲ ಆಗ ನಾನು ಗಾಬರಿಯಾಗಿ ವಿಚಾರಿಸಲು ನಳದ ಹತ್ತಿರ ಇದ್ದ ಹಾಗು ನೋಡಿದ ಕೆಲವರು ನನ್ನ ಮಗಳಾದ ನೇಹಾ ಇವಳು ನೀರಿನ ಕೊಡ ತುಂಬಿಕೊಂಡು ಮನೆಗೆ ಬರುತ್ತಿದ್ದಾಗ ನಮ್ಮ ಮನೆಯಲ್ಲಿ ಕೆಲಸ ಮಾಡುವ ಸದಬ ಗ್ರಾಮದ ರಮೇಶ ತಂದೆ ಹಣಮಂತ್ರಾಯ ಈತನು ಒಂದು ಮೋಟರ ಸೈಕಲ ತೆಗೆದುಕೊಂಡು ಬಂದವನೇ ಮಗಳಾದ ನೇಹಾ ಇವಳಿಗೆ ಜೋರಾವರಿಯಿಂದ ಮೋಟಾರ ಸೈಕಲ ಮೇಲೆ ಹಾಕಿಕೊಂಡು ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ತಿಳಿಸಿದಾಗ ನಾನು ಮರಳಿ ಮನೆಗೆ ಬಂದು ಸದರಿ ವಿಷಯ ನನ್ನ ಗಂಡ ಹಾಗು ಸಂಬಂದಿಕರಲ್ಲಿ ತಿಳಿಸಿದ್ದು ನಂತರ ನಮಗೆ ತಿಳಿದು ಬಂದಿದ್ದೇನಂದರೆ ನನ್ನ ಮಗಳನ್ನು ಅಪಹರಿಸಿದ ರಮೇಶ ಸದಬ ಈತನಿಗೆ ಆತನ ತಂದೆ ಹಣಮಂತ್ರಾಯ ಸದಬ, ಹಾಗು ಅಣ್ಣ ಜಟ್ಟೆಪ್ಪ ತಂದೆ ಹಣಮಂತ್ರಾಯ ಸದಬ, ತಾಯಿ ಸಾಮವ್ವ ಗಂಡ ಹಣಮಂತ್ರಾಯ ಸದಬ, ತಂಗಿಯಾದ ಭಾಗ್ಯಶ್ರೀ ತಂದೆ ಹಣಮಂತ್ರಾಯ ಸದಬ ಹಾಗು ಸಂಬಂದಿಯಾದ ಬಸಪ್ಪ ಅಗತೀರ್ಥ, ಮತ್ತು ಮುದಕಪ್ಪ ತಂದೆ ಮುತ್ತಪ್ಪ ಈ ಎಲ್ಲಾ ಜನರು ರಮೇಶ ಈತನಿಗೆ ನಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಲು ಸಹಾಯ ಮಾಡಿರುತ್ತಾರೆ. ನಮ್ಮ ಮಗಳ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರು ಮಗಳು ಎಲ್ಲಯೂ ಸಿಗದೇ ಇದ್ದಾಗ ತಡವಾಗಿ ಇಂದು ಠಾಣೆಗೆ ಬಂದು ಪಿರ್ಯಾದಿ ನೀಡಿರುತ್ತೇನೆ ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 54/2019 ಕಲಂ 363,109 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!