ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-04-2019
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ:- 61/2018 ಕಲಂ 279, 337, 338 ಐ.ಪಿಸಿ ;- ದಿನಾಂಕ 17-04-2019 ರಂದು 11-10 ಎ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕೆ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆ ಬೇಟಿ ಕೊಟ್ಟಾಗ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ಮಲ್ಲಿಕಾಜರ್ುನ ತಂದೆ ಯಲ್ಲಪ್ಪಾ ಕರಣಿ ವಯಾ:48 ಉ: ಖಾಸಗಿ ಕೆಲಸ ಜಾ: ಕುರುಬರ ಸಾ: ಹಳಗೇರಾ ತಾ:ಜಿ: ಯಾದಗಿರಿ ಇವರು ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ 17-04-2019 ರಂದು ಮೈಲಾಪೂರ ಗ್ರಾಮದಲ್ಲಿ ನನ್ನ ಖಾಸಗಿ ಕೆಲಸವಿದ್ದ ಕಾರಣ ನಾನು ಇಂದು ಬೆಳಗ್ಗೆ ನನ್ನ ಟಿ.ವ್ಹಿ.ಎಸ್ ಎಕ್ಸ. ಎಲ್ ಮೋಟಾರ ಸೈಕಲ್ ನಂ: ಕೆ.ಎ-36/ಎಕ್ಸ-4409 ನೆದ್ದರ ಮೇಲೆ ಮೈಲಾಪೂರ ಗ್ರಾಮಕ್ಕೆ ನಾನೋಬ್ಬನೇ ಹೋಗಿ ಅಲ್ಲಿ ನನ್ನ ಕೆಲಸ ಮುಗಿಸಿಕೊಂಡು ಮರಳಿ ನಮ್ಮ ಗ್ರಾಮಕ್ಕೆ ಬರುವ ಕುರಿತು ಮೈಲಾಪೂರ ಗ್ರಾಮದಿಂದ ಹೊರಟೇನು. ಮೈಲಾಪೂರ ಗ್ರಾಮದಿಂದ ಹೊರಟು ಇಂದು ಬೆಳಗ್ಗೆ 10 ಗಂಟೆಗೆ ನಾನು ಮೈಲಾಪೂರದಿಂದ ಹಳಗೇರಾ ಗ್ರಾಮಕ್ಕೆ ಹೋಗುವ ಹಳಗೇರಾ ಕ್ರಾಸಿನಲ್ಲಿ ಬಂದು ರೋಡ ದಾಟುವ ಸಲುವಾಗಿ ನಿಂತಿದ್ದೆನು, ಅದೇ ವೇಳಗೆ ರಾಮಸಮುದ್ರ ಗ್ರಾಮದ ಕಡೆಯಿಂದ ಒಂದು ಕಾರ ಅದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ರಾಯಚೂರು ಕಡೆಗೆ ಹೋಗುತ್ತಿದ್ದನು. ನಾನು ರೋಡಿನ ಪಕ್ಕದಲ್ಲಿ ನಿಂತಿದ್ದರೂ ಕೂಡಾ ಕಾರ ಚಾಲಕನು ಅದೇ ವೇಗದಲ್ಲಿ ಬಂದು ತನ್ನ ಚಾಲನೇಯ ನಿಯಂತ್ರಣ ಕಳೆದುಕೊಂಡು ನನ್ನ ಟಿ.ವ್ಹಿ.ಎಸ್ ಎಕ್ಸ. ಎಲ್ ಮೋಟಾರ ಸೈಕಲ್ ನಂ: ಕೆ.ಎ-36/ಎಕ್ಸ-4409 ನೆದ್ದಕ್ಕೆ ಜೋರಾಗಿ ಡಿಕ್ಕಪಡಿಸಿದ ಪ್ರಯುಕ್ತ ನಾನು ನನ್ನ ವಾಹನದಿಂದ ಸಿಡಿದು ಕಾರಿನ ಗ್ಲಾಸಿನ ಮೇಲೆ ಬಿದ್ದೆನು ಆಗ ನನಗೆ ತಲೆಗೆ ಭಾರಿ ರಕ್ತಗಾಯ, ಬಲಗಾಲು ಪಾದದ ಮೇಲೆ ಭಾರಿ ರಕ್ತಗಾಯ, ಎದೆಗೆ ಗುಪ್ತಗಾಯ ಮತ್ತು ಮೊಳಕಾಲಿಗೆ, ಬಲಮುಂಡಿಗೆ ತರಚಿದ ಗಾಯಗಳಾಗಿದ್ದವು, ನಂತರ ಕಾರ ನಂಬರ ನೋಡಲಾಗಿ ಅದರ ನಂಬರ ಕೆಎ-33/ಎಮ್-4711 ಅಂತಾ ಇದ್ದು ಚಾಲಕನ ಹೆಸರು ಮಹ್ಮದ್ ಉಸ್ಮಾನ ತಂದೆ ಅಬ್ದುಲ್ ವಾರೀಸ್ ಸಗರಿ ಸಾ: ಯಾದಗಿರಿ ಅಂತಾ ಗೊತ್ತಾಯಿತು. ನಂತರ ನಾನು ಕೂಡಲೇ ನನ್ನ ತಮ್ಮನಾದ ಸಣ್ಣಮಲ್ಲಯ್ಯಾ ಇತನಿಗೆ ಪೋನ ಮಾಡಿ ವಿಷಯ ತಿಳಿಸಿದಾಗ ಸಣ್ಣಮಲ್ಲಯ್ಯನು ನನ್ನ ಹೆಂಡತಿಯಾದ ಮಲ್ಲಮ್ಮಾ ಇವಳೊಂದಿಗೆ ಸ್ಥಳಕ್ಕೆ ಬಂದನು, ಅವರಿಗೆ ವಿಷಯ ತಿಳಿಸಿದ್ದು, ಅಷ್ಟರಲ್ಲಿ 108 ಅಂಬುಲೆನ್ಸ ವಾಹನ ಸ್ಥಳಕ್ಕೆ ಬಂದಿದ್ದು ನನಗೆ ಅದರಲ್ಲಿ ಹಾಕಿಕೊಂಡು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಇಂದು ದಿನಾಂಕ 17-04-209 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ರಾಯಚೂರು-ರಾಮಸಮುದ್ರ ರೋಡಿನ ಮೇಲೆ ಹಳಗೇರಾ ಕ್ರಾಸ ಹತ್ತಿರ ಕಾರ ನಂ: ಕೆಎ-33/ಎಮ್-4711 ನೆದ್ದರ ಚಾಲಕನಾದ ಮಹ್ಮದ್ ಉಸ್ಮಾನ ತಂದೆ ಅಬ್ದುಲ್ ವಾರೀಸ್ ಸಗರಿ ಸಾ: ಯಾದಗಿರಿ ಇತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಈ ಘಟನೆಗೆ ಕಾರಣನಾಗಿದ್ದು ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು ಮರಳಿ 12-15 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 61/2019 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 101/2019.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ ;- ದಿನಾಂಕ 17/04/2019 ರಂದು 15-30 ಗಂಟೆಗೆ ಶ್ರೀ ನಾಗರಾಜ.ಜಿ, ಪಿ.ಐ, ಸಾಹೇಬರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ, ಇಂದು ದಿನಾಂಕ: 17/04/2019 ರಂದು ಬೆಳಿಗ್ಗೆ 11-30 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಮಾಹಿತಿ ಬಂದಿದ್ದೆನೆಂದರೆ, ಇಬ್ರಾಹಿಂಪೂರ ಗ್ರಾಮದ ತಾಂಡಕ್ಕೆ ಹೊಗುವ ರಸ್ತೆಯ ಮೇಲೆ ಇಳಿಗೇರ ಓಣಿಯಲ್ಲಿ ಇರುವ ಹೋಟೆಲ್ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ. ಅಂತ ಖಚಿತ ಮಾಹಿತಿ ಬಂದಮೇರೆಗೆ, ಠಾಣೆಯಲ್ಲಿ ಹಾಜರಿದ್ದ ಹುಲಗಪ್ಪ ಪಿ.ಸಿ.344, ಶರಣಪ್ಪ ಹೆಚ್,ಸಿ,164, ಜೀಪ್ ಚಾಲಕ ನಾಗರೆಡ್ಡಿ ಎ.ಪಿ.ಸಿ 161, ಇವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಹೇಳಿ, ಮಾನ್ಯ ಡಿವೈ,ಎಸ್,ಪಿ, ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿಕುರಿತು ನಾನು ಮತ್ತು ಸಿಬ್ಬಂದಿ ಜನರು, ಎಲ್ಲರು ಕೂಡಿ ಠಾಣೆಯ ಜೀಪ ನಂ ಕೆಎ-33ಜಿ-0138 ನೇದ್ದರಲ್ಲಿ ಕುಳಿತುಕೊಂಡು 11-40 ಗಂಟೆಗೆ ಠಾಣೆಯಿಂದ ಹೋರಟೆವು. ಸದರಿ ಜೀಪನ್ನು ನಾಗರೆಡ್ಡಿ ಎ,ಪಿ,ಸಿ, ಇವರು ಚಲಾಯಿಸುತ್ತ ನೇರವಾಗಿ 12-25 ಗಂಟೆಗೆ ಇಬ್ರಾಯಿಂಪೂರ ಗಾಮದ ಕೆರೆ ಹತ್ತಿರ ಚೆಟ್ನಳ್ಳಿ ಕ್ರಾಸ್ ಹತ್ತಿರ ಹೋಗಿ ಜೀಪನಿಲ್ಲಿಸಿ, ಅಲ್ಲೆ ಇಬ್ಬರು ನಿಂತ್ತಿದ್ದು ಸದರಿಯವರಿಗೆ ಕರೆದು 1] ಸದ್ದಾಂ ತಂದೆ ಮೈಬೂಬಸಾಬ ಮುಜಾವರ ವ|| 28 ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ಇಬ್ರಾಹಿಂಪೂರ 2] ಹುಸನಯ್ಯ ತಂದೆ ನಾಗಯ್ಯ ಗುತ್ತೆದಾರ ವ|| 28 ಜಾ|| ಇಳಿಗೇರ ಉ|| ಕೂಲಿಕೆಲಸ ಸಾ|| ಇಬ್ರಾಹಿಂಪೂರ, ಇವರಿಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಪಂನಾಮೇಯನ್ನು ಬರೆಯಿಸಿಕೊಡಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಜೀಪಿನಲ್ಲಿದ್ದ ಸಿಬ್ಬಂದಿಯವರಿಗೆ ಪರಿಚಯ ಮಾಡಿಸಿ, ನಾನು, ಪಂಚರು ಮತ್ತು ಸಿಬ್ಬಂದಿಯವರು ಠಾಣೆಯ ಜೀಪನಲ್ಲಿ ಕುಳಿತುಕೊಂಡು ಹೋರಟು 12-35 ಗಂಟೆಗೆ ಗ್ರಾಮ ಪಂಚಾಯತಿ ಹತ್ತಿರ ಜೀಪ ನಿಲ್ಲಿಸಿ, ಜೀಪಿನಿಂದ ಎಲ್ಲರು ಇಳಿದು ನಡೆದುಕೊಂಡು ತಾಂಡಾದ ಕಡೆಗೆ ಹೋಗುವ ರಸ್ತೆಯ ಮೇಲೆ ಹೋಗಿ ಇಳಿಗೇರ ಓಣಿಯಲ್ಲಿ ಇರುವ ಹೋಟೆಲ್ ಹತ್ತಿರ ಹೋಗಿ ಮನೇಗಳ ಗೋಡೆಯ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ, ಒಬ್ಬ ವ್ಯೆಕ್ತಿ ರಸ್ತೆಯ ಪಕ್ಕದಲ್ಲಿ ಹೋಟೆಲ್ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 12-50 ಗಂಟೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಮದ್ಯ ಕುಡಿಯಲು ಅನುಕುಲ ಮಾಡಿಕೊಟ್ಟಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು. ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಲ್ಲಪ್ಪ ತಂದೆ ಅಪ್ಪಣ್ಣ ಶಹಾಬಾದ ವ|| 38 ಜಾ|| ಬೇಡರ ಉ|| ಹೋಟೆಲ್ ವ್ಯಾಪಾರ ಸಾ|| ಇಬ್ರಾಹಿಂಪೂರ, ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಇಬ್ರಾಹಿಂಪೂರ ಗ್ರಾಮದಲ್ಲಿ ಇಳಿಗೇರ ಓಣಿಯಲ್ಲಿ ಹೋಟೆಲ್ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು, ನಾನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 1] 90 ಎಂ.ಎಲ್.ನ ಒಟ್ಟು 11 ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೆಟ್ಗಳು ಇದ್ದು ಒಂದು ಪಾಕೆಟ್ನ ಕಿಮ್ಮತ್ತು 30=32 ರೂ ಅಂತಾ ಇದ್ದು, ಒಟ್ಟು ಮದ್ಯದ ಪಾಕೇಟ್ಗಳ ಕಿಮ್ಮತ್ತು 333=52 ರೂ ಗಳಾಗುತ್ತಿದ್ದು, 2] 04 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ: 00=00 ರೂ 3] ಮದ್ಯ ಕುಡಿಯಲು ಉಪಯೋಗಿಸಿದ 90 ಎಂ.ಎಲ್.ನ 4 ಖಾಲಿ ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೆಟ್ಗಳು ಇದ್ದವು. ಅ:ಕಿ:00=00 ರೂ ಒಟ್ಟು 11 ಮದ್ಯದ ಪಾಕೇಟ್ಗಳಲ್ಲಿ ಒಂದು 90 ಎಂ.ಎಲ್.ನ ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೆಟ್ನ್ನು ಪಂಚರ ಸಮಕ್ಷಮದಲ್ಲಿ ಎಫ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು ಮದ್ಯಾಹ್ನ 13-00 ಗಂಟೆಯಿಂದ 14-00 ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ ಮದ್ಯಾಹ್ನ 14-50 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 15-30 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 101/2019 ಕಲಂ 15(ಎ) 32( 3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 43/2019 ಕಲಂ: 323, 353, 427 504, 506 ಐಪಿಸಿ, ;- ದಿನಾಂಕ: 17/04/2019 ರಂದು 02.30 ಪಿಎಮ್ ಕ್ಕೆ ಶ್ರೀ. ಭೀಮಣ್ಣ ತಂದೆ ಹಣಮಂತ ಗಣಪೂರ ವಯಾ:43 ವರ್ಷ ಉ: ಪೊಲೀಸ್ ಮುಖ್ಯ ಪೇದೆ ಗೋಗಿ ಪೊಲೀಸ್ ಠಾಣೆ ಜಾ: ಕಬ್ಬಲಿಗ ಸಾ: ಗುಡೂರ ತಾ:ಜಿ: ಯಾದಗಿರಿ ಇವರು ಠಾಣೆಗೆ ಹೇಳಿಕೆ ನೀಡಿದ್ದು ಅದರಿ ಹೇಳಿಕೆಯ ಸಾರಾಂಶವೆನೆಂದರೆ, ಇಂದು ದಿನಾಂಕ: 17/04/2019 ರಂದು 08.00 ಎಎಂ ದಿಂದ 02.00 ಪಿಎಂ ವರೆಗೆ ಇರುವ ದಿನಚರಿ ಕರ್ತವ್ಯ ನಿರ್ವಹಿಸುತ್ತಿದ್ದಾ, ಶ್ರೀ. ರಾಜಗೋಪಾಲ ಸಿಪಿಸಿ-217 ರವರು ಠಾಣೆಯ ಪಹರೆ ಕರ್ತವ್ಯದಲ್ಲಿ ಇದ್ದರು, 01.30 ಪಿಎಂ ಸುಮಾರಿಗೆ ನಾವುಗಳು ನಮ್ಮ ಕರ್ತವ್ಯದಲ್ಲಿ ಇದ್ದಾಗ ಗೋಗಿ ಪೇಠ ಗ್ರಾಮದ ನಿವಾಸಿತನಾದ 1) ಮೈಬೂಬ @ ಮಹ್ಮದ ಮೈಬೂಬ ತಂದೆ ಯೂಸೂಪಸಾಬ ಖೈನೂರ ವಯಾ: 30 ವರ್ಷ ಜಾ: ಮುಸ್ಲಿಂ ಸಾ; ಗೋಗಿ ಪೇಠ ಇತನು ಠಾಣೆಗೆ ಬಂದು ಠಾಣೆಯ ಪ್ರವೇಶ ದ್ವಾರದಲ್ಲಿ ತನ್ನ ಮೋಬೈಲ್ ಹಿಡಿದುಕೊಂಡು ವಿಡಿಯೋ ಮಾಡುತ್ತಿರುವ ಹಾಗೆ ಮಾಡುತ್ತ ಬಂದನು ಆಗ ನಾನು ಯಾಕೆ ಬಂದಿದ್ದಿಯಾ ಏನು ಮಾಡುತ್ತಿದ್ದಿಯಾ ಅಂತಾ ಕೇಳಿದಾಗ ನಾನು ಏನಾದರೂ ಮಾಡುತ್ತೇನೆ ನೀವು ಪೊಲೀಸರು ಏನು ಮಾಡುತ್ತೀರಿ ಸೂಳೆ ಮಕ್ಕಳೆ ಅಂತಾ ಬೈಯತೊಡಗಿದ ಆಗ ನಾನು ಮತ್ತು ಸೆಂಟ್ರಿ ಕರ್ತವ್ಯದಲ್ಲಿ ಇದ್ದ ರಾಜಗೋಪಾಲ ಕಂಪ್ಯೂಟರ ಕರ್ತವ್ಯ ನಿರ್ವಹಿಸುತ್ತಿದ್ದ ಹಣಮಂತ್ರಾಯ ಸಿಪಿಸಿ-331, ಮೂರು ಜನರು ಯಾಕೆ ಅವಾಚ್ಯ ಬೈಯುತ್ತಿ ಏನು ಆಗಿದೆ ಅಂತಾ ಕೇಳುತ್ತಿದ್ದಾಗ ಸದರಿ ಮೈಬೂಬ @ ಮಹ್ಮದ ಮೈಬೂಬ ತಂದೆ ಯೂಸೂಪಸಾಬ ಖೈನೂರ ಈತನು ಹಣಮಂತ್ರಾಯ ಸಿಪಿಸಿ-331 ರವರಿಗೆ ಸೂಳೆ ಮಗನೆ ನಿಮ್ಮ ಪಿಎಸ್ಐ ನೆ ನಾನು ಬಂದಾಗ ಸುಮ್ಮನಿರುತ್ತಾನೆ ನೀನೆ ನನಗೆ ಕೇಳಲು ಬರುತ್ತಿ ಅಂತಾ ಬೈಯುತ್ತಾ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆದು ಅಂಗಿ ಹರಿದಿರುತ್ತಾನೆ. ಆಗ ಅಲ್ಲಿಗೆ ಬಂದ ವಿಠೋಬಾ ಹೆಚ್.ಸಿ-91, ಮತ್ತು ನಾನು ಹಾಗೂ ರಾಜಗೋಪಾಲ ಪಿಸಿ-217 ರವರು ಬಿಡಿಸಿಕೊಳ್ಳುವಾಗ ನನಗೆ ಮತ್ತು ವಿಠೋಬಾ ಹೆಚ್.ಸಿ ರವರಿಗೆ ಚೂರಿರುತ್ತಾನೆ. ಮತ್ತು ರಾಜಗೋಪಾಲ ಇವರಿಗೆ ಸಮವಸ್ತ್ರ ಹಿಡಿದು ಎಳೆದಿರುತ್ತಾನೆ. ಆಗ ಸದರಿಯವನಿಗೆ ಅಶೋಕ ತಂದೆ ಶರಣಪ್ಪ ಬಡಿಗೇರ, ಜಾಫರಸಾಬ ತಂದೆ ಮಹ್ಮದ ಹುಸೇನಸಾಬ ಕಂಬಾರ, ಶರಣಗೌಡ ಹೆಚ್.ಸಿ-155, ಮಂಜುನಾಥ ಪಿಸಿ-232, ಸುನೀಲಕುಮಾರ ಸಿಪಿಸಿ-221 ಇವರುಗಳು ಸದರಿಯನಿಗೆ ಕೂಡಿಸಿದಾಗ ಸದರಿ ಮೈಬೂಬ @ ಮಹ್ಮದ ಮೈಬೂಬ ತಂದೆ ಯೂಸೂಪಸಾಬ ಖೈನೂರ ಈತನು ಪಿಎಸ್ಐ ಅದಾನಾ ಇಲ್ಲಾ ಅಂತಾ ಪಿಎಸ್ಐ ರವರ ಚೇಂಬರಿನ ಬಾಗಿಲ ಪಡದಾ ಬಟ್ಟೆ ಎಳದು ಪೈಪ ಸಮೇತವಾಗಿ ಕಿತ್ತಿ ಹಾಕಿ ಹಾನಿ ಮಾಡಿರುತ್ತಾನೆ. ಮಕ್ಕಳೆ ನೀವು ಇನ್ನು ಮುಂದೆ ಗೋಗಿಯಲ್ಲಿ ಹ್ಯಾಂಗೆ ಕೆಲಸ ಮಾಡುತ್ತೀರಿ ನೋಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ.
ಸದರಿ ಮೈಬೂಬ ಈತನು ಈ ಮೋದಲು ಕೂಡ 4-5 ಬಾರಿ ಇದೆ ರೀತಿ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗಲೆ ಇದೆ ರೀತಿ ಠಾಣೆಗೆ ಬಂದು, ಠಾಣೆಯ ಮುಂದೆ ನಿಂತು ಪೊಲೀಸ್ ಸಿಬ್ಬಂದಿಗೆ ಬೈಯ್ದು ವಿಡಿಯೋ ಮಾಡುವದು ಮತ್ತು ಪಿಟ್ಸ ಬಂದವರ ಹಾಗೆ ಬೀಳುವದು ಮಾಡುವದು ಮಾಡುತ್ತಾ ಬಂದಿದ್ದಾನೆ ಇಂದು ಮತ್ತೆ ಠಾಣೆಗೆ ಬಂದು ನಮ್ಮ ಕರ್ತವ್ಯದಲ್ಲಿ ಅಡೆತಡೆ ಮಾಡಿ ತೊಂದರೆ ಪಡೆಸಿ ನನಗೆ ಮತ್ತು ವಿಠೋಬಾ ಹೆಚ್.ಸಿ-91 ಇಬ್ಬರಿಗೂ ಚೂರಿದ್ದು, ಹಣಮಂತ್ರಾಯ ಪಿಸಿ-331 ಇವರಿಗೆ ಕೈಯಿಂದ ಚೂರಿ ಅಂಗಿ ಹರಿದು ಕೈಯಿಂದ ಹೊಡೆದು ನಮ್ಮ ಕರ್ತವ್ಯಕ್ಕೆ ತೊಂದರೆ ಕೊಟ್ಟು ಅಡೆತಡೆ ಮಾಡಿದ್ದು ನಂತರ ಮತ್ತೆ ಪಿಟ್ಸ್ ಬಂದವರ ಹಾಗೆ ಬಿದ್ದಿರುತ್ತಾನೆ ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 43/2019 ಕಲಂ: 323, 353, 427 504, 506 ಐಪಿಸಿ, ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using