ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 16-04-2019

By blogger on ಮಂಗಳವಾರ, ಏಪ್ರಿಲ್ 16, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-04-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 100/2019 ಕಲಂ 457, 380 ಐಪಿಸಿ:-ದಿನಾಂಕ: 16/04/2019 ರಂದು 09.00 ಎ.ಎಂ.ಕ್ಕೆ ಶ್ರೀ ಶ್ರೀ ವೆಂಕಟೇಶ ತಂ/ ಗುರುಲಿಂಗಪ್ಪ ಗುರಸುಣಗಿ ಸಾ|| ಕಂಚಲಕವಿ ತಾ|| ಶಹಾಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದಿ ಸಾರಾಂಶವೇನೆಂದರೆ, , ನನ್ನ ಮಾವನವರಾದ ಅವ್ವಣಗೌಡ ತಂ/ ಬಸವಂತ್ರಾಯ ಕೊಳ್ಳಿ ರವರು 6-7 ತಿಂಗಳ ಹಿಂದೆ ಶಹಾಪುರದ ಬಾಪುಗೌಡ ನಗರದ ಹೊಸ ತಹಸೀಲ್ ಆಫೀಸ್ ಹಿಂದುಗಡೆ ಹೊಸ ಮನೆಯನ್ನು ಕಟ್ಟಿಸಿ ಅಲ್ಲಿಯೇ ವಾಸವಾಗಿದ್ದರು, ನಿನ್ನೆ ದಿನಾಂಕ: 15/04/2018 ರಂದು ರಾಜನಕೊಳ್ಳೂರಿನಲ್ಲಿ ನಮ್ಮ ಸಂಬಂಧಿಕರ ಮದುವೆ ಇದ್ದುದರಿಂದ  ದಿನಾಂಕ:14/04/2019 ರಂದು ಮಧ್ಯಾಹ್ನ 3.00 ಪಿ.ಎಂ.ಕ್ಕೆ ನಮ್ಮ ಮಾವ ಅವ್ವಣಗೌಡ ಕೊಳ್ಳಿ ಮತ್ತು ಅತ್ತೆ ಸರೋಜಾ ಇಬ್ಬರು ಮನೆಗೆ ಕೀಲಿ ಹಾಕಿಕೊಂಡು ರಾಜನಕೊಳ್ಳುರಿಗೆ ಹೋಗಿದ್ದರು. ದಿನಾಂಕ; 16/04/2019 ರಂದು ಬೆಳಿಗ್ಗೆ 6.15 ಎ.ಎಂ.ಕ್ಕೆ ನಮ್ಮ ಮಾವ ಅವ್ವಣಗೌಡ ರವರು ನನಗೆ ಫೋನ್ ಮಾಡಿ ನಮ್ಮ ಮನೆಯ ಬಾಗಿಲು ಕೊಂಡಿ ಮುರಿದಿದ್ದು ಬಾಗಿಲು ಓಪನ್ ಆಗಿದೆ ಅಂತಾ ನಮ್ಮ ಮನೆಯ ಮೊದಲನೆನೆ ಮಹಡಿಯಲ್ಲಿ ಬಾಡಿಗೆ ಇರುವ ಲಿಂಗನಗೌಡ ಮಾಲಿಪಾಟೀಲ್ ಇವರು ಫೋನ್ ಮಾಡಿ ತಿಳಿಸಿದ್ದಾರೆ ಸ್ವಲ್ಪ ಹೋಗಿ ನೋಡಿ ಅಂತಾ ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ರೇಣುಕಾ ಇಬ್ಬರು ಕೂಡಿಕೊಂಡು ಶಹಾಪುರದ ಬಾಪುಗೌಡ ನಗರದಲ್ಲಿರುವ ನಮ್ಮ ಮಾವನವರ ಮನೆಗೆ ಬಂದು ನೋಡಲಾಗಿ ಕಂಪೌಂಡ್ನ ಚಿಕ್ಕ ಗೇಟಿಗೆ ಹಾಕಿದ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯ ಮುಖ್ಯ ಬಾಗಿಲ ಕೊಂಡಿ ಮುರಿದು ಮನೆಯೊಳಗಡೆ ಹೋಗಿ ಎರಡು ಬೆಡ್ ರೂಮಿನ ಕೊಂಡಿ ಮುರಿದಿದ್ದು ಬಾಗಿಲು ಓಪನ ಆಗಿದ್ದವು ರೂಮಿನಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಅಲ್ಲಿಗೆ ಬಂದ ಲಿಂಗನಗೌಡ ಮಾಲಿಪಾಟೀಲ್ ಇವರಿಗೆ ವಿಚಾರಿಸಲಾಗಿ ನಿನ್ನೆ ರಾತ್ರಿ 10.00 ಪಿ.ಎಂ.ಕ್ಕೆ ನಾನು ಮೇನ್ ಗೇಟ ಕೀಲಿ ಹಾಕಿ ಮನೆಯೊಳಗೆ ಹೋಗಿ ರಾತ್ರಿ 11.00 ಪಿ.ಎಂ.ಕ್ಕೆ ಮಲಗಿರುತ್ತೇನೆ. ಇಂದು ದಿನಾಂಕ:16/04/2019 ರಂದು ಬೆಳಿಗ್ಗೆ 5.30 ಎ.ಎಂ.ಕ್ಕೆ ಎಚ್ಚರವಾದಾಗ ನಮ್ಮ ಮನೆಯ ಹೊರ ಕೊಂಡಿಯನ್ನು ಯಾರೋ ಹಾಕಿದ್ದು ಗೊತ್ತಾಗಿ ಪಕ್ಕದ ಕೋಣೆಯಲ್ಲಿ ಬಾಡಿಗೆ ಇರುವ ಚನ್ನಬಸಪ್ಪಗೌಡ ಪಾಟೀಲ್ ಇವರಿಗೆ ಫೋನ್ ಮಾಡಿ ತಿಳಿಸಿದಾಗ ಅವರು ಬಂದು ನಮ್ಮ ಕೋಣೆಯ ಬಾಗಿಲ ಕೊಂಡಿಯನ್ನು ತೆಗೆದಾಗ ಇಬ್ಬರು ಕೂಡಿ ಕೆಳಗೆ ಬಂದು ನೋಡಲಾಗಿ ನಿಮ್ಮ ಮಾವನವರ ಮನೆಯ ಕೊಂಡಿ ಮುರಿದಿದ್ದು, ಬಾಗಿಲು ಓಪನ ಆಗಿತ್ತು ಮತ್ತು ಕಂಪೌಂಡನ ಚಿಕ್ಕ ಗೇಟಿಗೆ ಹಾಕಿದ್ದ ಕೀಲಿಕಪ್ಪಿ ಕಾಣಿಸಲಿಲ್ಲ ನಂತರ ನಿಮ್ಮ ಮಾವನವರಿಗೆ ಫೋನ್ ಮಾಡಿ ತಿಳಿಸಿರುತ್ತೇನೆ ಅಂತಾ ಹೇಳಿದರು ನಂತರ ನನ್ನ ಹೆಂಡತಿ ರೇಣುಕಾ ಇವರು ತನಗೆ ಗೊತ್ತಿರುವ ಈ ಕೆಳಕಾಣಿಸಿದ ಬಂಗಾರದ ಆಭರಣಗಳು ಕಳ್ಳತನವಾಗಿರುತ್ತವೆ ಅಂತಾ ಹೇಳಿದ್ದು, ಅವು ಈ ಕೆಳಕಾಣಿಸಿದಂತೆ ಇರುತ್ತವೆ. 1) 4 ಜೊತೆ ಬಂಗಾರದ ಕಿವಿಯೋಲೆಗಳು ಒಟ್ಟು ತೂಕ 12 ಗ್ರಾಂ ಅ.ಕಿ|| 30,000=00 ರೂ. 2) 3 ಜೊತೆ ಬಂಗಾರದ ಕಿವಿಯೋಲೆಗಳು(ಸಣ್ಣ ಮಕ್ಕಳ) ಒಟ್ಟು ತೂಕ 10 ಗ್ರಾಂ ಅ.ಕಿ|| 25,000=00 ರೂ. 3) ತಲಾ 8 ಗ್ರಾಂ.ನ ಎರಡು ಬಂಗಾರದ ಲಾಕೆಟ್ ಅ.ಕಿ|| 40,000=00 ರೂ 4) 35 ಗ್ರಾಂ.ನ ಬಂಗಾರ ಬಳೆಗಳು(ಸಣ್ಣ ಮಕ್ಕಳ) ಅ.ಕಿ|| 87,500=00 ರೂ. ನೇದ್ದವುಗಳನ್ನು ದಿನಾಂಕ:15/04/2019 ರಂದು ರಾತ್ರಿ 11.00 ಪಿ.ಎಂ ರಿಂದ ಇಂದು ದಿನಾಂಕ: 16/04/2019 ರಂದು ಬೆಳಿಗ್ಗೆ 5.30 ಎ.ಎಂ. ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮಾವನ ಮನೆಯ ಮುಖ್ಯ ಬಾಗಿಲ ಕೊಂಡಿಯನ್ನು ಮುರಿದು ಮನೆಯೊಳಗೆ ಹೋಗಿ ಮೇಲ್ಕಾಣಿಸಿದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ದಿನಾಂಕ: 15/04/2019 ರಂದು ರಾತ್ರಿ 11.00 ಪಿ.ಎಂ ರಿಂದ ಇಂದು ದಿನಾಂಕ: 16/04/2019 ರಂದು ಬೆಳಿಗ್ಗೆ 5.30 ಎ.ಎಂ. ಮಧ್ಯದ ಅವಧಿಯಲ್ಲಿ ನಮ್ಮ ಮಾವನವರ ಮನೆಯ ಬಾಗಿಲ ಕೊಂಡಿಯನ್ನು ಮುರಿದು ಮನೆಯೊಳಗೆ ಪ್ರವೇಶ ಮಾಡಿ ಬೆಡ್ ರೂಮಿನಲ್ಲಿದ್ದ ಅಲಮಾರಿಯೊಳಗೆ ಇಟ್ಟ ಒಟ್ಟು 182500=00 ರೂ ಮೌಲ್ಯದ ಬಂಗಾರದ ಆಭರಣ ಕಳ್ಳತನವಾದಂತೆ ಈಗ ಸದ್ಯಕ್ಕೆ ಕಂಡು ಬಂದಿರುತ್ತದೆ. ನಮ್ಮ ಮಾವನವರು ರಾಜನಕೊಳ್ಳೂರಿನಿಂದ ಬಂದ ನಂತರ ಅವರೊಂದಿಗೆ ವಿಚಾರ ಮಾಡಿ ಇನ್ನೂ ಬೇರೆ ಏನಾದರು ಆಭರಣ, ಮತ್ತು ನಗದು ಹಣ ಇತ್ಯಾದಿ ಕಳ್ಳತನವಾಗಿದ್ದರೆ ನಂತರ ಬಂದು ತಿಳಿಸುತ್ತೇನೆ. ಕಾರಣ ಈ ಬಗ್ಗೆ ಕಾನೂನು ರೀತಿಯ ಕ್ರಮ ಕೈಕೊಂಡು, ಕಳುವಾದ ಬಂಗಾರದ ಆಭರಣ ಪತ್ತೆ ಹಚ್ಚಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.100/2019 ಕಲಂ 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 21/2019 ಕಲಂ:78() ಕೆ ಪಿ ಆಕ್ಟ:- ದಿನಾಂಕ: 15.04.2019 ರಂದು 3:30ಪಿಎಮ್ ಕ್ಕೆ  ಪಿಎಸ್ಐ ಸಾಹೇಬರ ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಜ್ಞಾಪನಾ ಪತ್ರದ ಸಾರಾಂಶವೆನೆಂದರೆ ದಿನಾಂಕ:15.04.2019  ರಂದು 1:00 ಪಿ.ಎಮ್ ಗಂಟೆಗೆ ತಾವು ಉಪ ಠಾಣೆಕಕ್ಕೇರಾದಲ್ಲಿದ್ದಾಗ ಕಕ್ಕೇರಾ ಪಟ್ಟಣದ ಸಂಗಮೇಶ್ವರ ಮಠದ ಮುಂದಿನ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಕಲ್ಯಾಣ ಮಟಕಾ  ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದು. ಸದರಿ ದಾಳಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೆಚ್ಸಿ-143 ರವರಿಗೆ ತಿಳಿಸಿದ್ದರಿಂದ ಇಬ್ಬರು ಪಂಚರಾದ ಪರಮಣ್ಣ ತಂದೆ ಅಯ್ಯಪ್ಪ ಗುಡಿಪುಜಾರಿ, ಬಸವರಾಜ ತಂದೆ ಮಲ್ಲಪ್ಪ ಕೈಲಾಸ ಸಾ:ಇಬ್ಬರೂ ಕಕ್ಕೇರಾ ತಾ: ಸುರಪೂರ ರವರಿಗೆ ಕರೆದುಕೊಂಡು 1:10 ಪಿಎಮ್ ಕ್ಕೆ ಉಪ ಠಾಣೆಗೆ ಬಂದಿದ್ದು ಸದರಿಯವರಿಗೆ ವಿಷಯ ತಿಳಿಸಿ ಮಟಕಾ ಜುಜಾಟದ ಜಪ್ತಿ ಪಂಚನಾಮೆಗೆ ಪಂಚರಾಗಲು ಒಪ್ಪಿಕೊಂಡ ಮೇರೆಗೆ ಉಪ ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಪಿಸಿ-216 ರವರಿಗೆ ವಿಷಯ ತಿಳಿಸಿ ಠಾಣೆಯ ಸರಕಾರಿ ಜೀಪ್ ನಂ ಕೆಎ-33 ಜಿ-0165 ನೇದರಲ್ಲಿ  ಸಿಬ್ಬಂದಿಯವರಾದ ಹೆಚ್ಸಿ-143 ಪ್ರಕಾಶ, ಪಿಸಿ-216 ಲಿಂಗಪ್ಪ ರವರು ಹಾಗೂ ಪಂಚರೊಂದಿಗೆ ಉಪ ಠಾಣೆಯಿಂದ 1:15 ಪಿಎಮ್ ಕ್ಕೆ ಬಿಟ್ಟು  ಬಾತ್ಮಿ ಬಂದ ಸ್ಥಳವಾದ ಕಕ್ಕೇರಾ ಪಟ್ಟಣದ ಸಂಗಮೇಶ್ವರ ಗುಡಿಯ ಮುಂದೆ ಸ್ವಲ್ಪ ದೂರದಲ್ಲಿ  1:25 ಪಿಎಮ್ ಕ್ಕೆ ತಲುಪಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಎಲ್ಲರು ಕೆಳಗೆ ಇಳಿದು ಮರೆಮರೆಯಾಗಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ ಸಂಗಮೇಶ್ವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ  ಒಬ್ಬನು ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಬರ್ರಿ ಒಂದು ರೂ.ಗೆ 80 ರೂಪಾಯಿ ಕಲ್ಯಾಣಿ ಮಟಕಾ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಒಂದು ಚೀಟಿಯಲ್ಲಿ ನಂಬರ್ ಬರೆದುಕೊಡುತ್ತಿದ್ದು ಖಾತರಿ ಆದ ಮೇಲೆ ನಾನು ಮತ್ತು ಸಿಬ್ಬಂದಿಯವರು 1:30 ಪಿಎಮ್ ಕ್ಕೆ ಓಡಿ ಹೋಗಿ ದಾಳಿ ಮಾಡಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ಹಿಡಿದಿದ್ದು ಮಟಕಾ ನಂಬರ್ ಬರೆಸುವವರು ಓಡಿ ಹೋಗಿದ್ದು ಮಟಕಾ ಮಟಕಾ ನಂಬರ್ ಬರೆದುಕೊಳ್ಳುವವನನ್ನು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಪರಮಣ್ಣ ತಂದೆ ದೇವಿಂದ್ರಪ್ಪ ದಳಾರ ವ:45 ವರ್ಷ ಜಾತಿ: ಬೇಡರ ಉ:ಒಕ್ಕಲುತನ ಸಾ:ಹಿರೆಹಳ್ಳ ಬೂದನೂರು ದೊಡ್ಡಿ  ಕಕ್ಕೇರ ತಾ: ಸುರಪೂರ ಅಂತಾ ತಿಳಿಸಿದ್ದು ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ವಶದಲ್ಲಿ  ಒಂದು ಬಾಲ್ ಪೆನ್ನು, ಒಂದು ಅಂಕಿ-ಸಂಖ್ಯೆ ಬರೆದ ಮಟಗಾ ಚೀಟಿ, ಮತ್ತು ನಗದು ಹಣ 1350 ರೂಪಾಯಿಗಳು ದೊರೆತಿದ್ದು ಈ ಬಗ್ಗೆ ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆಯನ್ನು 1:30 ಪಿ.ಎಮ್ ದಿಂದ 2:30 ಪಿಎಮ್ ವರೆಗೆ  ಜರುಗಿಸಿ ಆರೋಪಿ ಹಾಗು ಮುದ್ದೇಮಾಲಿನೊಂದಿಗೆ ಠಾಣೆಗೆ 3:30 ಪಿ.ಎಮ್ ಕ್ಕೆ ಬಂದು ನಿಮಗೆ ನಾನು ಪೂರೈಸಿದ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನ ಪತ್ರದೊಂದಿಗೆ ತಮಗೆ ಹಾಜರುಪಡಿಸಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ  ಅಂತಾ ಇದ್ದು ಸದರಿ ಸಾರಾಂಶವು  ಅಸಂಜ್ಞೇ ಅಪರಾಧವಾಗಿದ್ದರಿಂದ ಸದರ ಪ್ರಕರಣದಲ್ಲಿ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆಗಾಗಿ ನಿನ್ನೆ ದಿನಾಂಕ: 15.04.2019 ರಂದು ನಾನು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದು ನಿವೇದಿಸಿಕೊಂಡಿದ್ದು. ಇಂದು ದಿನಾಂಕ: 16.04.2019 ರಂದು 4:00 ಪಿ ಎಂ ಕ್ಕೆ  ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಪರವಾನಿಗೆ ಯಾದಿಯನ್ನು ಹಾಜರಪಡಿಸಿದ್ದು. ನಿನ್ನ ಪಿಎಸ್ಐ ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ: 21/2019 ಕಲಂ: 78 (111) ಕೆ.ಪಿ. ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:- 10/2019 ಕಲಂ: 366 ಐ.ಪಿ.ಸಿ:- ದಿನಾಂಕ: 16.04.2019 ರಂದು 12.30 ಪಿ.ಎಂಕ್ಕೆ ಶ್ರಿಮತಿ ಜ್ಯೋತಿ ಗಂಡ ಧನರಾಜ್ ಪವ್ಹಾರ  ವಯಾ- 25 ಉ- ಎ.ಪಿ.ಎಂ.ಸಿ ಯಲ್ಲಿ ಕಂಪ್ಯೂಟರ್ ಕೆಲಸ ಜಾತಿ- ಲಮ್ಹಾಣಿ ಸಾ- ಲಕ್ಷ್ಮಿಪೂರ ತಾ- ಹರಪನಹಳ್ಳಿ ಜಿ- ದಾವಣಗೇರಾ ಹಾ.ವ. ಸಹರಾ ಕಾಲೂನಿ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಟೈಫ್ ಮಾಡಿರುವ ದೂರು ಹಾಜರಪಡಿಸಿದ್ದು ಅದರ ಸಾರಂಶವೇನೆಂದರೆ  ನನ್ನ ಖಾಸಾ ಚಿಕ್ಕಮ್ಮಳ ಮಗಳಾದ ಕುಮಾರಿ ಉಮಾಬಾಯಿ ತಂದೆ ಹೀರ್ಯಾ ನಾಯಕ ವಯಾ-20 ಈಕೆಯು  ಚಿಕ್ಕಂದಿನಂದಿನಲೂ ನಮ್ಮ ಹತ್ತಿರ ಬೆಳದಿದ್ದು, ಉಮಾಬಾಯಿ ಈಕೆಯನ್ನು ನಾನು ಮತ್ತು ನನ್ನ ಗಂಡ ಧನರಾಜ ಅವಳ ವಿದ್ಯಾಭ್ಯಾಸಕ್ಕಾಗಿ ಕರೆದುಕೊಂಡು ಬಂದು ನಮ್ಮ ಹತ್ತಿರನೇ ಇಟ್ಟುಕೊಂಡಿರುತ್ತೇವೆ.  ಉಮಾಬಾಯಿ ಈಕೆಯು 2 ನೇ ವರ್ಷದ ಡಿಪ್ಲೋಮಾ 4 ನೇ ಸೇಮಿಸ್ಟಿರಿಯಲ್ಲಿ ಅಭ್ಯಾಸ ಮಾಡಿಕೊಂಡು ಇರುತ್ತಾಳೆ. ಪ್ರತಿ ನಿತ್ಯ ಕಾಲೇಜಿಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದಳು.  ದಿನಾಂಕ: 09.04.2019 ರಂದು ಬೆಳಿಗ್ಗೆ 10.30 ಎ.ಎಂಕ್ಕೆ ಎಂದಿನಂತೆ ನಾನು ನನ್ನ ಕೆಲಸಕ್ಕೆ ಹೋಗುವಾಗ ನನ್ನ ಸಂಗಡ ಬಂದು ಕಾಲೇಜಿಗೆ ಹೋಗುತ್ತೇನೆ ಅಂತ ಹೇಳಿ ಹೋದಳು. ಸಂಜೆಯಾದರೂ ಮರಳಿ ಮನೆಗೆ ಬರದೇ ಇದ್ದರಿಂದ ನಾನು ಮತ್ತು ನನ್ನ ಗಂಡ ಧನರಾಜ ಇಬ್ಬರೂ ಕೂಡಿ ಯಾದಗಿರಿ ನಗರದಲ್ಲಿ ಎಲ್ಲಾ ಕಡೆ ಹುಡುಕಾಡಲು ರೈಲ್ವೇ ಸ್ಟೇಷನ್ , ಹಳೆ ಬಸ್ ನಿಲ್ದಾಣ , ಹೊಸ ಬಸ್ ನಿಲ್ದಾಣ, ಸಹರಾ ಕಾಲೂನಿ, ಗಂಜ ಏರಿಯಾ ಎಲ್ಲಾ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ.  ಅವಳನ್ನು ಯಾರೋ ಅಪರರಿಚಿತರು ಮನವಲಿಸಿ , ಪುಸಲಾಯಿಸಿ ಅವಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ. ಅಂತ ಇತ್ಯಾಧಿ ದೂರಿನ ಮೇಲಿಂದ ಠಾಣೆಯ ಗುನ್ನೆ ನಂ; 10/2019 ಕಲಂ: 366 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!