ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-04-2019

By blogger on ಮಂಗಳವಾರ, ಏಪ್ರಿಲ್ 16, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 16-04-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 38/2019 ಕಲಂ 32, 34 ಕೆ ಇ ಆಕ್ಟ:- ದಿನಾಂಕ.15/04/2019 ರಂದು 12-15 ಪಿಎಂಕ್ಕೆ ಶ್ರೀ ಬಾಪುಗೌಡ ಪಾಟೀಲ ಪಿ.ಎಸ್ಐ (ಕಾ.ಸು) ಸಾಹೇಬರು ರವರು ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ.15/04/2019 ರಂದು 9-45 ಎಎಂ ಸುಮಾರಿಗೆ ಠಾಣೆಯಲ್ಲಿರುವಾಗ ಭಾತ್ಮಿ ಬಂದಿದ್ದೆನೆಂದರೆ, ಯಾದಗಿರಿ ನಗರದ  ಗಾಂಧಿನಗರ ತಾಂಡಾ ಕ್ರಾಸ ಹತ್ತಿರ ಯಾರೋ ಒಬ್ಬನು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯದವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದಿದ್ದು  ಠಾಣೆಯಿಂದ 10-30 ಎಎಂಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೋರಟು    ಗಾಂದಿನಗರ ತಾಂಡಾ ಕ್ರಾಸ ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು  ಮುಂದೆ ನಡೆದುಕೊಂಡು ಹೊರಟು ಶಾಸ್ತ್ರೀಚೌಕದ ಮರೆಯಲ್ಲಿ ನಿಂತು ನೋಡಲಾಗಿ ಗಾಂದಿನಗರ ತಾಂಡಾದ ಕ್ರಾಸ ಹತ್ತಿರ ಒಂದು ಹೋಟೆಲ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು 11-00 ಎಎಂಕ್ಕೆ  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು  ಕುಮಾರ ತಂದೆ ಸೀತಾರಾಮ ರಾಠೋಡ ವ;24 ಜಾ; ಲಂಬಾಣಿ ಉ; ಕೂಲಿಕೆಲಸ ಸಾ; ಗಾಂದಿನಗರ ತಾಂಡಾ ಯಾದಗಿರಿ ಅಂತಾ ತಿಳಿಸಿದನು. ಸದರಿಯವನ ಹತ್ತಿರ ಸ್ಥಳದಲ್ಲಿ ಚೀಲದಲ್ಲ್ಲಿ 1) 20 ಮೆಕಡೋವೆಲ್ಸ್ ರಮ್ 180 ಎಮ.ಎಲ್ದ ಪೌಚಗಳು ಒಂದಕ್ಕೆ 90.91 ರೂ.ದಂತೆ ಒಟ್ಟು 1804=00 ರೂ 2) 74 ಓರಿಜಿನಲ್ ಚಾಯ್ಸ ಪೌಚ್ ವಿಸ್ಕಿ 90 ಎಂ.ಎಲ್.ಪೌಚಗಳಿದ್ದು ಒಂದಕ್ಕೆ 30.32 ರೂ.ದಂತೆ ಒಟ್ಟು 2243=00 ರೂ. 3) 60 ಯು.ಎಸ್. ವಿಸ್ಕಿ 90 ಎಮ್.ಎಲ್ ಒಂದಕ್ಕೆ 30.32/-ರೂ. ದಂತೆ ಒಟ್ಟು 1819=00 ರೂ.  ಕಿಮತ್ತಿನವುಗಳಿದ್ದು ಸದರಿಯವನಿಗೆ  ಮದ್ಯವನ್ನು ಮಾರಾಟ ಮಾಡುವುದಕ್ಕೆ ಯಾವುದೇ ಸಕರ್ಾರದ ಪರವಾನಿಗೆ ಇದ್ದರೇ ಹಾಜರುಪಡಿಸುವಂತೆ ವಿಚಾರಿಸಲು ಅವನು ಯಾವುದೇ ಪರವಾನಿಗೆ ಇರುವುದಿಲ್ಲ. ನಂತರ ಮೇಲ್ಕಂಡ ಎಲ್ಲಾ ಮಧ್ಯದ ಬಾಟಲಿಗಳಲ್ಲಿ ತಲಾ ಒಂದೊದನ್ನು ಶ್ಯಾಂಪಲ್ಗಾಗಿ ಎಫ್.ಎಸ್.ಎಲ್. ಪರೀಕ್ಷೆ ಕುರಿತು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ಉಳಿದ ಎಲ್ಲಾ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಚೀಲದಲ್ಲಿ ಹಾಕಿ ತಾಬೆಗೆ ತೆಗೆದುಕೊಂಡು ಜಪ್ತಿ ಪಂಚನಾಮೆಯನ್ನು 11-00 ಎಎಂ ದಿಂದ 12-00 ಪಿಎಂ ದವರೆಗೆ ಮುಗಿಸಿ ಮುಂದಿನ ಕ್ರಮಕ್ಕಾಗಿ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ 12-15 ಪಿಎಂಕ್ಕೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನಾ ಪತ್ರವನ್ನು ಒಪ್ಪಿಸುತ್ತಿದ್ದು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ.  ಅಂತಾ ಜ್ಞಾಪನಾ ಪತ್ರ ಹಾಗೂ ಜಪ್ತಿ ಪಂಚನಾಮೆ ಕೊಟ್ಟಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.38/2019 ಕಲಂ.32, 34, ಕೆ.ಇ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಭೀ ಗುಡಿ ಠಾಣೆ ಗುನ್ನೆ ನಂ:- 55/2019 ಕಲಂ 15(ಎ), 32(3) ಕೆ.ಇ ಎಕ್ಟ್:- ದಿನಾಂಕ: 15/04/2019 ರಂದು 7 ಪಿ.ಎಮ್ ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಮುಡಬೂಳ ಗ್ರಾಮದ ಹಣಮಂತ ದೇವರ ಗುಡಿ ಹತ್ತಿರದ ಚಹಾ ಹೊಟೆಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಗೆ ಮಧ್ಯ ಕುಡಿಯಲು ಅನುಕೂಲ ಮಾಡಿ ಕೊಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1)30.32/- ರೂ ಮೌಲ್ಯದ 90ಟಟ ನ 90 ಓರಿಜಿನಲ್ ಚಾಯ್ಸ್ ವಿಸ್ಕಿಯ ಪೌಚಗಳು ಅ.ಕಿ. 2728.8/- ರೂ, 2)90.21/- ರೂ ಮೌಲ್ಯದ 180ಟಟ ನ 10 ಬ್ಯಾಗ ಪೈಪರ್ ವಿಸ್ಕಿಯ ಪೌಚಗಳು ಅ.ಕಿ. 902.1/- ರೂ 3)90.21/- ರೂ ಮೌಲ್ಯದ 180ಟಟ ನ 10 ಆಫೀಸರ್ಸ್ ಚಾಯ್ಸ್ ವಿಸ್ಕಿಯ ಬಾಟಲಿಗಳು ಅ.ಕಿ. 902.1/- ರೂ ಒಟ್ಟು 11.700 ಲೀಟರ್ ಮದ್ಯ ಒಟ್ಟು ಕಿಮ್ಮತ್ತು 4,533=00 ರೂ. ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಆದೇಶಿಸಿದ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ ಬಗ್ಗೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 54/2019 ಕಲಂ 5, 11(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1964 ಸಂಗಡ  177 ಐ.ಎಮ್.ವಿ ಎಕ್ಟ್:- ದಿನಾಂಕ:15/04/2019 ರಂದು 2 ಪಿ.ಎಮ್ ಸುಮಾರಿಗೆ ಆರೋಪಿತನು ತನ್ನ ಅಶೋಕ ಲೈಲಂಡ ಗೂಡ್ಸ್ ವಾಹನ ನಂ: ಕೆಎ-32, ಡಿ-0013 ನೇದ್ದರಲ್ಲಿ 17 ಜಾನುವಾರುಗಳು ಒಟ್ಟು ಅ.ಕಿ 74000 ರೂ ನೇದ್ದವುಗಳನ್ನು ಒಂದರ ಮೇಲೆ ಒಂದು ಹಾಕಿಕೊಂಡು ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತೆಗೆದುಕೊಂಡು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಸಾಗಾಣಿಕೆ ಮಾಡುತ್ತಿರುವಾಗ ಫಿಯರ್ಾದಿದಾರರು ಹಿಡಿದು ಆರೋಪಿತರ ವಿರುಧ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿದ್ದು ಇರುತ್ತದೆ.
 
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 26/2019 ಕಲಂ. 143 147 148 341 504 506  ಸಂ. 149 ಐಪಿಸಿ:-ದಿನಾಂಕ:12/04/2019 ರಂದು 20.00 ಗಂಟೆಯ ಸುಮಾರಿಗೆ ಪಿಯರ್ಾದಿ ತನ್ನ ಮನೆಯಲ್ಲಿ ಹೆಂಡತಿಯೊಂದಿಗೆ ತಕರಾರು ಮಾಡುವಾಗ ಆರೋಪಿ ಯಾಕೆ ಜಗಳವಾಡುತ್ತಿರಿ ಸೂಳಿ ಮಕ್ಕಳೇ ಮನೆಯ ಬಾಜು ನಿಮ್ಮದೇ ಕಿರಿಕಿರ ಆಗಿದೆ ಎಂದು ಬೈದಾಗ ಪಿಯರ್ಾದಿ ನಾವು ಇಬ್ಬರೂ ಗಂಡ ಹೆಂಡತಿ ಇದ್ದೇವೆ ಅದನ್ನ ಕೇಳಲು ನಿನು ಯಾರು ಅಂತಾ ಅಂದಿದ್ದಕ್ಕೆ ಆರೋಪಿ ಅಶೋಕ ಆಯಿತು ಮಗನೇ ಊರಲ್ಲಿ ನಮ್ಮ ಅಣ್ಣತಮ್ಮಂದಿರಗೆ ಕರೆಯಿಸಿ ಒಂದು ಕೈ ನೋಡಿ ಕೊಳ್ಳತ್ತೇನೆ ಎಂದು ಹೇಳಿದ ಊರಲ್ಲಿಂದಾ ಇನ್ನು 5 ಜನರಿಗೆ ಕರೆಯಿಸಿ ಎಲ್ಲರೂ ಕೂಡಿ ಪಿಯರ್ಾದಿ ಮನೆಯ ಮುಂದೆ ಬಂದು ಬೈದು ತಡೆದು ನಿಲ್ಲಿಸಿ ಕೈಯಿಂದಾ ಕಪಾಳಿಗೆ ಹೊಡೆದು, ಕಾಲನಿಂದಾ ಹೊಟ್ಟಿಗೆ ಒದ್ದು ಅವಾಚ್ಯ ಶಬ್ದಗಳಿಂದಾ ಬೈದು ಜೀವದ ಬೆದರಿಕೆ ಹಾಕಿದ್ದು ಈ ಬಗ್ಗೆ ಊರಲ್ಲಿ ನ್ಯಾಯ ಮಾಡಬೇಕೆಂದು ಕಾದು ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ ಅಂತಾ ಇತ್ಯಾದಿ ಟೈಪ್ ಮಾಡಿಸಿದ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 50/2019 ಕಲಂ: 279, 337,338, 304[ಎ] ಐಪಿಸಿ ಸಂಗಡ 187 ಐ ಎಮ್ವಿ ಆಕ್ಟ:- ದಿನಾಂಕ: 15/04/2019 ರಂದು 11-45 ಎಎಮ್ಕ್ಕೆ ಶ್ರೀ ಶರಣಪ್ಪ ತಂದೆ ಸೂಗಪ್ಪ ಚಳಮಾರ ವಯಾ|| 42 ಜಾ|| ಮಾದರ ಉ|| ಕೂಲಿ ಸಾ|| ನಗನೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಹೀಗಿದ್ದು ಇಂದು ದಿನಾಂಕ 15/04/2019 ರಂದು 11 ಗಂಟೆಯ ಸುಮಾರಿಗೆ ಫಿಯರ್ಾದಿ ಹಾಗು ಇತರರು ಸೇರಿ ಟಂ ಟಂ ನಂಬರ ಕೆಎ=33ಎ-8798 ನೇದ್ದರಲ್ಲಿ ಫಿಯರ್ಾದಿಯ ಸಂಬಂದಿಕರ ನಿಶ್ಚಿತಾರ್ಥ ಕಾರ್ಯಕ್ರಮದ ಸಲುವಾಗಿ ನಗನೂರದಿಂದ ವಂದಾಲಕ್ಕೆ ಹೋಗುವ ಕುರಿತು ನಗನೂರ ಮಲ್ಲಾ ಮದ್ಯ ಇರುವ ಚಂದ್ರಶೆಖರಯ್ಯ ಇವರ ಹೊಲದ ಪಕ್ಕದಲ್ಲಿ ಹೋಗುತ್ತಿರುವಾಗ ಆರೋಪಿತನು ತನ್ನ ಟಂಟಂ ನೇದ್ದನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿ ಒಮ್ಮಲೆ ಬಲಬಾಗಕ್ಕೆ ಕಟ್ ಮಾಡಿದಾಗ ಸದರ ಟಂಟಂ ಪಲ್ಟಿಯಾಗಿ ಬಿದ್ದಿದ್ದು ಟಂಟಂ ಚಾಲಕ ದವಲಸಾಬ ತಂದೆ ಮಹ್ಮದ್ಸಾಬ ಈತನು ತನ್ನ ಟಂಟಂನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಸದರಿ ಅಪಘಾತದಲ್ಲಿ ಶರಣಮ್ಮ ಚಳಮಾರ ಇವಳಿಗೆ ಭಾರೀ ಗಾಯಗಳಾಗಿದ್ದು ಹಾಗು ಸೋಮವ್ವ ಇವರಿಗೆ ಸಾದಾರಣ ಗುಪ್ತಗಾಯಗಳಾಗಿದ್ದು ಹಾಗು ಸದರ ಟಂ ಟಂದಲ್ಲಿದ್ದ ಈರಪ್ಪ ಚಳಮಾರ ಈತನು ತಲೆಗೆ ಭಾರೀ ಗುಪ್ತಗಾಯ ಹಾಗು ಕೈಗೆ ಭಾರೀ ರಕ್ತಗಾಯವಾಗಿ ಕೈ ಮುರಿದು ಮೂಗಿನಿಂದ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಸದರ ಅಪಘಾತಕ್ಕೆ ಟಂಟಂ ನಂಬರ ಕೆಎ-33 ಎ- 8798 ನೇದ್ದರ ಚಾಲಕ ದವಲಸಾಬ ತಂದೆ ಮಹ್ಮದ್ಸಾಬ ಈತನ ಅತಿವೇಗ ಹಾಗು ಅಲಕ್ಷತನದ ಚಾಲನಯೇ ಕಾರಣವಿದ್ದು ಸದರ ಚಾಲಕನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 50/2019 ಕಲಂ 279,337,338,304[ಎ], ಐಪಿಸಿ ಸಂಗಡ 187 ಐಎಮ್ವಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಕಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!