ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-04-2019

By blogger on ಶನಿವಾರ, ಏಪ್ರಿಲ್ 13, 2019


                             ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-04-2019 

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ:- 59/2018  ಕಲಂ 279, 337, 338 ಐ.ಪಿಸಿ;- ದಿನಾಂಕ 13-04-2019 ರಂದು 9-15 ಎ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಮಹ್ಮದ್ ಇನಾಯತ್ ತಂದೆ ಹುಸೇನಸಾಬ ಭೀಮಕೂನ್ ವಯಾ:40 ಉ: ಕೂಲಿ ಕೆಲಸ ಜಾ: ಮುಸ್ಲಿಂ ಸಾ:ಚಂದಾಪೂರ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ಈಗ ಸುಮಾರು ದಿವಸಗಳಿಂದ ನಾನು ಹಾಗೂ ನಮ್ಮ ಗ್ರಾಮದ ಮಹಬೂಬ ಹುಸೇನಿ ತಂದೆ ಮೌಲಾನಾಸಾಬ ಅಜಲಾಪೂರ ಮಹ್ಮದ್ ಶಫಿ ತಂದೆ ಮಹ್ಮದ್ ಖಾಸಿಂ ಬುಡ್ಡೇಬಾಯಿ ಹಾಗೂ ಶೌಕತಲಿ ತಂದೆ ಲಾಡೇಸಾಬ ಬುಡ್ಡೆಬಾಯಿ ಎಲ್ಲರೂ ನಮ್ಮ ಗ್ರಾಮದ ಮಹ್ಮದ ಶಾಹೀದ್ ತಂದೆ ಜಾಕೀರ ಹುಸೇನಿ ಇತನ ಟ್ರ್ಯಾಕ್ಟರ ನಂ:ಎಪಿ-07/ಟಿ.ಎ-9448  ಮತ್ತು ಟ್ರಾಲಿ ನಂ: ಕೆ.ಎ-33/ಟಿ-1187 ನೆದ್ದರ ಮೇಲೆ ಲೇಬರ ಕೆಲಸ ಮಾಡುತ್ತಾ ಬಂದಿರುತ್ತೆವೆ.
      ಹೀಗಿದ್ದು ನಿನ್ನೆ ದಿನಾಂಕ 12-04-2019 ರಂದು ಬೆಳಗ್ಗೆ ಎಂದಿನಂತೆ 8 ಗಂಟೆಗೆ ಮೇಲ್ಕಂಡ ನಾವು 4 ಜನರು ನಮ್ಮ ಗ್ರಾಮದ ಮಹ್ಮದ ಶಾಹೀದ್ ತಂದೆ ಜಾಕೀರ ಹುಸೇನಿ ಇತನ ಟ್ರ್ಯಾಕ್ಟರ ನಂ:ಎಪಿ-07/ಟಿ.ಎ-9448 ಮತ್ತು ಟ್ರಾಲಿ ನಂ: ಕೆ.ಎ-33/ಟಿ-1187 ಮೇಲೆ ಕೂಲಿ ಕೆಲಸಕ್ಕೆ ಬಂದಾಗ ಮಹ್ಮದ್ ಶಹಾಜ್ ಇತನು ಯಾದಗಿರಿಗೆ ಹೋಗಿ ಟ್ರ್ಯಾಕ್ಟರದಲ್ಲಿ ಲೈಟಿನ ಕಂಬಗಳು ಹಾಕಿಕೊಂಡು ಬರೋಣ ಅಂತಾ ಹೇಳಿ ನಮ್ಮೂರಿನಿಂದ ಯಾದಗಿರಿಗೆ ಕರೆದುಕೊಂಡು ಬಂದು ಯಾದಗಿರಿಯ ಕೆ.ಇ.ಬಿ ಆಫೀಸಿನಿಂದ ಟ್ರ್ಯಾಕ್ಟರ ಟ್ರೈಲಿಯಲ್ಲಿ 8 ಕಂಬಗಳು ಹಾಕಿಕೊಂಡು ಅಲ್ಲಿಂದ ಮರಳಿ ಬೆಳಗ್ಗೆ 11-30 ಗಂಟೆ ಸುಮಾರಿಗೆ ಯಾದಗಿರಿ ಬಿಟ್ಟು ರಾಮಸಮುದ್ರ ಮಾರ್ಗವಾಗಿ ಆರ್. ಹೊಸಳ್ಳಿ ಗ್ರಾಮಕ್ಕೆ ಹೊರಟಿದ್ದೆವು. ರಾಮಸಮುದ್ರ ಗ್ರಾಮ ದಾಟಿದ ಕೂಡಲೇ ಟ್ರ್ಯಾಕ್ಟರ ಚಾಲಕನಾದ ಮಹ್ಮದ್ ಶಹಾದ್ ಇತನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಹತ್ತಿದನು. ಆಗ ಟ್ರೈಲಿಯಲ್ಲಿ ಕುಳಿತ ನಾವೇಲ್ಲರೂ ಸಾವಕಾಶ ಓಡಿಸು ಕಂಬಗಳಿವೆ ಅಂತಾ ಕೂಗಿ ಹೇಳಿದರೂ ಕೂಡಾ ಚಾಲಕನು ನಮ್ಮ ಮಾತನ್ನು ಲೆಕ್ಕಿಸದೇ ಅದೇ ವೇಗದಲ್ಲಿ ಬಂದು ರಾಮಸಮುದ್ರ ಗೇಟ ದಾಟಿದ ಮೇಲೆ ಮಲಾರೆಪ್ಪಾ ಕುರಬರ ಇವರ ಹೋಲದ ಹತ್ತಿರ ರೋಡಿನ ಇಳಿಜಾರಿನಲ್ಲಿ ಚಾಲಕನು ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ರೋಡಿನ ಎಡಗಡೆಯಲ್ಲಿ ಟ್ರ್ಯಾಕ್ಟರ ಪಲ್ಟಿ ಮಾಡಿದನು. ಈ ಘಟನೆಯಲ್ಲಿ ನನಗೆ ಬಲಗೈ ಗುಪ್ತಗಾಯವಾಗಿತ್ತು. ಮಹಬೂಬ ಹುಸೇನ ಇತನಿಗೆ ಬಲಗಾಲು ತೊಡೆಯ ಹತ್ತಿರ ಮುರಿದಂತಾಗಿತ್ತು, ಮಹ್ಮದ್ ಶಫೀ ಇತನಿಗೆ ಬಲಗಾಲು ಪಾದದ ಮೇಲೆ ಮತ್ತು ಬೆನ್ನಿಗೆ ಭಾರಿ ಗುಪ್ತಗಾಯವಾಗಿರುತ್ತದೆ. ಶೌಕತಲಿ ಇತನಿಗೆ ಬೆನ್ನಿನ ಮೂಳೆಗೆ ಗುಪ್ತಗಾಯವಾಗಿತ್ತು. ಮತ್ತು ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದವು. ನಂತರ ಅಲ್ಲಿಂದ ಯಾದಗಿರಿ ಕಡೆಗೆ ಮೋಟಾರ್ ಸೈಕಲ್ ಮೇಲೆ ನಮ್ಮ ಗ್ರಾಮದವನಾದ ಖಾಸಿಂಅಲಿ ತಂದೆ ಮೌಲಾನಾಸಾಬ ಹಾಗೂ ನಶೀರ್ ತಂದೆ ಶೇಖ್ ಹುಸೇನಿ ಅಲ್ಲಿವಾಲೇ ಇವರು ನಮ್ಮನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ನಮಗೆಲ್ಲರಿಗೆ ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು. ಈ ಬಗ್ಗೆ ನಾವು ನಮ್ಮ ಹಿರಿಯರಲ್ಲಿ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಈ ಘಟನೆಗೆ ಕಾರಣನಾದ ಟ್ರ್ಯಾಕ್ಟರ ನಂ:ಎಪಿ-07/ಟಿ.ಎ-9448 ಮತ್ತು ಟ್ರಾಲಿ ನಂ: ಕೆ.ಎ-33/ಟಿ-1187 ನೆದ್ದರ ಚಾಲಕನಾದ ಮಹ್ಮದ ಶಾಹೀದ್ ತಂದೆ ಜಾಕೀರ ಹುಸೇನಿ ಸಾ: ಚಂದಪೂರ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 59/2019 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ:- 60/2019 ಕಲಂ 323, 324, 504, 506 ಸಂ 34 ಐಪಿಸಿ;-ದಿನಾಂಕ 09-04-2019 ರಂದು ಬೆಳಿಗ್ಗೆ 6-00 ಗಂಟೆಗೆ ಫಿರ್ಯಾಧಿದಾರರು ತಮ್ಮ ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಹೊಲದ ವಿಷಯದ ಸಂಬಂಧ ನ್ಯಾಯಾಲಯದಲ್ಲಿ ಸಿವಿಲ್ ಧಾವೆ ಹೂಡಿದ ಕ್ಕಾಗಿ ಹಳೇ ದ್ವೇಶದಿಂದ ಜಗಳ ತೆಗೆದುಅವಾಚ್ಯವಾಗಿ ಬೈದು, ಕೈಯಿಂದ , ಕಲ್ಲಿನಿಂದ ಹೊಡೆದು ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ ಬಗ್ಗೆ,  ತಡವಾಗಿ ಠಾಣೆಗೆ ಬಂದು ಹೇಳಿಕೆ ಕೊಟ್ಟ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 91/2019 ಕಲಂ 323, 324, 504,506 ಸಂ.34 ಐಪಿಸಿ ;- ದಿನಾಂಕ:13-04-2019 ರಂದು 00-30 ಗಂಟೆಗೆಠಾಣೆಯಲ್ಲಿದ್ದಾಗ ಸರಕಾರಿಆಸ್ಪತ್ರೆ ಸುರಪುರದಲ್ಲಿ ಎಮ್ಎಲ್ಸಿ ಇದೆಅಂತಾ ಬಾತ್ಮಿ ಬಂದ ಮೇರೆಗೆಆಸ್ಪತ್ರೆಗೆ 00-40 ಗಂಟೆಗೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ ರಾಘವೇಂದ್ರತಂದೆ ಗೋಪಾಲಪ್ಪದೇವದುರ್ಗ ಸಾ:ಉಪ್ಪಾರ ಮೊಹಲ್ಲಾ ಸುರಪುರಈತನ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ಹಿಗಿದ್ದು ದಿನಾಂಕ: 12-04-2019 ರಂದು ಎಂದಿನಂತೆ ನಾನು ದಾಭಾಕ್ಕೆ ಹೋಗಿ ದಾಭಾದಲ್ಲಿ ಕೆಲಸ ಮಾಡುತ್ತಿದ್ದೆನು. ಅಂದಾಜು 10-30 ಪಿ.ಎಂ. ಸುಮಾರಿಗೆ ನಮ್ಮದಾಭಾದ ಮ್ಯಾನೇಜರಗಳಾದ ರೋಹಿತತಂದೆ ನರೇಶಕುಮಾರ ಹಳ್ಳದ, ಹಾಗೂ ರಾಹುಲ್ತಂದೆರಂಗನಾಥ ಪಂಚಮಗಿರಿಇವರುದಾಭಾದಲ್ಲಿದ್ದು ನಾನು ನನ್ನತಮ್ಮನಾದ ಲಕ್ಷ್ಮಣತಂದೆ ಗೋಪಾಲ ದೇವದುರ್ಗಇನ್ನೊಬ್ಬನಾದ ಬಸವರಾಜತಂದೆ ಮರೆಪ್ಪ ಮ್ಯಾಗೇರಿ ಮೂವರುದಾಬಾದಲ್ಲಿ ಸಪ್ಲೆಯರ್ ಕೆಲಸ ಮಾಡುತ್ತಿರುವಾಗದಾಭಾಕ್ಕೆ ಬೀಚ್ಚಗತ್ತಕೇರಿಯವರಾದ 1) ರಾಮು @ ರಮೇಶತಂದೆ ಮಲ್ಲಪ್ಪ ಪೊಲೀಸ್ ಪಾಟೀಲ್ 2) ಜೇಮ್ಸಅಪ್ಪಾರಾವ್ತಂದೆಜೆೆ. ಅಗಸ್ಟಿನ್ 3) ಮಂಜುನಾಥತಂದೆ ಭೀಮಣ್ಣ ಪ್ಯಾರಸಲರ 4) ರಾಘು ಮಡಿವಾಳ ಸಾ:ಗಾಂಧಿ ನಗರಇವರೆಲ್ಲರೂದಾಬಾಕ್ಕೆಊಟಕ್ಕೆ ಬಂದು ಊಟ ಮಾಡಿದ ನಂತರಅಂದಾಜು 11 ಪಿ.ಎಂ.ಸುಮಾರಿಗೆ ಊಟ ಮುಗಿಸಿಕೊಂಡು ಊಟ ಮಾಡಿದ ಬಿಲ್ಲ ಕೊಡದೆಎಲ್ಲರೂ ಹಾಗೇ ಎದ್ದು ಹೋಗುತ್ತಿರುವಾಗ ನಮ್ಮದಾಭಾದ ಮ್ಯಾನೇಜರಗಳಾದ ರೋಹಿತ ಮತ್ತುರಾಹುಲ್ಇವರುಅವರಿಗೆ ಊಟ ಮಾಡಿದ ಹಣಕೊಡರಿ ಹಾಗೇ ಹೊರಟಿರಲ್ಲಅಂತಾ ಕೇಳಿದ್ದಕ್ಕೆ ಅವರಲ್ಲಿಯರಮೇಶ ಪೊಲೀಸ್ ಪಾಟೀಲ ಈತನು ನಾಳೆ ಕೊಡುತ್ತೆವೆಇವತ್ತು ನಮ್ಮ ಹತ್ತಿರ ಹಣಇಲ್ಲಅಂತಾಅವರೊಂದಿಗೆತಕರಾರು ಮಾಡುತ್ತಿರುವಾಗ ನಮ್ಮ ಮ್ಯಾನೇಜರರು ಊಟ ಮಾಡಿ ಹಾಗೇ ಹೊದರೆ ಹೇಗೆ ಹಣಕೊಡಬೇಕುಅಂತಾಅಂದಾಗಅವರೆಲ್ಲರೂಅವಾಚ್ಯ ಬೈಯುತ್ತಾತಕರಾರು ಮಾಡಿದವರೆ ನಾವು ಬಿಲ್ಲ ಕೊಡುವದಿಲ್ಲ ಬೋಸಡಿ ಮಕ್ಕಳೆ ನೀವೆನು ಮಾಡುತ್ತಿರಿಅಂತಾಅವರಲ್ಲಿಯರಮೇಶ ಪೊಲೀಸ್ ಪಾಟೀಲ್ಈತನುಅಲ್ಲೆ ಬಿದ್ದಒಂದು ಬಡಿಗೆಯಿಂದ  ನನ್ನತೆಲೆಗೆ ಹೊಡೆದುರಕ್ತಗಾಯ ಮಾಡಿದನು. ಜೆಮ್ಸ್ಅಪ್ಪಾರಾವಈತನುಕೂಡಾಒಂದು ಬಡಿಗೆಯಿಂದ ಮ್ಯಾನೇಜರರಾದರಾಹುಲ್ತಂದೆ ಮದನಕುಮಾರಈತನಎಡಗಣ್ಣಿನ ಮೇಲೆ ಹೊಡೆದುರಕ್ತಗಾಯ ಮಾಡಿದನು. ಲಕ್ಷ್ಮಣಈತನಿಗೆ ಮಂಜುನಾಥ, ರಾಘು, ಇಬ್ಬರೂಕೈಯಿಂದ ಹೊಟ್ಟೆಗೆ ಹೊಡೆದು ಕಾಲಿನಿಂದಒದ್ದು ಹೊಡೆ ಮಾಡುತ್ತಿರುವಾಗಅದೇ ಸಮಯಕ್ಕೆದಾಬಾಕ್ಕೆ ಬಂದ ನವಿನ ತಂದೆ ಸೂಲಪ್ಪಕಮತಗಿ, ವಿವೇಕ ತಂದೆ ಸೂಲಪ್ಪಕಮತಗಿ ಹಾಗೂ ಮ್ಯಾನೇಜರರೋಹಿತ ಮೂವರು ಜಗಳನ್ನು ನೋಡಿ ಬಡಿಸಿದ್ದು ಇರುತ್ತದೆ. ಆಗ ಅವರುಇವತ್ತು ಉಳದಿರೆ ಮಕ್ಕಳೆ ಇನ್ನೊಮ್ಮೆ ನಮಗೆ ಬಿಲ್ಲ ಕೇಳಿದರೆ ನಿಮಗೆ ಜೀವ ಸಹೀತ ಬಿಡುವದಿಲ್ಲ ಅಂತಾಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ನಂತರ ನಾವು ಒಂದು ಖಾಸಗಿ ವಾಹನದಲ್ಲಿಉಪಚಾರಕುರಿತು ಸುರಪೂರ ಸಕರ್ಾರಿಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದುಇರುತದೆ. ಕಾರಣ ನಮಗೆ ಅವಾಚ್ಯ ಬೈದುಕೈಯಿಂದ  ಬಡಿಗೆಗಳಿಂದ ಹೊಡೆದುಗುಪ್ತಗಾಯ ಹಾಗೂ ರಕ್ತಗಾಯ ಮಾಡಿದ ಮೇಲೆ ಹೇಳಿದ ನಾಲ್ಕು ಜನರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿಅಂತಾ ಹೇಳಿ ಲ್ಯಾಪಟಾಪನಲ್ಲಿಟೈಪ ಮಾಡಿಸಿದ್ದು ನಿಜವಿರುತ್ತದೆಅಂತಾ ಹೇಳಿಕೆ ನಿಡಿದ್ದರ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ
  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 92/2019 ಕಲಂ 323, 324, 504,506 ಸಂ.34 ಐಪಿಸಿ ;- ದಿನಾಂಕ:13-04-2019 ರಂದು 00-45 ಗಂಟೆಗೆಠಾಣೆಯಲ್ಲಿದ್ದಾಗ ಸರಕಾರಿಆಸ್ಪತ್ರೆ ಸುರಪುರದಲ್ಲಿ ಎಮ್ಎಲ್ಸಿ ಇದೆಅಂತಾ ಬಾತ್ಮಿ ಬಂದ ಮೇರೆಗೆಆಸ್ಪತ್ರೆಗೆ 01:00 ಗಂಟೆಗೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ ರಮೇಶತಂದೆ ಮಲ್ಲಪ್ಪ ಪೊಲೀಸ್ ಪಾಟೀಲ್ ಸಾ:ಬಿಚ್ಚತಗೇರಿ ಸುರಪುರಈತನ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಹೀಗಿದ್ದು ದಿನಾಂಕ:12/04/2019 ರಂದು 10-30 ಪಿ.ಎಮ್ ನಾನು ನಮ್ಮ ಗೆಳೆಯರಾದ ಜೇಮ್ಸಅಪ್ಪಾರಾವ್ತಂದೆಜೆೆ. ಅಗಸ್ಟಿನ್, ಮಂಜುನಾಥತಂದೆ ಭೀಮಣ್ಣ ಪ್ಯಾರಸಲರ, ರಾಘು ಮಡಿವಾಳ ಸಾ:ಗಾಂಧಿನಗರ ಸುರಪುರಎಲ್ಲರೂಕೂಡಿ ಊಟ ಮಾಡಬೇಕುಅಂತಾ ನಾವು ಆವಾಗ ಆವಾಗ ಹೋಗುವ ಉಸ್ತಾದ ಪೇಟ್ರೋಲ ಪಂಪ ಹತ್ತಿರಇರುವ ನೈಸ ದಾಬಾಕ್ಕೆ ಹೋಗಿ ಊಟ ಮಾಡಲು ಕುಳಿತಿದ್ದೆವು ಅಂದಾಜು 11 ಪಿ.ಎಂ. ಸುಮಾರಿಗೆ ಊಟ ಮಾಡುತ್ತಾದಾಬಾದಲ್ಲಿ ಸಪ್ಲೇಯರ್ ಕೆಲಸ ಮಾಡುವ ಲಕ್ಷ್ಮಣತಂದೆ ಗೋಪಾಲಪ್ಪಈತನಿಗೆರೈಸ್ಕೊಡುಅಂತಾ ಹೇಳಿದಾಗ ಅವನು ರೈಸ್ಇಲ್ಲಖಾಲಿಯಾಗಿದೆಎಂದು ಹೇಳಿ ಬಿಲ್ಲ ತಂದುಕೊಟ್ಟಿದ್ದು ನಾವು ಬಿಲ್ಲ ಕೊಟ್ಟು ಹೋಗಬೇಕು ಅಂತಾ ಮ್ಯಾನೇಜರಾದರಾಹುಲ್ತಂದೆ ಮದನ್ಕುಮಾರಇವರ ಹತ್ತಿರ ನಿಂತುಕೊಂಡಾಗ ಸಪ್ಲೇಯರಾದ ಲಕ್ಷ್ಮಣಈತನುದಾಬಾದಲ್ಲಿಊಟಮಾಡುತ್ತಿದ್ದ ಬೇರೆಟೇಬನಲ್ಲಿ ಕುಳಿತವರಿಗೆ ರೈಸ್ತಂದುಕೊಟ್ಟಿದ್ದನ್ನು ನೋಡಿ ನಾವು ಮ್ಯಾನೇಜರನಿಗೆ ನೋಡು ನಮಗೆ ರೈಸಇಲ್ಲಅಂತಾ ಹೇಳಿದ್ದಿರಿ ಅದುಅಲ್ಲದೆ ಹೆಚ್ಚಿಗೆ ಬಿಲ್ಲ ಹಚ್ಚಿಕೊಟ್ಟಿದ್ದಿರಿಅಂತಾ ಕೇಳಿದ್ದಕ್ಕೆ ದಾಬಾದ ಮ್ಯಾನೇಜರರನಾದರಾಹುಲ್ತಂದೆ ಮದನಕುಮಾರ ಹಾಗೂ ರೋಹಿತತಂದೆ ನರೇಶಕುಮಾರ ಹಾಗೂ  ಸಪ್ಲೈಯರರಾದರಾಘವೆಂದ್ರತಂದೆ ಗೋಪಾಲಪ್ಪದೇವದುಗರ್ಾ, ಲಕ್ಷ್ಮಣತಂದೆ ಗೋಪಾಲಪ್ಪದೇವದುಗರ್ಾ ಇವರೆಲ್ಲರೂಅವಾಚ್ಯ ಬೈಯುತ್ತಾಅವರಲ್ಲಿಯರಾಘವೇಂದ್ರಈತನುಒಂದುಅನ್ನದ ಬೊಗೊಣಿಯಿಂದ ಮತ್ತು ಲಕ್ಷ್ಮಣಈತನು ಸ್ಟೀಲ್ ಗಂಗಳ ಪಾತ್ರೆಯಿಂದ ನನ್ನಎದೆಗೆ, ಮೂಗಿಗೆ, ಬಾಯಿಗಿ ಹೊಡೆದುರಕ್ತಗಾಯ ಮಾಡಿದರುರಾಹುಲ್ ಮತ್ತುರೋಹೀತಇಬ್ಬರು  ಕೈ ಮುಷ್ಟಿ ಮಾಡಿಜೇಮ್ಸ್ಅಪ್ಪಾರಾವಈತನಎಡಗಣ್ಣಿನ ಮೇಲೆ ಹೊಡೆದುಗುಪ್ತಗಾಯ ಮಾಡಿ ಹೊಡೆ ಬಡೆ ಮಾಡುತ್ತಿರುವಾಗಅದೇ ಸಮಯಕ್ಕೆದಾಬಾಕ್ಕೆ ಬಂದ ನವಿನ ತಂದೆ ಸೂಲಪ್ಪಕಮತಗಿ, ವಿವೇಕ ತಂದೆ ಸೂಲಪ್ಪಕಮತಗಿಇವರು ಜಗಳವನ್ನು  ನೋಡಿ ಬಿಡಿಸಿದ್ದು ಇರುತ್ತದೆ. ಆಗ ಅವರುಇವತ್ತು ಉಳದಿರಿ ಹೋರಿ ಮಕ್ಕಳೆ ಇನ್ನೊಮ್ಮೆ ನಮ್ಮದಾಬಾಕ್ಕೆ ಬಂದರೆ ನಿಮ್ಮಗೆ ಖಲಾಸ ಮಾಡದೆ ಬಿಡುವದಿಲ್ಲ ಇಲ್ಲಅಂತಾಜೀವದ ಬೇದರಿಕೆ ಹಾಕಿ ಹೊರಟು ಹೋಗಿದ್ದುಇರುತ್ತದೆ. ನಂತರ ನಾನು ಒಂದು ಖಾಸಗಿ ವಾಹನದಲ್ಲಿಉಪಚಾರಕುರಿತು ಸರಕಾರಿಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದುಇರುತ್ತದೆ. ಕಾರಣ ನನಗೆ ಹೊಡೆ ಮಾಡಿರಕ್ತಗಾಯ ಮಾಡಿದಜೀವದ ಬೇದರಿಕೆ ಹಾಕಿದ ಮೇಲೆ ಹೇಳಿದ ನಾಲ್ಕು ಜನರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿಅಂತಾ ಹೇಳಿ ಲ್ಯಾಪಟಾಪನಲ್ಲಿಟೈಪ ಮಾಡಿಸಿದ್ದು ನಿಜವಿರುತ್ತದೆಅಂತಾ ಹೇಳಿ ಲ್ಯಾಪಟಾಪನಲ್ಲಿಟೈಪ ಮಾಡಿಸಿದ್ದು ನಿಜವಿರುತ್ತದೆಅಂತಾ ಹೇಳಿಕೆ ನಿಡಿದ್ದರ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ

 ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 93/2019 ಕಲಂ 279,337,338 ಐ.ಪಿ.ಸಿ;- ದಿನಾಂಕ:13-04-2019 ರಂದು 5 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ ಡಿ ಕರ್ತವ್ಯದಲ್ಲಿರುವಾಗ ಶ್ರೀ ದುರ್ಗಪ್ಪ ತಂದೆ ಸೋಮರಾಯ ಬಡಿಗೇರ ಸಾ:ನಾಗರಾಳ ಇವರು ಠಾಣೆಗೆ ಬಂದು ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ  ಹಿಗಿದ್ದು ನಿನ್ನೆ ದಿನಾಂಕ: 12-04-2018 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ಸುರಪೂರದ ಗಾಂಧಿಚೌಕದಲ್ಲಿರುವಾಗ ನನ್ನ ತಂಗಿಯ ಗಂಡನಾದ ತಿಪ್ಪಣ್ಣ ತಂದೆ ಗೋಪಾಲಪ್ಪ ಕಟ್ಟಿಮನಿ ಸಾ:ಹಾವಿನಾಳ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಇಂದು ನಾನು ಮೋಟಾರ ಸೈಕಲ್ ನಂಬರ ಕೆಎ-41 ಜೆ-6191 ನೇದ್ದನ್ನು ತಗೆದುಕೊಂಡು ನಮ್ಮ ಅಜ್ಜಿಯಾದ ತಾಯಮ್ಮ ಗಂಡ ಸೋಮಪ್ಪ ಕಟ್ಟಿಮನಿ ಇವಳನ್ನು ಮೊಟಾರ ಸೈಕಲ್ ಹಿಂದುಗಡೆ ಕುಡಿಸಿಕೊಂಡು ಹಾವಿನಾಳ ಗ್ರಾಮಕ್ಕೆ ಹೋಗುವ ಕುರಿತು ಕುಂಬಾರಪೇಠ- ಕವಡಿಮಟ್ಟಿ ಮುಖ್ಯ ರಸ್ತೆಯ ಅಡ್ಡಾಮಡ್ಡಿ ಡಿಬ್ಬಿಯ ರೋಡಿನ ಇಳಕಲಿ ಹತ್ತಿರ 6-45 ಪಿ.ಎಂ. ಸುಮಾರಿಗೆಮೊಟಾರ ಸೈಕಲ್ ನಡೆಸಿಕೊಂಡು ಹೋಗುತ್ತಿರುವಾಗ ಕವಡಿಮಟ್ಟಿ ಕಡೆಯಿಂದ ಒಂದು ಮೋಟಾರ ಸೈಕಲ್ ನಂಬರ ಕೆಎ-37 ಇಇ-0737 ನೇದ್ದರ ಚಾಲಕನು ತನ್ನ ಹಿಂದುಗಡೆ ಒಬ್ಬನನ್ನು ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದವನೆ ನನ್ನ ಮೋಟಾರ ಸೈಕಲ್ಗೆ ಎದುರಿನಿಂದ ಡಿಕ್ಕಿಯಾಗಿದ್ದು ಎರಡೂ ಮೋಟಾರ ಸೈಕಲ್ ಸಮೇತ ನಾಲ್ವರೂ ಕೆಳಗೆ ಬಿದ್ದಿದ್ದು ನನಗೂ ಗಾಯಗಳಾಗಿದ್ದು ಅಜ್ಜಿ ತಾಯಮ್ಮನ ಬಲಗೈ  ಮುರಿದಿರುತ್ತದೆ ಬೇಗ ಬಾ ಅಂತಾ ವಿಷಯ ತಿಳಿಸಿದ ಕೂಡಲೆ ನಾನು ಘಟನಾ ಸ್ಥಳಕ್ಕೆ ಹೋಗಿ ನೋಡಲು ಎರಡೂ ಮೋಟಾರ ಸೈಕಲ್ಗಳು ರೋಡಿನಲ್ಲಿ ಬಿದ್ದಿದ್ದು, ತಾಯಪ್ಪನಿಗೆ ಬಲಗಡೆಯ ಕಣ್ಣಿನ ಮೇಲೆ ರಕ್ತಗಾಯ, ಬಲಗಡೆ ಬುಜಕ್ಕೆ ಹಾಗೂ ಎಡಗಾಲಿಗೆ ತೆರಚಿದಗಾಯವಾಗಿದ್ದು, ಅಜ್ಜಿ ತಾಯಮ್ಮಳ ಬಲಗೈ ಮುಂಗೈ ಕೆಳಗೆ ಮುರಿದಂತಾಗಿದ್ದು, ಬಲಗಾಲ ಪಾದದ ಹತ್ತಿರ ಬಲಗೈ ಬೆರಳಿಗೆ ರಕ್ತಗಾಯಾಗಿದ್ದು, ಇನ್ನೊಂದು ಮೊಟಾರ ಸೈಕಲ್ ಸವಾರನಾದ ಅಯ್ಯಪ್ಪ ತಂದೆ ಮಲ್ಲಪ್ಪ ನಿರಲವುಟಿ ಸಾ:ಹಿರೆ ಅಳ್ಳಳ್ಳಿ ತಾ:ಯಲಬುರಗಾ ಈತನಿಗೆ ಬಲಗಡೆ ಕಣ್ಣಿನ ಕೆಳಗಡೆ, ಹಣೆಯ ಹುಬ್ಬಿನ ಮೆಲಗಡೆ ಬಲಗೈ ಹಸ್ತಕ್ಕೆ ರಕ್ತಗಾಯವಾಗಿದ್ದು, ಅಯ್ಯಪ್ಪನ ಮೊಟಾರ ಸೈಕಲ್ ಹಿಂದುಗಡೆ ಕುಳಿತ ಹಣಮಂತ ತಂದೆ ಸಿದ್ದಪ್ಪ ಕಲಕೇರಿ ಸಾ:ಕಲಕೇರಿ ತಾ:ಕುಷ್ಟಗಿ ಈತನಿಗೆ ಬಲಬುಜಕ್ಕೆ ರಕ್ತಗಾಯ, ಬಲಗಡೆ ಕಣ್ಣಿನ ಮೆಲಕನಿನ ಹತ್ತಿರ ರಕ್ತಗಾಯ ಬಲಗೈ ಬಲಕಾಲಿನ ಬೆರಳಿಗೆ ರಕ್ತಗಾಯವಾಗಿ ಬಲಕಿವಿಯಿಂದ ರಕ್ತ ಬಂದಿದ್ದು, ಕೂಡಲೆ 108 ವಾಹನ ಕರೆಯಿಸಿ ನಾಲ್ವರನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ನನ್ನ ಅಳಿಯ ತಿಪ್ಪಣ್ಣ ಮತ್ತು ಅಜ್ಜಿ  ತಾಯಮ್ಮ ಇಬ್ಬರನ್ನು ಕಲಬುರಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ಇಬ್ಬರು ಮೊಟಾರ ಸೈಕಲ್ ಸವಾರರು ತಮ್ಮ ಮೊಟಾರ ಸೈಕಲ್ಗಳನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಎದುರುಬದುರು ಡಿಕ್ಕಿ ಪಡಿಸಿದ್ದರಿಂದ ಈ ಘಟನೆಗೆ ಸಂಬವಿಸಿದ್ದು ಇಬ್ಬರು ಮೋಟಾರ ಸೈಕಲ್ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿ ಟೈಪ ಮಾಡಿಸಿದ್ದು ನಿಜವಿರುತ್ತದೆ ಅಂತಾ ಕೊಟ್ಟ ಪಿಯರ್ಾದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ :- 53/2019 ಕಲಂ 379 ಐಪಿಸಿ;- ದಿನಾಂಕ 01/04/2019 ರಂದು ಫಿಯರ್ಾದಿಯು ಒಂದು ಭಾರತಬೆಂಜ್ ಟಿಪ್ಪರ ಟಿಪಿ ನಂ: ಏಂ63ಖ19040000250, ಇಓಉಓಇ ಓಔ:4009520081402, ಅಊಇಖಖ ಓಔ:ಒಇಅ2416ಃಃಏಕ080940 ನೇದ್ದನ್ನು ಖರೀದಿ ಮಾಡಿದ್ದು ಇರುತ್ತದೆ. ದಿನಾಂಕ 04/04/2019 ರಂದು ಅಮವಾಸೆಯ ದಿನ ಮುಂಜಾನೆ ಜಮಖಂಡಿ ಗ್ರಾಮದಲ್ಲಿ ಪೂಜೆ ಮಾಡಿ ನಂತರ ಸಾದ್ಯಾಪೂರ ಸೀಮಾಂತರದ ರಾಮಕೃಷ್ಣರೆಡ್ಡಿ ಇವರ ಹೊಲದಲ್ಲಿ ತಮ್ಮ ಟಿಪ್ಪರನ್ನು ತಮ್ಮ ಟಿಪ್ಪರ ಚಾಲಕನಾದ ಮಡಿವಾಳ ತಂದೆ ಚನ್ನಪ್ಪ ಹೊಸಮನಿ ಸಾ:ಉಕ್ಕನಾಳ ಈತನು ತಂದು ನಿಲ್ಲಿಸಿರುತ್ತಾನೆ. ದಿನಾಂಕ 07/04/2019 ರಂದು ತಮ್ಮ ಟಿಪ್ಪರನ ಇನ್ನೊಬ್ಬ ಚಾಲಕನಾದ ಶಂಕ್ರಪ್ಪ ತಂದೆ ಭೀಮಪ್ಪ ಸಾದುಪೂಜಾರಿ ಸಾ:ಸಾದ್ಯಾಪೂರ ಈತನು ರಾತ್ರಿ 11 ಗಂಟೆಯವರೆಗೆ ಟಿಪ್ಪರ ಹತ್ತಿರ ಇದ್ದು ನಂತರ ಸಾದ್ಯಾಪೂರ ಗ್ರಾಮದಲ್ಲಿ ಇರುವ ತನ್ನ ಮನೆಗೆ ಹೋಗಿರುತ್ತಾನೆ.
      ದಿನಾಂಕ 07/04/2019 ರಂದು ರಾತ್ರಿ 11 ಗಂಟೆಯಿಂದ ದಿನಾಂಕ 08/04/2019 ರಂದು ಬೆಳಿಗ್ಗೆ 5 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡುವ ಉದ್ದೇಶದಿಂದ ಮೇಲ್ಕಂಡ ಭಾರತಬೆಂಜ್ ಟಿಪ್ಪರನ 09 ಟೈರ್ಗಳು ಅವುಗಳ ಡಿಸ್ಕ್ ಸಮೇತ ಅ.ಕಿ. 2,25,000 ರೂ ನೇದ್ದವುಗಳನ್ನು ಬಿಚ್ಚಿಕೊಂಡು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.  ಟೈರ್ಗಳು ಡಿಸ್ಕ್ ಸಮೇತ ಕಳ್ಳತನವಾದ ಬಗ್ಗೆ ತಮ್ಮ ಮನೆಯಲ್ಲಿ ಹಾಗು ಸಂಬಂಧಿಕರಲ್ಲಿ ಮತ್ತು ಸ್ನೇಹಿತರಲ್ಲಿ ವಿಚಾರಿಸಿ ಮತ್ತು ಸಾದ್ಯಾಪೂರ ಹಾಗು ಇತರೆ ಸ್ಥಳಗಳಲ್ಲಿ ತಿರುಗಾಡಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮಾನ್ಯವರು ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ದೂರು ಇರುತ್ತದೆ.

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 20/2019  15(ಎ),32, (3)  ಏಇ ಂಛಿಣ ;- ದಿನಾಂಕ: 13.04.2019 ರಂದು 4:00 ಪಿ.ಎಮ್ ಗಂಟೆಗೆ ಪಿಎಸ್ಐ ಸಾಹೇಬರು ಠಾಣೆಗೆ ಹಾಜರಾಗಿ ತಾವು ಪುರೈಸಿದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಮತ್ತು ಮುದ್ದೇಮಾಲನ್ನು ಹಾಪಡಿಸಿದ್ದು, ಪಿಎಸ್ಐ ರವರು ಹಾಜಪಡಿಸಿದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಸಾರಾಂಶವೆನೆಂದರೆ, ಇಂದು ದಿನಾಂಕ: 13.04.2019 ರಂದು 12:30 ಪಿ.ಎಮ್ ಗಂಟೆಗೆ ಠಾಣೆಯಲ್ಲಿದ್ದಾಗ ಜುಮ್ಮಲಪೂರ ಗ್ರಾಮದ ದುರ್ಗಮ್ಮ ದೇವರ ಗುಡಿ ಮುಂದಿನ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿಯು ಯಾವುದೇ ಅನುಮತಿಯಿಲ್ಲದೆ ಸಾರ್ವಜನಿಕರಿಗೆ ಮಧ್ಯೆ ಕುಡಿಯಲು ಅನುಕೂಲಮಾಡಿಕೊಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ 12:40 ಪಿಎಮ್ ಕ್ಕೆ ಪಂಚರನ್ನಾಗಿ ಕೃಷ್ಣಪ್ಪ ತಂದೆ ಶಿವನಪ್ಪ ಹೆಬ್ಬಾಳದವರ ವ: 48 ವರ್ಷ , ಶಿವಣ್ಣ ತಂದೆ ರೇವಣೆಪ್ಪ ಚಿನ್ನಾಕರ ಸಾ :ಇಬ್ಬರು ಕೊಡೆಕಲ್ ರವರಿಗೆ ಠಾಣೆಗೆ ಕರೆಯಿಸಿ ಸಿಬ್ಬಂದಿಯವರಾದ ಭೀಮಾಶಂಕರ್ ಎಎಸ್ಐ , ಶಂಕರಗೌಡ ಪಿಸಿ-299 ಸಿದ್ರಾಮರೆಡ್ಡಿ ಪಿಸಿ-423 ರವರಿಗೆ ವಿಷಯ ತಿಳಿಸಿ ಈ ವಿಷಯವನ್ನು ಮಾನ್ಯ ಡಿಎಸ್ಪಿ ಸಾಹೇಬರು ಸುರಪುರ , ಮಾನ್ಯ ಸಿಪಿಐ ಸಾಹೇಬರು ಹುಣಸಗಿ ವೃತ್ತರವರ ಮಾರ್ಗದರ್ಶನದಲ್ಲಿ ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಠಾಣೆಯ ಜೀಪ್ ನಂ ಕೆಎ-33 ಜಿ-0165 ನೇದರಲ್ಲಿ  ಠಾಣೆಯಿಂದ 12:45 ಪಿಎಮ್ ಕ್ಕೆ ಹೊರಟು 1:40 ಪಿಎಮ್ ಕ್ಕೆ ಜುಮಾಲಪೂರ ಗ್ರಾಮಕ್ಕೆ ಹೋಗಿ ಭಾತ್ಮಿ ಬಂದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ನಾವೆಲ್ಲರು ನಡೆಯುತ್ತಾ ಹೋಗಿ ಮರೆಯಾಗಿ ನಿಂತು ನೋಡಲಾಗಿ ದುರ್ಗಮದೇವರ ಗುಡಿ ಮುಂದೆ ಅಂದಾಜು 20 ಫಿಟ್ ದೂರದಲ್ಲಿ ಬೇವಿನ ಗಿಡದ ಕೆಳಗೆ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಮಧ್ಯೆ ಕುಡಿಯಲು ಅನುಕೂಲಮಾಡಿಕೊಟ್ಟಿದ್ದನ್ನು ಖಚಿತ ಪಡಿಸಿಕೊಂಡು 1:45 ಪಿಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮದಲ್ಲಿ ಒಮ್ಮೆಲೆ ದಾಳಿ ಮಾಡಿದಾಗ ಸದರಿ ವ್ಯಕ್ತಿಯು ಸಿಕ್ಕಿದ್ದು ಮಧ್ಯೆ ಕುಡಿಯಲು ಬಂದ ಜನರು ಓಡಿ ಹೋಗಿದ್ದು ಮಧ್ಯೆ ಕುಡಿಯಲು ಅನುವು ಮಾಡಿಕೊಟ್ಟ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನ ತನ್ನ ಹೆಸರು ರವಿ ತಂದೆ ದುರ್ಗಯ್ಯ ಗುತ್ತೇದಾರ ವ: 25 ವರ್ಷ ಉ: ಗೌಂಡಿ ಕೆಲಸ ಜಾ: ಇಳಿಗೇರ ಸಾ: ಜುಮ್ಮಲಪುರ ತಾ: ಹುಣಸಗಿ ಅಂತಾ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮ ಸದರಿಯವನಿಗೆ ದುರ್ಗಮ್ಮ ದೇವರ ಗುಡಿಯ ಮುಂದಿನ ಬೇವಿನ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯೆ ಕುಡಿಯಲು ಅನುಕೂಲಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳನ್ನು ಕೇಳಿ ವಿಚಾರಿಸಲಾಗಿ ಸದರಿಯವನು ಯಾವುದೇ ದಾಖಲಾತಿಗಳು ಇರುವದಿಲ್ಲ ಅಂತಾ ತಿಳಿಸಿದನು. ನಾವು ಮತ್ತು ಪಂಚರು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ 1] 74.13 ರೂ, ಮೌಲ್ಯದ 180 ಎಮ್ ಎಲ್ ನ 28 ಔಐಆ ಖಿಂಗಿಇಖಓ ಘಞಥಿ  ಯ  ಹಳದಿ ಬಣ್ಣದ ಪೌಚ್ಗಳು ಇದ್ದು ಅವುಗಳ ಒಟ್ಟು ಅಂದಾಜು ಕಿಮ್ಮತು 2075.64/- ರೂಪಾಯಿಗಳು ಮೌಲ್ಯದ ಮಧ್ಯೆ ಪೌಚಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಸದರಿ ಮಧ್ಯದ ಪೌಚ್ಗಳಲ್ಲಿ 180 ಎಮ್ ಎಲ್ ನ ಒಂದು ಔಐಆ ಖಿಂಗಿಇಖಓ ಘಞಥಿ  ಯ  ಪೌಚ್ನ್ನು ಸ್ಯಾಂಪಲ್ ಮತ್ತು ಎಫ್ ಎಸ್ ಎಲ್ ಪರೀಕ್ಷೆಗಾಗಿ ತೆಗೆದು ಪ್ರತ್ಯೇಕವಾಗಿ ಬಿಳಿ ಬಣ್ಣದ ಅರಿಬಿ ಚೀಲದಲ್ಲಿ ಹಾಕಿ ಎಡಿಬಿ ಅಂತಾ ಸೀಲ್ ಮಾಡಿ ಪಂಚರ ಸಮಕ್ಷಮ ವಶಪಡಿಸಿಕೊಂಡು ಮಧ್ಯದ ಬಗ್ಗೆ ಜಪ್ತಿ ಪಂಚನಾಮೆಯನ್ನು 1:45 ಪಿಎಮ್ ದಿಂದ 2:45 ಪಿಎಮ್ ದವರೆಗೆ ಸ್ಥಳದಲ್ಲಿಯೆ ಕುಳಿತು ಪೂರೈಸಿ ಸದರಿ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ 3:45 ಪಿಎಮ್ ಕ್ಕೆ ಠಾಣೆಗೆ ಬಂದು 4:00 ಪಿಎಮ್ ಕ್ಕೆ ಆರೋಪಿತನ ವಿರುದ್ದ ವರದಿಯನ್ನು ತಯಾರಿಸಿ ಮುಂದಿನ ಕ್ರಮ ಕೈಗೊಳ್ಳಲು ನಿಮಗೆ ಸೂಚಿಸಲಾಗಿದೆ ಅಂತಾ ಇದ್ದು,  ಪಿ.ಎಸ್.ಐ ರವರು ಹಾಜರು ಪಡಿಸಿದ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 20/2019 ಕಲಂ: 15(ಎ) 32(3) ಕೆ.ಇ ಎಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!