ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 12-04-2019

By blogger on ಶುಕ್ರವಾರ, ಏಪ್ರಿಲ್ 12, 2019


                               ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 12-04-2019 

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 37/2019 ಕಲಂ.323,341.504 ಸಂ.34 ಐಪಿಸಿ ;- ದಿನಾಂಕ.12/04/2019 ರಂದು 5-00 ಪಿಎಂಕ್ಕೆ ಪಿರ್ಯಾದಿ ಶ್ರೀ ಶಾಂತವೀರ ತಂ.ನಾರಾಯಣಪ್ಪ ನಾಯಕ ವಃ 50 ಸಾಃ  ಕಟಗಿಶಹಾಪೂರ ತಾಃ ಯಾದಗಿರಿ  ರವರು ಒಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ಮತ್ತು ನಮ್ಮ ಅಣ್ಣ ನಾಯ್ಕೋಡಿ ತಂ. ನಾರಾಯಣಪ್ಪ ನಾಯಕ ಈತನ ನಡುವೆ ನಮ್ಮ ಗಂಜಕ್ರಾಸನಲ್ಲಿರುವ ಮನೆಯ ಆಸ್ತಿ ವಿಚಾರವಾಗಿ ಕೋಟರ್ಿನಲ್ಲಿ ಕೇಸ್ ನಡೆದಿದ್ದು ಆಸ್ತಿ ನಮ್ಮಂತೆ ಆಗಿರುತ್ತದೆ. ಸದರಿ ಮನೆಯಲ್ಲಿ ನಮ್ಮ ಅಣ್ಣನು ವಾಸವಾಗಿರುತ್ತಾನೆ. ಹಲವಾರುಬಾರಿ ಮನೆಬಿಡುವಂತೆ ಕೇಳಿಕೊಂಡರೂ ಸಹಾ ನಮ್ಮ ಅಣ್ಣ ಇಲ್ಲಿಯವರೆಗೂ ಮನೆ ಖಾಲಿ ಮಾಡಿರುವುದಿಲ್ಲ. ಕಾರಣ ನಾನು ಮತ್ತು ನನ್ನ ಹೆಂಡತಿ ಮುತ್ತಮ್ಮ ಇಬ್ಬರು ಕೂಡಿ ದಿನಾಂಕ; 08/04/2019 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನಮ್ಮ ಮನೆಯ ಹತ್ತಿರ ಹೋಗಿ ನಮ್ಮ ಅಣ್ಣ ನಾಯ್ಕೋಡಿ ಈತನಿಗೆ ನಮ್ಮ ಮನೆ ಖಾಲಿ ಮಾಡು ಅಂದರು ನೀನು ಯಾಕೆ ಖಾಲಿ ಮಾಡುತ್ತಿಲ್ಲ ನಾವು ಹೇಗೆ ಬದುಕುವುದು ನೀನು ಕೂಡಲೇ ಮನೆ ಖಾಲಿ ಮಾಡು ಅಂತಾ ಹೇಳಿದಾಗ ನಮ್ಮ ಅಣ್ಣ ನಾಯ್ಕೋಡಿ ಮತ್ತು ಅವನ ಹೆಂಡತಿ ಮಹಾದೇವಮ್ಮ ಇಬ್ಬರು ನಾವು ಮನೆ ಖಾಲಿ ಮಾಡುವುದಿಲ್ಲ ಏನುಮಾಡಿಕೊಳ್ಳಿತ್ತಿರೊ ಮಾಡಿಕೋಳ್ಳಿ ಅಂತಾ ಹೇಳಿದರು. ಆಗ ನಾನು ಈ ಮನೆ ನನ್ನ ಹೆಸರನಲ್ಲಿದ್ದು ನನ್ನ ಮನೆ ನನಗೆ ಬಿಟ್ಟು ಕೊಡಲು ಯಾಕೆ ನೀವು ಈ ತರಹ ಸತಾಯಿಸುತ್ತೀರಿ ಅಂತಾ ಅಂದಾಗ ಅಣ್ಣ ನಾಯ್ಕೋಡಿ ಈತನು ಲೇ ಬೋಸಡೀ ಮಗನೇ ನೀನ್ನದೆಲ್ಲಿದೇ ಮನೆ ಅಂತಾ ಬೈಯುತ್ತಾ ಬಂದವನೇ ಕೈಯಿಂದ ಹೊಡೆದನು. ಆಗ ನನ್ನ ಹೆಂಡತಿ ಮುತ್ತಮ್ಮ ಇವಳು ಜಗಳ ಬಿಡಿಸಲು ಬಂದಾಗ ನಾಯ್ಕೋಡಿ ಮತ್ತು ಅವನ ಹೆಂಡತಿ ಇಬ್ಬರು ಸೇರಿ  ಲೇ ಸುಳೇ ನೀನು ನಡುವೆ ಬರುತ್ತೀಯಾ ಅಂತಾ ಅವಳಿಗು ಸಹಾ ಹೊಡೆಬಡೆ ಮಾಡಿದರು. ನಂತರ ನಾವು ಅಲ್ಲಿಂದ ಹೋಗುತ್ತಿದ್ದಾಗ ನಾಯ್ಕೋಡಿ ಮತ್ತು ಮಹಾದೇವಮ್ಮ ಇಬ್ಬರು ಲೇ ಮಗನೇ ಎಲ್ಲಿಗೇ ಹೋಗುತ್ತೀಯಾ ಅಂತಾ ಎದೆಯ ಮೇಲಿನ ಅಂಗಿ ಹಿಡಿದು ತಡೆದುನಿಲ್ಲಿಸಿ ಹೊಡೆದರು. ಅಲ್ಲೇ ಮನೆಯಲ್ಲಿ ಬಾಡಿಗೆ ಇದ್ದ ಡಾ. ಸಿದ್ದಬಸವಯ್ಯ ಸ್ವಾಮಿ ತಂದೆ ರಾಚಯ್ಯ ಸೂಲಗಿಮಠ ಈತನು ನನಗೆ ನೀನ್ನದೆಲ್ಲಿದೇ ಲೇ ಮನೆ ಸುಮ್ಮನೆ ಹೋಗು ಯಾಕೆ ಜಗಳ ಆಡುತ್ತೀಯಾ ಅಂತಾ ಬೈದನು. ಸಾಬಣ್ಣ ತಂದೆ ಸಾಬಣ್ಣ ನಾಟೇಕಾರ, ಲಕ್ಷ್ಮಣ ತಂದೆ ಮರೆಪ್ಪ ಕೊಟ್ರಿಕೆರ ರವರು ಜಗಳ ಬಿಡಿಸಿದ್ದು ಇರುತ್ತದೆ. ಈ ಬಗ್ಗೆ ಹಿರಿಯರಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಕೊಡುತ್ತಿದ್ದು ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.37/2019 ಕಲಂ.341,504,323 ಸಂ.34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 47/19 ಕಲಂ: 143, 147, 448, 323, 504, 506 ಸಂಗಡ 149 ;- ದಿ: 12/04/19 ರಂದು 10 ಎಎಮ್ಕ್ಕೆ ಪಿರ್ಯಾಧಿದಾರರಾದ ಶ್ರೀಮತಿ ಮಾಸಾಬೀ ಗಂಡ ಮಹ್ಮದ್ ನಾಶಿ ವ|| 30 ಜಾ|| ಮುಸ್ಲೀಂ ಉ|| ಮೆನೆಗಲಸ ಸಾ|| ಜಂಡಾಕಟ್ಟಿ ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾಧಿ ಅಜರ್ಿ ಸಾರಾಂಶವೇನೆಂದರೆ, ನಮ್ಮ ಮನೆ ಹಾಗು ಜನ್ನತಬೀ ಗಂಡ ಗುಡುಬಾಯಿ ಇವರ ಮನೆ ಆಜುಬಾಜು ಇದ್ದು ಮನೆಯ ಮುಂದೆ ನೀರು ಬರುವ ವಿಷಯದಲ್ಲಿ ಸದರಿಯವಳು ದಿನಾಲು ನಮ್ಮೊಂದಿಗೆ  ತಕರಾರು ಮಾಡುತ್ತಿದ್ದಳು. ಹೀಗಿದ್ದು ದಿನಾಂಕ 04/04/2019 ರಂದು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿದ್ದಾಗ ನಮ್ಮ ಮನೆಯ ನೀರು  ಚರಂಡಿಗೆ ಹೋಗುತ್ತಿದ್ದು ಆಗ ನಮ್ಮ ಪಕ್ಕದ ಮನೆಯ ಜನ್ನತಬೀ ಇವರು ನಮ್ಮ ಮನೆಯ ಮುಂದೆ ಯಾಕೇ ನೀರು ಬಿಡುತ್ತಿರಿ ಅಂತ ಅಂದಾಗ ನಾನು ನಿಮ್ಮ ಮನೆಯ ಮುಂದೆ ನೀರು ಬಿಟ್ಟಿರುವದಿಲ್ಲ ಚರಂಡಿಗೆ ನೀರು ಬಿಟ್ಟಿದ್ದೆವೆ ಅಂತ ಅಂದಾಗ ಸದರ 1] ಜನ್ನತಬೀ ಗಂಡ ಗುಡುಬಾಯಿ ನಾಶಿ 2] ಗುಡುಬಾಯಿ ತಂದೆ ನಭಿಸಾಬ ನಾಶಿ 3] ಮಹ್ಮದ್ ಹನೀಪ ತಂದೆ ಗುಡುಬಾಯಿ ನಾಶಿ 4] ನಜಮಾಬೇಗಂ ಗಂಡ ಮಹ್ಮದ್ ಹನೀಪ ನಾಶಿ 5] ಮೇರಾಜ ಗಂಡ ಮಶಾಕಸಾಬ ತಾಳಿಕೋಟಿ ಈ ಎಲ್ಲಾ ಜನರು ಈ ಸೂಳಿಯದು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಸೂಳೇ  ನೀರು ನಮ್ಮ ಮನೆಯ ಮುಂದೆ ಬಿಡಿಬ್ಯಾಡಿರಿ ಅಂತ ಅಂದರೂ ಹಾಗೇಯೇ ಬಿಡುತ್ತೀರಿ  ಮಕ್ಕಳೆ ನಿಮ್ಮ ಸೊಕ್ಕು ಬಹಾಳ ಆಗಿದೆ ಅಂತ ಎಲ್ಲರೂ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ಜೀವದ ಬೆದರಿಕೆ ಹಾಕಿದ ಅಪರಾಧ.             
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 48/19 ಕಲಂ: 143, 147, 323, 498(ಎ), 504, 506, 149 ಐಪಿಸಿ & 3, 4 ಡಿಪಿ ಆಕ್ಟ;- ದಿ: 12/04/19 ರಂದು 1.30 ಪಿಎಮ್ಕ್ಕೆ ಪಿರ್ಯಾಧಿದಾರರಾದ ಶ್ರೀಮತಿ ಕವಿತಾ ಗಂಡ ಅಶೋಕ ಕುಮಾರ ಜಾದವ ವಯಾ||  29 ವರ್ಷ ಉ|| ಹೊಲಮನೆಗೆಲಸ ಜಾ|| ಲಮಾಣಿ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು ಅವರಲ್ಲಿ ಇಬ್ಬರೂ ಹೆಣ್ಣು ಮಕ್ಕಳು ಮತ್ತು ಇಬ್ಬರೂ ಗಂಡು ಮಕ್ಕಳಿದ್ದು ಆ ಪೈಕಿ ನಾನು ಹಿರಿಯ ಮಗಳಿದ್ದು ನನ್ನ ತವರು ಮನೆ ಯಡ್ರಾಮಿ ತಾಂಡಾ ಇರುತ್ತದೆ, ನನಗೆ 2012 ನೇ ಸಾಲಿನಲ್ಲಿ ಗುತ್ತಿ ಬಸವಣ್ಣ ಕಲ್ಯಾಣ ಮಂಟಪದಲ್ಲಿ ಕಿಶನ್ ತಂದೆ ಥಾವರು ಜಾದವ ಇವರ ಮಗನಾದ ಅಶೋಕ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ಸಮಯದಲ್ಲಿ ನಮ್ಮ ತಂದೆಯವರು ವರದಕ್ಷಿಣೆಯಾಗಿ 6 ತೋಲೆ ಬಂಗಾರ ಮತ್ತು 60,000/- ರೂಗಳು ಮದುವೆಯಲ್ಲಿ ಉಡುಗೊರೆಯಾಗಿ ಕೊಡಬೇಕು ಅಂತಾ ಹಿರಿಯರ ಸಮಕ್ಷಮದಲ್ಲಿ ಮಾತುಕತೆ ಮಾಡಿದ್ದು ಇರುತ್ತದೆ. ಮದುವೆ ಮುಂಚಿತವಾಗಿ ಮೂರು ತೋಲೆ ಬಂಗಾರ ಹಾಗೂ 60,000/- ರೂಪಾಯಿ ಕೊಟ್ಟಿದ್ದು ಮದುವೆ ಆದ ನಂತರ ಮದುಯೆಯಲ್ಲಿ ಬಂದ ಆಯೇರಿ ಹಣದಿಂದ ಇನ್ನೂ ಮೂರು ತೋಲೆ ಬಂಗಾರ ಕೊಟ್ಟಿದು ಇರುತ್ತದೆ.  ಮದುವೆಯಾದ ಸುಮಾರು ಒಂದು ವರ್ಷದ ವರೆಗೆ ಗಂಡ ಹಾಗೂ ಅತ್ತೆ ಮಾವ ಎಲ್ಲರೂ ನನ್ನೊಂದಿಗೆ ಅನ್ಯೋನ್ಯವಾಗಿದ್ದರು. ಸದ್ಯ ನನಗೆ ಕೀತರ್ಿ ಎನ್ನುವ 5 ವರ್ಷದ ಮಗಳಿರುತ್ತಾಳೆ. ಸುಮಾರು ದಿನಗಳಿಂದ ಯಾದಗಿರಿಯಲ್ಲಿ ನನ್ನ ಗಂಡ ಹಾಗು ಆತನ ಮನೆಯವರು ದಿನಾಲು ತೊಂದರೆ ಕೊಡುತ್ತಿದ್ದರು. ನನ್ನ ಗಂಡ ಹಾಗು ಅವರ ಮನೆಯಲ್ಲರುವ ಕೂಡಾ ನನಗೆ ನೀನು ಸರಿ ಇಲ್ಲ ಅಡುಗೆ ಮಾಡಲು ಬರುವುದಿಲ್ಲ ಅಂತಾ ಎಲ್ಲರೂ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಅವಾಚ್ಯವಾಗಿ ಬೈದು ಹೋಡೆ-ಬಡೆ ಮಾಡಿ ನನ್ನ ಗಂಡನು ನನಗೆ ಮತ್ತು ಮಗಳಿಗೆ ಇಬ್ಬರಿಗೂ ಏವೂರ ದೊಡ್ಡ ತಾಂಡಕ್ಕೆ ತಂದು ಬಿಟ್ಟಿ ಹೋಗಿದ್ದರಿಂದ ನಾನು ಮಗಳೊಂದಿಗೆ ಏವೂರ ದೊಡ್ಡ ತಾಂಡಾದ ನನ್ನ ಗಂಡನ ಮನೆಯಲ್ಲಿಯೇ ವಾಸವಾಗಿರುತ್ತೇನೆ. ಅಲ್ಲದೇ ದಿನಾಂಕ 08/04/2019 ರಂದು ಸಾಯಂಕಾಲ 6 ಗಂಟೆಗೆ ನಾನು ನನ್ನ ಮಗಳೊಂದಿಗೆ ನಮ್ಮ ಮನೆಯಲ್ಲಿದ್ದಾಗ  ಗಂಡನಾದ 1) ಅಶೋಕಕುಮಾರ ತಂದೆ ಕಿಶನ್ ಜಾದವ, ಮಾವನಾದ 2) ಕಿಶನ ತಂದೆ ಥಾವರು ಜಾಧವ, ಅತ್ತೆಯಾದ 3) ಜಾನಕಿಬಾಯಿ ಗಂಡ ಕಿಶನ ಜಾಧವ, ನಾದಿನಿಯಾದ 4) ಮಂಜುಳಾ ಗಂಡ ಶಿವಕುಮಾರ ನಾಯಕ, ಮೈದುನನಾದ 5) ಸಂತೋಷಕುಮಾರ ತಂದೆ ಕಿಶನ ಜಾಧವ, ಇನ್ನೊಬ್ಬ ಮೈದುನನಾದ 6) ರಾಘವೇಂದ್ರ ತಂದೆ ಕಿಶನ ಜಾಧವ ಸಾ|| ಎಲ್ಲರೂ ಏವೂರ ದೊಡ್ಡ ತಾಂಡಾ ಈ ಎಲ್ಲ ಜನರು ಗುಂಪು ಕಟ್ಟಿಕೊಂಡು ಬಂದವರೇ ಏನಲೇ ರಂಡಿ ನಮ್ಮ ಮನೆಯಲ್ಲಿ ಏಕೆ ಇದ್ದಿ ನಿನ್ನ ತವರು ಮನೆಯಿಂದ ಇನ್ನು ಒಂದು ಲಕ್ಷ ಹಣ ತೆಗೆದುಕೊಂಡು ಬಾ ಅಂತ ಅಂದರೂ ನಿನ್ನ ತವರು ಮನೆಗೆ ಹೋಗದೆ ಇಲ್ಲಿ ಯಾಕೇ ಇದ್ದಿಯಾ ಅಂತ ಎಲ್ಲರೂ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ನಾನು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಮ್ಮ ತಾಂಡಾದ ತಿಪ್ಪಣ್ಣ ತಂದೆ ನಾರಾಯಣ ಜಾದವ ಇವರು ಬಂದು ಬಿಡಿಸಿಕೊಂಡಿದ್ದು ಇರುತ್ತದೆ. ನಂತರ ಸದರಿಯವರು ನನಗೆ ನಿನ್ನ ತವರು ಮನೆಯಿಂದ ಇನ್ನೂ ಒಂದು ಲಕ್ಷ ಹಣ ತಂದರೆ ಸರಿ ಹಣ ತರದೇ, ನಮ್ಮ ಮನೆಯಲ್ಲಿ ಇದ್ದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ. ಅಂತ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 48/19 ಕಲಂ: 143, 147, 323, 498(ಎ), 504, 506, 149 ಐಪಿಸಿ & 3, 4 ಡಿಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
  
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 49/2019 ಕಲಂ: 32, 34 ಕೆ. ಇ ಯಾಕ್ಟ ;- ದಿನಾಂಕ 12/04/2019 ರಂದು 3.50 ಪಿ.ಎಂಕ್ಕೆ ಆರೋಪಿತರು ಯಾವುದೇ ಲೈಸನ್ಸ ವೈಗರೆ ಇಲ್ಲದೇ ಅಕ್ರಮವಾಗಿ ಸಾರಾಯಿ ಪೌಚಗಳನ್ನು ಮಲ್ಲಾ ಕ್ರಾಸಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಟಂಟಂದಲ್ಲಿಟ್ಟು ಮಾರಾಟ ಮಾಡುತ್ತಿದ್ದಾಗ ಸದರಿ ಆರೋಪಿತರನ್ನು ಹಿಡಿದು ವಿಚಾರಿಸಿದ್ದು ಮತ್ತು ಸದರಿ ಟಮ ಟಂದಲ್ಲಿದ್ದ 90 ಎಮ್ಎಲ್ನ 576 ಓರಿಜಿನಲ್ ಚ್ವಾಯಿಸ್ ಪೌಚಗಳು  ಇದ್ದು ಒಂದು ಪೌಚಿನ  ಬೆಲೆ 30.32 ರೂ. ಒಟ್ಟು ಪೌಚಗಳ ಕಿಮ್ಮತ್ತು 17,464.32/- ರೂ ಆಗುತ್ತಿದ್ದು, ಮತ್ತು ಅಲ್ಲಿಯೇ ಸ್ಥಳದಲ್ಲಿದ್ದ ಆರೋಪಿತರು ಕೃತ್ಯಕ್ಕೆ ಬಳಿಸಿದ ಟಂ ಟಂ ನಂಬರ ಕೆಎ-32 ಸಿ-2464 ಹಾಗು  1000/- ರೂ ನಗದು ಹಣ ನೇದ್ದವುಗಳನ್ನು ಜಪ್ತ ಮಾಡಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ. 

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ :- 52/2019 ಕಲಂ 279, 338 ಐ.ಪಿ.ಸಿ;- ದಿನಾಂಕ:11/04/2019 ರಂದು 6 ಪಿ.ಎಮ್ ಸುಮಾರಿಗೆ ಫಿಯರ್ಾದಿಯು ತನ್ನ ತಂದೆ ತಿಮ್ಮಯ್ಯ ಇವರಿಗೆ ತನ್ನ ಟಿವಿಎಸ್ ಎಕ್ಸ್.ಎಲ್ ಮೋಟರ್ ಸೈಕಲ್ ನಂ:ಕೆಎ-33, ಎಕ್ಸ್-4287 ನೇದ್ದರ ಮೇಲೆ ಕೂಡಿಸಿಕೊಂಡು ಮುಡಬೂಳ ಊರಲ್ಲಿನ ಮನೆಯಿಂದ ಹೊಲದಲ್ಲಿರುವ ಮನೆಯ ಕಡೆಗೆ ಮುಡಬೂಳ-ಮುಡಬೂಳ ಕ್ರಾಸ್ ರೋಡಿನ ಮೇಲೆ ರಂಗಣ್ಣ ಮುತ್ಯಾ ಗದ್ದಿಗಿ ಹತ್ತಿರ ಹೊರಟಾಗ ಎದುರಿನಿಂದ ಆರೋಪಿತನು ತನ್ನ ಆಪೆ ಕಂಪನಿಯ ಹೊಸ ಅಟೋ ಟಂಟಂ ಇಂಜಿನ್ ನಂ:ಖ9ಂ8945249 ಚೆಸ್ಸಿ ನಂ:ಒಃಘಿ0003ಃಈಘಿಂ787262 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ನಿಯಂತ್ರಣ ತಪ್ಪಿ ಫಿಯರ್ಾದಿಯ ಮೋಟರ್ ಸೈಕಲ್ಗೆ ಡಿಕ್ಕಿ ಹೊಡೆದು ಅಪಘಾತವಾಗಿದ್ದು ಫಿಯರ್ಾದಿಯ ಬಲ ಭುಜಕ್ಕೆ ಭಾರಿ ಒಳಪೆಟ್ಟಾಗಿದ್ದು, ತಿಮ್ಮಯ್ಯ ಇವರ ಬಲಗೈಗೆ ಹಾಗೂ ಬಲಗಾಲ ಮಳಕಾಲಿಗೆ ಭಾರಿ ರಕ್ತಗಾಯವಾಗಿ ಎಲುಬು ಮುರಿದಿರುತ್ತದೆ. ಕಾರಣ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!