ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-04-2019

By blogger on ಶುಕ್ರವಾರ, ಏಪ್ರಿಲ್ 12, 2019

           
                       ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-04-2019 

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 51/2019 ಕಲಂ 279, 337, 338, 304(ಎ) ಐ.ಪಿ.ಸಿ;- ದಿನಾಂಕ:08/04/2019 ರಂದು 1 ಪಿ.ಎಮ್ ಸುಮಾರಿಗೆ ಮೃತ ದಶರಥ ಈತನು ಆರೋಪಿತನ ಮೋಟರ್ ಸೈಕಲ್ ನಂ:ಕೆಎ-33, ಎಸ್-9902 ನೇದ್ದರ ಮೇಲೆ ಅವನ ಹಿಂದೆ ಕುಳಿತು ಗೂಡೂರದಿಂದ ನಾಗನಟಗಿಯ ಕಡೆಗೆ ಶಹಾಪುರ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಮದ್ರಕಿ ಹಳ್ಳದ ಹತ್ತಿರ ಹೊರಟಾಗ ಇಳಿಜಾರು ರೋಡಿನ ಮೇಲೆ ಆರೋಪಿತನು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಮೋಟರ್ ಸೈಕಲ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ದಶರಥ ಈತನ ತಲೆಗೆ, ಮುಖಕ್ಕೆ ಭಾರಿ ರಕ್ತಗಾಯಗಳಾಗಿದ್ದು, ಆರೋಪಿ ಗೌಡಪ್ಪ ಈತನ ತಲೆಗೆ, ಮುಖಕ್ಕೆ, ಕಣ್ಣಿಗೆ, ಬಾಯಿಗೆ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಈ ಬಗ್ಗೆ ಫಿಯರ್ಾದಿ ತಡವಾಗಿ ಠಾಣೆಗೆ ಬಂದು ದಿನಾಂಕ:10/04/2019 ರಂದು 6.30 ಪಿ.ಎಮ್.ಕ್ಕೆ ಫಿಯರ್ಾದಿ ಕೊಟ್ಟಿದ್ದರಿಂದ ಠಾಣೆ ಗುನ್ನೆ ನಂ:51/19 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ದಶರಥ ಈತನಿಗೆ ಇಂದು ದಿನಾಂಕ:11/04/19 ರಂದು ಹೆಚ್ಚಿನ ಉಪಚಾರ ಕುರಿತು ರಾಯಚೂರಗೆ ಕರೆದುಕೊಂಡು ಹೊರಟಾಗ 4 ಪಿ.ಎಮ್ ಸುಮಾರಿಗೆ ಜೇವಗರ್ಿ ಹತ್ತಿರ ಮೃತಪಟ್ಟ ಬಗ್ಗೆ 5 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಗೆ ಬಂದು ತನ್ನ ಮರು ಹೇಳಿಕೆ ಕೊಟ್ಟಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮೂಲಕ ವಿನಂತಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತ ವಿನಂತಿ.  

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 46/19 ಕಲಂ: 143.147.447, 448, 451, 504, 506 ಸಂಗಡ 149 ಐಪಿಸಿ;- ದಿ: 11/04/19 ರಂದು 7 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಜಾನಕಿಬಾಯಿ ಗಂಡ ಕಿಶನ ಜಾದವ ವ|| 50 ಜಾ|| ಲಂಬಾಣಿ ಉ|| ಮನೆಗೆಲಸ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ಸ್ವಗ್ರಾಮದವರಾದ 1) ಸುಬಾಸ ತಂದೆ ಶೇವು ಕಾರಬಾರಿ, 2) ರಮೇಶ ತಂದೆ ಸುಭಾಸ ಕಾರಬಾರಿ, 3) ಶ್ರೀಮತಿ ಅನಿತಾ ಗಂಡ ಸುಬಾಸ ಕಾರಬಾರಿ, 4) ಶೇವು ತಂದೆ ಲುಂಬು ಯಡ್ರಾಮಿ, 5) ಶ್ರೀಮತಿ ಕಮಲಿಬಾಯಿ ಗಂಡ ಶೇವು ಯಡ್ರಾಮಿ, 6) ಸಚಿನ ತಂದೆ ಶೇವು ಯಡ್ರಾಮಿ, 7) ಸತೀಶ ತಂದೆ ಶೇವು ಯಡ್ರಾಮಿ, 8) ಸವಿತಾ ತಂದೆ ಶೇವು ಯಡ್ರಾಮಿ, 9) ನಾಗೇಶ ತಂದೆ ಲುಂಬು ಯಡ್ರಾಮಿ 10) ವಿನೋದ ತಂದೆ ಶರಣು ಜಾಧವ 11) ಕವಿತಾ ತಂದೆ ಶೇವು ಯಡ್ರಾಮಿ ಇವರೆಲ್ಲರೂ ಕೂಡಿ ನಮಗೆ ಬ್ಲಾಕಮೇಲ ಮಾಡುತ್ತಿದ್ದಾರೆ ನನಗೆ ಹಣ ಕೊಡುವಂತೆ ಪೀಡಿಸುತ್ತಿದ್ದಾರೆ. ನಾವು ಹಣ ಯಾಕೆ ಕೊಡಬೇಕು ಅಂತಾ ಹೇಳಿದ್ದಕ್ಕೆ ದಿನಾಂಕ 07.04.2019 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನನ್ನ ಹೆಸರಿನಲ್ಲಿರುವ ಪಟ್ಟಾವಿರುವ ಸವರ್ೆ ನಂ. 325 ರಲ್ಲಿ ಸ್ವಗ್ರಾಮದ ವಿನೋದ ತಂದೆ ಶರಣು ಜಾಧವ ಇವನು ಟ್ರ್ಯಾಕ್ಟರ ನಂ ಕೆ.ಎ33/ಟಿ-9453 ರಿಂದ ಕುಂಟಿ ಹೋಡೆದಿರುತ್ತಾರೆ ಅಲ್ಲದೇ ನಾನು ಮನೆಯಲ್ಲಿ ಇಲ್ಲದಿರುವಾಗ ನನ್ನ ಮನೆ ಬಾಗಿಲು ಕೀಲಿ ಒಡೆದು ಹಾಕಿದ್ದಾರೆ ಹಾಗೂ ನನಗೆ ಜೀವ ಬಯ ಹಾಕಿ ಊರು ಬಿಡಿಸಿರುತ್ತಾರೆ. ಹೀಗೆ ಮೆಲ್ಕಂಡ ಎಲ್ಲರೂ ನನ್ನ ಮೇಲೆ ದೌರ್ಜನ್ಯ ದಬ್ಬಾಳಿಕೆ, ಗುಂಡಾಗಿರಿ ನಡೆಸಿ ನನಗೆ ಜೀವ ಬೇದರಿಕೆ ಹಾಕಿದ್ದಾರೆ. ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಏನೇ ಅನಾಹುತ ಆದರೂ ಇವರೇ ಹೋಣೆಗಾರರಾಗಿರುತ್ತಾರೆ. ಅಂತ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 46/2019 ಕಲಂ: 143, 147, 447, 448, 451, 504, 506, 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 97/2019 ಕಲಂ 323 324 504 506 ಸಂ 34   ಐ.ಪಿ.ಸಿ ;- ದಿನಾಂಕ 11/04/2019 ರಂದು ಸಾಯಂಕಾಲ 19-30 ಗಂಟೆಗೆ ಫಿಯರ್ಾದಿ ಶ್ರೀ ದೊಡ್ಡಮಲ್ಲಪ್ಪ ತಂದೆ ದೊಡ್ಡಭೀಮಪ್ಪ ಕಚರ್ೆನೋರ ವಯ 55 ವರ್ಷ ಜಾತಿ ಪ.ಜಾತಿ(ಮಾದಿ) ಉಃ ಒಕ್ಕಲುತನ ಸಾಃ ಕನ್ಯಾಕೊಳ್ಳುರ ತಾಃ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ಫಿಯರ್ಾದಿ ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 10/04/2019 ರಂದು ಸಾಯಂಕಾಲದ ಸುಮಾರಿಗೆ ಗ್ರಾಮದ ಶ್ರೀ ಬಾಬು ಜಗಜೀವನರಾಮ ಸಮುದಾಯ ಭವನದ ಎದರುಗಡೆ ಫಿಯರ್ಾದಿ ಮತ್ತು ಫಿಯರ್ಾದಿಯ ಮಗ ಮೋಹನರಾಜ @ ಮಾನಪ್ಪ ಮತ್ತು ಓಣಿಯ ಶರಬಣ್ಣ ತಂದೆ ಭೀಮಪ್ಪ ರಸ್ತಾಪೂರ ರವರೆಲ್ಲರೂ ಮಾತನಾಡುತ್ತಾ ಕುಳಿತುಕೊಂಡಿದ್ದಾಗ ಸಮುದಾಯ ಭವನದ ಮುಂದೆ ಇರುವ ಸಿಸಿ ರಸ್ತೆಯ ಮೇಲೆ ಶರಣಪ್ಪ ಶಿರವಾಳ ಈತನ ಟ್ಯಾಕ್ಟರ ಚಾಲಕ ನಿಂಗಪ್ಪ ದಾಳಿ ಈತನು ಟ್ಯಾಕ್ಟರ ಚಲಾಯಿಸಿಕೊಂಡು ಬಂದು ಒಮ್ಮಿಂದಲೇ ಬ್ರೇಕ್ ಹಾಕಿದ್ದರಿಂದ ಸಿಸಿ ರೋಡ ಹಾಳಾಗಿರುತ್ತದೆ ಕೇಳಬೇಕೆನ್ನುವಷ್ಟರಲ್ಲಿ ಟ್ಯಾಕ್ಟರ ಚಲಾಯಿಸಿಕೊಂಡು ಹೋಗಿದ್ದರಿಂದ ರಾತ್ರಿ 10-30 ಗಂಟೆಯ ಸುಮಾರಿಗೆ ಫಿಯರ್ಾದಿ ಮತ್ತು ಫಿಯರ್ಾದಿಯ ಮಗ ಇಬ್ಬರೂ ಕೂಡಿ ಶರಣಪ್ಪ ಶಿರವಾಳ ಈತನ ಮನೆಗೆ ಕೇಳಲು ಹೋಗುತಿದ್ದಾಗ ಮಾರ್ಗ ಮದ್ಯ ಶಾಂತಪ್ಪ ತಂದೆ ಭೀಮಪ್ಪ ಕಚರ್ೆನೋರ ಇವರ ಮನೆಯ ಮುಂದೆ ಲೈಟಿನ ಬೆಳಕಿನಲ್ಲಿ 1) ಶರಣಪ್ಪ ತಂದೆ ಹಣಮಂತ ಶಿರವಾಳ, 2) ಶಿವಾಜಿ ತಂದೆ ಮಲ್ಲಪ್ಪ ಚನ್ನೂರ 3) ಶಾಂತಪ್ಪ ತಂದೆ ಭೀಮಪ್ಪ ಕಚರ್ೆನೋರ ಎಲ್ಲರೂ ಸಾಃ ಕನ್ಯಾಕೊಳ್ಳುರ ರವರೆಲ್ಲರೂ ಮಾತನಾಡುತ್ತಾ ನಿಂತಿದ್ದರು, ಆಗ ಫಿಯರ್ಾದಿಯ  ಮಗ ಮೋಹನರಾಜ @ ಮಾನಪ್ಪ ಈತನು ಶರಣಪ್ಪ ಶಿರವಾಳ ಈತನಿಗೆ ನಿಮ್ಮ ಟ್ಯಾಕ್ಟರ ಚಾಲಕ  ನಿಂಗಪ್ಪ ದಾಳಿ ಈತನಿಗೆ ಟ್ಯಾಕ್ಟರ ವಾಹನ ನಿಧಾನಗತಿಯಲ್ಲಿ ಓಡಿಸಿಕೊಂಡು ಹೋಗಲು ಹೇಳು ವೇಗವಾಗಿ ಹೋಗಿದ್ದರಿಂದ ಬಾಬು ಜಗಜೀವನರಾಮ ರವರ ಸಮುದಾಯಭವನದ ಮುಂದಿನ ಸಿಸಿ ರೋಡ ಹಾಳಾಗಿದೆ ಅಂತ ಹೇಳಿದ್ದಕ್ಕೆ  ಶರಣಪ್ಪ ಶಿರವಾಳ ಈತನು ಮೋಹನರಾಜ @ ಮಾನಪ್ಪನಿಗೆ  ಏ ಬೋಸ್ಡಿ ಮಗನೇ ಸಿಸಿ ರಸ್ತೆ ಏನು ನಿಮ್ಮ ಅಪ್ಪನದು ಏನು ಅಂತ ಅವಾಚ್ಯ ಶಬ್ದಗಳಿಂದ ಬೈದು ಜಗಳಕ್ಕೆ ಬಿದ್ದು ತಲೆಗೆ ಬಡಿಗೆಯಿಂದ ಹೊಡೆದು ರಕ್ತಗಾಯ ಮತ್ತು ಕೈಯಿಂದ ಹೊಡೆದು ಗುಪ್ತಗಾಯ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ. ಅಂತ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 97/2019 ಕಲಂ 323 324 504 506 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 
  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 98/2019.ಕಲಂ 323 341 504 506 ಸಂ 34 ಐ.ಪಿ.ಸಿ.;- ಪಿಯರ್ಾದಿ ಶ್ರೀ ಶರಣಪ್ಪ ತಂದೆ ಹಣಮಂತ ಶಿರವಾಳ ವ|| 32 ಜಾ|| ಮಾದಿಗ ಉ|| ಒಕ್ಕಲುತನ ಸಾ|| ಕನ್ಯಾಕೊಳ್ಳೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಹೀಗಿದ್ದು ನಿನ್ನೆ ದಿನಾಂಕ 10/04/2019 ರಂದು ರಾತ್ರಿ 10-30 ಗಂಟೆಗೆ ನಮ್ಮ ಮನೆಯ ಮುಂದೆ ನಾನು ಮತು ನನ್ನ ಮಾವ ಶಾಂತಪ್ಪ ತಂದೆ ದೊಡ್ಡಭಿಮಪ್ಪ ಕಚರ್ೆನವರ ಇಬ್ಬರು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮ ಸಮಾಜದ ಮಾನಪ್ಪ ತಂದೆ ಮಲ್ಲಪ್ಪ ಕಚರ್ೆನವರ ಈತನು ನಮ್ಮ ಮನೆಯ ಹತ್ತಿರ ಬಂದವನೆ ಲೇ ಶ್ಯಾಣ್ಯಾ ಸೂಳಿಮಗನೆ, ಮತ್ತು ಶಾಂತ್ಯಾಸೂಳಿಮಗನೆ ಬರೆಲೆ ಅಂತ ಅವಾಶ್ಚ ಶಬ್ದಗಹಳಿಂದ ಬೈದನು, ಆಗ ನಾನು ಯಾಕೊ ಮಾನಪ್ಪ ಸುಮ್ಮನೆ ನಮಗೆ ಬೈಯ್ಯಕತ್ತಿದ್ದಿ ಅಂತ ನಾನು ಅಂದಾಗ, ಆಗ ಮಾನಪ್ಪನು ನಿನ್ನದು ಊರಲ್ಲಿ ಬಹಳವಾಗಿದೆ ಮಗನೆ ಅಂತ ಅಂದವನೆ ತನ್ನ ಕೈಯಿಂದ ಮುಖಕ್ಕೆ, ಎಡಕಿಗೆ, ಬೆನ್ನಿಗೆ, ಹೋಡೆದು ಗುಪ್ತಗಾಯ ಮಾಡಿದನು, ಮಾನಪ್ಪನು ಅಲ್ಲೆ ಬಿದ್ದಿದ್ದ ಒಂದು ಕಲ್ಲಿನಿಂದ ಬಲಗೈ ಹಸ್ತದ ಮಣಿಕಟ್ಟಿನ ಕೆಳಗಡೆ ಹೊಡೆದ್ದಿದ್ದರಿಂದ ಗುಪ್ತಗಾಯ ವಾಗಿರುತ್ತದೆ, ಮಾನಪ್ಪನು ನನಗೆ ನೆಲಕ್ಕೆ ಹಾಕಿ ಎಳೆದಾಡಿದನು, ಅಲ್ಲೆ ಇದ್ದ ನನ್ನ ಮಾವ ಶಾಂತಪ್ಪ ತಂದೆ ದೊಡ್ಡ ಭೀಮಪ್ಪ ಕಚರ್ೆನವರ ಮತ್ತು ಶಿವಶಂಕರ ತಂದೆ ಭೀಮಪ್ಪ ರಸ್ತಾಪೂರ, ಇವರು ಸದರಿ ಜಗಳ ನೋಡಿ ಬಂದು ನನಗೆ ಹೋಡೆಯುವದನ್ನು ಬಿಡಿಸಿಕೊಂಡರು, ಆಗ ಮಾನಪ್ಪನು ಇವತ್ತು ಉಳಿದುಕೊಂಡಿದ್ದಿ ಮಗನೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವ ಬೆದರಿಕೆ ಹಾಕಿ ಹೋದನು. ಸದರಿ ಜಗಳವು ನಮ್ಮ ಮನೆಯ ಹತ್ತಿರ ದಿನಾಂಕ 10/04/2019 ರಂದು ರಾತ್ರಿ 10-30 ಗಂಟೆಗೆ ಲೈಟಿನ ಬೆಳಕಿನಲ್ಲಿ ಜರುಗಿರುತ್ತದೆ, ಇಂದು ನೋವು ಜಾಸ್ತಿಯಾಗಿದ್ದರಿಂದ ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ, ನಮ್ಮ ಹಿರಿಯರೊಂದಿಗೆ ವಿಚಾರಮಾಡಿ ತಡವಾಗಿ ಇಂದು ಠಾಣೆಗೆ ಬಂದು ಅಜರ್ಿ ಸಲ್ಲಿಸುತ್ತಿದ್ದೆನೆ, ಅಂತ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 98/2019 ಕಲಂ 323.324.504.506. ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!