ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 10-04-2019

By blogger on ಗುರುವಾರ, ಏಪ್ರಿಲ್ 11, 2019

                              
                        ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 10-04-2019 

ಯಾದಗಿರಿನಗರ  ಪೊಲೀಸ್ ಠಾಣೆ ಗುನ್ನೆ ನಂ:- 36/2019 ಕಲಂ.323,341.504 ಐಪಿಸಿ;- ದಿನಾಂಕ.10/04/2019 ರಂದು 6-30 ಪಿಎಂಕ್ಕೆ ಪಿರ್ಯಾದಿ ಶ್ರೀ ನಾಯ್ಕೋಡಿ ತಂ.ನಾರಾಯಣಪ್ಪ ನಾಯಕ ವಃ 52 ಸಾಃ ದುಗರ್ಾ ನಿವಾಸ ಹೈದ್ರಾಬಾದ ರೋಡ ಗಂಜ ಏರಿಯಾ ಯಾದಗಿರಿ ರವರು ಒಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ಮತ್ತು ನನ್ನ ತಮ್ಮ ಶಾಂತವೀರ ತಂ. ನಾರಾಯಣಪ್ಪ ನಾಯಕ ಈತನ ನಡುವೆ ಆಸ್ತಿ ವಿಚಾರವಾಗಿ ಕೋಟರ್ಿನಲ್ಲಿ ಕೇಸ್ ನಡೆಯುತ್ತಿದ್ದು ಆದರೂ ಕೂಡಾ ನನ್ನ ತಮ್ಮನಾದ ಶಾಂತವೀರ ತಂ. ನಾರಾಯಣಪ್ಪ ನಾಯಕ ಈತನು ದಿನಾಂಕ.08/04/2019 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಮನೆಗೆ ಬಂದು ಮನೆಯ ಮುಂದೆ ನಮ್ಮ ಆಸ್ತಿ ವಿಚಾರವಾಗಿ ನನ್ನ ಹೆಂಡತಿಯಾದ ಮಹಾದೇವಮ್ಮ ಇವಳಿಗೆ ಅವಾಚ್ಯ ಶಬ್ದಗಳಿಂದ ಬೈದು  ಹಲ್ಲೆ  ಮಾಡಿದ್ದು ನಂತರ ಮನೆಯ ಬಾಡಿಗೆದಾರರಾದ ಸುರೇಶ ಮತ್ತು ಈತರರು ಜಗಳಾ ಬಿಡಿಸಲು ಬಂದಾಗ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಾಗ ಅವರು ಹೋಗುತ್ತಿರುವಾಗ ಏ ಮಕ್ಕಳೆ ಜಗಳಾ ಬಿಡಿಸಲು ಬರುತ್ತಿರಿ ಅಂತಾ ತಡೆದು ನಿಲ್ಲಿಸಿ ಅವರಿಗೆ ಕೂಡಾ  ಹಲ್ಲೆ ಮಾಡಿದ್ದು ಇರುತ್ತದೆ ಈ ವಿಷಯವನ್ನು ನನಗೆ ನಮ್ಮ ಹೆಂಡತಿಯು ನಾನು ಸಾಯಂಕಾಲ ಮನೆಗೆ ಬಂದಾಗ  ತಿಳಿಸಿದ್ದು ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ದೂರು ಕೊಡುತ್ತಿದ್ದು ಶಾಂತವೀರ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.36/2019 ಕಲಂ.341,504,323,ಐಪಿಸಿ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 50/2019 ಕಲಂ 323, 324, 504, 506 ಸಂಗಡ 34 ಐಪಿಸಿ;- ಫಿಯರ್ಾದಿ ಹಾಗು ಆರೋಪಿತರ ಮನೆಗಳು ಅಕ್ಕಪಕ್ಕದಲ್ಲಿದ್ದು, ಮನೆಯ ಪಕ್ಕದ ಜಾಗದಲ್ಲಿ ಕಟ್ಟಿಗೆ ಹಾಕುವ ಹಾಗು ಚರಂಡಿ ನೀರಿನ ವಿಷಯದಲ್ಲಿ ಸುಮಾರು ಒಂದು ವರ್ಷದಿಂದ ತಕರಾರು ಇರುತ್ತದೆ. ಹೀಗಿದ್ದು ಇಂದು ದಿ:09/04/2019 ರಂದು 6.30 ಪಿ.ಎಮ್. ಸುಮಾರಿಗೆ ಮರಿಗೌಡ ಈತನು ಫಿಯರ್ಾದಿ ಮನೆಯ ಹತ್ತಿರ ಹೊರಟಾಗ ಅವನಿಗೆ ಕರೆದು ನೋಡು ಮರಿಗೌಡ ನಿಮ್ಮ ಮನೆಯ ಚರಂಡಿ ನೀರು ನಮ್ಮ ಅಂಗಳದಲ್ಲಿ ಹರಿದು ಬಂದು ಎಷ್ಟು ಗಲೀಜಾಗಿದೆ ಅಂತಾ ಹೇಳುತ್ತಿರುವಾಗ ಮರಿಗೌಡ ಈತನು ಭೋಸಡಿ ಮಕ್ಕಳ್ಯಾ ಚರಂಡಿ ನೀರು ಹರಿದು ಬಂದರೆ ನಾನೇನು ಮಾಡಲಿ ಅಂತಾ ಬೈದವನೇ ತನ್ನ ಕೈಯಲ್ಲಿದ್ದ ಕೊಡಲಿಯಿಂದ ಫಿಯರ್ಾದಿಯ ಎಡಗೈಗೆ ಹೊಡೆದು ರಕ್ತಗಾಯ ಮಾಡಿದ್ದು ಆಗ ಶೇಕಪ್ಪ ಈತನು ಬಿಡಿಸಲು ಹೋದಾಗ ಆರೋಪಿತರೆಲ್ಲರೂ ಕೂಡಿ ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದವರೇ ಕಲ್ಲಿನಿಂದ, ಬಡಿಗೆಯಿಂದ ಶೇಕಪ್ಪನ ಎದೆಗೆ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ್ದು ಆಗ ಬಾಬು ಈತನು ಶೇಕಪ್ಪನಿಗೆ ಹೊಡೆಯುವದನ್ನು ಬಿಡಿಸಲು ಹೋದಾಗ ಶಿವಮಾನಪ್ಪ ಈತನು ತನ್ನ ಕೈಗಳಿಂದ ಬಾಬು ಈತನ ಮೈಕೈಗೆ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಇರುತ್ತದೆ.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 51/2019 ಕಲಂ 279, 337, 338 ಐ.ಪಿ.ಸಿ;- ದಿನಾಂಕ:08/04/2019 ರಂದು 1 ಪಿ.ಎಮ್ ಸುಮಾರಿಗೆ ಗಾಯಾಳು ದಶರಥ ಈತನು ಆರೋಪಿತನ ಮೋಟರ್ ಸೈಕಲ್ ನಂ:ಕೆಎ-33, ಎಸ್-9902 ನೇದ್ದರ ಮೇಲೆ ಅವನ ಹಿಂದೆ ಕುಳಿತು ಗೂಡೂರದಿಂದ ನಾಗನಟಗಿಯ ಕಡೆಗೆ ಶಹಾಪುರ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಮದ್ರಕಿ ಹಳ್ಳದ ಹತ್ತಿರ ಹೊರಟಾಗ ಇಳಿಜಾರು ರೋಡಿನ ಮೇಲೆ ಆರೋಪಿತನು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಮೋಟರ್ ಸೈಕಲ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ದಶರಥ ಈತನ ತಲೆಗೆ, ಮುಖಕ್ಕೆ ಭಾರಿ ರಕ್ತಗಾಯಗಳಾಗಿದ್ದು, ಆರೋಪಿ ಗೌಡಪ್ಪ ಈತನ ತಲೆಗೆ, ಮುಖಕ್ಕೆ, ಕಣ್ಣಿಗೆ, ಬಾಯಿಗೆ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ ಅಜರ್ಿ ಇರುತ್ತದೆ. 

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 44/19 ಕಲಂ: 143, 147, 447, 341, 323, 504, 506 ಸಂಗಡ 149 ಐಪಿಸಿ;- ದಿ: 09/04/19 ರಂದು8.30 ಪಿಎಮ್ಕ್ಕೆ ಶ್ರೀ ಜಟ್ಟೆಪ್ಪ ತಂದೆ ಮಾನಪ್ಪ ಹೆಬ್ಬಾಳ ಸಾ|| ಮಾಲಗತ್ತಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನಮ್ಮ ಮನೆ ಹಾಗು ಸಾಬವ್ವ ಗಂಡ ನಿಂಗಪ್ಪ ಹೆಬ್ಬಾಳ ಇವರ ಮನೆ ಆಜುಬಾಜು ಇದ್ದು ಸದರಿಯವಳು ಸದ್ಯ ನಾನು ಕಟ್ಟುವ ಮನೆಯ ಜಾಗ ತನಗೆ ಸಂಬಂದಿಸಿದ್ದು ಅಂತ ನನ್ನೊಂದಿಗೆ ತಕರಾರು ಮಾಡುತ್ತಾ ಇದ್ದಳು. ಹೀಗಿದ್ದು ದಿನಾಂಕ 05/04/2019 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ನಮ್ಮ ಜಾಗೆಯಲ್ಲಿ ಮನೆ ಕಟ್ಟುತ್ತಿದ್ದಾಗ ನಮ್ಮ ಅಣ್ಣ ತಮ್ಮಕೀಯವರಾದ 1] ಸಾಬವ್ವ ಗಂಡ ನಿಂಗಪ್ಪ ಹೆಬ್ಬಾಳ 2] ಮಲ್ಲಪ್ಪ ತಂದೆ ನಿಂಗಪ್ಪ ಹೆಬ್ಬಾಳ 3] ಚಂದ್ರಪ್ಪ ತಂದೆ ನಿಂಗಪ್ಪ ಹೆಬ್ಬಾಳ 4] ನಿಂಗಮ್ಮ ಗಂಡ ಪರಸಪ್ಪ ಕುಂಬಾರ 5] ನಾಗಮ್ಮ ಗಂಡ ಭಿಮಣ್ಣ ಹೆಬ್ಬಾಳ ಈ 5 ಜನರು ಅಕ್ರಮವಾಗಿ ನನ್ನ ಜಾಗೆಯಲ್ಲಿ ಬಂದು ಬೋಸಡಿ ಮಗನೆ ಈ ಜಾಗ ನಮಗೆ ಬರುತ್ತದೆ ಅಂತ ಅಂದಾಗ ನಾನು ಸದರಿ ಜಾಗ ನನ್ನ ಹೆಸರಿಲೆ ಇದ್ದ ಬಗ್ಗೆ ದಾಖಲಾತಿಗಳು ಇದ್ದು ಅದಕ್ಕಾಗಿ ನಾನು ಮನೆ ಕಟ್ಟುತ್ತಿದ್ದೇನೆ ಅಂದಾಗ ಎಲ್ಲರು ನಾನು ಮನೆ ಕಟ್ಟುವದನ್ನು ತಡೆದು ಅವಾಚ್ಯವಾಗಿ ಬೈದು ಎಲ್ಲರು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ ಕಾಮಣ್ಣ ತಂದೆ ಮಲ್ಲಪ್ಪ ಜಾಲಿಬೆಂಚಿ ಹಾಗೂ ನಾಗಪ್ಪ ತಂದೆ ಭೀಮಣ್ಣ ನಿಲವಂಜಿ ಇವರು ಬಂದು ಬಿಡಿಸಿಕೊಂಡರು ನಂತರ ಸದರಿಯವರೆಲ್ಲರು ನನಗೆ ಹೊಡೆಯುವದನ್ನು ಬಿಟ್ಟು ಸೂಳೆ ಮಗನೆ ಇಲ್ಲಿ ಮನೆ ಕಟ್ಟುವಂತಿಲ್ಲ ಹಾಗೇನಾದರು ಮನೆ ಕಟ್ಟಿದರೆ ನಿನ್ನನ್ನು ಜೀವ ಸಹಿತ ಉಳಿಸುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತ ಕೊಟ್ಟ ಅಜರ್ಿ ಸಾರಾಂಶ ಮೆಲಿಂದ ಠಾಣೆ ಗುನ್ನೆ ನಂಬರ 44/19 ಕಲಂ: 143, 147, 447, 341, 323, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕ್ಯಕೊಂಡಿದ್ದು ಇರುತ್ತದೆ.



ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 45/2019 ಕಲಂ: 279,337,338 ಐ.ಪಿ.ಸಿ;- ದಿ: 10/04/19 ರಂದು 6.00 ಪಿಎಮ್ಕ್ಕೆ ಅಜರ್ಿದಾರರರಾದ ಶ್ರೀ ದೌವಲಸಾಬ ತಂದೆ ಹುಸೇನಸಾಬ ಮುಲ್ಲಾ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ದಿನಾಂಕ: 10.04.2019 ರಂದು 04.00 ಪಿ.ಎಮ್ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಮೈಬೂಬ ಇಬ್ಬರೂ ಕೂಡಿ ಕೆಂಭಾವಿ ಪಟ್ಟಣದ ಹೊಂಡಾ ಶೈನ  ಸೈಕಲ್ ಮೋಟರ ಶೋ-ರೂಮ ಮುಂದುಗಡೆ ರಸ್ತೆ ಪಕ್ಕದಲ್ಲಿ ಕಾಲುನಡಿಗೆಯಿಂದ ಬಿಜಾಪೂರ ಹೋಟೆೆಲ ಕಡೆಗೆ  ಹೋಗುತ್ತಿದ್ದಾಗ  ಸಂಜೀವ ನಗರ ಕ್ರಾಸ ಕಡೆಯಿಂದ ಒಂದು ಟಂಟಂ ಆಟೋ ನೇದ್ದರ ಚಾಲಕನು ತನ್ನ ಟಂಟಂ ಅಟೋವನ್ನು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಎಡಕ್ಕೆ ಕಟ್ ಮಾಡಿದಾಗ ಟಂಟಂ ಆಟೋ ಪಲ್ಟಿಯಾಗಿ ನನ್ನ ಮಗನಾದ ಮೈಬೂಬ ಈತನ ತಲೆಗೆ ಬಡಿದು ರಸ್ತೆಯ ಮೇಲೆ ಬಿದ್ದಿದ್ದರಿಂದ ತಲೆಗೆ ಭಾರೀ ರಕ್ತಗಾಯವಾಗಿ ಎಡಕಿವಿಯಲ್ಲಿ ರಕ್ತ ಸೋರುತ್ತಿದ್ದು ಹಾಗು ಟೊಂಕಕ್ಕೆ ಭಾರೀ ಗುಪ್ತಗಾಯ ಆಗಿದ್ದು ಇರುತ್ತದೆ. ನಂತರ ಸದರಿ ಟಂಟಂ ನಂಬರ ನೊಡಲಾಗಿ ಕೆ.ಎ.33/ಎ-2505 ಅಂತಾ ಇದ್ದು ಅದರ ಚಾಲಕ ಸಿದ್ದು ತಂದೆ ಸಂಗನಗೌಡ ಗೊಪಾಲಾಪೂರ ಸಾ; ಬೊಮ್ಮನಳ್ಳಿ ಅಂತಾ ಗೊತ್ತಾಗಿರುತ್ತದೆ ಅಂತ ಕೊಟ್ಟ ಪಿರ್ಯಾಧಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 45/2019 ಕಲಂ: 279, 338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 96/2019.ಕಲಂ 323 341 504 506 ಸಂ 34 ಐ.ಪಿ.ಸಿ.;- ದಿನಾಂಕ 10/04/2019 ರಂದು ರಾತ್ರಿ 20-30 ಗಂಟೆಗೆ ಪಿಯರ್ಾದಿ ಶ್ರೀಮತಿ, ಪರಿಮಳ ಗಂಡ ಶಿವಣ್ಣ ನಂದಿಕೊಲ ವ|| 38 ಜಾ|| ಗಾಣಿಗ ಉ|| ಮನಿಕೆಲಸ ಸಾ|| ದೋರನಳ್ಳಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಹೀಗಿದ್ದು ದಿನಾಂಕ 28/03/2019 ರಂದು ನಾವು ಬೆಳಿಗ್ಗೆ 8-00 ಗಂಟೆಗೆ ನಮ್ಮ ಸೀಮಿ ಹೋಲಕ್ಕೆ ನಾನು ಮತ್ತು ನನ್ನ ಗಂಡನಾದ ಶೀವಣ್ಣ ತಂದೆ ಮಾರ್ತಂಡಪ್ಪ ನಂದಿಕೊಲ್, ನನ್ನ ಅಕ್ಕ ಲಕ್ಮೀ ಗಂಡ ಹೇಮಣ್ಣ ನಂದಿಕೊಲ್, ಮಲ್ಲಪ್ಪ ತಂದೆ ಬಸವಂತ್ರಾಯ ಮರಸ, ನಾವು ನಾಲ್ಕು ಜನರು ಹೋಲಕ್ಕೆ ಹೋಗಿ ಹೊಲದಲ್ಲಿ ಕಸ ಹಾರಿಸುತ್ತ ಹೋಲದಲ್ಲಿ ಮದ್ಯಾಹ್ನ 12-00 ಗಂಟೆಗೆ ಇದ್ದಾಗ, ನಮ್ಮ ಅಣ್ಣತಮಕಿಯವರಾದ 1] ಮಲ್ಲಿಕಾಜರ್ುನ ತಂದೆ ಮಾರ್ತಂಡಪ್ಪ ನಂದಿಕೊಲ್, 2] ಶ್ರೀ ದೇವಿ ಗಂಡ ಮಲ್ಲಿಕಾಜರ್ೂನ್ ನಂದಿಕೊಲ್, ಇಬ್ಬರು ತಮ್ಮ ಹೋಲದಲ್ಲಿ ಇದರು ಆಗ ನನ್ನ ಗಂಡ ಶಿವಣ್ಣ ತಂದೆ ಮಾರ್ತಂಡಪ್ಪ ಈತನು ನಮ್ಮ ಹೋಲ ಸವರ್ೇ ಮಾಡುವವರು ಬರುವರಿದ್ದಾರೆ ಈದಿನ ಸವರ್ೆಮಾಡಿಸುತ್ತೆವೆ ಅಂತ ಮಲ್ಲಿಕಾಜರ್ುನನಿಗೆ ಹೇಳಿ ನಮ್ಮ ಹೋಲದ ಕಡೆಗೆ ಬರುತ್ತಿರುವಾಗ  ಆಗ ಮಲ್ಲಿಕಾಜರ್ುನನು ಲೆ ಸೂಳಿಮಗನೆ ಶಿವ್ಯಾ ನಿನು ಯಾವಾಗಲು ಹೋಲ ನಮ್ಮದಿದೆ ಮತ್ತು ಸವರ್ೇ ಮಾಡಿಸುತ್ತೆನೆ ಅಂತ ಅನ್ನುತ್ತಿ ಸೂಳೂಮಗನೆ, ಸವರ್ೆ ಮಾಡುವರಿಗೆ ಮತ್ತೆ ಕರೆಸುತ್ತಿ ಎನಲೆ ಸೂಳೀ ಮಗನೆ ಅಂತ ಅವಾಶ್ಚವಾಗಿ ಬೈದು ನನ್ನ ಗಂಡ ಶಿವಣ್ಣನಿಗೆ ಒತ್ತಿಹಿಡಿದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಮಲ್ಲಿಕಾಜರ್ುನನು ತನ್ನ ಕೈಯಿಂದ ನನ್ನ ಗಂಡ ಶಿವಣ್ಣನಿಗೆ ಎದೆಗೆ, ಹೊಟ್ಟೆಗೆ ಹೋಡೆದು ಗುಪ್ತಗಾಯ ಮಾಡಿದನು, ಆಗ ನನ್ನ ಗಂಡನಿಗೆ ಹೋಡೆಯುವದನ್ನು ನೋಡಿ ಬಿಡಿಸಿಕೊಳ್ಳಲು ಹೋದಾಗ ನನ್ನ ಅಕ್ಕ ಶ್ರೀದೇವಿ ಗಂಡ ಮಲ್ಲಿಕಾಜರ್ುನ ಈಕೆಯು ತನ್ನ ಕೈಯಿಂದ ನನಗೆ ಬೆನ್ನಿಗೆ ಹೋಡೆದಳು, ಶ್ರೀ ದೇವಿಯು ತನ್ನ ಕೈಯಿಂದ ನನ್ನ ಅಕ್ಕ ಲಕ್ಷ್ಮೀಗೆ ಹೊಟ್ಟೆಗೆ ಹೋಡೆದಳು, ಆಗ ಅಲ್ಲೆ ಇದ್ದ ನನ್ನ ಅಣ್ಣ ಮಲ್ಲಣ್ಣ ತಂದೆ ಬಸವಂತ್ರಾಯ ಮರಸ, ಮತ್ತು ಅಲ್ಲೆ ಹೋರಟಿದ್ದ ನಮ್ಮೂರ ಶರಣಪ್ಪ ತಂದೆ ಚಂದ್ರಪ್ಪ ಪಸ್ಪೂಲ್, ಭಿಮಾರಾಯ ತಂದೆ ಮಾಂತಪ್ಪ ಸೇರಿ, ಇವರು ಜಗಳವನ್ನು ನೋಡಿ ಬಂದು ಬಿಡಿಸಿಕೊಂಡರು, ಆಗ ಅವರೆಲ್ಲರು ಇವತ್ತು ಉಳಿದುಕೊಂಡಿರಿ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವ ಬೆದರಿಕೆ ಹಾಕಿ ಹೋದರು, ಸದರಿ ಜಗಳವು ಮಲ್ಲಿಕಾಜರ್ುನನ ಸೀಮಿ ಹೋಲದಲ್ಲಿ ಮದ್ಯಾಹ್ನ 12-00 ಗಂಟೆಗೆ ಜರುಗಿದ್ದು ಇರುತ್ತದೆ, ನನಗೆ ಮತ್ತು ನನ್ನ ಗಂಡ ಶಿವಣ್ಣನಿಗೆ ಮತ್ತು ನನ್ನ ಅಕ್ಕ ಲಕ್ಷ್ಮೀ ಎಲ್ಲರಿಗು ಸಣ್ಣ ಪುಟ್ಟ ಗುಪ್ತಗಾಯ ವಾಗಿದ್ದರಿಂದ ಆಸ್ಪತ್ರೆಗೆ ತೋರಿಸುವಂತ ಗಾಯ ಆದಗದೆ ಇದ್ದುದ್ದರಿಂದ ಉಪಚಾರ ಮಾಡಿಸಿಕೊಂಡಿರುವದಿಲ್ಲಾ ಮತ್ತು ಈಗ ನಾನು ಆಸ್ಪತ್ರೆಗೆ ಉಪಚಾರಕ್ಕಾಗಿ ತೋರಿಸಿಕೊಳ್ಳುವದಿಲ್ಲಾ ನಾವು ನಮ್ಮ ಗ್ರಾಮದ ಹಿರಿಯರು ಮತ್ತು ನಮ್ಮ ಸಮಾಜದ ಹಿರಿಯರೊಂದಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸುತ್ತಿದ್ದೆನೆ, ಅಂತ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 96/2019 ಕಲಂ 341.323.504.506.ಸಂ.34. ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!