ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-04-2019

By blogger on ಸೋಮವಾರ, ಏಪ್ರಿಲ್ 8, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-04-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 57/2018  ಕಲಂ 279, 337, 338 ಐ.ಪಿ ಸಿ ಮತ್ತು 187 ಐ.ಎಮ್.ವ್ಹಿ ಎಕ್ಟ:- ದಿನಾಂಕ 07-04-2019 ರಂದು 9 ಪಿ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ಕೊಟ್ಟು ಅಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ಸಾಬಣ್ಣಾ ತಂದೆ ಕಾಶಪ್ಪಾ ಯಡ್ಡಳ್ಳೇರ ವಯಾ: 21 ಜಾ: ಕುರುಬರ ಉ: ಒಕ್ಕಲುತನ ಕೆಲಸ ಸಾ; ರಾಮಸಮುದ್ರ ತಾ:ಜಿ: ಯಾದಗಿರಿ ಇವರು ಹೇಳಿಕೆ ಫಿರ್ಯಾಧೀ ನೀಡಿದ್ದು ಸಾರಾಂಸವೆನೆಂದರೆ ಇಂದು ದಿನಾಂಕ 07-04-2019 ರಂದು ಸಾಯಂಕಾಲ ನಾನು ಹಾಗೂ ನಮ್ಮ ಸಂಬಂಧಿಯಾದ ಶ್ರೀ ಬಂಗಾರೆಪ್ಪಾ ತಂದೆ ಹಣಮಂತ ಮೈಲಾರಿ ಇಬ್ಬರೂ ಕೂಡಿ  ಅರಕೇರಾ (ಕೆ) ಗೇಟಿನ ಹತ್ತಿರವಿರುವ ನಮ್ಮ ಹೋಲಕ್ಕೆ ನಮ್ಮ ಮೋಟಾರ ಸೈಕಲ್ ನಂ:ಕೆ.ಎ-33/ಡಬ್ಲ್ಯೂ-1357 ನೆದ್ದರ ಮೇಲೆ ಹೋಗಿ ಹೋಲದಲ್ಲಿ ತಿಪ್ಪೆ ಗೊಬ್ಬರ ಹಾಕಿ ಮತ್ತೆ ಸಾಯಂಕಾಲ ನಮ್ಮ ಹೋಲದಿಂದ ಅದೇ ಮೋಟಾರ ಸ್ಯಕಲ್ ಮೇಲೆ ಹೊರಟಾಗ ಮೋಟಾರ ಸೈಕಲ್ ನಾನೇ ನಡೆಸುತ್ತಿದ್ದೆನು. ಬಂಗಾರೆಪ್ಪಾ ಇತನು ಮೋಟಾರ ಸೈಕಲ್ ಮೇಲೆ ಹಿಂದುಗಡೆ ಕುಳಿತಿದ್ದನು. ನಾವು 7-50 ಪಿ.ಎಮ್ ಸುಮಾರಿಗೆ ಹೈದ್ರಾಬಾದ - ರಾಮಸಮುದ್ರ ರೋಡಿನ ಗಡಲ್ ಹೋಲದ ಹತ್ತಿರ ಗಡ್ಡಿ ಮೇಲೆ ಬಂದಾಗ ಅದೇ ವೇಳೆಗೆ ನಮ್ಮ ಹಿಂದುಗಡೆಯಿಂದ ಒಂದು ಕಾರ ಅದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ನಮಗೆ ಹಿಂದೆ ಹಾಕಿ ತಾನು ಮುಂದೆ ಹೋಗುವ ಭರದಲ್ಲಿ ತನ್ನ ಚಾಲನೇಯ ಮೇಲಿನ ನಿಯಂತ್ರಣ ಕಳೆದುಕೊಂಡು ಹಿಂದಿನಿಂದ ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿದನು. ಡಿಕ್ಕಿಪಡಿಸಿದ ರಭಸಕ್ಕೆ ನಾವು ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದ್ದೆವು. ಈ ಘಟನೆಯಲ್ಲಿ ನನಗೆ ತಲೆಯ ಮೇಲೆ ಭಾರಿ ರಕ್ತಗಾಯ.ಮಲಗೈ ಮೊಳಕೈಗೆ ಮತ್ತು ಎಡಗೈ ಮೊಳಕೈಗೆ ತರಚಿದ ಗಾಯಗಳಾಗಿದ್ದವು. ಬಂಗಾರೆಪ್ಪಾ ಇತನಿಗೆ ತಲೆಯ ಮೇಲೆ ಎಡಬಾಗಕ್ಕೆ ಬಾರಿ ರಕ್ತಗಾಯ, ಎಡಗಲ್ಲದ ಮೇಲೆ ಮತ್ತು ಎರಡೂ ಕಾಲುಗಳ ಮೋಳಕಾಲಿಗೆ ತರಚಿದ ಗಾಯಗಳಾಗಿದ್ದವು. ನಂತರ ನಮಗೆ ಡಿಕ್ಕಪಡಿಸಿದ ಕಾರ ನಂಬರ ನೋಡಲಾಗಿ ಅದರ ನಂಬರ ಕೆ.ಎ-33/ಎಮ್-2673 ಅಂತಾ ಮತ್ತು ಅದರ ಚಾಲಕನ ಹೆಸರು ಸೂಗಣ್ಣಾಗೌಡ ತಂದೆ ಬಸವರಾಜಪ್ಪಾಗೌಡ ಸಾ: ಯಗ್ಗಸನಳ್ಳಿ ಜಿ: ರಾಯಚೂರು ಅಂತಾ ಗೊತ್ತಾಯಿತು. ಈ ವಿಷಯದ ಬಗ್ಗೆ ನಾನು ಕೂಡಲೇ ನಮ್ಮ ಸಂಭಂಧಿ ಭದ್ರಪ್ಪಾ ತಂದೆ ಭೀಮರಾಯ ಮೈಲಾರಿ ಇತನಿಗೆ ತಿಳಿಸಿದಾಗ ಅವನು ಕೂಡಲೇ ಸ್ಥಳಕ್ಕೆ ಬಂದು ಒಂದು ಖಾಸಿಗಿ ವಾಹನದಲ್ಲಿ ಹಾಕಿಕೊಂಡು ನಮಗೆ ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದನು.  ಈ ಘಟನೆಗೆ ಕಾರಣನಾದ ಕೆ.ಎ-33/ಎಮ್-2673 ನೆದ್ದರ ಚಾಲಕನಾದ ಸೂಗಣ್ಣಾಗೌಡ ತಂದೆ ಬಸವರಾಜಪ್ಪಾಗೌಡ ಸಾ: ಯಗ್ಗಸನಳ್ಳಿ ಜಿ: ರಾಯಚೂರು ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಫಿರ್ಯಾಧಿ ಹೇಳಿಕೆಯನ್ನು ಪಡೆದುಕೊಂಡು ಮರಳಿ 10-15 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 57/2019 ಕಲಂ 279, 338 ಐಪಿಸಿ ಮತ್ತು 187 ಐ.ಎಮ್.ವ್ಹಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-89/2019 ಕಲಂ  87 ಕೆ.ಪಿ. ಕಾಯ್ದೆ:- ದಿನಾಂಕ: 07/04/2019 ರಂದು5-        45 ಪಿ.ಎಮ್. ಕ್ಕೆ ಶ್ರೀ ಆನಂದರಾವ್ ಪಿ.ಐ  ಸಾಹೇಬರು3ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:07-04-2019 ರಂದು4 ಪಿ.ಎಂ. ಸುಮಾರಿಗೆ ವೆಂಕಟಾಪೂರಗ್ರಾಮದ ಶ್ರೀ ಬಸವೇಶ್ವರದೇವಸ್ಥಾನದ ಸಾರ್ವಜನಿಕಕಟ್ಟೆಯ ಮೇಲಿನ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಮೇಲೆ ಹೇಳಿದ ಸದರಿಆರೋಪಿತರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವಾಗ ದಾಳಿ ಮಾಡಿ03ಜನಆರೋಪಿತರೊಂದಿಗೆಠಾಣೆಗೆ ಬಂದು ವರದಿ ನಿಡಿದ್ದರ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 43/19 ಕಲಂ: 143.147.148,341,.323.324,326,504.506 ಸಂಗಡ 149 ಐಪಿಸಿ:- ಮಾನ್ಯರವರಲ್ಲಿ ನಾನು ರಾಮಯ್ಯ ತಂದೆ ಹಣಮಂತ ನಡಿಹಾಳ ವ|| 58 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ತಾ|| ಸುರಪೂರ ಆದ ನಾನು ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ದಿನಾಂಕ 05/04/2019 ರಂದು ಯುಗಾದಿ ಹಬ್ಬದ ನಿಮಿತ್ಯ ಜಟ್ಟೆಪ್ಪ ಮುತ್ಯಾನ ಜಾತ್ರೆಯಲ್ಲಿ ನನ್ನ ಕಾಲು ನಮ್ಮ ಸಂಬಂದಿಯಾದ ಅಯ್ಯಪ್ಪ ಟಣಕೆದಾರ ಈತನು ತುಳಿದಿದ್ದರಿಂದ ನಾನು ಕಾಲು ನೋಡಲೆ ಅಂತ ಅಂದಾಗ ಇಬ್ಬರೂ ತಕರಾರು ಮಾಡಿಕೊಂಡಿದ್ದು ಇರುತ್ತದೆ. ಹೀಗಿದ್ದು ದಿನಾಂಕ 05/04/2019 ರಂದು ರಾತ್ರಿ 7 ಗಂಟೆಯ ಸುಮಾರಿಗೆ ನಾನು ನಮ್ಮ ಮಕ್ಕಳಾದ ದೇವಪ್ಪ ಮತ್ತು ಹಳ್ಳೆಪ್ಪ ಎಲ್ಲರೂ ನಮ್ಮ ಮನೆಯ ಹತ್ತಿರ ಕುಳಿತ್ತಿದ್ದೆನು ಅದೇ ಸಮಯಕ್ಕೆ ನಮ್ಮ ಅಣ್ಣ ತಮ್ಮಕೀಯ 1] ಅಯ್ಯಪ್ಪ ತಂದೆ ಭೀಮರಾಯ ಟಣಕೆದಾರ  2] ಶಂಕ್ರಪ್ಪ ತಂದೆ ಅಯ್ಯಪ್ಪ ಟಣೆಕೆದಾರ 3] ಶರಣಪ್ಪ ತಂದೆ ಭೀಮರಾಯ ಟಣೆಕದಾರ 4] ಪರಶುರಾಮ ತಂದೆ ಶರಣಪ್ಪ ಟಣೆಕೆದಾರ 5] ಹಣಮಂತ್ರಾಯ ತಂದೆ ಭೀಮರಾಯ ಟಣಕೆದಾರ 6] ಜೆಟ್ಟೆಪ್ಪ ತಂದೆ ಶರಣಪ್ಪ ಟಣಕೆದಾರ ಈ ಎಲ್ಲಾ ಜನರು ಕೈಯಲ್ಲಿ ಕಲ್ಲು ಬಡಿಗೆ ಹಾಗು ಕಬ್ಬಿಣದ ರಾಡು ಹಿಡಿದುಕೊಂಡು ನಮ್ಮ ಮನೆಯ ಹತ್ತಿರ ಬಂದವರೇ ಸೂಳೆ ಮಕ್ಕಳೆ ನಿಮ್ಮದು ಸೊಕ್ಕು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ಯಾಕೆ ಬೈಯುತ್ತಿರಿ ಅಂತಾ ಅಂದಾಗ ಅಯ್ಯಪ್ಪನು ನನಗೆ ತಡೆದು ನಿಲ್ಲಿಸಿ ನೀನು ಜಾತ್ರೆಯಲ್ಲಿ ನನ್ನ ಕಾಲು ತುಳಿದು ಹೊಲದಲ್ಲಿ ಬಹಾಳ ಹಾರಾಡಿದಿಯಾ ಸೂಳೆ ಮಗನೆ ಊರಲ್ಲಿ ನಿನ್ನ ಸೊಕ್ಕು ಬಹಾಳ ಆಗಿದೆ, ಅಂತ ಎಲ್ಲರೂ ಅವಾಚ್ಯವಾಗಿ ನನಗೆ ಬೈಯುತ್ತಿದ್ದಾಗ ನನ್ನ ಮಗನಾದ ಹಳ್ಳೆಪ್ಪ ಈತನು ಬಂದು ನಮ್ಮ ತಂದೆಗೆ ಯಾಕೆ ಬೈಯುತ್ತಿರಿ ಅಂತಾ ಕೇಳಿದಾಗ ಅವರಲ್ಲಿಯ ಅಯ್ಯಪ್ಪ  ಈತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಮಗನಾದ ಹಳ್ಳೆಪ್ಪ ಈತನ ತಲೆಗೆ, ಎಡಕಿವಿಗೆ, ಹೊಡೆದು ಭಾರೀ ರಕ್ತಗಾಯ ಪಡಿಸಿದನು. ಮತ್ತು ಶಂಕ್ರೆಪ್ಪ ಹಾಗೂ ಶರಣಪ್ಪ ಇಬ್ಬರೂ ಕೂಡಿ ಕಲ್ಲಿನಿಂದ ಇನ್ನೋಬ್ಬ ಮಗನಾದ ದೇವಪ್ಪ ಈತನಿಗೆ  ಎಡಬುಜಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ನಂತರ ಶರಣಪ್ಪ ಹಾಗು ಪರಶುರಾಮ ಇಬ್ಬರೂ ಕೂಡಿ ನನಗೆ ಕಪಾಳಕ್ಕೆ ಹೋಡೆದು ಜಾಡಿಸಿ ದಬ್ಬಿ ಕೊಟ್ಟಿದ್ದರಿಂದ ಬಲಮೋಳಕೈ ಹತ್ತಿರ ಎರಡು ಮೋಳಕಾಲಿಗೆ ತರಚಿದ ರಕ್ತಗಾಯ ಆಗಿದ್ದು ಇರುತ್ತದೆ. ಉಳಿದವರೆಲ್ಲರೂ ಕೂಡಿ ನಮಗೆ ನೇಲಕ್ಕೆ ಹಾಕಿ ಕೈಯಿಂದ ಮತ್ತು ಕಾಲಿನಿಂದ ಒದೆಯುತ್ತಿದ್ದಾಗ ಆಗ ಅಲ್ಲೆ ಇದ್ದ ನನ್ನ ಅಳಿಂದಿಯರಾದ ಜೆಟ್ಟೆಪ್ಪ ತಂದೆ ಬಸಪ್ಪ ಟಣಕೆದಾರ ಮತ್ತು ಹಣಮಂತ್ರಾಯ ತಂದೆ ನಿಂಗಪ್ಪ ಟಣಕೆದಾರ ಇಬ್ಬರು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ಹೊಡೆಯುವದನ್ನು ಬಿಟ್ಟು ಮಕ್ಕಳೇ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾನು ನನ್ನ ಮಕ್ಕಳಾದ ಹಳ್ಳೆಪ್ಪ, ದೇವಪ್ಪ ಮೂರು ಜನರು ಉಪಚಾರ ಕುರಿತು ಶಹಾಪೂರ ಸ್ಪಂದನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ನಾನು ಮರಳಿ ಮನೆಗೆ ಬಂದು ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 07/04/2019 ರಂದು ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡುತ್ತಿದ್ದು ಕಾರಣ ಮೇಲ್ಕಾಣಿಸಿದ ಆರು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಮಾನ್ಯರವರಲ್ಲಿ ಕೊಟ್ಟ ಅಜರ್ಿ ಸಾರಾಂಶ ಮೆಲಿಂದ ಠಾಣೆ ಗುನ್ನೆ ನಂಬರ 43/19 ಕಲಂ: 143.147.148.341.323.324.326.504.506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕ್ಯಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 42/19 ಕಲಂ: 143.147.148,341,.323.324,326,504.506 ಸಂಗಡ 149 ಐಪಿಸಿ:-ದಿನಾಂಕ 07/04/2019 ರಂದು 4-30 ಪಿ ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಹಣಮಂತ್ರಾಯ ತಂದೆ ಭೀಮರಾಯ ಟಣಕೇದಾರ ಸಾ|| ಏವೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜಿ ಸಾರಾಂಶವೇನಂದರೆ ದಿನಾಂಕ 05/04/2019 ರಂದು ರಾತ್ರಿ 7 ಗಂಟೆಯ ಸುಮಾರಿಗೆ  ನಾನು ನಮ್ಮ ತಮ್ಮ ಅಯ್ಯಪ್ಪ ಈತನ ಮನೆಯ ಮುಂದೆ ಕುಳಿತ್ತಿದ್ದೆನು ಅದೇ ಸಮಯಕ್ಕೆ ಅಯ್ಯಪ್ಪ ಈತನು ಜಾತ್ರೆ ಮುಗಿಸಿ ನಮ್ಮ ಮನೆಗೆ ಬರುವ ಕುರಿತು ರಾಮಣ್ಣ ನಡಿಹಾಳ ಇವರ ಮನೆಯ ಮುಂದೆ ಹಾದು ಬರುತ್ತಿದ್ದಾಗ ಅದೇ ಸಮಯಕ್ಕೆ ನಮ್ಮೂರ ನಮ್ಮ ಅಣ್ಣ ತಮ್ಮಕೀಯ 1] ರಾಮಣ್ಣ ತಂದೆ ಹಣಮಂತ ನಡಿಹಾಳ 2] ದೇವಪ್ಪ ತಂದೆ ರಾಮಣ್ಣ ನಡಿಹಾಳ 3] ಮಲ್ಲಪ್ಪ ತಂದೆ ನಿಂಗಪ್ಪ ಟಣಕೇದಾರ 4] ಸಿದ್ದಪ್ಪ ತಂದೆ ನಿಂಗಪ್ಪ ಟಣಕೇದಾರ 5] ನಿಂಗಪ್ಪ ತಂದೆ ಭೀಮರಾಯ ಟಣಕೇದಾರ 6] ಹಳ್ಳೆಪ್ಪ ತಂದೆ ರಾಮಣ್ಣ ನಡಿಹಾಳ ಈ ಎಲ್ಲಾ ಜನರು ಕೈಯಲ್ಲಿ ಕಲ್ಲು ಬಡಿಗೆ ಹಾಗು ಕಬ್ಬಿಣದ ರಾಡು ಹಿಡಿದುಕೊಂಡು ನಿಂತವರು ನಮ್ಮ ತಮ್ಮನಾದ ಅಯ್ಯಪ್ಪ ಈತನಿಗೆ ತಡೆದು ನಿಲ್ಲಿಸಿದ್ದು ಆತನು ನನಗೇಕೆ ತಡೆದಿದ್ದೀರಿ ಅಂತ ಅಂದಾಗ ಸದರಿಯವರೆಲ್ಲರೂ ಸೂಳೇ ಮಗನೇ ಹೊಲದಲ್ಲಿ ಬಹಾಳ ಹಾರಾಡಿದಿಯಾ ಊರಲ್ಲಿ ನಿನ್ನ ಸೊಕ್ಕು ಬಹಾಳ ಆಗಿದೆ ಸೂಳೆ ಮಗನೆ ಅಂತ ಎಲ್ಲರೂ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆಯುತ್ತಿದ್ದಾಗ ಅವರಲ್ಲಿಯ ರಾಮಣ್ಣ ಈತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಅಯ್ಯಪ್ಪನ ತಲೆಗೆ ಹೊಡೆದು ಭಾರೀ ರಕ್ತಗಾಯ ಪಡಿಸಿದನು. ಮತ್ತು ದೇವಪ್ಪ ಈತನು ಕಲ್ಲಿನಿಂದ ಅಯ್ಯಪ್ಪ ಈತನಿಗೆ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ಮತ್ತು ನಮ್ಮ ತಮ್ಮನ ಮಗ ಶಂಕ್ರೆಪ್ಪ ಇಬ್ಬರೂ ಬಿಡಿಸಿಕೊಳ್ಳಲು ಹೋದಾಗ ತಮ್ಮನ ಮಗನಾದ ಶಂಕ್ರೆಪ್ಪ ಈತನಿಗೆ ಎಲ್ಲರೂ ಕೈಯಿಂದ ಹೊಡೆ ಬಡೆ ಮಾಡಿದ್ದು ಅಲ್ಲದೇ ಮಲ್ಲಪ ಈತನು ಅಲ್ಲಿಯೇ ಬಿದ್ದ ಕಲ್ಲಿನಿಂದ ಶಂಕ್ರೆಪ್ಪ ಈತನ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ಮತ್ತೆ ಇಬ್ಬರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನಾನು ಹಾಗು ಹಣಮಂತ್ರಾಯ ಟಣಕೇದಾರ, ಪರಶುರಾಮ ಟಣಕೇದಾರ ನಾವು ಮೂರು ಜನರು ಸೇರಿ ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡೆವು. ನಂತರ ಸದರಿಯವರೆಲ್ಲರೂ ಹೊಡೆಯುವದನ್ನು ಬಿಟ್ಟು ಮಕ್ಕಳೇ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾನು ನಮ್ಮ ತಮ್ಮ ಅಯ್ಯಪ್ಪನಿಗೂ ಹಾಗು ಆತನ ಮಗನಾದ ಶಂಕ್ರೆಪ್ಪ ಇಬ್ಬರನ್ನೂ ಉಪಚಾರ ಕುರಿತು ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಮರಳಿ ಮನೆಗೆ ಬಂದು ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 07/04/2019 ರಂದು ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡುತ್ತಿದ್ದು ಕಾರಣ ಮೇಲ್ಕಾಣಿಸಿದ ಆರು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂಬರ 42/2019 ಕಲಂ 143,147,148,341,323,324,326,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕ್ಯಕೊಂಡಿದ್ದು ಇರುತ್ತದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 56/2019 ಕಲಂ 32, 34 ಕೆ.ಇ. ಆ್ಯಕ್ಟ:- ದಿನಾಂಕ 07/04/2019 ರಂದು 4-30 ಪಿ.ಎಮ್ ಕ್ಕೆ ಆರೋಪಿತನು ತನ್ನ ಕಿರಾಣಿ ಅಂಗಡಿ ಮುಂದೆ ಅನದೀಕ್ರತವಾಗಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 1) 90 ಎಮ್.ಎಲ್ ದ 40 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು, ಒಂದು ಪಾಕೆಟಿಗೆ  30.32/- ರೂ ಯಂತೆ ಒಟ್ಟು  40 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಕಿಮ್ಮತ್ತು 1212.8/- ರೂ ಕಿಮ್ಮತ್ತಿನ ಪಾಕೇಟಗಳು ಜಪ್ತಿ ಮಾಡಿಕೊಂಡಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ.  

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 12/2019 ಕಲಂ: 32, 34 ಕೆ.ಇ ಆಕ್ಟ್:- ಸಕರ್ಾರಿ ತಪರ್ೇಯರವರು ದಿನಾಂಕ: 07/04/2019 ರಂದು 10:00 ಎ.ಎಂ. ಕ್ಕೆ ಠಾಣೆಯಲ್ಲಿ ಇದ್ದಾಗ ನಾಲತವಾಡ ಕಡೆಯಿಂದ ಆರೋಪಿತರು ಒಂದು ಮೋಟರ ಸೈಕಲ್ ಮೇಲೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ರಟ್ಟಿನ ಡಬ್ಬಿಯಲ್ಲಿ ತಗೆದುಕೊಂಡು ನಾರಾಯಣಪೂರ ಐಬಿ ತಾಂಡಾದ ಕಡೆ ಬರುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದರಿಂದ ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು 10:45 ಎ.ಎಂ. ಕ್ಕೆ ಠಾಣೆಯಿಂದ ಹೊರಟು 11:00 ಎ.ಎಂ.ಕ್ಕೆ ನಾರಾಯಣಪೂರ ಐಬಿ ತಾಂಡಾದ ಶ್ರೀ ಆಂಜನೇಯ ದೆವಸ್ಥಾನದ ಹತ್ತಿರ ಸಕರ್ಾರಿ ಜೀಪಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ನಾಲತವಾಡ ಕಡೆಯಿಂದ ಒಂದು ಮೋಟರ ಸೈಕಲ್ ಮೇಲೆ ಮದ್ಯವನ್ನು ಇಟ್ಟುಕೊಂಡು ಬರುತ್ತಿದ್ದ ಆರೋಪಿತರು ಜೀಪನ್ನು ನೋಡಿ ಮೂರು ಜನರು ಮೋಟರ ಸೈಕಲ್ಲನ್ನು ನಿಲ್ಲಿಸಿ ಓಡಿಹೋಗಿದ್ದು ಅಲ್ಲಿಯೇ ನಿಲ್ಲಿಸಿ ಹೋಗಿದ್ದ ಮೋಟರ ಸೈಕಲ್ ಹಿರೋ ಕಂಪನಿಯ ಪ್ಯಾಶನ್ ಪ್ರೋ ಮೋಟರ ಸೈಕಲ್ ಅದರ ನಂ ಕೆ.ಎ.33 ಆರ್-4180 ಇದ್ದು ಅದರ ಮೇಲೆ ತೆಗೆದುಕೊಂಡು ಬಂದಿದ್ದ ಮದ್ಯವು ಸಹ ಅಲ್ಲಿಯೇ ಬಿದ್ದಿದ್ದು ಸ್ಥಳದಲ್ಲಿಯೇ ಒಂದು ರಟ್ಟಿನ ಡಬ್ಬಿಯಲ್ಲಿಯ ಒಲ್ಡ್ ಟವರ್ನ ವಿಸ್ಕಿ 180ಎಮ್ಎಲ್ನ 12 ಟೆಟ್ರಾಪ್ಯಾಕಗಳು ಎಮ್.ಆರ್.ಪಿ. ದರ 74.13/-ರೂ 12 ಥ 74.13 = 889.56/-, ಬ್ಯಾಗಪೈಪರ ಡಿಲಕ್ಸ್ ವಿಸ್ಕಿ 180 ಎಮ್ಎಲ್ನ 18 ಟೆಟ್ರಾಪ್ಯಾಕಗಳು ಎಮ್.ಆರ್.ಪಿ. ದರ 90.12/-ರೂ 18 ಥ 90.12 = 1622.16/- ಒಟ್ಟು 2511.72/- ಮೌಲ್ಯದ ಮದ್ಯ ಸಿಕ್ಕಿದ್ದು ಇರುತ್ತದೆ. ಸದರಿ ಮದ್ಯವನ್ನು ಓಡಿ ಹೋದ ಆರೋಪಿತರು ಸಕರ್ಾರದ ಪರವಾನಿಗೆ ಇಲ್ಲದೇ ಮಾರಾಟ ಮಾಡಲು ತೆಗೆದುಕೊಂಡು ಹೊರಟಿದ್ದು ಇರುತ್ತದೆ. ಮೇಲೆ ನಮೂದಿಸಿದ ಎರಡು ನಮೂನಿಯ ಮದ್ಯದ ಟೆಟ್ರಾಪ್ಯಾಕಗಳನ್ನು ರಾಸಾಯನಿಕ ತಜ್ಞರ ಪರಿಕ್ಷೆಗೆ ಒಳಪಡಿಸುವ ಕುರಿತು ಪ್ರತ್ಯೇಕವಾಗಿ ಒಂದು ರಟ್ಟಿನ ಡಬ್ಬಿಯಲ್ಲಿ ಒಲ್ಡ್ ಟವರ್ನ ವಿಸ್ಕಿ 180ಎಮ್ಎಲ್ನ 12ಟೆಟ್ರಾಪ್ಯಾಕಗಳನ್ನು ಮತ್ತು ಇನ್ನೊಂದು ರಟ್ಟಿನ ಡಬ್ಬಿಯಲ್ಲಿ ಬ್ಯಾಗಪೈಪರ ಡಿಲಕ್ಸ್ ವಿಸ್ಕಿ 180ಎಮ್ಎಲ್ನ 18 ಟೆಟ್ರಾಪ್ಯಾಕಗಳನ್ನು ಹಾಕಿ ಪ್ರತ್ಯೇಕವಾಗಿ ಬಿಳಿಯ ಅರಿವೆಯಿಂದ ಕಟ್ಟಿ ಅರಗಿನಿಂದ ಎನ್ ಎಂಬ ಅಕ್ಷರದ ಶೀಲ್ನಿಂದ ಶೀಲ್ಮಾಡಿ ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ ಜಪ್ತಿಮಾಡಿಕೊಂಡಿದ್ದು ಹಾಗೂ ಕೇಸಿನ ಮುಂದಿನ ಪುರಾವೆ ಕುರಿತು ಸ್ಥಳದಲ್ಲಿ ಇದ್ದ ಹಿರೋ ಕಂಪನಿಯ ಪ್ಯಾಶನ್ ಪ್ರೋ ಮೋಟರ ಸೈಕಲ್ ಅದರ ನಂ ಕೆ.ಎ.33 ಆರ್-4180 ನೇದ್ದನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಈ ಬಗ್ಗೆ ದಿನಾಂಕ:07/04/2019 ರಂದು 11:00 ಎ.ಎಮ್. ದಿಂದ 12:00 ಪಿ.ಎಮ್ ವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!