ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-04-2019
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 87/2019 ಕಲಂ: 143 147 148 323 324 307 354 504 506 ಸಂಗಡ 149 ಐಪಿಸಿ:-ದಿನಾಂಕಃ 03/04/2019 ರಂದು 11-15 ಪಿ.ಎಮ್ ಕ್ಕೆ ಜಿ.ಜಿಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ಜಗಳದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಶ್ರೀ ಮಲ್ಲೇಶ ತಂದೆ ನಾಗಪ್ಪ ವಡ್ಡರ ಸಾಃ ವಡ್ಡರ ಓಣಿ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾನು ಕಳೆದ ವರ್ಷ ನಡೆದ ಸುರಪೂರ ನಗರಸಭೆ ಚುನಾವಣೆಯಲ್ಲಿ ನಮ್ಮ ಓಣಿಯ ವೆಂಕಟೇಶ ತಂದೆ ಭರಮಯ್ಯ ಅಮ್ಮಾಪೂರ ಇವರ ವಿರುದ್ದ ಜಯಶಾಲಿಯಾಗಿದ್ದು, ಅಂದಿನಿಂದ ವೆಂಕಟೇಶ ಹಾಗು ಅವರ ಅಣ್ಣ-ತಮ್ಮಂದಿರು ನಮ್ಮ ಮೇಲೆ ವೈಷಮ್ಯ ಬೆಳೆಸಿಕೊಂಡಿರುತ್ತಾರೆ. ಹೀಗಿದ್ದು ಇಂದು ರಾತ್ರಿ ನಾನು ಮತ್ತು ನಮ್ಮ ಓಣಿಯ ರಾಮಣ್ಣ ತಂದೆ ಜೆಟ್ಟೆಪ್ಪ ಪೂಜಾರಿ, ಲಕ್ಷ್ಮೀ ಗಂಡ ದೇವಪ್ಪ ವಡ್ಡರ, ಹಣಮಂತ ತಂದೆ ಭೀಮಣ್ಣ ಕಟ್ಟಿಮನಿ, ನಾಗಪ್ಪ ತಂದೆ ಲಚಮಣ್ಣ ಜಾಲಹಳ್ಳಿ, ರಂಗಪ್ಪ ತಂದೆ ಲಕ್ಷ್ಮಣ ಜಾಲಹಳ್ಳಿ ಹಾಗು ಮರೆಪ್ಪ ತಂದೆ ಭೀಮಣ್ಣ ಗಬ್ಬೂರ ಎಲ್ಲರೂ ಮರಗಮ್ಮ ದೇವಿ ಗುಡಿಯ ಹತ್ತಿರ ಮಾತನಾಡುತ್ತ ಕುಳಿತಿದ್ದೇವು. ಆಗ 9-45 ಪಿ.ಎಮ್ ಸುಮಾರಿಗೆ ನಮ್ಮೊಂದಿಗೆ ವೈಷಮ್ಯ ಬೆಳೆಸಿಕೊಂಡಿರುವ 1) ವೆಂಕಟೇಶ ತಂದೆ ಭರಮಯ್ಯ ಅಮ್ಮಾಪೂರ ಹಾಗು 2) ಹಣಮಂತ ತಂದೆ ಭರಮಯ್ಯ ಅಮ್ಮಾಪೂರ, 3) ಮಂಜುನಾಥ ತಂದೆ ಭರಮಯ್ಯ ಅಮ್ಮಾಪೂರ 4) ನಾಗರಾಜ ತಂದೆ ಭೀಮಣ್ಣ ಸಣ್ಣಪೂಜಾರಿ, 5) ಸಿದ್ದಪ್ಪ ತಂದೆ ಶಿವಪ್ಪ ಕುಪಗಲ್, 6) ತಿಮ್ಮಣ್ಣ ತಂದೆ ಯಲ್ಲಪ್ಪ ಕಟ್ಟಿಮನಿ, 7) ಭೀಮಣ್ಣ ತಂದೆ ಹಣಮಂತ ಅಮ್ಮಾಪೂರ, 8) ಆನಂದ ತಂದೆ ಬರಮಯ್ಯ ಅಮ್ಮಾಪೂರ, 9) ನಾಗರಾಜ ತಂದೆ ಭೀಮಣ್ಣ ರಾಯಚೂರ, 10) ನಾಗೇಶ ತಂದೆ ಹಣಮಂತ ಪೂಜಾರಿ, 11) ಲಕ್ಷ್ಮಿಬಾಯಿ ಗಂಡ ಭೀಮಣ್ಣ ಪೂಜಾರಿ 12) ನಾಗಮ್ಮ ಗಂಡ ಯಲ್ಲಪ್ಪ ಕಟ್ಟಿಮನಿ ಇವರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಮಚ್ಚು, ಬಡಿಗೆಗಳನ್ನು ಹಿಡಿದುಕೊಂಡು ಬಂದವರೇ, ಅವರಲ್ಲಿ ವೆಂಕಟೇಶ ಅಮ್ಮಾಪೂರ ಇತನು ನನಗೆ ಲೇ ಮಗನೇ ಮಲ್ಯಾ ನಗರಸಭೆ ಚುನಾವಣೆಯಲ್ಲಿ ನನ್ನ ವಿರುದ್ದ ನಿಲ್ಲಬೇಡಾ ಅಂತ ಹೇಳಿದರೂ ನಿಂತು ನನಗೆ ಸೋಲಿಸಿದ್ದಿ, ಇವತ್ತು ನಿನಗೆ ಬಿಡುವದಿಲ್ಲ ಮಗನೇ ಅಂತ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ತನ್ನ ಜೊತೆಗಿದ್ದವರಿಗೆ ಹೊಡೆದು ಖಲಾಸ ಮಾಡ್ರಿ ಸೂಳೆ ಮಕ್ಕಳಿಗೆ, ಬಂದಿದ್ದೇಲ್ಲಾ ನಾನು ನೋಡಿಕೊಳ್ಳುತ್ತೇನೆ ಅಂತ ಹೇಳುತ್ತ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಗೈ ಹಸ್ತದ ಮಣಿಕಟ್ಟಿನ ಹತ್ತಿರ ಹಾಗು ಎಡಪಕ್ಕಡಿಗೆ ಹೊಡೆದಿದ್ದರಿಂದ ಭಾರಿ ಗುಪ್ತಗಾಯವಾಗಿ, ಕೈ ಮುರಿದಂತಾಗಿರುತ್ತದೆ. ಹಾಗು ಇನ್ನುಳಿದ ಎಲ್ಲಾ ಆರೋಪಿತರು ಸಹ ನನಗೆ ಮತ್ತು ನನ್ನ ಜೊತೆಗಿದ್ದವರಿಗೆ ಕೊಲೆ ಮಾಡುವ ಉದ್ದೇಶದಿಂದ ಮಚ್ಚು ಹಾಗು ಬಡಿಗೆಯಿಂದ ಹೊಡೆಬಡೆ ಮಾಡಿ ಸಾದಾ ಹಾಗು ಭಾರಿ ಗಾಯ ಪಡಿಸಿ, ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 87/2019 ಕಲಂ: 143 147 148 323 324 307 354 504 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 88/2019 ಕಲಂ 143,147,148,323,324,307,354,504,506 ಸಂ.149 ಐಪಿಸಿ:-ದಿನಾಂಕ:03-04-2019 ರಂದು 11-45 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸರಕಾರಿಆಸ್ಪತ್ರೆ ಸುರಪುರದಲ್ಲಿ ಎಮ್ಎಲ್ಸಿ ಇದೆಅಂತಾ ಬಾತ್ಮಿ ಬಂದ ಮೇರೆಗೆಆಸ್ಪತ್ರೆಗೆ ದಿ:04-04-2019 ರಂದು 00-05 ಎ.ಎಂ.ಕ್ಕೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ ವೆಂಕಟೇಶತಂದೆ ಭರಮಯ್ಯಅಮ್ಮಾಪೂರಕರಈತನ ಹೇಳಿಕೆಯನ್ನು 01-30 ಎ.ಎಂ.ದವರೆಗೆ ಪಡೆದುಕೊಂಡು ಸಾರಾಂಶವೆನೆಂದರೆ ನಮ್ಮಓಣಿಯ ಬೀಮಣ್ಣತಂದೆಜೆಟ್ಟೆಪ್ಪ ಪೂಜಾರಿಈತನುಗುತ್ತೆದಾರ ಕೆಲಸ ಮಾಡಿಕೊಂಡಿದ್ದುಈತನ ಹತ್ತಿರ ನಮ್ಮಓಣಿಯವನಾದ ಶಿವಪ್ಪ ತಂದೆರಾಮಣ್ಣಕರಡಿಗುಡ್ಡಈತನು ಸುಮಾರು ದಿನಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದು ಕೂಲಿ ಕೆಲಸ ಮಾಡಿದ 6 ಸಾವಿರರೂಹಣ ಬೀಮಣ್ಣನು ಶಿವಪ್ಪನಿಗೆ ಕೊಡುವದಿದ್ದು, ಶಿವಪ್ಪನು ಬೀಮಣ್ಣನಿಗೆ ಹಣ ಕೇಳಿದಾಗ ಈಗ ಕೊಡುತ್ತೆನೆ ಆಗ ಕೊಡುತ್ತೆನೆಅಂತಾ ಹೇಳುತ್ತಾ ಬರುತ್ತಿರುವಾಗ ಶಿವಪ್ಪನು ನನಗೆ ಬೀಮಣ್ಣನು ನಾನು ಕೂಲಿ ಕೆಲಸ ಮಾಡಿದ ಹಣಕೊಡಲಾಗ್ಯಾನ ನೀನಾದರೂ ಹೇಳು ಅಂತಾ ನನಗೆ ಅಂದಿದ್ದಕ್ಕೆ ನಾನು ಹೇಳುತ್ತೆನೆ ಅಂತಾ ಕೆಲವು ದಿನಗಳ ಹಿಂದೆ ನಾನು ಬೀಮಣ್ಣನಿಗೆ ಶಿವಪ್ಪನಿಗೆ ಹಣಕೊಡುಅಂತಾ ಹೇಳಿದಾಗ ಬೀಮಣ್ಣನು ನಿನ್ಯಾರು ಮಗನ್ಯಾ ಕೇಳುವವನು ನಿಂದು ಬಹಳ ಆಗ್ಯಾದ ನಿನಗೆ ಒಮ್ಮಿಲ್ಲದೊಮ್ಮಿ ನೋಡಿಕೊಳ್ಳುತ್ತೆನೆ ಅಂತಾ ನನ್ನೊಂದಿಗೆತಕರಾರು ಮಾಡಿಕೊಂಡು ನನ್ನೊಂದಿಗೆದ್ವೇಷ ಬೆಳಸಿಕೊಂಡಿದ್ದನು. ಹೀಗಿದ್ದು ದಿನಾಂಕ: 03/04/2019 ರಂದುರಾತ್ರಿ 9 ಗಂಟೆ ಸುಮಾರಿಗೆ ಊಟ ಮುಗಿಸಿಕೊಂಡು ನಮ್ಮಓಣಿಯಲ್ಲಿರುವ ಶ್ರೀ ಮರಗಮ್ಮದೇವಿ ಗುಡಿಯ ಹತ್ತಿರ ಹೋಗಿ ಅಲ್ಲಿದ್ದ ನನ್ನತಮ್ಮಂದಿರರರಾದ ಮಂಜುನಾಥತಂದೆ ಬರಮಯ್ಯಅಮ್ಮಾಪೂರಕರ, ಹಣಮಂತತಂದೆ ಬರಮಯ್ಯಅಮ್ಮಾಪೂರಕರಕಾಕನಾದ ಭೀಮಣ್ಣತಂದೆ ಹಣಮಂತಅಮ್ಮಾಪುರಕರ ಹಾಗೂ ಓಣಿಯವರಾದತಿಮ್ಮಣ್ಣತಂದೆಯಲ್ಲಪ್ಪಕಟ್ಟಿಮನಿ, ತಿಮ್ಮಣ್ಣನತಾಯಿಯಾದ ನಾಗಮ್ಮಗಂಡಯಲ್ಲಪ್ಪಕಟ್ಟಿಮನಿ, ಲಕ್ಷ್ಮೀಬಾಯಿಗಂಡ ಭೀಮಣ್ಣ ಪೂಜಾರಿ, ಎಲ್ಲರೂ ಮಾತನಾಡುತ್ತ ಕುಳಿತಿದ್ದೇವು. ಅಂದಾಜು 9-45 ಪಿ.ಎಮ್ ಸುಮಾರಿಗೆ ನಮ್ಮೊಂದಿಗೆ ವೈಷಮ್ಯ ಬೆಳೆಸಿಕೊಂಡಿರುವ 1) ಭೀಮಣ್ಣತಂದೆಜೆಟ್ಟೆಪ್ಪ ಪೂಜಾರಿಈತನುಅವರಕಡೆಯವರಾದ 2) ಮಲ್ಲೇಶತಂದೆ ನಾಗಪ್ಪ ವಡ್ಡರ 3) ನಾಗಪ್ಪತಂದೆ ಭೀಮಣ್ಣಕಟ್ಟಿಮನಿ, 4) ಜೆಟ್ಟೆಪ್ಪತಂದೆಜೆಟ್ಟೆಪ್ಪ ಪೂಜಾರಿ, 5) ತಿಮ್ಮಯ್ಯತಂದೆತಿಮ್ಮಯ್ಯ ಪೂಜಾರಿ, 6) ಜೆಟ್ಟೆಪ್ಪತಂದೆ ಬುಡ್ಡೆಪ್ಪ ವಡ್ಡರ, 7) ರಾಮಣ್ಣತಂದೆಜೆಟ್ಟೆಪ್ಪ ಪೂಜಾರಿ, 8) ಲಚ್ಚಪ್ಪತಂದೆರಾಮಣ್ಣ ವಡ್ಡರ, 9) ಹಣಮಂತತಂದೆ ಭೀಮಣ್ಣಕಟ್ಟಿಮನಿ, 10) ನಾಗಪ್ಪತಂದೆ ಲಚಮಣ್ಣಜಾಲಹಳ್ಳಿ, 11) ರಂಗಪ್ಪತಂದೆ ಲಕ್ಷ್ಮಣಜಾಲಹಳ್ಳಿ, 12) ಮರೆಪ್ಪತಂದೆ ಭೀಮಣ್ಣಗಬ್ಬೂರ, 13) ಬಸವರಾಜತಂದೆ ಹಣಮಂತ ಗಲಗ 14) ತಿಪ್ಪಣ್ಣತಂದೆತಿಮ್ಮಣ್ಣ ಪೂಜಾರಿ 15) ಲಕ್ಷ್ಮೀಗಂಡದೇವಪ್ಪ ವಡ್ಡರಇವರೆಲ್ಲರೂಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಮಚ್ಚು, ಬಡಿಗೆಗಳನ್ನು ಹಿಡಿದುಕೊಂಡು ಬಂದವರೇ, ಅವರಲ್ಲಿಯ ಭೀಮಣ್ಣ ಪೂಜಾರಿಈತನು ನನಗೆ ಏನಲೇ ಸುಳೆ ಮಗನೇ ವೆಂಕ್ಯಾ ನನ್ನ ವಿಷಯದಲ್ಲಿ ಪ್ರತಿಯೊಂದಕ್ಕೂ ನಮಗೆ ಎದರಾಡುತ್ತಿ, ಇವತ್ತು ನಿನಗೆ ಬಿಡುವದಿಲ್ಲ ಮಗನೇ ಅಂತಅವಾಚ್ಯ ಶಬ್ದಗಳಿಂದ ಬೈಯ್ಯುತ್ತತನ್ನಜೊತೆಗಿದ್ದವರಿಗೆ ಹೊಡೆದು ಖಲಾಸ ಮಾಡ್ರಿ ಸೂಳೆ ಮಕ್ಕಳಿಗೆ, ಬಂದಿದ್ದೇಲ್ಲಾ ನಾನು ನೋಡಿಕೊಳ್ಳುತ್ತೇವೆ ಅಂತ ಹೇಳುತ್ತ ತನ್ನಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಬಡಿಗೆಯಿಂದ ನನ್ನ ಬಲಗೈ ಮೊಳಕೈಗೆ ಎಡಗೈ ಹಸ್ತದ ಕೆಳಗೆ ಹೊಡೆದು ಗುಪ್ತ ಗಾಯಪಡಿಸಿದನು. ಮಲ್ಲೇಶತಂದೆ ನಾಗಪ್ಪ ವಡ್ಡರಈತನು ನನಗೆ ಕೊಲೆ ಮಾಡುವಉದ್ದೇಶದಿಂದತನ್ನಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಮಚ್ಚಿನಿಂದ ನನ್ನಕುತ್ತಿಗೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದು ಆಗ ಮತ್ತುಎಟು ನನ್ನ ಬಲಗೈ ಮೊಳಕೈಗೆ ತರಚಿರಕ್ತಗಾಯವಾಯಿತು. ನಾಗಪ್ಪಕಟ್ಟಿಮನಿ ಈತನುತನ್ನಕೈಯಲ್ಲಿದ್ದ ಮಚ್ಚಿನಿಂದತಮ್ಮ ಮಂಜುನಾಥಅಮ್ಮಾಪುರಕರಈತನತಲೆಗೆೆ ಹಾಗೂ ಬಲಗೈಗೆ ಹೊಡೆದು ಹಾಗೂ ಜೆಟ್ಟೆಪ್ಪತಂದೆಜೆಟ್ಟೆಪ್ಪ ಪೂಜಾರಿಈತನುತನ್ನಕೈಯಲ್ಲಿದ್ದ ಮಚ್ಚಿನಿಂದ ನನ್ನಇನ್ನೊಬ್ಬತಮ್ಮ ಹಣಮಂತಅಮ್ಮಾಪೂರಕರಈತನ ಬಲಗೈ ಹಸ್ತಕ್ಕೆ ಹೊಡೆದುರಕ್ತಗಾಯ ಮಾಡಿದನು. ಜೆಟ್ಟೆಪ್ಪತಂದೆ ಬುಡ್ಡಪ್ಪ ವಡ್ಡರಇತನುತನ್ನಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಬಡಿಗೆಯಿಂದತಿಮ್ಮಣ್ಣಕಟ್ಟಿಮನಿ ಈತನ ಹಣೆಯ ಬಲಭಾಗಕ್ಕೆ ಹೊಡೆದುರಕ್ತಗಾಯ ಮಾಡಿದನು, ತಿಮ್ಮಯ್ಯ ಪೂಜಾರಿಈತನುತನ್ನಕೈಯಲ್ಲಿತಂದಿದ್ದ ಬಡಿಗೆಯಿಂದ ನನ್ನ ಕಾಕ ಭೀಮಣ್ಣಆಮ್ಮಾಪುರಕರ ಇವನ ಬಲಗೈ ತಿರುವಿ, ಬಲಕಿವಿಗೆ, ಬಲಗಾಲ ಮೊಣಕಾಲಿಗೆ ಬಡಿಗೆಯಿಂದ ಹೊಡೆದುರಕ್ತಗಾಯ ಮಾಡಿರುತ್ತಾನೆ. ನಾಗಪ್ಪಕಟ್ಟಿಮನಿ, ಬೀಮಣ್ಣ ಪೂಜಾರಿ ಹಾಗೂ ರಾಮಣ್ಣ ಪೂಜಾರಿ ಮೂವರು ನನ್ನ ಸೊದರತ್ತೆಯಾದ ಲಕ್ಷ್ಮೀಬಾಯಿಗಂಡ ಭೀಮಣ್ಣ ಪೂಜಾರಿ ಇವಳ ಕೈ ಹಿಡಿದು ಎಳೆದಾಡಿ ಸಿರೇ ಜಗ್ಗಿಅವಮಾನ ಮಾಡಿಕೈಯಿಂದ ಹೊಡೆದು ಕಾಲಿನಿಂದಒದ್ದು ನೆಲಕ್ಕೆ ಕೆಡವಿ ಎಡಗೈ ಬೆರಳುಗಳಿಗೆ ಬಲಗಾಲಿಗೆ, ಬುಜಕ್ಕೆ ಮುಂಗೈಗೆ ಹೊಡೆ ಬಡೆ ಮಾಡಿತೆರಚಿದರಕ್ತಗಾಯ ಮಾಡಿದ್ದು. ಲಚ್ಚಪ್ಪತಂದೆರಾಮಣ್ಣ ವಡ್ಡರಇತನುತನ್ನಕೈಯಲ್ಲಿದ್ದಕಟ್ಟಿಗೆಯಿಂದ ನಾಗಮ್ಮಗಂಡಯಲ್ಲಪ್ಪಕಟ್ಟಿಮನಿ ಇವಳಿಗೆ ತೆಲೆಗೆ, ಎಡಗೈಗೆ ,ಎಡಗಾಲಿಗೆ ಹೊಡೆದು ಗುಪ್ತ ಗಾಯಗಾಯ ಪಡಿಸಿದ್ದು, ತಿಪ್ಪಣ್ಣತಂದೆತಿಮ್ಮಯ್ಯಾ ಪೂಜಾರಿಈತನುತನ್ನಕೈಯಲ್ಲಿದ್ದ ಬಡಿಗೆಯಿಂದ ನನ್ನತಮ್ಮಆನಂದತಂದೆ ಬರಮಯ್ಯಅಮ್ಮಾಪೂರಕರಇವರ ಬಲಗೈ ಹಾಗು ಬೆನ್ನಿಗೆ ಹೊಡೆದಿರುತ್ತಾನೆ. ಮರೆಪ್ಪಗಬ್ಬೂರಇತನುತನ್ನಕೈಯಲ್ಲಿದ್ದ ಬಡಿಗೆಯಿಂದ ನಾಗರಾಜತಂದೆ ಬೀಮಣ್ಣ ಸಣ್ಣಪೂಜಾರಿಇವರ, ಎಡಭಜುದ ಮೇಲೆ, ಹಾಗು ಎಡಮೊಣಕೈ ಹತ್ತಿರ ಹೊಡೆದಿರುತ್ತಾನೆ, ಲಚ್ಚಪ್ಪ ವಡ್ಡರ ಹಾಗೂ ಹಣಮಂತಕಟ್ಟಿಮನಿ ಇಬ್ಬರೂಕೈಯಿಂದ ಸಿದ್ದಪ್ಪ ಕುಪಗಲ್ ಮತ್ತುತಿಮ್ಮಣ್ಣಕಟ್ಟಿಮನಿ ಇಬ್ಬರಿಗೂತಲೆಗೆ, ಬೆನ್ನಿಗೆ, ಹೊಟ್ಟೆಗೆ ಹಾಗು ಕುತ್ತಿಗೆ ಮೇಲೆ ಹೊಡೆದಿರುತ್ತಾರೆ. ಹಾಗು ಲಕ್ಷ್ಮೀಗಂಡದೇವಪ್ಪ ವಡ್ಡರ ಇವಳು ಇನ್ನು ಹೊಡಿರಿ ಸೊಳೆ ಮಕ್ಕಳಿಗೆ ಬಿಡಬ್ಯಾಡ್ರಿಅನ್ನುತ್ತ ನಾಗಮ್ಮಗಂಡಯಲ್ಲಪ್ಪ ಇವಳಿಗೆ ತಲೆಯ ಮೇಲಿನ ಕೂದಲು ಹಿಡಿದ ಹೊಡೆ ಮಾಡುತ್ತಿರುವಾಗ ನಾವೆಲ್ಲರೂಚಿರಾಡುವದನ್ನು ನೋಡಿ ಹಣಮಂತತಂದೆಯಲ್ಲಪ್ಪಕಟ್ಟಿಮನಿ, ಬೀಮಣ್ಣತಂದೆಯಲ್ಲಪ್ಪಕಟ್ಟಿಮನಿ, ಶಿವಕುಮಾರ ತಂದೆ ಬಿಮಣ್ಣ ಪೂಜಾರಿ, ನಾಗಪ್ಪತಂದೆ ಹಣಮಂತಕುಪಗಲ್ಲ, ಬರಮಯ್ಯಾತಂದೆ ಹಣಮಂತಅಮ್ಮಾಪೂರಕರ, ಮರೆಪ್ಪಗಂಡ ಹಣಮಂತಕಟ್ಟಿಮನಿ ಇವರೆಲ್ಲರೂ ಬಂದು ಜಗಳವನ್ನು ನೋಡಿ ಬಿಡಿಸಿದ್ದು ಆಗ ಅವರೆಲ್ಲರೂಇವತ್ತುಜನರೂ ಬಿಡಿಸಿದ್ದಕ್ಕೆ ಉಳಿದಿದ್ದರಿ ಮಕ್ಕಳೇ, ಮುಂದೆ ವೆಂಕಟೆಶನಿಗೆ ಖಲಾಸ ಮಾಡುವತನಕ ಬಿಡುವದಿಲ್ಲ ಅಂತಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಬಳಿಕ ನಾವು ಒಂದು ಖಾಸಗಿ ವಾಹನದಲ್ಲಿಉಪಚಾರಕ್ಕಾಗಿ ಸುರಪೂರ ಸಕರ್ಾರಿಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ. ಕಾರಣಅಕ್ರಮಕೂಟ ರಚಿಸಿಕೊಂಡು ಬಂದು ನಮಗೆ ಕೊಲೆ ಮಾಡುವಉದ್ದೇಶದಿಂದ ಮಚ್ಚು, ಬಡಿಗೆಗಳಿಂದ ಹಾಗು ಕೈಯಿಂದ ಹೊಡೆಬಡೆ ಮಾಡಿ ಸಾದಾ ಹಾಗು ತೀವ್ರಸ್ವರೂಪದರಕ್ತಗಾಯ, ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿ ಹೋಗಿರುವ 15 ಜನರ ವಿರುದ್ದ ಕಾನೂನು ಪ್ರಕಾರಕ್ರಮಜರುಗಿಸಬೇಕುಅಂತಾ ಹೇಳಿಕೆ ಟೈಪ ಮಾಡಿಸಿದ್ದು ನಿಜವಿದೆಅಂತಾ ಹೇಳಿಕೆ ನಿಡಿದ್ದರ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 36/2019 ಕಲಂ 15(ಎ), 32(3) ಕೆ.ಇ ಎಕ್ಟ್-ದಿನಾಂಕ: 04/04/2019 ರಂದು 02.30 ಪಿ.ಎಮ್ ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಗೋಗಿ ಕೆ ಗ್ರಾಮದ ದನದ ದವಾಖಾನೆ ಪಕ್ಕದಲ್ಲಿಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಗೆ ಮಧ್ಯ ಕುಡಿಯಲು ಅನುಕೂಲ ಮಾಡಿ ಕೊಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿಆರೋಪಿತನಿಂದ 1) 30.32/-ರೂ ನ 90ಟಟ ನ 42 ಓ.ಸಿ ವಿಸ್ಕಿ ಪೌಚಗಳು ಅ.ಕಿ. 1273.44/- ರೂ ಮೌಲ್ಯದ3.780 ಲೀಟರ್ ಮದ್ಯ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಆದೇಶಿಸಿದ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ ಬಗ್ಗೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 37/2019 ಕಲಂ: 120(ಬಿ), 420, 468, 406, 441, 324, 504, 506 ಸಂ: 34 ಐಪಿಸಿ:- ದಿನಾಂಕ:04/04/2019 ರಂದು 05.30 ಪಿಎಂ ಕ್ಕೆ ಶ್ರೀ. ವಿಠೋಭಾ ಸಿ.ಹೆಚ್.ಸಿ 91 ಗೋಗಿ ಠಾಣೆ ರವರು ಮಾನ್ಯ ನ್ಯಾಯಾಲಯದ ಕರ್ತವ್ಯ ಮುಗಿಸಿಕೊಮಡು ಮರಳಿ ಠಾಣಗೆ ಬಂದು ಮಾನ್ಯ ನ್ಯಾಯಾಲಯದ ಖಾಸಗಿ ಪಿಯರ್ಾದಿ ಸಂ:10/2019 ನೆದ್ದನ್ನು ಹಾಜರ ಪಡಿಸಿದ್ದು, ಸದರಿ ಪಿಯರ್ಾದಿ ಸಾರಂಶ ಏನಂದರೆ, ಪಿಯರ್ಾದಿದಾರರ ಗಂಗನಾಳ ಗ್ರಾಮದಲ್ಲಿಯ ಪ್ಲಾಟ ನಂ:3-83 ನೇದ್ದನ್ನು ಆರೋಪಿತರು ಒಳಸಂಚು ಮಾಡಿ ಮೋಸದಿಂದ ತಮ್ಮ ಹೆಸರಿಗೆ ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡಿದ್ದಾರೆ, ತಮ್ಮ ಹೆಸರಿಗೆ ಮಾಡಿಕೊಂಡು ನಂಬಿಕೆ ದ್ರೊಹ ಮಾಡಿದ್ದಾರೆ ಅಲ್ಲದೆ ಈ ವಿಷಯದಲ್ಲಿ ಮಾನ್ಯ ಸಿವಿಲ್ ನ್ಯಾಯಾಲಯದ ಆಧೇಶ ಉಲ್ಲಂಗನೆ ಮಾಡಿ ಸದರಿ ಪ್ಲಾಟದಲ್ಲಿ ಖಬ್ಜಾ ತಗೆದುಕೊಂಡು ಅಕ್ರಮ ಪ್ರವೇಶ ಮಾಡಿದ್ದಾರೆ ಕೇಳಲು ಹೊದರೆ ದಿನಾಂಕ:24/02/219 ರಂದು ಬೈಯ್ದು ಜೀವದ ಭಯ ಹಾಕಿದ್ದಾರೆ ಅಂತಾ ಇತ್ಯಾದಿ ಸಾರಂಶದ ಖಾಸಗಿ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಪೊಲೀಸ ಠಾಣೆ ಪಿಎಆರ್ ನಂ. 37/2019 ಕಲಂ: 120(ಬಿ), 420, 468, 406, 441, 324, 504, 506 ಸಂ: 34 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನೀಖೆ ಕೈಕೊಳ್ಳಲಾಗಿದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 89/2019.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ:- ದಿನಾಂಕ 04/04/2019 ರಂದು 15-30 ಗಂಟೆಗೆ ಶ್ರೀ ನಾಗರಾಜ.ಜಿ, ಪಿ.ಐ, ಸಾಹೇಬರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ, ಇಂದು ದಿನಾಂಕ: 04/04/2019 ರಂದು ಬೆಳಿಗ್ಗೆ 11-35 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಮಾಹಿತಿ ಬಂದಿದ್ದೆನೆಂದರೆ, ಬಸವಂತಪೂರ ಗ್ರಾಮದ ಆಟೋ ಸ್ಟ್ಯಾಂಡ ಹತ್ತಿರ ಪಾನಡೆಬ್ಬಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಮೇರೆಗೆ, ಠಾಣೆಯಲ್ಲಿ ಹಾಜರಿದ್ದ ಬಾಬು ಹೆಚ್,ಸಿ,162, ಶರಣಪ್ಪ ಹೆಚ್,ಸಿ,164, ಜೀಪ್ ಚಾಲಕ ನಾಗರೆಡ್ಡಿ ಎ.ಪಿ.ಸಿ 161, ಇವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಶರಣಪ್ಪ ಹೆಚ್,ಸಿ,164, ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ಪಂಚರಾದ 1] ಭೀಮರಾಯ ತಂದೆ ಮಲ್ಲಪ್ಪ ಅಚ್ಚಕೇರಿ ವ|| 35 ಜಾ|| ಮಾದಿಗ ಉ|| ಕೂಲಿ ಸಾ|| ಬಸವಂತಪೂರ 2] ನಿಂಗಣ್ಣ ತಂದೆ ಹಣಮಂತಗೌಡ ದೋರಿ ವ|| 26 ಜಾ|| ಬೇಡರ ಉ|| ಒಕ್ಕಲುತನ ಸಾ|| ಬಸವಂತಪೂರ ಇವರಿಗೆ ಕರೆದುಕೊಂಡು ಬಂದು 11-55 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ದಾಳೀಯ ಕಾಲಕ್ಕೆ ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿವೈ,ಎಸ್,ಪಿ, ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿಕುರಿತು ನಾನು ಮತ್ತು ಪಂಚರು, ಸಿಬ್ಬಂದಿ ಜನರು, ಎಲ್ಲರು ಕೂಡಿ ಠಾಣೆಯ ಜೀಪ ನಂ ಕೆಎ-33ಜಿ-0138 ನೇದ್ದರಲ್ಲಿ ಕುಳಿತುಕೊಂಡು 12-00 ಗಂಟೆಗೆ ಠಾಣೆಯಿಂದ ಹೋರಟೆವು. ಸದರಿ ಜೀಪನ್ನು ನಾಗರೆಡ್ಡಿ ಎ,ಪಿ,ಸಿ, ಇವರು ಚಲಾಯಿಸುತ್ತ ನೇರವಾಗಿ 12-40 ಗಂಟೆಗೆ ಬಸವಂತಪೂರ ಗ್ರಾಮದ ಹತ್ತಿರ ಹೋಗಿ ಜೀಪನಿಲ್ಲಿಸಿ ಎಲ್ಲರು ಜೀಪಿನಿಂದ ಇಳಿದು ನಡೆದುಕೊಂಡು ಆಟೋ ಸ್ಟ್ಯಾಂಡ ಹತ್ತಿರ ಹೋಗಿ ಮನೇಗಳ ಗೋಡೆಯ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ, ಒಬ್ಬ ವ್ಯೆಕ್ತಿ ರಸ್ತೆಯ ಪಕ್ಕದಲ್ಲಿ ಪಾನಡೆಬ್ಬಿ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 12-50 ಪಿ.ಎಂ.ಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಮದ್ಯ ಕುಡಿಯಲು ಅನುಕುಲ ಮಾಡಿಕೊಟ್ಟಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು. ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಗೌಡಪ್ಪ ತಂದೆ ಯಂಕಣ್ಣ ಕವಲೇರ ವ|| 30 ಜಾ|| ಬೇಡರ ಉ|| ಪಾನಶಾಪ ವ್ಯಾಪಾರ ಸಾ|| ಬಸವಂತಪೂರ, ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಬಸವಂತಪೂರ ಗ್ರಾಮದ ಆಟೋ ಸ್ಟ್ಯಾಂಡ ಹತ್ತಿರ ಪಾನಡೆಬ್ಬಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು. ನಾನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ 1] 90 ಎಂ.ಎಲ್.ನ ಒಟ್ಟು 11 ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೆಟ್ಗಳು ಇದ್ದು ಒಂದು ಪಾಕೆಟ್ನ ಕಿಮ್ಮತ್ತು 30=32 ರೂ ಅಂತಾ ಇದ್ದು, ಒಟ್ಟು ಮದ್ಯದ ಪಾಕೇಟ್ಗಳ ಕಿಮ್ಮತ್ತು 333=52 ರೂ ಗಳಾಗುತ್ತಿದ್ದು, 2] 04 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ: 00=00 ರೂ 3] ಮದ್ಯ ಕುಡಿಯಲು ಉಪಯೋಗಿಸಿದ 90 ಎಂ.ಎಲ್.ನ 4 ಖಾಲಿ ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೆಟ್ಗಳು ಇದ್ದವು. ಅ:ಕಿ:00=00 ರೂ ಒಟ್ಟು 11 ಮದ್ಯದ ಪಾಕೇಟ್ಗಳಲ್ಲಿ ಒಂದು 90 ಎಂ.ಎಲ್.ನ ಓರಿಜಿನಲ್ ಚಾಯಸ್ ಡಿಲಕ್ಸ ವಿಸ್ಕಿ ಪಾಕೆಟ್ನ್ನು ಪಂಚರ ಸಮಕ್ಷಮದಲ್ಲಿ ಎಫ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು ಮದ್ಯಾಹ್ನ 13-00 ಗಂಟೆಯಿಂದ 14-00 ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ ಮದ್ಯಾಹ್ನ 14-40 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 15-30 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 89/2019 ಕಲಂ 15(ಎ) 32( 3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 22/2019 ಕಲಂ 279, 337, 338 ಐಪಿಸಿ:-ದಿನಾಂಕ 04/04/2019 ರಂದು ಮದ್ಯಾಹ್ನ 2-30 ಪಿ.ಎಂ.ಕ್ಕೆ ಈ ಕೇಸಿನ ಫಿಯರ್ಾದಿ ಯವರು ಯಾದಗಿರಿ ನಗರದ ಶಾಸ್ತ್ರಿ ಮುಖ್ಯ ರಸ್ತೆ ಹತ್ತಿರ ತಮ್ಮ ಮೋಟಾರು ಸೈಕಲ್ ನಂ. ಕೆಎ-33, ಯು-8570 ನೇದ್ದರ ಮೇಲೆ ಹೊರಟಿದ್ದಾಗ ಕಾರ್ ನಂಬರ ಕೆಎ-33, ಎಮ್-4756 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಪಿಯರ್ಾದಿಯವರ ಮೋಟಾರು ಸೈಕಲ್ ನೇದ್ದಕ್ಕೆ ನೇರವಾಗಿ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಫಿಯರ್ಾದಿಗೆ ಬಲಭುಜಕ್ಕೆ ರಕ್ತಗಾಯವಾಗಿದ್ದು ಆಕೆಯ ಮಗಳಾದ ಶ್ರೀದೇವಿ ಈಕೆಗೆ ಬಲಭುಜಕ್ಕೆ ಹಾಗೂ ಸೊಂಟಕ್ಕೆ ತರಚಿದ ರಕ್ತಗಾಯವಾಗಿರುತ್ತದೆ ಮೋಟಾರು ಸೈಕಲ್ ಸವಾರ ಲಕ್ಷ್ಮಣ ಈತನಿಗೆ ಬಲಮೊಣಕಾಲಿಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ ಸದರಿ ಘಟನೆಯು ಕಾರ್ ನಂಬರ ಕೆಎ-33, ಎಮ್-4756 ನೇದ್ದರ ಚಾಲಕನ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಜರುಗಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸುವ ಕುರಿತು ಫಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 38/2019 ಕಲಂ: 279, 337, 304(ಎ) ಐಪಿಸಿ:-ದಿನಾಂಕ:04/04/2019 ರಂದು 06.30 ಪಿಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರ ದಿಂದ ದೂರವಾಣಿ ಮೂಲಕ ಆರ್.ಟಿ.ಎ ಡೆತ್ ಎಂ.ಎಲ್.ಸಿ ಇದೆ ಅಂತಾ ಬಾತ್ಮಿ ಬಂದ ಮೇರೆಗೆ ನಾನು ಶಹಾಪೂರ ಸರಕಾರಿ ಆಸ್ಪತ್ರೆಗೆ ಬೆಟಿ ಮಾಡಿದ್ದು, ಅಲ್ಲಿ ಮೃತನ ಜೋತೆ ಮೋಟಾರ ಸೈಕಲ್ ಮೇಲೆ ಹಿಂದೆ ಕುಳಿತು ಬಂದ ವ್ಯಕ್ತಿಯು ಉಪಚಾರಕ್ಕೆ ದಾಖಲಾಗಿದ್ದು, ಸದರಿಯವನು ಹೋಶ್ (ಎಚ್ಚರ) ಆದ ನಂತರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಅದರ ಸಾರಂಶ ಏನಂದರೆ, ಇಂದು ದಿನಾಂಕ:04/04/2019 ರಂದು ತಾನು ಮತ್ತು ಗಿರಿಮಲ್ಲ @ಗಿರಿಶ ಇಬ್ಬರು ಗಿರಿಮಲ್ಲನ ಮೋಟಾರ ಸೈಕಲ ನಂ:ಕೆಎ-48 ಎಕ್-8683 ನೇದ್ದರ ಮೇಲೆ ಶ್ರೀಶೈಲ ಕ್ಕೆ ಹೋಗುವ ಕುರಿತು 10.00 ಎಎಂ ದುಮಾರಿಗೆ ನಮ್ಮುರನ್ನು ಬಿಟ್ಟು ಬರುತ್ತಿದ್ದೆವು. ಗಿರಿಮಲ್ಲ ಈತನು ಮೋಟಾರ ಸೈಕಲ್ ನಡೆಸುತ್ತಿದ್ದನು. ನಾನು ಹಿಂದೆ ಕುಳಿತಿದ್ದೆನು. ದಾರಿಯಲ್ಲಿ ದೇವರ ಹಿಪ್ಪರಿಗಿಗೆ ಬಂದು 12.00 ಗಂಟೆಯ ಸುಮಾರಿಗೆ ಇಬ್ಬರು ಸರಾಯಿ ಕುಡಿದೆವು, ನಂತರ ಇಬ್ಬರು ಮೋಟಾರ ಸೈಕಲ್ ಮೇಲೆ ಸಿಂದಗಿ ಗೋಲಗೇರಿ ಮೂಲಕ ಚಾಮನಾಳ ದಾಟಿ ಉಕ್ಕನಾಳ ದೋರಿ ಗುಡ್ಡದ ಹತ್ತಿರ ರೋಡಿನ ತಿರುವಿನಲ್ಲಿ ಬರುವಾಗ ಸದರಿ ಗಿರಿಮಲ್ಲ @ ಗಿರಿಶ ಈತನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ವಾಹನದ ನಿಯಂತ್ರಣ ತಪ್ಪಿ ರೋಡಿನ ತಿರುವಿನಲ್ಲಿ ಮೇನ್ ರೋಡಿನಿಂದ ನೇರವಾಗಿ ರೋಡಿನ ಪಕ್ಕದಲ್ಲಿ ಮೋಟಾರ್ ಸೈಕಲ್ ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ನನಗೆ ಹಣೆಗೆ ಕೈಕಾಲುಗಳಿಗೆ ಸಾದಾ ತರಚಿದ ಗಾಯಗಳಾಗಿದ್ದು, ಗಿರಿಮಲ್ಲ ಈತನಿಗೆ ಹಣೆಗೆ ಬಾರಿ ರಕ್ತಗಾಯ, ಮತ್ತು ಮುಖಕಕ್ಕೆ ತರಚಿದ ರಕ್ತಗಾಯಗಳು ಆಗಿದ್ದು ಅಲ್ಲದೆ ಎಡಗಡೆಯ ಎದೆಗೆ ಬಾರಿ ಗುಪ್ತ ಪೆಟ್ಟಾಗಿ ರಕ್ತ ಕಂಡುಗಟ್ಟಿದ ಗಾಯ ಆಗಿದ್ದು ಅಂಬೂಲೆನ್ಸದಲ್ಲಿ ಶಹಾಪೂರ ಆಸ್ಪತ್ರೆಗೆ ತಗೆದುಕೊಂಡು ಹೋಗುವಷ್ಟರಲ್ಲಿ ಮಾರ್ಗದಲ್ಲಿಯೇ 05.30 ಪಿಎಂ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ಇತ್ಯಾದಿ ಸಾರಂಶದ ಮೇಲಿಂದ ಮರಳಿ 10.15 ಪಿಎಂ ಕ್ಕೆ ಠಾಣೆಗೆ ಬಂದು ಗೋಗಿ ಪೊಲೀಸ ಠಾಣೆ ಗುನ್ನೆ ನಂ: 38/2019 ಕಲಂ: 279, 337, 304(ಎ) ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನೀಖೆ ಕೈಕೊಳ್ಳಲಾಗಿದೆ.
Hello There!If you like this article Share with your friend using