ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 04-04-2019

By blogger on ಗುರುವಾರ, ಏಪ್ರಿಲ್ 4, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 04-04-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 34/2019 ಕಲಂ. ಮನುಷ್ಯಕಾಣೆ:- ದಿನಾಂಕ; 03/04/2019 ರಂದು 10-30 ಎಎಮ್ ಗಂಟೆ ಸುಮಾರಿಗೆ  ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಗಂಡ ದ್ಯಾಮಣ್ಣ ಮೇಟಿ ವ;36 ಜಾ; ಲಿಂಗಾಯತ ಉ; ಶಿಕ್ಷಕರು ಫ್ರಾಥಮಿಕ ಶಾಲೆ  ಗಣಪೂರ ಸಾ; ರೊಟ್ಟಿಗವಾಡ ತಾ; ಕುಂದಗೋಳ ಜಿ; ಧಾರವಾಡ ಹಾ.ವ; ಮಹಾದೇವಮ್ಮ ಬಿಲ್ಡಿಂಗ ಉದರ್ು ಶಾಲೆ ಹಿಂದುಗಡೆ ಅಜೀಜ ಕಾಲೋನಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ನೀಡಿದ್ದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ನನ್ನ ಗಂಡ ದ್ಯಾಮಣ್ಣ ತಂದೆ ತಿಪ್ಪಣ್ಣ ಮೇಟಿ ವ;37 ಜಾ' ಲಿಂಗಾಯತ ಉ; ಫ್ರಾಥಾಮಿಕ ಶಾಲಾ ಶಿಕ್ಷಕರು ಮಗದಮಪೂರ ತಾಂಡಾ ಸಾ; ರೊಟ್ಟಿಗವಾಡ ತಾ; ಕುಂದಗೋಳ ಜಿ; ಧಾರವಾಡ ಹಾ.ವ; ಮಹಾದೇವಮ್ಮ ಬಿಲ್ಡಿಂಗ ಉದರ್ು ಶಾಲೆ ಹಿಂದುಗಡೆ ಅಜೀಜ ಕಾಲೋನಿ ಯಾದಗಿರಿ ಹಾಗೂ ಇಬ್ಬರು ಮಕ್ಕಳೊಂದಿಗೆ ಯಾದಗಿರಿಯ ಮಹಾದೇವಮ್ಮ ಬಿಲ್ಡಿಂಗ ಉದರ್ು ಶಾಲೆ ಹಿಂದುಗಡೆ ಅಜೀಜ ಕಾಲೋನಿಯಲ್ಲಿ ವಾಸವಾಗಿರುತ್ತೆವೆೆ. ನನ್ನ ಗಂಡ ದ್ಯಾಮಣ್ಣ ಈತನು ಸಾಲ ಮಾಡಿಕೊಂಡಿದ್ದು ನನ್ನ ಗಂಡನ ಮೇಲೆ ಕುಂದುಗೋಳ, ನವಲಗುಂದ, ಗದಗ ಬೆಂಗಳೂರು ಅಲ್ಲಲ್ಲಿ ಚೆಕ ಬೌನ್ಸ ಪ್ರಕರಣಗಳು ದಾಖಲಾಗಿದ್ದು ಇರುತ್ತವೆ. ನನ್ನ ಗಂಡನು ನನ್ನ ಮೇಲೆ ಚೆಕ ಬೌನ್ಸ ಕೇಸುಗಳು ಆಗಿರುತ್ತವೆ ಮತ್ತು ಸಾಲ ಆಗಿರುತ್ತದೆ ಏನು ಮಾಡಬೇಕು ಅಂತಾ ಬಹಳ ಚಿಂತೆ ಮಾಡುತ್ತಿದ್ದನು. ಹಿಗಿದ್ದು ದಿನಾಂಕ.30/03/2019 ರಂದು ನಾನು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ಎಂದಿನಂತೆ ನಾನು ನನ್ನ  ಕೆಲಸಕ್ಕೆಂದು ಶಾಲೆಗೆ ಹೋದೆನು. ಆಗ ನನ್ನ ಗಂಡ ದ್ಯಾಮಣ್ಣ ಈತನು ರಜೆಯ ಮೇಲೆ ಮನೆಯಲ್ಲಿಯೇ ಇದ್ದನು. ನಂತರ ನಾನು ಶಾಲೆ ಮುಗಿಸಿಕೊಂಡು 3-00 ಪಿಎಮ್ ಸುಮಾರಿಗೆ ಮನೆಗೆ ಬಂದಾಗ ಮನೆಯಲ್ಲಿ ನನ್ನ ಗಂಡ ದ್ಯಾಮಣ್ಣ ಈತನು ಇರಲಿಲ್ಲ. ನಂತರ ನನ್ನ ಮಾವನಾದ ತಿಪ್ಪಣ್ಣ ಇವರಿಗೆ ವಿಚಾರಿಸಲು ನನ್ನ ಗಂಡನು ಕೇಸಿನ ಮುದ್ದತ್ತು ಇರುತ್ತದೆ ಹೋಗಿ ಬರುತ್ತೇನೆ ಅಂತಾ 11-00 ಎಎಮ್ ಸುಮಾರಿಗೆ ಮನೆಯಿಂದ ತನ್ನ ಬ್ಯಾಗಿನಲ್ಲಿ ಬಟ್ಟೆಯನ್ನು ತುಂಬಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದರು. ನಂತರ ಮನೆಯಲ್ಲಿ ನೋಡಲಾಗಿ ನನ್ನ ಗಂಡನ ಮೊಬೈಲ ಮನೆಯಲ್ಲಿಯೇ ಇಟ್ಟಿದ್ದನು. ನನ್ನ ಗಂಡನ ಮೇಲೆ ಕೇಸುಗಳು ಇರುವ ಕಾರಣ ಆಗಾಗ ಮುದ್ದತ್ತಿಗೆ ಹಾಜರಾಗಲು ಹೋಗುತ್ತಿದ್ದು ಅದೇ ರೀತಿ ಕೇಸಿನ ಮುದ್ದತ್ತಿಗೆ ಹೋಗಿರಬಹುದು ಅಂತಾ ನಾನು ಸುಮ್ಮನಿದ್ದೆನು. ನಂತರ ಸಾಯಂಕಾಲವಾದರು ನನ್ನ ಗಂಡ ಮನೆಗೆ ಬರದಿರದ ಕಾರಣ ನನ್ನ ಗಂಡನ ಸ್ನೇಹಿತನಾದ ಮೃತ್ಯುಂಜಯ ಶಿಕ್ಷಕರಿಗೆ ಫೊನ ಮಾಡಿ ನನ್ನ ಗಂಡನ ಬಗ್ಗೆ ವಿಚಾರಿಸಲು ಅವರು ನನ್ನ ಗಂಡನು 12-00 ಪಿಎಮ್ ಸುಮಾರಿಗೆ ಭೇಟಿಯಾಗಿದ್ದು ತಾನು ಕೇಸಿನ ಮೇಲೆ ಬೆಂಗಳೂರಿಗೆ ಹೋಗಿ ಬರವುದಾಗಿ ಹೇಳಿರುತ್ತಾನೆ ಅಂತಾ ತಿಳಿಸಿದರು. ನನಗೆ ಅನುಮಾನ ಬಂದು ನಮ್ಮ ಅಕ್ಕಳ ಗಂಡ ರಾಜೇಂದ್ರ  ಇವರಿಗೆ ಫೋನಮಾಡಿ ವಿಷಯ ತಿಳಿಸಿದಾಗ ನಮ್ಮ ಮಾವನವರು ಯಾದಗಿರಿಗೆ ನಿನ್ನೆ  ದಿನಾಂಕ; 31/03/2019 ರಂದು ಬೆಳೆಗ್ಗೆ ಬಂದಾಗ ಎಲ್ಲಾ  ವಿಷಯ ತಿಳಿಸಿದೆನು. ನನ್ನ ಗಂಡನು ಕೂಡಾ ತಾನು ಎಲ್ಲಿಗೆ ಹೋಗಿರುತ್ತೇನೆ ಅಂತಾ ಮನೆಗೆ ಫೊನ ಮಾಡಿರುವುದಿಲ್ಲ ಭಾನುವಾರ ಸರಕಾರಿ ರಜೆ ಇದ್ದುದ್ದರಿಂದ ಯಾವುದೇ ಕೋರ್ಟ ಕಲಾಪಗಳು ಇರುವುದಿಲ್ಲ. ನನಗೆ ಸಂಶಯ ಬಂದು ನಮ್ಮ  ಸಂಬಂದಿಕರು ಹಾಗೂ ಅವರ ಸ್ನೇಹಿತರು ಮತ್ತು ಇತರೆ ಕಡೆ  ಪೋನ ಮಾಡಿ ವಿಚಾರಿಸಿದರು ಇಲ್ಲಿಯವರೆಗೆ ನನ್ನ ಗಂಡನ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ. ನನ್ನ ಗಂಡನ ಸುಳಿವು ಸಿಗದ ಕಾರಣ  ಇಂದು ತಡವಾಗಿ ಠಾಣೆಗೆ ಬಂದಿದ್ದು  ನನ್ನ  ಗಂಡ ದ್ಯಾಮಣ್ಣ ತಂದೆ ತಿಪ್ಪಣ್ಣ ಮೇಟಿ ಈತನು ಕಾಣೆಯಾಗಿದ್ದು,  ಕಾಣೆಯಾದ ನನ್ನ ಗಂಡನ  ಚಹರೆ ಪಟ್ಟಿ  ಮತ್ತು ಬಟ್ಟೆ ಬರೆ :- ಸಾದಾಕಪ್ಪುಬಣ್ಣ,  ದುಂಡುಮುಖ, ಚಹರೆದಾಡಿ, ತಲೆಯಲ್ಲಿ ಕಪ್ಪುಬಿಳಿ ಮಿಶ್ರಿತ ಕೂದಲು, ಅಂದಾಜು 5 ಪೀಟ್ 6 ಇಂಚು ಎತ್ತರ, ಸದೃಢ ಮೈಕಟ್ಟು, ಮೈಮೇಲೆ ಕೆಸರಿ ಬಣ್ಣದ ಶರ್ಟ,  ಕ್ರೀಮ್  ಬಣ್ಣದ ಪ್ಯಾಂಟ ಧರಿಸಿದ್ದು, ಕನ್ನಡ, ಹಿಂದಿ, ಇಂಗ್ಲೀಷ, ತೆಲುಗು ಭಾಷೆ ಮಾತನಾಡುತ್ತಾನೆ. ಕಾರಣ ಸದರಿ ಕಾಣೆಯಾದ ನನ್ನ  ಗಂಡನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.34/2019 ಮನುಷ್ಯಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 60/2019 ಕಲಂ: 143, 147, 323, 324, 504, 506 ಸಂಗಡ 149 ಐಪಿಸಿ:-ದಿನಾಂಕ 02.04.2019 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಫಿರ್ಯಾಧಿ ತನ್ನ ಮನೆಗೆ ಹೋಗುತ್ತಿದ್ದಾಗ ನಿನ್ನೆ ದಿನಾಂಕ 02.04.2019 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಫಿರ್ಯಾದಿಯ ಹೊಲದಲ್ಲಿಯ ಹುಣಸೆ ಹಣ್ಣು ತೆಗೆದುಕೊಂಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಅದೇ ವೈಶಮ್ಯದಿಂದ ಆರೋಪಿತರೆಲ್ಲಾರು ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಯನ್ನು ಅವಾಚ್ಯವಾಗಿ ಬೈದು ಕಲ್ಲಿನಿಂದ, ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒಟ್ಟು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ತನ್ನ ಮನೆಯಲ್ಲಿ ಮತ್ತು ಊರಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿದ ನಂತರ ತಡವಾಗಿ ಇಂದು ದಿನಾಂಕ 03.04.2019 ರಂದು ನೀಡಿದ ಫಿರ್ಯಾದಿಯ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆಗೆ ಗುನ್ನೆ 60/2019 ಕಲಂ: 143, 147, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 85/2019.ಕಲಂ 87 ಆ್ಯಕ್ಟ:- ದಿನಾಂಕ 03/04/2019 ರಂದು ಮದ್ಯಾಹ್ನ 13-00 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 12 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 03/04/2019  ರಂದು ಬೆಳಿಗ್ಗೆ 9-50 ಗಂಟೆಗೆ ಸುಮಾರಿಗೆ ಠಾಣೆಯಲ್ಲಿದ್ದಾಗ ದೋರನಳ್ಳಿ ಗ್ರಾಮದ ಹನುಮಾನ ಗುಡಿಯ ಮುಂದೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿದ್ದು. ನಮ್ಮ ಠಾಣೆಯ ಸಿಬ್ಬಂದಿಯವರಾದ ಹೋನ್ನಪ್ಪ ಹೆಚ್,ಸಿ, 101, ಬಾಬು ಹೆಚ್,ಸಿ,162, ಶರಣಪ್ಪ ಹೆಚ್,ಸಿ,164, ಸಿದ್ದವೀರ ಹೆಚ್,ಸಿ,167, ದೇವರಾಜ ಪಿ,ಸಿ,282, ಗಣಪತಿ ಸಿ,ಪಿ,ಸಿ,294, ಗಜೇಂದ್ರ ಪಿ.ಸಿ.313, ಭೀಮನಗೌಡ ಪಿ.ಸಿ.402, ಜೀಪಚಾಲಕ ನಾಗರೆಡ್ಡಿ ಎ.ಪಿ.ಸಿ.161, ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ಎಂದು ಹೇಳಿ ನಮ್ಮ ಠಾಣೆಯ ಬಾಬು ಸಿ,ಹೆಚ್,ಸಿ, 162, ರವರಿಗೆ ಇಬ್ಬರೂ ಪಂಚರನ್ನು ತಂದು ಹಾಜರು ಪಡಿಸಲು ಹೇಳಿ ಕಳಿಸಿದ್ದು ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ 10-10 ಗಂಟೆಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ಬಾತ್ಮೀ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಸಹಕರಿಸಿ ಪಂಚರಾಗಲು ಕೇಳಿಕೊಂಡ ಮರೇಗೆ ಪಂಚರಾದಲು ಒಪ್ಪಿಕೊಂಡರು. ಮಾನ್ಯ ಡಿವೈ.ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಎಲ್ಲರು ಕೂಡಿ ದಾಳಿಕುರಿತು ಠಾಣೆಯ ಜೀಪ ನಂ ಕೆಎ-33ಜಿ-0138 ನೇದ್ದರಲ್ಲಿ ಮತ್ತು ಒಂದು ಖಾಸಗಿ ಜೀಪ ನೇದ್ದರಲ್ಲಿ ಠಾಣೆಯಿಂದ 10-20 ಗಂಟೆಗೆ ಹೊರಟು ದೋರನಳ್ಳಿ ಗ್ರಾಮದ ಹನುಮಾನ ಗುಡಿಯ  ಹತ್ತಿರ 10-40 ಗಂಟೆಗೆ ಹೋಗಿ ಎರಡು ಜೀಪನಿಂದ ಕೆಳಗಡೆ ಇಳಿದು ಹನುಮಾನ ಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮನೆಗಳ ಗೋಡೆಗಳ ಮರೆಯಲ್ಲಿ ನಿಂತು 10-45 ಗಂಟೆಗೆ ನಿಗಮಾಡಿ ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 10 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 10 ರೂಪಾಯಿ ಅಂತ ಹೇಳಿ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು, 10-50 ನಾವೆಲ್ಲರೂ ಸದರಿಯವರ ಮೇಲೆ ದಾಳಿ ಮಾಡಿದಾಗ 12 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಸೋದನೆ ಮಾಡಲಾಗಿ ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ  ಹೇಳಿರುತ್ತಾರೆ. 1] ಬಸಪ್ಪ ತಂದೆ ಮಲ್ಲಪ್ಪ ಕಲ್ಲೂರ ವ|| 60 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 110/- ರೂಪಾಯಿ ಸಿಕ್ಕವು 2] ಗಣಪತಿ ತಂದೆ ಕಲ್ಯಾಣಪ್ಪ ಮಲಗಂಡ ವ|| 44 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 90/- ರೂಪಾಯಿ ಸಿಕ್ಕವು 3] ಮಹಾಂತೇಶ ತಂದೆ ಬಸವರಾಜ ಔಗೊಂಡ ವ|| 23 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 100/- ರೂಪಾಯಿ ಸಿಕ್ಕವು 4] ಭೀಮರಾಯ ತಂದೆ ರಾಯಪ್ಪ ಕರಿಸಂಗ ವ|| 40 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನಿಂದ ನಗದು ಹಣ 80/- ರೂಪಾಯಿ ಸಿಕ್ಕವು. 5] ದೇವಣ್ಣ ತಂದೆ ವಿರಪ್ಪ ಕಸೆಟ್ಟಿ ವ|| 21 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನಿಂದ ನಗದು ಹಣ 80/- ರೂಪಾಯಿ ಸಿಕ್ಕವು. 6] ಬಗವಂತ್ರಾಯ ತಂದೆ ಬಸವರಾಜ ಸಾಣಿ ವ|| 25 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನಿಂದ ನಗದು  ಹಣ 110/- ರೂಪಾಯಿ ಸಿಕ್ಕವು. 7] ರಮೇಶ ತಂದೆ ಮಲ್ಲಿಕಾಜರ್ುನ್ ಮಲಗೊಂಡ ವ|| 30 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನಿಂದ ನಗದು  ಹಣ 120/- ರೂಪಾಯಿ ಸಿಕ್ಕವು. 8] ಮಲ್ಲಿಕಾಜರ್ುನ ತಂದೆ ಶಿವಣ್ಣ ಮಾಹಿ ವ|| 30 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನಿಂದ ನಗದು  ಹಣ 130/- ರೂಪಾಯಿ ಸಿಕ್ಕವು. 9] ಬಾಬುಸಿಂಗ್ ತಂದೆ ಕಿಸಾನ್ಸಿಂಗ್ ರಜಪೂತ ವ|| 30 ಜಾ|| ರಜಪೂತ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನಿಂದ ನಗದು  ಹಣ 90/- ರೂಪಾಯಿ ಸಿಕ್ಕವು. 10] ಇಮಾಮಸಾಬ ತಂದೆ ರಾಜಾಸಾಬ ಜೇವಗರ್ಿ ವ|| 35 ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನಿಂದ ನಗದು  ಹಣ 100/- ರೂಪಾಯಿ ಸಿಕ್ಕವು. 11] ನಾಗಣ್ಣ ತಂಧೆ ಮಹಾಂತಪ್ಪ ಕರಿಗುಡ್ಡ ವ|| 43 ಜಾ|| ಗಾಣಿಗ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನಿಂದ ನಗದು  ಹಣ 130/- ರೂಪಾಯಿ ಸಿಕ್ಕವು. 12] ಮಲ್ಲಿಕಾಜರ್ುನ್ ತಂದೆ ಭೀಮರಾಯ ಕಕ್ಕೆರಿ ವ|| 26 ಜಾ|| ಗಾಣಿಗ ಉ|| ಒಕ್ಕಲುತನ ಸಾ|| ದೋರನಳ್ಳಿ ಈತನಿಂದ ನಗದು  ಹಣ 80/- ರೂಪಾಯಿ ಸಿಕ್ಕವು. ಕಣದಲ್ಲಿ ಪಣಕ್ಕೆ ಇಟ್ಟ ಹಣ 60/- ಸಿಕ್ಕವು ಹೀಗೆ ಒಟ್ಟು 1280/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 11-00  ಗಂಟೆಯಿಂದ 12-00 ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 12 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 12-20 ಗಂಟೆಗೆ ಬಂದು ವರದಿಯನ್ನು ತಯ್ಯಾರಿಸಿ 13-00 ಗಂಟೆಗೆ 12  ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ, ನಂ,26/2019 ಕಲಂ 87 ಕೆ.ಪಿ.ಯಾಕ್ಟ ನೋಂದಣಿ ಮಾಡಿಕೊಂಡಿದ್ದು. ಕಲಂ 87 ಕೆ.ಪಿ.ಯಾಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ಮುಂದಿನ ಕ್ರಮ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಹುಲಗಪ್ಪ .ಪಿ.ಸಿ. 344 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 13-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 85/2019 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 86/2019 ಕಲಂ 78[3] ಕೆ.ಪಿ ಆಕ್ಟ:- ದಿನಾಂಕ 03/04/2019 ರಂದು ಮದ್ಯಾಹ್ನ 13-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ: 03/04/2019 ರಂದು ಮಧ್ಯಾಹ್ನ 1.15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ತರಕಾರಿ ಮಾರುಕಟ್ಟೆಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಫಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ಮಾನ್ಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಕುರಿತು ಶಹಾಪೂರ ನಗರದ ತರಕಾರಿ ಮಾರುಕಟ್ಟೆಯ ಹತ್ತಿರ ಹೋಗಿ ನೋಡಲಾಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆತನ ಅಂಗಶೋಧನೆ ಮಾಡಿದಾಗ ನಗದು ಹಣ 1540=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ.27/2019 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಎನ್.ಸಿ ನೋಂದಣಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ಸಾಯಂಕಾಲ 17.00 ಗಂಟೆಗೆ ಠಾಣೆ ಗುನ್ನೆ ನಂಬರ 86/2019 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 85/2019 ಕಲಂ 379 ಐ.ಪಿ.ಸಿ.ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:03-04-2019 ರಂದು 8.30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿ ಐ ಸಾಹೇಬರು ಒಂದು ಮರಳು ತುಂಬಿದ ಟಿಪ್ಪರ ಮತ್ತು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:03-04-2019 ರಂದು 06:00 ಎ.ಎಮ್ ಸುಮಾರಿಗೆ  ಠಾಣೆಯಲ್ಲಿದ್ದಾಗ ಲಕ್ಷ್ಮಿಂಪೂರ ಗ್ರಾಮದ ಕಡೆ ಯಾರೋ ತಮ್ಮ ಟಿಪ್ಪರ ವಾಹನದಲ್ಲಿ ಹೇಮನೂರ ಸೀಮಾಂತರದ ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಮಾನಪ್ಪ ತಂದೆ ಬೈಲಪ್ಪ ವಾಗಣಗೇರಾ ವಯಾ:34 ವರ್ಷ ಉ:ಕೂಲಿ ಜಾತಿ:ಮಾದಿಗ ಸಾ:ವಾಗಣಗೇರಾ 2) ಶ್ರೀ ಮಹೀಬೂಬ ತಂದೆ ಮುಸ್ತಪಸಾಬ ಮಕ್ಕಾ ವಯಾ:27 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ರುಕ್ಮಾಪೂರ ತಾ:ಸುರಪುರ ಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಮತ್ತು ಸಿಬ್ಬಂದಿಯವರಾದ 1) ಶ್ರೀ ಉಮಾಕಾಂತ ಸಿಹೆಚ್ಸಿ-192 2)  ಸೋಮಯ್ಯ ಸಿ.ಪಿಸಿ-235 3) ಶ್ರೀ ನಿಂಗಣಗೌಡ ಸಿಪಿಸಿ-365 ಶಹಾಪೂರ ಠಾಣೆ ಸಧ್ಯ ಡಿಎಸ್ಪಿ ಆಪೀಸ ಸುರಪೂರ ಹಾಗೂ ಜೀಪ ಚಾಲಕನಾದ 3) ಶ್ರೀ ಮಾಹಾಂತೇಶ ಎಪಿಸಿ-48 ಎಲ್ಲರೂ ಕೂಡಿ ಸದರಿ ಪಂಚರೊಂದಿಗೆ ಸರಕಾರಿ ಠಾಣೆಯ ಸರಕಾರಿ ಜೀಪ್ ನಂ: ಕೆಎ-33, ಜಿ-0238 ವಾಹನದಲ್ಲಿ ಠಾಣೆಯಿಂದ 06-15 ಎ.ಎಮ್ಕ್ಕೆ ಹೊರಟು 06-45 ಎ.ಎಮ್ ಕ್ಕೆ ಲಕ್ಷ್ಮಿಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ  ಹೇಮನೂರ ಕಡೆಯಿಂದ ಒಂದು ಟಿಪ್ಪರದಲ್ಲಿ ಮರಳು ತುಂಬಿಕೊಂಡು ಲಕ್ಷ್ಮಿಂಪೂದ ಕಡೆ ಬರುತ್ತಿರುವಾಗ ನಾವು ನಮ್ಮ ಜೀಪನ್ನು ನಿಲ್ಲಿಸಿ ಕೆಳಗೆ ಇಳಿದು ಸದರಿ ಟಿಪ್ಪರನ್ನು ಕೈ ಮಾಡಿ ತಡೆದು ನಿಲ್ಲಿಸಲಾಗಿ ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು  ನಿಲ್ಲಿಸಿ ಕೆಳಗೆ ಇಳಿದು ಓಡಿ ಹೋಗಿದ್ದು  ಪರೀಶಿಲಿಸಿ  ನೋಡಲು ಟಿಪ್ಪರ ನಂಬರ ಕೆಎ-51 ಬಿ-6723 ನೇದ್ದು ಇದ್ದು ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು, ಅದರ ಅ.ಕಿ 10400/- ರೂಗಳು ಆಗುತ್ತದೆ. ಸದರಿ ಟಿಪ್ಪರ ಚಾಲಕನು ಹೇಮನೂರ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟಿಪ್ಪರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ 06-45 ಎ.ಎಮ್ ದಿಂದ 07-45 ಎ.ಎಮ್ ದವರೆಗೆ ಪಂಚನಾಮೆಯನ್ನು ಬರೆದುಕೊಂಡು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಓಡಿ ಹೋದ ಟಿಪ್ಪರ ಚಾಲಕ ಮತ್ತು ಮಾಲೀಕನು ಒಬ್ಬನೆ ಇದ್ದು ಅವನ ಹೆಸರು ವಿಳಾಸ ಪರಮಣ್ಣ ತಂದೆ ನಂದಪ್ಪ ಕುರಿ ವಯಾ:26 ವರ್ಷ ಸಾ:ಕಕ್ಕೇರಾ ಇರುತ್ತದೆ. ಕಾರಣ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟಿಪ್ಪರದಲ್ಲಿ ಒಟ್ಟು 10400/- ರೂ ಕಿಮ್ಮತ್ತಿನ   ಅಂದಾಜು 13 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಮರಳು ತುಂಬಿದ ಟಿಪ್ಪರನ್ನು ನಿಮ್ಮ ವಶಕ್ಕೆ ನೀಡಿರುತ್ತೇನ ಅಂತಾ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 86/2019 ಕಲಂ. 3&7 ಇ.ಸಿ ಆಕ್ಟ 1955:- ದಿನಾಂಕಃ 03/04/2019 ರಂದು 12-30 ಪಿ.ಎಮ್ ಕ್ಕೆ ಶ್ರೀ ತಿರುಪತಿ ವಾಯ್ಅಲ್ಲೂರ, ಆಹಾರ ನಿರೀಕ್ಷಕರು ತಹಸೀಲ ಕಾಯರ್ಾಲಯ ಸುರಪೂರಇವರುಠಾಣೆಗೆ ಹಾಜರಾಗಿ ಸಕರ್ಾರಿತಪರ್ೆಯಾಗಿ ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 03/04/2019 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ತಹಶೀಲ ಕಾಯರ್ಾಲಯದಲ್ಲಿಕರ್ತವ್ಯ ನಿರ್ವಹಿಸುತ್ತಿದ್ದಾಗ ಸುರಪುರಕಡೆಯಿಂದಎರಡು ಮಹಿಂದ್ರ ಬುಲೆರೋ ಪಿಕ ಅಪ್ ವಾಹನಗಳಲ್ಲಿ ಸಕರ್ಾರದಿಂದ ಸಾರ್ವಜನಿಕರಿಗೆ ಪಡಿತರಚೀಟಿ ಮುಖಾಂತರ ವಿತರಣೆ ಮಾಡುವರೇಷನಅಕ್ಕಿಯನ್ನು ಪಡಿತರಿಗೆ ಹಂಚದೆಅಕ್ರಮವಾಗಿ ವಾಹನಗಳಲ್ಲಿ ಹಾಕಿಕೊಂಡು ಮಾರಾಟಕ್ಕೆ ಹತ್ತಿಗೂಡುರಕಡೆಗೆತೆಗೆದುಕೊಂಡು ಹೋಗುತ್ತಿದ್ದಾರೆಅಂತಖಚಿತ ಮಾಹಿತಿ ಬಂದಿದ್ದರಿಂದ ನಾನು ಮಾನ್ಯ ತಹಶೀಲ್ದಾರರು ಸುರಪೂರರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ತಹಸೀಲ ಕಾಯರ್ಾಲಯಕ್ಕೆಇಬ್ಬರೂ ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವಯಃ 52 ವರ್ಷಜಾತಿಃ ಮುಸ್ಲಿಂ ಉಃ ಒಕ್ಕಲುತನ ಸಾಃ ದೇವಾಪೂರತಾಃ ಸುರಪೂರ 2) ಶ್ರೀ ಮಹಿಬೂಬ ತಂದೆ ಮುಸ್ತಫಾ ಮಕ್ಕಾ ವಯಃ 27 ವರ್ಷಜಾತಿಃ ಮುಸ್ಲಿಂ ಉಃ ಚಾಲಕ ಸಾಃರುಕ್ಮಾಪೂರತಾ:ಸುರಪೂರಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ಹಾಜರಿದ್ದುಜಪ್ತಿ ಪಂಚನಾಮೆ ಬರೆಯಿಸಿಕೊಡುವಂತೆ ಕೇಳಿಕೊಂಡ ಮೇರೆಗೆಉಭಯ ಪಂಚರುಒಪ್ಪಿಕೊಂಡರು. ಬಳಿಕ ಪಂಚರೊಂದಿಗೆ ಪೊಲೀಸ್ಠಾಣೆಗೆ ಬಂದು ಶ್ರೀ ಆನಂದರಾವ್ಎಸ್.ಎನ್. ಪಿ.ಐ ರವರಿಗೆ ವಿಷಯ ತಿಳಿಸಿದಾಗ ಅವರುತಮ್ಮ ಸಿಬ್ಬಂದಿಯಾದ 1) ಶ್ರೀ ಸೋಮಯ್ಯ ಪಿಸಿ 235 2) ಶ್ರೀ ಉಮಾಕಾಂತ ಸಿಹೆಚ್ಸಿ-192 ರವರನ್ನುಕರೆದುಕೊಂಡು ನಮ್ಮೊಂದಿಗೆ ಬರಲುಒಪ್ಪಿದ್ದುಎಲ್ಲರೂಕೂಡಿಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಠಾಣೆಯಿಂದ 9-30 ಎ.ಎಮ್ ಕ್ಕೆ ಹೊರಟುದೇವಿಕೇರಾಕ್ರಾಸ್ ಹತ್ತಿರ 10 ಎ.ಎಮ್ ಕ್ಕೆ ಹೋಗಿ ವಾಹನ ನಿಲ್ಲಿಸಿ ರಸ್ತೆಯಲ್ಲಿಕಾಯುತ್ತಾ ನಿಂತುಕೊಂಡಾಗ 10-15 ಎ.ಎಂ.ಸುಮಾರಿಗೆ ಸುರಪುರಕಡೆಯಿಂದಎರಡು ಬುಲೆರೋ ಪಿಕ ಅಪ್ ವಾಹನಗಳು ಒಂದರ ಹಿಂದೆಒಂದು ಬರುತ್ತಿರುವದನ್ನುಕಂಡು ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ಸದರಿ ಪಿಕ್ಅಪ್ ವಾಹನಗಳನ್ನು ನಿಲ್ಲಿಸಲು ಕೈ ಮಾಡಿದಾಗಎರಡು ಬುಲೆರೋ ವಾಹನಗಳ ಚಾಲಕರುತಮ್ಮ ವಾಹನಗಳನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಕೆಳಗೆ ಇಳಿದು ಓಡಿ ಹೋಗಿದ್ದು. ಬಳಿಕ ನಾವು ಪಂಚರ ಸಮಕ್ಷಮ ಮಹೆಂದ್ರ ಪಿಕ್ಅಪ್ ವಾಹನಗಳನ್ನು ಪರಿಶೀಲಿಸಲಾಗಿ 1) ಒಂದು ಮಹೇಂದ್ರಕಂಪನಿಯ ಬುಲೆರೋ ಪಿಕ ಅಪ್ ವಾಹನ ನಂಬರ ಕೆಎ-33 ಎ-9136 ಇದ್ದುಅದರಲ್ಲಿ 18 ಪ್ಲಾಸ್ಟೀಕ್ ಚೀಲಗಳಲ್ಲಿ ಅಕ್ಕಿ ತುಂಬಿ ಬಾಯಿ ಕಟ್ಟಿದ್ದು ಪ್ರತಿಚೀಲದಲ್ಲಿ 40 ಕೆ.ಜಿ ಅಕ್ಕಿ ಇದ್ದು, ಒಟ್ಟು 720 ಕೆ.ಜಿಆಗುತ್ತಿದ್ದುಅದರಅಂದಾಜುಕಿಮ್ಮತ್ತು 18,000/-ರೂ.ಗಳು ಆಗುತ್ತದೆ. ಹಾಗು ಬುಲೆರೋಗೂಡ್ಸ್ ವಾಹನದ ಅ.ಕಿ. 2,00,000/- ರೂ.ಗಳು ಆಗಬಹುದು. ಇನ್ನೊಂದು ವಾಹನ ಪರೀಶಿಲಿಸಲು 2) ಒಂದು ಮಹೀಂದ್ರ ಬುಲೆರೋ ಪಿಕಅಪ್ ವಾಹನ ನಂಬರ ಕೆಎ-33 ಎ-1400 ನೇದ್ದುಇದ್ದುಅದರಲ್ಲಿ 15 ಪ್ಲಾಸ್ಟೀಕ್ ಚೀಲಗಳಲ್ಲಿ ಅಕ್ಕಿ ತುಂಬಿ ಬಾಯಿ ಕಟ್ಟಿದ್ದು ಪ್ರತಿಚೀಲದಲ್ಲಿ 40 ಕೆ.ಜಿ ಅಕ್ಕಿ ಇದ್ದು, ಒಟ್ಟು 600 ಕೆ.ಜಿಆಗುತ್ತವೆಅದರಅಂದಾಜುಕಿಮ್ಮತ್ತು 15,000/-ರೂ.ಗಳು ಆಗುತ್ತದೆ. ಹಾಗು ಗೂಡ್ಸ್ ವಾಹನದ ಅ||ಕಿ|| 2,00,000/- ರೂ.ಗಳು ಆಗುತ್ತದೆ. ಹೀಗೆ ಒಟ್ಟುಎರಡು ಬುಲೆರೋ ಪಿಕ ಅಪ್ ವಾಹನಗಳಲ್ಲಿ ಒಟ್ಟು 33 ಅಕ್ಕಿ ಚೀಲಗಳು ಒಟ್ಟು 1320/- ಕೆಜಿಯ ಅಕ್ಕಿ ಅ.ಕಿ 33000/- ರೂಗಳು ಹಾಗೂ ಎರಡು ಬುಲೆರೋ ವಾಹನ ಅ.ಕಿ 4 ಲಕ್ಷ ರೂಗಳು ಆಗುತ್ತಿದ್ದು ಹೀಗೆ ಒಟ್ಟು 4 ಲಕ್ಷದ 33 ಸಾವಿರಕಿಮ್ಮತ್ತಿನ ಅಕ್ಕಿ ಚೀಲಗಳು ಹಾಗೂ ಗೂಡ್ಸ್ ವಾಹನಗಳನ್ನು ಪಂಚರ ಸಮಕ್ಷಮ 10-15 ಎ.ಎಮ್ ದಿಂದ 11-15 ಎ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಅಕ್ಕಿ ಚೀಲಗಳಿರುವ ವಾಹನಗಳ ಸಮೇತ ಮರಳಿ 12-30 ಪಿ.ಎಮ್ ಕ್ಕೆ ಠಾಣೆಗೆ ಬಂದು ವರದಿ ಸಲ್ಲಿಸಿದ್ದು, ಸಕರ್ಾರದಿಂದ ಮಂಜೂರಾಗಿ ಬಂದ ಪಡಿತರಅಕ್ಕಿಯನ್ನು, ಪಡಿತರಿಗೆ ವಿತರಿಸದೆಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವದಕ್ಕಾಗಿ ವಾಹನದಲ್ಲಿ ಹಾಕಿಕೊಂಡುತೆಗೆದುಕೊಂಡು ಹೋಗುತಿದ್ದ ಬುಲೆರೋ ವಾಹನಗಳ ಚಾಲಕರ ವಿರುದ್ದ ಮುಂದಿನ ಕಾನೂನು  ಕ್ರಮಜರುಗಿಸಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ86/2019 ಕಲಂ. 3 & 7 ಇ.ಸಿ ಆಕ್ಟ್ 1955 ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 87/2019 ಕಲಂ 15 [ಎ] 32 [3] ಕೆ.ಇ ಆಕ್ಟ:- ದಿನಾಂಕ 03/04/2019 ರಂದು ರಾತ್ರಿ 20-15 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ  ನಾಗರಾಜ ಜಿ. ಆರಕ್ಷಕ ನಿರೀಕ್ಷಕರು  ಶಹಾಪೂರ ಪೊಲೀಸ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ಸಾಯಂಕಾಲ 16-15 ಗಂಟೆಗೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಬೋಮ್ಮನಳ್ಳಿ ಗ್ರಾಮದ ಬೀಟ ಸಿಬ್ಬಂದಿ ದ್ಯಾಮಪ್ಪ ಪಿ.ಸಿ 265 ರವರು ಸದರಿ ಗ್ರಾಮದಲ್ಲಿ ಆರೋಪಿತನು ತನ್ನ ಚಹಾ ಹೊಟೇಲ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನಕೂಲ ಮಾಡಿಕೊಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಫಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ 1) 90 ಎಮ್.ಎಲ್.ನ 15 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಮದ್ಯದ ಪಾಕೇಟಗಳು ಅಂ.ಕಿ 454=00 ರೂಪಾಯಿ 2) 6 ಖಾಲಿ ಪ್ಲಾಸ್ಟೀಕ್ ಗ್ಲಾಸ್ಗಳು ಅಂ.ಕಿ 00=00  3) 5 ಖಾಲಿ 90 ಎಮ್.ಎಲ್.ನ ಓರಿಜಿನಲ್ ಚಾಯ್ಸ ಪಾಕೇಟ್ ಅ.ಕಿ 00=00 ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ  ಸಾಯಂಕಾಲ 18-00 ಗಂಟೆಯಿಂದ 19-00  ಗಂಟೆಯವರೆಗೆ  ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 87/2019 ಕಲಂ 15[ಎ] 32[3] ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!