ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-04-2019
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 55/2019 ಕಲಂ: 379 ಐ.ಪಿ.ಸಿ:- ದಿನಾಂಕ 02-04-2019 ರಂದು 6 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ರಾಮಣ್ಣಗೌಡ ತಂದೆ ನಂದಪ್ಪಗೌಡ ಹೊಸಗೌಡರ ವಯಾ:34 ಉ: ವ್ಯಾಪಾರ ಜಾ:ಲಿಂಗಾಯತ ಸಾ: ಆಲ್ದಾಳ ಹಾ:ವ: ಶಹಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧೀ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಪ್ಯಾಶನ್ ಪ್ರೋ ಕಂಪನಿಯ ಕಪ್ಪು ಬಣ್ಣದ ಮೋಟಾರ ಸೈಕಲ್ ಇದ್ದು ಸದರಿ ಮೋಟಾರ್ ಸೈಕಲ್ ನಂಬರ ಕೆ.ಎ-33/ ವ್ಹಿ-2371 ಅಂತಾ ಇದ್ದು 2017 ನೇ ಸಾಲಿನಲ್ಲಿ ಖರೀಧಿ ಮಾಡಿರುತ್ತೆನೆ. ಹೀಗಿದ್ದು ದಿನಾಂಕ 11-03-2019 ರಂದು ಅಬ್ಬೇತುಮಕೂರ ಗಾಮದಲ್ಲಿ ಜರುಗುವ ವಿಶ್ವರಾಧ್ಯ ಮಹಾರಾಜರ ಜಾತ್ರಾ ಮಹೋತ್ಸವದ ಸಲುವಾಗಿ ನಾನು ಹಾಗೂ ನಮ್ಮ ಅಳಿಯನಾದ ಮಂಜುನಾಥ ತಂದೆ ಭೀಮಣ್ಣಗೌಡ ಹೊಸಮನಿ ಸಾ:ಸಿಂಗನಳ್ಳಿ ಇಬ್ಬರೂ ಕೂಡಿ ನಮ್ಮ ಮೋಟಾರ್ ಸೈಕಲ್ ನಂ: ಕೆ.ಎ-33/ವ್ಹಿ-2371 ನೆದ್ದರ ಮೇಲೆ ಶಹಾಪೂರದಿಂದ ಸಾಯಂಕಾಲ ಹೊರಟು ಅಂದೇ 6 ಪಿ.ಎಮ್ ಕ್ಕೆ ಅಬ್ಬೆತುಮಕೂರ ಗ್ರಾಮ ತಲುಪಿ ಅಬ್ಬೆತುಮಕೂರ ಗ್ರಾಮದ ನಮ್ಮ ಸಂಬಂಧಿಕರಾದ ಶ್ರೀ ಈಶಪ್ಪಾಗೌಡ ತಂದೆ ಮಲ್ಲಣ್ಣಗೌಡ ಮಾಲೀಗೌಡರ್ ಇವರ ಮನೆಯ ಮುಂದೆ ಖುಲ್ಲಾ ಜ್ಯಾಗೆಯಲ್ಲಿ ನಮ್ಮ ಮೋಟಾರ್ ಸೈಕಲ್ ನಿಲ್ಲಿಸಿದೇವು. ನಮ್ಮಂತೆ ಸುಮಾರು ಜನರು ಅದೇ ಜ್ಯಾಗೆಯಲ್ಲಿ ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ನಾವು ಸದರಿ ಜ್ಯಾಗೆಯಲ್ಲಿ ಮೋಟಾರ್ ಸೈಕಲ್ ನಿಲ್ಲಿಸಿ ನಾವು ದೇವರ ದರ್ಶನ ಪಡೆಯಲು ಜಾತ್ರೆಯಲ್ಲಿ ಹೋಗಿ ದೇವರ ದರ್ಶನ ಮಾಡಿಕೊಂಡು ನಂತರ ರಥೋತ್ಸವ ಮುಗಿದ ಮೇಲೆ ಜಾತ್ರೆಯ ವಿವಿಧ ಕಾರ್ಯಕ್ರಮಗಳನ್ನು ನೋಡುವಷ್ಟರಲ್ಲಿ ದಿನಾಂಕ 12-03-2019 ರಂದು ಬೆಳಗಿನ 3 ಗಂಟೆಯಾಯಿತು. ನಮಗೆ ನಿದ್ದೆ ಬಂದ ಕಾರಣ ಮಲಗಬೇಕೆಂದು ಈಶಪ್ಪಗೌಡರ ಮನೆಯ ಕಡೆಗೆ ಬಂದು ನಾವು ನಿಲ್ಲಿಸಿದ್ದ ನಮ್ಮ ಮೋಟಾರ ಸೈಕಲನ್ನು ಗಮನಿಸಿ ಮನೆಯಲ್ಲಿ ಹೋಗಿ ಮಲಗಿಕೊಂಡೆವು. ಮರಳಿ ನಮ್ಮೂರಿಗೆ ಹೋಗುವ ಸಲುವಾಗಿ ಬೆಳಗಿನ ಜಾವ 5 ಗಂಟೆಗೆ ಎದ್ದು ನಮ್ಮ ಮೋಟಾರ್ ಸೈಕಲ್ ನಿಲ್ಲಿಸಿದ್ದ ಕಡೆಗೆ ಬಂದು ನೋಡಲಾಗಿ ನಮ್ಮ ಮೋಟಾರ್ ಸೈಕಲ್ ಅಲ್ಲಿ ಕಾಣಲಿಲ್ಲಾ. ನಾವು ಗಾಬರಿಗೊಂಡು ಅಲ್ಲಿ ಇಲ್ಲಿ ಎಲ್ಲಾ ಕಡೆಗೆ ಹುಡುಕಾಡಲಾಗಿ ನಮ್ಮ ಮೋಟಾರ ಸೈಕಲ್ದ ಸುಳುವು ಸಿಗಲಿಲ್ಲಾ. ನಾವು ಈ ವಿಷಯವನ್ನು ಈಶಪ್ಪಾಗೌಡ ತಂದೆ ಮಲ್ಲಣ್ಣಗೌಡ ಮಾಲೀಗೌಡರ್ ಇವರಿಗೂ ತಿಳಿಸಿದೇವು, ಎಲ್ಲರೂ ಕೂಡಿ ಅಬ್ಬೆತುಮಕೂರ ಗ್ರಾಮದ ಎಲ್ಲಾ ಕಡೆಗೆ ಹುಡುಕಾಡಿದರೂ ನಮ್ಮ ಮೋಟಾರ್ ಸೈಕಲ್ ಸಿಗಲಿಲ್ಲಾ. ನಮ್ಮ ಮೋಟಾರ ಸೈಕಲ್ ದಿನಾಂಕ 12-03-2019 ರಂದು ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆಯೊಳಗಿನ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿ ಕೊಂಡು ಹೋಗಿದ್ದಾರೆ ಅಂತಾ ಖಚಿತಪಡಿಸಿಕೊಂಡೇವು. ನನ್ನ ಮೋಟಾರ್ ಕಳುವಾದಾಗಿನಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ನಾನು ಹಾಗೂ ನಮ್ಮ ಅಳಿಯ ಮಂಜುನಾಥ ಎಲ್ಲರೂ ಕೂಡಿ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಆದ್ದರಿಂದ ಹುಡುಕಾಡುವುದರ ಸಲುವಾಗಿ ತಡವಾಗಿ ಇಂದು ಠಾಣೆಗೆ ಬಂದು ಫಿರ್ಯಾಧಿ ಸಲ್ಲಿಸುತ್ತಿದ್ದು, ಕಾರಣ ಈ ಬಗ್ಗೆ ಕಾನುನು ಪ್ರಕಾರ ಕ್ರಮ ಕೈಗೊಂಡು ಕಳುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:55/2019 ಕಲಂ379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 42/2019 ಕಲಂ: 279,304(ಎ) ಐಪಿಸಿ:-ದಿನಾಂಕ: 02/04/2019 ರಂದು 9-30 ಎಎಮ್ ಕ್ಕೆ ಶ್ರೀಮತಿ ಶಶಿಕಲಾ ಗಂಡ ಮಲ್ಲಪ್ಪ ಹಡಪದ, ವಯ:28 ವರ್ಷ, ಜಾತಿ:ಹಡಪದ, ಉ||ಕೂಲಿ, ಸಾ||ಗುಂಡಗುತರ್ಿ, ತಾ||ಶಹಾಪೂರ, ಹಾ||ವ||ಶಾಹಿನಸಾಬ್ ದಗರ್ಾ ಹತ್ತಿರ, ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ನನ್ನ ಗಂಡನು ನಮ್ಮ ಕುಲಕಸುಬು ಮಾಡಿಕೊಂಡು ಇರುತ್ತಾನೆ. ನಮಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳು ಇರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ:01/04/2019 ರಂದು ಗುಂಡಗುತರ್ಿ ಗ್ರಾಮದಲ್ಲಿ ನಮ್ಮ ಮೈದುನ ಶೇಖಪ್ಪನ ಮಕ್ಕಳ ಜವಳ ಕಾರ್ಯಕ್ರಮ ಇದ್ದುದರಿಂದ ನಾನು ಮತ್ತು ನನ್ನ ಗಂಡ, ಮಕ್ಕಳು ಜವಳ ಕಾರ್ಯಕ್ರಮಕ್ಕೆ ಗುಂಡಗುತರ್ಿ ಗ್ರಾಮಕ್ಕೆ ಹೋಗಿ ಕಾರ್ಯಕ್ರಮ ಮುಗಿದ ನಂತರ ನಾನು ಮತ್ತು ಮಕ್ಕಳು ಬಸ್ಸಿಗೆ ಹತ್ತಿಕೊಂಡು ಯಾದಗಿರಿಗೆ ಬಂದೆವು. ನನ್ನ ಗಂಡನು ಬಿಸಿಲು ಕಡಿಮೆಯಾದ ನಂತರ ಸಾಯಂಕಾಲ ಮೋಟರ್ ಸೈಕಲ್ ಮೇಲೆ ಬರುವುದಾಗಿ ಹೇಳಿ ಅಲ್ಲಿಯೇ ಉಳಿದನು. ಸಾಯಂಕಾಲ 7:30 ಗಂಟೆಯ ಸುಮಾರಿಗೆ ನಮ್ಮ ಮೈದುನ ಶೇಖಪ್ಪ ತಂದೆ ಬಸಪ್ಪ ಹಡಪದ ಈತನು ನನಗೆ ಫೋನ್ಮಾಡಿ ಹೇಳಿದ್ದೇನೆಂದರೆ, ನಮ್ಮ ಪರಿಚಯದವನಾದ ಶೇಖರ ತಂದೆ ಗಂಗಪ್ಪ ಹಡಪದ ಸಾ||ಯಾದಗಿರಿ ಈತನು ನನಗೆ ಫೋನ್ಮಾಡಿ ಶಹಾಪೂರದಲ್ಲಿ ಕೆಲಸ ಮುಗಿಸಿಕೊಂಡು ನನ್ನ ಮೋಟರ್ ಸೈಕಲ್ ಮೇಲೆ ಮರಳಿ ಯಾದಗಿರಿಗೆ ಬರುವಾಗ ಯಾದಗಿರಿ-ಶಹಾಪೂರ ರಸ್ತೆಯ ಮೇಲೆ ಮನಗನಾಳ ಸಮೀಪ ನಿಮ್ಮ ಅಣ್ಣನಾದ ಮಲ್ಲಪ್ಪನು ಮೋಟರ್ ಸೈಕಲ್ ನಂ: ಕೆಎ-33 ಎಲ್-4878 ರ ಮೇಲೆ ಯಾದಗಿರಿಗೆ ಹೊರಟಿದ್ದು, ಸಾಯಂಕಾಲ 7:00 ಗಂಟೆಯ ಸುಮಾರಿಗೆ ಯಾದಗಿರಿ ಕಡೆಯಿಂದ ಚವರ್ೊಲೆಟ್ ಕಾರ್ ನಂ: ಕೆಎ-36 ಎನ್-2651 ರ ಚಾಲಕ ಅಂಬ್ರೇಶ ತಂದೆ ಚನ್ನಣ್ಣಗೌಡ ಮಾಲೀಪಾಟೀಲ್ ಸಾ||ಗುರಗುಂಟಾ ಈತನು ಕಾರನ್ನು ಅತೀವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಿಮ್ಮಣ್ಣನಿಗೆ ಡಿಕ್ಕಿಪಡಿಸಿ ಅಪಘಾತಪಡಿಸಿದ್ದರಿಂದ ಅಪಘಾತದಲ್ಲಿ ನಿಮ್ಮಣ್ಣ ಮಲ್ಲಪ್ಪನಿಗೆ ಬಲಕಾಲು ತೊಡೆಗೆ ಭಾರಿಹರಿದ ರಕ್ತಗಾಯವಾಗಿ ಎಲುಬು ಮುರಿದು ಹೊರಗಡೆ ಬಂದಿದ್ದು ಅಲ್ಲಲ್ಲಿ ರಕ್ತಗಾಯಗಳಾಗಿರುತ್ತವೆ, ಉಪಚಾರ ಕುರಿತು ಮಲ್ಲಪ್ಪನಿಗೆ 108 ಅಂಬುಲೆನ್ಸ್ನಲ್ಲಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ನೀವು ಅಲ್ಲಿಗೆ ಬರ್ರಿ ಎಂದು ಹೇಳಿರುತ್ತಾನೆ ನೀವು ಬರ್ರಿ ಅಂತಾ ತಿಳಿಸಿದ್ದರಿಂದ ನಾನು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡ ಮಲ್ಲಪ್ಪನಿಗೆ ಬಲಕಾಲು ತೊಡೆಗೆ ಭಾರಿಹರಿದ ರಕ್ತಗಾಯವಾಗಿ ಎಲುಬು ಮುರಿದು ಹೊರಗಡೆ ಬಂದಿದ್ದು, ಬಲಪಾದದ ಮೇಲೆ ಮತ್ತು ಬಲಕೈಗೆ ಹರಿದ ರಕ್ತಗಾಯಗಳಾಗಿದ್ದು, ಎಡಕಣ್ಣಿನ ಕೆಳಗೆ ಹರಿದ ರಕ್ತಗಾಯವಾಗಿರುತ್ತದೆ. ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ತೆಗೆದುಕೊಂಡು ಹೋಗುವಂತೆ ಹೇಳಿದ್ದು, ಅದರಂತೆ ನನ್ನ ಗಂಡ ಮಲ್ಲಪ್ಪನಿಗೆ 108 ಅಂಬುಲೆನ್ಸ್ನಲ್ಲಿ ಹಾಕಿಕೊಂಡು ರಾಯಚೂರಿಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೈಲಾಪೂರ ಹತ್ತಿರ ರಾತ್ರಿ 10:30 ಗಂಟೆಯ ಸುಮಾರಿಗೆ ನನ್ನ ಗಂಡ ಮಲ್ಲಪ್ಪನು ಮೃತಪಟ್ಟಿದ್ದು, ನನ್ನ ಗಂಡನ ಶವವನ್ನು ಮರಳಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಶವಗಾರ ಕೋಣೆಯಲ್ಲಿ ಹಾಕಿರುತ್ತೇವೆ. ಕಾರಣ ನನ್ನ ಗಂಡನಿಗೆ ಅಪಘಾತಪಡಿಸಿದ ಕಾರ್ ನಂ: ಕೆಎ-36 ಎನ್-2651 ರ ಚಾಲಕ ಅಂಬ್ರೇಶ ತಂದೆ ಚನ್ನಣ್ಣಗೌಡ ಮಾಲೀಪಾಟೀಲ್ ಸಾ||ಗುರಗುಂಟಾ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 42/2019 ಕಲಂ: 279,304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 59/2019 ಕಲಂ:279,337,338 ಐಪಿಸಿ:-ದಿನಾಂಕ 02.04.2019 ರಂದು ಬೆಳೀಗ್ಗೆ 10:00 ಗಂಟೆಯ ಸುಮಾರಿಗೆ ಆರೋಪಿ ತನ್ನ ಗೆಳೆಯನ ಮೋಟಾರು ಸೈಕಲ್ ನಂ: ಕೆಎ-33-ಎಲ್-3191 ನೇದ್ದನ್ನು ತೆಗೆದುಕೊಂಡು ಯಾದಗಿರಿಯ ಕೋಟರ್್ನಲ್ಲಿ ಕೆಲಸವಿದೆ ಎಂದು ತನ್ನ ತಂದೆಯಾದ ಫಿರ್ಯಾದಿಗೆ ಹೇಳಿ ಮೋಟಾರು ಸೈಕಲ್ ತೆಗೆದುಕೊಂಡು ಹೋಗಿದನು. ನಂತರ ಮರಳಿ ಊರಿಗೆ ಬರುತ್ತಿದ್ದಾಗ ಆರೋಪಿತನು ಮೋಟಾರು ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬೋರಬಂಡಾ-ಗುರುಮಠಕಲ್ ಗ್ರಾಮಗಳ ನಡುವೆ ಗುರುಮಠಕಲನ ಹತ್ತಿರ ಮುಖ್ಯ ರಸ್ತೆಯ ಮೇಲೆ ಮೋಟಾರು ಸೈಕಲನ್ನು ನಿಯಂತ್ರಿಸಲು ಸಾಧ್ಯವಾಗದೇ ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಆರೋಪಿತನಿಗೆ ತಲೆಯಲ್ಲಿ ಎಡಕಿವಿಯ ಹಿಂದೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಅಲ್ಲಲ್ಲಿ ಸಣ್ಣ-ಪುಟ್ಟ ತರಚಿದ ಹಾಗೂ ಗುಪ್ತಗಾಯಗಳು ಆಗಿರುತ್ತವೆ ಅಂತಾ ಪಿರ್ಯಾಧಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 59/2019 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 22/2019 ಕಲಂ. 143 147 323 324 355 448 504 506 ಸಂ.149 ಐ.ಪಿ.ಸಿ ಮತ್ತು 3(1) (ಖ) (ಖ) ಖಅ/ಖಖಿ ಕಔಂ. ಂಅಖಿ-1989:- ದಿನಾಂಕ:31/03/2019 ರಂದು 14.00 ಗಂಟೆಯ ಸುಮಾರಿಗೆ ಪಿಯರ್ಾದಿ ತನ್ನ ಗಂಡ ಹಾಗೂ ಮಗನೊಂದಿಗೆ ಮನೆಯಲ್ಲಿದ್ದಾಗ ಆರೋಪಿತರು ಬಂದು ನಮ್ಮ ಹುಡಗಿ ಶ್ರೀದೇವಿಗೆ ನಿಮ್ಮ ಮಗ ಯಾಕೆ ಚೀಟಿ ಕೊಟ್ಟಿರುತ್ತಾನೆ ಅಂತಾ ಬಂದು ನಮ್ಮ ಮನೆಯ ಬಾಗಿಲನ್ನು ಮುರಿದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಜಗಳಕ್ಕೆ ಬಿದ್ದು ನನ್ನ ಮಗನಾದ ಮಂಜುನಾಥನಿಗೆ ಚಪ್ಪಲಿಯಿಂದಾ, ಕಟ್ಟಿಗೆಯಿಂದಾ ಹೊಡೆದು ತೆಲೆಯ ಹಿಂಬಾಗಕ್ಕೆ ರಕ್ತಗಾಯ ಮಾಡಿ ಕೈಯಿಂದಾ ಹೊಡೆ ಬಡೆ ಮಾಡಿ ಜಾತಿ ಎತ್ತಿ ಬೈಯುತ್ತಿದ್ದಾಗ ಪಿಯರ್ಾದಿ ಮತ್ತು ಅವಳ ಗಂಡ ಜಗಳ ಬಿಡಿಸಲು ಬಂದಾಗ ಅವರಿಗೂ ಕೂಡಾ ಜಾತಿ ಎತ್ತಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ನಾವು ನಮ್ಮ ಮಗನಿಗೆ ದವಾಖಾನೆಗೆ ತೋರಿಸಿಕೊಂಡು ಊರಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಲಿಖಿತ ದೂರು ಸಲ್ಲಿಸಿದ್ದ ಅಂತಾ ಇತ್ಯಾದಿ ಸಾರಾಂಶದ ಮೇಲೆ ಕ್ರಮ ಜರುಗಿಸಿದ್ದು ಇರುತ್ತದೆ.
Hello There!If you like this article Share with your friend using