ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-03-2019

By blogger on ಶುಕ್ರವಾರ, ಮಾರ್ಚ್ 29, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-03-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 30/2019 ಕಲಂ 78(3) ಕೆ.ಪಿ ಎಕ್ಟ್:- ದಿನಾಂಕ:28/03/2019 ರಂದು  6-30 ಪಿಎಮ್ ಕ್ಕೆ ಶ್ರೀ ದೌಲತ್ ಎನ್.ಕೆ ಪಿ.ಐ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಯಾದಗಿರಿ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:28/03/2019 ರಂದು 4-00 ಪಿಎಮ್ ಸುಮಾರಿಗೆ ನಾನು ಸಿ.ಇ.ಎನ್.ಪೊಲೀಸ್ ಠಾಣೆಯಲ್ಲಿದ್ದಾಗ ಯಾದಗಿರಿಯ ಗಾಂದಿನಗರ ತಾಂಡಾ ಕ್ರಾಸ ಹತ್ತಿರ ಯಾರೋ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರು 4-15 ಪಿಎಂಕ್ಕೆ ಯಾದಗಿರಿ ನಗರ ಪೊಲಿಸ್ ಠಾಣೆಗೆ ಬಂದು ಶ್ರೀ ಬಾಪುಗೌಡ ಪಾಟೀಲ ಪಿ.ಎಸ್.ಐ(ಕಾ.ಸು) ನಗರ ಪೊಲೀಸ್ ಠಾಣೆ ಹಾಗೂ ಅವರ ಸಿಬ್ಬಂದಿ ರವರಿಗೆ ವಿಷಯ ತಿಳಿಸಿ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಹೋಗಿ 5-15 ಪಿಎಂಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ದೀನೇಶ ತಂ.ಕಿಶನ ಚವ್ಹಾಣ ವಃ36 ಜಾಃ ಲಂಬಾಣಿ ಉಃ ಗೌಂಡಿಕೆಲಸ ಸಾಃ ಗಾಂಧಿ ನಗರ ತಾಂಡಾ ಯಾದಗಿರಿ ಅಂತಾ ತಿಳಿಸಿದ್ದು  ಸದರಿಯವನಿಗೆ ಚೆಕ್ ಮಾಡಲಾಗಿ ನಗದು ಹಣ 10,090/- ರೂ. ಮತ್ತು ಒಂದು ಮಟಕಾ ಚೀಟಿ ಅಂ.ಕಿ.00-00, ಒಂದು ಬಾಲ ಪೆನ್ ಅಂ.ಕಿ.00-00, ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಒಂದು ಕಾಗದದ ಪಾಕೆಟದಲ್ಲಿ ಹಾಕಿ ಕಟ್ಟಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡು  ಜಪ್ತಿ ಪಂಚನಾಮೆಯನ್ನು 5-15 ಪಿಎಂ ದಿಂದ 6-15 ಪಿಎಂ ದವರೆಗೆ ಮುಗಿಸಿ ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಯಾದಗಿರಿ ನಗರ ಪೊಲೀಸ್ ಠಾಣೆಗೆ 6-30 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ನನ್ನ ಜ್ಞಾಪನದೊಂದಿಗೆ ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಕ್ರಮ ಕೈಕೊಳ್ಳಲು ಸೂಚಿಸಿದ್ದು ಇರುತ್ತದೆ ನಂತರ ಸದರಿ ಪ್ರಕರಣ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪಿಸಿ-168 ರವರ ಮೂಲಕ ಪರವಾನಿಗೆ ಕುರಿತು ಲೇಟರ ಮೂಲಕ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯದಿಂದ 8-30 ಪಿಎಂಕ್ಕೆ ಪರವಾನಿಗೆಯನ್ನು ತಂದು ಹಾಜರಪಡಿಸಿದ್ದು ಪರವಾನಿಗೆ ಮೇಲಿಂದ ಠಾಣೆ ಗುನ್ನೆ ನಂ.30/2019 ಕಲಂ.78(3) ಕೆಪಿ ಆ್ಯಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 84/2019 ಕಲಂ 279,337,338 ಐ.ಪಿ.ಸಿ:- ದಿನಾಂಕ:28-03-2019 ರಂದು 2-30 ಪಿ..ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ರಾಮಣ್ಣ ತಂದೆ ಹಣಮಂತ ಕೀಲಾರಿ ವಯಾ:55 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ವೆಂಕಟಾಪೂರ ಇವರು ಠಾಣೆಗೆ ಬಂದು ಹಾಜರಾಗಿ ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ಹಿಗಿದ್ದು ನಿನ್ನೆ ದಿನಾಂಕ:27-03-2019 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ನನ್ನ ಮಗನಾದ ಯಲ್ಲಪ್ಪ ವಯಾ:27 ವರ್ಷ ಈತನು ರುಕ್ಮಾಪೂರ ಸಿಮಾಂತರ ನಮ್ಮ ಹೊಲಕ್ಕೆ ಹೋಗುವ ಕುರಿತು ಮೊಟಾರ ಸೈಕಲ್ ನಂಬರ ಕೆಎ-33 ಎಲ್-7440 ನೇದ್ದನ್ನು ನಡೆಸಿಕೊಂಡು ಬೈಪಾಸ ರಸ್ತೆಯ ಮುಖಾಂತರ ರುಕ್ಮಾಪೂರ ಕ್ರಾಸದ ಸ್ವಲ್ಪ ಹಿಂದುಗಡೆಯ ರಸ್ತೆಯ ಎಡ ಪಕ್ಕದಲ್ಲಿ ಹೋಗುತ್ತಿರುವಾಗ ಅದೆ ಸಮಯಕ್ಕೆ ಒಂದು ಕಾರ ನಂಬರ ಕೆಎ-36 ಎನ್-4682 ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದವನೆ ಮಗ ಯಲ್ಲಪ್ಪನ ಮೊಟಾರ ಸೈಕಲ್ಗೆ ಎದುರಿನಿಂದ ಡಿಕ್ಕಿ ಪಡಿಸಿದಾಗ ಮಗ ಯಲ್ಲಪ್ಪನು ಮೋಟಾರ ಸೈಕಲ್ ಸಮೇತ ಕೇಳಗೆ ಬಿದ್ದಿದ್ದು ಅವನ ಎಡಗಾಲಿನ ಮೊಳಕಾಲಿಗೆ ಭಾರಿಗಾಯ ಹಾಗೂ ಎಡಗಾಲ ಮತ್ತು ಬಲಗಾಲಿನ ಹಿಂಬಡಗಳಿಗೆ ತೆರಚಿದ ರಕ್ತಗಾಯವಾಗಿರುತ್ತವೆ. ಬೇಗ ಬಾ ಅಂತಾ ಅದೆ ರಸ್ತೆಯ ಮುಖಾಂತರ ನಡೆದುಕೊಂಡು ಹೋಗುತ್ತಿದ್ದ ನಮ್ಮ ಅಳಿಯನಾದ ಹಣಮಯ್ಯಾ ತಂದೆ ಚಂದಪ್ಪ ಬಿಸೆಟ್ಟಿ ಈತನು ಘಟನೆಯನ್ನು ಕಣ್ಣಾರೆ ಕಂಡು ನನಗೆ ಪೋನ ಮಾಡಿ ವಿಷಯ ತಿಳಿಸಿದಾಗ ನಾನು ಸ್ಥಳಕ್ಕೆ ಹೋಗಿ ಮಗ ಯಲ್ಲಪ್ಪನನ್ನು ನೋಡಲು ಮೇಲೆ ಹೇಳಿದಂತೆ ಅವನಿಗೆ ಗಾಯಗಳಾಗಿದ್ದನ್ನು ನೋಡಿದೆನು. ಅಪಘಾತ ಮಾಡಿದ ಕಾರ ಸ್ಥಳದಲ್ಲಿಯೆ ಅದರ ಚಾಲಕನ ಹೆಸರು ಜನಾರ್ಧನ ತಂದೆ ವೆಂಕಟೇಶಯ್ಯಾ ಛಲ್ಲಾ ಸಾ:ಕೌತಾಳ ಜಿ:ರಾಯಚೂರ ಅಂತಾ ಗೊತ್ತಾಯಿತು ಗಾಯಗೊಂಡ ಮಗ ಯಲ್ಲಪ್ಪನನ್ನು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಕರೆದುಕೊಂಡು ಸರಕಾರಿ ಆಸ್ಪತ್ರೆ ಸುರಪುರದಲ್ಲಿ ಸೇರಿಕೆ ಮಾಡಿ ಉಪಚಾರ ಮಾಡಿಸಿ ಅಲ್ಲಿಂದ  ಹೆಚ್ಚಿನ ಉಪಚಾರ ಕುರಿತು ಶಹಾಪೂರದ ಡವಳಗಿ ಆಸ್ಪತ್ರೆಗೆ ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿ ಇಂದು ಠಾಣೆಗೆ ಬಂದಿದ್ದು ಇರುತ್ತದೆ. ಸದರಿ ಅಪಘಾತ ಮಾಡಿದ ಕಾರ ಚಾಲಕನಾದ  ಜನಾರ್ಧನ ಈತನ ಮೇಲೆ  ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.  



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!