ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-03-2019

By blogger on ಗುರುವಾರ, ಮಾರ್ಚ್ 28, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-03-2019 

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 41/2019 ಕಲಂ:498(ಎ), 304(ಬಿ), 302 ಸಂ:34 ಐ.ಪಿ.ಸಿ & 3, 4 ಡಿ.ಪಿ. ಆಠ್ಟಿ್:- ದಿನಾಂಕ:27/03/2019 ರಂದು ಸಾಯಂಕಾಲ 7:00 ಗಂಟೆಗೆ ಫಿಯರ್ಾದಿ ಶ್ರೀ.ಬಸವರಾಜ ತಂದೆ ಕೀರಪ್ಪ ಪವಾರ್, ವಯ:28 ವರ್ಷ, ಜಾತಿ:ಲಮಾಣಿ, ಉ||ಅಥಿತಿ ಶಿಕ್ಷಕ, ಸಾ||ಯಲದೊಡ್ಡಿತಾಂಡಾ, ತಾ||ದೇವದುಗರ್ಾ, ಜಿ||ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದೇನೆಂದರೆ, ನನ್ನ ತಂಗಿಯಾದ ಲಲಿತಾ ಇವಳನ್ನು 2014 ನೇ ಸಾಲಿನಲ್ಲಿ ಬೀರನಕಲ್ ತಾಂಡಾದ ಶಂಕ್ರಪ್ಪ ತಂದೆ ಯಂಕಪ್ಪ ರಾಠೋಡ್ ಎಂಬಾತನಿಗೆ ಕೊಟ್ಟು ಮದುವೆಮಾಡಿದ್ದು, ಮದುವೆಯ ಕಾಲಕ್ಕೆ 5 ತೊಲೆ ಬಂಗಾರ, ಒಂದು ಮೋಟರ್ ಸೈಕಲ್, ನಗದು ಹಣ ರೂ.50000/- ವರದಕ್ಷಿಣೆ ಕೊಟ್ಟಿದ್ದು, ಮದುವೆಯ ನಂತರ ಅವರಿಬ್ಬರು ಗಂಡ ಹೆಂಡತಿ ಚೆನ್ನಾಗಿದ್ದು ಅವರಿಗೆ ಒಂದು ಗಂಡುಮಗು ಮತ್ತು ಇಬ್ಬರು ಹೆಣ್ಣುಮಕ್ಕಳು ಇರುತ್ತಾರೆ. ನನ್ನ ಮಾವ ಶಂಕ್ರಪ್ಪನು ತನ್ನ ತಂದೆತಾಯಿಯೊಂದಿಗೆ ಇರುತ್ತಿದ್ದು, ಇತ್ತೀಚೆಗೆ ಆತನು ಆತನ ತಂದೆಯಾದ ಯಂಕಪ್ಪ ತಾಯಿ ಮಘಗಮ್ಮ ಇವರು ನನ್ನ ತಂಗಿಗೆ ಇನ್ನು ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಾ ಆಕೆಗೆ ಹೊಡೆಬಡೆಮಾಡಿ ನಮ್ಮ ಹತ್ತಿರ ಹಣಕ್ಕಾಗಿ ಕಳುಹಿಸಿಕೊಟ್ಟಾಗ ನಾವು ನಮ್ಮ ಸಮಾಜದವರು ಕೂಡಿಕೊಂಡು ನನ್ನ ತಂಗಿಯ ಗಂಡ ಶಂಕ್ರಪ್ಪನಿಗೆ ಬುದ್ದಿವಾದ ಹೇಲಿ ಕಳುಹಿಸಿಕೊಟ್ಟಿದ್ದೆವು. ಆದರೂ ಸಹ ಆತನು ನನ್ನ ತಂಗಿಗೆ ಸರಿಯಾಗಿ ನೋಡಿಕೊಳ್ಳದೇ ದಿನಾಲೂ ಕಿರಿಕಿರಿಮಾಡಿ ಹೊಡೆಬಡೆ ಮಾಡುತ್ತಿದ್ದನ್ನು ನನ್ನ ತಂಗಿ ನನಗೆ ಫೋನ್ಮಾಡಿ ತಿಳಿಸಿದ್ದಳು. ಈ ದಿವಸ ದಿನಾಂಕ:27/03/2019 ರಂದು ಬೆಳಗ್ಗೆ 11:20 ಗಂಟೆಗೆ ನನ್ನ ತಂಗಿಯ ಗಂಡ ಶಂಕ್ರಪ್ಪನವರ ಫೋನಿನಿಂದ ಯಾರೋ ನನಗೆ ಫೋನ್ಮಾಡಿ ನಿನ್ನ ತಂಗಿ ಆಕೆಯ ಗಂಡ ಜಗಳಮಾಡಿಕೊಂಡಿದ್ದು, ಆ ಕಾಲಕ್ಕೆ ನಿನ್ನ ತಂಗಿಗೆ ದವಾಖಾನೆಗೆ ತಂದಿದ್ದು, ಇಲ್ಲಿ ಯಾದಗಿರಿ ದವಾಖಾನೆಯಲ್ಲಿ ನಿನ್ನ ತಂಗಿ ಸತ್ತಿದ್ದಾಳೆ ಅಂತ ಫೋನ್ಮಾಡಿ ಹೇಳಿದರು. ಆಗ ನಾನು ನನ್ನ ತಂದೆತಾಯಿ, ನಮ್ಮ ಸಂಬಂಧಿಕರೊಂದಿಗೆ ಯಾದಗಿರಿಗೆ ಬಂದು ನೋಡಲು ನನ್ನ ತಂಗಿ ಸತ್ತಿದ್ದು, ಆಕೆಯ ಪಕ್ಕೆಗೆ, ಕುತ್ತಿಗೆಗೆ, ಗೆಜ್ಜೆಗೆ ಪೆಟ್ಟುಗಳಾಗಿದ್ದು ಇತ್ತು. ನನ್ನ ತಂಗಿಯು ಈಗ 5 ತಿಂಗಳ ಗಭರ್ಿಣಿ ಇದ್ದು, ಆಕೆಗೆ ಆಕೆಯ ಗಂಡ, ಅತ್ತೆ, ಮಾವ ಕೂಡಿಕೊಂಡು ಹೆಚ್ಚಿನ ವರದಕ್ಷಿಣೆಗಾಗಿ ಕಿರಿಕಿರಿಮಾಡಿ ಹೊಡೆಬಡಿಮಾಡಿ ಸಾಯಿಸಿದ್ದು ಈ ಘಟನೆಯು ಈ ದಿವಸ ಬೆಳಗ್ಗೆ 7:30 ಗಂಟೆಗೆ ಜರುಗಿರಬಹುದು. ನಾನು ಈ ಬಗ್ಗೆ ನಮ್ಮ ಸಂಬಂಧಿಕರಿಗೆಲ್ಲಾ ಕೇಳಿಕೊಂಡು ಬಂದು ಈಗ ತಮ್ಮ ಹತ್ತಿರ ಈ ನನ್ನ ದೂರನ್ನು ನೀಡಿದ್ದು, ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ: 41/2019 ಕಲಂ:498(ಎ), 304(ಬಿ), 302 ಸಂಗಡ 34 ಐ.ಪಿ.ಸಿ ಮತ್ತು ಕಲಂ:3 , 4 ಡಿ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಯಾದಗಿರಿ ಗ್ರಾಮೀಣ  ಪೊಲೀಸ್ ಠಾಣೆ ಗುನ್ನೆ ನಂ:- 51/2019 ಕಲಂ 32, 34 ಕೆ.ಇ. ಆ್ಯಕ್ಟ:- ದಿನಾಂಕ 27/03/2019 ರಂದು 5-00 ಪಿ.ಎಮ್ ಕ್ಕೆ ಆರೋಪಿತನು ತನ್ನ ಮನೆಯ ದೊಡ್ಡಿಯಲ್ಲಿ ಅನದೀಕ್ರತವಾಗಿ ಮಧ್ಯದ ಬಿಯರ್ ಬಾಟಲಿಗಳು ಮತ್ತು ಪ್ರೇಶರ ಶೀಲ್ಡ ಪಾಕೇಟಗಳು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 1) 90 ಎಮ್.ಎಲ್ ದ 50 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು, ಒಂದು ಪಾಕೆಟಿಗೆ  30.32/- ರೂ ಯಂತೆ ಒಟ್ಟು  55 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಕಿಮ್ಮತ್ತು 1516/- ರೂ ಕಿಮ್ಮತ್ತಿನ ಮಧ್ಯದ ಬಾಟಲಿಗಳು ಮತ್ತು ಪಾಕೇಟಗಳು ಜಪ್ತಿ ಮಾಡಿಕೊಂಡಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 50/2019 ಕಲಂ 32, 34 ಕೆ.ಇ. ಆ್ಯಕ್ಟ:- ದಿನಾಂಕ 27/03/2019 ರಂದು 3-45 ಪಿ.ಎಮ್ ಕ್ಕೆ ಆರೋಪಿತನು ತನ್ನ ಮನೆಯ ದೊಡ್ಡಿಯಲ್ಲಿ ಅನದೀಕ್ರತವಾಗಿ ಮಧ್ಯದ ಬಿಯರ್ ಬಾಟಲಿಗಳು ಮತ್ತು ಪ್ರೇಶರ ಶೀಲ್ಡ ಪಾಕೇಟಗಳು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 1)650 ಎಮ್.ಎಲ್.ದ 10 ಕೆ.ಎಫ್. ಸ್ಟ್ರಾಂಗ ಬಿಯರ್ ಬಾಟಲಿಗಳು, ಒಂದು ಬಾಟಲಿಗೆ 130/ರೂ ಯಂತೆ 10 ಬಾಟಲಿಗಳ ಕಿಮ್ಮತ್ತು 1300/ರೂ ಮತ್ತು 2) 90 ಎಮ್.ಎಲ್ ದ 55 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು, ಒಂದು ಪಾಕೆಟಿಗೆ  30.32/- ರೂ ಯಂತೆ ಒಟ್ಟು  55 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಕಿಮ್ಮತ್ತು 1667.6/- ರೂ ಒಟ್ಟು 2976.6/ರೂ ಕಿಮ್ಮತ್ತಿನ ಮಧ್ಯದ ಬಾಟಲಿಗಳು ಮತ್ತು ಪಾಕೇಟಗಳು ಜಪ್ತಿ ಮಾಡಿಕೊಂಡಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 29/2019 ಕಲಂ.143.147.323.324.504.506.ಸಂ.149 ಐಪಿಸಿ:-ದಿನಾಂಕ 27/03/2019 ರಂದು 7-00 ಪಿಎಂಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಗಾಯಾಳು ಎಂ.ಎಲ್.ಸಿ ಮಾಹಿತಿ ಮೇರೆಗೆ ಆಸ್ಪತ್ರೆಗೆ 7-15 ಪಿಎಂಕ್ಕೆ ಬೇಟಿ ನೀಡಿ ಉಪಚಾರ ಹೊಂದುತ್ತಿದ್ದ ಗಾಯಾಳು ಪಿರ್ಯಾದಿ ಶ್ರೀ  ದೇವಪ್ಪ ತಂ.ಧರ್ಮಣ್ಣ ಚವ್ಹಾಣ ವಃ40 ಜಾಃ ಲಂಬಾಣಿ ಉಃ ಒಕ್ಕಲುತನ ಸಾಃ ಬೀರನಕಲ್ ತಾಂಡ ತಾಃ ವಡಗೇರಾ ಜಿಃಯಾದಗಿರಿ ಈತನ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾನು ಒಕ್ಕಲುತನ ಮಾಡಿಕೊಂಡು ಉಪಜೀವನ ಸಾಗಿಸುತ್ತೇನೆ. ಹೀಗಿದ್ದು ಇಂದು ದಿನಾಂಕ.27/03/2019 ರಂದು ನಮ್ಮ ತಾಂಡಾದ ಲಲೀತಾಬಾಯಿ ಗಂ. ಶಂಕರ ರಾಠೋಡ ಎಂಬುವವಳು ಬೆಳಿಗ್ಗೆ ವಿಷಸೇವನೆ ಮಾಡಿದ್ದಳು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದರು ನಂತರ ಅವಳು ಉಪಚಾರ ಹೊಂದುತ್ತ ಮೃತಪಟ್ಟಿರುತ್ತಾಳೆ ಅಂತಾ ನನಗೆ ಗೊತ್ತಾಗಿ ನಾನು ಆಸ್ಪತ್ರೆಗೆ ಸಾಯಂಕಾಲ 4-30 ಗಂಟೆ ಸುಮಾರಿಗೆ ಹೋದಾಗ ಅಲ್ಲಿ ಮೃತಳ ಕಡೆಯವರಾದ ಎಲ್.ದೊಡ್ಡಿ ತಾಂಡಾದವರು ಇದ್ದರು ಆಗ ನಾನು ಅವರಿಗೆ ಏನಾಯ್ತು ಅಂತಾ ವಿಚಾರ ಮಾಡುತ್ತಿರುವಾಗ ಮೃತಳ ಕಡೆಯವರಾದ ಎಲ್.ದೊಡ್ಡಿ ತಾಂಡಾ ದೇವದುರ್ಗದವರಾದ 1) ಬಸವರಾಜ ತಂ. ರಾಮಣ್ಣ ಪವಾರ 2) ಕೇಶಪ್ಪ ತಂ. ಬೀಮಲಪ್ಪ ಪವಾರ 3)ಬಸವರಾಜ ತಂ. ಕೀರಪ್ಪ ಪವಾರ 4) ಅಮೀನಾ ತಂ.ಕೀರಪ್ಪ ಪವಾರ 5) ಕುಮಾರ ತಂ. ಕೀರಪ್ಪ ಪವಾರ 6) ಸಂಗಪ್ಪ ತಂ. ಠಾಕ್ರಪ್ಪ ರಾಠೋಡ 7) ದೇವಿಂದ್ರ ತಂ. ಮುಕ್ಕಣ್ಣ ರಾಠೋಡ 8) ತಿಪ್ಪಣ್ಣ ತಂ. ರೂಪ್ಲಪ್ಪ ಪವಾರ 9) ಬಸವರಾಜ ತಂ.ಕೇಮಣ್ಣ ರಾಠೋಡ 10) ಖುಬ್ಯಾ ತಂ. ಲಾಲಪ್ಪ ಪವಾರ 11) ಮಾನಪ್ಪ ತಂ. ಭೀಮಣ್ಣ ಪವಾರ 12) ಭೀಮಾ ತಂ. ಖೂಬಣ್ಣ ರಾಠೋಡ 13) ಥಾಪಲಿಬಾಯಿ ಗಂ. ಕೀರಪ್ಪ ಪವಾರ 14) ಲಲೀತಾ ಗಂ. ಬಸವರಾಜ ಪವಾರ 15)ಹೀರಿಬಾಯಿ ಗಂ. ಸೋಮಣ್ಣ ರಾಠೋಡ 16) ಶಿವಣ್ಣ ತಂ. ಚನ್ನಪ್ಪ ಪವಾರ ಇವರೆಲ್ಲರೂ ಗುಂಪು ಕಟ್ಟಿಕೊಂಡು ಬಂದವರೇ ನನಗೆ ಏ ಬೋಸಡಿ ಮಗನೇ ಏನು ನೋಡಾಕ ಬಂದಿದಿ ನಮ್ಮ ಹೆಣ್ಣು ಮಗಳು ಜೀವಂತ ಇದ್ದಾಗ ನೋಡಾಕ ಬರಲಿಲ್ಲಾ ಸತ್ತಾಗ ನೋಡಾಕ ಬರುತ್ತಿ ಅಂತಾ ಅಂದಾಗ ನಾನು ಅವರಿಗೆ ನಮಗೆನು ಗೊತ್ತಿಲ್ಲಾ ನಮ್ಮ ತಾಂಡಾದ ಹೆಣ್ಣು ಮಗಳು ಸತ್ತಿರುತ್ತಾಳೆ ಅಂತಾ ಸುದ್ದಿ ಗೊತ್ತಾಗಿ ಬಂದಿದ್ದೆನೆ ಅಂತಾ ಅಂದಾಗ ಹೆಣ ನೋಡಾಕ ಬರುತ್ತಿ ಚೋದು ಸೂಳಿ ಮಗನೇ ನಿಮ್ಮ ತಾಂಡಾದವರಿಗೆ ಬಹಳ ಸೊಕ್ಕು ಅದಾ ಎಲ್ಲರೂ ಎಲ್ಲಿ ಹೋಗ್ಯಾರೋ ಸೂಳಿ ಮಗನೇ ಅಂತಾ ಅಂದವರೆ ಅವರಲ್ಲಿ ಬಸವರಾಜ ತಂ. ರಾಮಣ್ಣ ಈತನು ಕಲ್ಲಿನಿಂದ ನನ್ನ ಎಡಕಿವಿ ಹಿಂದೆ ಹೊಡೆದು ಗಾಯ ಮಾಡಿದ್ದು, ಕೇಶಪ್ಪ ತಂ.ಭಿಮಲಪ್ಪ ಈತನು ಕಾಲಿನಿಂದ ನನ್ನ ಬೆನ್ನಿಗೆ ಒದ್ದನು. ಬಸವರಾಜ ತಂ. ಕೀರಪ್ಪ ಈತನು ಕಲ್ಲಿನಿಂದ ಎದೆಗೆ ಹೊಡೆದನು. ಅಮೀನಾ ತಂ.ಕೀರಪ್ಪ, ಕುಮಾರ ತಂ. ಕೀರಪ್ಪ, ಸಂಗಪ್ಪ ತಂ. ಠಾಕ್ರಪ್ಪ ಇವರು ಏ ಬೋಸಡಿ ಮಗನಿಗೆ ಜೀವ ಸಹಿತ ಬಿಡಬಾರದು ಅಂತಾ ಕೈಯಿಂದ ಹೊಡೆ ಬಡೆ ಮಾಡಿದರು. ದೇವಿಂದ್ರ ತಂ.ಮುಕ್ಕಣ್ಣ, ಈತನು ಕುತ್ತಿಗೆ ಹಿಡಿದು ದಬ್ಬಿದನು. ತಿಪ್ಪಣ್ಣ ತಂ.ರೂಪ್ಲಪ್ಪ ಈತನು ಕೈಮುಷ್ಟಿ ಮಾಡಿ ಎದೆಗೆ ಗುದ್ದಿದನು. ಬಸವರಾಜ ತಂ. ಕೇಮಣ್ಣ, ಖುಬ್ಯಾ ತಂ. ಲಾಲಪ್ಪ ಇವರು ನನಗೆ ನೆಲಕ್ಕೆ ಹಾಕಿ ಮನಬಂದಂತೆ ಕಾಲಿನಿಂದ ಒದ್ದರು. ಮಾನಪ್ಪ ತಂ.ಭಿಮಣ್ಣ, ಭಿಮಾ ತಂ.ಖುಬಣ್ಣ ಇವರು ನನ್ನ ಬಲಕಾಲಿನ ಮೊಳಕಾಲಿಗೆ ಒದ್ದು ಒಳಪೆಟ್ಟು ಮಾಡಿರುತ್ತಾರೆ. ಥಾಪಲಿಬಾಯಿ ಗಂ. ಕೀರಪ್ಪ, ಲಲೀತಾ ಗಂ. ಬಸವರಾಜ, ಹೀರಿಬಾಯಿ ಗಂ. ಸೋಮಣ್ಣ ಇವರು ನನಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದರು, ಶಿವಣ್ಣ ತಂ. ಚನ್ನಪ್ಪ ಈತನು ಈ ಬೋಸಡಿಮಗನಿಗೆ ಸೋಕ್ಕು ಬಹಳ ಇದೆ ಸೊಕ್ಕು ಮುರಿಯಿರಿ ಅಂತಾ ಬೈದನು. ಆಗ ನಾನು ಚೀರಾಡುತ್ತಿರುವಾಗ ನಮ್ಮ ತಾಂಡಾದ ರವಿ ತಂ. ತೇಜಪ್ಪ ಚವ್ಹಾಣ, ತಿಪ್ಪಣ್ಣ ತಂ. ಕೇಶಪ್ಪ ರಾಠೋಡ, ಚನ್ನಪ್ಪ ತಂ.ಸುಬ್ಬಣ್ಣ ರಾಠೋಡ ಇವರು  ಬಂದು ಜಗಳಾ ಬಿಡಿಸಿದ್ದು ಇರುತ್ತದೆ. ಸದರಿ ಘಟನೆ ಆಸ್ಪತ್ರೆಯ ಮುಂದುಗಡೆ ಜರುಗಿದ್ದು ಇರುತ್ತದೆ. ನಂತರ ನನಗೆ ಪೆಟ್ಟಾಗಿದ್ದರಿಂದ ನಮ್ಮ ತಾಂಡಾದವರು ನನಗೆ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದರು. ಕಾರಣ ನನಗೆ ಗುಂಪು ಕಟ್ಟಿಕೊಂಡು ಬಂದು ಹೊಡೆ ಬಡೆ ಮಾಡಿ ಗಾಯಗೊಳಿಸಿದ ಈ ಮೆಲಿನವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ  ಕೊಟ್ಟ ಹೇಳೀಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 8-30 ಪಿಎಂ ಕ್ಕೆ ಬಂದು ಪಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.29/2019 ಕಲಂ.143,147,323,324,504,506,ಸಂ.149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!