ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 27-03-2019

By blogger on ಬುಧವಾರ, ಮಾರ್ಚ್ 27, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 27-03-2019 

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 39/2019 ಕಲಂ: 279,304 (ಎ) ಐಪಿಸಿ:-ದಿನಾಂಕ: 26/03/2019 ರಂದು 4 ಪಿಎಮ್ ಕ್ಕೆ ಶ್ರೀ ಗಂಗಪ್ಪ ತಂದೆ ರಾಮಣ್ಣ ಸಿಂಗ್ರಿ, ವ:46, ಜಾ:ಮಾದಿಗ, ಉ:ಒಕ್ಕಲುತನ ಸಾ:ಗಬ್ಬೂರು ತಾ:ದೇವದುರ್ಗ ಜಿ:ರಾಯಚೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ದಿನಾಂಕ: 03/02/2019 ರಂದು ಯಾದಗಿರಿಯಲ್ಲಿ ನಮ್ಮ ಅಣ್ಣ ತಿಪ್ಪಣ್ಣ ತಂದೆ ದುರುಗಪ್ಪ ಸಿಂಗ್ರಿ ಈತನ ಮಗಳಾದ ಉಮಾ @ ಉಮಾದೇವಿ ತಂದೆ ತಿಪ್ಪಣ್ಣ ಸಿಂಗ್ರಿ ಇವಳ ಟಿ.ಇ.ಟಿ ಪರೀಕ್ಷೆ ಇದ್ದುದ್ದರಿಂದ ಅವರ ದೊಡ್ಡಮ್ಮನ ಮಗನಾದ ಜಿಂದಪ್ಪ ತಂದೆ ಹನುಮಂತ ಶಾವಣಿ ಸಾ:ಹೊಸಪೇಟೆ ತಾ:ಜಿ: ರಾಯಚೂರು ಈತನ ಹಿಂದೆ ಮೋಟರ್ ಸೈಕಲ್ ನಂ. ಕೆಎ 36 ಇಎಸ್ 0309 ನೇದ್ದರ ಮೇಲೆ ಬೆಳಗ್ಗೆ ಯಾದಗಿರಿಗೆ ಹೋದರು. ಸ್ವಲ್ಪ ಹೊತ್ತು ಆದ ನಂತರ ಬೆಳಗ್ಗೆ 8-30 ಗಂಟೆ ಸುಮಾರಿಗೆ ನಮ್ಮೂರು ರಾಜಪ್ಪ ತಂದೆ ಹುಲಗಪ್ಪ ಸಿಂಗ್ರಿ ಈತನು ನನಗೆ ಫೊನ ಮಾಡಿ ಹೇಳಿದ್ದೇನಂದರೆ ನಾನು ಕೆಲಸದ ಪ್ರಯುಕ್ತ ಯಾದಗಿರಿಗೆ ಹೋಗುತ್ತಿದ್ದೇನು. ನನ್ನ ಮುಂದುಗಡೆ ನಿಮ್ಮ ಅಣ್ಣನ ಮಗಳಾದ ಉಮಾ @ ಉಮಾದೇವಿ ಮತ್ತು ಅವರ ದೊಡ್ಡಮ್ಮನ ಮಗ ಜಿಂದಪ್ಪ ಇಬ್ಬರೂ ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದು, ಯಾದಗಿರಿ-ವಡಗೇರಾ ಮೇನ ರೋಡ ಹಾಲಗೇರಾ ಬಸಯ್ಯ ತಾತನ ಶಾಲೆ ಹತ್ತಿರ 8 ಎಎಮ್ ಸುಮಾರಿಗೆ ನನ್ನ ಮುಂದುಗಡೆ ಜಿಂದಪ್ಪನು ಸದರಿ ಮೋಟರ್ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯಲ್ಲಿಯ ರೋಡ ಹಂಪ್ಸನ್ನು ಒಮ್ಮಲೆ ಎಗರಿಸಿದಾಗ ಹಿಂದುಗಡೆ ಕುಳಿತ ಉಮಾ @ ಉಮಾದೇವಿ ಪುಟಿದು ರೋಡಿನ ಮೇಲೆ ಬಿದ್ದು ತೆಲೆ ಹಿಂಭಾಗ ಭಾರಿ ರಕ್ತಗಾಯವಾಗಿ ರಕ್ತ ಸೋರಲಾರಂಭಿಸಿತ್ತು, ಉಪಚಾರ ಕುರಿತು ನಾನು ಮತ್ತು ಜಿಂದಪ್ಪ ಇಬ್ಬರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ತೋರಿಸಿದರೆ ಕೂಡಲೇ ಬೇರೆ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಒಯ್ಯುವಂತೆ ಹೇಳಿರುತ್ತಾರೆ ಅದಕ್ಕೆ ರಾಯಚೂರು ರೀಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದನು. ಆಗ ನಾನು ಈ ವಿಷಯವನ್ನು ಉಮಾ @ ಉಮಾದೇವಿ ಇವಳ  ತಂದೆ-ತಾಯಿಗೆ ತಿಳಿಸಿ ನಾನು ಮತ್ತು ಅವರು ಕೂಡಿ ರಾಯಚೂರಿಗೆ ಹೊರಟೆವು. ದಾರಿಯಲ್ಲಿದ್ದಾಗ ಮತ್ತೆ ರಾಜಪ್ಪನು ನನಗೆ ಫೋನ ಮಾಡಿ ರಾಯಚೂರು ರೀಮ್ಸ್ ಆಸ್ಪತ್ರೆಯಲ್ಲಿ ಕೂಡಾ ಪೆಷೆಂಟಿಗೆ ಹಿಡಿಯುತ್ತಿಲ್ಲ ಬೆಂಗಳೂರು/ಹೈದ್ರಾಬಾದಕ್ಕೆ ಕರೆದುಕೊಂಡು ಹೊಗಲು ಹೇಳುತ್ತಿದ್ದಾರೆ ಅದಕ್ಕೆ ಅಂಬ್ಯೂಲೇನ್ಸದಲ್ಲಿ ಬೆಂಗಳೂರು ನಿಮ್ಹಾನ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ನೀವು ಅಲ್ಲಿಗೆ ಬಂದು ಬಿಡಿ ಎಂದು ಹೇಳಿದನು. ಆಗ ನಾವು ಕೂಡಾ ಬೆಂಗಳೂರಿಗೆ ಹೊರಟೆವು. ಬೆಂಗಳೂರಿಗೆ ಹೋಗಿ ನಿಮ್ಹಾನ್ಸ ಆಸ್ಪತ್ರೆಯಲ್ಲಿದ್ದ ನಮ್ಮ ಮಗಳು ಉಮಾ @ ಉಮಾದೇವಿ ಇವಳಿಗೆ ನೋಡಲಾಗಿ ಮೋಟರ್ ಸೈಕಲ್ ಮೇಲಿನಿಂದ ಬಿದ್ದು, ತೆಲೆ ಹಿಂಭಾಗ ಭಾರಿ ರಕ್ತಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಉಪಚಾರದಲ್ಲಿದ್ದಳು. ಯಾದಗಿರಿ/ರಾಯಚೂರು ರೀಮ್ಸ್ ಆಸ್ಪತ್ರೆಯಿಂದ ಎಮ್.ಎಲ್.ಸಿ ಆಗಿ ಅದರ ಮೇಲೆ ಪೊಲೀಸ್ ಕೇಸ ಆಗಿರಬಹುದು ಎಂದು ತಿಳಿದು, ನಾವು ನಮ್ಮ ಮಗಳಿಗೆ ಉಪಚಾರ ಮಾಡಿಸುತ್ತಾ ಇದ್ದೆವು. ಹೀಗಿದ್ದು, ನಿಮ್ಹಾನ್ಸ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ನಮ್ಮ ಅಣ್ಣನ ಮಗಳಾದ ಉಮಾ @ ಉಮಾದೇವಿ ತಂದೆ ತಿಪ್ಪಣ್ಣ ಸಿಂಗ್ರಿ ವ:22 ವರ್ಷ ಇವಳು ನಿನ್ನೆ ದಿನಾಂಕ: 25/03/2019 ರಂದು ರಾತ್ರಿ 11-45 ಗಂಟೆ ಸುಮಾರಿಗೆ ಅಪಘಾತದಲ್ಲಿ ಆದ ಗಾಯಗಳ ಬಾಧೆಯಿಂದ ಉಪಚಾರ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಎಂದು ಆಸ್ಪತ್ರೆಯಲ್ಲಿದ್ದ ಮೃತಳ ದೊಡ್ಡಮ್ಮನ ವಿರೇಶ ತಂದೆ ಈರಪ್ಪ ಕಲ್ಮಲ ಈತನು ನನಗೆ ಫೋನ ಮಾಡಿ ಹೇಳಿದನು. ನಂತರ ನಮಗೆ ಗೊತ್ತಾಗಿದ್ದೆನಂದರೆ ಯಾದಗಿರಿ/ರಾಯಚೂರು ರೀಮ್ಸ್ ಆಸ್ಪತ್ರೆಗಳಿಂದ ಎಮ್.ಎಲ್.ಸಿ ಆಗಿಲ್ಲದ ಕಾರಣ ಅಪಘಾತ ಆದ ಬಗ್ಗೆ ವಡಗೇರಾ ಠಾಣೆಯಲ್ಲಿ ಪೊಲೀಸ್ ಕೇಸ ಆಗಿರುವುದಿಲ್ಲವೆಂದು ಗೊತ್ತಾಗಿ ಇಂದು ವಡಗೇರಾ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೇವೆ. ಕಾರಣ ಮೋಟರ್ ಸೈಕಲ್ ಸವಾರ ಜಿಂದಪ್ಪ ತಂದೆ ಹನುಮಂತ ಶಾವಣಿ ಸಾ:ಹೊಸಪೆಟೆ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 39/2019 ಕಲಂ: 279,304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 57/2019 ಕಲಂ: 143,147,148,448,323,324,307,504,506 ಸಂಗಡ 149 ಐಪಿಸಿ:-ದಿನಾಂಕ 26.03.2019 ರಂದು 11.30 ಎ.ಎಮ್.ಕ್ಕೆ ಗಂಟೆಗೆ ಸರಕಾರಿ ಆಸ್ಪತ್ರೆ ಗುರುಮಠಕಲದಿಂದ ಎಮ್.ಎಲ್.ಸಿ ಇದೆ ಅಂತಾ ಫೋನ್ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಆಸ್ಪತ್ರೆ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುದಾರರ ಪೈಕಿ ಭೀಮಣ್ಣ ತಂದೆ ಸಣ್ಣ ಮಹಾದೇವಪ್ಪ ಭಂಗಿ ವ||55 ವರ್ಷ ಜಾ||ಉಪ್ಪಾರ ಉ||ಒಕ್ಕಲುತನ ಸಾ|| ಗೋಪಾಳಪೂರ ತಾ||ಗುರುಮಠಕಲ್ ಜಿ||ಯಾದಗಿರಿ ಈತನಿಗೆ ವಿಚಾರಣೆ ಮಾಡಿ ಹೇಳಿಕೆ ಪಡೆದಿದ್ದು, ಸದರಿಯವನು ಹೇಳಿಕೆ ಸಾರಾಂಶವೇನೆಂದರೆ, ಈಗ 6 ತಿಂಗಳ ಹಿಂದೆ ನನ್ನ ತಮ್ಮ ಬೆಂಗಳೂರಿಗೆ ದುಡಿಯಲು ಹೋಗಿದ್ದು, ನಮ್ಮ  ಗ್ರಾಮದ ಚಂದ್ರಶೇಖರ ತಂದೆ ಕಿಷ್ಟಪ್ಪ ಹೊಸಳ್ಳಿ ಇವರಿಗೆ ಸದರಿ ಮನೆಯಲ್ಲಿ ಇರಲು ಬಿಟ್ಟಿರುತ್ತಾನೆ. ಸದ್ಯ ಚಂದ್ರಶೇಖರ ಈತನು ಸದರಿ ಮನೆಯ ಜಾಗೆಯು ತಮಗೆ ಸೇರಿದ್ದು ಅಂತ ವಾದ ಮಾಡುತ್ತಿದ್ದು ಈ ವಿಷಯದಲ್ಲಿ ಊರಲ್ಲಿ 2-3 ಬಾರಿ ನ್ಯಾಯ ಪಂಚಾಯತಿ ಆಗಿರುತ್ತದೆ. ಈ ಮೊದಲು ನಮಗೆ ಮತ್ತು ಚಂದ್ರಶೇಖರ ಇವರಿಗೆ ವಿಷಯಕ್ಕೆ ಸಂಬಂದಿಸಿದಂತೆ ಜಗಳ ಇರುತ್ತದೆ. ಅದೇ ವೈಶಮ್ಯದಿಂದ ನಮ್ಮ ಕುಟುಂಬದವರ ಜೊತೆಗೆ ಹಾಗೂ ಆತನ ಕುಟುಂಬದವರು ನಮಗೆ ನೋಡಿದರೆ ವಿನಾ ಕಾರಣ ಹಲ್ಲು ಮಸಿದು ಜಗಳಕ್ಕೆ ಬರುತ್ತಿದ್ದರು. ಹೀಗಿದ್ದು ದಿನಾಂಕ ಇಂದು ದಿನಾಂಕ. 26.03.2019 ರಂದು ಬೆಳಿಗ್ಗೆ 9:00 ರಿಂದ 10.00 ಗಂಟೆ ಸುಮಾರಿಗೆ ನನ್ನ ತಮ್ಮ ಸಾಬಣ್ಣ ಈತನ ಮನೆಗೆ ಹಾಕಿದ ಪತ್ರಾಸ ಬೀಳಿಸಿ ತಮ್ಮ ಹೆಸರಿಗೆ ಮಾಡಿಕೊಳ್ಳುವ ವಿಷಯದಲ್ಲಿ ನಮ್ಮೊಂದಿಗೆ ವೈಶ್ಯಮ್ಯ ಕಟ್ಟಿಕೊಂಡು ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಮೇಲೆ ಹೇಳಿದ ಜನರು ಗುಂಪು ಕಟ್ಟಿಕೊಂಡು,ಕೈಯಲ್ಲಿ ಕೊಡಲಿ,ಬಡಿಗೆ,ಹಿಡಿದುಕೊಂಡು ಬಂದು, ನಮ್ಮ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ, ನನ್ನ ತಲೆಗೆ ಕೊಡಲಿಯಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ, ನನ್ನ ಮಗನಿಗೆ ಬಡಿಗೆಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ, ನನ್ನ ತಮ್ಮ ಬಸಪ್ಪನಿಗೆ ಕಲ್ಲಿನಿಂದ ಕೈಯಿಂದ ಹೊಡೆಬಡೆ ಮಾಡಿದ, ನಮಗೆ ಖಲಾಸ ಮಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕುೆ ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಇಂದು ದಿನಾಂಕ. 26.03.2019 ರಂದು ಮಧ್ಯಾನ್ಹ 01-00 ಗಂಟೆಗೆ ಗುರುಮಠಕಲ ಪೊಲೀಸ್ ಠಾಣೆ ಗುನ್ನೆ ನಂ: 57/2019 ಕಲಂ: 143,147,148,448,323,324,307,504,506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 58/2019 ಕಲಂ: 143,147,148,448,323,324,307,354,504,506 ಸಂಗಡ 149ಐಪಿಸಿ:-ದಿನಾಂಕ 26.03.2019 ರಂದು 11.30 ಎ.ಎಮ್.ಕ್ಕೆ ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿದಿಂದ ಎಮ್.ಎಲ್.ಸಿ ಇದೆ ಅಂತಾ ಫೋನ್ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಜಿಲ್ಲಾ ಸರಕಾರಿ ಆಸ್ಪತ್ರೆ್ರೆ ಯಾದಗಿರಿಗೆೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುದಾರರ ಪೈಕಿ ಚಂದ್ರಶೇಖರ್ ತಂದೆ ಕೃಷ್ಣಪ್ಪಾ ಹೊಸಳ್ಳಿ ವಯ:24 ವರ್ಷ, ಜಾ; ಕಬ್ಬಲಿಗೇರ ಸಾ|| ಗೋಪಾಳಪೂರ ತಾ||ಗುರುಮಠಕಲ್ ಜಿ||ಯಾದಗಿರಿ ಈತನಿಗೆ ವಿಚಾರಣೆ ಮಾಡಲಾಗಿ ಸದರಿಯವನು ಒಂದು ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ನೀಡಿದ್ದು ಸಾರಾಂಶವೇನೆಂದರೆ,  ದಿ:26/03/2019 ರಂಧು ಮುಂಜಾನೆ 09:30 ಎಎಮ್ ಸುಮಾರಿಗೆ ನಾವೆಲ್ಲರೂ ಸ್ವಚ್ಚತೆ ಮಾಡುವಾಗ ಏಕಾ-ಏಕಿ ನಮ್ಮ ಮನೆಯ ಪಕ್ಕದವರಾದ 1)ಭೀಮಣ್ಣ ತಂದೆ ಮಾಹಾದೇವಪ್ಪ, 2) ಬಸಪ್ಪ ತಂದೆ ಮಹಾದೇವಪ್ಪ 3) ಗೋವಿಂದ ತಂದೆೆ ಭೀಮಣ್ಣ 4) ಮಲ್ಲಪ್ಪ ತಂಧೆ ಭೀಮಣ್ಣ 5) ಮಾನಮ್ಮಾ ಗಂಡ ಶರಣಪ್ಪ 6)ಭೀಮವ್ವ ತಂಧೆ ಭೀಮಣ್ಣ 7) ಸಾಬಣ್ಣ ತಂದೆ ಭೀಮಣ್ಣ 8) ಸಾಬಣ್ಣ ತಂದೆ ಮಹಾದೇವಪ್ಪ ಇವರೆಲ್ಲರೂ ಕೂಡಿಕಲ್ಲುಗಳು, ರಾಡುಗಳು ಕಟ್ಟಿಗೆಗಳು ಹಿಡಿದುಕೊಂಡು ಕೂಗಾಡುತ್ತಾ ಭೋಸಡಿ ಮಕ್ಕಳೆ ನೀವು ನಮ್ಮ ಮನೆಯ ಮುಂದಿನ ಜಾಗ ಯಾಕೆ ಸ್ವಚ್ಚತೆ ಮಾಡುತ್ತಿದ್ದಿರಿ, ನಿಮಗೆ ಬಹಳ ಸೊಕ್ಕಬಂದಿದೆ, ನಿಮ್ಮನ್ನು ಇವತ್ತ ಬಿಡುವದಿಲ್ಲ, ಕೊಂದೆ ಬಿಡುತ್ತೇವೆ, ಅಂತಾ ಅಂದವರೆ ಆ ಪೈಕಿ ಭೀಮಣ್ಣನು ರಾಡಿನಿಂದ ನಾರಾಯಣನ ನಡು ತಲೆಗೆ ಜೋರಾಗಿ ಹೊಡೆದು ಭಾರಿ ರಕ್ತ ಗಾಯಮಾಡಿದರು, ಆಗ ನಾರಾಯಣ ಸತ್ತನೆಪೋ ಅಂತಾ ನೆಲಕ್ಕೆ ಬಿದ್ದಾಗ ಬಸ್ಸಪ್ಪಾ & ಗೋವಿಂದ ಇಬ್ಬರು ತಮ್ಮ ಕೈಯಲ್ಲಿದ್ದ ಬಡಿಗೆಗಳಿಂದ ಎರಡಗೈ ಕೈ ಭುಜಕ್ಕೆ ಮತ್ತು ಕಾಲುಗಳಿಗೆ  ಹೊಡೆದು ಭಾರಿ ಗುಪ್ತಗಾಯ ಮಾಡಿದನು, ಆಗ ನಾರಾಯಣನ ಹೆಂಡತಿ ಲಕ್ಷ್ಮೀ ನನ್ನ ಗಂಡ ಸತ್ತನಪೋ ಬಿಡಿರಿ ಎಂದು ಚಿರಾಡಿ ಬಿಡಿಸಲಿಕ್ಕೆ ಹೋದಾಗ ಆಕೆಗೆ ಭೀಮಣ್ಣ, ಬಸಪ್ಪಾ ಮತ್ತು ಗೋವಿಂದ ಈ ಮೂವರು ಜನರು ಕೂಡಿ ಲಕ್ಷ್ಮೀಗೆ ಈ ಸೂಳೆಗೆ ಬಿಡ ಬ್ಯಾಡ್ರಿ ಇವಳಿಗೂ ಕೂಡ ಖಲಾಸ್ ಮಾಡಿರಿ ಅಂತಾ ಆಕೆಗೆ ಜೋರಾಗಿ ನುಕಿಸಿಕೊಟ್ಟಾಗ ಆಲ್ಲಿ ಇದ್ದ ಮಾನಮ್ಮಾ ಮತ್ತು ಭೀಮವ್ವ ಇಬ್ಬರು ಲಕ್ಚ್ಮೀಗೆ ಕೊದಲು ಹಿಡಿದು ಎಳೆದಾಡಿ ಕೊರಳಲ್ಲಿಯ ತಾಳಿ ಹಿಡಿದು ಜಗ್ಗಾಡಿ ಕಿತ್ತಿಕೊಂಡು ಓಡಿ ಹೋದರು, ಅಷ್ಟರಲ್ಲಿ ಮಾರೆಪ್ಪ ಮತ್ತು ನಾನು ಇಬ್ಬರು ಕೂಡಿ ಬಿಡಿಸಲು  ಅಡ್ಡ ಹೋದಾಗ ಮಾರೆಪ್ಪನಿಗೆ ಭೀಮಣ್ಣನು ರಾಡಿನಿಂದ ತಲೆಗೆ ಹೊಡೆಯಲು ಬಂದಾಗ ಆ ಏಟು ತಲೆಗೆ ಬೀಳುವ ಬದಲು ನಾನು ಕೈ ಅಡ್ಡ ಹಿಡಿದಾಗ ನನ್ನ ಎಡಗೈ ತೋರು ಬೆರಳಿಗೆ ಬಡಿದು ರಕ್ತಗಾಯ ಆಗಿ ಅಲ್ಲಿಯೇ ಸತ್ತು ಹೋಗುತ್ತಿದ್ದೆ, ಆಗ ನಾವೆಲ್ಲರೂ ಚೀರಾಡುವಾಗ ಹುಸೇನಿ ಇವನು ಬಿಡಿಸಲು ಬಂದಾಗ ಅವನಿಗೆ ಮಲ್ಲಪ್ಪ ತಂಧೆ ಭೀಮಣ್ಣ, ಸಾಬಣ್ಣ ತಂದೆ ಮಹಾದೇವಪ್ಪ, ಸಾಬಣ್ಣ ತಂದೆ ಭೀಮಪ್ಪಾ ಎಲ್ಲರೂ ಭಂಗಿಯವರೂ ಕೂಡಿ ಇವರೆಲ್ಲರೂ ಕೂಡಿ ಈ ಮಕ್ಕಳಿಗೆ ಬಿಡಬಾರದು ಅಂತಾ ಬಡಿಗೆಗಳಿಂದ ನಮಗೆ ಹೊಡೆದು ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ನೆಲಕ್ಕೆ ಹಾಕಿ ಕಾಲಿನಿಂದ ಒದ್ದರು, ಆಗ ನಮ್ಮ ತಾಯಿ ಸಾಬಮ್ಮಳು ಅಳುತ್ತಾ ಬಿಡಿಸಲು ಬಂದಾಗ ಆಕೆಗೆ ಭೀಮಣ್ಣನು ಕಲ್ಲಿಂದ ಬಿಸಿ ಹೊಡೆದಾಗ ಆ ಏಟು ಮೊಳಕೈಗೆ ಬಡಿದು ಭಾರಿ ರಕ್ತಗಾಂ್ತಾ ಆಗಿರುತ್ತದೆ. ಕಾರಣ ನಮಗೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ಸೂಕ್ತ ರಕ್ಷಣೆ ನೀಡಲು ವಿನಂತಿೆ ಅಂತಾ ನೀಡಿದ ಅಜರ್ಿಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು ಅಜರ್ಿ ಸಾರಾಂಶದ ಮೇಲಿಂದ ಇಂದು ದಿನಾಂಕ. 26.03.2019 ರಂದು ಸಾಯಂಕಾಲ 02-30 ಗಂಟೆಗೆ ಗುರುಮಠಕಲ ಪೊಲೀಸ್ ಠಾಣೆ ಗುನ್ನೆ ನಂ: 58/2019 ಕಲಂ: 143,147,148,448,323,324,307,354,504,506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 30/2019 ಕಲಂ: 323, 324, 354, 504, 506 ಸಂ: 34 ಐಪಿಸಿ:-ದಿನಾಂಕ: 26/03/2019 ರಂದು04.15 ಪಿ.ಎಂ ಕ್ಕೆ ಸರಕಾರಿಆಸ್ಪತ್ರೆ ಶಹಾಪೂರ ದಿಂದ ಹರ್ಟ ಎಂ.ಎಲ್.ಸಿ ಇದೆಅಂತಾದುರವಾಣಿ ಮೂಲಕ ತಿಳಿದುಬಂದ ಮೇರೆಗೆ ನಾನು ಸದರಿಆಸ್ಪತ್ರೆಗೆ, 04.45 ಪಿಎಂ ಕ್ಕೆ ಬೆಟಿ ಮಾಡಿ ಗಾಯಳುದಾರರ ಉಪಚಾರ ಪಡೆಯುತ್ತಿದ್ದುಅವರುಅವರಿಗೆ ವಿಚಾರಿಸಿ, ಹೇಳಿಕೆ ಪಡೆದುಕೊಂಡಿದ್ದು, ಸದರಿ ಪಿರ್ಯಾದಿ ಸಾರಂಶಏನಂದರೆ, ನಾನು ಮೇಲಿನ ವಿಳಾಸದ ನಿವಾಸಿತಳಿದ್ದು ಹೊಲಮನಿ ಕೆಲಸ ಮಾಡಿಕೊಂಡುಉಪಜೀವಿಸುತ್ತೇನೆ. ಹೀಗಿದ್ದು ನಮ್ಮ ಸಂಬಂದಿಕರಲ್ಲಿ ಭಿಮಣ್ಣತಂದೆ ಶೀವಪ್ಪ ಬಾಣತಿಹಾಳ ಇವರ ಮಗಳಾದ ಸಾಬಮ್ಮಈಕೆಯು ಮನೆಯಿಂದ ಓಡಿ ಹೋಗಿದ್ದಳು. ಭೀಮಣ್ಣ ಬಾಣತಿಹಾಳ ನಮ್ಮ ಮನೆಗೆ ಬಂದು ನಾನು ಮತ್ತು ನಮ್ಮ ಮಗ ರಾಯಪ್ಪ ಮನೆಯಲ್ಲಿಇದ್ದಾಗಲೆ ಬಂದು ನಿಮ್ಮ ಮಗ ರಾಯಪ್ಪ ನಮ್ಮ ಮಗಳಿಗೆ ಕರೆದುಕೊಂಡು ಹೋಗಿದ್ದಾನೆಅಂತಾಕೂಗಾಡಿದ್ದರು. ನಂತರ ನಿನ್ನೆ ದಿನಾಂಕ:25/03/2019 ರಂದುಅಂದಾಜು 11.30 ಎಎಂ ಸುಮಾರಿಗೆ ಹೊಲದಲ್ಲಿ ನಾನು ಕೆಲಸ ಮಾಡುವಾಗ ಭಿಮಣ್ಣತಂದೆ ಶಿವಪ್ಪ ಬಾಣತಿಹಾಳ, ಅವರತಮ್ಮ ಸಿದ್ದಪ್ಪ ತಂದೆ ಶಿವಪ್ಪ ಬಾಣತಿಹಾಳ ಅವರ ಮಗಳಾದ ಸಾಬಮ್ಮತಂದೆ ಭೀಮಣ್ಣ ಬಾಣತಿಹಾಳ ಮತ್ತು ಭಿಮಣ್ಣನ ಹೆಂಡತಿ ಮಾಳಮ್ಮ ಗಂಡ ಭಿಮಣ್ಣ ಬಾಣತಿಹಾಳ ಸಾ: ಎಲ್ಲರೂ ಸಾ: ರೇಣುಕಾನಗರ ಮಹಲ್ರೋಜಾ ಇವರುಗಳು ನಿನ್ನ ಮಗ ಎಲ್ಲಿದ್ದಾನೆ ಸೂಳಿ, ನಮ್ಮ ಮಗಳಿಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿ ಈಗ ಎಲ್ಲಿಗೆ ಓಡಿ ಹೋಗಿದ್ದಾನೆಅಂತಾಅವಾಚ್ಯವಾಗಿ ಬೈಯುತ್ತಾ ಬಂದು ಭಿಮಣ್ಣಈತನುಒಂದುಕಲ್ಲಿನಿಂದ ಹೊಟ್ಟೆಗೆ ಹೊಡೆದು ಗುಪ್ತ ಪೆಟ್ಟು ಮಾಡಿದ, ಮತ್ತು ನನ್ನ ಮಾನ ಹಾನಿ ಮಾಡುವಉದ್ದೇಶದಿಂದಕೈಹಿಡಿದು ಎಳೆದಾಡಿ ಎದೆಗೆಕೈಯಿಂದ ಹೊಡೆದಿರುತ್ತಾನೆ, ಸಾಬಮ್ಮ ಮತ್ತು ಮಾಳಮ್ಮ ಇವರುಗಳು ನನ್ನಕೂದಲು ಹಿಡಿದು ಎಳೆದಾಡಿ ಹೊಡೆಬಡೆ ಮಾಡಿರುತ್ತಾರೆ. ಅಷ್ಟರಲ್ಲಿ ನಮ್ಮತಮ್ಮ ಮಲ್ಲಪ್ಪತಂದೆ ಭಿಮರಾಯ ನಾಯ್ಕೋಡಿ ಮತ್ತು ನಮ್ಮ ಮೈದುನಈಶಪ್ಪತಂದೆ ಹಯ್ಯಾಳಪ್ಪ ಶಹಾಪೂರಇವರು ನಾನು ಇದ್ದಲ್ಲಿಗೆ ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡಿದ್ದು, ಆಗ ಅವರೆಲ್ಲರೂ ಎಲೆ ರಂಡಿ ನಿನ್ನ ಮಗ ಎಲ್ಲಿಗೆ ಹೋಗಿದ್ದರೂ ಬಿಡುವದಿಲ್ಲ ನಿಮಗ ಖಲಾಸ್ ಮಾಡಿಯೇ ನಮ್ಮ ಮಗಳಿಗೆ ಲಗ್ನ ಮಾಡುತ್ತೇವೆಅಂತಾಜೀವದ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ನಾನು ಅಂಜಿ ಮನೆಯಲ್ಲಿಇದ್ದೇನು. ಇಂದು ದಿ:26/03/2019 ರಂದು ಮದ್ಯಾಹ್ನ ನನಗೆ ಎದೆಯಲ್ಲಿ ನೋವು ಹೆಚ್ಚಾಗಿದ್ದರಿಂದ ಶಹಾಪೂರಆಸ್ಪತ್ರೆಗೆ ಬಂದು ಸೇರಿಕೆಆಗಿರುತ್ತೇನೆ. ಕಾರಣ ನನಗೆ ನನ್ನಕೈಹಿಡಿದು ಎಳೆದಾಡಿ ಹೊಡೆ ಬಡೆ ಮಾಡಿಅವಾಚ್ಯವಾಗಿ ಬೈಯ್ದುಜೀವದ ಬೆದರಿಕೆ ಹಾಕಿದ 1. ಭಿಮಣ್ಣತಂದೆ ಶಿವಪ್ಪ ಬಾಣತಿಹಾಳ, 2. ಸಿದ್ದಪ್ಪ ತಂದೆ ಶಿವಪ್ಪ ಬಾಣತಿಹಾಳ 3. ಸಾಬಮ್ಮತಂದೆ ಭೀಮಣ್ಣ ಬಾಣತಿಹಾಳ 4. ಮಾಳಮ್ಮ ಗಂಡ ಭಿಮಣ್ಣ ಬಾಣತಿಹಾಳ ಎಲ್ಲರೂ ಸಾ: ರೇಣುಕಾನಗರ ಮಹಲ್ರೋಜಾ ಈ ನಾಲ್ಕು ಜನರ ವಿರುದ್ಧ ಕಾನೂನು ಕ್ರಮಜರುಗಿಸಬೇಕುಅಂತಾಅಜರ್ಿ ಸಾರಂಶದ ಮೇಲಿಂದಮರಳಿ ಠಾಣೆಗೆ 07.15 ಪಿಎಂ ಕ್ಕೆ ಬಂದುಠಾಣೆಗುನ್ನೆ ನಂ: 30/2019 ಕಲಂ:323, 324, 354, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 80/2019 ಕಲಂ: 273, 384 ಐಪಿಸಿ ಮತ್ತು 32, 34 ಕೆ.ಇ ಆ್ಯಕ್ಟ್ :- ದಿನಾಂಕ: 26/03/2019 ರಂದು 08.15 ಪಿಎಮ್ ಕ್ಕೆ ಶ್ರೀ ಸುರೇಶ ಬಾಬು ಪಿಎಸ್.ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ವರದಿ ನೀಡಿದ್ದು, ಸದರಿ ವರದಿ ಸಾರಾಂಶವೆನೆಂದರೆ, ನಾಗನಟಗಿ ಮೇಗಾನಾಯ್ಕ ತಾಂಡಾ ಕ್ರಾಸ್ ಹತ್ತಿರ ರೋಡಿನ ಮೇಲೆ ಒಬ್ಬ ಹೆಣ್ಣು ಮಗಳು ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಕೊಂಡು  05.45 ಪಿಎಂಕ್ಕೆ ಕ್ಕೆ ದಾಳಿ ಮಾಡಿ ಅನಧಿಕೃತವಾಗಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಹೆಣ್ಣು ಮಗಳು ಜಾಲಿಯಲ್ಲಿ ಮಹಿಲಾ ಸೌಚಾಲಯದ ಕಡೆಗೆ ಓಡಿ ಹೋಗಿದ್ದು, ಅವಳ ಹೆಸರು ಗಂಗಮ್ಮ ಗಂಡ ಕನಕಪ್ಪ ಮೇಟಿ ವಯಾ; 40 ಉ: ಕೂಲಿ ಜಾ: ಬೇಡರ ಸಾ:ನಾಗನಟಗಿ ತಾ: ಶಹಾಪೂರ ಜಿಲ್ಲಾ: ಯಾದಗಿರಿ ಅಂತಾ ತಿಳಿದ ಬಂದಿದ್ದು, ಸ್ತಳದಲ್ಲಿ ಮೇಲಿನ ಮುದ್ದೆ ಮಾಲು ಸಿಕ್ಕಿದ್ದು ಪಂಚರ ಸಮಕ್ಷಮದಲಿ ಜಪ್ತಿಪಡಿಸಿಕೊಂಡು ಮುದ್ದೆಮಾಲು, ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಸೂಚಿಸಿ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 31/2018 ಕಲಂ: 273, 284 ಐಪಿಸಿ ಮತ್ತು ಕಲಂ: 32 34 ಕೆ.ಇ ಆ್ಯಕ್ಟ್  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 20/2019 ಕಲಂ. 279 ಐಪಿಸಿ:-ದಿನಾಂಕ:26/03/2019 ರಂದು 15.00 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಯಿಸುತ್ತಿದ್ದ ಲಾರಿ ನಂ. ಕೆಎ-16 ಎ-8865 ನೇದ್ದನ್ನು ಸಿದ್ದಾಪುರ-ಬೆನಕನಳ್ಳಿ ರೋಡಿನ ಮೇಲೆ ಹೆಬ್ಬಾಳ(ಕೆ) ಸೀಮೆಯ ಖಾಸಿಂಸಾಬ ಬಲಶೆಟ್ಟಿಹಾಳ ಇವರ ಹೊಲದ ಹತ್ತಿರ  ತಿರುವಿನಲ್ಲಿ ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಒಮ್ಮೆಲೆ ರೋಡಿನ ಎಡಬಾಗಕ್ಕೆ ಕಟ್ ಹೊಡೆದು ಅಪಘಾತ ಮಾಡಿದ್ದ. ಅಪಘಾತದಲ್ಲಿ ಚಾಲಕನಿಗೆ ಎಡಗೈಯ ಮೊಳಕೈಯ ಹತ್ತಿರ ಗಾಯವಾಗಿದ್ದು ಇರುತ್ತದೆ. ಸದರಿ ಚಾಲಕನ ಮೇಲೆ ಕಾನೂನ ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 81/2019 ಕಲಂ: 498(ಎ), 323,504, 506 ಸಂಗಡ 34 ಐ.ಪಿ.ಸಿ ಮತ್ತು 4 ಡಿ.ಪಿ ಆಕ್ಟ್ 1961:- ದಿನಾಂಕಃ 26/03/2019 ರಂದು 6-30 ಪಿ.ಎಮ್ ಕ್ಕೆ ಶ್ರೀಮತಿ ಪದ್ಮಿನಿ ಗಂಡ ರಾಮಲಿಂಗಯ್ಯ ಪೂಜಾರಿ, ಸಾ: ಹುಲಕಲಗುಡ್ಡಾ ಸುರಪೂರ, ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನಗೆ ನನ್ನ ಅಣ್ಣನಾದ ಮಂಜುನಾಥ ಈತನು ಸುರಪೂರ ನಗರದ ನಿವಾಸಿಯಾದ ರಾಮಲಿಂಗಯ್ಯ ತಂದೆ ಸಿದ್ದಯ್ಯ ಪೂಜಾರಿ ಇತನೊಂದಿಗೆ ದಿನಾಂಕಃ 21/04/2017 ರಂದು ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಬಳಿಕ ಒಂದು ವರ್ಷ ನನ್ನ ಗಂಡ ಹಾಗು ಅತ್ತೆ ಇಬ್ಬರೂ ನನಗೆ ಚೆನ್ನಾಗಿ ನೋಡಿಕೊಂಡಿರುತ್ತಾರೆ. ತದನಂತರ ಕಳೆದ 11 ತಿಂಗಳಿನಿಂದ ನನ್ನ ಗಂಡನಾದ ರಾಮಲಿಂಗಯ್ಯ ಹಾಗು ಅತ್ತೆಯಾದ ಮಹಾದೇವಮ್ಮ ಗಂಡ ಸಿದ್ದಯ್ಯ ಪೂಜಾರಿ ಇಬ್ಬರೂ ನನಗೆ ದಿನಾಲು ಮನೆಯಲ್ಲಿ ನಿಮ್ಮ ತಂದೆಯವರ ಹೆಸರಿನಲ್ಲಿ 25 ಎಕರೆ ಹೊಲ ಇದೆ, ನಿಮ್ಮ ಅಣ್ಣ ಒಬ್ಬನೇ ಇಷ್ಟು ಹೊಲ ತಗೆದುಕೊಂಡಿದ್ದಾನೆ, ಅದರಲ್ಲಿ ನೀನು 2 ಎಕರೆ ಹೊಲ ವರದಕ್ಷಿಣೆಯಾಗಿ ಕೇಳು ಎಂದು ಹೇಳುತ್ತ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಕೊಡುತ್ತ ಬಂದಿರುತ್ತಾರೆ. ಆಗ ನಾನು ಸದರಿ ವಿಷಯವನ್ನು ತವರೂ ಮನೆಗೆ ಹೋಗಿ ನನ್ನ ಅಣ್ಣನಿಗೆ ತಿಳಿಸಿದಾಗ, ಆತನು ತಂದೆ-ತಾಯಿಯವರು ಕಾಯಿಲೆಯಿಂದ ನರಳುತ್ತಿದ್ದಾಗ, ಅವರಿಗೆ ಹಲವಾರು ಕಡೆ ಆಸ್ಪತ್ರೆಗಳಲ್ಲಿ ತೋರಿಸಿದರೂ ಕೂಡ ಗುಣಮುಖವಾಗದೇ ಮೃತಪಟ್ಟಿದ್ದು, ಆಗ ಬಹಳ ಸಾಲವಾಗಿದೆ, ಅಲ್ಲದೇ ನಿನ್ನ ಮದುವೆ ಸಮಯದಲ್ಲಿ ಸಹ ಹಣ ಖಚರ್ಾಗಿದೆ, ಸದ್ಯಕ್ಕೆ ಏನು ಕೇಳಬೇಡಾ, ನಿನಗೆ ಮಕ್ಕಳಾಗಲಿ, ಎಲ್ಲಾ ಸಾಲ ತೀರಿಸಿದ ಬಳಿಕ ಮುಂದೆ ಕೊಡುತ್ತೇನೆ ಅಂತ ಹೇಳಿದ್ದರು. ಈ ವಿಷಯವನ್ನು ನಾನು ಸುರಪೂರಕ್ಕೆ ಬಂದು ನನ್ನ ಗಂಡ ಹಾಗು ಅತ್ತೆಗೆ ಹೇಳಿದರೂ ಸೂಳೆ ಈಗಲೇ ನಿಮ್ಮ ತಂದೆಯವರ ಆಸ್ತಿಯಲ್ಲಿ 2 ಎಕರೆ ಹೊಲ ನಮಗೆ ಕೊಟ್ಟರೇ ನಮ್ಮ ಮನೆಯಲ್ಲಿ ಇರು, ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಅಂತ ಹೇಳುತ್ತ ದಿನಾಲು ಹೊಡೆಬಡೆ ಮಾಡಿ ಕಿರುಕುಳ ಕೊಡುತ್ತಿದ್ದಾರೆ. ಹಾಗು ನಿನ್ನೆ ದಿನಾಂಕ: 25/03/2019 ರಂದು ಮದ್ಯಾಹ್ನ 1-00 ಗಂಟೆಗೆ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡನು ಸೂಳೆ ನೀನು ನಿನ್ನ ಅಣ್ಣನ ಹತ್ತಿರ 2 ಎಕರೆ ಹೊಲ ಕೇಳಿ ನಮ್ಮ ಹೆಸರಿಗೆ ಮಾಡಿಸು ಅಂದರೂ ಮಾಡಿಸುತ್ತಿಲ್ಲಾ, ಮನೆ ಬಿಟ್ಟು ಹೋಗು ಅಂತ ಹೇಳುತ್ತ ಕೈಯಿಂದ ತಲೆಯ ಮೇಲೆ, ಬೆನ್ನಿಗೆ, ಕಪಾಳಕ್ಕೆ ಹೊಡೆದು ನೂಕಿಸಿದ್ದರಿಂದ ಕೆಳಗೆ ಬಿದ್ದಾಗ ಎಡಮೊಣಕೈ ಹತ್ತಿರ ಒಳಪೆಟ್ಟಾಗಿದ್ದು, ಮನೆಯಲ್ಲಿದ್ದ ನನ್ನ ಅತ್ತೆಯವರು ನನ್ನ ಗಂಡನಿಗೆ ಇನ್ನು ಹೊಡಿ ರಂಡಿಗೆ, ಖಲಾಸ ಮಾಡು ಅಂತ ಹೇಳುತ್ತ ಕೈಯಿಂದ ಬೆನ್ನಿಗೆ ಹೊಡೆದಿರುತ್ತಾರೆ. ಕಾರಣ ನನಗೆ ಸುಮಾರು 11 ತಿಂಗಳಿನಿಂದ ಇಲ್ಲಿಯವರೆಗೆ 2 ಎಕರೆ ಹೊಲ ವರದಕ್ಷಿಣೆಯಾಗಿ ತವರು ಮನೆಯಿಂದ ಬರೆಯಿಸಿಕೊಡುವಂತೆ ಹೇಳಿ ಹೊಡೆಬಡೆ ಮಾಡುತ್ತ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತ ಬಂದಿರುವ ನನ್ನ ಗಂಡ ಹಾಗು ಅತ್ತೆ ಇಬ್ಬರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 81/2019 ಕಲಂ. 498(ಎ), 323, 504, 506 ಸಂಗಡ 34 ಐ.ಪಿ.ಸಿ ಮತ್ತು 4 ಡಿ.ಪಿ ಆಕ್ಟ್ 1961 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು. 

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 40/2019 ಕಲಂ:279, 304(ಎ) ಐಪಿಸಿ & 187 ಐ.ಎಮ್.ವಿ. ಆಕ್ಟ್:- ದಿನಾಂಕ:27/03/2019 ರಂದು 04:00 ಎ.ಎಮ್. ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಡೆತ್ ಎಮ್.ಎಲ್.ಸಿ. ದೂರವಾಣಿ ಮೂಲಕ ತಿಳಿಸಿದ್ದು, ನಾನು 04:30 ಎ.ಎಮ್.ಕ್ಕೆ. ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಭೇಟಿಕೊಟ್ಟು ಮೃತ ಬಸವರಾಜ ತಂದೆ ತಿಪ್ಪಣ್ಣ ಚೀಲದರ್, ವಯ:33 ವರ್ಷ, ಸಾ||ಇಬ್ರಾಹಿಂಪೂರ ಈತನ ಮಾವನಾದ ತಿಪ್ಪಣ್ಣ ತಂದೆ ಶರಣಪ್ಪ ಕವಲ್ದಾರ್, ವಯ:34 ವರ್ಷ, ಜಾತಿ:ಬೇಡರು, ಉ||ಒಕ್ಕಲುತನ, ಸಾ||ತಂಗಡಗಿ, ತಾ||ಶಹಾಪೂರ, ಜಿ||ಯಾದಗಿರಿ ಇವರು ಹೇಳಿಕೆ ಫಿಯರ್ಾದಿ ನೀಡಿದ್ದೇನೆಂದರೆ, ನಿನ್ನೆ ನಿನ್ನೆ ದಿನಾಂಕ:26/03/2019 ರಂದು ನಮ್ಮೂರಿನಲ್ಲಿ ಶ್ರೀ.ವಿಶ್ವರಾಧ್ಯ ಮುತ್ಯನ ಜಾತ್ರೆ ಇದ್ದರಿಂದ ಮುಂಜಾನೆ ಇಬ್ರಾಹಿಂಪೂರದಿಂದ ನನ್ನ ತಂಗಿ ಬಸಮ್ಮ ಮತ್ತು ಅಳಿಯ ಬಸವರಾಜ ಹಾಗು ಅವರ ಮಕ್ಕಳು ಕೂಡಿಕೊಂಡು ಮೋಟರ್ ಸೈಕಲ್ ನಂ: ಕೆಎ-36 ಜೆ-9931 ರ ಮೇಲೆ ನಮ್ಮೂರಿಗೆ ಬಂದಿದ್ದರು. ನಮ್ಮೂರಿನ ಜಾತ್ರೆಗೆ ರಾತ್ರಿ ತೇರಿಗೆ ಬಂದುಹೋಗುವಂತೆ ಯಾದಗಿರಿಯಲ್ಲಿದ್ದ ನನ್ನ ತಂಗಿಯಾದ ಶರಣಮ್ಮಳಿಗೆ ಮತ್ತು ಅಳಿಯ ಹಣಮಂತರವರಿಗೆ ನಾನು ಸಾಯಂಕಾಲ ಫೋನ್ಮಾಡಿ ಹೇಳಿದ್ದು, ಅವರು ನಾಳೆ ಬೆಂಗಳೂರಿಗೆ ಹೋಗುವುದಿದೆ ಈಗ ಬಂದು ವಾಪಸ್ ಬರಲು ಆಗಲ್ಲ ಅಂತಾ ಅಂದಿದ್ದರಿಂದ ಯಾದಗಿರಿಗೆ ಹೋಗಿ ಅವರನ್ನು ಕರೆದುಕೊಂಡು ಬರಲು ನಾನು ಮತ್ತು ನನ್ನ ಅಳಿಯ ಬಸವರಾಜ ಇಬ್ಬರು ತಯಾರಾಗಿ ನಮ್ಮೂರಿನಿಂದ ರಾತ್ರಿ 10:00 ಗಂಟೆ ಸುಮಾರಿಗೆ ನಾನು ನನ್ನ ಮೋಟರ್ ಸೈಕಲ್ ತೆಗೆದುಕೊಂಡಿದ್ದು, ಬಸವರಾಜನು ತನ್ನ ಮೋಟರ್ ಸೈಕಲ್ ನಂ: ಕೆಎ-36 ಜೆ-9931 ತೆಗೆದುಕೊಂಡಿದ್ದು, ಇಬ್ಬರು ನಮ್ಮ ನಮ್ಮ ಮೋಟರ್ ಸೈಕಲ್ಗಳನ್ನು ನಡೆಸಿಕೊಂಡು ತಂಗಡಿಯಿಂದ ಶಹಾಪೂರ-ಯಾದಗಿರಿ ಮಾರ್ಗವಾಗಿ ಯಾದಗಿರಿಗೆ ಹೋಗುತ್ತಿದ್ದೆವು. ನಾಯ್ಕಲ್ ಗ್ರಾಮದ ದಾಟಿದ ನಂತರ ಗುರುಸುಣಗಿ ಕ್ರಾಸ್ ಇನ್ನು ಒಂದು ಕಿ.ಮೀ. ದೂರ ಇದ್ದಾಗ ರಸ್ತೆಯ ಬ್ರಿಡ್ಜ್ ದಾಟಿ ಹೋಗುತ್ತಿದ್ದಾಗ ಎದುರುಗಡೆಯಿಂದ ಯಾವುದೋ ವಾಹನ ಬಂದಿದ್ದರಿಂದ ನಾನು ಹಿಂದೆ ಆಗಿದ್ದು, ಬಸವರಾಜನು ತನ್ನ ಮೋಟರ್ ಸೈಕಲ್ ನಡೆಸಿಕೊಂಡು ಮುಂದೆ ಹೋಗುತ್ತಿದ್ದಾಗ ರಾತ್ರಿ 11:00 ಗಂಟೆ ಸುಮಾರಿಗೆ ಎದುರುಗಡೆಯಿಂದ ಬಂದ ಒಂದು ಲಾರಿಚಾಲಕನು ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದವನೇ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಬಸವರಾಜನ ಮೋಟರ್ ಸೈಕಲ್ಗೆ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಆಗ ನಾನು ಗಾಭರಿಯಾಗಿ ಒಮ್ಮೆಲೆ ನನ್ನ ಮೋಟರ್ ಸೈಕಲನ್ನು ನಿಲ್ಲಿಸಿದ್ದು, ಲಾರಿ ಚಾಲಕನು ತನ್ನ ಲಾರಿಯನ್ನು ಸ್ವಲ್ಪ ಮುಂದೆ ಬಂದು ನಿಲ್ಲಿಸಿದನು. ಆಗ ನಾನು ಓಡಿಹೋಗಿ ಬಸವರಾಜನಿಗೆ ನೋಡಲಾಗಿ ಬಸವರಾಜನ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು, ಹಣೆಗೆ, ಕಣ್ಣುಗಳಿಗೆ ಸಹ ಭಾರಿಗಾಯವಾದಂತೆ ಕಂಡುಬಂದಿದ್ದು, ಬಲಭುಜಕ್ಕೆ ತರುಚಿದ ಗಾಯವಾಗಿದ್ದು, ಗುಪ್ತಾಂಗಕ್ಕೆ ಮತ್ತು ತರಡುಗಳಿಗೆ ಸಹ ಭಾರಿ ರಕ್ತಗಾಯವಾಗಿದ್ದು, ಮೂಗಿನಿಂದ, ಎಡಕಿವಿಯಿಂದ ರಕ್ತ ಸೋರಿದ್ದು, ಬಸವರಾಜನು ಬೇಹೋಷ್ಆಗಿ ಬಿದ್ದಿದ್ದನು. ಅಪಘಾತಪಡಿಸಿದ ಲಾರಿಯನ್ನು ನೋಡಲಾಗಿ ಅದರ ನಂ: ಎಮ್.ಹೆಚ್-04 ಜಿ.ಆರ್-7552 ಇದ್ದು, ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ಆತನು ಹೇಳದೇ ಲಾರಿಯನ್ನು ಬಿಟ್ಟು ಅಲ್ಲಿಂದ ಓಡಿಹೋದನು. ಆತನಿಗೆ ನೋಡಿದರೆ ಗುರುತಿಸುತ್ತೇನೆ. ಘಟನೆಯ ಬಗ್ಗೆ ನನ್ನ ಅಳಿಯನಾದ ಹಣಮಂತನಿಗೆ ಫೋನ್ಮಾಡಿ ತಿಳಿಸಿದೆನು. ನಂತರ ಅಲ್ಲಿಂದ ಹೋಗುತ್ತಿದ್ದ ಒಂದು ಆಟೋರಿಕ್ಷಾವನ್ನು ನಿಲ್ಲಿಸಿ ಅಪಘಾತದಲ್ಲಿ ಗಾಯಗೊಂಡಿದ್ದ ನನ್ನ ಅಳಿಯ ಬಸವರಾಜನಿಗೆ ಆಟೋರಿಕ್ಷಾದಲ್ಲಿ ಹಾಕಿಕೊಂಡು ನಾನು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದಿದ್ದು, ಬಸವರಾಜನಿಗೆ ಚಿಕಿತ್ಸೆ ಮಾಡಿದ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ರಾಯಚೂರಿಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರಿಂದ ನಾನು ಮತ್ತು ಹಣಮಂತ ಇಬ್ಬರು ಕೂಡಿಕೊಂಡು ಅಂಬುಲೆನ್ಸ್ನಲ್ಲಿ ಬಸವರಾಜನಿಗೆ ಹಾಕಿಕೊಂಡು ರಾಯಚೂರಿಗೆ ಹೋಗುವಾಗ ಮಾರ್ಗಮಧ್ಯೆ ಕಡೇಚೂರು ಹತ್ತಿರ ರಾತ್ರಿ ಅಂದರೆ ಇಂದು ದಿನಾಂಕ:27/03/2019 ರಂದು ಬೆಳಗಿನಜಾವ 12:50 ಗಂಟೆಯ ಸುಮಾರಿಗೆ ನನ್ನ ಅಳಿಯ ಬಸವರಾಜನು ಮೃತಪಟ್ಟಿದ್ದು, ಆತನ ಶವವನ್ನು ಹಾಕಿಕೊಂಡು ಮರಳಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದಿರುತ್ತೇವೆ. ಸದರಿ ಅಪಘಾತವು ಲಾರಿ ನಂ: ಎಮ್.ಹೆಚ್-04 ಜಿ.ಆರ್-7552 ರ ಚಾಲಕನ ನಿರ್ಲಕ್ಷ್ಯತನದಿಂದಲೇ ಸಂಭವಿಸಿದ್ದು, ಅಪಘಾತದಲ್ಲಿ ನನ್ನ ಅಳಿಯನಾದ ಬಸವರಾಜ ತಂದೆ ತಿಪ್ಪಣ್ಣ ಚೀಲದರ್, ವಯ:33, ಸಾ||ಇಬ್ರಾಹಿಂಪೂರ, ತಾ||ಶಹಾಪೂರ ಈತನಿಗೆ ಭಾರಿರಕ್ತಗಾಯಗಳಾಗಿ ಮೃತಪಟ್ಟಿದ್ದು, ಅಪಘಾತಪಡಿಸಿ ಓಡಿಹೋದ ಲಾರಿಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ನೀಡಿದ್ದನ್ನು ಲ್ಯಾಪ್ಟಾಪ್ನಲ್ಲಿ ಪಡೆದುಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಿಂಟ್ ಪಡೆದುಕೊಂಡು ಯಾದಗಿರಿಯಿಂದ ಹೊರಟು ವಡಗೇರಾ ಪೊಲೀಸ್ ಠಾಣೆಗೆ 05:30 ಗಂಟೆಗೆ ಮರಳಿಬಂದು ಸದರಿ ಹೇಳಿಕೆ ಫಿಯರ್ಾದಿ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:40/2019 ಕಲಂ:279, 304(ಎ) ಐ.ಪಿ.ಸಿ. ಮತ್ತು ಕಲಂ:187 ಐ.ಎಮ್.ವಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!