ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-03-2019

By blogger on ಮಂಗಳವಾರ, ಮಾರ್ಚ್ 26, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-03-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 47/2019  ಕಲಂ  323, 324, 504, 506 ಸಂಗಡ 34 ಐಪಿಸಿ:-ದಿನಾಂಕ 25-03-2019 ರಂದು 3 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಬಸಪ್ಪಾ ತಂದೆ ಸಾಬಪ್ಪಾ ಕೊಟಗಾರ ವಯಾ:70 ಜಾ: ಹರಿಜನ ಉ: ಒಕ್ಕಲುತನ ಸಾ; ಹಳಗೇರಾ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ಸ್ವಂತ ತಮ್ಮನಾದ ನಿಂಗಪ್ಪಾ ತಂದೆ ಸಾಬಪ್ಪಾ ಕೊಟಗಾರ ಇಬ್ಬರೂ ಈಗ ಸುಮಾರು ವರ್ಷಗಳ ಹಿಂದೆ ಬೇರೆ ಬೇರೆಯಾಗಿದ್ದು ಇರುತ್ತದೆ.  ನನ್ನ ತಮ್ಮನ ಹೋಲವು ನಮ್ಮ ಹೋಲದ ಪಕ್ಕದಲ್ಲಿಯೇ ಇರುತ್ತದೆ. ನಮ್ಮ ಹೋಲಗಳ ಮಧ್ಯ ಒಂದೇ ಮ್ಯಾರಿ ಇರುತ್ತದೆ. ನಿನ್ನೆ ದಿನಾಂಕ 25-03-2019 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಮಗನಾದ ಮಲ್ಲಪ್ಪಾ ಇಬ್ಬರೂ ನಮ್ಮ ಹೋಲದಲ್ಲಿ ಕೆಲಸ ಮಾಡುತ್ತಿದ್ದೆವು. ಅದೇ ವೇಳೆಗೆ ನನ್ನ ತಮ್ಮನಾದ ನಿಂಗಪ್ಪ ಇತನ ದನಗಳು ನಮ್ಮ ಹೋಲದಲ್ಲಿ ಬಂದು ನಮ್ಮ ಹೋಲದಲ್ಲಿದ್ದ ಸಣ್ಣ ಗಿಡಗಳಿಗೆ ಮೈ ತಿಕ್ಕುತ್ತಿದ್ದವು, ಆಗ ನಾನು ಮತ್ತು ನನ್ನ ಮಗ ಮಲ್ಲಪ್ಪಾ ಇಬ್ಬರೂ ಕೂಗಿ ನನ್ನ ತಮ್ಮ ನಿಂಗಪ್ಪನಿಗೆ ಗಿಡ ಹಾಳಾಗುತ್ತವೆ ದನಗಳು ಹೊಡೆದುಕೊಳ್ಳಿರಿ ಅಂತಾ ಹೇಳಿದೇವು. ಆಗ ನನ್ನ ತಮ್ಮ ನಿಂಗಪ್ಪಾ ಹಾಗೂ ಆತನ ಮಗ ಮರೆಪ್ಪಾ ಇಬ್ಬರೂ ಒಮ್ಮೇಲೆ ನಮಗೆ ಎಲೇ ಭೋಸಡಿ ಮಕ್ಕಳೇ ಸುಮ್ಮನೇ ಯಾಕೇ ಒದರಾಡುತ್ತಿದ್ದಿರಿ ನಮ್ಮ ದನಗಳಿಗೆ ಹೊಡೆದುಕೊಳ್ಳುತ್ತೆವೆ ಅಂತಾ ಬೈಯ್ಯಹತ್ತಿದರು. ಆಗ ನಾನು ಮತ್ತು ನನ್ನ ಮಗ ಇಬ್ಬರೂ ಅವರ ದನಗಳಿಗೆ ಹೊಡೆದುಕೊಂಡು ಅವರ ಹತ್ತಿರ ಮ್ಯಾರಿಯ ಮೇಲೆ ಹೋಗಿ ನಿಮ್ಮ ದನಗಳು ಸುಮಾರು ಸಲ ನಮ್ಮ ಹೋಲದಲ್ಲಿ ಬಂದು ನಮ್ಮ ಗಿಡಗಳು ನಾಶಮಾಡಿವೆ ಆದರೂ ನಾವು ನಿಮಗೇ ಏನೂ ಅಂದಿಲ್ಲಾ ಆದರೂ ನೀವು ಈ ರೀತಿ ಬೈಯ್ಯವುದು ಸರಿಯಲ್ಲಾ ಅಂತಾ ಅವರಿಗೆ ಹೇಳಿದಾಗ  ಅವರು ಇಬ್ಬರೂ ಮಕ್ಕಳೇ ನಮಗೆ ಎದರು ಮಾತಾಡುತ್ತಿರೇನು ಅಂತಾ ಅಂದವರೇ ಅವರಲ್ಲಿ ಮರೆಪ್ಪಾ ತಂದೆ ನಿಂಗಪ್ಪಾ ಇತನು ತನ್ನ ಕೈಯ್ಯಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಇಬ್ಬರೂ ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದರು. ಆಗ ಅಲ್ಲಿಯೇ ಇದ್ದ ನನ್ನ ಮಗ ಮಲ್ಲಪ್ಪಾ ಇತನು ಜಗಳಾ ಬಿಡಿಸಲು ಬಂದಾಗ ಅವನಿಗೂ ಬಡಿಗೆಯಿಂದ ಬಲಗಾಲಿಗೆ ಹೊಡೆದನು. ಮತ್ತು ಇಬ್ಬರೂ ಕೈಯಿಂದ ಹೊಡೆದರು. ಆದರೂ ಕೂಡಾ ನನ್ನ ಮಗ ಅವರಿಗೆ ಸಮುಜಾಯಿಸಿ ಕಳಿಸುತ್ತಿದಾಗ ಅವರು ಇನ್ನೊಮ್ಮೆ ಸಿಗರಿ ಸೂಳೆ ಮಕ್ಕಳೇ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವ ಭಯ ಹಾಕಿದರು. ಈ ವಿಷಯ ನಮಮ ಮನೆಗೆ ಬಂದು ಮನೆಯಲ್ಲಿದ್ದ ನನ್ನ ಸೋಸೆ ಬಸಲಿಂಗಮ್ಮಾ ಇವರಿಗೆ ತಿಳಿಸಿ ನಂತರ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಆಗ ನಮ್ಮ ಹೇಳಿಕೆಯನ್ನು ಪಡೆದುಕೊಳ್ಳಲು ಪೋಲಿಸರು ಆಸ್ಪತ್ರಗೆ ಬಂದಾಗ  ನಾವು ವಿಚಾರ ಮಾಡಿ ನೇರವಾಗಿ ಪೋಲಿಸ್ ಠಾಣೆಗೆ ಬಂದು ಹೇಳಿಕೆ ಕೊಡುವುದಾಗಿ ತಿಳಿಸಿರುತ್ತವೆ. ಈ ಜಗಳದ ಬಗ್ಗೆ ನಮ್ಮ ಹಿರಿಯರಿಗೆ ವಿಚಾರ ಮಾಡಿ ತಡವಾಗಿ ನೇರವಾಗಿ ಠಾಣೆಗೆ ಬಂದು ಹೇಳಿಕೆ ನೀಡುತ್ತಿದ್ದೆನೆ ಈ ರೀತಿಯಾಗಿ ನಮ್ಮ ಜೋತೆಗೆ ಜಗಳಾ ತೆಗೆದು ಹೊಡೆಬಡಿ ಮಾಡಿ ಜೀವದ ಭಯ ಹಾಕಿದ ನನ್ನ ತಮ್ಮ ನಿಂಗಪ್ಪಾ ತಂದೆ ಸಾಬಪ್ಪಾ ಕೊಟಗಾರ ಹಾಗೂ ಆತನ ಮಗ ಮರೆಪ್ಪಾ ಇವರಿಬ್ಬರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಗುನ್ನೆ ನಂ: 47/2019 ಕಲಂ 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 48/2019  ಕಲಂ  341, 323, 324, 504, 506 ಸಂಗಡ 34 ಐಪಿಸಿ:-ದಿನಾಂಕ 25-03-2019 ರಂದು 4-15 ಪಿ.ಎಮ್ ಕ್ಕೆ ಸದರಿ ಹೇಳಿಕೆ ಫಿರ್ಯಾಧಿಯನ್ನು ಠಾಣೆಯಲ್ಲಿ ಪಡೆದುಕೊಂಡು ಹೇಳಿಕೆ ಸಾರಾಂಶವೆನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ. ನಾನು ಮತ್ತು ನನ್ನ ಸ್ವಂತ ಅಣ್ಣನಾದ ಬಸಪ್ಪ ತಂದೆ ಸಾಬಣ್ಣ ಕೊಟಗಾರ ಇಬ್ಬರೂ ಈಗ ಸುಮಾರು ವರ್ಷಗಳ ಹಿಂದೆ ಬೇರೆ ಬೇರೆಯಾಗಿದ್ದು ಇರುತ್ತದೆ. ನನ್ನ ಅಣ್ಣನ ಹೊಲವು ನಮ್ಮ ಹೊಲದ ಪಕ್ಕದಲ್ಲಿಯೇ ಇರುತ್ತದೆ. ನಮ್ಮ ಹೊಲಗಳ ಮಧ್ಯ ಒಂದೇ ಮ್ಯಾರಿ ಇರುತ್ತದೆ. ಇಂದು ದಿನಾಂಕ 25-03-2019 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಮಗನಾದ ಮರೆಪ್ಪ ಇಬ್ಬರೂ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು. ಅದೇ ವೇಳೆಗೆ ನನ್ನ ದನಗಳು ನನ್ನ ಅಣ್ಣನ ಹೋಲದಲ್ಲಿ ಹೋಗಿ ಹೊಲದಲ್ಲಿದ್ದ ಸಣ್ಣ ಗಿಡಗಳಿಗೆ ಮೈ ತಿಕ್ಕುತ್ತಿದ್ದವು, ಆಗ ನನ್ನ ಅಣ್ಣ ಬಸಪ್ಪ ಮತ್ತು ಅವನ ಮಕ್ಕಳಾದ ಮಲ್ಲಪ್ಪ ಹಾಗೂ ಚನ್ನಪ್ಪ ಮೂವರೂ ನಮಗೆ ಅವಾಚ್ಯವಾಗಿ ಬೈಯ್ಯುತ್ತಿದ್ದರು, ಆಗ ನಾನು ನಮ್ಮ ದನಗಳನ್ನು ಹೊಡೆದುಕೊಂಡು ಬರಲು ಡ್ವಾಣದ ಮೇಲೆ ಹೋಗುತ್ತಿದ್ದೆನು, ಆಗ 1) ಬಸಪ್ಪ ತಂದೆ ಸಾಬಣ್ಣ ಕೊಟಗಾರ 2)ಮಲ್ಲಪ್ಪ ತಂದೆ ಬಸಪ್ಪ ಕೊಟಗಾರ ಮತ್ತು 3)ಚನ್ನಪ್ಪ ತಂದೆ ಬಸಪ್ಪ ಕೊಟಗಾರ ಈ ಮೂರು ಜನರು ಕೂಡಿ ನನ್ನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವರಲ್ಲಿ 1)ಬಸಪ್ಪ ತಂದೆ ಸಾಬಣ್ಣ ಕೊಟಗಾರ ಇತನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ, 2)ಮಲ್ಲಪ್ಪ ತಂದೆ ಬಸಪ್ಪ ಕೊಟಗಾರ ಮತ್ತು 3)ಚನ್ನಪ್ಪ ತಂದೆ ಬಸಪ್ಪ ಕೊಟಗಾರ ಇವರಿಬ್ಬರೂ ಕೂಡಿ ನನ್ನನ್ನು ಎತ್ತಿ ನೆಲದ ಮೇಲೆ ಹಾಕಿ ಕಾಲಿನಿಂದ ಮನಬಂದಂತೆ ಒದ್ದಿರುತ್ತಾರೆ, ಆಗ ನಾನು ಚೀರಾಡುತ್ತಿರುವಾಗ ಅಲ್ಲೆ ಇದ್ದ ನನ್ನ ಮಗ ಮರೆಪ್ಪ ಮತ್ತು ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಕಂಚವೀರ ಇವರಿಬ್ಬರೂ ಜಗಳವನ್ನು ಬಿಡಿಸಿರುತ್ತಾರೆ,  ಜಗಳ ಬಿಟ್ಟು ಹೋಗುವಾಗ ಅವರೆಲ್ಲರೂ ಕೂಡಿ ನೀವು ಇನ್ನೊಮ್ಮೆ ಸಿಗರಿ ಸೂಳೆ ಮಕ್ಕಳೇ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವ ಭಯ ಹಾಕಿದರು. ಆಗ ನಾನು ಮತ್ತು ನನ್ನ ಮಗ ಇಬ್ಬರೂ ಕೂಡಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಪಡೆದಿರುತ್ತೆನೆ, ಈಗ ಆಸ್ಪತ್ರೆಗೆ ಹೋಗುವದು ಅವಶ್ಯಕತೆ ಇರುವದಿಲ್ಲ, ಈ ವಿಷಯದ ಬಗ್ಗೆ ಮನೆಯಲ್ಲಿ ವಿಚಾರಣೆ ಮಾಡಿ ತಡವಾಗಿ ಸಾಯಂಕಾಲ 4-15 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಕೊಟ್ಟಿರುತ್ತೆನೆ, ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 48/2019 ಕಲಂ 341, 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
      
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 19/2019 ಕಲಂ.379 ಐಪಿಸಿ:-ದಿ:25/03/2019 ರಂದು 17.55 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:19/03/2019 ರಂದು ರಾತ್ರಿವೇಳೆಯಿಂದ ದಿನಾಂಕ:20/03/2019 ರಂದು ಬೆಳಗಿನವರೆಗೆ ಮದ್ಯದ ಅವಧಿಯಲ್ಲಿ ಹೆಬ್ಬಾಳ(ಬಿ) ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಹೆಬ್ಬಾಳ(ಕೆ) ಗ್ರಾಮಕ್ಕೆ ಕುಡಿಯು ನೀರು ಪೂರೈಸುವ ಹೆಬ್ಬಾಳ(ಕೆ) ಗ್ರಾಮದ ಹಳ್ಳದ ಪಕ್ಕದಲ್ಲಿರುವ ಬೋರವೆಲ್ಗೆ ಅಳವಡಿಸಿರುವ 5 ಹೆಚ್.ಪಿ ಸಬ್ ಮಶರ್ಿಬಲ್ ಮೋಟಾರ ಅ:ಕಿ: 15000/- ರೂ.ಗಳು ಹಾಗೂ ಅದಕ್ಕೆ ಅಳವಡಿಸಿರುವ ಸಲಕರಣೆಗಳ ಅಂದಾಜು ಬೆಲೆ 12000/- ರೂ.ಗಳು ಹೀಗೆ ಒಟ್ಟು 27000/- ರೂ.ಗಳು ಅಂದಾಜು ಬೆಲೆಗಳ ವಸ್ತುಗಳನ್ನು ಯಾರೋ ಅಪರಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂತಾ ಅಂತಾ ಲಿಖಿತ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ. 
   
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 79/2019 ಕಲಂ 143,147,148,323,324,504,506 ಸಂ.149 ಐಪಿಸಿ :- ದಿನಾಂಕ:25-03-2019 ರಂದು 5 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ  ಶಾಹೀದಾ ಗಂಡ ದಿವಂಗತ ಮಹ್ಮದ ಹುಸೇನ ಮೋಜಂಪುರ ಮೊಹಲ್ಲಾ ಸುರಪುರ  ಇವರು ಠಾಣೆಗೆ ಬಂದಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ಮೋಜಂಪುರ ಮೊಹಲ್ಲಾದಲ್ಲಿ ನೀರಿನ ತುಂಬಾ ತೊಂದರೆ ಇದ್ದ ಕಾರಣ ಕಳೆದ 4 ವರ್ಷಗಳ ಹಿಂದೆ ಸರಕಾರದಿಂದ ಬೋರವೆಲ್ಲಾ ಹಾಕಿದ್ದು ಕಳೆದ 3 ವರ್ಷಗಳಿಂದ ಓಣಿಯ ಎಲ್ಲಾ ಸಾರ್ವಜನಿಕರು ಸದರಿ ಬೋರವೆಲ್ಲದ ಮೋಟಾರ ಬಾಕ್ಸನ ಕೀಲಿಯನ್ನು ನನಗೆ ಕೊಟ್ಟಿದ್ದು ಇರುತ್ತದೆ. ಸದರಿ ಬೋರವೆಲ್ಲದಿಂದ  ಪ್ರತಿಯೊಬ್ಬರು ತಲಾ 4 ಕೊಡಗಳಂತೆ ನೀರು ತುಂಬುತ್ತಾ ಬಂದಿದ್ದಾರೆ. ಸದರಿ ಬೊರವೆಲ್ಲ್ ನನ್ನ ಮನೆಯ ಬಾಗಿಲು ಮುಂದೆ ಹಾಕಿದ್ದು ಇದರ ನಿರ್ವಹಣೆಯನ್ನು ನಾನು ಮಾಡುತ್ತಾ ಬಂದಿದ್ದೇನೆ. ಸದರಿ ಬೊರವೆಲ್ಲ್ದ ಕೀಲಿ ನನ್ನಲ್ಲಿ ಇಟ್ಟಿದ್ದರಿಂದ ಇವರು ಜಗಳ ಮಾಡುತ್ತಾ ಬಂದಿದ್ದಾರೆ ನಂತರದಲ್ಲಿ ನಾನು ಮೊನ್ನೆ ಸದರಿ ಬೊರೆವೆಲ್ಲದ ಕೀಲಿಯನ್ನು ನಮ್ಮ ಮನೆಯ ಹಿಂದಿನ ಮನೆಯವರಾದ ಸಲ್ಮಾ ಗಂಡ ಉಸ್ಮಾನಖಾನ ಇವರಿಗೆ ಕಿಲಿಯನ್ನು ನೀಡಿ ನೀವು ನೀರು ಬಿಡಬೇಕು ಬಂದ ಮಾಡಬೇಕೆಂದು ಹೇಳಿ ಕಿಲಿಯನ್ನು ಅವರಿಗೆ ನಿಡಿದ್ದು ಇರುತ್ತದೆ ಆದರೆ ಓಣಿಯ ಸಾರ್ವಜನಿಕರು ಸಲ್ಮಾನ ಇವರಲ್ಲಿ ಯಾಕೇ ಕಿಲಿ ಕೊಟ್ಟಿದ್ದಿರಿ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕೆಂದು ಹೇಳಿದ ಪ್ರಕಾರ ಓಣಿಯ ಸಾರ್ವಜನಿಕರು ಸದರಿ ಕಿಲಿಯನ್ನು ನನ್ನ ಬಳಿ ಇಟ್ಟುಕೊಳ್ಳಬೆಕೆಂದು ಒತ್ತಾಯ ಮಾಡಿದ ಪ್ರಕಾರ ಅವರಿಂದ ನಾನು ಕಿಲಿಯನ್ನು ಮರಳಿ ಪಡೆದುಕೊಂಡಿರುತ್ತೆನೆ. ಇದೆ ದ್ವೆಷದಿಂದ ಸದರಿ ಸಲ್ಮಾ ತಂದೆ ಉಸ್ಮಾನಖಾನ ಈಕೆಯು ಹಾಗೂ ಇವರ ತಾಯಿ ಸಹೊದರಿಯವರು ನಮ್ಮ ಮೇಲೆ ತುಂಬಾ ದ್ವೇಷ ಮಾಡುತ್ತಾ ಬಂದಿದ್ದಾರೆ.ಹೀಗಿರುವಾಗ ದಿನಾಂಕ: 16/03/2019 ರಂದು ಶನಿವಾರ ಸಾಯಂಕಾಲ 7 ಗಂಟೆ ಸುಮಾರಿಗೆ ಸದರಿ ಬೋರವೆಲ್ಲದಿಂದ ನೀರು ತರಲು ಹೋಗಿ ಪಾಳೆ ಪ್ರಕಾರ ಕುಳಿತಿದ್ದಾಗ ನಾನು ನೀರು ತುಂಬುವ ಸಮಯದಲ್ಲಿ ಕರೆಂಟ ಹೋಗಿದ್ದು ನಂತರ ಕರೆಂಟ ಬಂದ ಮೇಲೆ ನಾನು ನೀರು ತುಂಬಲು ಮುಂದಾದಾದ ಸದರಿಯವರಾದ 1) ಆಶಾ ಗಂಡ ಉಸ್ಮಾನಖಾನ ಇವರ ಮಕ್ಕಳಾದ 2) ಸಲ್ಮಾ ತಂದೆ ಉಸ್ಮಾನಖಾನ 3) ಅತೀಯಾ ತಂದೆ ಉಸ್ಮಾನಖಾನ 4) ತಬಸುಮ್ ತಂದೆ ಉಸ್ಮಾನಖಾನ 5) ಪೌಜೀಯಾ ತಂದೆ ಉಸ್ಮಾನಖಾನ ಇವರ ಮಗನಾದ 6) ಸಾಜೀದ ತಂದೆ ಉಸ್ಮಾನಖಾನ ಇವರೆಲ್ಲರೂ ಬಂದವರೆ ಎಲೇ ಬೋಸಡಿ ಸುಳೆ ಬೊರವೆಲ್ಲ ಚಾವಿ ನಿನ್ನಲ್ಲಿ ಇಟ್ಟುಕೊಂಡು ನೀನೆ ತುಂಬುತ್ತಿಯಾ ನಾವೆಲ್ಲರೂ ನೀರು ತುಂಬಲು ಆಗುತ್ತಿಲ್ಲ ಅಂತಾ ಇನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನನ್ನು ಹೊಡೆಯಲು ಮುಂದಾದರೂ ಆಗ ನಾನು ನಾಲ್ಕು ಕೊಡ ನೀರು ತುಂಬಿಕೊಂಡು ನಾನು ವಾಪಸ್ಸ ಮನೆಗೆ ಬಂದೆನು. ಮರುದಿನ ದಿನಾಂಕ: 17-03-2019 ರಂದು ಮುಂಜಾನೆ 10-30 ರ ಸುಮಾರಿಗೆ ಎಲ್ಲಾ ಓಣಿಯ ಜನರು ಬಂದು ಸದರಿ ಆಶಾ ಗಂಡ ಉಸ್ಮಾನಖಾನ ಇವರಿಗೆ ಯಾಕೇ ನೀವು ಬೈಯುತ್ತಿದ್ದಿರಿ ಅಂತಾ ಸಾರ್ವಜನಿಕರು ಅವರಿಗೆ ಹೇಳಿದಾಗ ಸದರಿ ಮೇಲ್ಕಂಡ ಆರು ಜನರು ಕೂಡಿಕೊಂಡು ಎಲೆ ಬೋಸಡಿ ಸುಳಿ ಚಾವಿ ನಿನ್ನಲ್ಲಿ ನಾಟಕ ಮಾಡುತ್ತಿದ್ದಿರಿ ನೀವು ನೀರು ತುಂಬಿಕೊಳ್ಳುತ್ತಿದ್ದರಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯಲು ಪ್ರಾರಂಬಿಸಿದರು ಯಾಕೇ ಹೀಗೆ ಬೈಯುತ್ತಿದ್ದಿರಿ ಬೇಕಿದ್ದರೆ ಚಾವಿ ನಿವೇ ಇಟ್ಟುಕೊಳ್ಳಿ ಅಂತಾ ಹೇಳಿದಾಗ ಇವರಲ್ಲಿ ಆಶಾ ಗಂಡ ಉಸ್ಮಾನಖಾನ ಇವರು ನನ್ನ ಕೇನ್ನೆಗೆ ಬಲವಾಗಿ ಹೊಡೆದರು ಆಗ ಇವರ ನಾಲ್ಕು ಜನ ಹೆಣ್ಣು ಮಕ್ಕಳು ನನ್ನ ತಲೆ ಕುದಲು ಹಿಡಿದು ಜಗ್ಗಾಡಿ ನನ್ನನ್ನು ನೆಲಕ್ಕೆ ಕೆಡವಿ ಕೈಯಿಂದ ಕಾಲಿನಿಂದ ಒದೆಯಲು ಪ್ರಾರಂಬಿಸಿದರು ಆಗ ಇವರ ಮಗನಾದ ಸಾಜೀದ ತಂದೆ ಉಸ್ಮಾನಖಾನ ಈತನು ನನ್ನ ತಲೆಗೆ ಬಲವಾಗಿ ಕೈಯಿಂದ ಹೊಡೆದನು ಆಗ ನನ್ನ ಮಗಳಾದ ಶೀರಿನಾ ಹಾಗೂ ನನ್ನ ಮಗನಾದ ಶಾಹೀದ ತಂದೆ ಮಹಮ್ಮದ ಹುಸೇನ ಇವರನ್ನು ಅವರೆಲ್ಲರೂ ಹೊಡೆಯಲು ಪ್ರಾರಂಬಿಸಿದರು ಸದರಿಯವರ ಮಗನಾದ ಸಾಜೀದ ತಂದೆ ಉಸ್ಮಾನಖಾನ ಈತನು ನನ್ನನ್ನು ನನ್ನ ಮಗಳನ್ನು ನನ್ನ ಮಗನನ್ನು ಹೊಡೆಯಲು ಪ್ರಾರಂಬಿಸಿದರು ಹೀಗೆ ಸದರಿ ಮೇಲ್ಕಂಡ 6 ಜನರು ನಮ್ಮನ್ನು ಹೊಡೆಯುತ್ತಿದ್ದಾಗ ಇವರು ಹೊಡೆಯುವದನ್ನು ತಾಳಲಾರದೆ ನಾನು ನನ್ನ ಮಕ್ಕಳು ಅಳುತ್ತಾ ಚಿರಾಡುತ್ತಿದ್ದಾಗ ಓಣಿಯ ಜನರು ಅಡ್ಡ ಬಂದು ಬಿಡಿಸಿಕೊಂಡರು ಆಗ ನನ್ನ ಹಿರಿಯ ಅಲ್ತಾಪ ಈತನು ಅಡ್ಡ ಬಂದು ಬಿಡಿಸಿಕೊಂಡನು ಇವರೆಲ್ಲರೂ ನಮ್ಮನ್ನು ಬಿಡಿಸಿಕೊಳ್ಳದಿದ್ದರೆ ಇವರೆಲ್ಲರೂ ನಮ್ಮನ್ನು ಪ್ರಾಣ ಸಹೀತ ಬಿಡುತ್ತಿರಲಿಲ್ಲ. ಆಗ ನಾವು ಹೋಗುತ್ತಿರುವಾಗ ಇವರೆಲ್ಲರೂ ಎಲೆ ಬೋಸಡಿ ಸುಳೆ ಇವತ್ತು ನಿಮ್ಮ ಪ್ರಾಣ ಉಳದಿದೆ ಇಲ್ಲದಿದ್ದರೆ ನಿಮ್ಮನ್ನು ಕೈಕಾಲು ಕಡೆದು ಸಾಯಿಸಿ ಬಿಡುತ್ತಿದ್ದರು ಬೇದರಿಕೆ ಹಾಕುತ್ತಿದ್ದರು. ಆಗ ನಾವು ಸುರಪುರ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ನನಗೆ ತುಂಬಾ ಒಳಪೆಟ್ಟು ಆಗಿದ್ದರಿಂದ ವೈದ್ಯರು ನನ್ನನ್ಜು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ತಿಳಿಸಿದ ಪ್ರಕಾರ ನಾನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ಬಂದು ತಮ್ಮಲ್ಲಿ ಈ ದೂರು ಅಜರ್ಿ ಸಲ್ಲಿಸಿರುತ್ತೆನೆ. ಹೀಗೆ ಸದರಿ ಆರು ಜನರು ನನ್ನ ಮಕ್ಕಳನ್ನು ಹೊಡೆದು ಬಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಮಗೆ ತುಂಬಾ ತೊಂದರೆ ಕೊಡುತ್ತಾ ಬಂದಿದ್ದಾರೆ ಇವರು ಪ್ರತಿ ದಿನ ಅವಾಚ್ಯ ಶಬ್ದಗಳಿಂದ ಬೈಯುವದು ಸೂಳಿ ಮಕ್ಕಳು ರಂಡಿ ಮಕ್ಕಳು ಅಂತಾ ನಿಂದಿಸುವದು ಮಾಡುತ್ತಾ ಬಂದಿದ್ದಾರೆ ಇವರಿಂದ ನಮಗೆ ನೆಮ್ಮದಿ ಜೀವನ ಸಾಗಿಸುವದು ದುಸ್ತರವಾಗಿದೆ. ಇವರು ನಮ್ಮನ್ನು ಓನಿ ಬಿಟ್ಟು ಹೊಗುವಂತೆ ಭಯ ಹಾಕುತ್ತಿದ್ದಾರೆ. ಆದ್ದುದ್ದರಿಂದ ಇದನ್ನು ಅತೀ ಗಂಭಿರವಾಗಿ ಪರಿಗಣಿಸಿ ನನಗೆ ನನ್ನ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಾಲಿನಿಂದ ಹೊಡೆದು ನನಗೆ ತುಂಬಾ ಒಳಪೆಟ್ಟು ಮಾಡಿದ ಸದರಿ ಮೇಲ್ಕಂಡ ಆರು ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೋರಕಿಸಿಕೊಡಲು ಈ ಪಿಯರ್ಾದಿ ಅಂತಾ ಕೊಟ್ಟ ಪಿಯರ್ಾದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 80/2019 ಕಲಂ:78 () ಕೆ.ಪಿ.ಕಾಯ್ದೆ:- ದಿನಾಂಕ: 25-03-2019 ರಂದು 8-20 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಆನಂದರಾವ್ ಪಿ.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತನನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:25-03-2019 ರಂದು ಸಾಯಂಕಾಲ 6-15 ಗಂಟೆ ಸುಮಾರಿಗೆ ನಾನು ಠಾಣೆಯ ಸಿಬ್ಬಂದಿಯವರಾದ 1) ಮನೋಹರ ಹೆಚ್ಸಿ-105 2)  ಸುಭಾಸ ಸಿಪಿಸಿ-174 ಇವರೊಂದಿಗೆ ಠಾಣೆಯಲ್ಲಿದ್ದಾಗ ಖಚಿತವಾಗ ಬಾತ್ಮಿ ಬಂದಿದ್ದೇನೆಂದರೆ ಸುರಪುರ ಪಟ್ಟಣದ ಗಾಂದಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ,  1) ಶ್ರೀ ತಿಮ್ಮಯ್ಯಾ ತಂದೆ ಮರೆಪ್ಪ ಕುರಕುಂದಿ ವಯಾ:43 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಉಪ್ಪಾರ ಮೊಹಲ್ಲಾ ಸುರಪುರ  2) ಶ್ರೀ ಅಬ್ದುಲ್ ರವುಫ್ ತಂದೆ ಅಬ್ದುಲ್ ಅಜೀಜ್ ಗಿರಣಿವಾಲೆ ವಯಾ:40 ವರ್ಷ ಉ:ಗಿರಿಣಿ ವ್ಯಾಪಾರ ಜಾತಿ:ಮುಸ್ಲಿಂ ಸಾ: ಉಪ್ಪಾರ ಮೊಹಲ್ಲಾ ಸುರಪುರ ತಾ:ಸುರಪುರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ ಠಾಣೆಯ ಸರಕಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ 06-30 ಪಿ.ಎಮ್ ಕ್ಕೆ ಠಾಣೆಯಿಂದ ಹೊರಟು ಸುರಪುರ ಸಿಎಮ್ಸಿ ರಸ್ತೆಯ ವಾಟರ ಪಿಲ್ಟರ ಹತ್ತಿರ 6-45 ಪಿ.ಎಂ.ಕ್ಕೆ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದುಗಡೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಕಾಬುಲ್ ರವರ ಕಾಂಪ್ಲೆಕ್ಷ ಮುಂದುಗಡೆಯ ಬೇಕರಿ ಎದರುಗಡೆಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 7 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುವವನ್ನು ಹಿಡಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ತಿಮ್ಮುಯ್ಯಾ ತಂದೆ ಮರೆಪ್ಪ ಕುರಕುಂದಿ ವಯಾ:43 ವರ್ಷ ಉ:ಕೂಲಿ ಜಾತಿ:ಬೇಡರ ಉ:ಉಪ್ಪಾರ ಮೊಹಲ್ಲಾ ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 2420=00 ರೂಗಳು, ನಾಲ್ಕು ಮಟಕಾ ನಂಬರ್ ಬರೆದ ಚೀಟಿಗಳು ಅ.ಕಿ.00=00 ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 7 ಪಿ.ಎಮ್ ದಿಂದ 8 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 78/2019 ಕಲಂ 143,147,148,323,324,354,504,506 ಸಂ.149 ಐಪಿಸಿ :-ದಿನಾಂಕ:25-03-2019 ರಂದು 1-30 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ್ರಮತಿ ಆಶಾಬಿ ಗಂಡ ಉಸ್ಮಾನಖಾನ ಸಾ:ಮೊಜಂಪೂರಗಲ್ಲಿ ಸುರಪುರ ಇವರು ಠಾಣೆಗೆ ಬಂದಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ಸುರಪುರ ನಗರಸಭೆ 10 ನೇ ವಾರ್ಡದ ಸಾರ್ವಜನಿಕ ಕುಡಿಯು ನಿರಿಗಾಗಿ ಸರಕಾರದಿಂದ ಬೋರವೆಲ್ ನಿಮರ್ಿದ್ದು ಅದರ ಕಿಲಿ ಕೈ ಯಾವಾಗಲೂ ನಮ್ಮ ಓಣಿಯ ಶಾಹೀದಾ ಬೆಗಂ ಗಂಡ ಮಹ್ಮದ ಹುಸೇನ ಸರಗಿ ಇವರ ಬಳಿ ಇರುತ್ತಿತ್ತು.ಹೀಗಿದ್ದು ದಿನಾಂಕ:17-03-2019 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಾನು ನನ್ನ ಮಗನಾದ ಸಾಜೀದಖಾನ ಮಗಳಾದ ಸಲ್ಮಾ ಸುಲ್ತಾನ ಮೂವರು ಮನೆಯಲ್ಲಿರುವಾಗ ನಮ್ಮ ಮನೆಯ ಹತ್ತಿರ ಬಂದ ಶಾಹೀದಾ ಬೆಗಂ ಇವಳಿಗೆ ನಾವು ಬೋರವೆಲ್ ಚಾಲು ಮಾಡಬೇಕು ಅಂತಾ ಕುಡಿಯುವ ನೀರಿನ ಸಲುವಾಗಿ ಕೀಲಿ ಕೈ ಕೇಳಿದಾಗ ಶಾಹೀದಾ ಇವಳು ನಮಗೆ ಸಂಪೂರ್ಣ ಏಕವಚನದಲ್ಲಿ ಅವಾಚ್ಯ ಬೈದು ಎ ಕೀಲಿ ಕೈ ಕೊಡುವದಿಲ್ಲ ಸಾಯಂಕಾಲ ಬಾ ಎಂದಳು ಅದಕ್ಕೆ ನಾವುಗಳು ಕುಡಿಯಲು ನೀರು ಸಹ ಇಲ್ಲಾ 2 ಕೊಡ ನೀರು ಮಾತ್ರ ತಗೆದುಕೊಳ್ಳುತ್ತೆವೆ ಕೊಡು ಅಂತಾ ಎಂದೆವು ಆವಾಗ ಶ್ರೀಮತಿ ಶಾಹೀದಾ ಮತ್ತು ಅವರ ಕಡೆಯವರಾದ ಶ್ರೀಮತಿ ಫಾತಿಮಾ, ಕು.ಶಿರೀನಾ, ಅಲ್ತಾಫಹುಸೇನ. ಮಹ್ಮದ ಸಾಹೀಲ್ ಇವರೆಲ್ಲರೂ ಬಂದವರೆ ಎ ರಂಡಿ ನಿನಗೆ ಒಮ್ಮೆ ಹೇಳಿದರು ಗೊತ್ತಾಗಲ್ಲಾ ಎನು ಎಂದಳು ಅದಕ್ಕೆ ನಾವುಗಳು ಸಕರ್ಾರದ ಬೋರವೆಲ್ ಇದ್ದು ಅದನ್ನು ಕೇಳಿದರೆ ಈ ರೀತಿ ಏಕೆ ಬೈಯುತ್ತಿರಿ ಎಂದೆವು ಏ ಸರಕಾರದ ಬೋರವೆಲ್ ಇದ್ದರೆ ಏನಾಯಿತು ನಮ್ಮ ಕಬ್ಜಾದಲ್ಲಿದೆ ನಮಗೆ ಯಾರೂ ಏನು ಕೇಳುವದಿಲ್ಲ ನೀವು ಯಾರೂ ಕೇಳಲು ಇಲ್ಲಿಂದ ಹೋಗುತ್ತಿರೀ ಜಾಡ್ಸಿ ಒದಿಲಿ ಎಂದು ಅಲ್ತಾಪ ಹುಸೇನ ಈತನು ಅಂದನು ಅದಕ್ಕೆ ನಾವುಗಳು ನಮಗೆ ಒದ್ದರೆ ನೋಡಿ ನಿಮ್ಮ ಮೇಲೆ ನಾವುಗಳು ಕಂಪ್ಲೇಟ್ ಮಾಡುತ್ತೇವೆ ಎಂದೆವು ಅದಕ್ಕೆ ಏಕಾಎಕಿ ಹಠಾತ್ತನೆ ಈ 5 ಮಂದಿ ನಮ್ಮ ಮೇಲೆ ಹೊಡೆ ಬಡೆ ಮಾಡಲು ಶುರು ಮಾಡಿದರು ಅಲ್ತಾಪ್ ಹುಸೇನ ಈತನು ನಮ್ಮ ಮೇಲೆ ಕಲ್ಲು ಎತ್ತಿ ಹಾಕಲು ಬಂದ್ದಿದ್ದು ಆಗ ಬಿಡಿಸಲು ಬಂದ ನನ್ನ ಮಗಳಿಗೆ ಕಾಲಿನಿಂದ ಒದ್ದು ಅವಳ ಮೂಗಿಗೆ ಬಲವಾಗಿ ಕೈಯಿಂದ ಹೊಡೆದನು. ಆವಾಗ ನನ್ನ ಮಗಳ ಮೂಗಿನಿಂದ ರಕ್ತ ಸೋರುತ್ತಿತ್ತು. ಅಷ್ಟಾದರೂ ಅವರು ಪಟ್ಟು ಬೀಡದೆ ಶಾಹೀದಾ ಬೆಗಂ ಇವಳು ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿದಳು ಆಗ ಅಲ್ತಾಪ ಈತನು ಅಲ್ಲೆ ಬಿದ್ದ ಒಂದು ಕಲ್ಲಿನಿಂದ ನನ್ನ ಎದೆಗೆ ಹೊಡೆದನು. ಆಗ ನಾವುಗಳು ಚೀರಾಡಲು ಶುರು ಮಾಡಿದಾಗ ನಮ್ಮ ದ್ವನಿ ಕೇಳಿ ಅಲ್ಲೆ ಇದ್ದ ಶ್ರೀ ನಾಗೇಶ ತಂದೆ ನಿಂಗಪ್ಪ ಗೋಗಿಕೇರಿ ಹಾಗೂ ಅಮ್ಮದ ಹುಸೇನ ತಂದೆ ಶೇಖ ಮಹೆಬೂಬ ಇವರು ಬಂದು ಜಗಳ ಬೀಡಿಸಿದರು. ಆಗ ಅವರು ಇವತ್ತು ಉಳದಿ ಇನ್ನೊಮ್ಮೆ ಸಿಕ್ಕರೆ ಖಲಾಸ ಮಾಡದೆ ಬಿಡುವದಿಲ್ಲ ಅಂತಾ ಜೀವ ಬೇದರಿಕೆ ಹಾಕಿ ಹೋದರು. ನನ್ನ ಮಗಳಾದ ಸಲ್ಮಾ ಇವಳಿಗೆ ಮೂಗಿಗೆ ರಕ್ತ ಸೋರಿದ್ದರಿಂದ ಹಾಗೂ ನನ್ನ ಎದೆಗೆ ಒಳಪೆಟ್ಟು ಮತ್ತು  ಗುಪ್ತ ಗಾಯ ಆಗಿರುವದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸುರಪುರದಿಂದ ಕಲಬುರಗಿಗೆ ಹೋಗಿ ಉಪಚಾರ ಮಾಡಿಕೊಂಡು ನಾವುಗಳು ಸುದಾರಿಸಿಕೊಂಡು ಹಿರಿಯರಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಇವರ ಮೇಲೆ ದೂರು ಸಲ್ಲಿಸುತ್ತಿದ್ದೆವೆ. ಈ ಮೇಲೆ ತಿಳಿಸಿದ ಆರೋಪಿಗಳು ಕಾನೂನು ಬಾಹಿರವಾಗಿ ನಗರಸಭೆ ಸುರಪುರ ಬೋರವೆಲ್ ಕಿಲಿಕೈ ತಮ್ಮಲ್ಲಿ ಇಟ್ಟುಕೊಂಡು ಸಾರ್ವಜನಿಕರು ನೀರು ಕೇಳಲು ಹೋದಾಗ ಸಂಪೂರ್ಣ ದಬ್ಬಾಳಿಗೆ ಮಾಡಿ ನಮಗೆ ಅವಾಚ್ಯ ಬೈದು ಹೊಡೆ ಬಡೆ ಮಾಡಿ ರಕ್ತಗಾಯ ಮಾಡಿ ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.  

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 75/2019 ಕಲಂ 399, 402 ಐ.ಪಿ.ಸಿ:- ದಿನಾಂಕ 25/03/2019 ರಂದು ಬೆಳಗಿನ ಜಾವ 01-15 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ.ಜಿ. ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ ಠಾಣೆ ರವರು 3 ಜನ ಆರೋಪಿ, ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 24/03/2019 ರಂದು ರಾತ್ರಿ 22-00 ಗಂಟೆಗೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಮಗನಾಲ್ ಜೈನ್ ಶಾಲೆಯ ಹತ್ತಿರ ಅಪರಿಚಿತ 4-5 ಜನ ವಯಸ್ಕರು ಒಂದು ಮೋಟರ ಸೈಕಲದೊಂದಿಗೆ ಬಂದು ದರೋಡೆ ಮಾಡಲು ಸಿದ್ದತೆ ಮಾಡಿಕೊಳ್ಳುತಿದ್ದ ಬಗ್ಗೆ ಖಚಿತಿ ಮಾಹಿತಿ ಬಂದ ಮೇರೆಗೆ ಸದರಿ ಫಿರ್ಯಾದಿವಯವರು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಮೂರು ಜನ ಆರೋಪಿತರನ್ನು ಹಿಡಿದಿದ್ದು, ಎರಡು ಜನ ಆರೋಪಿತರು ಓಡಿ ಹೋಗಿದ್ದು ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಸಿಲ್ವರ ಮತ್ತು ಕಪ್ಪು ಬಣ್ಣದ ಹೊಂಡಾ ಸಿಬಿ ಯುನಿಕಾನ್ ಮೋಟರ ಸೈಕಲ್ ನಂಬರ ಇರುವುದಿಲ್ಲ ಅಂ.ಕಿ 50,000 ರೂಪಾಯಿ ಕಿಮ್ಮತ್ತಿನದು ಮತ್ತು ಕೃತ್ಯಕ್ಕೆ ತಂದಿದ್ದ 2 ಕಬ್ಬಿಣದ ರಾಡ್, ಒಂದು ಕಬ್ಬಿಣದ ಪೈಪ್, ಎರಡು ಬಡಿಗೆ, ಅಂದಾಜು 100 ಗ್ರಾಂ ನಷ್ಟು ಖಾರದ ಪುಡಿ, ಮೂರು ಕಪ್ಪು ಬಣ್ಣದ ಬಟ್ಟೆಯ ಮುಖವಾಡ ನೇದ್ದವುಗಳನ್ನು ದಿನಾಂಕ 24/03/2019 ರಂದು ರಾತ್ರಿ 23-30 ಗಂಟೆಯಿಂದ ದಿನಾಂಕ 25/03/2019 ರಂದು ಬೆಳಗಿನ ಜಾವ 00-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಆರೋಪಿತರ ವಿರುದ್ದ ಠಾಣೆ ಗುನ್ನೆ ನಂ 75/2019 ಕಲಂ 399, 402 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 38/2019 ಕಲಂ 15(ಎ), 32(3) ಕೆ.ಇ ಎಕ್ಟ್:- ದಿನಾಂಕ: 25/03/2019 ರಂದು 7-30 ಪಿ.ಎಮ್ ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಹುರಸಗುಂಡಗಿ ಗ್ರಾಮದ ತನ್ನ ದಿನಸಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಗೆ ಮಧ್ಯ ಕುಡಿಯಲು ಅನುಕೂಲ ಮಾಡಿ ಕೊಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) 30.32/-ರೂ ನ 90ಟಟ ನ 50 ಓ.ಸಿ ವಿಸ್ಕಿ ಪೌಚಗಳು ಅ.ಕಿ. 1516/- ರೂ 2) 74.13/- ರೂ ಮೌಲ್ಯದ 180ಟಟ ನ 11 ಓಲ್ಡ್ ಟವೆರೆನ್ ವಿಸ್ಕಿ ಪೌಚಗಳು ಅ.ಕಿ: 815.43/- ರೂ ಹೀಗೆ ಒಟ್ಟು 6.480 ಲೀಟರ್ ಮದ್ಯ ಅದರ ಒಟ್ಟು ಕಿಮ್ಮತ್ತು 2331.43 ರೂ. ನೇದ್ದನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಆದೇಶಿಸಿದ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ ಬಗ್ಗೆ.
   
ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 37/2019 ಕಲಂ 78[3] ಕೆಪಿ ಯ್ಯಾಕ್ಟ:- ದಿನಾಂಕ 25/03/2019 ರಂದು 4-50 ಪಿಎಮ್ ಕ್ಕೆ  ಸಲಾದಪೂರ ಗ್ರಾಮದ ದ್ಯಾವಮ್ಮ ದೇವಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ನಂಬರ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 2550=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 4-40 ಪಿಎಮ್ ದಿಂದ 05.40 ಪಿಎಮ್ ವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡು 06.30 ಪಿಎಮ್ ಕ್ಕೆ ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7.30 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 37/2019 ಕಲಂ 78[3] ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!