ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-03-2019

By blogger on ಶನಿವಾರ, ಮಾರ್ಚ್ 23, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-03-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 73/2019 ಕಲಂ 15[ಎ] 32[3]  ಅಬಕಾರಿ ಕಾಯ್ದೆ:- ದಿನಾಂಕ 22/03/2019 ರಂದು ರಾತ್ರಿ 20-45 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ  ನಾಗರಾಜ ಜಿ ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ರಸ್ತಾಪೂರ ಗ್ರಾಮದ ಚೌಡಯ್ಯನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಭೀಮರಾಯ ತಂದೆ ರಾಮಯ್ಯ ಅಣಜಗಿ ವಯ 40 ವರ್ಷ ಜಾತಿ ಕಬ್ಬಲಿಗ ಉಃ ಹಮಾಲಿ ಕೆಲಸ ಸಾಃ ತಿಪ್ಪನಟಗಿ ತಾಃ ಸುರಪೂರ ಹಾಲಿವಸತಿ ರಸ್ತಾಪೂರ ತಾಃ ಶಹಾಪೂರ ಜಿಃ ಯಾದಗಿರಿ ಇವನು  ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನಕೂಲ ಮಾಡಿಕೊಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಫಿರ್ಯಾಧಿಯವರು ಪಂಚರು ಮತ್ತು ಸಿಬ್ಬಂಧಿಯವರೊಂದಿಗೆ ಹೋಗಿ ಸಾಯಂಕಾಲ 18-55 ಗಂಟೆಗೆ  ದಾಳಿ ಮಾಡಿ ಆರೋಪಿತನಿಂದ 1) 90 ಎಮ್.ಎಲ್.ನ 15 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಮದ್ಯದ ಪಾಕೇಟಗಳು ಅಂ.ಕಿ 454=00 ರೂಪಾಯಿ 80 ಪೈಸೆ. 2) 5 ಖಾಲಿ 90 ಎಮ್.ಎಲ್.ನ ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ ಅಂ.ಕಿ 00-00 3) 6 ಪ್ಲಾಸ್ಟೀಕ್ ಗ್ಲಾಸ್ ಅಂ.ಕಿ 00-00 ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 19-00 ಗಂಟೆಯಿಂದ 20-00 ಗಂಟೆಯ ವರೆಗೆ  ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 73/2019 ಕಲಂ 15[ಎ] 32[3] ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತದೆ

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 72/2019 ಕಲಂ 80 ಕೆ.ಪಿ.ಯಾಕ್ಟ:- ಇಂದು ದಿನಾಂಕ 22/03/2019 ರಂದು ಸಾಯಂಕಾಲ 17-30 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 9 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 22/03/2019 ರಂದು 14-10 ಪಿಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಶಹಾಪೂರ ನಗರದ ಚಾಮುಂಡೇಶ್ವರಿ ಕಾಲೋನಿಯಲ್ಲಿರುವ ಬಾಗ್ಯವಂತಿ ದೇವಸ್ಥಾನದ ಗುಡಿಯ ಹತ್ತಿ ಒಂದು ವಾಸವಿಲ್ಲದ ಮನೆಯಲ್ಲಿ ಕೆಲವು ಜನರು ಕೂಡಿಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮೀ ಬಂದ ಮೇರೆಗೆ ಶ್ರೀ ಶಿವನಗೌಡ ಪಾಟೀಲ ಡಿಎಸ್ಪಿ ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ನಮ್ಮ ಠಾಣೆಯ ಸಿಬ್ಬಂದಿಯವರಾದ ಹೊನ್ನಪ್ಪ ಹೆಚ್ಸಿ 101, ಬಾಬು ಹೆಚ್ಸಿ 162, ಶರಣಪ್ಪ ಹೆಚ್,ಸಿ,164, ಶಿವನಗೌಡ ಪಿಸಿ 141, ಗಣೇಶ ಪಿಸಿ 294, ದೇವರಾಜ ಪಿಸಿ 282, ಗಜೇಂದ್ರ ಪಿಸಿ 313, ಬಸವರಾಜ ಪಿಸಿ 346 ಜಡೆಪ್ಪ ಪಿಸಿ 350, ಭೀಮನಗೌಡ ಪಿಸಿ 402, ಮತ್ತು ಜೀಪ ಚಾಲಕನಾದ ನಾಗರಡ್ಡಿ ಎಪಿಸಿ 161 ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೇಕೆಂದು ತಿಳಿಸಿ ಬೀಟ ಸಿಬ್ಬಂದಿಯಾದ ಗಣೇಶ ಪಿಸಿ 294 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದ ಮೇರೆಗೆ ಸದರಿ ಸಿಬ್ಬಂದಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ 14.25 ಪಿಎಮ್ ಕ್ಕೆ ಹಾಜರುಪಡಿಸಿದ ಮೇರೆಗೆ ಸದರಿ ಪಂಚರಿಗೆ ಬಾತ್ಮೀ ವಿಷಯ ತಿಳಿಸಿ ನಮ್ಮ ಜೊತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು. ದಾಳಿ ಕುರಿತು ಠಾಣೆಯ ಜೀಪ ನಂ ಕೆಎ 33 ಜಿ 0138 ನೇದ್ದರಲ್ಲಿ ಮತ್ತು ಒಂದು ಖಾಸಗಿ ಜೀಪ ನೇದ್ದರಲ್ಲಿ ಠಾಣೆಯಿಂದ 14-30 ಪಿಎಮ್ ಕ್ಕೆ ಎಲ್ಲರೂ ಕೂಡಿ ಠಾಣೆಯಿಂದ ಹೊರಟು 14-40 ಪಿಎಮ್ಕ್ಕೆ ಶಹಾಪೂರ ನಗರದ ಚಾಮುಂಡೇಶ್ವರಿ ಕಾಲೋನಿಯ ಬಾಗ್ಯವಂತಿ ದೇವಸ್ಥಾನ ಗುಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಅಲ್ಲಿ ಜೀಪನಿಲ್ಲಿಸಿ ಎಲ್ಲರು ಜೀಪಿನಿಂದ ಕೆಳಗೆ ಇಳಿದು ಬಾಗ್ಯವಂತಿ ಗುಡಿಯ ಹತ್ತಿರ ನಡೆದುಕೊಂಡು ಹೋಗಿ ಬಾಗ್ಯವಂತಿ ಗುಡಿಯ ಪಕ್ಕದಲ್ಲಿ ಇರುವ ಒಂದು ವಾಸ ವಿಲ್ಲದ ಮನೆಯ ಒಂದು ಕೋಣೆಯ ಒಳಗಡೆ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದ ಬಗ್ಗೆ ಖಚಿತಪಡಿಸಿಕೊಂಡಿದ್ದು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 50 ರೂಪಾಯಿ ಅಂದರೆ, ಇನ್ನೊಬ್ಬನು ಬಾಹರಕ್ಕೆ 50 ರೂಪಾಯಿ ಅನ್ನುತ್ತ ಇಸ್ಪೇಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾಗ ನಾನು ಮತ್ತು ಸಿಬ್ಬಂದಿ ಪಂಚರ ಸಮಕ್ಷಮದಲ್ಲಿ  14-50 ಪಿಎಮ್ಕ್ಕೆ ಸದರಿಯವರ ಮೇಲೆ ದಾಳಿ ಮಾಡಲಾಗಿ ದಾಳಿಯಲ್ಲಿ 9 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ನಿಂಗಣ್ಣ ತಂದೆ ಮಲ್ಲಿಕಾಜರ್ುನ್ ಬಳಗಾರ ವ||43 ಜಾ|| ಲಿಂಗಾಯತ ಉ|| ವ್ಯಾಪಾರ ಸಾ|| ಗಣೇಶ ನಗರ ಶಹಾಪೂರ ಅಂತಾ ತಿಳಿಸಿದ್ದು, ಈತನ ಅಂಗಶೋಧನೆ ಮಾಡಲಾಗಿ 2400-00 ರೂ ಸಿಕ್ಕವು. 2) ಶರಣಪ್ಪ ತಂದೆ ಶಿವಪ್ಪ ಹಾಲಬಾವಿ ವ|| 45 ಜಾ|| ಹೊಲೆಯ ಉ|| ಕೂಲಿ ಸಾ|| ದಿಗ್ಗಿ ತಾ|| ಶಹಾಪೂರ ಅಂತಾ ತಿಳಿಸಿದ್ದು ಈತನ ಹತ್ತಿರ 2600-00 ರೂ.ಸಿಕ್ಕವು. 3) ಮಹೇಶ ತಂದೆ ಶೇಖಪ್ಪ ದೋಡ್ಡಮನಿ ವ|| 28 ಜಾ|| ಹೊಲೆಯ ಉ|| ಕೂಲಿ ಸಾ|| ಚಾಮುಂಡೆಶ್ವರಿ ನಗರ ಶಹಾಪೂರ ತಾ|| ಶಹಾಪೂರ ಈತನ ಹತ್ತಿರ 1510-00 ರೂ ಸಿಕ್ಕವು. 4) ಕಾಂತು ತಂದೆ ಹುಚ್ಚಪ್ಪ ಹಣಮಶೇಟ್ಟಿ ವ|| 40 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ|| ಲಕ್ಷೀನಗರ ಶಹಾಪೂರ ಅಂತಾ ತಿಳಿಸಿದ್ದು ಈತನ ಹತ್ತಿರ 1080-00 ರೂ ಸಿಕ್ಕವು. 5) ಸಂಗನಬಸಪ್ಪ ತಂದೆ ಸಿದ್ದಲಿಂಗಪ್ಪ ಉಮಾಶೇಟ್ಟಿ ವ|| 29 ಜಾ|| ಲಿಂಗಾಯತ ಉ|| ಕೂಲಿ ಸಾ|| ದಿಗ್ಗಿ ತಾ|| ಶಹಾಪೂರ ಅಂತಾ ತಿಳಿಸಿದ್ದು ಈತನ ಹತ್ತಿರ 2000-00 ರೂ ಸಿಕ್ಕವು. 6) ಭೀಮರಾಯ ತಂದೆ ಕಾಳಪ್ಪ ಎದರುಮನಿ ವ|| 35 ಜಾ|| ಮಾದಿಗ ಉ|| ಕೂಲಿ ಸಾ|| ಕನ್ಯಕೊಳ್ಳೂರ ಅಗಸಿ ಹಳೀಪೇಠ ಶಹಾಪೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ಈತನ ಹತ್ತಿರ 4000-00 ರೂ ಸಿಕ್ಕವು. 7) ಕಿರಣ ತಂದೆ ಸಾಯಿನಾಥ ಸಾವೂಕಾರ ವ|| 24 ಜಾ|| ಲಿಮಗಾಯತ ಉ|| ಕೂಲಿ ಸಾ|| ಮಡಿವಾಳೇಶ್ವರ ನಗರ ಶಹಾಪೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ಈತನ ಹತ್ತಿರ 1030-00 ರೂ ಸಿಕ್ಕವು. 8) ಹುಲಗಪ್ಪ ತಂದೆ ಮರೆಪ್ಪ ದೊಡ್ಮನಿ ವ|| 29 ಜಾ|| ಮಾದಿಗ ಉ|| ಕೂಲಿ  ಸಾ|| ಕನ್ಯಾಕೊಳ್ಳೂರ ಅಗಸಿ ಹಳಿಪೇಠ ಶಹಾಪೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ಈತನ ಹತ್ತಿರ 980-00 ರೂ ಸಿಕ್ಕವು. 9) ಮೋಹನ ರೆಡ್ಡಿ ತಂದೆ ಭೀಮರಾಯ ಅವಾಲ್ದಾರ ವ|| 52 ಜಾ|| ರೆಡ್ಡಿ ಉ|| ಕೂಲಿ ಸಾ|| ಬಾಪೂಗೌಡ ನಗರ ಶಹಾಪೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ಈತನ ಹತ್ತಿರ 1700-00 ರೂ ಸಿಕ್ಕವು. ಮತ್ತು ಎಲ್ಲರ ಮಧ್ಯದ ಕಣದಲ್ಲಿ 1100-00 ರೂ ದೊರೆತಿದ್ದು ಹೀಗೆ ಒಟ್ಟು 18400/- ರೂಪಾಯಿ ಹಾಗೂ ಇಸ್ಪೇಟ ಜೂಜಾಟ ಆಡಲು ಬಳಸಿದ್ದ 52 ಇಸ್ಪೇಟ್ ಎಲೆಗಳು ಸಿಕ್ಕಿದ್ದು, ಹಣ ಮತ್ತು ಇಸ್ಪೇಟ ಎಲೆಗಳನ್ನು ಒಂದು ಲಕೋಟೆಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 15-00 ಪಿಎಮ್ ದಿಂದ 16-00 ಪಿಎಂ ದವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮಾಡಿ ಮುದ್ದೆಮಾಲನ್ನು ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೇನೆ. ಮತ್ತು ಜೂಜಾಟದಲ್ಲಿ ಸಿಕ್ಕ 9 ಜನರನ್ನು ತಾಬೆಗೆ ತೆಗೆದುಕೊಂಡು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೂಡಿ ಮರಳಿ ಠಾಣೆಗೆ 16-30 ಪಿಎಮ್ ಕ್ಕೆ ಬಂದು ವರದಿಯನ್ನು ತಯಾರಿಸಿ 17-30 ಪಿಎಮ್ ಕ್ಕೆ 9  ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ, ನಂ,23/2019 ಕಲಂ 80 ಕೆ.ಪಿ.ಯಾಕ್ಟ ನೋಂದಣಿ ಮಾಡಿಕೊಂಡಿದ್ದು. ಕಲಂ 80 ಕೆ.ಪಿ.ಯಾಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ಮುಂದಿನ ಕ್ರಮ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಹುಲಗಪ್ಪ .ಪಿ.ಸಿ. 344 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 18-00 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 72/2019 ಕಲಂ 80 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
      
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 71/2019 ಕಲಂ 80 ಕೆ.ಪಿ.ಯಾಕ್ಟ:- ದಿನಾಂಕ 22/03/2019 ರಂದು 12.00 ಪಿ.ಎಂಕ್ಕೆ ಶ್ರೀ ನಾಗರಾಜ.ಜಿ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಚಾಮುಂಡೇಶ್ವರಿ ಕಾಲೋನಿಯ ಒಂದು ವಾಸವಿಲ್ಲದ ಮನೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೆಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿದ್ದು ದಾಳಿಯಲ್ಲಿ 9 ಜನರು ಸಿಕ್ಕಿದ್ದು ಅವರ ಹೆಸರು 1) ರಮೇಶ ತಂದೆ ಗಿರೆಪ್ಪ ರಾಠೋಡ ವ|| 28 ಜಾ|| ಲಂಬಾಣಿ ಉ|| ಕೂಲಿ ಸಾ|| ಹೊಸ್ಕೇರಾ ಬಾಂಗ್ಲಾ ತಾಂಡಾ 2) ಭೀಮರಾಯ ತಂದೆ ಬಾಲಪ್ಪ ಹೊಸಮನಿ ವ|| 35 ಜಾ|| ಹೊಲೆಯ ಉ|| ಚಾಲಕ ಸಾ|| ರಬ್ಬನಳ್ಳಿ 3) ಶಿವಯೋಗಿ ತಾಯಿ ಭೀಮವ್ವ ಸನ್ನತಿ ವ|| 30 ಜಾ|| ಹೊಲೆಯ ಉ|| ಕೂಲಿ ಸಾ|| ಅಣಬಿ 4) ಸಾಯಬಣ್ಣ ತಂದೆ ಕೃಷ್ಣಪ್ಪ ಹೆಮ್ಮಡಗಿ ವ|| 27 ಜಾ|| ಕಬ್ಬಲಿಗ ಉ|| ವ್ಯಾಪಾರ ಸಾ|| ಗಂಗಾನಗರ ಶಹಾಪೂರ 5) ಚಂದ್ರು ತಂದೆ ಸೊಮಲು ರಾಠೋಡ ವ|| 32 ಜಾ|| ಲಂಬಾಣಿ ಉ|| ಕೂಲಿ ಸಾ|| ಗಂಗೂನಾಯ್ಕ ತಾಂಡಾ ಗೋಗಿ 6) ಶರಣಪ್ಪ ತಂದೆ ಸಿದ್ರಾಮಪ್ಪ ಹೊಸಮನಿ ವ|| 30 ಜಾ|| ಹೊಲೆಯ ಉ|| ಒಕ್ಕಲುತನ ಸಾ|| ಕೋಡಮನಳ್ಳಿ 7) ಬಸವರಾಜ ತಂದೆ ಮರೆಪ್ಪ ದೇವರಮನಿ ವ|| 30 ಜಾ|| ಹೊಲೆಯ ಉ|| ಒಕ್ಕಲುತನ ಸಾ|| ಅಣಬಿ 8) ತಿರುಮಲ ತಂದೆ ನಾಮು ರಾಠೋಡ ವ|| 37 ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ನಾಗನಟಿಗಿ ತಾಂಡಾ 9) ಗೋಪಾಲ ತಂದೆ ಚಂದು ರಾಠೋಡ ವ|| 31 ಜಾ|| ಲಂಬಾಣಿ ಉ|| ಚಾಲಕ ಸಾ|| ಗಂಗೂನಾಯ್ಕ ತಾಂಡಾ ಗೋಗಿ ತಾ|| ಶಹಾಪೂರ ಅಂತಾ ತಿಳಿಸಿದ್ದು ಅವರ ಹತ್ತಿರ 23250/- ರೂ ಮತ್ತು 52 ಇಸ್ಪೇಟ ಎಲೆಗಳು ಸಿಕ್ಕಿದ್ದು, ಹಣ ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳು ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 22/03/2019 ರಂದು 2.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ 3.00 ಪಿ.ಎಂಕ್ಕೆ ಠಾಣೆಗೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 71/2019 ಕಲಂ 80 ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 35/2019 ಕಲಂ 87 ಕೆಪಿ ಯ್ಯಾಕ್ಟ:- ದಿನಾಂಕ 22/03/2019 ರಂದು ಆರೋಪಿತರೆಲ್ಲರೂ    ಹುರಸಗುಂಡಗಿ ಗ್ರಾಮದ ಕುಲಸಮ್ಮ ದೇವಿಯ ಗುಡಿಯಮುಂದೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಶ್ರೀ ದೌಲತ್. ಎನ್.ಕೆ ಪಿಐ (ಡಿಸಿಬಿ) ಸಿಇಎನ್ ಠಾಣೆ ಯಾದಗಿರಿ  ಸಾಹೇಬರು ತಮ್ಮ ಹಾಗು ಭೀ.ಗುಡಿ ಪೊಲೀಸ್ ಠಾಣೆಯ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5-10 ಪಿಎಮ್ ಕ್ಕೆ ದಾಳಿ ಮಾಡಿದಾಗ 04 ಜನ ಸಿಕ್ಕಿದ್ದು 02 ಜನ ಓಡಿ ಹೋದರು. ದಾಳಿಯಲ್ಲಿ ಸಿಕ್ಕ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 12500/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು 5-15 ಪಿಎಮ್ ದಿಂದ 6-15 ಪಿಎಮ್ ವರೆಗೆ ಜಪ್ತಿಪಡಿಸಿಕೊಂಡು 7-15 ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 08-15 ಪಿಎಮ್.ಕ್ಕೆ ಠಾಣೆ ಗುನ್ನೆ ನಂ: 35/2019 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 76/2019 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್. ಡಿ.ಆರ್.ಆಕ್ಟ 1957:- ದಿನಾಂಕ:23-03-2019 ರಂದು 3-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿ ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:23-03-2019 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮನೋಹರ ಹೆಚ್ಸಿ-105 2) ಸೋಮಯ್ಯಾ ಸಿಪಿಸಿ- 235 ಹಾಗೂ ಜೀಪ ಚಾಲಕನಾದ 3) ಮಾಹಾಂತೇಶ ಎಪಿಸಿ-48 ಎಲ್ಲರೂ ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಕನರ್ಾಳ ಸೀಮಾಂತರದ ಕನರ್ಾಳ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಯಾರೋ ತಮ್ಮ ಟ್ಯಾಕ್ಟರದಲ್ಲಿ  ಅಕ್ರಮವಾಗಿ ಮರಳು ತುಂಬಿಕೊಂಡು ಕನರ್ಾಳ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:50 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ 2) ಶ್ರಿ ಮಹೀಬೂಬ ತಂದೆ ಮುಸ್ತಪಸಾಬ ಮಕ್ಕಾ ವಯಾ:27 ವರ್ಷ ಉ:ಡೈವರ್ ಜಾ:ಮುಸ್ಲಿಂ ಸಾ:ರುಕ್ಮಾಪುರ ಇವರನ್ನು ಠಾಣೆಗೆ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಸಿಬ್ಬಂದಿಯವರೆಲ್ಲರೂ ಕೂಡಿ ಸದರಿ ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33, ಜಿ-0238 ನೇದ್ದರ ವಾಹನದಲ್ಲಿ 12-45 ಪಿ.ಎಮ್ಕ್ಕೆ ಠಾಣೆಯಿಂದ ಹೊರಟು 01-30 ಪಿ.ಎಮ್ ಕ್ಕೆ ಕನರ್ಾಳ ಸೀಮಾಂತರದ ನಧಿಯ ದಾರಿಯ ಮುಖಾಂತರ ನದಿ ದಡದ ಹತ್ತಿರ ನದಿಯ ಕಡೆಗೆ ಹೋಗುತ್ತಿರುವಾಗ  ಅದೇ ಸಮಯಕ್ಕೆ ನದಿ ಒಳಗಿನಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುವುದನ್ನು ಕಂಡು ನಮ್ಮ ಜೀಪ ನಿಲ್ಲಿಸಿ ಕೆಳಗೆ ಇಳಿದು ಟ್ಯಾಕ್ಟರ ಚಾಲನಿಗೆ ಟ್ಯಾಕ್ಟರ ನಿಲ್ಲಿಸುವಂತೆ ಕೈ ಮಾಡಿದಾಗ ಸದರಿ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ಅಲ್ಲೆ ನಿಲ್ಲಿಸಿ ಕೆಳಗೆ ಇಳಿದು ಓಡಿ ಹೋಗಿದ್ದು, ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಒಂದು ಸ್ವರಾಜ್ಯ ಕಂಪನಿಯ ಟ್ಯಾಕ್ಟರ ಇದ್ದು ಅದಕ್ಕೆ ನಂಬರ ಇರುವದಿಲ್ಲ ಅದರ ಇಂಜಿನ ನಂಬರ 39.1354/ಉಏ010150ಂ  ಚೆಸ್ಸಿ ನಂಬರ ಘಖಖಿಐ31419111501 ನೇದ್ದು ಇದ್ದು ಟ್ರಾಲಿಗೆ ನಂಬರ ಇರುವದಿಲ್ಲ ಟ್ರಾಲಿಯಲ್ಲಿ ಅಂದಾಜು 2 ಘನ ಮೀಟರ ಮರಳು ತುಂಬಿದ್ದು ಅದರ ಅಂದಾಜು ಕಿಮ್ಮತ್ತು 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ಅಕ್ರಮ ಸಾಗಾಣಿಕೆ ಮಾಡುತ್ತಿದ್ದುದು ಇರುತ್ತದೆ. ಸದರಿ ಮರಳು ತುಂಬಿದ ವಾಹನವನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 01-30 ಪಿ.ಎಮ್ ದಿಂದ 02-30 ಪಿ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಕಾರಣ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟ್ಯಾಕ್ಟರದಲ್ಲ್ಲಿ ಒಟ್ಟು 1600=00 ರೂ ಕಿಮ್ಮತ್ತಿನ  ಅಂದಾಜು 2 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಟ್ಯಾಕ್ಟರನ್ನು ನಿಮ್ಮ ವಶಕ್ಕೆ ನೀಡಿರುತ್ತೆನೆ ಅಂತಾ ವರದಿ ನಿಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!