ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-03-2019
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 40/2019 ಕಲಂ 143, 147, 148, 323, 324, 504, 506 ಸಂ 149 ಐಪಿಸಿ:-ದಿನಾಂಕ 13-03-2019 ರಂದು ಸಾಯಂಕಾಲ 7-30 ಗಂಟೆಗೆ ಫಿರ್ಯಾಧಿದಾರಳು ಮತ್ತು ಅವನ ಮನೆಯವರೆಲ್ಲರೂ ಕೂಡಿಕೊಂಡು ಆರೋಪಿತರ ಮನೆ ಹತ್ತಿರ ಹೋಗಿ ನೀವು ಸಿಸಿ ರೋಡ ಮೇಲೆ ಹೆಚ್ಚಿಗೆ ನೀರು ಹೊಡೆದಿದ್ದರಿಂದ ಆ ನೀರು ನಮ್ಮ ಮನೆಯ ಮುಂದೆ ನಿಂತು ಹೊಲಸು ಆಗುತ್ತಿದೆ, ನೀರು ಹೆಚ್ಚಿಗೆ ಹೊಡೆಯಬೇಡಿರಿ ಅಂತಾ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಏ ಬೋಸಡಿ ಮಕ್ಕಳೆ ಸಿಸಿ ರೋಡ ಕ್ಯೂರ ಆಗುವ ಸಂಬಂಧ ನೀರು ಹೊಡೆದಿದಕ್ಕೆ ನೀವು ನಮ್ಮ ಮನೆಯ ಹತ್ತಿರ ಬಂದು ನಮಗೆ ಕೇಳುತ್ತಿರಿ ಅಂತಾ ಅವಾಚ್ಯವಾಗಿ ಬೈದು, ನಿಮಗೆ ಬಹಳ ಸೊಕ್ಕುಯಿದೆ ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಫಿರ್ಯಾಧಿ ಮತ್ತು ಅವನ ಮನೆಯವರ ಜೋತೆಗೆ ಜಗಳ ತೆಗೆದು ಕೈಯಿಂದ, ಕಟ್ಟಿಗೆಯಿಂದ ಮತ್ತು ಕಲ್ಲಿನಿಂದ ಫಿರ್ಯಾಧಿಗೆ ಮತ್ತು ಅವನ ಮನೆಯವರಿಗೆ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 52/19 ಕಲಂ:143,147,148,323,326,504,506 ಸಂ149 ಐಪಿಸಿ:-ದಿನಾಂಕ 18.03.2019 ರಂದು ಬೆಳಿಗ್ಗೆ 7:00 ಗಂಟೆಯ ಸುಮಾರಿ ಫಿರ್ಯಾಧಿ ತನ್ನ ಮನೆಯ ಮುಂದಿನ ರೊಡಿನ ಮೇಲೆ ಜೋಳದ ತೆಗೆಗಳನ್ನು ಬಡಿದು ತೂರುತ್ತಿದ್ದಾಗ ಎ-1 ರಿಂದ ಎ-3 ರವರು ಮೋಟಾರು ಸೈಕಲ್ ನಂ: ಕೆಎ-33-ಡಬ್ಲೂ-7608 ನೇದ್ದರ ಮೇಲೆ ಬಂದಿದ್ದು ಎ-4 ರಿಂದ ಎ-6 ರವರು ನಡೆದುಕೊಂಡು ಕೈಯಲ್ಲಿ ಕಟ್ಟಿಗೆ ಬಡಿಗೆ ಹಿಡಿದುಕೊಂಡು ಅಕ್ರಮಕೂಟ ರಚಿಸಿಕೊಂಡು, ಏಕ್ಕೊದ್ದೇಶದಿಂದ ಬಂದು ಫಿರ್ಯಾದಿಗೆ ಮತ್ತು ಆತನ ತಂದೆಗೆ ಕೈಯಿಂದ, ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಕಲ್ಲು ಎತ್ತಿ ಹಾಕಿದ್ದು, ಬಾಯಿಂದ ಫಿರ್ಯಾದಿಯ ಬಲಗೈ ಹೆಬ್ಬೆರಳು ಕಚ್ಚಿ ಉಗುರು ತೆಗೆದಿದ್ದು ಅಲ್ಲದೇ ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: ಗುನ್ನೆ ನಂ:52/2019 ಕಲಂ:143, 147, 148, 323, 326, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 38/2019 ಕಲಂ. 87 ಕೆ.ಪಿ.ಕಾಯ್ದೆ:- ದಿನಾಂಕ: 18/03/2019 ರಂದು 5-30 ಪಿಎಮ್ ಕ್ಕೆ ಪಿ.ಎಸ್.ಐ ವಡಗೇರಾ ಠಾಣೆ ರವರು ಠಾಣೆಗೆ ಹಾಜರಾಗಿ ಇಂದು ದಿನಾಂಕ: 18/03/2019 ರಂದು ಬೀರನಾಳ ಗ್ರಾಮದ ಹನುಮಾನ ದೇವರ ಗುಡಿ ಹತ್ತಿರ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾಗ ನಾನು ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಿದಾಗ ಅಂದರ-ಬಾಹರ ಇಸ್ಪೀಟ ಆಟ ಆಡುತ್ತಿದ್ದ 1) ದೇವಿಂದ್ರಪ್ಪ ತಂದೆ ಶಂಕರಣ್ಣ ಸಾಹುಕಾರ, ವ:40, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಬೀರನಾಳ ಎಂದು ಹೇಳಿದ್ದು, ಇವನ ಹತ್ತಿರ 345=00 ರೂ. ನಗದು ಹಣ, ಮತ್ತು 17 ಇಸ್ಪಿಟ್ ಎಲೆಗಳು ದೊರೆತ್ತಿದ್ದು, 2) ಗುರುನಾಥರೆಡ್ಡಿ ತಂದೆ ಶಿವಬಸಪ್ಪ ಬಸರೆಡ್ಡಿ, ವ:45, ಜಾ:ಲಿಂಗಾಯತರೆಡ್ಡಿ, ಉ:ಒಕ್ಕಲುತನ ಸಾ:ಬೀರನಾಳ ಈತನ ಹತ್ತಿರ ನಗದು ಹಣ 285=00 ರೂ. ದೊರೆತಿದ್ದು, 3) ಶಿವರಾಜ ತಂದೆ ಸಿದ್ದಣ್ಣ ಹೊಸಗೌಡರ, ವ:31, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಬೀರನಾಳ ಈತನ ಹತ್ತಿರ 460=00 ರೂ. ದೊರೆತ್ತಿದ್ದು, ಎಲ್ಲರ ಮದ್ಯ ಇಸ್ಪೀಟ ಆಡುತ್ತಿದ್ದ ಸ್ಥಳದಲ್ಲಿ 610=00 ರೂ ನಗದು ಹಣ ಮತ್ತು 35 ಇಸ್ಪಿಟ್ ಎಲೆಗಳು ಇದ್ದವು. ಹೀಗೆ ಒಟ್ಟು 1700=00 ರೂ. ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ದೊರತ್ತಿದ್ದು, ಸದರಿ ಸಿಕ್ಕಿರುವ ಮೂರು ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ಕೊಟ್ಟ ಪತ್ರವನ್ನು ಇಂದು ದಿನಾಂಕ: 18/03/2019 ರಂದು 8-30 ಪಿಎಮ್ ಕ್ಕೆ ಕೋರ್ಟ ಹೆಚ್.ಸಿ 57 ರವರು ಹಾಜರಪಡಿಸಿದ ಮೇರೆಗೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 38/2019 ಕಲಂ: 87 ಕೆ.ಪಿ ಎಕ್ಟ್ 1963 ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 27/2019 ಕಲಂ, 78(3) ಕೆ.ಪಿ.ಆ್ಯಕ್ಟ್:- ದಿನಾಂಕ: 18/03/2019 ರಂದು 07.30 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಶರಣಪ್ಪ ಮಾವನೂರ ಎ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: ದಿನಾಂಕ: 18/03/2019 ರಂದು 10.10 ಎಎಮ್ ಕ್ಕೆ ನಾಗನಟಗಿ ಗ್ರಾಮದ ಬಾಬು ಹೋಟೆಲ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನಾಧ ಭೀಮಣ್ಣ ತಂದೆ ಬಾಲಪ್ಪ ಖಾನಾಪೂರ ವಯಾ: 25 ಉ: ಒಕ್ಕಲುತನ ಜಾ: ಕುರುಬರ ಸಾ: ನಾಗನಟಗಿ ತಾ:ಶಹಾಪುರ ಜಿ:ಯಾದಗಿರಿ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 1260/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 08.30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 27/2019 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using