ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-03-2019

By blogger on ಸೋಮವಾರ, ಮಾರ್ಚ್ 18, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-03-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 51/2019 ಕಲಂ: 323, 326, 504, 506 ಸಂಗಡ 34 ಐಪಿಸಿ:-ದಿನಾಂಕ 11.03.2019 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿ ಫಿರ್ಯಾದಿ ತನ್ನ ಮನೆಯಲ್ಲಿದ್ದಾಗ ಫಿರ್ಯಾದಿಯ 2ನೇ ಹೆಂಡತಿಯ ತಂದೆ ಮತ್ತು ತಮ್ಮ ಇಬ್ಬರು ಫಿರ್ಯಾಧಿಯ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆ-ಬಡೆ ಮಾಡಿ, ಕಾಲಿನಿಂದ ಒದ್ದು, ಕಲ್ಲಿನಿಂದ ಫಿರ್ಯಾದಿಯ ಬಲಗೈ ಮೇಲೆ ಹೊಡೆದು ಕೈ ಕುರಿದು ಭಾರಿ ರಕ್ತಗಾಯಗೊಳಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ಖಾನಿ ಔಷಧಿಯನ್ನು ಸೇವಿಸಿದ ನಂತರ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ದಿನಾಂಕ 17.03.2019 ರಂದು ತಡವಾಗಿ ಠಾಣೆಗೆ ಬಂದು ಒಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 51/2019 ಕಲಂ: 323, 326, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 50/2019 ಕಲಂ: 498(ಎ), 323, 324, 504, 506 ಐಪಿಸಿ:-ಫಿರ್ಯಾದಿ ಮತ್ತು ಆರೋಪಿತರಿಗೆ ಸುಮಾರು ವರ್ಷಗಳ ಹಿಂದೆ ಹಿರಿಯರ ಸಮಕ್ಷಮದಲ್ಲಿ ಸಂಪ್ರದಾಯದಂತೆ ಮದುವೆಯಾಗಿದ್ದು ಅವರ ದಾಂಪತ್ಯ ಜೀವನದಲ್ಲಿ ಇಬ್ಬರು ಮಕ್ಕಳೀರುತ್ತಾರೆ. ಕೆಳ ವರ್ಷಗಳ ಹಿಂದಿನಿಂದ ಆರೋಪಿತನು ತನ್ನ ಹೆಂಡತಿ ಫಿರ್ಯಾದಿದಾರಳು ಚನ್ನಾಗಿ ಅಡುಗೆ ಮಾಡಲು ಬರುವುದಿಲ್ಲ ಅಂತಾ ಮಾನಸೀಕ ಮತ್ತು ದೈಹಿಕ ಹಿಂಸೆ ನೀಡುತ್ತ ಬಂದಿರುತ್ತಾನೆ. ಅದಾದ ನಂತರ ದಿನಾಂಕ 15.03.2019 ರಂದು ಬೆಳೀಗ್ಗೆ 9:00 ಗಂಟೆಯ ಸುಮಾರಿಗೆ ಬೆಂಗಳೂರಿನಿಂದ ಕೊಂಕಲ್ ಗ್ರಾಮಕ್ಕೆ ಬಂದ ಫಿರ್ಯಾದಿ ಮತ್ತು ಆರೋಪಿತರು ಫಿರ್ಯಾದಿದಾರಳು ತನ್ನ ತವರು ಮನೆಗೆ ಹೋಗಿ ತಾಯಿಗೆ ಮಾತನಾಡಿಸಿಕೊಂಡು ಮರಳಿ ಗಂಡನ ಮನೆಗೆ ಬಂದಾಗ ಮನೆಯಲ್ಲಿದ್ದ ಆರೋಪಿ ಗಂಡನು ಫಿರ್ಯಾದಿಗೆ ಅವಾಚ್ಯವಾಗಿ ಬೈದು, ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ, ಕಾಲಿನಿಂದ ಒದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ತನ್ನ ತಾಯಿ ಹಾಗೂ ಹಿರಿಯರಿಗೆ ವಿಚಾರಿಸಿದ ನಂತರ ಇಂದು ದಿನಾಂಕ 16.03.2019 ರಂದು ದೂರು ನೀಡಿದ್ದು ಸದರಿ ಫಿರ್ಯಾದಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 50/2019 ಕಲಂ: 498(ಎ), 323, 324, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 17/2019 ಕಲಂ: 457,380 ಐಪಿಸಿ:-ದಿನಾಂಕ 17.03.2019 ರಂದು ಸಾಯಂಕಾಲ 09:00 ಗಂಟೆಗೆ ಪಿಯರ್ಾದಿ ರಾಚಪ್ಪ ತಂದೆ ಭೀಮಣ್ಣ ಹೂಗಾರ ವಯ:60 ವರ್ಷ, ಉ:ಆಂಜನೇಯ ದೇವರ ಗುಡಿ ಪೂಜಾರಿ, ಜಾ:ಹೂಗಾರ ಸಾ:ಬರದೇವನಾಳ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪೂಟರ್ದಲ್ಲಿ ಟೈಪ್ ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ, ನಮ್ಮ ತಂದೆಯವರ ಕಾಲದಿಂದಲೂ ನಾನು ನಮ್ಮೂರ ಆಂಜನೇಯ ದೇವರ ಗುಡಿಯ ಪೂಜಾರಿಕೆ ಮಾಡಿಕೊಂಡು ಬಂದಿದ್ದು, ನಾನು ದಿನಾಲು ಬೆಳಿಗ್ಗೆ 06:00 ಗಂಟೆಗೆ ದೇವಸ್ಥಾನಕ್ಕೆ ಹೋಗಿ ದೇವರ ಪೂಜೆ ಮಾಡಿ ರಾತ್ರಿ 8:00 ಗಂಟೆಯ ಸುಮಾರಿಗೆ ದೇವಸ್ಥಾನದ ಗರ್ಭ ಗುಡಿಯ ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗುತ್ತೇನೆ. ಆಂಜನೇಯ ದೇವರ ಮೂತರ್ಿಯು ಕಲ್ಲಿನದಿದ್ದು, ಅಂದಾಜು 2 ಫೀಟ್ ಎತ್ತ ರ ಇದ್ದು, ಈ ಮೂತರ್ಿಯು ಉದ್ಭವ ಮೂತರ್ಿಯಾಗಿದ್ದು, ಮೂತರ್ಿಯನ್ನು ಗರ್ಭಗುಡಿಯಲ್ಲಿ ಪತರ್ಿಷ್ಠಾಪನೆ ಮಾಡಿದ್ದು, ಗರ್ಭಗುಡಿಗೆ ಕಬ್ಬಿಣದ ಸಲಾಕೆ ಕೂಡಿಸಿದ ಬಾಗಿಲು ಇದ್ದು, ನಾನು ಪ್ರತಿದಿನದಂತೆ ನಿನ್ನೆ ದಿನಾಂಕ:16.03.2019 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಮುಚ್ಚಿಕೊಂಡು ಮನೆಗೆ ಬಂದಿದ್ದು ಈ ದಿವಸ ಮುಂಜಾನೆ 5:45 ಗಂಟೆಯ ಸುಮಾರಿಗೆ ನಾನು ನನ್ನ ಮನೆಯಲ್ಲಿದ್ದಾಗ ನಮ್ಮೂರ ಮಲ್ಲಪ್ಪ ತಂದೆ ಯಮನಪ್ಪ ಹುಂಡಿ ಈತನು ನಮ್ಮ ಮನೆಗೆ ಬಂದು ತಿಳಿಸಿದ್ದೇನೆಂದರೆ ನಾನು ಆಂಜನೇಯ ದೇವರಿಗೆ ನಮಸ್ಕರಿಸಲು ಈಗ ಸ್ವಲ್ಪ ಹೊತ್ತಿನ ಹಿಂದೆ ಹೋದಾಗ ಗುಡಿಯಲ್ಲಿ ದೇವರ ಮೂತರ್ಿ ಕಾಣಿಸಲಿಲ್ಲ. ಮತ್ತು ಗರ್ಭ ಗುಡಿಯ ಬಾಗಿಲು ತೆರೆದಿದ್ದಾಗಿ ತಿಳಿಸಿದ್ದು, ಕೂಡಲೇ ನಾನು ಮತ್ತು ಮಲ್ಲಪ್ಪ ರವರು ಇಬ್ಬರೂ ಕೂಡಿ ನಮ್ಮೂರ ಮುಖಂಡರಾದ ಶಾಂತಗೌಡ ತಂದೆ ಗದ್ದೇಪ್ಪಗೌಡ ಮಾಲಿಪಾಟೀಲ್, ಶಿವನಗೌಡ ತಂದೆ ನಂದನಗೌಡ ಪೊಲೀಸ್ಪಾಟೀಲ್, ಕಟ್ಟೆಪ್ಪಗೌಡ ತಂದೆ ಯಂಕನಗೌಡ ಮಾಲಿಪಾಟೀಲ್, ಗದ್ದೆಪ್ಪ ತಂದೆ ಅಂತ್ರೆಪ್ಪಹುಡೇದ್, ಬಸವರಾಜ ತಂದೆ ಮೈಲಾರಪ್ಪ ಹುಡೇದ್, ಬಸಲಿಂಗಯ್ಯ ತಂದೆ ತಂದೆ ದೊಡ್ಡಯ್ಯ ಸ್ವಾಮಿ ಹಿರೇಮಠ ಹಾಗು ನಮ್ಮೂರ ಇತರರೊಂದಿಗೆ ಆಂಜನೇಯ ದೇವರ ಗುಡಿಗೆ ಹೋಗಿ ನೋಡಲಾಗಿ ಗರ್ಭಗುಡಿಯ ಕೀಲಿ ಹಾಕಿದ ಬಾಗಿಲು ತೆರೆದಿದ್ದು, ಗರ್ಭಗುಡಿಯಲ್ಲಿ ಕಲ್ಲಿನ ಆಂಜನೇಯ ದೇವರ ಮೂತರ್ಿ ಇರಲಿಲ್ಲ. ಮೂತರ್ಿಯು ಉದ್ಭವ ಮೂತರ್ಿಯಾಗಿದ್ದು, ಅಂದಾಜು 2 ಫೀಟ್ ಎತ್ತರ ಇರುತ್ತದೆ. ಮೂತರ್ಿಯ ಪಕ್ಕದಲ್ಲಿ ಇದ್ದ ಎರಡು ತೊಲೆಯ ಬೆಳ್ಳಿಯ ಕಣ್ಣಬಟ್, ಅ:ಕಿ:800/-, ಎರಡು ತೊಲೆಯ ಬೆಳ್ಳಿಯ ಮೀಸೆ ಅ:ಕಿ:800/-  ಹಾಗು ಭಕ್ತರು ಹಾಕಿದ ಚಿಲ್ಲರೇ ಹಣ  ಮತ್ತು ನೋಟು ಅಂದಾಜು 1000/- ರೂ ಗಳನ್ನು ಯಾರೋ  ಕಳ್ಳರು ದಿನಾಂಕ:16.03.2019 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ:17.03.2019 ರಂದು ಬೆಳಿಗ್ಗೆ 05:30 ಗಂಟೆಯ ಮದ್ಯದ ಅವಧಿಯಲ್ಲಿ ಗರ್ಭಗುಡಿಯ ಕೀಲಿ ಹಾಕಿದ ಬಾಗಿಲನ್ನು ದಬ್ಬಿ ಒಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ದೇವಸ್ಥಾನದ ಮುಂದಿನ ಆವರಣದಲ್ಲಿ ವಾಹನ ತಿರುಗಾಡಿದ ಗುರುತು ಕಂಡುಬಂದಿರುತ್ತವೆ. ಆಂಜನೇಯ ಮೂತರ್ಿಯನ್ನು ನಾನು ನೋಡಿದರೆ ಗುರುತಿಸುತ್ತೇನೆ. ಕಾರಣ ಮಾನ್ಯರು ಆಂಜನೇಯ ಕಲ್ಲಿನ ಉದ್ಭವ ಮೂತರ್ಿಯನ್ನು ಹಾಗು ಬೆಳ್ಳಿಯ ಕಣ್ಣಬಟ್ಟು ಹಾಗು ಮೀಸೆಯನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:14/2019 ಕಲಂ:457, 380 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
      
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 38/2019 ಕಲಂ 87 ಕೆ.ಪಿ ಆಕ್ಟ್:- ದಿನಾಂಕ 17/03/2019 ರಂದು 4-15 ಪಿ.ಎಂ ಕ್ಕೆ  ಆರೋಪಿತರು  ಇಸ್ಪಿಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿನಕೇರಾ ಸೀಮಾಂತರದಲ್ಲಿ ಹಳ್ಳದ ಪಕ್ಕದಲ್ಲಿ ಖುಲ್ಲಾ ಜಾಗೆಯಲ್ಲಿ ಹೋಗಿ ಪಂಚರು ಹಾಗೂ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ ಆರೋಪಿತರಿಗೆ ಹಿಡಿದು 77760/-ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳು,  ಆರೋಪಿತರಿಂದ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಜಪ್ತಿ ಪಂಚನಾಮೆಯ ಸಾರಂಶದ ಮೇಲಿಂದ  ಈ ಮೇಲಿನಂತೆ ಗುನ್ನೆ ದಾಖಲಾಗಿದ್ದು ಇರುತ್ತದೆ,

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 23/2019 ಕಲಂ 379 ಐಪಿಸಿ:-ದಿನಾಂಕ:17-03-2019 ರಂದು ರಾತ್ರಿ 08-10 ಗಂಟೆಗೆ ಮಾನ್ಯ ಶ್ರೀ ತಿಮ್ಮಪ್ಪ ಎಸ್.ಐ ಸಾಹೇಬರು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಟ್ರ್ಯಾಕ್ಟರ ಚಾಲಕನನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ.23/2019 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 30/2019 ಕಲಂ: 279, 304[ಎ] ಐಪಿಸಿ ಸಂಗಡ 187 ಐ ಎಮ್ವಿ ಆಕ್ಟ:- ದಿನಾಂಕ: 17/03/2019 ರಂದು 9 ಪಿಎಮ್ಕ್ಕೆ  ಶ್ರೀ ರೇವಣಸಿದ್ದಪ್ಪ ತಂದೆ ಮಲ್ಲಪ್ಪ ದೊಡಮನಿ ವಯಾ|| 40 ಜಾ|| ಕುರಬರ ಉ|| ಒಕ್ಕಲುತನ ಸಾ|| ಮಲ್ಲಾ[ಬಿ].  ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಹೀಗಿದ್ದು ಇಂದು ದಿನಾಂಕ 17/03/2019 ರಂದು ರಾತ್ರಿ 07-20 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ಯಾರೋ ನನಗೆ ಪೋನ ಮಾಡಿ ನಮ್ಮ ಚಿಕ್ಕಪ್ಪನ ಮಗನಾದ ನಿಂಬೆಣ್ಣ ತಂದೆ ಜಟ್ಟೆಪ್ಪ ದೊಡಮನಿ ಈತನಿಗೆ ಮಲ್ಲಾ ಕೆಂಭಾವಿ ಮುಖ್ಯ ರಸ್ತೆಯ ಶರಣಬಸಪ್ಪ ಪಟ್ಟಣಶೆಟ್ಟಿ ಇವರ ಹೊಲದ ಪಕ್ಕದ ರೋಡಿನಲ್ಲಿ ಅಪಘಾತವಾಗಿದೆ ಅಂತ ಪೋನ ಮಾಡಿ ತಿಳಿಸಿದಾಗ ನಾನು ಹಾಗು ನಮ್ಮ ಚಿಕ್ಕಪ್ಪ ಜಟ್ಟೆಪ್ಪ ದೊಡಮನಿ ಹಾಗು ಅವರ ಹೆಂಡತಿ ಸಿದ್ದಮ್ಮ ದೊಡಮನಿ ನಾವು ಮೂರು ಜನರು ಸೇರಿ ಸದರ ಸ್ಥಳಕ್ಕೆ ಹೋಗಿ ನೋಡಲು ಅಣ್ಣ ನಿಂಬೆಣ್ಣ ತಂದೆ ಜಟ್ಟೆಪ್ಪ ದೊಡಮನಿ ಈತನು ತಲೆಗೆ ಹಾಗು ಮುಖದ ಮದ್ಯ ಭಾಗ ಕತ್ತರಿಸಿ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದನು. ನಂತರ ಸದರಿಯವನಿಗೆ ಪರಿಶೀಲಿಸಿ ನೋಡಲು ಬಲಬುಜಕ್ಕೆ ಹಾಗು ಎದೆಗೆ ರಕ್ತಕಂದು ಗಟ್ಟಿದ ಗಾಯವಾಗಿ ಬಲಗೈ ಮಣಿಕಟ್ಟಿನ ಹತ್ತಿರ ಕೈ ಮುರಿದಿರುತ್ತದೆ. ನಂತ ಅಣ್ಣ ನಿಂಬೆಣ್ಣ ಈತನಿಗೆ ಅಪಘಾತಪಡಿಸಿದ ವಾಹನದ ಬಗ್ಗೆ ಕೇಳಿ ತಿಳಿಯಲಾಗಿ ನಮ್ಮ ಅಣ್ಣ ನಿಂಬೆಣ್ಣ ಈತನು ತನ್ನ ಮೋಟಾರ ಸೈಕಲ ನಂಬರ ಕೆಎ-33 ಯು-6113 ನೇದ್ದರ ಮೇಲೆ ಕುಳಿತು ಕೆಂಭಾವಿಯಿಂದ ಮಲ್ಲಾಕ್ಕೆ ಬರುವ ಕುರಿತು ನಮ್ಮೂರ ಶರಣಬಸಪ್ಪ ಪಟ್ಟಣಶೆಟ್ಟಿ ಇವರ ಹೊಲದ ಪಕ್ಕದ ರೋಡಿನಲ್ಲಿ ಬರುತ್ತಿರುವಾಗ ರಾತ್ರಿ 7-20 ಗಂಟೆಯ ಸುಮಾರಿಗೆ ಎದುರಿನಿಂದ ಒಂದು ಟ್ರ್ಯಾಕ್ರರ ಇಂಜನ ನಂಬರ ಕೆಎ-33  ಟಿಬಿ-0215 ನೇದ್ದರ ಚಾಲಕ ನಮ್ಮೂರ ಮಹೇಶ ತಂದೆ ಮಡಿವಾಳಪ್ಪ ಸಜ್ಜನ ಈತನು  ತನ್ನ ಟ್ರ್ಯಾಕ್ಟರನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಅಣ್ಣ ನಿಂಬೆಣ್ಣ ಇವರ ಮೋಟಾರ ಸೈಕಲಗೆ ಬಲವಾಗಿ ಡಿಕ್ಕಿಪಡಿಸಿ ತನ್ನ ಟ್ರ್ಯಾಕ್ಟರನ್ನು ನಿಲ್ಲಿಸದೇ ತೆಗೆದುಕೊಂಡು ಕೆಂಭಾವಿ ಕಡೆಗೆ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಅಣ್ಣ ನಿಂಬೆಣ್ಣ ಈತನಿಗೆ ಮುಖದ ಮದ್ಯಭಾಗ ಕತ್ತರಿಸಿ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಸದರಿ ಘಟನೆಗೆ ಟ್ರ್ಯಾಕ್ಟರ್ಇಂಜನ ನಂಬರ ಕೆಎ-33 ಟಿಬಿ-6113 ನೇದ್ದರ ಚಾಲಕ ಮಹೇಶ ತಂದೆ ಮಡಿವಾಳಪ್ಪ ಸಜ್ಜನ ಸಾ|| ಮಲ್ಲಾ ಈತನ ಅತೀವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 30/2019 ಕಲಂ 279,304[ಎ] ಐಪಿಸಿ ಸಂಗಡ 187 ಐಎಮ್ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!