ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-03-2019

By blogger on ಬುಧವಾರ, ಮಾರ್ಚ್ 13, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-03-2019 

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 23/2019 ಕಲಂ 32(3), 15(ಎ) ಕೆ.ಇ ಎಕ್ಟ್:- ದಿನಾಂಕ: 12/03/2019 ರಂದು 5.40  ಪಿ.ಎಮ್ ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಶಿರವಾಳ ಗ್ರಾಮದ ತನ್ನ ಪಾನಶಾಪ ಅಂಗಡಿಯ ಮುಂದೆ ಅನಧಿಕೃತವಾಗಿ ಮಧ್ಯ ಕುಡಿಯಲು ಅನುಕೂಲ ಮಾಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿ ಆರೋಪಿತನಿಂದ ಸಿಕ್ಕ ಅಂದಾಜು 1825.31 /- ರೂ ಕಿಮ್ಮತ್ತಿನ 330ಟಟ ನ 10 ಕಿಂಗ್ ಪಿಶರ ಟಿನ್ ಬಾಟಲಗಳು ಹಾಗೂ 90ಟಟ ನ 20 ಓರಿಜಿನಲ್ ಚ್ವೈಸ್ ವಿಸ್ಕಿಯ ಪೌಚಗಳು, 180ಟಟ  ನ 7 ಓಲ್ಡ್ ಟವೆರೆನ್ ವಿಸ್ಕಿ ಪೌಚಗಳನ್ನು ಜಪ್ತಿಪಡಿಸಿಕೊಂಡು ಪಿ.ಎಸ್.ಐ ರವರು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಆದೇಶಿಸಿದ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ ಬಗ್ಗೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 68/2019 ಕಲಂ:78 () ಕೆ.ಪಿ.ಕಾಯ್ದೆ :- ದಿನಾಂಕ: 13-03-2019 ರಂದು 2-15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಆನಂದರಾವ್ ಪಿ.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತನನ್ನು  ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:12-03-2019 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ನಾನು ಠಾಣೆಯ ಸಿಬ್ಬಂದಿಯವರಾದ 1) ಸೋಮಯ್ಯಾ ಸಿಪಿಸಿ-235 2) ದೇವಿಂದ್ರ ಸಿಪಿಸಿ-184 ಇವರೊಂದಿಗೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಸುರಪುರ ರಂಗಂಪೇಟದ ಕುಮಾರ ನಾಯಕ ಕಾಲೋನಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ,  1) ಶ್ರೀ ವಾಸುದೇವ ತಂದೆ ಬೀಮಣ್ಣ ಮುದಬಾಕ್ ವಯಾ:25 ವರ್ಷ ಉ:ಅಟೋ ಡ್ರೈವರ ಜಾತಿ:ಕಬ್ಬಲಿಗ ಸಾ:ರತ್ತಾಳ  2) ಶ್ರೀ ಹಣಮಂತ ತಂದೆ ಮಲ್ಲಪ್ಪ ಗಣಪೂರ ವಯಾ:28 ವರ್ಷ ಉ:ಟ್ಯಾಕ್ಟರ ಡೈವರ ಜಾತಿ:ಕಬ್ಬಲಿಗ ಸಾ:ರತ್ತಾಳ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 12-15 ಪಿ.ಎಮ್ ಕ್ಕೆ ಠಾಣೆಯಿಂದ ಸರಕಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಹೊರಟು 12-30 ಪಿ.ಎಮ್ ಕ್ಕೆ ರಂಗಂಪೇಠದ ಕುಮಾರ ನಾಯಕ ಕಾಲೋನಿ ಹತ್ತಿರ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಮಜೀದಿ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12-45 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಚಂದ್ರು ತಂದೆ ನಿಂಗಪ್ಪ ಅರಳಗುಂಡಗಿ ವಯಾ:21 ವರ್ಷ ಜಾತಿ:ಕುರುಬರು ಉ:ಚಾಲಕ ಸಾ: ರತ್ತಾಳ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 900=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00 ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 12-45 ಪಿ.ಎಮ್ ದಿಂದ 01-45 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 69/2019 ಕಲಂ:78 () ಕೆ.ಪಿ.ಕಾಯ್ದೆ:- ದಿನಾಂಕ: 12-03-2019 ರಂದು 4-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತನನ್ನು  ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:12-03-2019 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ನಾನು ಠಾಣೆಯ ಸಿಬ್ಬಂದಿಯವರಾದ 1) ಮನೋಹರ ಹೆಚ್ಸಿ-105 2) ಸುಭಾಸ ಸಿಪಿಸಿ-174 ಇವರೊಂದಿಗೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯ ರತ್ತಾಳ ಗ್ರಾಮದ ಅಟೋ ಸ್ಯಾಂಡ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ,  1) ಶ್ರೀ ಜಲಾಲ ತಂದೆ ಬಡೇಸಾಬ ಚೌದರಿ ವಯಾ:49 ವರ್ಷ ಉ: ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ ತಾ:ಸುರಪುರ  2) ಶ್ರೀ ಮಹೀಬೂಬ ತಂದೆ ಮುಸ್ತಪಸಾಬ ಮಕ್ಕಾ ವಯಾ:27 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ರುಕ್ಮಾಪೂರ ತಾ:ಸುರಪುರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 01-45 ಪಿ.ಎಮ್ ಕ್ಕೆ ಠಾಣೆಯಿಂದ ಸರಕಾರಿ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಹೊರಟು 2-15 ಪಿ.ಎಮ್ ಕ್ಕೆ ರತ್ತಾಳ ಗ್ರಾಮದ ಅಟೋ ಸ್ಟಾಂಡ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ಅಟೋ ಸ್ಯಾಂಡ ಎದರುಗಡೆಯ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 02-30 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಭಿಮಣ್ಣ ತಂದೆ ಹಣಮಂತ ಧರೆಮನಿ ವಯಾ:21 ಜಾತಿ:ಕಬ್ಬಲಿಗ ಉ:ಚಾಲಕ ಸಾ:ರತ್ತಾಳ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 700=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00 ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 02-30 ಪಿ.ಎಮ್ ದಿಂದ 03-30 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
      
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 09/2019 ಕಲಂ: 379 ಐಪಿಸಿ :- ದಿನಾಂಕ:12/03/2019 ರಂದು ಆರೋಪಿತರು ಸ್ವರಾಜ ಕಂಪನಿಯ ಟ್ರ್ಯಾಕ್ಟರ ನಂ.ಕೆಎ.33, ಟಿಎ.9409 & ಅದಕ್ಕೆ ಜೋಡಿಸಿದ ಟ್ರ್ಯಾಲಿ ನಂ. ಕೆಎ.33, ಟಿಎ-1034 ಹಾಗೂ ಸ್ವರಾಜ ಕಂಪನಿಯ ಟ್ರ್ಯಾಕ್ಟರ ನಂ.ಕೆಎ.34, ಟಿಎ-4108 & ಅದಕ್ಕೆ ಜೋಡಿಸಿದ ನೊಂದಣಿ ನಂಬರ ಇಲ್ಲದ ಟ್ರ್ಯಾಲಿ ಚೆಸ್ಸಿ ನಂ.ಎಮ್ಎಐ54 ನೇದ್ದವುಗಳಲ್ಲಿ ಮದಲಿಂಗನಾಳ ಸೀಮಾಂತರದಲ್ಲಿರುವ ಸಾರ್ವಜನಿಕ ಹಳ್ಳದಿಂದ ಸರಕಾರಕ್ಕೆ ಯಾವುದೆ ರಾಜಧನ (ರಾಯಲ್ಟಿ) ಭರಿಸದೆ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳನ್ನು ಕಳ್ಳತನ ಮಾಡಿಕೊಂಡು ಟ್ರ್ಯಾಕ್ಟರಗಳಲ್ಲಿ ಸಾಗಿಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿವರೊಂದಿಗೆ ದಾಳಿಮಾಡಿದಾಗ ಟ್ರ್ಯಾಕ್ಟರ ಚಾಲಕರು ಓಡಿ ಹೋಗಿದ್ದು ಇರುತ್ತದೆ. ಈ ಬಗ್ಗೆ ಸಕರ್ಾರಿ ತಪರ್ೆರವರು ಜಪ್ತಿ ಪಂಚನಾಮೆಯನ್ನು ದಿನಾಂಕ:12/03/2019 ರಂದು 04:30 ಪಿ.ಎಮ್ ದಿಂದ 05:30 ಪಿ.ಎಮ್ ವರೆಗೆ ಕೈಕೊಂಡು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:-15/2019 ಕಲಂ 279 ಐಪಿಸಿ :- ದಿನಾಂಕ 12/03/2019 ರಂದು ಸಾಯಂಕಾಲ 5-30 ಪಿ.ಎಂ.ಕ್ಕೆ ಶ್ರೀ ಅಮೃತರಾವ್ ಎ.ಎಸ್.ಐ ಸಂಚಾರಿ ಪೊಲೀಸ್ ಠಾಣೆ ಯಾದಗಿರಿ ರವರು ಠಾಣೆಗೆ ಬಂದು ಒಂದು ವರದಿ, ಜೀಪ್ ನಂ.ಕೆಎ-48, ಎಮ್-1597  ಜೀಪ್ ಚಾಲಕನನ್ನು ಹಾಜರುಪಡಿಸಿದ್ದು     ವರದಿ ಸಾರಾಂಶವೇನೆಂದರೆ ನಾನು ಅಮೃತರಾವ್ ಎ.ಎಸ್.ಐ ಸಂಚಾರಿ ಪೊಲೀಸ ಠಾಣೆ ಯಾದಗಿರಿ ತಮಗೆ ಈ ವರದಿ ಮೂಲಕ ಸೂಚಿಸುವುದೆನೆಂದರೆ ಇಂದು ದಿನಾಂಕ: 12/03/2019 ರಂದು ಸಾಯಂಕಾಲ 5 ಪಿ.ಎಂ. ಸುಮಾರಿಗೆ ನಾನು ಯಾದಗಿರಿ ನಗರದ ಸಂಚಾರಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ನಾನು ಮತ್ತು ಸಿಬ್ಬಂದಿಯವರೊಂದಿಗೆ ಕೂಡಿಕೊಂಡು ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ರಸ್ತೆ ಹತ್ತಿರ ಕರ್ತವ್ಯದ ಮೇಲಿರುವಾಗ  ಹತ್ತಿಕುಣಿ ಗ್ರಾಮದ ಕಡೆಯಿಂದ ಯಾದಗಿರಿ ಗಾಂಧಿ ಚೌಕ್  ಕಡೆ ಹೊರಟಿದ್ದ ಒಂದು ಕ್ರೂಜರ್ ಜೀಪ್ ನಂಬರ ಕೆಎ-48, ಎಮ್-1597 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ನೋಡಲು ವಾಹನದಲ್ಲಿ ಸುಮಾರು 16 ಜನರು ಇದ್ದು ಜೀಪ್  ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ನಿಸಾರ್ ಅಹ್ಮದ್ ತಂದೆ ಮಹ್ಮದ್ ರಿಯಾಜುದ್ದೀನ್  ವಯ;35 ವರ್ಷ, ಜಾ;ಮುಸ್ಲಿಂ, ಉ;ಜೀಪ್ ನಂ.ಕೆಎ-48, ಎಮ್-1597 ನೇದ್ದರ ಚಾಲಕ, ಸಾ; ಚಟನ್ ಏರಿಯಾ ಯಾದಗಿರಿ ಅಂತಾ ತಿಳಿಸಿದ್ದು, ಸದರಿ ಜೀಪ್ ಪರವಾನಿಗೆ  ಉಲ್ಲಂಘನೆ ಮಾಡಿ ವಾಹನ ಚಾಲನೆ ಮಾಡಿದ್ದು ಚಾಲಕನ ಸಮೇತ ಮುಂದಿನ ಕ್ರಮ ಕುರಿತು ತಮ್ಮ ಮುಂದೆ  ಹಾಜರು ಪಡಿಸಿದ್ದು ಇರುತ್ತದೆ.  ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಾಲನೆ ಮಾಡಿದ್ದು ಈ ಬಗ್ಗೆ ಆಟೋ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 15/2019 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.      

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 48/2019 ಕಲಂ: 323, 324, 354, 504, 506 ಸಂಗಡ 34 ಐಪಿಸಿ:-ದಿನಾಂಕ 10.03.2019 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆಕೆಯ ಗಂಡ ಲಕ್ಷ್ಮಪ್ಪ ಇಬ್ಬರು ತಮ್ಮ ಮನೆಯಲ್ಲಿದ್ದಾಗ ಆರೋಪಿತರು ಫಿರ್ಯಾದಿಯ ಮನೆಗೆ ಬಂದು ಲಕ್ಷ್ಮಪ್ಪ ಈತನಿಗೆ ಹೊಲದಲ್ಲಿ ಹೆಚ್ಚು ಪಾಲು ಹೋಗಿದೆ ಅದನ್ನು ಸರಿ ಮಾಡಿ ಕೊಡು ವಗೈರೆ ಅಂತಾ ವಿಷಯಕ್ಕೆ ಸಂಬಂಧವಾಗಿ ಅವಾಚ್ಯವಾಗಿ ಬೈದು ಕೈಯಿಂದ, ಕಟ್ಟಿಗೆಯಿಂದ, ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿ ಫಿರ್ಯಾದಿಗೆ ಕೂದಲು ಹಿಡಿದು ಎಳೆದು ಮಾನಭಂಗ ಮಾಡಲು ಯತ್ನಿಸಿದ್ದ ಬಗ್ಗೆ ಫಿರ್ಯಾದಿ ಊರಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿ ತಡವಾಗಿ ಇಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ: 48/2019 ಕಲಂ: 323, 324, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 18/2019 ಕಲಂ. 279,337,338,427 ಐಪಿಸಿ:- ದಿನಾಂಕ: 12-03-2019 ರಂದು ಸಾಯಂಕಾಲ 06-00 ಗಂಟೆಗೆ ಪಿಯಾಧಿ ತಾಯಪ್ಪ ತಂದೆ ಗಡ್ಡೆಪ್ಪ ್ಪ ವ|| 38 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಮಡ್ಡಿಪೇಟಿ ರಾಯಚೂರ ತಾ|| ಜಿ|| ರಾಯಚೂರ ಇತನು ಮದ್ಯಾಹ್ನ 02-00 ಗಂಟೆಗೆ ತಾನು ಖರಿದಿ ಮಾಡಿದ ಎತ್ತುಗಳನ್ನು  ಅಶೋಕ ಲೈಲ್ಯಾಂಡ ಗಾಡಿಯಲ್ಲಿ ಎರಿಸಿಕೊಂಡು  ರಾಯಚೂರ ಕಡೆಗೆ ಹೋಗುತಿದ್ದೆವು, ಯಾದಗಿರಿ-ರಾಯಚೂರ ಮುಖ್ಯ ರಸ್ತೆಯ ಮೇಲೆ ಕಡೆಚೂರ ಗೇಟ ಹತ್ತಿರ ಹೋಗುತ್ತಿರುವಾಗ  ಕಡೆಚೂರ ಗ್ರಾಮದ ಕಡೆಯಿಂದ ಬಸ್ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾವು ಕುಳಿತು ಹೋಗುತ್ತಿರುವ ಗಾಡಿಗೆ ಬಂದು ಟಕ್ಕರ ಕೊಟ್ಟನು ಆಗ ನಾವು ಕುಳಿತ ಗಾಡಿ ಪಲ್ಟಿಯಾಗಿ ಬಿತ್ತು ಆಗ ಸಮಯ 03-00 ಗಂಟೆಯಾಗಿತ್ತು ಆಗ ನನಗೆ ಯಾವುದೆ ಗಾಯಗಳು ಆಗಿರಲಿಲ್ಲ ನಮ್ಮ ಮಾವ ರಾಜಪ್ಪನಿಗೆ ನೋಡಲಾಗಿ ಆತನಿಗೆ ಬಲಗಡೆ ಕಿವಿಗೆ ಬಾರಿ ರಕ್ತಗಾಯವಾಗಿತ್ತು, ಬಲಗಡೆ ಕಾಲಿನ ತೊಡೆಗೆ ಗುಪ್ತಗಾಯವಾಗಿತ್ತು, ಗಾಡಿ ನಡೆಸುತಿದ್ದ ನರಸಪ್ಪನಿಗೆ  ಬಲ ಕೈ ಮೋಣಕೈ ಹತ್ತಿರ ರಕ್ತಗಾಯ, ಮುಷ್ಠಿ ಹತ್ತಿರ ರಕ್ತಗಾಯವಾಗಿತ್ತು ಎದೆಗೆ ಗುಪ್ತಪೆಟ್ಟಾಗಿತ್ತು, ಮತ್ತು ಬಲ ಕಾಲಿನ ತೊಡೆಯ ಹತ್ತಿರ ಗುಪ್ತ ಪೆಟ್ಟಾಗಿತ್ತು, 3 ಎತ್ತುಗಳು ರೊಡಿನ ಪಕ್ಕದ ತಗ್ಗಿನಲ್ಲಿ ಬಿದಿದ್ದವು ಒಂದು ಎತ್ತಿಗೆ ಹೊಟ್ಟೆಗೆ ಬಾರಿ ರಕ್ತಗಾಯವಾಗಿತ್ತು  ಇನ್ನೆರಡು ಎತ್ತುಗಳಿಗೆ ಸಣ್ಣಪುಟ್ಟಗಾಯಗಳು  ಕಾರಣ ಬಸನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ನಮ್ಮ ಗಾಡಿಗೆ ಅಪಘಾತ ಪಡಿಸಿದ ಬಸ ಚಾಲಕನಾದ ಶಿವಶಂಕರ ತಂದೆ ಶರಣಪ್ಪ ಯಾದಗಿರಿ ಡಿಪೋ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಅಂತಾ ಪಿಯರ್ಾಧಿ ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 33/2019 ಕಲಂ: 379 ಐಪಿಸಿ :- ದಿನಾಂಕ: 12/03/219 ರಂದು 4-30 ಪಿಎಮ್ ಕ್ಕೆ ಶ್ರೀ ದೌಲತ ಎನ್.ಕೆ ಪಿ.ಐ ಸಿ.ಇ.ಎನ್ ಪೊಲೀಸ್ ಠಾಣೆ ಯಾದಗಿರಿ ರವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಕೊಟ್ಟಿದ್ದೇನಂದರೆ ಇಂದು ದಿನಾಂಕ: 12/03/2019 ರಂದು ಮದ್ಯಾಹ್ನ ನಾನು ಮತ್ತು ನಮ್ಮ ಸಿಬ್ಬಂದಿಯವರಾದ 1) ಗುಂಡಪ್ಪ ಹೆಚ್.ಸಿ 115, 2) ಮಹ್ಮದ ಶಫಿಯೊದ್ದಿನ ಹೆಚ್.ಸಿ 97, 3) ಈರಣ್ಣ ಹೆಚ್.ಸಿ 144, 4) ಮೌನೇಶ ಹೆಚ್.ಸಿ 59, 5) ಸಾಯಬಣ್ಣ ಪಿಸಿ 145 ಹಾಗೂ 6) ರಾಮಲಿಂಗ ಎಪಿಸಿ 112 ರವರೊಂದಿಗೆ ನಮ್ಮ ಪೊಲೀಸ್ ಠಾಣೆಯಲ್ಲಿದ್ದಾಗ ಪೊಲೀಸ್ ಬಾತ್ಮಿದಾರರಿಂದ ನನಗೆ ಗೋಡಿಹಾಳ ಸೀಮಾಂತರದ ಭೀಮಾ ನದಿ ದಂಡೆಯಲ್ಲಿ ಕೆಲವರು ಪಟ್ಟಾ ಜಮೀನದಲ್ಲಿ ಭೀಮಾ ನದಿಯಿಂದ ಅಕ್ರಮ ಮರಳು ಸಂಗ್ರಹಿಸಿರುವುದಾಗಿ ಖಚಿತ ಮಾಹಿತಿ ಬಂದಿದ್ದರಿಂದ ನಾನು ಸಿಬ್ಬಂದಿಯವರನ್ನು ಕರೆದುಕೊಂಡು ಸರಕಾರಿ ಜೀಪ ನಂ. ಕೆಎ 33 ಜಿ 0065 ನೇದ್ದರಲ್ಲಿ ಹೊರಟು ಗೋಡಿಹಾಳ ಗ್ರಾಮದ ಬೀಟ ಕಾನ್ಸಟೇಬಲ್ ಆದ ಮಹೇಂದ್ರ ಪಿಸಿ 254 ವಡಗೇರಾ ಪೊಲೀಸ್ ಠಾಣೆ ರವರಿಗೆ ಕರೆಸಿಕೊಂಡು ಎಲ್ಲರೂ ಸೇರಿ ಗೋಡಿಹಾಳ ಸೀಮಾಂತರದ ಮರಳು ಸ್ಟಾಕ ಮಾಡಿರುವ ಭೀಮಾ ನದಿ ದಂಡೆಯ ಪಟ್ಟಾ ಜಮೀನಿಗೆ ಹೋಗಿ ನೋಡಲಾಗಿ ಸದರಿ ಪಟ್ಟಾ ಜಮೀನದಲ್ಲಿ ಅಲ್ಲಲ್ಲಿ ಸುಮಾರು 4-5 ಮರಳಿನ ದೊಡ್ಡ ಕುಂಪಿಗಳನ್ನು ಹಾಕಿರುತ್ತಾರೆ. ಸದರಿ 4-5 ಕುಂಪಿ ಮರಳು ಸೇರಿದರೆ ಅಂದಾಜು 15-16 ಟಿಪ್ಪರನಷ್ಟು ಮರಳು ಆಗಬಹುದು. ಸದರಿ ಮರಳಿನ ಅಂದಾಜು ಬೆಲೆ 60,000=00 ರೂ. ಆಗಬಹದು. ಸದರಿ ಪಟ್ಟಾ ಜಮೀನಿನ ಸವರ್ೆ ನಂಬರಗಳನ್ನು ಕಂದಾಯ ಇಲಾಖೆಯವರಿಗೆ ವಿಚಾರಿಸಿದಾಗ ಗೋಡಿಹಾಳ ಸೀಮಾಂತರ ಸವರ್ೆ ನಂ. 48/1, 48/2, 48/6 ಮತ್ತು ಇತರ ಹಿಸ್ಸಾಗಳು ಇರುತ್ತವೆ ಎಂದು ತಿಳಿಸಿದರು. ಸದರಿ ಮರಳನ್ನು ಯಂಕಪ್ಪ ತಂದೆ ಚಂದಪ್ಪ ದಾಸರ ಮತ್ತು ಇತರರು ಹಾಗೂ ಪಟ್ಟಾ ಜಮೀನಿನ ಮಾಲಿಕರು ಸೇರಿ ಭೀಮಾ ನದಿಯಿಂದ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಎತ್ತುವಳಿ ಮಾಡಿ ಸಂಗ್ರಹಿಸಿದ್ದು ಕಂಡು ಬಂದಿರುತ್ತದೆ. ನಾನು ಅಲ್ಲಿ ಭೇಟಿ ನೀಡಿದಾಗ ಸಮಯ ಮಧ್ಯಾಹ್ನ ಸುಮಾರು 2 ಗಂಟೆ ಆಗಿತ್ತು, ಸದರಿ ಆರೋಪಿತರು ಭೀಮಾ ನದಿಯಿಂದ ಅಕ್ರಮವಾಗಿ ಮತ್ತು ಕಳ್ಳತನದಿಂದ ನೈಸಗರ್ಿಕ ಸಂಪತ್ತಾದ ಮರಳನ್ನು ಸಾಗಿಸಿ ಸಂಗ್ರಹಿಸಿ ಅಪರಾಧವೆಸಗಿರುತ್ತಾರೆ. ಆದ್ದರಿಂದ ಸದರಿ ಮರಳು ಸಂಗ್ರಹಿಸಿದವರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ಸರಕಾರಿ ತಫರ್ೆಯಿಂದ ನಿಮಗೆ ದೂರು ನೀಡಿದ್ದು, ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 33/2019 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.   



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!