ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-03-2019

By blogger on ಶನಿವಾರ, ಮಾರ್ಚ್ 9, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-03-2019 

ಗುರಮಟಕಲ್ ಪೊಲೀಸ್ ಠಾಣೆ ಗುನ್ನೆ ನಂ:-45/2019 ಕಲಂ:279,337,338 ಐಪಿಸಿ :-ದಿನಾಂಕ 08.03.2019 ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆರೋಪಿ ಇಬ್ಬರು ಸೇರಿ ಮೋಟಾರು ಸೈಕಲ್ ನಂ: ಕೆಎ-36-ಇಇ-2821 ನೆದ್ದರ ಮೇಲೆ ಗುರುಮಠಕಲ್ ದಿಂದ ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಚಾಲಕ ಮೋಟಾರು ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ರೋಡಿನ ಮೇಲೆ ಬಂದ ಅಡವಿ ಹಂದಿಗಳಿಗೆ ಡಿಕ್ಕಿಪಡಿಸಿ ಕಟ್ ಹೊಡೆದಿದ್ದರ ಪರಿಣಾಮವಾಗಿ ಫಿರ್ಯಾದಿಗೆ ಮತ್ತು ಆರೋಪಿಗೆ ತಲೆಗೆ, ಕೈಗೆ, ಕಾಲಿಗೆ ಅಲ್ಲಲ್ಲಿ ಬಾರಿ ಹಾಗೂ ಸಾಧಾ ಸ್ವರೂಪದ ರಕ್ತಗಾಯಗಳು ಮತ್ತು ಅಲ್ಲಲ್ಲಿ ತರಚಿದ ಮತ್ತು ಗುಪ್ತಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳೀಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 45/2019 ಕಲಂ:279,337,338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-61/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:08-03-2019 ರಂದು 2-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ  ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿಪಂಚನಾಮೆ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು ವರದಿ ನಿಡಿದ್ದು  ಸಾರಾಂಶವೆನೆಂದರೆ ಇಂದು ದಿನಾಂಕ:08-03-2019 ರಂದು 11 ಎ.ಎಮ್ ಸುಮಾರಿಗೆ ನಾನು ಠಾಣೆಯ  ಸಿಬ್ಬಂಧಿಯವರಾದ ಶ್ರೀ ಮನೋಹರ ಹೆಚ್ಸಿ-105, ಶ್ರೀ ಸೋಮಯ್ಯಾ ಸಿಪಿಸಿ-235 ಇವರು ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಹೇಮನೂರ ಸೀಮಾಂತರ ಕೃಷ್ಣಾ ನದಿಯ ತೀರದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಹೇಮನೂರ ಗ್ರಾಮದ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲ ತಂದೆ ಬಡೇಸಾಬ ಚೌದರಿ ವಯಾ:49 ವರ್ಷ ಉ: ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ ತಾ:ಸುರಪುರ  2) ಶ್ರೀ ಮಹೀಬೂಬ ತಂದೆ ಮುಸ್ತಪಸಾಬ ಮಕ್ಕಾ ವಯಾ:27 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ರುಕ್ಮಾಪೂರ ತಾ:ಸುರಪುರ ಇವರನ್ನು ಠಾಣೆಗೆ 11-15 ಎ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಸಿಬ್ಬಂಧಿಯೊಂದಿಗೆ ಎಲ್ಲರೂ ಠಾಣೆಯ ಜೀಪ ನಂಬರ ಕೆಎ-33 ಜಿ-0094 ನೇದ್ದರಲಿ 11-30 ಎ.ಎಂ.ಕ್ಕೆ ಠಾಣೆಯಿಂದ ಹೊರಟು ಹೇಮನೂರ ಗ್ರಾಮದ ಸರಕಾರಿ ಆಸ್ಪತ್ರೆಯ ಹತ್ತಿರ 12-15 ಪಿ.ಎಂ.ಕ್ಕೆ ಹೋಗುತ್ತಿರುವಾಗ  ಎದುರುಗಡೆಯಿಂದ ಅಂದರೆ ನದಿಯ ರಸ್ತೆಯ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ  ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಕೈ ಮಾಡಿ ನಿಲ್ಲಿಸಲು ಸದರಿ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ  ಸೈಡಿಗೆ ನಿಲ್ಲಿಸಿ ಇಳಿದು ಓಡಿಹೋಗಿದ್ದು, ಸದರಿ ಟ್ಯಾಕ್ಟರಗಳನ್ನು ಪರೀಶಿಲಿಸಿ ನೋಡಲು ಒಂದು ಒಚಿಟಿಜಡಿಚಿ ಃ275ಆ  ಕಂಪನಿಯ ಹಳೆಯದಾದ ಟ್ಯಾಕ್ಟರ ಇದ್ದು ಅದರ ನಂಬರ ಇರುವದಿಲ್ಲ. ಇಂಜಿನ ಹತ್ತಿರ ಖಎಙ0091 ಹಾಗೂ ಚೆಸ್ಸಿ ಹತ್ತಿರ ಒಚಿಟಿಜಡಿಚಿ ಅ0650012ಖ2 2 ಓ 5086 ಗಿಒ 27 ಅಂತಾ ಬರೆದಿದ್ದು ಇರುತ್ತದೆ. ನಿಲೀ ಬಣ್ಣದ ಟ್ರಾಲಿ ಇದ್ದು ಅದಕ್ಕೆ ನಂಬರ ಇರುವದಿಲ್ಲ ಸದರಿ ಟ್ಯಾಕ್ಟರ ಟ್ರಾಲಿಯಲ್ಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕರು ಇಬ್ಬರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು, ಜಪ್ತಿ ಪಂಚನಾಮೆಯನ್ನು 12-15 ಪಿ.ಎಮ್ ದಿಂದ 01-15 ಪಿ.ಎಮ್ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ. ವರದಿ ನೀಡಿದ ಮೇರೆಗೆ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-62/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:08-03-2019 ರಂದು 5 ಪಿ.ಎಂ. ಕ್ಕೆ ಠಾಣೆಯ ಎಸ್ ಹೆಚ್ ಡಿ ಕರ್ತವ್ಯದಲ್ಲಿರುವಾಗ ಶ್ರೀ ಆನಂದರಾವ್ ಪಿ.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನೀಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:08-03-2019 ರಂದು 2-30 ಪಿ.ಎಮ್ ಸುಮಾರಿಗೆ ನಾನು ಠಾಣೆಯ ಜೀಪ ಚಾಲಕ ಶ್ರೀ ಮಹಾಂತೇಶ ಎಪಿಸಿ-48 ಈತನೊಂದಿಗೆ ಜೇವರಗಿಯ ಮಾನ್ಯ ಜೆ.ಎಮ್,ಎಪ್,ಸಿ ನ್ಯಾಯಾಲಯದಿಂದ ಸಾಕ್ಷಿ ಮುಗಿಸಿಕೊಂಡು ಬಿಜಾಸಪೂರ ಹತ್ತಿರ ಸುರಪುರ ಕಡೆಗೆ ಬರುತ್ತಿರುವಾಗ ಖಚಿತವಾಗ ಮಾಹಿತಿ ಬಂದ್ದಿದ್ದೆನೆಂದರೆ ಕನರ್ಾಳ ಸೀಮಾಂತರ ಕೃಷ್ಣಾ ನದಿ ತೀರದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಲಕ್ಷ್ಮಿಪೂರ ಮಾರ್ಗವಾಗಿ ಸುರಪುರ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರಾದ ಲಕ್ಷ್ಮಿಪೂರ ಕ್ರಾಸ ಹತ್ತಿರ ಬಂದು ಇಬ್ಬರು ಪಂಚರಾದ 1) ಶ್ರೀ ಜಲಾಲ ತಂದೆ ಬಡೇಸಾಬ ಚೌದರಿ ವಯಾ:49 ವರ್ಷ ಉ: ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ ತಾ:ಸುರಪುರ  2) ಶ್ರೀ ಮಹೀಬೂಬ ತಂದೆ ಮುಸ್ತಪಸಾಬ ಮಕ್ಕಾ ವಯಾ:27 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ರುಕ್ಮಾಪೂರ ತಾ:ಸುರಪುರ ಇವರಿಗೆ ಪೋನ ಮಾಡಿ ಲಕ್ಷ್ಮಿಪೂರ ಕ್ರಾಸ ಹತ್ತಿರ 3 ಪಿ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರೊಂದಿಗೆ ಲಕ್ಷ್ಮಿಪೂರ ಕ್ರಾಸ ಹತ್ತಿರ ರಸ್ತೆಯ ಪಕ್ಕದಲ್ಲಿ ಜೀಪ ನಿಲ್ಲಿಸಿ ಕೇಳಗೆ ಇಳಿದು ನಿಂತುಕೊಂಡಾಗ 3-30 ಪಿ.ಎಂ.ಕ್ಕೆ ಲಕ್ಷ್ಮಿಪೂರ ಗ್ರಾಮದ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ನಾವು ಅವನಿಗೆ ಕೈ ಮಾಡಿ ನಿಲ್ಲಿಸಲು ಸದರಿ ಟ್ಯಾಕ್ಟರ ಚಾಲಕನು ನಮ್ಮನ್ನು ನೋಡಿ ಟ್ಯಾಕ್ಟರ ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದು ಓಡಿಹೋಗಿದ್ದು, ಸದರಿ ಟ್ಯಾಕ್ಟರನ್ನು ಪರೀಶಿಲಿಸಿ ನೋಡಲು ಒಂದು ಟಚಿಜಥಿ ಜಿಜಡಿರಣಠಟಿ ಕಂಪನಿಯ ಟ್ಯಾಕ್ಟರ ಇದ್ದು ನಂಬರ ಕೆಎ-33, ಟಿ-6504 ಇದ್ದು ಇಂಜಿನ ಹತ್ತಿರ ಖ3251ಉ50602 ಅಂತಾ ಬರೆದಿದ್ದು ಇರುತ್ತದೆ. ಟ್ರಾಲಿಗೆ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರ ಟ್ರಾಲಿಯಲ್ಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು, ಜಪ್ತಿ ಪಂಚನಾಮೆಯನ್ನು 03-30 ಪಿ.ಎಮ್ ದಿಂದ 04-30 ಪಿ.ಎಮ್ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
          
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-63/2019 ಕಲಂ  87 ಕೆ.ಪಿ. ಕಾಯ್ದೆ :- ದಿನಾಂಕ: 08/03/2019 ರಂದು 7 ಪಿ.ಎಮ್. ಕ್ಕೆ ಶ್ರೀ ಆನಂದರಾವ್ ಪಿ.ಐ  ಸಾಹೇಬರು 12 ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ , ಇಂದು ದಿನಾಂಕ:08-03-2019 ರಂದು5-30 ಪಿ.ಎಂ. ಸುಮಾರಿಗೆಸುರಪೂರ ಪಟ್ಟಣದ ಬಸ್ಸಡಿಪೋ ಹತ್ತಿರ ಎಪಿಎಮ್ಸಿ  ಗಂಜಏರಿಯಾದಶ್ರೀ ಕಾಳಿಕಾದೇವಿ ಗುಡಿಯ ಮುಂದಿನ ಸಾರ್ವಜನಿಕಕಟ್ಟೆಯ ಮೇಲಿನ ಖುಲ್ಲಾ ಸ್ಥಳದಲ್ಲಿ ಮೇಲೆ ಹೇಳಿದ ಸದರಿಆರೋಪಿತರುದುಂಡಾಗಿಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವಾಗ ದಾಳಿ ಮಾಡಿ 12 ಜನಆರೋಪಿತರೊಂದಿಗೆಠಾಣೆಗೆ ಬಂದು ವರದಿ ನಿಡಿದ್ದರ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಗುರಮಟಕಲ್ ಪೊಲೀಸ್ ಠಾಣೆ ಗುನ್ನೆ ನಂ:-46/2019 ಕಲಂ: 78() ಕೆ.ಪಿ. ಆಠ್ಟಿ್:- ದಿನಾಂಕ 08.03.2019 ರಂದು ಸಂಜೆ 4:00 ಗಂಟೆಗೆ ಆರೋಪಿ ಹಣಮಂತ ಈತನು ಧರ್ಮಪೂರ ಬಸ್ ನಿಲ್ದಾಣದಲ್ಲಿ ರೋಡಿನ ಮೇಲೆ ಅಕ್ರಮ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಸಾರ್ವಜನಿಕರಿಗೆ 1/- ರೂ ಗೆ 80/- ರೂ ಮಟಕಾ ಬರೆಯಿಸಿದರೆ ಕೊಡುವುದಾಗಿ ಹೇಳಿ ಅವರಿಂದ ಹಣ ಸಂಗ್ರಹಿಸುತ್ತಿದ್ದಾಗ ಫೀರ್ಯಾದಿದಾರರಾದ ಶ್ರೀ ಬಸವೆರಾಜ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚಸ ಸಮಕ್ಷಮದಲ್ಲಿ ದಾಳೀ ಮಾಡಿ ಸದರಿ ಆರೋಪಿತನ ವಶದಲ್ಲಿದ್ದ 1]ನಗದು ಹಣ 1400/-, 2] ಮಟಕಾ ಅಂಕಿ ಸಂಖ್ಯೆ ಬರೆದುಕೊಂಡ ಚೀಟಿ, 3] ಒಂದು ಬಾಲ ಪೆನ್ ಅ.ಕಿ-00, ಹೀಗೆ ಒಟ್ಟು 1400/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ನಂತರ ಠಾಣಾ ಗುನ್ನೆ ನಂ: 46/2019 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:-25/2019 ಕಲಂ, 87 ಕೆ.ಪಿ.ಆ್ಯಕ್ಟ್ :- ದಿನಾಂಕ: 08/03/2019 ರಂದು 08.15 ಪಿಎಮ್ ಕ್ಕೆ ಸರಕಾರಿ ತಪರ್ೆ ಪಿರ್ಯಾದಿದಾರರಾದ ನಾನು ಸುರೇಶ ಬಾಬು ಪಿಎಸ್ಐ ಗೋಗಿ ಪೊಲೀಸ್ ಠಾಣೆ ಖಾಸ್ ಬಾತ್ಮಿ ಮೇರೆಗೆ ಮಾನ್ಯ ಡಿ.ಸ್.ಪಿ ಸಾಹೇಬರು ಸುರಪೂರ ಮತ್ತು ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗ ದರ್ಶನದಲ್ಲಿ ಇಬ್ಬರೂ ಪಂಚರು, ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನಂ: ಕೆಎ-33 ಜಿ-160  ಮತ್ತು ಒಂದು ಖಾಸಗಿ ವಾಹನದಲ್ಲಿ ಗಂಗನಾಳ ಗ್ರಾಮ ಸೀಮಾಂತರದಲ್ಲಿರುವ ಮಲ್ಲಪ್ಪ ತಂದೆ ನಿಂಗಪ್ಪ ಬಾಣತಿಹಾಳ ಇವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ (ಮಡ್ಡಿ) 15 ರಿಂದ 20 ಜನ ಆರೋಪಿತರು ಮತ್ತು ಇತರರು ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಮದ್ಯದಲ್ಲಿ ಹುಂಜಗಳೀಗೆ ಪಂಜೆ ಹಚ್ಚಿ ನಿನ್ನ ಹುಂಜ ಗೆದ್ದರೆ 200 ರೂಪಾಯಿಗೆ ನನ್ನ ಹುಂಜ ಗೆದ್ದರೆ 400 ರೂಪಾಯಿ ಕೊಡಬೇಕು ಅಂತಾ ಅವರವರಲ್ಲಿಯೇ ಮಾತನಾಡುತ್ತಾ ಹುಂಜದ ಪಂಜೆದ ಮುಖಾಂತರ ಜೂಜಾಟ ಆಡುತ್ತಿರುವಾಗ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಇಬ್ಬರೂ ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು 3-45 ಪಿಎಮ್ ದಿಂದ 5-45 ಪಿಎಮ್ ದವರೆಗೆ ಕೈಕೊಂಡು ಮುದ್ದೇಮಾಲು ವಶಪಡಿಸಿಕೊಂಡು ಆರೋಪಿತರೊಂದಿಗೆ ಮುಂದಿನ ಕ್ರಮ ಕುರಿತು 08.15 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ನೀಡಿ ಸೂಕ್ತ ಕ್ರಮ ಕೈಕೊಳ್ಳುವಂತೆ ಆದೇಶಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ: 25/2019 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೋಡೆಕಲ್ ಪೊಲೀಸ್ ಠಾಣೆ ಗುನ್ನೆ ನಂ:-12/2019 ಕಲಂ: 143,147,148,323,325,504,506 ಸಂಗಡ 149 ಐಪಿಸಿ :- ದಿನಾಂಕ 08.03.2019 ರಂದು ರಾತ್ರಿ 9:15 ಪಿಎಮ್ ಕ್ಕೆ ಪಿರ್ಯಾದಿ ಶ್ರೀ. ಮಾನಯ್ಯ ತಂದೆ ಅಮರಪ್ಪ ಎಮ್ಮಡಗೇರ ವ: 32 ವರ್ಷ ಜಾ; ಕುರುಬರ ಉ:ಕೂಲಿಕೆಲಸ ಸಾ/ ಪೀರಗಾರದೊಡ್ಡಿ ಕಕ್ಕೆರಾ ಹಾ,ವ: ಅಬ್ಲೆರದೊಡ್ಡಿ ಮಂಜಲಾಪುರ ತಾ/ ಸುರಪುರ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಹೇಳಿ ಗಣಕೀಕರಿಸಿದ ಹೇಳಿಕೆಯ ಸಾರಾಂಶವೆನೆಂದರೆ, ಹೆಂಡತಿ ಮಕ್ಕಳೊಂದಿಗೆ ಕೂಲಿಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ, ನಮ್ಮ ತಂದೆ ತಾಯಿಗೆ ಬಸ್ಸಣ್ಣ ಸ್ವಾಮಣ್ಣ , ನಾನು ಮೂರು ಜನ ಗಂಡು ಮಕ್ಕಳಿದ್ದು ನಾವು ಮೂರು ಜನರದ್ದು ಮದುವೆಯಾಗಿದ್ದು ನಾವೆಲ್ಲರು ನಮ್ಮ ನಮ್ಮ ಹೆಂಡರು ಮಕ್ಕಳೊಂದಿಗೆ ಬೇರೆ ಬೇರೆ ಇದ್ದು ನಾನು ಮಂಜಲಾಪುರ ಅಬ್ಲೆರದೊಡ್ಡಿಯಲ್ಲಿ ಅಣ್ಣ ಬಸ್ಸಣ್ಣನ ಆತನ ಹೆಂಡತಿಯ ತವರೂರಾದ ಪೀರಗಾರದೊಡ್ಡಿ ಕಕ್ಕೆರಾದಲ್ಲಿ ಹಾಗೂ ಅಣ್ಣ ಸ್ವಾಮಣ್ಣ ಇತನು ಕಕ್ಕೆರಾದಲ್ಲಿ ಇರುತ್ತಾರೆ, ನನ್ನ ಅಣ್ಣ ಬಸ್ಸಣ್ಣನ 40 -50 ಕುರಿಗಳಿದ್ದು ಅವುಗಳನ್ನು ಮೇಯಿಸಿಕೊಂಡು ಪೀರಗಾರದೊಡ್ಡಿಯಲ್ಲಿ ಹೆಂಡತಿ ತವರೂರ ಮನೆಯಲ್ಲಿ ಇರುತ್ತಾನೆ. ನನ್ನ ತಂದೆ ಅಮರಪ್ಪನು ಸತ್ತಿದ್ದು ತಾಯಿ ಗಿರಿಯಮ್ಮಳು ಅಣ್ಣ ಸ್ವಾಮಣ್ಣನ ಹತ್ತೀರ ಇರುತ್ತಾಳೆ. ಹೀಗಿರುವಾಗ ಇಂದು ದಿನಾಂಕ 08.03.2019 ರಂದು  ನಾನು ಸುರಪುರದಲ್ಲಿ ನನ್ನ ಕೆಲಸವಿದ್ದುದ್ದರಿಂದ ನನ್ನ ಮೋಟಾರ್ ಸೈಕಲ್ಲ ಮೇಲೆ ಸುರಪುರಕ್ಕೆ ಹೋಗಿದ್ದು , ಸುರಪುರದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಬರಲು ನಾನು ಸಾಯಂಕಾಲ 4:00 ಗಂಟೆ ಸುಮಾರಿಗೆ ಶಾಂತಪುರ ಕ್ರಾಸ್ ಹತ್ತೀರ ಬರುತ್ತಿರುವಾಗ, ನನ್ನ ಅಣ್ಣ ಬಸ್ಸಣ್ಣನ ಹೆಂಡತಿ ದೇವಮ್ಮಳ ತಮ್ಮನಾದ ಮಾನಪ್ಪ ತಂದೆ ಜಟ್ಟೆಪ್ಪ ಪೀರಗಾರ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ ಈಗ ಸ್ವಲ್ಪ ಹೊತ್ತಿನ ಹಿಂಧೆ 3:45 ಪಿಎಮ್ ಸುಮಾರಿಗೆ ನಿಮ್ಮ ಅಣ್ಣ ಬಸ್ಸಣ್ಣನು ಬೂದಗುಂಪೆರದೊಡ್ಡಿಗೆ ಹೋಗುವ ಕ್ರಾಸ್ ಹತ್ತೀರ ಶಾಂತಪುರ ಕ್ರಾಸ್ , ಬಲಶೇಟ್ಟಿಹಾಳ ಮುಖ್ಯ ರಸ್ತೆಗೆ ಹೊಂದಿ ಇರುವ ನಮ್ಮ ಹೋಲದಲ್ಲಿ ಕುರಿಗಳನ್ನು ಮೇಯಿಸುತ್ತಿರುವಾಗ ನಮ್ಮ ಪಕ್ಕದ ಹೋಲದ ಬೂದಗುಂಪೆರದೊಡ್ಡಿಯ ತಿಪ್ಪಣ್ಣ ತಂದೆ ಬಸ್ಸಣ್ಣ ಗುಡಗುಂಟಿ ಹಾಗೂ ಆತನ ಮಕ್ಕಳು ನಾಯಿ ಜಗಳಾಡುವ ವಿಷಯದಲ್ಲಿ ನಿಮ್ಮ ಅಣ್ಣ ಬಸ್ಸಣ್ಣನೊಂದಿಗೆ ಜಗಳ ತೆಗೆದು ಹೊಡೆ ಬಡೆ ಮಾಡಿ ತಲೆಯ ಮೇಲೆ ಭಾರಿ ರಕ್ತಗಾಯಗೊಳಿಸಿದ್ದು , ಹೋಲದಲ್ಲಿಯೆ ಇದ್ದ ನಾನು ಮತ್ತು ಅದೇ ವೇಳೆಗೆ ಅಲ್ಲಿಂದ ಹೋಗುತ್ತಿದ್ದ ದೇವಪ್ಪ ತಂದೆ ಪರಮಣ್ಣ ಕಕ್ಕೆರಾ ಸಾ/ ಮಂಜಲಾಪುರ ಹಳ್ಳಿ  ಹಾಗೂ ಅದೇ ವೇಳೆಗೆ ಆಟೋ ತೆಗೆದುಕೊಂಡು ಹೋಗುತ್ತಿದ್ದ ಕಕ್ಕೆರಾದ ಸೋಮಣ್ಣ ತಂದೆ ಗುಡದಪ್ಪ ಕಲಾಲದವರ ರವರು ನೋಡಿ ಜಗಳ ಬೀಡಿಸಿ ನಿಮ್ಮ ಅಣ್ಣ ಬಸ್ಸಣ್ಣನಿಗೆ ಉಪಚಾರಕ್ಕಾಗಿ ಕಕ್ಕೆರಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆವೆ ಅಂತಾ ತಿಳಿಸಿ ಬೇಗನೆ ಬರುವಂತೆ ತಿಳಿಸಿದ್ದು ಕೂಡಲೆ ನಾನು ಕಕ್ಕೆರಾ ಸರಕಾರಿ ಆಸ್ಪತ್ರೆಗೆ 4:15 ಪಿಎಮ್ ಸುಮಾರಿಗೆ ಹೋಗಿ ನೋಡಲಾಗಿ ಆಸ್ಪತ್ರೆಯಲ್ಲಿ ನನ್ನ ಅಣ್ಣ ಬಸ್ಸಣ್ಣನು ಉಪಚಾರ ಹೊಂದುತ್ತಿದ್ದು ಅವನ ಹತ್ತೀರ ಅಳಿಯ ಮಾನಪ್ಪ ತಂದೆ ಜಟ್ಟೆಪ್ಪ ಪೀರಗಾರ ಮತ್ತು ದೇವಪ್ಪ ತಂದೆ ಪರಮಣ್ಣ ಕಕ್ಕೆರಾ ಇವರುಗಳು ಇದ್ದು ನಾನು ನನ್ನ ಅಣ್ಣ ಬಸ್ಸಣ್ಣನಿಗೆ ವಿಚಾರಿಸಲಾಗಿ ಅವನು ತಿಳಿಸಿದ್ದೆನೆಂದರೆ ನಾನು ಈ ದಿವಸ 3:45 ಪಿಎಮ್ ಸುಮಾರಿಗೆ ಬೂದಗುಂಪೆರದೊಡ್ಡಿಗೆ ಹೋಗುವ ಕ್ರಾಸ್ ಹತ್ತೀರ ಶಾಂತಪುರ ಕ್ರಾಸ್ , ಬಲಶೇಟ್ಟಿಹಾಳ ಮುಖ್ಯ ರಸ್ತೆಗೆ ಹೊಂದಿ ಇರುವ ನಮ್ಮ ಬೀಗರ  ಹೋಲದಲ್ಲಿ ಕುರಿಗಳನ್ನು ಮೇಯಿಸುತ್ತಿರುವಾಗ ಬೂದಗುಂಪೆರದೊಡ್ಡಿಯ ನಮ್ಮ ಬೀಗರ ಹೋಲಕ್ಕೆ ಹೊಂದಿ ಇರುವ ತಿಪ್ಪಣ್ಣ ತಂದೆ ಬಸ್ಸಣ್ಣ ಇವರ ಹೋಲದಲ್ಲಿ ತಿಪ್ಪಣ್ಣ ತಂದೆ ಬಸ್ಸಣ್ಣ ಗುಡಗುಂಟಿ ಹಾಗೂ ಆತನ ಮಕ್ಕಳಾದ ಬಸ್ಸಪ್ಪ ತಂದೆ ತಿಪ್ಪಣ್ಣ ಗುಡಗುಂಟಿ , ನಂದಪ್ಪ ತಂದೆ ತಿಪ್ಪಣ್ಣ ಗುಡಗುಂಟಿ ಮಾಳಪ್ಪ ತಂದೆ ತಿಪ್ಪಣ್ಣ ಗುಡಗುಂಟಿ, ಅಮರಪ್ಪ ತಂದೆ ತಿಪ್ಪಣ್ಣ ಗುಡಗುಂಟಿ,  ಇವರೆಲ್ಲರು ತಮ್ಮ ಹೋಲದಲ್ಲಿ ತಮ್ಮ ಕುರಿಗಳನ್ನು ಮೇಯಿಸುತ್ತಿದ್ದು ಆಗ ನನ್ನ ನಾಯಿ ಮತ್ತು ಅವರ ನಾಯಿಗಳು ಒಂದಕ್ಕೊಂದು ಕಚ್ಚಾಡ ಹತ್ತಿದ್ದು ಆಗ ನಾನು ಶಾಂತಪುರ  ಬಲಶೇಟ್ಟಿಹಾಳ ರಸ್ತೆಯ ಮೇಲೆ ಹೋಗಿ ನಾಯಿಗಳಿಗೆ ಹೊಡೆದು ಜಗಳ ಬಡಿಸಿದ್ದು ಆಗ ಅಲ್ಲಿಯೆ ಇದ್ದ ತಿಪ್ಪಣ್ಣ ತಂದೆ ಬಸ್ಸಣ್ಣ ಗುಡಗುಂಟಿ ಹಾಗೂ ಆತನ ಮಕ್ಕಳಾದ ಬಸ್ಸಪ್ಪ ತಂದೆ ತಿಪ್ಪಣ್ಣ ಗುಡಗುಂಟಿ , ನಂದಪ್ಪ ತಂದೆ ತಿಪ್ಪಣ್ಣ ಗುಡಗುಂಟಿ ಮಾಳಪ್ಪ ತಂದೆ ತಿಪ್ಪಣ್ಣ ಗುಡಗುಂಟಿ, ಅಮರಪ್ಪ ತಂದೆ ತಿಪ್ಪಣ್ಣ ಗುಡಗುಂಟಿ ಇವರೆಲ್ಲರು ನನ್ನ ಹತ್ತೀರ ಗುಂಪಾಗಿ ಕೈಯಲ್ಲಿ ಬಡಿಗೆ ಕಲ್ಲುಗಳನ್ನು ಹಿಡಿದುಕೊಂಡು ಬಂದವರೆ ಅವರೆಲ್ಲರು ನನಗೆ ಬೊಸಡಿ ಮಗನೆ ಬಸ್ಯಾ ನಿನ್ನ ಸೊಕ್ಕು ಬಹಳ ಆಗಿದೆ ಸುಮ್ಮ ಸುಮ್ಮನೆ ನಮ್ಮ ನಾಯಿಗೆ ಹೊಡಿದಿದಿ ಸುಳೆ ಮಗನೆ ಇವತ್ತು ನಿನಗೆ ಬೀಡುವದಿಲ್ಲ ಅಂದವರೆ, ಅವರಲ್ಲಿಯ ಬಸ್ಸಪ್ಪ ತಂದೆ ತಿಪ್ಪಣ್ಣ ಇತನು ತನ್ನ ಕೈಯಲ್ಲಿಯ ಬಡಿಗೆಯಿಂದ ಜೋರಾಗಿ ನನ್ನ ತಲೆಯ ಮೇಲೆ  ಮುಂಬಾಜುವಿಗೆ ಹೊಡೆದಿದ್ದು ಇದರಿಂದ ನನ್ನ ತಲೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ,ನಂದಪ್ಪ ತಂದೆ ತಿಪ್ಪಣ್ಣ ಮತ್ತು ಮಾಳಪ್ಪ ತಂದೆ ತಿಪ್ಪಣ್ಣ ಇವರುಗಳು ಅಲ್ಲಿಯೆ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ನನ್ನ ಎಡಗಾಲ ಮೊಳಕಾಲ ಮೇಲೆ ಹಾಗೂ ಬಲಗೈ ಮೋಳಕೈ ಮೇಲೆ ಹೊಡೆದು ತರಚಿದ ಗಾಯ ಮಾಡಿದ್ದು ತಿಪ್ಪಣ್ಣ ತಂದೆ ಬಸ್ಸಣ್ಣ ಹಾಗೂ ಅಮರಪ್ಪ ತಂದೆ ತಿಪ್ಪಣ್ಣ ಇವರುಗಳು ನನಗೆ ರಸ್ತೇಯ ಮೇಲೆ ನೆಲಕ್ಕೆ ಕಡವಿ ಎದೆಯ ಮೇಲೆ ಕಾಲಿನಿಂದ ಒದ್ದು ತುಳಿದು ಭಾರಿ ಗುಪ್ತಗಾಯ ಮಾಡಿದ್ದು ಆಗ ನಾನು ಚಿರಾಡಲು ಹೋಲದಲ್ಲಿದ್ದ  ಅಳಿಯ ಮಾನಪ್ಪ ತಂದೆ ಜಟ್ಟೆಪ್ಪ ಪೀರಗಾರ ಹಾಗೂ ಅದೇ ವೇಳೆಗೆ ಅಲ್ಲಿಂದ ಹೋಗುತ್ತಿದ್ದ ದೇವಪ್ಪ ತಂದೆ ಪರಮಣ್ಣ ಕಕ್ಕೆರಾ ಸಾ/ ಮಂಜಲಾಪುರ ಹಳ್ಳಿ  ಮತ್ತು ಆಟೋದಲ್ಲಿ ಹೋಗುತ್ತಿದ್ದ ಕಕ್ಕೆರಾದ ಸೋಮಣ್ಣ ತಂದೆ ಗುಡದಪ್ಪ ಕಲಾಲದವರ ರವರು ಬಂದು ನೋಡಿ ಜಗಳ ಬಿಡಿಸಿದ್ದು, ಹೋಗುವಾಗ ಮೇಲೆ ನಮೂದಿಸಿದ 5 ಜನರು ಸುಳೆ ಮಗನೇ ಇವತ್ತು ನಮ್ಮ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕರೆ  ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ತಿಳಿಸಿದ್ದು ನಂತರ ಕಕ್ಕೆರಾ ಸರಕಾರಿ ಆಸ್ಪತ್ರೆಯ ವೈದ್ಯರು ನನ್ನ ಅಣ್ಣ ಬಸ್ಸಣ್ಣನಿಗೆ ಹೆಚ್ಚಿನ ಉಪಚಾರಕ್ಕೆ ಲಿಂಗಸುಗುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ತಾಯಿ ಗಿರಿಯಮ್ಮ ಹಾಗು ನನ್ನ ಅಣ್ಣನ  ಹೆಂಡತಿಯ ಅಣ್ಣನಾದ  ಗೌಡಪ್ಪ ತಂದೆ ಜಟ್ಟೆಪ್ಪ ಪೀರಗಾರ ಹಾಗೂ ನನ್ನ ಅಕ್ಕ ಬಸ್ಸಮ್ಮಳ ಗಂಡನಾದ ಸೋಮಣ್ಣ ತಂದೆ ಮಲ್ಲಪ್ಪ ಕಲಾಲದವರ ರವರುಗಳು ನನ್ನ ಅಣ್ಣನಿಗೆ ಉಪಚಾರಕ್ಕಾಗಿ ಲಿಂಗಸುಗುರಕ್ಕೆ ಕರೆದುಕೊಂಡು ಹೋಗಿದ್ದು, ನಂತರ ನಾನು ಇಲ್ಲಿಗೆ ಬಂದು ನನ್ನ ಅಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ನಮೂದಿಸಿದ 5 ಜನರ ಮೇಲೆ ದೂರು ಕೊಡುತ್ತಿದ್ದು 5 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಗಣಕಯಂತ್ರದಲ್ಲಿ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ಫಿಯರ್ಾದಿಯ  ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 12/2019 ಕಲಂ 143,147,148,323,325,504,506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-64/2019 ಕಲಂ: 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್:- ದಿನಾಂಕಃ 08/03/2019 ರಂದು 7-05 ಪಿ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಮಲ್ಲಪ್ಪನ ತಂದೆಯಾದ ಶ್ರೀ ಮರೆಪ್ಪ ತಂದೆ ಮಲ್ಲಪ್ಪ ಬಜಂತ್ರಿ ಸಾಃ ಹಾಲಗೇರಾ ಇವರನ್ನು ವಿಚಾರಿಸಿ ಸದರಿಯವರ ಹೇಳಿಕೆ ಫಿಯರ್ಾದಿ ಪಡೆದುಕೊಂಡು ಬಂದಿದ್ದರ ಸಾರಾಂಶವೆನಂದರೆ, ಇಂದು ಮುಂಜಾನೆ ನನ್ನ ಕಿರಿಯ ಮಗನಾದ ಮಲ್ಲಪ್ಪ ತಂದೆ ಮರೆಪ್ಪ ಬಜಂತ್ರಿ ಈತನು ಪುಟ್ಟಿ, ಕಸಬಾರಿಗೆ ತಗೆದುಕೊಂಡು ರಂಗಂಪೇಟ ಸಂತೆಯಲ್ಲಿ ಮಾರಾಟ ಮಾಡಿ ಬರುತ್ತೇನೆಂದು ಮನೆಯಲ್ಲಿ ನಮಗೆ ಹೇಳಿ ಹೋಗಿದ್ದನು. ನಂತರ ಸಾಯಂಕಾಲ 6-10 ಪಿ.ಎಮ್ ಸುಮಾರಿಗೆ ನಮ್ಮೂರಿನ ಮಲ್ಲಪ್ಪ ಪೂಜಾರಿ ಈತನು ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ನನ್ನ ವಾಹನದ ಮೇಲೆ ಸುರಪೂರದಿಂದ ಸತ್ಯಂಪೇಟ ಮಾರ್ಗವಾಗಿ ನಮ್ಮೂರಿಗೆ ಹೊರಟಿದ್ದಾಗ ನನ್ನ ಮುಂದುಗಡೆ ಒಬ್ಬ ಟಂ ಟಂ ಅಟೋರಿಕ್ಷಾ ಚಾಲಕನು ತನ್ನ ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತ 6 ಗಂಟೆಗೆ ಸತ್ಯಂಪೇಟ ನೀರಿನ ಫೀಲ್ಟರ ದಾಟಿ ಬರುವ ರಸ್ತೆಯ ತಿರುವಿನಲ್ಲಿ ಅಟೋರಿಕ್ಷಾ ಒಮ್ಮೆಲೆ ಪಲ್ಟಿ ಮಾಡಿದ್ದರಿಂದ ಅಟೋದಲ್ಲಿ ಕುಳಿತಿದ್ದ ನಿಮ್ಮ ಮಲ್ಲಪ್ಪನ ಹಣೆಗೆ ಭಾರಿ ರಕ್ತಗಾಯವಾಗಿ ತಲೆಬುರಡೆ ಒಡೆದು, ಬಹಳ ರಕ್ತಸ್ರಾವವಾಗಿ ಸ್ಥಳದಲ್ಲೆ ನರಳಾಡುತ್ತಿದ್ದಾನೆ. ಅಟೋ ನಂಬರ ಕೆ.ಎ 33 ಎ 7864 ಇದ್ದು, ಅದರ ಚಾಲಕನು ಅಪಘಾತ ಪಡಿಸಿದ ಬಳಿಕ ಓಡಿ ಹೋಗಿದ್ದು, ಆತನ ಹೆಸರು ಲಚಮಯ್ಯ ತಂದೆ ಹಣಮಂತ ಮೇಟಿ ಸಾಃ ಲಿಂಗದಳ್ಳಿ ಇರುತ್ತದೆ ಅಂತ ತಿಳಿಸಿದನು. ಬಳಿಕ ಆತನು ನನ್ನ ಮಗನಿಗೆ ಅಂಬ್ಯೂಲೇನ್ಸ್ ನಲ್ಲಿ ಸುರಪೂರ ಸಕರ್ಾರಿ ಆಸ್ಪತ್ರಗೆ ತಗೆದುಕೊಂಡು ಹೋಗುವಾಗ ಅಪಘಾತದಲ್ಲಿ ಆಗಿರುವ ಗಾಯಗಳಿಂದಾಗಿ ಮಾರ್ಗಮದ್ಯೆ ಮೃತಪಟ್ಟಿರುತ್ತಾನೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 64/2019 ಕಲಂ. 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:-58/2019.ಕಲಂ 87 ಆ್ಯಕ್ಟ:- ದಿನಾಂಕ 08/03/2019 ರಂದು ಸಾಯಂಕಾಲ 18-00 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 6 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 08/03/2019  ರಂದು ಮದ್ಯಾಹ್ನ 14-00 ಗಂಟೆಗೆ ಸುಮಾರಿಗೆ ಠಾಣೆಯಲ್ಲಿದ್ದಾಗ ಸಗರ (ಬಿ) ಗ್ರಾಮದ ಭೀರಲಿಂಗೇಶ್ವರ ಗುಡಿಯ ಮುಂದೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿದ್ದು. ನಮ್ಮ ಠಾಣೆಯ ಸಿಬ್ಬಂದಿಯವರಾದ ಸಂಗನಬಸಪ್ಪ ಹೆಚ್,ಸಿ,60, ಬಾಬು ಹೆಚ್,ಸಿ,162, ಸಂಗನಗೌಡ ಸಿ,ಪಿ,ಸಿ,116, ಗಣಪತಿ ಸಿ,ಪಿ,ಸಿ,294, ಗಜೇಂದ್ರ ಪಿ.ಸಿ.313, ಜಡಿಯಪ್ಪ ಸಿ,ಪಿ,ಸಿ, 350, ಬಸವರಾಜ ಸಿಪಿ,ಸಿ,346, ಜೀಪಚಾಲಕ ನಾಗರೆಡ್ಡಿ ಎ.ಪಿ.ಸಿ.161, ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ಎಂದು ಹೇಳಿ ನಮ್ಮ ಠಾಣೆಯ ಬಾಬು ಸಿ,ಹೆಚ್,ಸಿ, 162, ರವರಿಗೆ ಇಬ್ಬರೂ ಪಂಚರನ್ನು ತಂದು ಹಾಜರು ಪಡಿಸಲು ಹೇಳಿ ಕಳಿಸಿದ್ದು ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ 14-20 ಗಂಟೆಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮರೇಗೆ ಒಪ್ಪಿಕೊಂಡರು. ಮಾನ್ಯ ಡಿವೈ.ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಎಲ್ಲರು ಕೂಡಿ ದಾಳಿಕುರಿತು ಠಾಣೆಯ ಜೀಪ ನಂ ಕೆಎ-33ಜಿ-0138 ನೇದ್ದರಲ್ಲಿ ಠಾಣೆಯಿಂದ 14-30 ಗಂಟೆಗೆ ಹೊರಟು ಸಗರ (ಬಿ) ಗ್ರಾಮದ ಭೀರಲಿಂಗೇಶ್ವರ ಗುಡಿಯ ಹತ್ತಿರ 15-10 ಗಂಟೆಗೆ ಹೋಗಿ ಜೀಪನಿಂದ ಕೆಳಗಡೆ ಎಲ್ಲರು ಇಳಿದು ಭೀರಲಿಂಗೇಶ್ವರ ಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮನೆಗಳ ಗೋಡೆಗಳ ಮರೆಯಲ್ಲಿ ನಿಂತು 15-15 ಗಂಟೆಗೆ ನಿಗಮಾಡಿ ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 10 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 10 ರೂಪಾಯಿ ಅಂತ ಹೇಳಿ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು ಜೂಜಾಟ ಆಡುತ್ತಿರುವದನ್ನು  ಖಚಿತಪಡಿಸಿಕೊಂಡು, 15-20 ನಾವೆಲ್ಲರೂ ಕೂಡಿ ಸದರಿಯವರ ಮೇಲೆ ದಾಳಿ ಮಾಡಿದಾಗ 06 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಸೋದನೆ ಮಾಡಲಾಗಿ ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ  ಹೇಳಿರುತ್ತಾರೆ. 1] ನಾಗಪ್ಪ ತಂದೆ ಭಿಮಣ್ಣ ಗುಡ್ಡಳ್ಳಿ ವ|| 35 ಜಾ|| ಕುರುಬುರ ಉ|| ಕೂಲಿ ಸಾ|| ಸಗರ (ಬಿ) ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 110/- ರೂಪಾಯಿ ಸಿಕ್ಕವು 2] ಸುಕುರ ತಂದೆ ಹುಸೇನಸಾಬ ನಡಿಗೇರಿ ವ|| 40 ಜಾ|| ಮುಸ್ಲಿಂ ಉ|| ಚಾಲಕ ಸಾ|| ಸಗರ (ಬಿ) ಈತನಿಂದ ನಗದು ಹಣ 80/-ರೂಪಾಯಿ ಸಿಕ್ಕವು 3] ಮಹ್ಮದ್ ಲಾಡೆಸಾಬ ತಂದೆ ಮಹ್ಮದ್ ಇಬ್ರಾಹಿಂ ಶಹಾಪೂರ ವ|| 24 ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ಸಗರ (ಬಿ) ಈತನಿಂದ ನಗದು  ಹಣ 60/- ರೂಪಾಯಿ ಸಿಕ್ಕವು 4] ನಾಗರಾಜ ತಂದೆ ಸಂಗಣ್ಣ ಗಾಗರ್ಿ ವ|| 33 ಜಾ|| ದೇವಾಂಗ ಉ|| ಚಾಲಕ ಸಾ|| ಸಗರ (ಬಿ) ಈತನಿಂದ ನಗದು ಹಣ 80/- ರೂಪಾಯಿ ಸಿಕ್ಕವು. 5] ಮಹ್ಮದ್ ಶಕಿಲ ತಂದೆ ಶಮರ್ುದ್ದಿನ್ ಐಕೂರ ವ|| 26 ಜಾ|| ಮುಸ್ಲಿಂ ಉ|| ಚಾಲಕ ಸಾ|| ಸಗರ (ಬಿ) ಈತನಿಂದ ನಗದು ಹಣ 90/- ರೂಪಾಯಿ ಸಿಕ್ಕವು. 6] ಮಹ್ಮದ್ ಇಬ್ರಾಹಿಂ ತಂದೆ ಅಬ್ದುಲ್ ಹಮೀದ್ ದಖನಿ ವ|| 36 ಜಾ|| ಮುಸ್ಲಿಂ ಉ|| ಕ                                                                        ೂಲಿಕೆಲಸ ಸಾ|| ಸಗರ (ಬಿ) ಈತನಿಂದ ನಗದು  ಹಣ 90/- ರೂಪಾಯಿ ಸಿಕ್ಕವು. ಕಣದಲ್ಲಿ ಪಣಕ್ಕೆ ಇಟ್ಟ ಹಣ 60/- ಸಿಕ್ಕವು ಹೀಗೆ ಒಟ್ಟು 580/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಮದ್ಯಾಹ್ನ 15-30  ಗಂಟೆಯಿಂದ 16-30 ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 06 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 17-00 ಗಂಟೆಗೆ ಬಂದು ವರದಿಯನ್ನು ತಯ್ಯಾರಿಸಿ 18-00 ಗಂಟೆಗೆ 06 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ, ನಂ,16/2019 ಕಲಂ 87 ಕೆ.ಪಿ.ಯಾಕ್ಟ ನೋಂದಣಿ ಮಾಡಿಕೊಂಡಿದ್ದು. ಕಲಂ 87 ಕೆ.ಪಿ.ಯಾಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ಮುಂದಿನ ಕ್ರಮ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಹುಲಗಪ್ಪ .ಪಿ.ಸಿ. 344 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 18-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 58/2019 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
   
ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:-31/2019 ಕಲಂ. 87 ಕೆ.ಪಿ.ಕಾಯ್ದೆ :- 08/03/2019 ರಂದು 5-30 ಪಿಎಮ್ ಕ್ಕೆ ಪಿ.ಎಸ್.ಐ ವಡಗೇರಾ ಠಾಣೆ ರವರು ಠಾಣೆಗೆ ಹಾಜರಾಗಿ ಇಂದು ದಿನಾಂಕ: 08/03/2019 ರಂದು ಕೋಡಾಲ ಗ್ರಾಮದ ಹನುಮಾನ ದೇವರ ಗುಡಿ ಹತ್ತಿರ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾಗ ನಾನು ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಿದಾಗ ಅಂದರ-ಬಾಹರ ಇಸ್ಪೀಟ ಆಟ ಆಡುತ್ತಿದ್ದ 1) ಭೀಮರಾಯ ತಂದೆ ಹಣಮಂತ ಬಾಗ್ಲೇರ, ವ:24, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಕೋಡಾಲ ಎಂದು ಹೇಳಿದ್ದು, ಇವನ ಹತ್ತಿರ 310=00 ರೂ. ನಗದು ಹಣ, ಮತ್ತು 19 ಇಸ್ಪಿಟ್ ಎಲೆಗಳು ದೊರೆತ್ತಿದ್ದು, 2) ಬಸಲಿಂಗಪ್ಪ ತಂದೆ ಬಾಲಪ್ಪ ಚಟ್ಟೆರ, ವ:30, ಜಾ:ಮಾದಿಗ (ಎಸ್.ಸಿ) ಉ:ಒಕ್ಕಲುತನ ಸಾ:ಕೋಡಾಲ ಈತನ ಹತ್ತಿರ ನಗದು ಹಣ 165=00 ರೂ. ದೊರೆತಿದ್ದು, ಓಡಿ ಹೋದವನ ಹೆಸರು 3) ಪ್ರಭು ತಂದೆ ಮಲ್ಲಯ್ಯ ಸ್ವಾಮಿ ಸಾ:ಕೋಡಾಲ ಎಂದು ಹೇಳಿದರು. ಎಲ್ಲರ ಮದ್ಯ ಇಸ್ಪೀಟ ಆಡುತ್ತಿದ್ದ ಸ್ಥಳದಲ್ಲಿ 725=00 ರೂ ನಗದು ಹಣ ಮತ್ತು 33 ಇಸ್ಪಿಟ್ ಎಲೆಗಳು ಇದ್ದವು. ಹೀಗೆ ಒಟ್ಟು 1200=00 ರೂ. ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ದೊರತ್ತಿದ್ದು, ಸದರಿ ಸಿಕ್ಕಿರುವ ಇಬ್ಬರೂ ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ಕೊಟ್ಟ ಪತ್ರವನ್ನು ಇಂದು ದಿನಾಂಕ: 08/03/2019 ರಂದು 8-30 ಪಿಎಮ್ ಕ್ಕೆ ಕೋರ್ಟ ಹೆಚ್.ಸಿ 57 ರವರು ಹಾಜರಪಡಿಸಿದ ಮೇರೆಗೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 31/2019 ಕಲಂ: 87 ಕೆ.ಪಿ ಎಕ್ಟ್ 1963 ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!