ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-03-2019
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 26/2019 ಕಲಂ: 143, 147, 148, 504, 323, 324, 326, 506 ಸಂ 149 ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) (ಡಬ್ಲ್ಯೂ) 2 (5) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989 :- ದಿನಾಂಕ: 01/03/2019 ರಂದು 6-30 ಎಎಮ್ ಕ್ಕೆ ಶ್ರೀ ಮೋನಪ್ಪ ತಂದೆ ಮುದುಕಪ್ಪ ಗೌಡಯ್ಯನೋರ, ವ:28, ಜಾ:ಬೇಡರ, ಉ:ಕೂಲಿ ಸಾ:ಕುರಿಹಾಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ನಿನ್ನೆ ದಿನಾಂಕ: 28/02/2019 ರಂದು ನಮ್ಮೂರ ದಾವಲಮಲಿಕ ದಗರ್ಾದ ಉರುಸ ಇದ್ದುದ್ದರಿಂದ ನಮ್ಮಣ್ಣ ಹಣಮಂತ ತಂದೆ ಸಾಬಣ್ಣ ಈತನು ದೇವರು ಮಾಡಿದ್ದನು. ಸದರಿ ದಾವಲ ಮಲಿಕ ದಗರ್ಾದ ಉರುಸ ಪ್ರಯುಕ್ತ ಊರ ಹನುಮಾನ ದೇವಸ್ಥಾನದ ಹತ್ತಿರ ರೇಣುಕಾ ಯಲ್ಲಮ್ಮ ಎಂಬ ಬೈಲಾಟ ಇತ್ತು. ಆದ್ದರಿಂದ ನಾನು ಮತ್ತು ನಮ್ಮಣ್ಣ ಹಣಮಂತ, ಕಾಕ ಬಸಲಿಂಗಪ್ಪ ಹಾಗೂ ಇತರ ನಮ್ಮ ಬೀಗರ ನೆಂಟರು ಕೂಡಿ ರೇಣುಕಾ ಯಲ್ಲಮ್ಮ ಬೈಲಾಟ ನೋಡಲು ಹೋಗಿದ್ದೇವು. ರಾತ್ರಿ 11-30 ಗಂಟೆ ಸುಮಾರಿಗೆ ನಾವು ಬೈಲಾಟ ನೋಡುತ್ತಿದ್ದಾಗ ನಮ್ಮೂರು ಕುರುಬ ಜನಾಂಗದವರು ತಮ್ಮ ತಮ್ಮಲ್ಲೆ ಗಲಾಟೆ ಮಾಡುತ್ತಿದ್ದಾಗ ಕರ್ತವ್ಯದ ಮೇಲೆ ಇದ್ದ ಮಹಾಂತಪ್ಪ ಹೋಮ ಗಾರ್ಡ ಇವರು ಬಂದು ಬಿಡಿಸುತ್ತಿದ್ದರು. ಆಗ ನಾವು ಕೂಡಾ ಹೋಗಿ ದೇವರ ಬೈಲಾಟ ನಡೆದಿದೆ ಯಾಕೆ ಗಲಾಟೆ ಮಾಡುತ್ತಿರಿ ಊರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ನಾನು ಮತ್ತು ನಮ್ಮ ಕಾಕ ಬಸಲಿಂಗಪ್ಪ ಹಾಗೂ ಹಣಮಂತ ಮತ್ತು ಇತರರು ಹೋಗಿ ಬಿಡಿಸಲು ಹೋದಾಗ ಕುರುಬ ಜನಾಂಗದವರಾದ 1) ಮಲ್ಲಪ್ಪ ತಂದೆ ಸಿದ್ದಪ್ಪ ಸಿಂಗಾರಿ, 2) ಶೇಷಪ್ಪ ತಂದೆ ಸಿದ್ದಪ್ಪ ಸಿಂಗಾರಿ, 3) ರೆಡ್ಡೆಪ್ಪ ತಂದೆ ಸಿದ್ದಪ್ಪ ಸಿಂಗಾರಿ, 4) ಸಾಬಣ್ಣ ತಂದೆ ನಸರಪ್ಪ ರಾಜಗಿರಿ, 5) ಮಾಳಪ್ಪ ತಂದೆ ನಿಂಗಪ್ಪ ರಾಜಗಿರಿ, 6) ಮಲ್ಲಪ್ಪ ತಂದೆ ಕಾಡಪ್ಪ ಪೂಜಾರಿ, 7) ನಾಗಪ್ಪ ತಾಯಿ ಲಕ್ಷ್ಮೀ ರಾಜಗಿರಿ, 8) ಶರಣಪ್ಪ ತಂದೆ ನರಸಪ್ಪ ರಾಜಗಿರಿ, 9) ನಿಂಗಪ್ಪ ತಂದೆ ಸಿದ್ದಪ್ಪ ಸಿಂಗಾರಿ ಎಲ್ಲರೂ ಜಾ:ಕುರುಬರ ಸಾ:ಕುರಿಹಾಳ ಇವರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಬಂದವರೆ ನಮಗೆ ಉದ್ದೇಶಿಸಿ ಲೇ ಬ್ಯಾಡ ಸೂಳೆ ಮಕ್ಕಳೆ ನಮಗೆ ಬುದ್ದಿ ಹೇಳಲು ಬರುತ್ತಿರನಲೇ ಸೂಳೆ ಮಕ್ಕಳೆ ಎಂದು ಜಗಳ ತೆಗೆದವರೆ ಶೇಷಪ್ಪ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನಮ್ಮ ಕಾಕ ಬಸಲಿಂಗಪ್ಪನಿಗೆ ಬಲಗಡೆ ಭುಜಕ್ಕೆ ಬಲವಾಗಿ ಹೊಡೆದು ಭಾರಿ ಗುಪ್ತ ಗಾಯ ಮಾಡಿದಾಗ ಬಸಲಿಂಗಪ್ಪನು ಸತ್ತೆನೆಪ್ಪೊ ಎಂದು ನೆಲಕ್ಕೆ ಬಿದ್ದು ಬಿಟ್ಟನು. ಬಿಡಿಸಲು ಹೋದ ನನಗೆ ಮಲ್ಲಪ್ಪ ತಂದೆ ಸಿದ್ದಪ್ಪ ಸಿಂಗಾರಿ ಈತನು ಕಲ್ಲಿನಿಂದ ಎಡಗಡೆ ಹಣೆಗೆ ಹೊಡೆದು ರಕ್ತಗಾಯ ಮಾಡಿದನು. ಮತ್ತೊಂದು ಏಟು ಹೊಡೆಯಲು ಬಂದಾಗ ನಾನು ನನ್ನ ಎಡಗೈ ಅಡ್ಡ ಒಯ್ದಾಗ ಆ ಏಟು ಎಡಗೈ ಉಂಗುರ ಬೆರಳಿಗೆ ಒಳಪೆಟ್ಟಾಗಿರುತ್ತದೆ. ನಮ್ಮಣ್ಣ ಹಣಮಂತನಿಗೆ ಮಲ್ಲಪ್ಪ ತಂದೆ ಕಾಡಪ್ಪ ಪೂಜಾರಿ ಈತನು ಕಟ್ಟಿಗೆಯಿಂದ ಹೊಡೆದಾಗ ಆತನು ತನ್ನ ಬಲಗೈ ಅಡ್ಡ ಒಯ್ದಾಗ ಆ ಏಟು ಬಲಗೈ ಮದ್ಯದ ಬೆರಳಿಗೆ ಬಿದ್ದು ರಕ್ತಗಾಯವಾಗಿರುತ್ತದೆ. ಮತ್ತೊಂದು ಏಟು ಬಲಗಡೆ ಟೊಂಕಕ್ಕೆ ಹೊಡೆದು ನೀಲಿಗಟ್ಟಿದ ಗಾಯ ಮಾಡಿದನು. ಬಿಡಿಸಲು ಬಂದ ತಾಯಪ್ಪ ತಂದೆ ರಂಗಪ್ಪನಿಗೆ ಮಾಳಪ್ಪ ತಂದೆ ನಿಂಗಪ್ಪನು ಕಲ್ಲಿನಿಂದ ಬಲಗಡೆ ಕಣ್ಣಿನ ಹುಬ್ಬಿಗೆ ಹೊಡೆದು ರಕ್ತಗಾಯ ಮಾಡಿದನು. ಈರಪ್ಪ ತಂದೆ ಸಾಬಣ್ಣ ಗೌಡಯ್ಯನೋರ ಈತನಿಗೆ ನಾಗಪ್ಪ ತಾಯಿ ಲಕ್ಷ್ಮೀ ಮತ್ತು ಶರಣಪ್ಪ ತಂದೆ ನರಸಪ್ಪ ರಾಜಗಿರಿ ಇಬ್ಬರೂ ಕೂಡಿ ಹೊಡೆದಿದ್ದು, ನಾಗಪ್ಪನು ಕಲ್ಲಿನಿಂದ ಎಡಗಡೆ ಕಣ್ಣಿನ ಕೆಳಗೆ ಹೊಡೆದು ಗುಪ್ತ ಪೆಟ್ಟು ಮಾಡಿದನು. ಇನ್ನು ನಮ್ಮ ಭೀಮಣ್ಣ ತಂದೆ ಕಂಠೆಪ್ಪ ಈತನಿಗೆ ನಿಂಗಪ್ಪ ತಂದೆ ಸಿದ್ದಪ್ಪ ಈತನು ಕಟ್ಟಿಗೆಯಿಂದ ಎಡ ಭುಜಕ್ಕೆ ಹೊಡೆದು ಗುಪ್ತಪೆಟ್ಟು ಮಾಡಿದನು. ಬಿಡಿಸಲು ಬಂದ ನಮ್ಮ ತಾಯಿ ನಾಗಮ್ಮ ಮತ್ತು ನಮ್ಮ ಅತ್ತಿಗೆ ಮಲ್ಲಮ್ಮ ಗಂಡ ಹಣಮಂತ ಈಕೆಗೆ ಉಳಿದವರು ಸೀರೆ ಸೆರಗು ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ. ಆಗ ಜಗಳವನ್ನು ಶರಣಪ್ಪ ತಂದೆ ಸಾಬಣ್ಣ ಕಾವಲಿ ಮತ್ತು ಮಲ್ಲಪ್ಪ ತಂದೆ ಸಾಬಣ್ಣ ಮೆಂಬರ ಇವರು ಬಂದು ಬಿಡಿಸಿದಾಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಬ್ಯಾಡ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ಪೂಜಾರಿಗಳ ಹೆಸರಿಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋದರು. ನಂತರ ನಾವು ಅಲ್ಲಿಂದ ಉಪಚಾರ ಕುರಿತು ವಡಗೇರಾ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡಿರುತ್ತೇವೆ. ಭಾರಿ ಗಾಯಗೊಂಡಿರುವ ಬಸಲಿಂಗಪ್ಪನಿಗೆ ರಾಯಚೂರು ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಕಾರಣ ದೇವರ ಬೈಲಾಟದಲ್ಲಿ ಗದ್ದಲ ಮಾಡುವುದು ಸರಿ ಅಲ್ಲ ಅಂತಾ ಬಿಡಿಸಿ ಬುದ್ದಿ ಮಾತು ಹೇಳಲು ಹೋದ ನಮಗೆ ವಿನಾಕಾರಣ ಜಾತಿ ನಿಂದನೆ ಮಾಡಿ ಹೊಡೆಬಡೆ ಮಾಡಿ ಭಾರಿ ಗಾಯಗೊಳಿಸಿ, ಜೀವ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 26/2019 ಕಲಂ: 143, 147, 148, 504, 323, 324, 326, 506 ಸಂ 149 ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) (ಡಬ್ಲ್ಯೂ) 2 (5) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989 ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 53/2019 ಕಲಂ 279 304[ಎ] ಐ.ಪಿ.ಸಿ:- ದಿನಾಂಕ:01/03/2019 ರಂದು ಬೆಳಿಗ್ಗೆ 10:00 ಎಎಂಕ್ಕೆ ಶ್ರೀ ಮುನೀರ ಅಹ್ಮದ ತಂ/ ಮಹ್ಮದಶಾಲಂಸಾಬ ವ|| 21 ವರ್ಷ ಉ|| ಎಲೆಕ್ಟ್ರೀಷಿಯನ್ ಸಾ|| ಲಾಲಬಹದ್ದೂರ ಶಾಸ್ತ್ರಿ ನಗರ ರಾಯಚೂರು ಇವರು ಠಾಣೆಗೆ ಹಾಜರಾಗಿ ಪಿಯರ್ಾದಿ ಸಲ್ಲಿಸಿದರ ಸಾರಾಂಶವೆನೇಂದರೆ, ನನ್ನ ಅಕ್ಕ ಗೌಸಿಯಾ ಬೇಗಂಳ ಗಂಡನಾದ ಅಬ್ದುಲ್ ಖಾದರ ತಂ/ ಬಾಬುಮಿಯಾ ಸಾ|| ಅಸ್ಕಿಹಾಳ ತಾ||ಜಿ|| ರಾಯಚೂರು ಈತನು ನಿನ್ನೆ ದಿನಾಂಕ: 28/02/2019 ರಂದು ರಾಯಚೂರಿನಿಂದ ಬೀದರಕ್ಕೆ ಹೊರಟಿದ್ದು, ನಾನು ಶಹಾಪುರದಲ್ಲಿ ಕೆಲಸ ಇದ್ದುದರಿಂದ ನಾನು ನನ್ನ ಮಾವನ ಟ್ಯಾಂಕರಿನಲ್ಲಿ ಹೊರಟಿದ್ದಾಗ ಟ್ಯಾಂಕರನ್ನು ಸುರೇಶಕುಮಾರ ತಂ/ ಈರಣ್ಣ ಸಾ|| ರಾಯಚೂರು ಈತನು ನಡೆಸುತ್ತಿದ್ದನು. ಮಧ್ಯಾಹ್ನ 1.30 ಪಿ.ಎಂ. ಸುಮಾರಿಗೆ ದೇವದುರ್ಗ-ಶಹಾಪುರ ರೋಡಿನಲ್ಲಿರುವ ಕೃಷ್ಣಾ ನದಿ ಬ್ರಿಜ್ ದಾಟಿ ಅಂದಾಜು ಇನ್ನೂ 1 ಕಿ.ಮೀ ದೂರದಲ್ಲಿರುವ ಎಂ.ಕೊಳ್ಳುರು ಕಡೆಗೆ ಹೊರಟಿದ್ದಾಗ ಟ್ಯಾಂಕರ್ ಚಾಲಕ ಸುರೇಶಕುಮಾರನು ಟ್ಯಾಂಕರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ ಒಮ್ಮೆಲೆ ಬಲಕ್ಕೆ ಕಟ್ ಮಾಡಿದಾಗ ಟ್ಯಾಂಕರ್ ರೋಡಿನ ಬಲ ಸೈಡಿನಲ್ಲಿ ಪಲ್ಟಿಯಾಗಿ ಬಿದ್ದ ಪರಿಣಾಮ ನನ್ನ ಮಾವ ಅಬ್ದುಲ್ ಖಾದರನಿಗೆ ಸೊಂಟಕ್ಕೆ, ಬೆನ್ನಿಗೆ, ಎದೆಗೆ ಮತ್ತು ತಲೆಗೆ ಬಾರಿ ಒಳಪೆಟ್ಟಾಗಿದ್ದು, ನನಗೆ ಮತ್ತು ಡ್ರೈವರನಿಗೆ ಯಾವುದೇ ಗಾಯಪೆಟ್ಟಾಗಿರಲಿಲ್ಲ ಆಗ ನಾನು ನನ್ನ ಮಾವನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ದೇವದುರ್ಗ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾಗ 2.10 ಪಿ.ಎಂ ಸುಮಾರಿಗೆ ದೇವದುರ್ಗ ಬಸ್ ನಿಲ್ದಾಣದ ಹತ್ತಿರ ಇದ್ದಾಗ ನನ್ನ ಮಾವನು ತನಗಾದ ಬಾರೀ ಒಳಪೆಟ್ಟಿನಿಂದ ಮೃತಪಟ್ಟನು. ನನಗೆ ಕಾನೂನಿನ ತಿಳುವಳಿಕೆ ಇಲ್ಲದರಿಂದ ನಾನು ನನ್ನ ಮಾವನ ಮೃತದೇಹವನ್ನು ಅಸ್ಕಿಹಾಳ ಗ್ರಾಮಕ್ಕೆ ತೆಗೆದುಕೊಂಡು ಹೋಗಿರುತ್ತೇನೆ. ಇಂದು ದಿನಾಂಕ: 01/03/2019 ರಂದು ನಮ್ಮ ಸಂಬಂಧಿಕರು ಮತ್ತು ಗ್ರಾಮದ ಪ್ರಮುಖರೊಂದಿಗೆ ವಿಚಾರ ಮಾಡಿ ತಡವಾಗಿ ಪೊಲೀಸ್ ಠಾಣೆಗೆ ಬಂದಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣೀಭೂತನಾದ ಭಾರತ ಪೆಟ್ರೋಲಿಯಂನ ಟ್ಯಾಂಕರ ನಂ. ಕೆಎ-01 ಎಬಿ-6417 ನೇದ್ದರ ಚಾಲಕನಾದ ಸುರೇಶಕುಮಾರ ತಂ/ ಈರಣ್ಣ ಸಾ|| ರಾಯಚೂರು ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ. 53/2019 ಕಲಂ 279, 304[ಎ] ಐ.ಪಿ.ಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 27/2019 ಕಲಂ: 143,147,148,504,323,324,326,506 ಸಂ 149 ಐಪಿಸಿ:-ದಿನಾಂಕ: 01/03/2019 ರಂದು 10-45 ಎಎಮ್ ಕ್ಕೆ ಶ್ರೀ ಸಿದ್ದಪ್ಪ ತಂದೆ ನರಸಪ್ಪ ಪೂಜಾರಿ, ವ:60, ಜಾ:ಕುರುಬರ, ಉ:ಒಕ್ಕಲುತನ ಸಾ:ಕುರಿಹಾಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ನಿನ್ನೆ ದಿನಾಂಕ: 28/02/2019 ರಂದು ನಮ್ಮೂರ ದಾವಲಮಲಿಕ ದಗರ್ಾದ ಉರುಸ ಇದ್ದುದ್ದರಿಂದ ನಾವು ದಗರ್ಾಕ್ಕೆ ಬ್ಯಾಟಿ ಮಾಡಿದ್ದೇವು. ಸದರಿ ದಾವಲ ಮಲಿಕ ದಗರ್ಾದ ಉರುಸ ಪ್ರಯುಕ್ತ ಊರ ಹನುಮಾನ ದೇವಸ್ಥಾನದ ಹತ್ತಿರ ರೇಣುಕಾ ಯಲ್ಲಮ್ಮ ಎಂಬ ಬೈಲಾಟ ಇತ್ತು. ಆದ್ದರಿಂದ ನಾನು ಮತ್ತು ನಮ್ಮ ಸಂಬಂಧಿಕರಾದ ಮಾಳಪ್ಪ ತಂದೆ ನಿಂಗಪ್ಪ ರಾಜಗಿರಿ, ಶೇಷಪ್ಪ ತಂದೆ ಸಿದ್ದಪ್ಪ ಸಿಂಗಾರಿ, ರೆಡ್ಡೆಪ್ಪ ತಂದೆ ಸಿದ್ದಪ್ಪ ಸಿಂಗಾರಿ ಹಾಗೂ ಇತರರು ಕೂಡಿ ರೇಣುಕಾ ಯಲ್ಲಮ್ಮ ಬೈಲಾಟ ನೋಡಲು ಹೋಗಿದ್ದೇವು. ರಾತ್ರಿ 11-30 ಗಂಟೆ ಸುಮಾರಿಗೆ ನಾವು ಬೈಲಾಟ ನೋಡುತ್ತಿದ್ದಾಗ ನಮ್ಮ ಜನಾಂಗದ ಕೆಲ ಹುಡುಗರು ತಮ್ಮ ತಮ್ಮಲ್ಲೆ ಗಲಾಟೆ ಮಾಡುತ್ತಿದ್ದಾಗ ಬೈಲಾಟ ಬಂದೊಬಸ್ತ ಕರ್ತವ್ಯದ ಮೇಲೆ ಇದ್ದ ಮಹಾಂತಪ್ಪ ಹೋಮ ಗಾರ್ಡ ಇವರು ನಡುವೆ ಬಂದು ಬಿಡಿಸುತ್ತಿದ್ದರು. ಆಗ ನಾವು ಕೂಡಾ ಹೋಗಿ ಯಾಕೆ ಗಲಾಟೆ ಮಾಡುತ್ತಿರಿ ಎಂದು ಬಿಡಿಸುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರ ದೊರೆಗಳ ಜನಾಂಗದವರಾದ 1) ಈರಪ್ಪ ತಂದೆ ಸಾಬಣ್ಣ ಗೌಡಯ್ಯನೋರ, 2) ತಾಯಪ್ಪ ತಂದೆ ರಂಗಪ್ಪ ಕಾವಲಿಯವರ, 3) ಮಲ್ಲಯ್ಯ ತಂದೆ ಸಾಬಣ್ಣ ಗೌಡಯ್ಯನವರ, 4) ನರಸಪ್ಪ ತಂದೆ ರಂಗಪ್ಪ ಕಾವಲಿಯವರ, 5) ಮೋನಪ್ಪ ತಂದೆ ಮುದುಕಪ್ಪ ಗೌಡಯ್ಯನವರ, 6) ಹಣಮಂತ ತಂದೆ ಸಾಬಪ್ಪ ಗೌಡಯ್ಯನವರ, 7) ಮುದೆಪ್ಪ ತಂದೆ ಸಾಬಪ್ಪ ಗೌಡಯ್ಯನವರ, 8) ರಾಜಾ ತಂದೆ ತಾಯಪ್ಪ ಕಾವಲಿಯವರ, 9) ಕಾಂಗ್ಯ @ ಮಲ್ಲಪ್ಪ ತಂದೆ ಮುದುಕಪ್ಪ ಗೌಡಯ್ಯನೋರ ಎಲ್ಲರು ಸಾ:ಕುರಿಹಾಳ ಇವರೆಲ್ಲರೂ ಸೇರಿ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಬಡಿಗೆ, ಕಲ್ಲುಗಳನ್ನು ಹಿಡಿದುಕೊಂಡು ಬಂದವರೆ ನಮಗೆ ವಿನಾಕಾರಣ ಎಲೆ ಕುರುಬ ಸೂಳೆ ಮಕ್ಕಳೆ ಬೈಲಾಟ ನಡದಾದ ಯಾಕಲೇ ಗಲಾಟೆ ಮಾಡುತ್ತಿರಿ ಎಂದು ಜಗಳ ತೆಗೆದವರೆ ಮಾಳಪ್ಪನಿಗೆ ಮೋನಪ್ಪನು ಹಿಡಿಗಲ್ಲಿನಿಂದ ಟೊಂಕಕ್ಕೆ ಹೊಡೆದು ರಕ್ತಗಾಯ ಮಾಡಿದನು. ಮತ್ತೆ ಅದೆ ಕಲ್ಲಿನಿಂದ ಮಾಳಪ್ಪನ ಎಡಗಾಲ ಚೆಪ್ಪೆಗೆ ಹೊಡೆದಿದ್ದರಿಂದ ಭಾರಿ ಗುಪ್ತಗಾಯವಾಗಿರುತ್ತದೆ. ತಾಯಪ್ಪನು ಕೈಯಿಂದ ಮಾಳಪ್ಪನ ಎಡಕಿಗೆ ಹೊಡೆದು ಒಳಪೆಟ್ಟು ಮಾಡಿದನು. ಜಗಳ ಬಿಡಿಸಲು ಬಂದ ಶೇಷಪ್ಪನಿಗೆ ಈರಪ್ಪನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ತೆಲೆ ಹಿಂಭಾಗಕ್ಕೆ ಹೊಡೆದು ಗುಪ್ತಗಾಯ ಮಾಡಿದನು. ಇನ್ನುಳಿದವರು ನಮಗೆ ಸುತ್ತುಗಟ್ಟಿ ನೆಲಕ್ಕೆ ಹಾಕಿ ಕೈಯಿಂದ ಹೊಡೆದು ಕಾಲಿನಿಂದ ಒದೆಯುತ್ತಿರುವಾಗ ನಾನು ಮತ್ತು ನರಸಪ್ಪ ತಂದೆ ನರಸಣ್ಣ ರಾಜಗಿರಿ ಇಬ್ಬರೂ ಹೋಗಿ ಜಗಳ ಬಿಡಿಸಿದಾಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ಹೆಸರಿಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೊದರು. ಕಾರಣ ನಮ್ಮ ಹುಡುಗರಿಗೆ ನಾವು ಬಿಡಿಸುತ್ತಿದ್ದಾಗ ವಿನಾಕಾರಣ ನಡುವೆ ಬಂದ ದೊರೆಗಳ ಮಂದಿ ನಮಗೆ ಅವಾಚ್ಯ ಬೈದು ಮನಸ್ಸಿಗೆ ಬಂದಂಗೆ ಹೊಡೆದು ಮಾಳಪ್ಪನಿಗೆ ಭಾರಿ ಗುಪ್ತ ಮತ್ತು ರಕ್ತಗಾಯ ಮಾಡಿರುತ್ತಾರೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 27/2019 ಕಲಂ: 143,147,148,504,323,324,326,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 24/2019 ಕಲಂ: 143, 147, 323, 354, 504, 506 ಸಂ: 149ಐಪಿಸಿ:- ದಿನಾಂಕ: 01/03/2019 ರಂದು 12.10 ಪಿಎಂ ಕ್ಕೆ ಕಲಬುರಗಿಯ ಸರಕಾರಿಆಸ್ಪತ್ರೆಯಿಮದ ಹರ್ಟ ಎಂ.ಎಲ್.ಸಿ ಮಾಹಿತಿ ಬಂದ ಮೇಲೆ ನಾನು ವೀರಣ್ಣ ಹೆಚ್.ಸಿ-138 ಗೋಗಿ ಠಾಣೆ ಸರಕಾರಿಆಸ್ಪತ್ರೆ ಕಲಬುರಗಿಗೆ ಬೇಟಿ ಮಾಡಿ ಗಾಯಾಳು ಶ್ರೀ. ಮಾರ್ಥಂಡಪ್ಪತಂದೆಈರಣ್ಣಗೌಡ ಮಾಲಿಪಾಟೀಲ ವಯಾ:48 ವರ್ಷ ಉ: ಒಕ್ಕಲುತನಜಾ: ಕುರುಬರ ಸಾ: ಸೈದಾಪೂರತಾ: ಶಹಾಪೂರ ಜಿ: ಯಾದಗಿರಿಇವರ ವಿಚಾರಣೆ ಮಾಡಿದ್ದು, ಸದರಿಯವರುತಮ್ಮ ಹೇಳಿಕೆಯನ್ನು ಲೀಖಿತವಾಗಿಬರೆದುಕೊಟ್ಟಿದ್ದು ಪಡೆದುಕೊಂಡಿದ್ದು, ಸದರಿಅಜರ್ಿ ಸಾರಂಶಏನಂದರೆ, ನಾನು ಅಜರ್ಿದಾರನಾದ ಮಾರ್ಥಂಡಪ್ಪತಂದೆಈರಣ್ಣಗೌಡ ಮಾಲಿಪಾಟೀಲ ವಯಾ:48 ವರ್ಷ ಉ: ಒಕ್ಕಲುತನಜಾ: ಕುರುಬರ ಸಾ: ಸೈದಾಪೂರತಾ: ಶಹಾಪೂರ ಜಿ: ಯಾದಗಿರಿ, ಬರೆದುಕೊಡುವಅಜರ್ಿಅಂದರೆ, ದಿನಾಂಕ: 26/02/2019 ರ ಸಾಯಂಕಾಲ 05.30 ಪಿಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನತಮ್ಮನ ಹೆಂಡತಿಯಾದ ಶ್ರೀಮತಿ ಚಂದ್ರಕಲಾಗಂಡತಿಪ್ಪಣ್ಣಗೌಡ ಮಾಲಿಪಾಟೀಲ ಇವರದು ಹಿಟ್ಟಿನಗಿರಣಿಇದ್ದು ಜೋಳ ಬಿಸಕ್ಕೆ ಭೀಮರಾಯತಂದೆದಶರತದಾಸರ, ಯಂಕಮ್ಮಗಂಡದಶರಥದಾಸರ, ಜಯಮ್ಮಗಂಡಯಂಕಪ್ಪದಾಸರಇವರುಕೂಡ ಜೋಳ ಬೀಸಿದ ನಂತರದುಡ್ಡು (ರೂಪಾಯಿ) ಕೊಡುಅಂತಾ ಕೇಳಿದ್ದರೆ ನಾನು ದುಡ್ಡುಕೊಡುವದಿಲ್ಲ, ನನ್ನ ಹತ್ತಿರದುಡ್ಡು (ರೂಪಾಯಿ) ಇಲ್ಲ ಏನು ಮಾಡಕೋತಿಮಾಡಕೋಅಂತಾಅವಾಜ ಹಾಕಿದ್ದನು ಮತ್ತು ನನ್ನತಮ್ಮನ ಹೆಂಡತಿಯಾದಚಂದ್ರಕಲಾಇವರ ಸಂಗಡ ಜಗಳ ಮಾಡುವಾಗಅದರ ಶಬ್ದ ಕೇಳಿ ನಾನು ಹಿಟ್ಟನಗಿರಣಿಗೆ ಬಂದು ಭೀಮರಾಯಈತನಿಗೆಯಾಕೆ ಜಗಳ ಮಾಡುತ್ತಿಯಾಅಂತ ಕೇಳಿದ್ದರೆ, ನೀ ಏನು ಸೆಂಟಾ ಕೇಳುತ್ತಿಲೆ ಅಂತ ನನ್ನದೇಹದ ಭಾಗವಾದ (ತೊಡುಬೀಜ) ಕ್ಕೆ ಒದ್ದು ನನಗೆ ಗುಪ್ತಗಾಯ ಮಾಡಿದನುಅದೆ ಸಮಯಕ್ಕೆಯಂಕಮ್ಮಗಂಡದಶರಥದಾಸರ, ಯಂಕಯ್ಯತಂದೆ ಶ್ರೀನಿವಾಸ ದಾಸರ, ಶಶಿಕಲಾ ಗಂಡಯಂಕಯ್ಯದಾಸರ, ಧನುಷ್ತಂದೆ ಲಕ್ಷ್ಮಣದಾಸರ, ರಾಧಮ್ಮಗಂಡಅಯ್ಯಪ್ಪದಾಸರ, ಅಂಬ್ಲಪ್ಪತಂದೆ ಭೀಮಣ್ಣ ಬಳೋಡಗಿ, ಅಂಬ್ಲಮ್ಮಗಂಡತಿಮ್ಮಯ್ಯದಾಸರ, ರಿಂದಮ್ಮಗಂಡಯಂಕಯ್ಯದಾಸರ ಸಾ: ಸೈದಾಪೂರ ನಂತರಇವರೆಲ್ಲರೂಕೂಡಿಕೊಂಡು ಬಂದು ನನಗೂ ಮತ್ತು ನನ್ನ ಸೊಸೆಗೆ ಅವಾಚ್ಯ ಶಬ್ದಗಳು ಬೈಯ್ದುಇವರ ಸೊಕ್ಕು (ಕೊಬ್ಬು) ಬಹಳ ಆಗಿದೆಅಂತಜೀವ ಬೇದರಿಕೆ ಹಾಕಿದ್ದಾರೆ ಮತ್ತು ಭಿಮರಾಯತಂದೆದಶರಥದಾಸರಈತನು ನನ್ನ ಸೋಸೆಯಾದಚಂದ್ರಕಲಾ ಇವಳಿಗೆ ಕೈ ಹಿಡಿದುಜಗ್ಗಿ ಹಲ್ಲೆ ಮಾಡಿ ಕೈಗೆ, ಮತ್ತು ಹೊಟ್ಟೆಯ ಭಾಗಕ್ಕೆ ಗುಪ್ತ ಗಾಯಗಳಾಗಿದ್ದು ಇರುತ್ತದೆ. ಅದೆ ಸಮಯದಲ್ಲಿಖಾದರಸಾಬ ತಂದೆ ಮಮದಸಾಬ ಮತ್ತು ತಿಮ್ಮಯ್ಯ ತಂದೆ ಶಿವುರಾಯ ವಡ್ಡರಇವರು ಬಂದು ಜಗಳ ಬಿಡಿಸಿದ್ದರು. ಕಾರಣ ಮೇಲ್ಕಂಡವರ ವಿರುದ್ಧ ಸೂಕ್ತ ಕಾನೂನು ಪ್ರಕಾರಕ್ರಮಾತೇಗೆದುಕೊಬೇಕುಅಂತಾಅಜರ್ಿಸಾರಂಶದ ಮೇಲಿಂದ ಮರಳಿ 09.30 ಪಿಎಂ ಕ್ಕೆ ಠಾಣೆಗೆ ಬಂದುಠಾಣೆಗುನ್ನೆ ನಂ: 24/2019 ಕಲಂ: ಕಲಂ: 143, 147, 323, 354, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 55/2019 ಕಲಂ: 15(ಎ), 32, 34 ಕೆ.ಇ ಆಕ್ಟ್ 1965:- ದಿ: 01/03/2019 ರಂದು 6-45 ಪಿ.ಎಮ್.ಕ್ಕೆ ಶ್ರೀ ಸೋಮಲಿಂಗ ಒಡೆಯರ್, ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು 4-00 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಮಂಗಿಹಾಳ ಗ್ರಾಮದಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿರುವ ವೆಂಕಟೇಶ ಕುಂಬಾರಪೇಟ ಎಂಬುವವರ ಕಿರಾಣಿ ಅಂಗಡಿಯಲ್ಲಿ ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಇಬ್ಬರೂ ಪಂಚರು ಹಾಗು ಠಾಣೆಯ ಸಿಬ್ಬಂದಿಯವರೊಂದಿಗೆ ಹೊರಟು, 4-45 ಪಿ.ಎಮ್ ಕ್ಕೆ ಮಂಗಿಹಾಳ ಗ್ರಾಮದ ಮುಂಬಾಗದಲ್ಲಿರುವ ಹಳ್ಳದ ಬ್ರಿಜ್ ಹತ್ತಿರ ಜೀಪ ನಿಲ್ಲಿಸಿ ಎಲ್ಲರೂ ಸ್ವಲ್ಪ ನಡೆದುಕೊಂಡು ಹೋಗಿ ಶರಣಬಸವ ದೇವತಕಲ್ ಎಂಬುವವರ ಕಿರಾಣಿ ಅಂಗಡಿಗೆ ಮರೆಯಾಗಿ ಮರೆಯಾಗಿ ನಿಂತು ನೋಡಲಾಗಿ ಮಂಗಿಹಾಳ ಗ್ರಾಮದಲ್ಲಿರುವ ಮುಖ್ಯರಸ್ತೆಯ ಪಕ್ಕದಲ್ಲಿರುವ ಒಂದು ಕಿರಾಣಿಯ ಅಂಗಡಿಯ ಒಬ್ಬ ವ್ಯಕ್ತಿ ಉತ್ತರಕ್ಕೆ ಮುಖಮಾಡಿ ಕುಳಿತು ಸಾರ್ವಜನಿಕರಿಗೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡು 4-50 ಪಿ.ಎಮ್ ಕ್ಕೆ ದಾಳಿ ಮಾಡಿ ಮದ್ಯಮಾರಾಟ ಮಾಡುತ್ತಿದ್ದ ವೆಂಕಟೇಶ ತಂದೆ ಹಣಮಂತರಾಯ ಕುಂಬಾರಪೇಟ ಸಾ: ಮಂಗಿಹಾಳ ಇತನನ್ನು ಹಿಡಿದು, ಅಂಗಡಿಯಲ್ಲಿ ಪರಿಶೀಲಿಸಲಾಗಿ ಮದ್ಯದ ಬಾಟಲಿಗಳು ಸಿಕ್ಕಿದ್ದರಿಂದ ಸದರಿಯವನಿಗೆ ಮದ್ಯ ಮಾರಾಟ ಮಾಡಲು ಪರವಾನಿಗೆ ಇದ್ದರೆ ಹಾಜರಪಡಿಸುವಂತೆ ಸೂಚಿಸಿದಾಗ, ತನ್ನ ಬಳಿ ಯಾವುದೇ ಪರವಾನಿಗೆ ಇರುವದಿಲ್ಲ. ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದೇನೆ ಅಂತಾ ತಿಳಿಸಿದ್ದು ಇರುತ್ತದೆ. ಬಳಿಕ ಪಂಚರ ಸಮಕ್ಷಮ ಮದ್ಯದ ಬಾಟಲಿಗಳನ್ನು ಪರಿಶೀಲಿಸಿ ನೋಡಲಾಗಿ 1] ಕಿಂಗಫೀಶರ್ ಪ್ರಿಮಿಯಮ್ ಸ್ಟ್ರಾಂಗ ಬಿಯರ್, 650 ಎಮ್.ಎಲ್ ನ 12 ಬಾಟಲಿಗಳು, ಪ್ರತಿ ಬಾಟಲ್ ಬೆಲೆ 130/- ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 1560/- ರೂ.ಗಳಾಗುತ್ತದೆ. 2] ಕಿಂಗಫೀಶರ್ ಪ್ರಿಮಿಯಮ್ ಸ್ಟ್ರಾಂಗ ಬಿಯರ್, 330 ಎಮ್.ಎಲ್ ನ 19 ಬಾಟಲಿಗಳು, ಪ್ರತಿ ಬಾಟಲ ಬೆಲೆ 70/-ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 1330/- ರೂ.ಗಳಾಗುತ್ತದೆ. 3] ಓರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿ, 90 ಎಮ್.ಎಲ್ ನ 65 ಪೌಚಗಳು, ಪ್ರತಿ ಪೌಚ ಬೆಲೆ 30.32/- ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 1970=80 ರೂ.ಗಳಾಗುತ್ತದೆ. ಹೀಗೆ ಒಟ್ಟು 4860/-ರೂಪಾಯಿಗಳು ಕಿಮ್ಮತ್ತಿನ ಮದ್ಯದ ಬಾಟಲಿಗಳು ದೊರೆತಿದ್ದು, ಸದರಿ 3 ನಮೂನೆಯ ಮದ್ಯದ ಬಾಟಲಿಗಳಿಂದ ತಲಾ ಒಂದೊಂದು ಬಾಟಲಿಗಳನ್ನು ರಾಸಾಯನಿಕ ತಜ್ಞರ ಪರೀಕ್ಷೆಗಾಗಿ ಪಂಚರ ಸಮಕ್ಷಮ ಪ್ರತ್ಯೇಕವಾಗಿ ಜಪ್ತಿಪಡಿಸಿಕೊಂಡು ಆರೋಪಿ ಹಾಗು ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಠಾಣೆ ಗುನ್ನೆ ನಂಬರ 55/2019 ಕಲಂ: 15(ಎ), 32, 34 ಕೆ.ಇ ಆಕ್ಟ್ 1965 ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 09/2019 ಕಲಂ 279, 337 ಐಪಿಸಿ :- ದಿನಾಂಕ 01/03/2019 ರಂದು ರಾತ್ರಿ 11-30 ಪಿ.ಎಂ.ಕ್ಕೆ ಈ ಕೇಸಿನ ಫಿಯರ್ಾದಿಯಾದ ಮಲ್ಲಿಕಾಜರ್ುನ ತಂದೆ ಚಂದಯ್ಯ ತಿಮ್ಮಣ್ಣಗೌಡರ ಇವರ ಮಗನಾದ ಗಾಯಾಳು ಸಾಹೇಬಗೌಡ ತಂದೆ ಮಲ್ಲಿಕಾಜರ್ುನ ತಿಮ್ಮಣ್ಣಗೌಡರ ವಯ;16 ವರ್ಷ, ಇವರು ತಮ್ಮ ಇನೊವಾ ಕಾರ್ ನಂಬರ ಕೆಎ-33, ಎಮ್-6773 ನೇದ್ದರಲ್ಲಿ ಶಹಾಪುರ ದಿಂದ ಯಾದಗಿರಿಗೆ ಬರುವಾಗ ಮಾರ್ಗ ಮದ್ಯೆ ಯಾದಗಿರಿ ಡಾನ್ ಬೋಸ್ಕೋ ಶಾಲೆ ಹತ್ತಿರ ಕಾರ್ ಚಾಲಕನಾದ ರವಿಕುಮಾರ ಈತನು ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಸ್ಕಿಡ್ ಮಾಡಿ ಅಪಗಾತ ಮಾಡಿದ್ದು ಸದರಿ ಅಪಗಾತದಲ್ಲಿ ಗಾಯಾಳು ಸಾಹೇಬಗೌಡ ಇವರಿಗೆ ಕೈ, ಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯ ಹಾಗೂ ತಲೆಗೆ ಗುಪ್ತಗಾಯವಾಗಿದ್ದು ಕಾರ್ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸುವ ಕುರಿತು ಫಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
Hello There!If you like this article Share with your friend using