ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-02-2019

By blogger on ಶನಿವಾರ, ಫೆಬ್ರವರಿ 23, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-02-2019 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 31/2019 ಕಲಂ: 279, 337, 338, 304(ಎ) ಐ.ಪಿ.ಸಿ :- ದಿನಾಂಕ 22/02/2019 ರಂದು ರಾತ್ರಿ 8-00 ಗಂಟೆಗೆ ಜಿಜಿಎಚ್ ಯಾದಗಿರಿಯಿಂದ ಗಾಯಾಳು ಎಂ.ಎಲ್.ಸಿ. ಪೋನ ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುದಾರರಲ್ಲಿ ಶ್ರೀ ಮಲ್ಲಿಕಾಜರ್ುನ ತಂದೆ ಸಾಬಣ್ಣ ಸಂಬರದೊರ ಸಾಃ ಕೊಯಿಲೂರ ಇತನ ಹೇಳಿಕೆಯನ್ನು ಪಡೆದುಕೊಂಡಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಕೂಲಿಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ಹೀಗಿರುವಾಗ ಇಂದು ದಿನಾಂಕ 22/02/2019 ರಂದು ಬೆಳಿಗ್ಗೆ 9-00 ಗಂಟೆಗೆ ಕೂಲಿಕೆಲಸಕ್ಕೆ ಅಂತಾ ನಾನು ಮತ್ತು ನಮ್ಮೂರಿನವರಾದ ಆಂಜನೇಯ ತಂದೆ ಬಸಲಿಂಗಪ್ಪ ಮುಸಂಡೇರ, ದಂಡಪ್ಪ ತಂದೆ ಹಣಮಂತ್ರಾಯ ಮುಸಂಡೇರ, ಮರೇಮ್ಮ ಗಂಡ ಮಶಪ್ಪ ಬುಡ್ಡನರಸಯ್ಯನೊರ, ಮರೆಮ್ಮ ಗಂಡ ಬಸಲಿಂಗಪ್ಪ ಮುಸಂಡೇರ, ನಾಗಮ್ಮ ಗಂಡ ರಾಮಲಿಂಗಪ್ಪ ಮುಸಂಡೇರ ಎಲ್ಲರೂ ಕೂಡಿಕೊಂಡು ನಮ್ಮೂರಿನಿಂದ ತಳಕ ಗ್ರಾಮಕ್ಕೆ ಹೋಗುವ ಕುರಿತು ನಮ್ಮೂರಿನ ಹಣಮಂತ ತಂದೆ ಯಂಕಟಪ್ಪ ಗಂಗಾಬಾಯೇರ ಇತನ ಟಂ.ಟಂ. ಅಟೋ ನಂ ಕೆ.ಎ-33-ಎ-2215 ನೆದ್ದರಲ್ಲಿ ಕುಳಿತುಕೊಂಡು ಹೋದೆವು, ತಳಕ ಗ್ರಾಮದಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕೂಲಿಕೆಲಸ ಮಾಡಿದೆವು, ನಂತರ ಸಾಯಂಕಾಲ 6-00 ಗಂಟೆಗೆ ನಮ್ಮೂರಿಗೆ ಹೋಗುವ ಕುರಿತು ಹಣಮಂತ ಇತನ ಟಂ.ಟಂ ಅಟೋದಲ್ಲಿ ಕುಳಿತುಕೊಂಡು ಬರುವಾಗ ಮಾರ್ಗಮಧ್ಯ ತಳಕ-ಹೆಡಗಿಮದ್ರಿ ಗ್ರಾಮಗಳ ಮಧ್ಯ ರೋಡಿನ ಮೇಲೆ ಅಟೋ ಚಾಲಕ ಹಣಮಂತ ಇತನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಹೋಗುತ್ತಾ ಒಮ್ಮೆಲೆ ಬ್ರೆಕ್ ಹಾಕಿದ್ದರಿಂದ ಟಂಟಂ ಅಟೋ ಪಲ್ಟಿಯಾಗಿ ಅಪಘಾತವಾಯಿತು, ಈ ಅಪಘಾತದಲ್ಲಿ ನನ್ನ ಎದೆಯ ಬಲಭಾಗಕ್ಕೆ ಗುಪ್ತಗಾಯವಾಗಿರುತ್ತದೆ, ಆಂಜನೇಯ ತಂದೆ ಬಸಲಿಂಗಪ್ಪ ಮುಸಂಡೇರ ಇತನ ಎಡ ಕಾಲಿಗೆ ಗುಪ್ತಗಾಯವಾಗಿರುತ್ತದೆ, ದಂಡಪ್ಪ ತಂದೆ ಹಣಮಂತ್ರಾಯ ಮುಸಂಡೇರ ಇತನ ಬಲಗಾಲಿಗೆ ಗುಪ್ತಗಾಯವಾಗಿರುತ್ತದೆ, ಮರೇಮ್ಮ ಗಂಡ ಮಶಪ್ಪ ಬುಡ್ಡನರಸಯ್ಯನೊರ ಇವಳ ಎಡಗಾಲಿಗೆ, ಎಡಭುಜಕ್ಕೆ ಗುಪ್ತಗಾಯವಾಗಿರುತ್ತದೆ, ಮರೆಮ್ಮ ಗಂಡ ಬಸಲಿಂಗಪ್ಪ ಮುಸಂಡೇರ ಇವಳ ಬಲಮುಂಡಿಗೆ ಗುಪ್ತಗಾಯ, ಬಲಮೊಳಕೈಗೆ, ಎಡಗೈ ಹಸ್ತಕ್ಕೆ ರಕ್ತಗಾಯವಾಗಿರುತ್ತದೆ, ನಾಗಮ್ಮ ಗಂಡ ರಾಮಲಿಂಗಪ್ಪ ಮುಸಂಡೇರ ಇವಳ ಬಲಕಿವಿಗೆ ರಕ್ತಗಾಯವಾಗಿರುತ್ತದೆ, ಮತ್ತು ಟಂ.ಟಂ. ಅಟೋ ಚಾಲಕ ಹಣಮಂತ ಇತನ ತಲೆಗೆ ಭಾರಿ ರಕ್ತಗಾಯ, ಬೆನ್ನಿಗೆ ಭಾರಿ ತರಚಿದಗಾಯವಾಗಿದೆ, ಎದೆಗೆ, ಹೊಟ್ಟೆಗೆ ಭಾರಿ ಗುಪ್ತಗಾಯವಾಗಿರುತ್ತದೆ, ಆಗ ನಾವೆಲ್ಲರೂ ಕೂಡಿಕೊಂಡು ಹಣಮಂತ ಇತನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ತರುವಾಗ ಹೆಡಗಿಮದ್ರಿ ಹತ್ತಿರ ಸಾಯಂಕಾಲ 7-00 ಗಂಟೆಗೆ ಹಣಮಂತ ತಂದೆ ಯಂಕಟಪ್ಪ ಇತನು ಸತ್ತಿರುತ್ತಾನೆ, ಈ ಅಪಘತವು ಇಂದು ದಿನಾಂಕ 22/02/2019 ರಂದು ಸಾಯಂಕಾಲ 6-30 ಗಂಟೆಗೆ ನಡೆದಿರುತ್ತದೆ, ಈ ಅಪಘಾವು ಹಣಮಂತನ ನಿರ್ಲಕ್ಷತನದಿಂದ ನಡೆದಿರುತ್ತದೆ, ಅವನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾನೆ ಗುನ್ನೆ ನಂ 31/2019 ಕಲಂ 279, 337, 338, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಡಿಕೊಂಡು ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 53/2019 ಕಲಂ. 143,147,148, 341, 323,324, 504,506 ಸಂಗಡ 149 ಐಪಿಸಿ ಮತ್ತು 3(1)(ಆರ್), 3(1)(ಎಸ್) ಎಸ್.ಸಿ/ ಎಸ್.ಟಿ ಪಿ.ಎ ಆಕ್ಟ್ 1989 :- ದಿನಾಂಕಃ 22/02/2019 ರಂದು 3-00 ಪಿ.ಎಮ್ ಕ್ಕೆ ಶ್ರೀ ನಾಗಪ್ಪ ತಂದೆ ತಿಮ್ಮಯ್ಯ ಕವಾಲ್ದಾರ ಸಾ|| ಬಾದ್ಯಾಪೂರ ತಾಃ ಸುರಪೂರ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 21/02/2019 ರಂದು ಮುಂಜಾನೆ ನಾನು ಮತ್ತು ನನ್ನ ದೊಡ್ಡಪ್ಪನ ಮಗನಾದ ತಿರುಪತಿ ತಂದೆ ಶಿವಪ್ಪ ಕವಾಲ್ದಾರ ಇಬ್ಬರೂ ಕೂಡಿ ಮೋ.ಸೈಕಲ್ ಮೇಲೆ ನಮ್ಮ ಹೊಲದಿಂದ ಮನೆಗೆ ಹೊರಟಿದ್ದೇವು. ನಾವು ನಮ್ಮೂರಿನ ಹಣಮಂತ ದೇವರ ಗುಡಿಯ ಹತ್ತಿರ ಬಂದಾಗ 7-00 ಪಿ.ಎಮ್ ಸುಮಾರಿಗೆ ಮೋ.ಸೈಕಲ್ ದಲ್ಲಿ ಪೆಟ್ರೋಲ್ ಖಾಲಿಯಾಗಿದ್ದರಿಂದ ನಾನು ಚೌಕ ಹಿಡಿದು ರೇಸ್ ಮಾಡಿದ್ದು, ಅದನ್ನು ಕೇಳಿ ಅಲ್ಲೆ ಹಣಮಂತ ದೇವರ ಗುಡಿಯ ಹತ್ತಿರ ಕುಳಿತಿದ್ದ ನಮ್ಮೂರಿನ ಕುರುಬ ಜನಾಂಗದವರಾದ 1) ಸಂತೋಷ ತಂದೆ ಬಸವರಾಜ ಹಾನೇರ 2) ಭೀಮಾಶಂಕರ ತಂದೆ ಸಣ್ಣ ಕೋತಲಪ್ಪ ಹಾನೇರ, 3) ಮಲ್ಲಪ್ಪ ತಂದೆ ನಾಗಪ್ಪ ಕೋಳೂರ 4) ಹಣಮಂತರಾಯ ತಂದೆ ಬಸಪ್ಪ ಆರಬಳ್ಳಿ 5) ಬಾಲಪ್ಪ ತಂದೆ ಮಲ್ಲಪ್ಪ ಚಂದನಕೇರಿ 6) ಅಯ್ಯಪ್ಪ ತಂದೆ ಮಹಾದೇವಪ್ಪ ನಂದೇಳ್ಳಿ, 7) ಕೃಷ್ಣಪ್ಪ ತಂದೆ ಹಣಮಂತ ಹಾನೇರ ಹಾಗು 8) ಚೌಡಪ್ಪ ತಂದೆ ನಾಗಪ್ಪ ಕೊಳೂರ ಎಲ್ಲರೂ ಒಮ್ಮಲೆ ಗುಂಪು ಕಟ್ಟಿಕೊಂಡು ಬಂದವರೇ ಅವರಲ್ಲಿ ಸಂತೋಷನು ನಮಗೆ ಏನಲೇ ಬ್ಯಾಡ ಸೂಳೆ ಮಕ್ಕಳೇ, ನಮಗೆ ನೋಡಿ ಬೈಕ ರೇಸ್ ಮಾಡುತ್ತೀರೇನಲೇ, ಊರಲ್ಲಿ ನಿಮ್ಮ ಸೊಕ್ಕು ಬಹಳ ಆಗ್ಯಾದ, ಇವತ್ತು ನೋಡೆ ಬಿಡುತ್ತೇವೆ ಅಂತ ಹೇಳಿದಾಗ ಭೀಮಾಶಂಕರ ಈತನು ಊರಲ್ಲಿ ಬ್ಯಾಡರು 4 ಮನಿ ಇಲ್ಲಾಂದ್ರು ಧಿಮಾಕ ತೋರಿಸುತ್ತಾರೆ ಮಕ್ಕಳು, ಬಿಡಬ್ಯಾಡ್ರಿ ಕೆಡವಿ ಹಾಕಿ ಒದಿರಿ ಅಂತ ಹೇಳುತ್ತ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಎಡಕಿವಿಯ ಹತ್ತಿರ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಮಲ್ಲಪ್ಪ ಕೊಳೂರ ಇತನು ಅವಾಚ್ಯವಾಗಿ ಬೈಯುತ್ತ ತನ್ನ ಕೈಯಲ್ಲಿದ ಬಡಿಗೆಯಿಂದ ತಿರುಪತಿ ಇತನ ಎಡಗೈ ಮೇಲೆ ಹಾಗು ಬೆನ್ನಿಗೆ ಹೊಡೆದಿರುತ್ತಾನೆ. ಹಣಮಂತರಾಯ ಇತನು ಬಡಿಗೆಯಿಂದ ನನ್ನ ತಲೆಗೆ ಹಾಗು ಬೆನ್ನಿಗೆ ಹೊಡೆದಿರುತ್ತಾನೆ. ಬಳಿಕ ಬಾಲಪ್ಪ ಮತ್ತು ಅಯ್ಯಪ್ಪ ಇಬ್ಬರೂ ನನಗೆ ಕೈಯಿಂದ ಕಪಾಳಕ್ಕೆ, ಹೊಟ್ಟೆಗೆ ಹೊಡೆದು ನೆಲಕ್ಕೆ ಕೆಡವಿ ಬೆನ್ನಿಗೆ ಒದ್ದಿರುತ್ತಾರೆ. ಹಾಗು ಕೃಷ್ಣಪ್ಪ ಹಾನೇರ ಇತನು ತಿರುಪತಿ ಇತನಿಗೆ ಬಿಗಿಯಾಗಿ ಹಿಡಿದುಕೊಂಡು ತಿರುವಿ ನೆಲಕ್ಕೆ ಬಿಳಿಸಿದಾಗ ಚೌಡಪ್ಪ ಕೊಳೂರ ಇತನು ಕೈಯಿಂದ ತಿರುಪತಿ ಇತನ ಮೂಗಿನ ಮೇಲೆ, ತಲೆಗೆ ಹೊಡೆದಿರುತ್ತಾನೆ. ಆಗ ನಾವು ಚಿರಾಡುವದನ್ನು ನೋಡಿ ನಮ್ಮೂರಿನ ಆನಂದ, ವೆಂಕಟೇಶ ಹಾಗು ನಿಂಗಪ್ಪ ಎಲ್ಲರೂ ಬಂದು ಜಗಳ ಬಿಡಿಸಿದ್ದು, ಆಗ ಅವರೆಲ್ಲರೂ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 53/2019 ಕಲಂ. 143,147,148, 341, 323,324,504,506 ಸಂಗಡ 149 ಐಪಿಸಿ ಮತ್ತು 3(1)(ಆರ್), 3(1)(ಎಸ್) ಎಸ್.ಸಿ/ ಎಸ್.ಟಿ ಪಿ.ಎ ಆಕ್ಟ್ 1989 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 21/2019 ಕಲಂ: 504,341,506 ಐಪಿಸಿ :- ದಿನಾಂಕ: 22/02/2019 ರಂದು 6-30 ಪಿಎಮ್ ಕ್ಕೆ ಶ್ರೀ ಪ್ರಾರ್ಥನಾ ತಂದೆ ರಾಚಪ್ಪ ಗೊಂದಡಗಿ, ವ:25, ಜಾ:ಎಸ್.ಸಿ (ಹೊಲೆಯ), ಉ:ಖಾಸಗಿ ಕೆಲಸ ಸಾ:ಅಂಬೇಡ್ಕರ ಚೌಕ ಹಳೆಸಗರ ಶಹಾಪೂರ ಹಾ:ವ: ಬೆಂಗಳೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಲಿಂಗ ಪರಿವತರ್ಿತ ಮಹಿಳೆ ಇದ್ದು, ಖಾಸಗಿ ಕೆಲಸ ಮಾಡಿಕೊಂಡು ವಾಸ ಇರುತ್ತೇನೆ. ನಮ್ಮ ಸ್ವಂತ ಊರು ವಡಗೇರಾ ತಾಲ್ಲೂಕು ಕೊಂಕಲ್ ಗ್ರಾಮ ಇರುತ್ತದೆ. ಕೊಂಕಲ್ ಗ್ರಾಮದಲ್ಲಿ ನಮ್ಮ ಸ್ವಂತ ಪಿತ್ರಾಜರ್ಿತ ಆಸ್ತಿ ಇರುತ್ತದೆ. ಅದರಲ್ಲಿ ನಮ್ಮ ಸ್ವಂತ ಮನೆ ಕಟ್ಟಿಸಬೇಕೆಂದು ನಾನು ಊರಿಗೆ ಬಂದು ನಮ್ಮ ಜಾಗವನ್ನು ಸ್ವಚ್ಚ ಮಾಡಿಸಬೇಕೆಂದು ನಿನ್ನೆ ದಿನಾಂಕ: 21/02/2019 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಹೋದಾಗ ಅಲ್ಲಿ ನಮ್ಮ ತಂದೆಯಾದ ರಾಚಪ್ಪ ತಂದೆ ಚಂದಪ್ಪ ಗೊಂದಡಗಿ ಸಾ:ಕೊಂಕಲ್ ಈತನು ಬಂದು ನನಗೆ ತಡೆದು ನಿಲ್ಲಿಸಿ, ನೀನು ನಮ್ಮೂರಿಗೆ ಯಾಕೆ ಬಂದಿ ನನ್ನ ಮಯರ್ಾದೆ ಕಳಿದಿ ಮತ್ತೆಕೆ ಇಲ್ಲಿ ಬಂದಿ ಛೆಕ್ಕಾ ಸೂಳಿ ನೀನು ಮೆಜೆಸ್ಟಿಕಲ್ಲಿ ದಂಧಾ ಮಾಡುವ ಭೊಸಡಿ ಎಂದು ಜಗಳ ತೆಗೆದು, ಅಲ್ಲೆನು ದಂಧಾ ಮಾಡುತ್ತಿ, ನನ್ನ ಬಳಿ ಮಲಗು ಬಾ ಎಂದು ಲೈಂಗಿಕ ಕ್ರಿಯೆಗೆ ಕರೆದು ಕಿರುಕುಳ ಕೊಟ್ಟಿರುತ್ತಾನೆ. ಅದೇ ವೇಳೆಗೆ ಅಲ್ಲಿಯೇ ಇದ್ದ ನಮ್ಮ ಚಿಕ್ಕಪ್ಪಂದಿರಾದ ಸೂಗಪ್ಪ ತಂದೆ ಚಂದಪ್ಪ ಗೊಂದಡಗಿ ಮತ್ತು ಶರಣಪ್ಪ ತಂದೆ ಚಂದಪ್ಪ ಗೊಂದಡಿಗಿ ಇವರು ನೋಡಿ ಬಿಡಿಸಿರುತ್ತಾರೆ. ನಮ್ಮ ತಂದೆಯು ನನಗೆ ಇಷ್ಟಕ್ಕೆ ಸುಮ್ಮನಾದರೆ ಸರಿ ಭೊಸಡಿ ಇಲ್ಲಂದರೆ ನಿನಗೆ ಜೀವಂತ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಕಾರಣ ನಮ್ಮ ತಂದೆ ರಾಚಪ್ಪನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಜರ್ಿ ಇರುತ್ತದೆ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 21/2019 ಕಲಂ: 504,341,506 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.                               
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 20/2019 ಕಲಂ: 457, 380  ಐಪಿಸಿ:- ದಿನಾಂಕ: 22/02/2019 ರಂದು103.30 ಎ.ಎಂ ಕ್ಕೆ ಪಿಯರ್ಾದಿ ಶ್ರೀ. ಶ್ರೀಶೈಲ ತಂದೆ ಶಂಕ್ರೆಪ್ಪ ಪಾಟೀಲ ವಯಾ:45 ವರ್ಷ ಉ: ವ್ಯಾಪಾರಜಾ: ಸಿಂಪಿ ಸಾ: ಗೋಗಿ ಪೇಠತಾ: ಶಹಾಪೂರಇವರುಠಾಣಗೆ ಹಾಜರಾಗಿಒಂದು ಲಿಖಿತಅಜರ್ಿ ಹಾಜರ ಪಡೆಸಿದ್ದು ಸದರಿಅಜರ್ಿ ಸಾರಂಶಏನದಂರೆ, ನಾನು ಮತ್ತು ನಮ್ಮತಮ್ಮ ಸಂತೋಷಇಬ್ಬರು ನಮ್ಮೂರಲ್ಲಿನ ಬಜಾರ ಲೈನಿನಲ್ಲಿಇರುವ ನಮ್ಮ ಸ್ವಂತಕಟ್ಟಡದಲ್ಲಿ ಬಾಂಡೆದಅಂಗಡಿಇಟ್ಟುಕೊಂಡು ವ್ಯಾಪರ ಮಾಡಿಕೊಂಡುಉಪಜೀವಿಸುತ್ತೇನೆ. ಹೀಗಿದ್ದು ದಿನಾಂಕ:28/01/2019 ರಂದು ನಮ್ಮತಮ್ಮ ಸಂತೋಷಈತನು ಖಾಸಗಿ ಕೆಲಸದ ಮೇರೆಗೆಊರಿಗೆ ಹೋಗಿದ್ದನು. ನಾನು ಒಬ್ಬನೆ ನಮ್ಮಅಂಗಡಿಯಲ್ಲಿಇದ್ದೆನು. ದಿನಾಂಕ:30/01/2019 ರಂದು ನಾನು ನಮ್ಮ ಬಾಂಡೆದಅಂಗಡಿಯಲ್ಲಿ ವ್ಯಾಪರ ಮಾಡಿದ ಹಣ 12,000=00 ರೂಪಾಯಿ ನಮ್ಮ ಮನೆಗೆ ಯಾಕೆತಗೆದುಕೊಂಡು ಹೋಗುವದುಅಂತಅಂಗಡಿಯಲ್ಲಿನಗಲ್ಲಾದಲ್ಲಿಯೇಇಟ್ಟುರಾತ್ರಿ, 10.30 ಪಿಎಂ ಕ್ಕೆ ಮನೆಗೆ ಹೋಗಿದ್ದೆನು. ನಂತರ ಮರುದಿವಸ ಅಂದರೆ ದಿನಾಂಕ:31/01/2019 ರಂದು ನಾನು ಎಂದಿನಂತೆ 06.30 ಎಎಂ ಕ್ಕೆ ನಮ್ಮಅಂಗಡಿಗೆ ಬಂದು ನೋಡಲಾಗಿ ನಮ್ಮಗಲ್ಲಾ ಪೆಟ್ಟಿಗೆತರೆದಿತ್ತು ಮತ್ತುಅದರಲ್ಲಿ ನಾನು ನಿನ್ನೆ ವ್ಯಾಪಾರ ಮಾಡಿದ ಹಣ 12,000=00 ರೂಪಾಯಿಇರಲಿಲ್ಲ. ನಾನು ಗಾಬರಿಯಾಗಿ ನೋಡಲಾಗಿ ನಮ್ಮಅಂಗಡಿಯ ಮಾಳಗಿಯ ಬೆಳಕಿಂಡಿ ತರೆದಿತ್ತು, ಆಗ ನಾನು ನಮ್ಮಊರಿನ ನನಗೆ ಪರಿಚಯದ ಶ್ರೀ ಶಂಕರತಂದೆ ಪಕೀರಪ್ಪ ಪಟ್ಲೇಗರ ಮತ್ತು ಶ್ರೀ ಬಸವರಾಜತಂದೆಕಲ್ಲಪ್ಪ ಸಗರಇವರಿಗೆ ಕರೆಯಿಸಿದೆ ಅವರೂಕೂಡ ಬಂದು ನೊಡಿದರು. ಸದರಿ ನಮ್ಮಅಂಗಡಿಗೆಯಾರೋಅಪರಿಚಿತ ಕಳ್ಳರು ದಿನಾಂಕ:30/01/2019 ರರಾತ್ರಿ 10.30 ಪಿಎಂ ದಿಮದ 31/01/2019 ರ ಬೆಳಗಿನ 06.30 ಎಎಂ ಮದ್ಯದಅವಧಿಯಲ್ಲಿ ಮಾಳಗಿಯ ಮೇಲಿನ ಬೆಳಕಿಂಡಿ ಪರಸಿ ತೆಗೆದು ಒಳಗೆ ಬಂದು ನಮ್ಮಅಂಗಡಿಯಲ್ಲಿಗಲ್ಲಾದಲ್ಲಿಇಟ್ಟಿದ್ದ ನಗದು ಹಣ 12000=00 ರೂ ನೇದ್ದವುಗಳನ್ನು ಕಳ್ಳತನ ಮಾಡಿದ್ದರು. ನಂತರ ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿ 12,000=00 ರೂಪಾಯಿ ಹಣದ ಸಲುವಾಗಿ ಕೋರ್ಟಕಛೆರಿಯಾಕೆಅಂತಾ ಕೇಸು ಮಾಡಲು ಬಂದಿರಲಿಲ್ಲ. ನಮ್ಮತಮ್ಮ ಸಂತೋಷಊರಿನಿಂದ ಬಂದ ನಂತರ, ಇಲ್ಲಕೇಸ್ ಮಾಡೋಣಇವತ್ತು ಸ್ವಲ್ಪ ಹಣ ಹೋಗಿದೆ ಹೀಗೆ ಬಿಟ್ಟರೆ ಮತ್ತೆದೊಡ್ಡ ಕಳ್ಳತನ ಮಾಡಬಹುದುಅಂತಾ ಹೇಳಿದ್ದರಿಂದ ತಡವಾಗಿಇಂದು ದಿನಾಂಕ:22/01/2019 ರಂದುಠಾಣೆಗೆ ಬಂದು ಈ ಅಜರ್ಿ ನಿಡಿದ್ದುಇರುತ್ತದೆ. ಕಾರಣ ನಮ್ಮಅಂಗಡಿಯಲ್ಲಿರಾತ್ರಿ ವೇಳೆಯಲ್ಲಿ ಮಾಳಗಿಯ ಮೇಲಿನ ಬೆಳಕಿಂಡಿ ಮೂಲಕ ಪ್ರವೇಶ ಮಾಡಿ ಕಳ್ಳತನ ಮಾಡಿದಅಪರಿಚಿತ ಕಳ್ಳರ ಪತ್ತೆ ಮಾಡಿ ನಮ್ಮ ಹಣ ನಮಗೆ ಕೊಡಿಸಬೇಕುಅಂತಾ ಅಜರ್ಿಸಾರಂಶದ ಮೇಲಿಂದಠಾಣೆಗುನ್ನೆ ನಂ: 20/2019 ಕಲಂ: 547, 380 ಐಪಿಸಿ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!