ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 21-02-2019
ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 03/2019 ಕಲಂ 279.338.ಐ.ಪಿ.ಸಿ. ಮತ್ತು ಕಲಂ.304(ಎ) ಐ ಪಿ ಸಿ:-ದಿನಾಂಕ 19-01-2019 ರಂದು 8-15 ಪಿ ಎಂಕ್ಕೆ ನಮ್ಮ ಠಾಣೆಯ ಶ್ರೀ ಬಸಪ್ಪ ಹೆಚ್.ಸಿ-142 ರವರು ರಾಯಚೂರ ರೀಮ್ಸ ಆಸ್ಪತ್ರೆಯಿಂದ ಒಂದು ಅರ್.ಟಿ.ಎ. ಎಮ್ ಎಲ್ ಸಿ ಪಿಯರ್ಾದಿ ಹೇಳಿಕೆಯನ್ನು ತಂದು ಹಾಜರ ಮಾಡಿದ್ದು. ಆಸ್ಪತ್ರೆಯಲ್ಲಿ ಪಡೆದ ಶ್ರೀ ಕಾಶಿನಾಥ ತಂದೆ ಮಾರೆಪ್ಪ ಈಳಿಗೇರ ವಯಾ|| 40 ವರ್ಷ ಜಾ|| ಕಲಾಲ್ ಉ|| ಕೂಲಿ ಸಾ|| ಕಡೆಚೂರ ಇವರ ಹೇಳಿಕೆ ಪಿಯರ್ಾದಿ ಸಾರಾಂಶವೇನಂದರೆ. ನನ್ನ ತಮ್ಮ ಸುಖದೇವ ಒಂದು ಅಟೋ ಟಂಟಂ. ನಂ ಕೆಎ-33-4829 ನೇದ್ದನ್ನು ಬಾಡಿಗೆಹೊಡೆದುಕೊಂಡು ಜೀವನ ಸಾಗಿಸುತ್ತಿದ್ದು. ನಿನ್ನೆ ನನ್ನ ತಮ್ಮ ಸುಖದೇವ್ ತನ್ನ ಅಟೋ ಟಂ.ಟಂ.ದಲ್ಲಿ ಹತ್ತಿಯನ್ನು ತುಂಬಿಕೊಂಡು ನಮ್ಮೂರಿನಿಂದ ಒಯ್ದು ಸೈದಾಪೂರದಲ್ಲಿ ಮಾರಿ ಬರುವಾಗ ದಿನಾಂಕ 18-01-2019 ರಂದು ಸಾಯಂಕಾಲ 6-30 ಪಿ ಎಂ ಸುಮಾರಿಗೆ ನನ್ನ ತಮ್ಮ ಅಟೋವನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಓಡಿಸಿದ್ದರಿಂದ ರಾಚನಳ್ಳಿ ಹಾಗೂ ಶೆಟ್ಟಿಹಳ್ಳಿ ಮದ್ಯ ಅಟೋ ಪಲ್ಟಿಯಾಗಿ ಬಿದ್ದಿರುತ್ತಾನೆ. ಅಂತಾ ನನಗೆ ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಯಾರೋ ಪೋನ ಮಾಡಿ ತಿಳಿಸಿದ್ದರಿಂದ ತಕ್ಷಣ ನಾನು ನನ್ನ ಆಳಿಯ ಯಂಕಪ್ಪ ಇಬ್ಬರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ನನ್ನ ತಮ್ಮ ಸುಖದೇವ್ ಅಟೋ ಪಲ್ಟಿಯಾಗಿ ಬಿದ್ದಿದ್ದು ಆತನ ಎರಡು ತೊಡೆಗಳಿಗೆ ಬಾರೀ ರಕ್ತಗಾಯಗಳು ಆಗಿದ್ದು ಮತ್ತು ಬಲಗೈ ಮೊಣಕೈಗೆ ಗುಪ್ತಗಾಯವಾಗಿದ್ದು. ಆಗ ನಾವು ನನ್ನ ತಮ್ಮನಿಗೆ ಉಪಚಾರಕ್ಕಾಗಿ ಅಂಬುಲೇನ್ಸ ಮುಖಾಂತರ ರಾಯಚೂರಗೆ ಬಂದಿದ್ದು ಇರುತ್ತದೆ. ದಿನಾಂಕ 18-01-2019 ರಂದು 6-30 ಪಿ ಎಂ ಕ್ಕೆ ಸೈದಾಪೂರದಿಂದ ಕಡೆಚೂರಕ್ಕೆ ಬರುವಾಗ ನನ್ನ ತಮ್ಮ ಸುಖದೇವ್ ತನ್ನ ಆಟೋ ನಂ ಕೆಎ-33-4829 ನೇದ್ದನ್ನು ಅತೀ ವೇಗದಿಂದ ಹಾಗೂ ನಿರ್ಲಕ್ಷತನದಿಂದ ಓಡಿಸಿದ್ದರಿಂದ ಸದರಿ ಅಟೋ ರಾಚನಳ್ಳಿ ಶೆಟ್ಟಿಹಳ್ಳಿ ನಡುವೆ ರಾಷ್ಟ್ರಿಯ ಹೆದ್ದಾರಿಯಲ್ಲಿ ಪಲ್ಟಿಯಾಗಿದ್ದು ಇದರಿಂದ ಸಾದ ಮತ್ತು ಬಾರೀ ಗಾಯಗಳು ಆಗಿದ್ದು. ಅಟೋ ಮತ್ತು ಚಾಲಕನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಹೇಳಿ ಬರೆಯಿಸಿದ ಹೇಳಿಕೆ ಪಿಯರ್ಾದಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 03/2019 ಕಲಂ 279.338 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇದೆ. ಇಂದು ದಿನಾಂಕ 20-02-2019 ರಂದು ಬೆಳೆಗ್ಗೆ 7-15 ಎ ಎಂ ಕ್ಕೆ ಪಿಯರ್ಾದಿ ಶ್ರೀ ಕಾಶೀನಾಥ ತಂದೆ ಮಾರೆಪ್ಪ ಸಾ|| ಕಡೆಚೂರ ಇವರು ಠಾಣೆಗೆ ಬಂದು ತ್ಮ ಪುರವಣಿ ಹೇಳಿಕೆ ನೀಡಿದ್ದೇನಂದರೆ. ಇಂದು ದಿನಾಂಕ 20-02-2019 ರಂದು ಬೆಳೆಗ್ಗೆ 5-45 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಸುಖದೇವ್ ತಂದೆ ಮಾರೆಪ್ಪ ವಯಾ|| 36 ವರ್ಷ ಜಾ|| ಕಲಾಲ ಉ|| ಅಟೋ ಚಾಲಕ ಸಾ|| ಕಡೆಚೂರ ಇವರು ಉಪಚಾರ ಫಲಿಸದೆ ರೀಮ್ಸ ರಾಯಚೂರದಲ್ಲಿ ಮೃತನಾಗಿರುತ್ತಾನೆ ಮುಂದಿನ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಮರು ಹೇಳಿಕೆಯನ್ನು ನೀಡಿದ್ದು. ಸದರಿ ಪಿಯರ್ಾದಿ ಆದಾರದ ಮೇಲಿಂದ ಕಲಂ 304(ಎ) ಐ ಪಿ ಸಿ ಯನ್ನು ಅಳವಡಿಸಿ ಮುಂದಿನ ತನಿಖೆಯನ್ನು ಕೈಕೊಂಡಿದ್ದು ಅದೆ.
ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 20/2019 ಕಲಂ: 143, 147, 148, 504, 323, 324, 506 ಸಂ 149 ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989:- ದಿನಾಂಕ: 20/02/2019 ರಂದು 7-30 ಪಿಎಮ್ ಕ್ಕೆ ಶ್ರೀ ಮಾಳಪ್ಪ ತಂದೆ ಶಿವಬಸಪ್ಪ ಹೊನಗುಡಿ, ವ:22, ಜಾ:ಮಾದಿಗ (ಎಸ್.ಸಿ), ಉ:ಒಕ್ಕಲುತನ ಸಾ:ಹೊರಟೂರ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 20/02/2019 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ನಾನು ನಮ್ಮೂರ ನಂದನಗೌಡನ ಹಿಟ್ಟಿನ ಗಿರಣಿ ಹತ್ತಿರ ಇದ್ದಾಗ ನಮ್ಮೂರ ಬೀರಪ್ಪ ತಂದೆ ಜಂಭಣ್ಣ ಪೂಜಾರಿ ಜಾ:ಕುರುಬರ ಮತ್ತು ಇತರರು ಬಂದು ನನಗೆ ನೋಡಿ ಈ ಮಾದಿಗ ಸೂಳೆ ಮಕ್ಕಳಿಗೆ ಹಿಡಿದು ಹಡಬೇಕು ಎಂದು ಅವಾಚ್ಯ ಬೈಯುತ್ತಿದ್ದಾಗ ನಾನು ಯಾರು ಮಾಡಿದ್ದಾರೆ ಅವರಿಗೆ ಬೈಯಿರಿ ಇಡಿ ಮಾದಿಗ ಜಾತಿಗೆ ಯಾಕೆ ಬೈಯುತ್ತಿರಿ ಎಂದು ಅಂದಾಗ ಅವರು ನನ್ನ ಮೈಮೇಲೆ ಏರಿ ಬಂದಾಗ ನಾನು ಅಷ್ಟಕ್ಕೆ ಅಂಜಿ ಸುಮ್ಮನಾಗಿ ಮನೆಗೆ ಬಂದೆನು. ನಂತರ ನಾನು ಮತ್ತು ನಮ್ಮ ತಾಯಿ ಹಾಗೂ ನಮ್ಮ ಅಣ್ಣ ತಮ್ಮಂದಿರು ಎಲ್ಲರೂ ಸೇರಿ ನಮ್ಮೂರಿನಿಂದ ಹಾಲಗೇರಾ ಯಲ್ಲಮ್ಮಾಯಿ ಜಾತ್ರೆಗೆ ಬಂದೆವು. ನಮ್ಮ ತಾಯಿ ಮತ್ತು ಅಣ್ಣತಮ್ಮಂದಿರು ಜಾತ್ರೆ ಮಾಡುತ್ತಿದ್ದರು. ಮದ್ಯಾಹ್ನ 3-30 ಗಂಟೆ ಸುಮಾರಿಗೆ ನಾನು ಯಲ್ಲಮ್ಮಾಯಿ ಗುಡಿ ಮುಂದೆ ನಿಂತುಕೊಂಡಾಗ ನಮ್ಮೂರಿನ ಕುರುಬ ಜನಾಂಗದವರಾದ 1) ನಾಗಪ್ಪ ತಂದೆ ಹಣಮಂತ ಲಿಂಗೇರಿ, 2) ಮಾಳಪ್ಪ ತಂದೆ ಬಸಪ್ಪಗೌಡ ಲಿಂಗೇರಿ, 3) ಶಿವಪ್ಪ @ ಶಿವ್ಯಾ ತಂದೆ ಭೀಮಣ್ಣ ನಾಲ್ವಡಗಿ, 4) ಪ್ರಭು ತಂದೆ ಸಿದ್ದಪ್ಪ ನಾಲ್ವಡಗಿ, 5) ಬೀರಪ್ಪ ತಂದೆ ಜಂಭಣ್ಣ ಪೂಜಾರಿ, 6) ಮಾಳಪ್ಪ ತಂದೆ ಮರಿಲಿಂಗಪ್ಪ ಪೂಜಾರಿ, 7) ನಿಂಗಪ್ಪ ತಂದೆ ಮರಿಲಿಂಗಪ್ಪ ಪೂಜಾರಿ, 8) ತಿಮ್ಮಯ್ಯ ತಂದೆ ಮಡರಪ್ಪ ಪೂಜಾರಿ, 9) ಸಾಬಣ್ಣ ತಂದೆ ಮರಿಲಿಂಗಪ್ಪ ಕವಲೇರ, 10) ಹಣಮಂತ ತಂದೆ ನಾಗಪ್ಪ ಲಿಂಗೇರಿ, 11) ಚಂದ್ರಾಮಪ್ಪ ತಂದೆ ನಿಂಗಪ್ಪ ಪೂಜಾರಿ, 12) ಬಸಪ್ಪ ತಂದೆ ರಾಡ ಶರಣಪ್ಪ ಲಿಂಗೇರಿ ಮತ್ತು ಇತರರು ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಬಿದರ ಬಡಿಗೆಗಳನ್ನು ಹಿಡಿದುಕೊಂಡು ಬಂದವರೆ ನನಗೆ ನೋಡಿ ಈ ಮಾದಿಗ ಸೂಳೆ ಮಗ ಮದ್ಯಾಹ್ನ ಊರಾಗ ನಮಗೆ ಎದುರು ಮಾತಾಡ್ಯಾನ ಇವನ ಸೊಕ್ಕು ಬಹಳ ಆಗ್ಯಾದ ಎಂದು ಜಗಳ ತೆಗೆದವರೆ ನನಗೆ ಶಿವಪ್ಪ @ ಶಿವ್ಯಾ ಈತನು ಬಂದು ಹಿಡಿದುಕೊಂಡಾಗ ನಾಗಪ್ಪನು ತನ್ನ ಕೈಯಲ್ಲಿದ್ದ ಬಿದರ ಬಡಿಗೆಯಿಂದ ಎಡ ಭುಜಕ್ಕೆ ಮತ್ತು ಬಲಗೈ ಮುಂಗೈ ಮೇಲೆ ಹೊಡೆದು ರಕ್ತ ಮತ್ತು ಗುಪ್ತಗಾಯ ಮಾಡಿದನು. ಅಲ್ಲೆ ಜಾತ್ರೆ ಮಾಡುತ್ತಿದ್ದ ನಮ್ಮ ಅಣ್ಣಂದಿರಾದ 1) ಮರೆಪ್ಪ ತಂದೆ ಶಿವಬಸಪ್ಪ ಹೊನಗುಡಿ, 2) ಯಲ್ಲಪ್ಪ ತಂದೆ ಶಿವಬಸಪ್ಪ ಹೊನಗುಡಿ, 3) ದೇವಪ್ಪ ತಂದೆ ಶಿವಬಸಪ್ಪ ಹೊನಗುಡಿ, 4) ತಿಪ್ಪಣ್ಣ ತಂದೆ ಶಿವಬಸಪ್ಪ ಹೊನಗುಡಿ ಮತ್ತು 5) ಸಾಬಣ್ಣ ತಂದೆ ಶಿವಬಸಪ್ಪ ಹೊನಗುಡಿ ಇವರುಗಳ ನೋಡಿ ಜಗಳ ಬಿಡಿಸಲು ಬಂದಾಗ ಮಾದಿಗ ಸೂಳೆ ಮಕ್ಕಳು ಎಲ್ಲರೂ ಸೇರಿ ಬಂದಾರ ಹೊಡೆಯಿರಿಲೇ ಇವರಿಗೆ ಎಂದು ಜಗಳ ತೆಗೆದು ನಮ್ಮಣ್ಣ ಮರೆಪ್ಪನಿಗೆ ನಾಗಪ್ಪ ತಂದೆ ಹಣಮಂತ ಲಿಂಗೇರಿ ಈತನು ತನ್ನ ಕೈಯಲ್ಲಿದ್ದ ಬೀದರ ಬಡಿಗೆಯಿಂದ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ನಮ್ಮಣ್ಣ ಯಲ್ಲಪ್ಪನಿಗೆ ಮಾಳಪ್ಪ ತಂದೆ ಬಸಪ್ಪಗೌಡ ಈತನು ತನ್ನ ಕೈಯಲ್ಲಿದ್ದ ಬೀದರ ಬಡಿಗೆಯಿಂದ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ನಮ್ಮಣ್ಣ ದೇವಪ್ಪನಿಗೆ ಪ್ರಭು ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ನಮ್ಮಣ್ಣ ತಿಪ್ಪಣ್ಣನಿಗೆ ಬೀರಪ್ಪನು ತನ್ನ ಕೈಯಲ್ಲಿದ್ದ ಬೀದರ ಬಡಿಗೆಯಿಂದ ತೆಲೆಗೆ ಹೊಡೆಯಲು ಬಂದಾಗ ನಮ್ಮಣ್ಣನು ತನ್ನ ಬಲಗೈ ಅಡ್ಡ ಒಯ್ದಾಗ ಆ ಏಟು ಬಲಗೈ ಕಿರು ಬೆರಳಿಗೆ ಒಳಪೆಟ್ಟಾಗಿರುತ್ತದೆ. ಇನ್ನುಳಿದವರು ನಮಗೆ ದಬ್ಬಾಡಿ, ನೂಕಾಡಿ ಕೈಯಿಂದ ಹೊಡೆ ಬಡೆ ಮಾಡಿದರು. ದಬ್ಬಾಡುವಾಗ ನಮ್ಮಣ್ಣ ದೇವಪ್ಪನು ಕೆಳಗೆ ಬಿದ್ದಾಗ ಅವನಿಗೆ ಕಾಲಿನಿಂದ ತುಳಿದಾಡಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಇದ್ದ ಸಂಗಪ್ಪ ತಂದೆ ಯಲ್ಲಪ್ಪ ಕರಡಿ ಹಾಲಗೇರಾ ಮತ್ತು ಚಂದಪ್ಪ ತಂದೆ ಹಣಮಂತ ದೊರೆ ಹಾಲಗೇರಾ ಹಾಗೂ ಇತರರು ನೋಡಿ ಬಿಡಿಸಲು ಬಂದಾಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಮಾದಿಗ ಸೂಳೆ ಮಕ್ಕಳೆ ಇನ್ನೊಂದು ಸಲ ನಮ್ಮ ಕುರುಬರ ಹೆಸರಿಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಆದ್ದರಿಂದ ವಿನಾಕಾರಣ ನಮಗೆ ಜಗಳ ತೆಗೆದು ಜಾತಿ ಎತ್ತು ಬೈದು ಅಕ್ರಮಕೂಟ ಕಟ್ಟಿಕೊಂಡು ಬಂದು ಬಡಿಗೆಗಳಿಂದ ಹೊಡೆಬಡೆ ಮಾಡಿ ರಕ್ತ ಮತ್ತು ಗುಪ್ತ ಗಾಯ ಪಡಿಸಿ ಜೀವ ಬೆದರಿಕೆ ಹಾಕಿರುತ್ತಾರೆ. ನಮ್ಮಣ್ಣಂದಿರು ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿರುತ್ತಾರೆ. ಕಾರಣ ನಮಗೆ ಜಾತಿ ನಿಂದನೆ ಮಾಡಿ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 20/2019 ಕಲಂ: 143, 147, 148, 504, 323, 324, 506 ಸಂ 149 ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989 ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 52/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:20-02-2019 ರಂದು 05 ಪಿ.ಎಂ. ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ದುಶ್ಯಂತ ಕಮ್ಮಾರ ಗ್ರಾಮ ಲೇಕಪಾಲಕರು ಅಡ್ಡೋಡಗಿ ಇವರು ಒಂದು ಮರಳು ತುಂಬಿದ ಟ್ರ್ಯಾಕ್ಟರದೊಂದಿಗೆ ಠಾಣೆಗೆ ಬಂದು ಅಜರ್ಿ ನೀಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:20-02-2019 ರಂದು ಸಮಯ 4-30 ಂಟ ಶ್ರೀ ಸುರೇಶ ಆರ್. ಅಂಕಲಗಿ ತಹಸೀಲ್ದಾರರು ಸುರಪುರ ಇವರ ಸಂಗಡ ನಾನು ಮತ್ತು ಕಂದಾಯ ನಿರೀಕ್ಷಕರಾದ ಗುರುಬಸಪ್ಪ ಕಾಶಿರಾಯ ಪಾಟೀಲ್ ಎಲ್ಲರು ಅಡ್ಡೋಡಗಿ ಗ್ರಾಮದ ಹತ್ತಿರದ ಎರುವ ನೀರಿನ ಟ್ಯಾಂಕರ ಮುಂದೆ ಅಕ್ರಮ ಮರಳು ತಡೆಯುವ ವಿಶೇಷ ಕರ್ತವ್ಯ ಮಾಡುತ್ತಿದ್ದು ನಮ್ಮ ತಹಸೀಲ ಕಾಯರ್ಾಲಯದ ಜೀಪ್ ನಂಬರ. ಏಂ33 ಉ0233 ನೇದ್ದರ ಡ್ರೈವರನಾದ ಹಣಮಂತನು ನಮ್ಮ ಸಂಗಡವೇ ಹಾಜರು ಇದ್ದನು. ನಮ್ಮ ಸಕರ್ಾರಿ ಜೀಪ ಪಕ್ಕದಲ್ಲಿಯೇ ನಿಲ್ಲಿಸಿದೆವು ಸಮಯ ಬೆಳಿಗನ ಜಾವ 5 ಂಟ ಗಂಟೆಗೆ ಹೆಮ್ಮಡಗಿ ಕೃಷ್ಣಾ ನದಿ ಪಾತ್ರದಿಂದ ಸಕರ್ಾರಕ್ಕೆ ರಾಜ ಧನ ಕಟ್ಟದೆ ಒಬ್ಬ ಚಾಲಕನು ಮರಳನ್ನು ತುಂಬಿಕೊಂಡು ಬರುವುದನ್ನು ನೋಡಿ ನಾವೆಲ್ಲರೂ ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಮಾಡಿದೆವು ಟ್ರ್ಯಾಕ್ಟರ ಡ್ರೈವರನು ಟ್ರ್ಯಾಕ್ಟನ್ನು ಸ್ಥಳದಲ್ಲಿಯೇ ಬಿಟ್ಟು ಹೋದನು ಆಗ ಸದರಿ ಟ್ರ್ಯಾಕ್ಟರನ್ನು ಗುರುಬಸಪ್ಪ ಕಾಶಿರಾಯ ಪಾಟೀಲ್ ಕಂದಾಯ ನಿರೀಕ್ಷಕರು ಸುರಪುರ ಇವರ ಸಹಾಯದಿಂದ ಟ್ರ್ಯಾಕ್ಟರನ್ನು ನಡೆಸಿಕೊಂಡು ಪೊಳಿಸ್ ಠಾಣೆಗೆ ತಂದೆವು ಸದರಿ ಟ್ರ್ಯಾಕ್ಟರ ಡ್ರೈವರನ ವಿಳಾಸ ಗೊತ್ತಿಲ್ಲ ಮುಂದೆ ನೋಡಿದಲ್ಲಿ ಗುರುತಿಸುತ್ತೆನೆ ಟ್ರ್ಯಾಕ್ಟರ ಇಂಜಿನ ನಂಬರ.39.1357/ಖಚಊ08317, ಚೆಸ್ಸಿ ನಂಬರ. ಘಚಖಿಏ28432139632 ಟ್ರಾಲಿ ಚಸ್ಸಿ ನಂಬರ.25/2009 ರ ಮೇಲೆ 2 ಘನ ಮೀಟರ್ ಮರಳು ಅ.ಕಿ.1600/- ಬೆಲೆ ಬಾಳುವುದು ಇರುತ್ತದೆ ಆದ್ದರಿಂದ ಗುನ್ನೇ ಸಂಬಂಧ ಪಟ್ಟ ಟ್ರ್ಯಾಕ್ಟರ ಮೇಲೆ ಕಾನೂನು ಕ್ರಮ ಜರಗಿಸುವಂತೆ ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾನೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 18/2019 ಕಲಂ: 323, 307,326, 504, 506 ಐಪಿಸಿ :- ದಿನಾಂಕ: 20/02/2019 ರಂದು12.45 ಎ.ಎಂ ಕ್ಕೆ ಕಲಬುರಗಿಯಯುನೈಟೆಡ್ಆಸ್ಪತ್ರೆ ಕಲಬುರಗಿಯಿಂದ ಹರ್ಟ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಶರಣಪ್ಪ ಮಾವನೂರಎಎಸ್ಐ ಗೋಗಿ ಠಾಣೆ, 09.30 ಎಎಂ ಕ್ಕೆ ಸದರಿಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಪಿಯರ್ಾದಿ ಶ್ರೀ. ಖುಬಚಂದತಂದೆಗಣುನಾಯಕರಾಠೋಡ ವಯಾ: 42 ವರ್ಷ ಉ: ಒಕ್ಕಲುತನಜಾ: ಲಂಬಾಣಿ ಸಾ: ಚಾಮನಾಳ ಮಡ್ಡಿತಾಂಡಾತಾ: ಶಹಾಪೂರ ಹೇಳಿಕೆ ಪಡೆದಿಕೊಂಡಿದ್ದು ಸದರಿ ಹೇಳಿಕೆ ಸಾರಂಶವೆನಂದರೆ, ನನ್ನತಂಗಿಯಾದ ಕಮಲಾಬಾಯಿ ಇವರಿಗೆ ನಡಿಹಾಳ ನೀಲಾನಾಯಕತಾಂಡಾದ ತುಳಜಾರಾಮ ತಂದೆಕೇಸುನಾಯಕಚವ್ಹಾಣಇವರಿಗೆಕೊಟ್ಟು ಮದುವೆ ಮಾಡಿದ್ದುಇರುತ್ತದೆ. ನಮ್ಮ ಮಾವಂದಿರು 5 ಜನಅಣ್ಣತಮ್ಮಂದಿರುಇದ್ದುಅವರಲ್ಲಿಕುಮಾರತಂದೆಕೇಸುನಾಯಕಈತನು ನಮ್ಮ ಅಳಿಯ ತುಳಜಾರಾಮ ಈತನಿಗಿಂತಲು ಸಣ್ಣವನಿದ್ದು ಆಗಾಗ ನಮ್ಮ ಅಳಿಯನ ಜೋತೆಯಲ್ಲಿ ವಿನಾಃ ಕಾರಣಯಾವುದಾದರು ನೆಪ ಮಾಡಿಕೊಂಡು ಜಗಳ ಮಾಡುತ್ತ ವೈಶಮ್ಯ ಬೆಳೆಸಿಕೊಂಡಿದ್ದ. ಹೀಗಿದ್ದು ದಿನಾಂಕ: 19/02/2019 ರಂದು ನಮ್ಮತಂಗಿ ಕಮಲಾಬಾಯಿ ಇವಳು ತಮ್ಮ ಹೊಲದಲ್ಲಿಯ ಜೋಳದ ರಾಶಿ ಮಾಡಬೇಕು ಬಾ ಅಂತಾ ಹೇಳಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಶಾರದಾಬಾಯಿಇಬ್ಬರು ನಮ್ಮತಂಗಿಯ ನಡಿಹಾಳ ಸೀಮಾಂತರದ ಹೊಲಕ್ಕೆ ಹೋಗಿದ್ದೇವು. ಸದರಿ ನಮ್ಮತಂಗಿಯ ಹೊಲದಲ್ಲಿ ಸಾಯಂಕಾಲದ ವರೆಗೆ ರಾಶಿ ಮಾಡಿಕೊಂಡುಎತ್ತಿನ ಬಂಡಿಯಲ್ಲಿ ಹಾಕಿಕೊಂಡು ಮರಳಿ ನಮ್ಮತಂಗಿಯ ಮನೆಗೆ ಬರುತ್ತಿದ್ದೆವು. ನಡಿಹಾಳ ಗ್ರಾಮದಯಲ್ಲಪ್ಪ ಹರಿಜನಈತನುಎತ್ತಿನ ಬಂಡಿ ಹೊಡೆಯುತ್ತಿದ್ದ, ನಾನು ಎತ್ತಿನ ಬಂಡಿ ಮುಂದೆಇದ್ದೆನು. ನಮ್ಮತಮ್ಮನಾದಆನಂದ, ನನ್ನ ಹೆಂಡತಿ ಶಾರದಾಬಾಯಿ, ನಮ್ಮ ಅಳಿಯ ತುಳಜಾರಾಮ ಮತ್ತು ನಮ್ಮ ಮಾವಚಂದು ಇವರುಗಳು ಎತ್ತಿನಗಾಡಿಯ ಹಿಂದೆಇದ್ದರು. ನಾವು ಎತ್ತಿನಗಾಡಿ ಹೊಡೆದುಕೊಂಡು ನಮ್ಮತಂಗಿಯಗಂಡನಅಣ್ಣತಮ್ಮಂದಿರ ಹೊಲ ದಾಟಿ ಸರಕಾರಿಗೌಠಾಣದಲ್ಲಿ ಬರುವಾಗ05.00 ಪಿಎಂ ಸುಮಾರಿಗೆನಮ್ಮತಂಗಿಯ ಮೈದುನನಾದಕುಮಾರತಂದೆಕೇಸುನಾಯ್ಕಚವ್ಹಾಣ ಸಾ: ನಡಿಹಾಳ ನೀಲಾನಾಯಕತಾಂಡಾಈತನುಕೈಯಲ್ಲಿಕೊಡಲಿ ಹಿಡಿದುಕೊಂಡು ಬಂದವನೆ ಮಕ್ಕಳೆ ನಮ್ಮ ಹೊಲದಲ್ಲಿಯಾಕೆಎತ್ತಿನ ಬಂಡಿ ಹೊಡೆದುಕೊಂಡು ಬಂದಿರಿ ಸೂಳೆ ಮಕ್ಕಳೆ ಅಂತಾ ಅವಾಶ್ಚವಾಗಿ ಬೈಯುತ್ತಾ ಬರುತ್ತಿದ್ದ ಆಗ ನಾನು ನೀವು ಅಣ್ಣತಮ್ಮಂದಿರುಇದ್ದು ನಿಮ್ಮ ಹೊಲದಲ್ಲಿಅಲ್ಲದೆ ಬೇರೆದವರ ಹೊಲದಲ್ಲಿ ಹೊಡೆದುಕೊಂಡು ಹೊಗಲು ಬರುತ್ತದೆ ಏನು ಅಂತಾಅಂದಾಗಕುಮಾರತಂದಖೇಸುನಾಯ್ಕಈತನು ಸೂಳೆ ಮಗನೆ ನಿನ್ನಿಂದ ಆಗಿ ನಮ್ಮಅಣ್ಣ ತುಳಜ್ಯಾ ಅಷ್ಟು ಉರಿಯುತ್ತಾನೆ. ಸೂಳೆ ಮಗನೆ ನಿನಗೆ ಮೊದಲುಖಲಾಸ್ ಮಾಡತನಿ ಆಮೇಲೆ ಅವನಿಗೆ ನೋಡಕೋತಿನಿ ಅಂತಾ ಬೈಯುತ್ತಾಒಮ್ಮಲೆತನ್ನಕೈಯಿಲ್ಲಿ ಹಿಡಿದುಕೊಂಡು ಬಂದಿದ್ದಕೊಡಲಿಯಿಂದ ನನಗೆ ಕೊಲೆ ಮಾಡುವಉದ್ದೇಶದಿಂದ ನನ್ನತಲೆಯ ಹಿಂದೆ ಹೊಡೆದನು. ನನ್ನತಲೆಒಡೆದು ಬಾರಿಗಾಯವಾಯಿತು. ನಾನು ಸತ್ತೆನೆಪ್ಪೊಅಂತಾ ಕೆಳಗೆ ಬಿದ್ದಾಗ ಸದರಿಕುಮಾರಈತನುಅದೆಕೊಡಲಿಯ ನನ್ನಎಡಗಾಲಿನ ಮೊಳಕಾಲಿಗೆ ಹೊಡೆದು ಗುಪ್ತ ಪೆಟ್ಟು ಮಾಡಿದ. ಮಕ್ಕಳೆ ನನ್ನತಂಟೆಗೆ ಬಂದರೆ ನಿಮಗೂ ಇದೆಗತಿಆಗತೈತಿ ಸೂಳೆ ಮಕ್ಕಳೆ ಅಂತಾಜೀವ ಬೆದರಿಕೆ ಹಾಕುತ್ತಾ ಬೈಯ್ದಿರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮಜರುಗಿಸಬೇಕುಅಂತಾಹೇಳಿಕೆ ಸಾರಂಶದ ಮೇಲಿಂದಮರಳಿ 01.20 ಪಿಎಂ ಕ್ಕೆ ಠಾಣೆಗೆ ಬಂದುಠಾಣೆಗುನ್ನೆ ನಂ: 18/2019 ಕಲಂ: 323, 307, 326, 504, 506 ಐಪಿಸಿ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 21/02019 ಕಲಂ: 341, 323, 504, 506, 34 ಐಪಿಸಿ:- ಈ ಮೊದಲಿನಿಂದಲೂ ಪಿರ್ಯಾದಿ ಹಾಗೂ ಆರೋಪಿತರ ಮದ್ಯ ಆಸ್ತಿ ವಿಷಯವಾಗಿ ತಕರಾರು ಇದ್ದು ಆರೋಪಿತರು ಪಿರ್ಯಾದಿ ಮೇಲೆ ಹಗೆತನ ಸಾದಿಸುತ್ತಿದ್ದರು ಹೀಗಿದ್ದು ದಿನಾಂಕ: 20/02/2019 ರಂದು ಬೆಳಿಗ್ಗೆ 10 ಗಂಟೆಗೆ ಪಿರ್ಯಾದಿದಾರರು ತಾವು ಇದ್ದ ಮನೆಗೆ ಪತ್ರಾ ಹಾಕಲು ಹೋದಾಗ ಆರೋಪಿತರು ಪಿರ್ಯದಿ ಮನೆ ಹತ್ತಿರ ಬಂದು ನೀನು ಈ ಮನೆಯಲ್ಲಿ ಇರಬೇಡ ಅಂತ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ದಬ್ಬಿಸಿಕೊಟ್ಟು ನೀನು ನಮ್ಮ ಮನೆ ಕಡೆ ಬಂದರೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 46/2019. ಕಲಂಃ 279., 338 ಐಪಿಸಿ :- ದಿನಾಂಕ: 20/02/2019 ರಂದು ರಾತ್ರಿ 10.15 ಕ್ಕೆ ಫಿಯರ್ಾದಿ ಶ್ರೀ ಸಿದ್ರಾಮ ತಂದೆ ಯಂಕಪ್ಪ ಲೊಖಂಡೆ ಸಾ|| ಢೊರನಳ್ಳಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ ಸಾರಾಂಶವೆನೇಂದರೆ. ದಿನಾಂಕ: 01/02/2019 ರಂದು ರಾತ್ರಿ 7.45 ಪಿ,ಎಂ ಸುಮಾರಿಗೆ ನಾನು ನಮ್ಮ ಡೋರನಳ್ಳಿ ಗ್ರಾಮದ ನಮ್ಮ ಮನೆಯಲ್ಲಿ ಇದ್ದಾಗ ನನಗೆ ನಮ್ಮೂರ ಶಾಂತಪ್ಪ ತಂದೆ ಸಾಯಿಬಣ್ಣ ಆಂದೇಲಿ ಈತನು ಫೊನ ಮಾಡಿ ವಿಷಯ ತಿಳಿಸಿದ್ದೆನೇದರೆ ನಾನು ನನ್ನ ಕೆಲಸದ ನಿಮಿತ್ಯ ಶಹಾಪೂರಕ್ಕೆ ಹೋಗಿ ಶಹಾಪೂರದಲ್ಲಿ ಕೆಲಸ ಮುಗಿದ ನಂತರ ನಾನು ಮರಳಿ ಟಂಟಂ ಅಟೋದಲ್ಲಿ ಡೋರನಳ್ಳಿಗೆ ಬರುತ್ತಿರುವಾಗ ನಾನು ಕುಳಿತ ಟಂ ಟಂ ಅಟೋ ನಮ್ಮೂರ ಉದರ್ು ಶಾಲೆಯ ಹತ್ತಿರ ಬರುವಾಗ ನಮ್ಮ ಹಿಂದಿನಿಂದ ಅಂದರೆ ಶಹಾಪೂರ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಮ್ಮ ಟಂ ಟಂ ಅಟೊಕ್ಕೆ ಸೈಡ ಹೊಡೆದು ವೇಗವಾಗಿ ಹೋಗಿ ನಮ್ಮ ಮುಂದೆ ರೋಡಿನ ಎಡಗಡೆಯಲ್ಲಿ ಅಂದರೆ ಉದರ್ು ಶಾಲೆಯ ಮುಂದೆ ನಡೆದುಕೊಂಡು ಡೋರನಳ್ಳಿ ಗ್ರಾಮದ ಕಡೆಗೆ ಹೊಗುತ್ತಿದ್ದ ಪಾದಚಾರಿಗೆ ಹಿಂದಿನಿಂದ ತನ್ನ ಮೋಟಾರ ಸೈಕಲ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗಿ ಡಿಕ್ಕಿ ಪಡಿಸಿದನು. ಪರಿಣಾಮ ರೋಡಿನ ಎಡಗಡೆ ಹೋಗುತ್ತಿದ್ದ ಪಾದಚಾರಿಯು ಕೆಳಗಡೆ ಬಿದ್ದನು. ತಕ್ಷಣ ನಮ್ಮ ಟಂ ಟಂ ಅಟೋವನ್ನು ನಿಲ್ಲಿಸಿ ನಾನು ಕೆಳಗಿಳಿದು ನೊಡಲಾಗಿ ಆ ವ್ಯಕ್ತಿ ನಿಮ್ಮ ತಮ್ಮ ಅಣ್ಣ ಶಂಕರ ತಂದೆ ಯಂಕಪ್ಪ ಲೊಖಂಡೆ ಇದ್ದನು ಅವನಿಗೆ ನೋಡಲಾಗಿ ಶಂಕರನ ಬಲಗೈ ಮುಂಗೈ ಹತ್ತಿರ ಮುರಿದಂತೆ ಆಗಿತ್ತು ಮತ್ತು ಹಣೆಗೆ ರಕ್ತಗಾಯವಾಗಿ ರಕ್ತ ಸೋರುತಿತ್ತು, ಮೂಗಿಗೆ ಬಾಯಿಗೆ ಗದ್ದಕ್ಕೆ ರಕ್ತಗಾಯಗಳಾಗಿ ರಕ್ತ ಸೊರುತ್ತಿತ್ತು, ಮತ್ತು ಬಲಗಾಲ ಕಪಗಂಡ ಹತ್ತಿರ ಹರಿದಂತೆ ಆಗಿ ರಕ್ತ ಸೊರುತ್ತಿತ್ತು, ನಂತರ ಅಲ್ಲಿಯೇ ಇದ್ದ ಅಪಘಾತ ಪಡಿಸಿದ ಮೋಟಾರ ಸೈಕಲ ನೊಡಲಾಗಿ ಅದು ಹಿರೋ ಮೋಟಾರ ಸೈಕಲ ಇದ್ದು ಅದರ ನಂಬರ ನೊಡಲಾಗಿ ಕೆಎ-33 ಡಬ್ಲ್ಯೂ-8667 ಅಂತ ಇತ್ತು ಅಪಗಾತ ಪಡಿಸಿದ ವ್ಯಕ್ತಿಗೆ ನೋಡಲಾಗಿ ಆತನು ನಮ್ಮೂರ ಅಯ್ಯಪ್ಪ ತಂದೆ ರಾಯಪ್ಪ ಮುಕಡಿ ಇದ್ದನು. ಅಪಗಾತವಾದಾಗ ಸಮಯ ರಾತ್ರಿ 7-30 ಪಿ,ಎಂ ಆಗಿತ್ತು ಅಂತ ನನಗೆ ವಿಷಯ ತಿಳಿಸಿದನು ನಂತರ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ನಮ್ಮ ಅಣ್ಣನಾದ ಹಣಮಂತ ತಂದೆ ಬಸಪ್ಪ ಗುಂಡಕನಾಳ ಇಬ್ಬರೂ ಕೂಡಿ ಅಪಗಾತವಾದ ಸ್ಥಳಕ್ಕೆ ಹೊಗಿ ನಮ್ಮ ಅಣ್ಣ್ಮನನ್ನು ನೊಡಲಾಗಿ ಅಪಘಾತದಲ್ಲಿ ಆದ ಗಾಯ ಪೆಟ್ಟುಗಳನ್ನು ನೋಡಿ ಅಪಗಾತ ಮಾಡಿದ ಅಯ್ಯಪ್ಪನನ್ನು ಮತ್ತು ಮೋಟರ ಸೈಕಲ ನೋಡಿ ನಂತರ ಉಪಚಾರಕ್ಕಾಗಿ ನಮ್ಮ ಅಣ್ಣ ಶಂಕರ ಈತನನ್ನು ಒಂದು ಖಾಸಗಿ ವಾಹನದಲ್ಲಿ ಶಹಾಪೂರದ ಹರಿ ಕೃಷ್ಣ ದವಾಖಾನೆಗೆ ಕರೆದುಕೊಂಡು ಹೊದೆವು. ಅಲ್ಲಿನ ಡಾ|| ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಬೇಗ ದೊಡ್ಡ ದವಾಖಾನೆಗೆ ಕರೆದುಕೊಂಡು ಹೊಗಿರಿ ಅಂತ ತಿಳಿಸಿದರು. ನಾನು ಗಾಬರಿಯಾಗಿ ನಮ್ಮ ಅಣ್ಣನನ್ನು ಹೆಚ್ಚಿನ ಉಪಚಾರಕ್ಕಾಗಿ ಶಹಾಪೂರದಿಂದ ನೇರವಾಗಿ ಮಿರಜ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಸೇರಿಕೆ ಮಾಡಿದೆವು. ಅಲ್ಲಿ ಉಪಚಾರ ಕೊಡಿಸಿ ಇಂದು ತಡವಾಗಿ ಠಾಣೆಗೆ ಬಂದು ಈ ಅಜರ್ಿಯನ್ನು ಕೊಟ್ಟಿದ್ದು ನಮ್ಮ ಅಣ್ಣ ಶಂಕರ ಈತನಿಗೆ ಅಪಘಾತ ಪಡಿಸಿದ ಹಿರೋ ಮೋಟಾರ ಸೈಕಲ ನಂ: ಕೆಎ-33 ಡಬ್ಲ್ಯೂ-8667 ನೇದ್ದರ ಚಾಲಕ ಅಯ್ಯಪ್ಪ ತಂದೆ ರಾಯಪ್ಪ ಮುಕಡಿ ಸಾ|| ಡೋರನಳ್ಳಿ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 46/2019 ಕಲಂ: 279, 338 ಐ,ಪಿ,ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using