ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-02-2019
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-50/2019 ಕಲಂ 279,338 ಐ.ಪಿ.ಸಿ ಸಂ.187 ಐ.ಎಂ.ವಿ ಕಾಯ್ದೆ :- ದಿನಾಂಕ:19-02-2019 ರಂದು 12-30 ಪಿ.ಎಂ. ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಮನಮೋಹನ ತಂದೆ ಕಾಳಪ್ಪ ಪ್ರತಿಹಸ್ತ ವಯಾ:24 ವರ್ಷ ಉ:ಕಾರಪೆಂಟರ ಜಾತಿ:ವಿಶ್ವಕರ್ಮ ಸಾ:ದೇವಾಪೂರ ಇವರು ಠಾಣೆಗೆ ಬಂದು ಹೇಳಿಕೆ ನಿಡಿದ್ದು ಸಾರಾಂಶವೆನೆಂದೆರೆ ಹಿಗಿದ್ದು ನಿನ್ನೆ ದಿನಾಂಕ:18-02-2019 ರಂದು ಸಾಯಂಕಾಲ 5 ಘಂಟೆ ಸುಮಾರಿಗೆ ನಾನು ನಮ್ಮ ತಾತನಾದ ಗಂಗಪ್ಪ ತಂದೆ ಕಾಳಪ್ಪ ಬಡಿಗೇರ ಇಬ್ಬರು ನಮ್ಮ ಮನೆಯ ಮುಂದಿನ ರಸ್ತೆಯ ಬಿಟ್ಟು ಎಡ ಪಕ್ಕದಲ್ಲಿ ಅಂದರೆ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಮಾತನಾಡುತ್ತಾ ನಿಂತುಕೊಂಡಾಗ ಅದೆ ಸಮಯಕ್ಕೆ ಸುರಪುರ ರಸ್ತೆಯ ಕಡೆಯಿಂದ ಒಬ್ಬ ಮೊಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲ್ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ನಮ್ಮ ತಾತನಿಗೆ ಮೊಟಾರ ಸೈಕಲ್ ಡಿಕ್ಕಿ ಪಡಿಸಿ ಮೊಟಾರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಅಲ್ಲೆ ಇದ್ದ ನಾನು ಕೆಳಗೆ ಬಿದ್ದ ನಮ್ಮ ತಾತಾ ಗಂಗಪ್ಪನನ್ನು ಎಬ್ಬಿಸಿ ನೋಡಲು ಎಡಗಡೆ ಕಣ್ಣಿನ ಮೇಲೆ ಮತ್ತು ಹಿಂದುಗಡೆ ತಲೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಬಾಯಿಂದ ರಕ್ತ ಬಂದಿತು. ಅಪಘಾತ ಮಾಡಿದ ಮೋಟಾರ ಸವಾರನನ್ನು ನೋಡಿದ್ದು ಅವನು ನಮ್ಮ ತಾತನಿಗೆ ತಲೆಗೆ ಆದ ರಕ್ತಗಾಯವನ್ನು ನೋಡಿ ಮೋಟಾರ ಸೈಕಲ್ನ್ನು ಅಲ್ಲೆ ಬಿಟ್ಟು ಓಡಿ ಹೋದನು. ನಾನು ಮೊಟಾರ ಸೈಕಲ್ ನೋಡಲು ಒಂದು ಬಜಾಜಾ ಪ್ಲಾಟಿನಾ 100 ಸಿಸಿ ಕಂಪನಿಯ ಮೊಟಾರ ಸೈಕಲ್ ಇದ್ದು ಅದಕ್ಕೆ ನಂಬರ ಇರುವದಿಲ್ಲ ಇಂಜಿನ ನಂಬರ ಕಈಙಘಎಈ57442 ಚೆಸ್ಸಿ ನಂಬರ ಒಆ2ಂ76ಂಙ8ಎಘಈ08414 ನೇದ್ದು ಇರುತ್ತದೆ. ನಂತರ ಗಾಯಹೊಂದಿದ ನಮ್ಮ ತಾತ ಗಂಗಪ್ಪನನ್ನು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಕರೆದುಕೊಂಡು ಬಂದು ಉಪಚಾರ ಮಾಡಿಸಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿ ಠಾಣೆಗೆ ಬರಲು ತಡವಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ಮೊಟಾರ ಸೈಕಲ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 29/2019 ಕಲಂ: 279, 337, 338 ಐ.ಪಿ.ಸಿ :-ದಿನಾಂಕ 19/02/2019 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾಧಿ ಮತ್ತು ಆತನ ತಮ್ಮ ಇಬ್ಬರೂ ಕೂಡಿಕೊಂಡು ತಮ್ಮ ಪಲ್ಸರ ಮೋಟಾರ ಸೈಕಲ್ ನಂ ಕೆ.ಎ-26-ಎಕ್ಸ್-5279 ನೆದ್ದರ ಮೇಲೆ ಕುಳಿತುಕೊಂಡು ತಮ್ಮೂರಿನಿಂದ ಬೆಳಿಗ್ಗೆ 11-00 ಗಂಟೆಗೆ ಲೋಕನಳ್ಳಿ ಕಡೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯ ರಾಮಸಮುದ್ರ-ಅರಿಕೇರಾ(ಕೆ) ರೋಡಿನ ಮೇಲೆ ಎದುರುಗಡೆ ಗುರುಮಿಠಕಲ್ ಕಡೆಯಿಂದ ಒಂದು ಜೀಪ ನಂ ಕೆಎ-17-ಎ-5888 ನೆದ್ದರ ಚಾಲಕನು ತನ್ನ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದನು, ಈ ಅಪಘಾತದಲ್ಲಿ ಫಿರ್ಯಾಧಿಗೆ, ಅವನ ತಮ್ಮನಿಗೆ ಮತ್ತು ಜೀಪನಲ್ಲಿ ಕುಳಿತ ಕೆಲವು ಜನರಿಗೆ ಭಾರಿ ರಕ್ತಗಾಯ, ಗುಪ್ತಗಾಯ, ತರಚಿದಗಾಯ ಆಗಿರುತ್ತವೆ ಅಂತಾ ಪ್ರಕರಣ ದಾಖಲು ಆಗಿದ್ದು ಇರುತ್ತದೆ.
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 30/2019 ಕಲಂ 341, 323, 504, 506 ಸಂ 34 ಐಪಿಸಿ:-ದಿನಾಂಕ 10-02-2019 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿದಾರನು ಮತ್ತು ಅವರ ಮನೆಯವರು ತಮ್ಮ ಮನೆಯಲ್ಲಿ ಇರುವಾಗ ಆರೋಪಿತನು ಫಿರ್ಯಾಧಿ ಮನೆ ಹತ್ತಿರ ಬಂದು ಕೂಲಿಕೆಲಸ ಮಾಡಿದ ಹಣ ಕೊಡಲು ಬಂದು ತಕರಾರು ಮಾಡಿ ಹೋಗಿದ್ದರಿಂದ ಫಿರ್ಯಾಧಿಯು ಶಾಲೆಯ ಹತ್ತಿರ ಹೋಗಿ ಆರೋಪಿತನಿಗೆ ನಮ್ಮ ಮನೆಯ ಹತ್ತಿರ ಬಂದು ಯಾಕೆ ತಕರಾರು ಮಾಡಿದ್ದಿ ಅಂತಾ ಕೇಳಿದಕ್ಕೆ ಫಿರ್ಯಾಧಿಯನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಮತ್ತು ಜಗಳ ಬಿಟ್ಟು ಹೋಗುವಾಗ ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 10/2019 ಕಲಂ: 279, 338 ಕಅ :- ದಿನಾಂಕ 19.02.2019 ರಂದು ರಾತ್ರಿ 10.00 ಪಿಎಮ್ ಕ್ಕೆ ಪಿರ್ಯಾದಿ ಶ್ರೀ. ಸಿದ್ದು ನಾಯಕ ತಂದೆ ತಿರುಪತಿ ನಾಯಕ ಚವ್ಹಾಣ ವ:38 ವರ್ಷ ಉ: ಒಕ್ಕಲುತನ ಜಾ: ಲಂಬಾಣಿ ಸಾ: ಬೈಲಾಪೂರ ತಾಂಡಾ ತಾ: ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾಧಿ ಅಜರ್ಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಂದೆ-ತಾಯಿಗೆ ನಾವು ನಾನು, ರಮೇಶ, ಕಾಳಪ್ಪ ಅನೀಲ ಅಂತಾ ನಾಲ್ಕು ಜನ ಗಂಡು ಮಕ್ಕಳಿದ್ದು ನಮ್ಮೆಲ್ಲರದು ಮದುವೆಯಾಗಿದ್ದು. ನಾವೆಲ್ಲರು ನಮ್ಮ ತಂದೆ ತಾಯಿಯೊಂದಿಗೆ ಕೂಡಿ ಇದ್ದು ನಮ್ಮದೊಂದು ಹಿರೋ ಹೋಂಡಾ ಗ್ಲಾಮರ್ ಮೋಟಾರ್ ಸೈಕಲ್ ಇದ್ದು ಅದನ್ನು ನಾವು ನಾಲ್ಕು ಜನ ಅಣ್ಣತಮ್ಮಂದಿರು ಮತ್ತು ನನ್ನ ತಂದೆಯವರು ಉಪಯೋಗಿಸುತ್ತೇವೆ. ಹೀಗಿರುವಾಗ ಮೊನ್ನೆ ರವಿವಾರ ದಿನಾಂಕ 17.02.2019 ರಂದು ನನ್ನ ತಂದೆ ತಿರುಪತಿಯವರು ತಿಂಥಣಿ ಜಾತ್ರೆಗೆ ಹೋಗಿ ಬರುತ್ತೇನೆಂದು. ನಮ್ಮ ಮೋಟರ್ ಸೈಕಲ್ ನಂ: ಕೆಎ-33 ಯು-3589 ನೇದ್ದನ್ನು ತೆಗೆದುಕೊಂಡು ನಮ್ಮ ತಾಂಡದಿಂದ ಮಧ್ಯಾಹ್ನ 2.00 ಗಂಟೆಯ ಸುಮಾರಿಗೆ ಹೋಗಿದ್ದು. ನನ್ನ ತಂದೆಯ ಜೋತೆಗೆ ತಿಂಥಣಿ ಜಾತ್ರ್ರೆಗೆ ನನ್ನ ತಂಗಿ ಶಕುಂತಲಾ ರವರ ಗಂಡನಾದ ಅಳಿಯ ಸುರೇಶ ತಂದೆ ಮನ್ನಪ್ಪ ರಾಠೋಡ ಹಾಗೂ ಅವರ ಸಂಬಂಧಿ ಸಿದ್ದು ತಂದೆ ಪೂಲಸಿಂಗ ಚವ್ಹಾಣ ಇವರು ಕೂಡಾ ಮತ್ತೊಂದು ಮೋಟಾರ್ ಸೈಕಲ್ ಮೇಲೆ ನನ್ನ ತಂದೆ ಜೋತೆಗೆ ತಿಂಥಣಿ ಜಾತ್ರೆಗೆ ಹೋಗಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ:17.02.2019 ರಂದು ರಾತ್ರಿ 8.15 ಗಂಟೆಯ ಸುಮಾರಿಗೆ ನಾನು ನಮ್ಮ ತಾಂಡಾದಲ್ಲಿ ಮನೆಯಲ್ಲಿದ್ದಾಗ. ನನ್ನ ತಂದೆ ಜೋತೆಗೆ ತಿಂಥಣಿ ಜಾತ್ರೆಗೆ ಹೋಗಿದ್ದ ಅಳಿಯ ಸುರೇಶ ರವರು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ. ನಾನು ಮತ್ತು ಸಿದ್ದು ಚವ್ಹಾಣ ರವರು ನಮ್ಮ ಮೋಟಾರ್ ಸೈಕಲ್ ಮೇಲೆ ಮತ್ತು ಮಾವ ತಿರುಪತಿ ನಾಯಕ್ ತನ್ನ ಮೋಟಾರ್ ಸೈಕಲ್ ನಂ:ಕೆಎ-33 ಯು-3589 ನೇದ್ದರ ಮೇಲೆ ತಿಂಥಣಿಯಿಂದ ನಮ್ಮ ತಾಂಡಾಕ್ಕೆ ಬರಲು ಕಕ್ಕೇರಾ-ಹುಣಸಗಿ ರಸ್ತೆಯ ಮೇಲೆ ಗುಮ್ಮೇದಾರ ದೊಡ್ಡಿಯ ಹತ್ತಿರ 8.00 ಗಂಟೆಯ ಸುಮಾರಿಗೆ ಬರುತ್ತಿರುವಾಗ ನಿಮ್ಮ ತಂದೆಯು ನಮ್ಮ ಮೋಟಾರ್ ಸೈಕಲ್ ಮುಂದೆ ಇದ್ದು. ನಾವು ಅವನ ಹಿಂದೆ ಬರುತ್ತಿರುವಾಗ ಎದುರುಗಡೆಯಿಂದ ಒಬ್ಬ ಕಾರು ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದು ನಿಮ್ಮ ತಂದೆಯ ಮೋಟರ್ ಸೈಕಲ್ಗೆ ಡಿಕ್ಕಿ ಪಡಿಸಿದ್ದು. ಇದರಿಂದ ಮಾವನು ಮೋಟರ್ ಸೈಕಲ್ ಸಮೇತ ಬಿದ್ದಿದ್ದು. ನಾನು ಮತ್ತು ಸಿದ್ದು ರವರು ನಮ್ಮ ಮೋಟರ್ ಸೈಕಲ್ನ್ನು ನಿಲ್ಲಿಸಿ ಹೋಗಿ ಮಾವನಿಗೆ ನೋಡಲಾಗಿ ಮಾವನ ಬಲಗಣ್ಣಿನ ಹತ್ತಿರ ಮತ್ತು ನಾಲಿಗೆಗೆ ಹಾಗೂ ಎಡಗೈ ಕಿರು ಬೆರಳಿಗೆ ಭಾರಿ ರಕ್ತಗಾಯಗಳಾಗಿದ್ದು. ಹಾಗೂ ತೆಲೆಯ ಮೇಲೆ ಬಲಬಾಜುವಿಗೆ ಭಾರಿ ಒಳಪೆಟ್ಟಾಗಿ ಗುಮ್ಮಟಿ ಬಂದಿದ್ದು ಬಲಗೈ ಮೊಳಕೈ ಕೆಳಗೆ ಭಾರಿ ಗುಪ್ತಗಾಯವಾಗಿ ಮುರಿದಂತೆ ಕಾಣಿಸುತ್ತಿದ್ದು. ಅಪಘಾತ ಪಡಿಸಿದ ಕಾರು ಸ್ವಲ್ಪ ಮುಂದೆ ಹೋಗಿ ನಿಂತಿದ್ದು ನೋಡಲಾಗಿ ಕಾರ ನಂ:ಕೆಎ-42 ಎಮ್-9482 ಇದ್ದು ಅದರ ಚಾಲಕನು ನನಗೆ ಪರಿಚಯದ ಪರಶುರಾಮ ತಂದೆ ಲಚಮು ರಾಠೋಡ ಸಾ: ಯಲಗೂಡ ತಾಂಡಾ ತಾ:ಸಿಂದಗಿ ಇದ್ದು. ಮಾವನನ್ನು ನಾನು ಮತ್ತು ಸಿದ್ದು ಚವ್ಹಾಣ ಇಬ್ಬರೂ ಕೂಡಿ ಅಪಘಾತ ಪಡಿಸಿದ ಕಾರಿನಲ್ಲಿಯೇ ಕೂಡಿಸಿಕೊಂಡು ಉಪಚಾರಕ್ಕಾಗಿ ಕಕ್ಕೇರಾ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು. ಮಾವನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು. ಕೂಡಲೇ ಬರಬೇಕು ಅಂತಾ ತಿಳಿಸಿದ್ದರಿಂದ. ನಾನು ಮತ್ತು ನನ್ನ ತಾಯಿ ಉಮಭಾಯಿ ಇಬ್ಬರೂ ಕೂಡಿ ಸ್ವಲ್ಪ ಹೊತ್ತಿನಲ್ಲಯೇ ಕಕ್ಕೇರಾ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ. ಆಸ್ಪತ್ರೆಯಲ್ಲಿ ನನ್ನ ತಂದೆಯು ಉಪಚಾರ ಹೊಂದುತ್ತಿದ್ದು. ಅಳಿಯ ಸುರೇಶ ರವರು ಪೋನ್ನಲ್ಲಿ ತಿಳಿಸಿದಂತೆ ನನ್ನ ತಂದೆಯ ಮೈಮೇಲೆ ಅಪಘಾತದಲ್ಲಿ ಗಾಯಗಳಾಗಿದ್ದು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದು ನನ್ನ ತಂದೆಗೆ ಅಪಘಾತ ಪಡಿಸಿದ ಕಾರ ನಂ:ಕೆಎ-42 ಎಮ್ 9482 ರ ಚಾಲಕನು ಮತ್ತು ಅಳಿಯ ಸುರೇಶ ಹಾಗು ಸಿದ್ದು ಚವ್ಹಾಣರವರು ಅಲ್ಲಿಯೇ ಇದ್ದು ನನ್ನ ಅಳಿಯ ಸುರೇಶನಿಗೆ ವಿಚಾರಿಸಲಾಗಿ ಪೋನಿನಲ್ಲಿ ತಿಳಿಸಿದಂತೆ ಹೇಳಿದ್ದು ಈ ಅಪಘಾತವು ಕಾರ ಚಾಲಕ ಪರಶುರಾಮ ತಂದೆ ಲಚಮು ರಾಠೋಡ ಇತನ ನಿರ್ಲಕ್ಷತನದಿಂದಲೇ ಸಂಬವಿಸಿದ್ದು. ಕಕ್ಕೇರಾ ಸಕರ್ಾರಿ ಆಸ್ಪತ್ರೆಯ ವೈದ್ಯರು ನನ್ನ ತಂದೆಯಾದ ತಿರುಪತಿ ನಾಯಕ ತಂದೆ ಗೋವಿಂದ ನಾಯಕ ಚವ್ಹಾಣ ವ:60 ವರ್ಷ ರವರಿಗೆ ಪ್ರಥಮೋಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದಂದ ನಾನು ಮತ್ತು ನನ್ನ ತಾಯಿ ಉಮಾಭಾಯಿ ಹಾಗೂ ಅಳಿಯ ಸುರೇಶ ರವರು ಕೂಡಿ ಅದೇ ದಿನಾ ರಾತ್ರಿ ವಿಜಯಪೂರದ ಯಶೋಧರಾ ಆಸ್ಪತ್ರೆಗೆ ನನ್ನ ತಂದೆಯನ್ನು ಕರೆದುಕೊಂಡು ಹೋಗಿ ಉಪಚಾರಕ್ಕೆ ಸೇರಿಕೆ ಮಾಡಿದ್ದು. ನನ್ನ ತಂದೆಯು ಇನ್ನೂ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ನನ್ನ ತಂದೆಗೆ ಆಸ್ಪತ್ರೆಯಲ್ಲಿ ನಾನು ಉಪಚಾರ ಮಾಡಿಸಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು. ನನ್ನ ತಂದೆಗೆ ಅಪಘಾತ ಪಡಿಸಿದ ಕಾರ ನಂ:ಕೆಎ-42 ಎಮ್ 9482 ರ ಚಾಲಕ ಪರಶುರಾಮ ರಾಠೋಡ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 10/2019 ಕಲಂ 279, 338 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 17/2019 ಕಲಂ: 143, 147, 148, 323, 302, 506 ಸಂ: 149 ಐಪಿಸಿ:-ದಿನಾಂಕ: 20/02/2019 ರಂದು 00.30 ಎ.ಎಎಂ ಕ್ಕೆ ಅಜರ್ಿದಾರರಾದ ನಿರ್ಮಲಾಬಾಯಿ ಗಂಡ ಕುಮಾರ ಚವ್ಹಾಣ ವಯ 34 ಜಾತಿ: ಲಂಬಾಣಿ ಉ: ಹೊಲಮನೆಕೆಲಸ ಸಾ: ನಡಿಹಾಳ ನೀಲಾನಾಯಕ ತಾಂಡಾ ತಾ: ಶಹಾಪೂರ ಇದ್ದು ತಮ್ಮಲ್ಲಿ ಅಜರ್ಿಸಲ್ಲಿಸುವುದೆನೆಂದರೆ, ನನ್ನ ಗಂಡನಾದ ಕುಮಾರ ಇವರು ಒಟ್ಟು ಐದು ಜನ ಅಣ್ಣ ತಮ್ಮಂದಿರು ಇರುತ್ತಾರೆ. ಒಟ್ಟು 15 ಎಕರೆ ಭೂಮಿ ಇದ್ದು ಎಲ್ಲಾ ಐದು ಜನರಿಗೆ ತಲಾ ಮೂರು ಎಕರೆ ಬಂದಿದ್ದು ಎಲ್ಲರೂ ಪ್ರತೇಕವಾಗಿ ನಮ್ಮ ನಮ್ಮ ಹೊಲಗಳನ್ನು ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಹೀಗಿದ್ದು ಎಲ್ಲರ ಆಸ್ತಿ ಕೂಡಿಯೇ ಇದ್ದು ಯಾರ ಹೆಸರಿನಲ್ಲಿ ಪ್ರತೇಕವಾಗಿ ವಾಟನಿ ಯಾಗಿರುವುದಿಲ್ಲಾ ಇದರಿಂದ ವಾಟನಿ ಮಾಡಿಸಿಕೊಳ್ಳೋಣ ಅಂತ ನನ್ನ ಗಂಡ ಕುಮಾರ ಇತನು ಆತನ ಅಣ್ಣನಾದ ತುಳಜಾರಾಮ ಇತನಿಗೆ ಅನೇಕ ಬಾರಿ ಕರೆದರೂ ಸಹ ಬಂದಿರಲಿಲ್ಲಾ. ಇದರಿಂದ ತುಳಜಾರಾಮ ಇತನು ಆಗಾಗ ಸಣ್ಣಪುಟ್ಟ ಜಗಳ ತೆಗೆದು ನನ್ನ ಗಂಡನ ಮೇಲೆ ವೈಷ್ಯಮ್ಯ ಬೆಳೆಸಿಕೊಂಡು ಬರುತ್ತಿದ್ದನು. ಹೀಗಿದ್ದು ನನ್ನ ಗಂಡನಾದ ಕುಮಾರ ಇತನು ಎಲ್ಲಾ ಅಣ್ಣತಮ್ಮಂದಿರ ಹೊಲದಲ್ಲಿ ಬೋರವೆಲ್ಲ ಹಾಕಿಸುತ್ತಿದ್ದಾಗ ತುಳಜಾರಾಮ ಇವರ ಹೊಲದಲ್ಲಿ ಒಟ್ಟು ಮೂರು ಕಡೆ ಬೋರವೆಲ್ಲ ಕೊರೆದರು ನೀರು ಬಿದ್ದಿರಲಿಲ್ಲಾ, ಇದರಿಂದ ತುಳಜರಾಮ ಇತನು ನನ್ನ ಗಂಡ ಕುಮಾರ ಇತನ ಮೇಲೆ ಸಿಟ್ಟು ಮಾಡಿಕೊಂಡು ನಿನೇ ನೀರು ಬೀಳದಂತೆ ಬಾನಾಮತಿ ಮಾಡಿಸಿದಿ ಅಂತ ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸಿ ನನ್ನ ಗಂಡನ ಮೇಲೆ ಸಿಟ್ಟು ಮಾಡಿಕೊಂಡು ತೀರುಗಾಡುತ್ತಾ ಇದ್ದನು. ದಿನಾಂಕ 19-02-2019 ರಂದು ಬೆಳಿಗ್ಗೆ 10 ಗಂಟೆಗೆ ಹೊಲದಲ್ಲಿ ಕೆಲಸಕ್ಕೆಂದು ನಾನು ಮತ್ತು ನನ್ನ ಗಂಡನಾದ ಕುಮಾರ ಮತ್ತು ಬಾವನಾದ ಚಂದು ತಂದೆ ಕೇಸುನಾಯಕ ಇವರೊಂದಿಗೆ ನಮ್ಮ ಹೊಲಕ್ಕೆ ಹೋಗಿದ್ದೇವು. ಆಗ ಅಲ್ಲಿಯೇ ನಮ್ಮ ಹೊಲದ ಬಾಜು ಇರುವ ಆರೋಪಿತರು ಎಲ್ಲರೂ ತುಳಜಾರಾಮ ಇವರ ಹೊಲದಲ್ಲಿ ಜೋಳದ ರಾಶಿಯನ್ನು ನಮ್ಮ ಹೊಲದಲ್ಲಿ ಬೆಳೆದ ಟೊಮೋಟೋ ಬೆಳೆಯಲ್ಲಿ ಹೊಡೆದುಕೊಂಡು ನಮ್ಮ ಹೊಲದ ಬಾಜು ಸಕರ್ಾರಿ ಗೌಠಾಣ ಜಾಗದಲ್ಲಿ ದಾರಿಯಲ್ಲಿ ಹಾಯ್ದು ಬರುತ್ತಿದ್ದಾಗ ಸಮಯ ಅಂದಾಜು ಸಂಜೆ 5 ಗಂಟೆ ಸುಮಾರಿಗೆ ನನ್ನ ಗಂಡ ಕುಮಾರ ಇತನು ಯಾಕೆ ನಮ್ಮ ಹೊಲದ ಟೊಮೊಟೋ ಬೆಳೆಯಲ್ಲಿ ಹೊಡೆದುಕೊಂಡು ಬಂದಿದ್ದೀರಿ ಅಂತ ಅಂದಾಗ ಆಗ ಎಲ್ಲರೂ ಕೂಡಿ ಬಂದವರೇ ತೆಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಹೊಡೆಯುತ್ತಾ ನೆಲಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದು ಕಟ್ಟಿಗೆ ಕಡಿಯಲು ತಂದಿದ್ದ ಕೊಡಲಿಯನ್ನು ನನ್ನ ಗಂಡನ ಕೈಯಿಂದ ಕಸಿದುಕೊಂಡು ನನ್ನ ಗಂಡನ ತಲೆಯ ಹಿಂದಿನ ಭಾಗಕ್ಕೆ ಹೊಡೆದಿದ್ದು ಖುಬ್ಯಾ ಇತನು ಒಂದು ಕೂಡಗೋಲಿನಿಂದ ಕುತ್ತಿಗೆಗೆ ಹೊಡೆದು ರಕ್ತಗಾಯ ಮಾಡಿ ಕೊಲೆ ಮಾಡಿ ಸಾಯಿಸಿಬಿಟ್ಟಿದ್ದು ಇರುತ್ತದೆ. ನಾನು ಮತ್ತು ಚಂದು ಇವರು ಕೂಡಿ ಜಗಳ ಬಿಡಿಸಲು ಹೋದಾಗ ನನಗೂ ಮತ್ತು ಚಂದು ಇತನಿಗೆ ಸಹ ಬೈದು ಮುಂದೆ ಏನಾದರೂ ಈ ವಿಷಯ ಯಾರಿಗಾದರೂ ಹೇಳಿದರೆ ಇದೇ ಗತಿ ನಿನಗೂ ಬರುತ್ತೇ ಅಂತ ನನಗೆ ಜೀವದ ಬೆದರಿಕೆ ಹಾಕಿ ದಬ್ಬಿಕೊಟ್ಟಿದ್ದು ನನ್ನ ಗಂಡನಿಗೆ ಕೊಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2019 ಕಲಂ: 143, 147, 148, 323, 302, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using