ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-02-2019
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 28/2019 ಕಲಂ 341, 323, 324, 504, 506 ಸಂ 34 ಐಪಿಸಿ:-ದಿನಾಂಕ 10-02-2019 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿದಾರನು ತನ್ನ ಹತ್ತಿರ ಕೂಲಿಕೆಲಸ ಮಾಡಿದ ಆನಂದನಿಗೆ ಹಣ ಕೊಡಲು ಹೋದಾಗ ಆರೋಪಿತರು ತಕರಾರು ಮಾಡಿದ್ದರಿಂದ ಫಿರ್ಯಾಧಿಯು ತನ್ನ ಮನೆ ಕಡೆಗೆ ಬರುವಾಗ ಶಾಲೆಯ ಹತ್ತಿರ ಆರೋಪಿತರು ಬಂದು ಫಿರ್ಯಾಧಿಯನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು ಕೈಇಂದ ಹೊಡೆದು, ಕಲ್ಲಿನಿಂದ ಹೊಡೆಯಲು ಹೋದಾಗ ಫಿರ್ಯಾಧಿ ತಮ್ಮನು ಅಡ್ಡ ಬಂದಾಗ ಅವನ ಮೂಗಿಗೆ ಮತ್ತು ಎಡ ಹುಬ್ಬಿಗೆ ರಕ್ತಗಾಯವಾಗಿರುತ್ತದೆ, ಮತ್ತು ತಂದೆಗೆ ಕೈಯಿಂದ ಹೊಡೆದು ದಬ್ಬಿಕೊಟ್ಟಿದ್ದರಿಂದ ತರಚಿದ ಗಾಯವಾಗಿರುತ್ತದೆ, ಮತ್ತು ಜಗಳ ಬಿಟ್ಟು ಹೋಗುವಾಗ ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 27/2019 ಕಲಂ 323, 324, 504, 506 ಸಂ 34 ಐಪಿಸಿ:-ದಿನಾಂಕ 15-02-2019 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾದಿದಾರನು ಜಕ್ಕಪ್ಪ ಮುತ್ಯಾನ ದೇವರ ಗುಡಿ ಹತ್ತಿರ ಹೋಗಿ ಆರೋಪಿತರಿಗೆ ನಮ್ಮ ಜಾಗದಲ್ಲಿ ಯಾಕೆ ಬೆಸ್ ಮೆಂಟ ಮಾಡುತ್ತಿದ್ದಿರಿ ಅಂತಾ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿ ಅವಾಚ್ಯವಾಗಿ ಬೈದು ಕೊಳ್ಳುಪಟ್ಟಿ ಹಿಡಿದು ಎಳೆದಾಡಿ ಕಟ್ಟಿಗೆಯಿಂದ ಫಿರ್ಯಾಧಿ ಎದೆಗೆ ಹೊಡೆದು, ಕೈಯಿಂದ ಹೊಡೆದು, ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-49/2019 ಕಲಂ 177,193,203,417,420,426,477(ಎ) ಸಂ.34 ಐಪಿಸಿ:-ದಿನಾಂಕ: 18/02/2019 ರಂದು 12-30 ಪಿ.ಎಂ.ಕ್ಕೆ ಮಾನ್ಯ ನ್ಯಾಯಾಲಯದ ಖಾಸಗಿ ಪಿಯರ್ಾದಿ ಸಂಖ್ಯೆ: 04/2019 ನೇದ್ದು ಕೊರ್ಟ ಕರ್ತವ್ಯ ನಿರ್ವಹಿಸುವ ಶ್ರೀ ಮಾನಪ್ಪ ಸಿಪಿಸಿ-171 ರವರಿಂದ ವಸೂಲಾಗಿದ್ದು, ಸದರಿ ಆರೋಪಿತರು ರುಕ್ಮಾಪೂರ ಗ್ರಾಮದಲ್ಲಿರುವ ಮನೆ ನಂಬರ 4-30 ಅನ್ನು ನೇದ್ದನ್ನು ಸ್ಟಾಂಪನಲ್ಲಿ ಬರೆದುಕೊಟ್ಟು ಮನೆ ಕೊಡದೆ ಮೋಸ ಮಾಡಿದ್ದು ಇರುತ್ತದೆ ಅಂತಾ ಇತ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 49/2019 ಕಲಂ 177,193,203,417,420,426,477(ಎ) ಸಂ.34 ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using