ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-02-2019

By blogger on ಸೋಮವಾರ, ಫೆಬ್ರವರಿ 18, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-02-2019 

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 40/2019 ಕಲಂ:143,147,323,324, 354, 504, 447, 506 ಸಂಗಡ 34 ಐಪಿಸಿ:-ದಿನಾಂಕ : 17.02.2019 ರಂದು ಬೆಳಿಗ್ಗೆ 8:30 ಗಂಟೆಗೆ ಶ್ರೀ ವಿ.ಆರ್.ಜಾಧವ ಪಿಸಿ-148 ಗುರುಮಠಕಲ್ ಪೊಲೀಸ್ ಠಾಣೆಗೆ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ : 03/2019 ದಿನಾಂಕ 14.02.2019 ನೇದ್ದನ್ನು ತೆಗೆದುಕೊಂಡು ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಸದರಿ ಖಾಸಗಿ ದೂರು ಅಜರ್ಿಯಲ್ಲಿ ಅವಾಚ್ಯವಾಗಿ ಬೈದು, ಹೊಡೆ-ಬಡೆ ಮಾಡಿ ಅವಮಾನವಾಡಿದ್ದು ಅಲ್ಲದೇ ಅತಿಕ್ರಮ ಪ್ರವೇಶ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ನೀಡಿದ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:40/2019 ಕಲಂ:143,147,323,324, 354, 504, 447, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 41/2019 ಕಲಂ: 87 ಕೆ.ಪಿ. ಆಠ್ಟಿ್ :- ದಿನಾಂಕ 17.02.2019 ರಂದು ಸಂಜೆ 4-45 ಗಂಟೆಗೆ ಸುಮಾರಿಗೆ ಈ ಮೇಲ್ಕಂಡ ಆರೋಪಿತರು ಗುರುಮಠಕಲ್ ಪಟ್ಟಣದ ಹೊರವಲಯದಲ್ಲಿ ಸರಕಾರಿ ಐ.ಟಿ.ಐ ಕಾಲೇಜು ಎದುರು ರೋಡಿನ ಆಚೆ ಖುಲ್ಲಾ ಸ್ಥಳದಲ್ಲಿ ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳೀ ಮಾಡಿ ಆರೋಪಿತರನ್ನು ಹಿಡಿದು ಅವರ ವಶದಲ್ಲಿದ್ದ 6850/- ಮತ್ತು 52 ಇಸ್ಪೀಟ್ ಎಲೆಗಳನ್ನು  ಹಾಗೂ 8 ವಾಹನಗಳನ್ನು ಅ.ಕಿ- ಒಟ್ಟು 1,97,000/- ರೂ ಸೇರಿ ಒಟ್ಟು ಒಟ್ಟು 2,03,850/- ರೂ ಬೆಲೆಚಿು ಮುದ್ದೆ ಮಾಲನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾತದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ: 41/2019 ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 18/2019  ಕಲಂ 87 ಕೆಪಿ ಯ್ಯಾಕ್ಟ :- ದಿನಾಂಕ 17/02/2019 ರಂದು 12 ಪಿಎಮ್ ಕ್ಕೆ ಆರೋಪಿತರೆಲ್ಲರೂ  ಶಿರವಾಳ ಗ್ರಾಮದ ತಿಮ್ಮಪ್ಪಯ್ಯನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ 6 ಜನ ಆರೋಪಿತರಿಗೆ ಹಿಡಿದು ಅವರಿಂದ ನಗದು ಹಣ 3200/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು 12 ಪಿಎಮ್ ದಿಂದ 01.00 ಪಿಎಮ್ ವರೆಗೆ ಜಪ್ತಿಪಡಿಸಿಕೊಂಡು 01.30 ಪಿಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 2.30 ಪಿಎಮ್.ಕ್ಕೆ ಠಾಣೆ ಗುನ್ನೆ ನಂ: 18/2019 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 20/2019 ಕಲಂ 341.323.324.498(ಎ).504.506 ಐ.ಪಿ.ಸಿ :- ದಿನಾಂಕ 17.02.2019 ರಂದು 08.00 ಪಿಎಮ್ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ರೂಪಾ ಗಂಡ ಶರಣು ದಂಡಾಗೋಳ ವಯಾ|| 27 ವರ್ಷ ಜಾ|| ರಡ್ಡಿ ಉ|| ಮನೆಗೆಲಸ ಸಾ|| ನಗನೂರ ತಾ|| ಸುರಪೂಡಿ ರವರ ಅಜರ್ಿ ಸಾರಾಂಶ  ಏನೆಂದರೆ ನಮ್ಮ ತಂದೆ ತಾಯಿಯರು ನನಗೆ ಸುಮಾರು 08 ವರ್ಷಗಳ ಹಿಂದೆ ನಗನೂರ ಗ್ರಾಮದ ಶರಣು ತಂದೆ ಜಾಲಪ್ಪ ದಂಡಾಗೋಳ ಈತನಿಗೆ ಕೊಟ್ಟು ಮದುವೆ ಮಾಡಿ ಕೊಟ್ಟಿರುತ್ತಾರೆ. ಮದುವೆಯಾಗಿ ಸ್ವಲ್ಪ ದಿನಗಳ ವರೆಗೆ ಚೆನ್ನಾಗಿದ್ದು ನಂತರ ನನ್ನ ಗಂಡ ನನಗೆ ಹೊಡೆ ಬಡೆ ಮಾಡುತ್ತಿದ್ದರಿಂದ ಆಗಾಗ ನಾನು ನನ್ನ ತವರು ಮನೆಯಾದ ಮುದನೂರ ಗ್ರಾಮಕ್ಕೆ ಹೋಗಿ-ಬರುವದು ಮಾಡುತ್ತಿದ್ದೆನು. ಹೀಗೆ ಸುಮಾರು 02 ವರ್ಷಗಳಿಂದ ನಾವಿಬ್ಬರೂ ಗಂಡ ಹೆಂಡತಿ ಬೇರೆ ಮನೆ ಮಾಡಿಕೊಂಡು ಇರುತ್ತೇವೆ. ಬೇರೆ ಮನೆ ಮಾಡಿಕೊಂಡು ಇದ್ದರು ಸ್ವಲ್ಪ ದಿನ ಚೆನ್ನಾಗಿದ್ದು ನಂತರ ನನ್ನ ಗಂಡನು ನನಗೆ ಬೋಸಡಿ, ರಂಡಿ, ನೀನು ಸರಿ ಇಲ್ಲ, ನಿನ್ನ ನಡುವಳಿಕೆ ಸರಿ ಇಲ್ಲ, ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಅಂತಾ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಿದ್ದರಿಂದ ನಾನು ನನ್ನ ತವರು ಮನೆಗೆ ಹೋಗಿ-ಬರುವದು ಮಾಡುತ್ತಿದ್ದೆನು. ಹೀಗಿದ್ದು ಇಂದು ದಿನಾಂಕ 15.02.2019 ರಂದು 11.30 ಎ,ಎಮ್ ಸುಮಾರಿಗೆ ನಾನು ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ನನ್ನ ಗಂಡನಾದ ಶರಣು ಈತನು ಹೋರಗಡೆಯಿಂದ ಬಂದು ಏನಲೆ ರಂಡಿ ಬೋಸಡಿ ಬರೇ ನಿನ್ನ ತವರು ಮನೆಗೆ ಹೋಗುವದು ಮಾಡುತ್ತಿಯಾ ನೀನು ನಮ್ಮ ಮನೆಯಲ್ಲಿ ಇರಬೇಡ, ನೀನು ಸರಿ ಇಲ್ಲ, ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ನಿನ್ನ ನಡುವಳಿಕೆ ಸರಿ ಇಲ್ಲ ಬೋಸಡಿ, ರಂಡಿ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಾನು ಅವನಿಗೆ ಅಂಜಿ ಮನೆಯ ಹೊರಗೆ ಹೋಗುವಾಗ ನನ್ನ ಗಂಡ ನನಗೆ ತಡೆದು ನಿಲ್ಲಿಸಿ ಬಲಗಡೆ ಟೊಂಕಕ್ಕೆ ಜಾಡಿಸಿ ಕಾಲಿನಿಂದ ಒದ್ದು ಗುಪ್ತಗಾಯ ಮಾಡಿ ಕೈಯಿಂದ ನನ್ನ ಎಡಕೈ ಮುಷ್ಠಿಗೆ ಹೊಡೆದು ತರಚಿದ ರಕ್ತಗಾಯ ಆದಾಗ ನಾನು ಚಿರಾಡುತ್ತಿರುವಾಗ ಅಲ್ಲೆ ಮನೆಯ ಮುಂದೆ ರಸ್ತೆಯ ಮೇಲೆ ಹೋಗುತ್ತಿದ್ದ ಬಸವರಾಜ ತಂದೆ ಚಿನ್ನಾರೆಡ್ಡಿ ನರಸರೆಡ್ಡಿ ಇವರು ನನಗೆ ಹೋಡೆಯುದನ್ನು ನೋಡಿ ಬಿಡಿಸಿಕೊಂಡರು. ನಂತರ ನನ್ನ ಗಂಡ ಶರಣು ಈತನು ಇದೊಂದು ಸಾರಿ ಉಳಿದಿದಿಯಾ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದನು. ಆಗ ನಾನು ಈ ವಿಷಯವನ್ನು ನಮ್ಮ ಅಣ್ಣನಾದ ಹಣಮಂತ್ರಾಯ ಈತನಿಗೆ ತಿಳಿಸಿ ಆತನ ಸಂಗಡ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಯಲ್ಲಿ ಉಪಚಾರ ಮಾಡಿಕೊಂಡು ತವರು ಮನೆಯಾದ ಮುದನೂರಕ್ಕೆ ಹೋಗಿ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 20/2019 ಕಲಂ 341.323.324.498(ಎ).504.506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 48/2019   ಕಲಂ 32,34 ಕನರ್ಾಟಕ ಅಭಕಾರಿ ಕಾಯ್ದೆ 1965 :- ದಿನಾಂಕ: 17/02/2019 ರಂದು 8-15 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ಆರೋಪಿತನೊಂದಿಗೆ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:17/02/2019 ರಂದು 5-30 ಪಿ.ಎಮ್ ಸುಮಾರಿಗೆ ನಾನು ತಿಂಥಣಿ ಶ್ರೀ ಮೌನೇಶ್ವರ ಜಾತ್ರಾ ಬಂದೋಬಸ್ತ ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಶಾಂತಪೂರ ಕ್ರಾಸ ಹತ್ತಿರ ಮುಖ್ಯ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು  ಪ್ಲಾಸ್ಟೀಕ ಚೀಲಗಳಲ್ಲಿ ಅಕ್ರಮವಾಗಿ ಮಧ್ಯದವನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಜಾತ್ರೆಯಲ್ಲಿದ್ದ ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಚಂದ್ರು ಸಿಪಿಸಿ-175 2) ಬಸವರಾಜ ಸಿಪಿಸಿ-207 3) ಶ್ರೀ ಬೀಮಣ್ಣ ಸಿಪಿಸಿ-105 4) ಶ್ರೀ ದಯಾನಂದ ಸಿಪಿಸಿ-337 5) ಶ್ರೀ ಮಾನಯ್ಯಾ ಸಿಪಿಸಿ-372 6) ಶ್ರೀ ರವಿ ಸಿಪಿಸಿ-376     ಇವರನ್ನು ಕರೆಯಿಸಿ ಅವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೋಗೊಣ ಅಂತಾ ಕರೆಯಿಸಿದ ಜಾತ್ರೆಯಲ್ಲಿದ್ದ ಇಬ್ಬರು ಪಂಚರಾದ 1) ಶ್ರೀ ಮಾನಯ್ಯಾ ತಂದೆ ಹಣಮಂತ ಬಂದೊಡ್ಡಿ ವಯಾ:45 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಶಾಂತಪೂರ 2) ಶ್ರೀ ಪರಮಣ್ಣ ತಂದೆ ಹಣಮಂತ ಹಾಲಬಾವಿ ವಯಾ:40 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಶಾಂತಪೂರ ಇವರನ್ನು 6 ಪಿ.ಎಂ.ಕ್ಕೆ ಬರಮಾಡಿಕೊಡು ಅವರಿಗೆ ವಿಷಯ ತಿಳಿಸಿ ಸದರಿ ಜಪ್ತಿ ಪಂಚನಾಮೆ ಕಾಲಕ್ಕೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿದ್ದು, ಪಂಚರು ಸಿಬ್ಬಂಧಿಯರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಹೊರಟು 6-25 ಪಿ.ಎಂ.ಕ್ಕೆ ಶಾಂತಪೂರ ಕ್ರಾಸ ಹತ್ತಿರ ಹೋಗಿ ವಾಹನ ನಿಲ್ಲಿಸಿ ಕೆಳಗೆ ಇಳಿದು ವಾಹನದ ಮರೆಯಾಗಿ ನಿಂತು ನೋಡಲು ಶಾಂತಪೂರ ಕ್ರಾಸ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ಒಂದು ಪ್ಲಾಸ್ಟೀಕ ಚೀಲಗಳಲ್ಲಿ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಜಾತ್ರೆಗೆ ಹೋಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು 6-30 ಪಿ.ಎಂ.ಕ್ಕೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲಾಗಿ ಸಾರ್ವಜನಿಕರು ಓಡಿ ಹೋಗಿದ್ದು ಹಾಜರಿದ್ದ ವ್ಯಕ್ತಿಯ ಹೆಸರು ವಿಳಾಸವನ್ನು ವಿಚಾರಿಸಲು ಅವನು ತನ್ನ ಕಾಮಣ್ಣ ತಂದೆ ನಿಂಗಪ್ಪ ಕುರಕುಂದಿ ವಯಾ:58 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಶಾಂತಪೂರ ಅಂತ ತಿಳಿಸಿದನು ಬಳಿಕ ನಾವು ಪರಿಶೀಲಿಸಿ ನೋಡಲಾಗಿ ಪ್ಲಾಸ್ಟೀಕ ಗೊಬ್ಬರ ಚೀಲಗಳಲ್ಲಿದ್ದ ಮದ್ಯವನ್ನು ಸಂಗ್ರಹಿಸಿದ್ದು ಅವುಗಳ ಬಗ್ಗೆ ಸದರಿಯವನಿಗೆ ಮದ್ಯ ಮಾರಾಟ ಮಾಡಲು ಪರವಾನಿಗೆ ಇದ್ದರೆ ಹಾಜರಪಡಿಸುವಂತೆ ಸೂಚಿಸಿದಾಗ, ತನ್ನ ಬಳಿ ಯಾವುದೇ ಪರವಾನಿಗೆ ಇರುವದಿಲ್ಲ. ಅನಧಿಕೃತವಾಗಿ ಮಾರಾಟ ಮಾಡಲು ತಂದು ಇಟ್ಟಿರುವದಾಗಿ ತಿಳಿಸಿದನು. ನಂತರ ಪಂಚರ ಸಮಕ್ಷಮ ಪ್ಲಾಸ್ಟೀಕ ಚೀಲಗಳಲ್ಲಿದ್ದ ಮದ್ಯದ ಬಾಟಲಿಗಳನ್ನು ಪರಿಶೀಲಿಸಿ ನೋಡಿದ್ದು ಈ ಕೆಳಗಿನಂತೆ ಇರುತ್ತದೆ. 1)  180 ಎಮ್ಎಲ್ನ ಬ್ಯಾಗ ಪೇಪರ ವಿಸ್ಕಿ 30 ಪೌಚಗಳು ಪ್ರತಿಯೊಂದಕ್ಕೆ 90.21/- ರೂಗಳು ಒಟ್ಟು ಅ.ಕಿ 2706.30/-ರೂಗಳು 2) 180 ಎಮ್ಎಲ್ನ ಎಮ್ಸಿ ಡೋವೆಲಸ್ ನಂ-1 ಸೇಲೆಬ್ರೇಶನ್ ಡಿಲಕ್ಷ ತ್ರಿಎಕ್ಷ್ ರಮ್ 15 ಪೌಚಗಳು ಪ್ರತಿಯೊಂದಕ್ಕೆ 90,21/- ರೂಗಳು ಒಟ್ಟು ಅ.ಕಿ 1353.15/- ರೂಗಳು 3) 180 ಎಮ್ಎಲ್ನ ಓಲ್ಡ್ ಟಾವರಿನ್ ವಿಸ್ಕಿ 10 ಪೌಚಗಳು ಪ್ರತಿಯೊಂದಕ್ಕೆ 74.13/- ರೂಗಳು ಒಟ್ಟು ಅ.ಕಿ. 741.30/-  ರೂಗಳು 4) 90 ಎಮ್ಎಲ್ನ ಎಮ್ಸಿ ಡೋವೆಲಸ್ ತ್ರಿಎಕ್ಷ್ ರಮ್ 30 ಪೌಚಗಳು ಪ್ರತಿಯೊಂದಕ್ಕೆ 45.10/- ರೂಗಳು ಒಟ್ಟು ಅ.ಕಿ 1353=00 ರೂಗಳು 5) 90 ಎಮ್ಎಲ್ನ ಓರಿಜನಲ್ ಚಾಯಿಸ್ ವಿಸ್ಕಿ 65 ಪೌಚಗಳು ಪ್ರತಿಯೊಂದಕ್ಕೆ 30.32/- ರೂಗಳು ಒಟ್ಟು 1970.80/- ರೂಗಳೂ  ಹೀಗೆ ಒಟ್ಟು 18 ಲೀಟರ 450 ಎಮ್ಎಲ್ ಮಧ್ಯ ಒಟ್ಟು ಅ.ಕಿ 8124.55/- ರೂಗಳ ಕಿಮ್ಮತ್ತಿನ ಮದ್ಯದ ಪೌಚಗಳು ವಶಪಡಿಸಿಕೊಂಡು ಠಾಣೆಗೆ ಬಂದು ವರದಿ ನಿಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 47/2019 ಕಲಂ: 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ :- ದಿನಾಂಕಃ 17/02/2019 ರಂದು 3-00 ಪಿ.ಎಮ್ ಕ್ಕೆ ಶ್ರೀ ಮೌನೇಶ ತಂದೆ ತಿಮ್ಮಣ್ಣ ಮೇಟಿ ಸಾಃ ಬಂಡೋಳ್ಳಿ ತಾಃ ಸುರಪೂರ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕಃ 14/02/2019 ರಂದು ನನ್ನ ತಂದೆಯವರು ಹಾಗು ನನ್ನ ಅಕ್ಕ ಲಕ್ಷ್ಮೀ ಇಬ್ಬರೂ ತಿಂಥಣಿ ಜಾತ್ರೆಗೆ ಹೋಗಿ ಅಲ್ಲಿಂದ ಕೆಲವೊಂದು ಮನೆಯ ವಸ್ತುಗಳನ್ನು ಖರೀದಿಸಿಕೊಂಡು ಟಂ ಟಂ ಅಟೋರಿಕ್ಷಾ ನಂಬರ ಕೆ.ಎ 33 ಎ 8004 ನೇದ್ದರಲ್ಲಿ ಕುಳಿತುಕೊಂಡು ನಮ್ಮೂರಿಗೆ ಬರುತ್ತಿರುವಾಗ ಶಾಂತಪೂರ ಕ್ರಾಸ್ ದಾಟಿದ ಬಳಿಕ ಸುರಪುರ-ಲಿಂಗಸೂಗೂರ ಮುಖ್ಯ ರಸ್ತೆಯ ಮೇಲೆ ಸದರಿ ಅಟೋರಿಕ್ಷಾ ಚಾಲಕನು ತನ್ನ ಅಟೋ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು 4-00 ಪಿ.ಎಮ್ ಕ್ಕೆ ನಮ್ಮೂರ ಸಿಮಾಂತರದಲ್ಲಿ ಚರ್ಚಗೆ ಹೋಗುವ ದಾರಿ ಹತ್ತಿರ ಇಳಿಜಾರು ರಸ್ತೆಯಲ್ಲಿ ಅಟೋ ವೇಗದಲ್ಲಿ ಡಾಂಬರ ರಸ್ತೆಯ ಎಡಭಾಗದಲ್ಲಿ ಇಳಿದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದಲ್ಲಿ ಪಲ್ಟಿಯಾಗಿದ್ದರಿಂದ ನಮ್ಮ ತಂದೆಯವರ ತಲೆಗೆ ಹಾಗು ಎದೆಗೆ ಭಾರಿಒಳಪೆಟ್ಟಾಗಿದ್ದು, ಮೈಯಲ್ಲಿ ಅಲ್ಲಲ್ಲಿ ಗಾಯಗಳಾಗಿದ್ದರಿಂದ ನಾವು ಸ್ಥಳಕ್ಕೆ ಹೋಗಿ ನನ್ನ ತಂದೆಯವರಿಗೆ ಕಕ್ಕೇರಾ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿಕೊಂಡು ಅಲ್ಲಿಂದ ಲಿಂಗಸೂಗೂರ ಸಕರ್ಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ, ಪುನಃ ಅಲ್ಲಿಂದ ಬಾಗಲಕೋಟ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕೊಡಿಸಿ, ನಂತರ ಬಾಗಲಕೋಟ ನಲ್ಲಿರುವ ಆಶಿವರ್ಾದ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿಸಿ ಉಪಚಾರ ಕೊಡಿಸಿರುತ್ತೇವೆ. ಆದರೂ ಸಹ ನಮ್ಮ ತಂದೆಯವರಿಗೆ ಪ್ರಜ್ಞೆ ಬರಲಾರದ ಕಾರಣ ಹೈದ್ರಾಬಾದ ಕರೆದುಕೊಂಡು ಹೋಗಬೆಕೆಂದು ವಿಚಾರಿಸಿಕೊಂಡು ಇಂದು ದಿಃ 17/02/2019 ರಂದು ಬೆಳೆಗಿನ ಜಾವ ಆಶಿವರ್ಾದ ಆಸ್ಪತ್ರೆಯಿಂದ ನಮ್ಮ ತಂದೆಯವರಿಗೆ ಬಿಡುಗಡೆ ಮಾಡಿಕೊಂಡು ಅಂಬ್ಯೂಲೇನ್ಸ್ ವಾಹನದಲ್ಲಿ ಹಾಕಿಕೊಂಡು ಬರುವಾಗ ಮುಂಜಾನೆ 11 ಗಂಟೆಯ ಸುಮಾರಿಗೆ ಲಿಂಗಸೂಗೂರ ಹತ್ತಿರ ಅಂಬ್ಯೂಲೇನ್ಸ್ ವಾಹನದಲ್ಲಿಯೇ ನಮ್ಮ ತಂದೆಯವರು ಮೃತಪಟ್ಟಿರುತ್ತಾನೆ. ಹಾಗು ಅಪಘಾತ ಪಡಿಸಿದ ಬಳಿಕ ಚಾಲಕನು ಅಟೋ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿದ್ದು ಆತನ ಹೆಸರು, ವಿಳಾಸ ಗೊತ್ತಾಗಿರುವದಿಲ್ಲ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 47/2019 ಕಲಂ. 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!