ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-02-2019

By blogger on ಶುಕ್ರವಾರ, ಫೆಬ್ರವರಿ 15, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-02-2019 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 24/2019 ಕಲಂ 379 ಐಪಿಸಿ :- ದಿನಾಂಕ 14/02/2019 ರಂದು ಬೆಳಿಗ್ಗೆ 7-30 ಎ.ಎಂ.ಕ್ಕೆ ಹೊರುಂಚಾ  ಗ್ರಾಮದ ಸೀಮೆಯಲ್ಲಿ ಬರುವ ಸರಕಾರಿ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತನಾದ ಲಾರಿ ಮಾಲೀಕ ಮತ್ತು ಚಾಲಕನಾದ ಶಮಕ್ರಪ್ಪ ತಂದೆ ನೂರಂದಪ್ಪ ಸಾಃ ಅನವಾರ ಇತನು ತನ್ನ ಲಾರಿ ನಂ ಕೆ.ಎ-29-9535 ನೆದ್ದರಲ್ಲಿ ಮರಳು ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.

ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 12/2019 ಕಲಂ 279,338,304(ಎ) ಐಪಿಸಿ :- ಪಿಯರ್ಾದಿ ಮತ್ತು ಆರೊಪಿತನು ಇಬ್ಬರು ಕೂಡಿಕೊಂಡು ಆರೊಪಿತನ ಮೊಟರ ಸೈಕಲ ನಂ ಕೆಎ-32 ಎಎಫ್-3157 ರ ಮೇಲೆ ತಮ್ಮೂರಿನಿಂದ ಬೆಂಗಳೂರಿಗೆ ಮೊಟರ ಸೈಕಲ ಮೇಲೆ ಹೊಗುವಾಗ ಇಂದು ದಿನಾಂಕ :14-02-2019 ರಂದು ಆರೊಪಿತನು ಬಳಿಚಕ್ರ ಮತ್ತು ನಾಗ್ಲಾಪುರ ರಸ್ತೆ ಮಧ್ಯೆ ತಾನು ನಡೆಸುವ ಮೊಟರ ಸೈಕಲನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಮದ ನಡೆಸಿ ರೋಡಿನ ಪಕ್ಕದ ತೆಗ್ಗಿಗೆ ಹೊಗಿ ಮೊಟರ ಸೈಕಲನ್ನು ಬೀಲಿಸಿದಾಗ ಪಿಯರ್ಾದಿ ಮತ್ತು ಆರೊಪಿತರಿಬ್ಬರು ಕೆಳಗೆ ಬಿದ್ದು ಇಬ್ಬರಿಗೆ ಭಾರಿ ರಕ್ತ ಗಾಯ ಮತ್ತು ಸಾದಾ ಗಾಯಗಳಾದ ಬಗ್ಗೆ ಅಪರಾಧ. ಸದರಿ ಪ್ರಕರಣದಲ್ಲಿ ಉಪಚಾರ ಪಡೆಯುತಿದ್ದ ಆರೊಪಿತನಾದ ಮಾಳಪ್ಪ ತಂದೆ ಭಿರಪ್ಪ ಇತನು ರಾಯಚೂರಿನ ರೀಮ್ಸ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೇ ಇತನು ಇಂದು ದಿನಾಂಕ:14-02-2019 ರಂದು 11.30 ಎಎಮ್ ಕ್ಕೆ ಮೃತಪಟ್ಟಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ 304 (ಎ) ಐಪಿಸಿ ನೇದ್ದನ್ನು ಆಳವಡಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 39/2019 ಕಲಂ: 279, 337 ಐಪಿಸಿ 185 ಐ.ಎಮ್.ವಿ ಆಕ್ಟ್:- ದಿನಾಂಕ : 14.02.2019 ರಂದು ಸಂಜೆ ಸಂಜೆ 4:15 ಗಂಟೆಗೆ ಆರೋಪಿ ಶ್ರೀನಿವಾಸ ಈತನು ಕುಡಿದ ಅಮಲಿನಲ್ಲಿ ತಮ್ಮ ಕೆಂಪು ಬಣ್ಣದ ಸಿ.ಡಿ-100 ಮೋಟಾರ ಸೈಕಲ ನಂ ಂಊಘಿ4235 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಅಪಘಾತಪಡಿಸಿದ್ದು ಅಪಘಾತದ ಪರಿಣಾಮವಾಗಿ ಹಿಂಬದಿಯಸವಾರ ಮತ್ತು ಫಿರ್ಯಾದಿ ಆನಂದಪ್ಪ ತಂದೆ ತಿಮ್ಮಪ್ಪ ಮ್ಯಾತ್ರಿ ವ|| 56 ವರ್ಷ ಜಾ||ಮಾದಿಗ ಉ||ಒಕ್ಕಲುತನ ಸಾ||ಚಿನ್ನಾಕಾರ ತಾ||ಗುರುಮಠಕಲ್ ಜಿ||ಯಾದಗಿರಿ ಈತನಿಗೆ ಬಗೈಯಲ್ಲಿ ಗಾಯವಾಗಿದ್ದು ಆ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ನಂ: 39/2019 ಕಲಂ: 279, 337 ಐಪಿಸಿ 185 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 16/2019 ಕಲಂ: 279, 338 ಐಪಿಸಿ :- ದಿನಾಂಕ: 14/02/2019 ರಂದು 06.30 ಪಿಎಎಂ ಕ್ಕೆ ಅಜರ್ಿದಾರರಾದ ಶ್ರೀ. ಮಲ್ಲಪ್ಪ ತಂದೆ ಭಿಮರಾಯ ಜಾಲಹಳ್ಳಿ ವಯಾ:50 ವರ್ಷ ಉ; ಒಕ್ಕಲುತನ ಜಾ: ಕುರುಬರ ಸಾ: ಹೋಸ್ಕೇರಾ ತಾ: ಶಹಾಪುರ ಜಿ: ಯಾದಗಿರಿ ರವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದು ಸದರಿ ಅಜರ್ಿಸಾರಂಶ ಏನಂದರೆ, ಮಲ್ಲಪ್ಪ ತಂದೆ ಭಿಮರಾಯ ಜಾಲಹಳ್ಳಿ ವಯಾ:50 ವರ್ಷ ಉ; ಒಕ್ಕಲುತನ ಜಾ: ಕುರುಬರ ಸಾ: ಹೋಸ್ಕೇರಾ ತಾ: ಶಹಾಪುರ ಜಿ: ಯಾದಗಿರಿ ಈ ಮೂಲಕ ಮಾನ್ಯರವರಲ್ಲಿ ವಿನಂತಿ ಮಾಡಿಕೊಲ್ಳುವದೆನಂದರೆ, ನಾನು ಹೆಂಡತಿ ಮಕ್ಕಳ ಜೋತೆಯಲ್ಲಿ ಕಕ್ಕಸಗೆರಾ ರೋಡಿನ ಹತ್ತಿರದಲ್ಲಿ ಇರುವ ನಮ್ಮ ಹೊಲದಲ್ಲಿಯೇ ಗುಡಿಸಲು ಮನೆ ಮಾಡಿಕೊಂಡು ಉಪಜೀವಿಸುತ್ತೇನೆ. ಮತ್ತು ಉರಲ್ಲಿ ಮನೆ ಕಟ್ಟಿಸುತ್ತಿದ್ದೇನೆ. ನಾನು ನಮ್ಮ ಕಟ್ಟುತ್ತಿರುವ ಮನೆಯ ಹತ್ತಿರನೆ ಇರುತ್ತೆನೆ. ಹೀಗಿದ್ದು ನನ್ನ ಮಗ ಆನಂದ ತಂದೆ ಮಲ್ಲಪ್ಪ ಜಾಲಹಳ್ಳಿ ವಯಾ: 21 ಈತನು ದಿನಾಂಕ:11/02/2019 ರಂದು ಬೆಳಿಗ್ಗೆ 06.45 ಎಎಂ ಸುಮಾರಿಗೆ ನಮ್ಮ ಹೊಲದಲ್ಲಿಯ ಗುಡಿಸಲು ಮನೆಯಿಂದ ಹೊಸ್ಕೇರಾ ಊರಲ್ಲಿ ಕಟ್ಟುತ್ತಿರುವ ನಮ್ಮ ಹೊಸ ಮನೆಗೆ ನೀರ ಹೊಡೆಯಲು ಅಂತಾ ನಮ್ಮ ಮೋಟಾರ ಸೈಕಲ ನಂ; ಕೆಎ-33-ಎಸ್-3389 ನೆದ್ದನ್ನು ತಗೆದುಕೊಂಡು ಬರುತ್ತಿರುವದಾಗಿ ನನಗೆ ತಿಳಿಸಿದ ಆಗ ನಾನು ನಮ್ಮ ಹೊಸ ಮನೆಯಲ್ಲಿ ನೀರು ಹೊಡೆಯುತ್ತಿದ್ದೆ, ನಂತರ ಸಮಯದಲ್ಲಿಯೇ ನಮ್ಮ ಓಣಿಯ ಸಕ್ರೆಪ್ಪ ತಂದೆ ಈಶ್ವರಪ್ಪ ಹೂಗಾರ ಇವರು ನಿಮ್ಮ ಮಗನಿಗೆ ಕಕ್ಕಸಗೇರಾ ದಾರಿಯಲ್ಲಿ ಮನೆಯಿಂದ ಬರುವಾಗ 07.00 ಎಎಂ ಕ್ಕೆ ಒಂದು ಕಾರು ಡಿಕ್ಕಿ ಮಾಡಿದ್ದರಿಂದ ರೋಡಿನಲ್ಲಿ ಬಿದ್ದಿದ್ದಾನೆ ಅಂತಾ ತಿಳಿಸಿದ ಕೂಡಲೆ ನಾನು. ಮತ್ತು ಗಂಗಪ್ಪ ತಂದೆ ಭಿಮರಾಯ ನಾಗನಟಗಿ, ನಮ್ಮ ಅಳಿಯ ಮಲ್ಲಪ್ಪ ತಂದೆ ಬಸ್ಸಪ್ಪ ದರಿಯಾಪೂರ ಸಾ; ಬಾದ್ಯಾಪುರ ಎಲ್ಲರೂ ಕೂಡಿ ಕಕ್ಕಸಗೇರಾ ರೋಡಿನಲ್ಲಿ ಹೊಗಿ ನೊಡಲಾಗಿ ಹೊಸ್ಕೆರಾ ದಿಂದ ಕಕ್ಕಸಗೇರಾ ಹೋಗುವ ರೋಡಿನ ಸಂಗಯ್ಯ ಕಲಾಲ ಇವರ ಹೊಲದ ಹತ್ತಿರ ರೋಡಿನಲ್ಲಿ ನನ್ನ ಮಗ ಮೋಟಾರ ಸೈಕಲ ನಂ: ಕೆಎ-33 ಎಸ್.3389 ನೆದ್ದರ ಮೇಲೆ ಬರುವಾಗ ಎದುರಿನಿಂದ ಬಂದ ಕಾರ ನಂ: ಕೆಎ-17-ಎನ್-6676 ನೆದ್ದರ ಚಾಲಕ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮಗನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡೆಸಿದ್ದು ಅದರಿಮದ ನನ್ನ ಮಗ ಆನಂದ ಈತನಿಗೆ ಬಲಗೈ ಮುಂಗೈ ಹತ್ತಿರ ರಕ್ತಗಾಯ ಮತ್ತು ಬಲಗಾಲಿನ ಮೋಲಕಾಲಿನ ಕೆಳಗೆ ಪಾದದ ವರೆಗೆ ಭಾರಿ ಗುಪ್ತಗಾಯ ಮತ್ತು ತರಚಿದ ಗಾಯ ಆಗಿರುತ್ತದೆ. ಸದರಿ ಅಪಘಾತ ಮಾಡಿದ ಕಾರ ಚಾಲಕಿನಿಗೆ ವಿಚಾರಿಸಿದಾಗ ಆತನು ತನ್ನ ಹೆಸರು ನಿಂಗಪ್ಪ ತಂದೆ ಅಂಬ್ರಪ್ಪ ಸೊನ್ನದ ವ;30 ಜಾ; ನೆಕಾರ ಉ: ಡ್ರೈವರ ಸಾ: ದೊಡ್ಡ ಸಗರ ತಾ: ಶಹಾಪೂರ ಅಂತಾ ತಿಳಿಸಿದನು. ಸದರಿ ಚಾಲಕ ನಿಂಗಪ್ಪ ಮತ್ತು ನಮ್ಮ ಅಳಿಯ ಮಲ್ಲಪ್ಪ ದರಿಯಾಪೂರ ಮತ್ತು ನಾನು ನಮ್ಮ ಮಗನಿಗೆ ಮೋಟಾರ ಸೈಕಲಗಳ ಮೇಲೆ ಶಹಾಪೂರಕ್ಕೆ ಬಂದು ಅಲ್ಲಿಂದ ಖಾಸಗಿ ವಾನ ಮೂಲಕ ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಮಾಡಿಸಿ ನಂತರ ಅವಿನಾಶ ಅಸ್ಪತ್ರೆ ಯಲ್ಲಿ ಉಪಚಾರ ಮಾಡಿಸಿದ್ದು ಇರುತ್ತದೆ. ನಮ್ಮ ಮಗನಿಗೆ ಉಪಚಾರಕ್ಕೆ ಸೇರಿಕೆ ಮಾಡಿ ತಡವಾಗಿ ಇಂದು ದಿನಾಂಕ: 14/02/2019 ರಂದು 06.30 ಪಿಎಂ ಕ್ಕೆ ಗೋಗಿ ಠಾಣೆಗೆ ನಮ್ಮೂರಿನ ಸಕ್ರೆಪ್ಪ ತಂದೆ ಈಶ್ವರಪ್ಪ ಹೂಗಾರ ಸಾ; ಹೋಸಕೇರಾ ಇವರೊಂದಿಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. 
      ಕಾರಣ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಮಾಡಿದ ಕಾರ ನಂ: ಕೆಎ-17-ಎನ್-6676 ನೆದ್ದರ ಚಾಲಕ ನಿಂಗಪ್ಪ ತಂದೆ ಅಂಬ್ರಪ್ಪ ಸೊನ್ನದ ವ;30 ಜಾ; ನೇಕಾರ ಉ: ಡ್ರೈವರ ಸಾ: ದೊಡ್ಡ ಸಗರ ತಾ: ಶಹಾಪೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 16/2019 ಕಲಂ:279,338 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 40/2019  ಕಲಂ 279,338 ಐ.ಪಿ.ಸಿ. :- ದಿನಾಂಕ:14-02-2019 ರಂದು 4 ಪಿ.ಎಂ. ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರಿ ಅಡೆಪ್ಪ ತಂದೆ ಶಿವರಾಜ ಹೂಗಾರ ಸಾ:ಕಡಗಂಚಿ ಹಾವ:ಜಯನಗರ ಕಲಬುರಗಿ ಇವರು ಠಾಣೆಗೆ ಬಂದು ಒಂದು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ:08-02-2019 ರಂದು ಸಾಯಂಕಾಲ ಸುಮಾರಿಗೆ ನಾನು ನಮ್ಮ ನಮ್ಮ ತಾಯಿಯಾದ ಶ್ರೀಮತಿ ರಾಜಶ್ರೀ ಮನೆಯಲ್ಲಿರುವಾಗ ನಮ್ಮ ತಂದೆಯಾದ ಶಿವರಾಜ ಹಾಗೂ ನಮ್ಮ ಕಾಕನಾದ ಶ್ರೀಶೈಲ ಇಬ್ಬರು ಕೂಡಿ ಸುರಪುರ ತಾಲೂಕಿನ ಶ್ರೀ ತಿಂಥಣಿ ಮೌನೇಶ್ವರ ಜಾತ್ರೆಗೆ ಪಾದಯಾತ್ರೆ ಮೂಲಕ ಹೋಗಿ ಬರುತ್ತೇವೆ ಅಂತಾ ಮನೆಯಿಂದ ಹೇಳಿ ಹೋಗಿದ್ದರು. ಹೀಗಿದ್ದು ದಿನಾಂಕ:12-02-2019 ರಂದು ರಾತ್ರಿ   9-30 ಗಂಟೆ ಸುಮಾರಿಗೆ ನಾನು ಕಲಬುರಗಿಯ ಮನೆಯಲ್ಲಿರುವಾಗ ತಿಂಥಣಿ ಜಾತ್ರೆಗೆ ಹೊಗಿದ್ದ ನಮ್ಮ ಕಾಕನಾದ ಶೀಶ್ರೈಲ ಇವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಾನು ಅಣ್ಣ ಶಿವರಾಜ ಇಬ್ಬರು ಕೂಡಿ ಕಲಬುರಗಿಯಿಂದ ಪಾದಯಾತ್ರೆ ಮುಖಾಂತರ ದಿನಾಂಕ:12-02-2019 ರಂದು ಮಧ್ಯಾಹ್ನ ಸುಮಾರಿಗೆ ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದುಕೊಂಡು ನಂತರ ಅಡವಿ ತಾತಾನ ಹತ್ತಿರ ಹೋಗಿ ಬರಬೇಕು ಅಂತಾ ಸುರಪುರ-ಲಿಂಗಸೂರು ಮುಖ್ಯ ರಸ್ತೆಯ ತಿಂಥಣಿ ಬ್ರಿಜ್ಜಿನ ರಸ್ತೆಯ ಎಡ ಪಕ್ಕದಲ್ಲಿ ಇಬ್ಬರು 9 ಪಿ.ಎಂ.ಸುಮಾರಿಗೆ ನಡೆದುಕೊಂಡು ಹೋಗುತ್ತಿರುರುವಾಗ ಹಿಂದಿನಿಂದ ಅಂದರೆ ಸುರಪುರ ಕಡೆಯಿಂದ ಒಬ್ಬ ಮೊಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲ್ನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದವನೆ ನಡೆದುಕೊಂಡು ಹೊಗುತ್ತಿದ್ದ ಅಣ್ಣ ಶಿವರಾಜ ಈತನಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಮೊಟಾರ ಸೈಕಲ್ ಸಮೇತ ತಾನು ಕೆಳಗೆ ಬಿದ್ದಿದ್ದು ಅಲ್ಲೆ ಹೋಗುತ್ತಿದ್ದ ನಾನು ಕೆಳಗೆ ಬಿದ್ದ ಅಣ್ಣ ಶಿವರಾಜನನ್ನು ಎಬ್ಬಿಸಿ ನೋಡಲು ಅಣ್ಣ ಶಿವರಾಜನ ಎಡಗಾಲ ಮೊಳಕಾಲ  ಕೇಳಗೆ ಕಾಲು ಮುರಿದು, ಎಡಗೈಗೆ ಮುಂಗೈ ಹತ್ತಿರ ತೆರಚಿದ ರಕ್ತಗಾಯವಾಗಿದ್ದವು. ಮೋಟಾರ ಸೈಕಲ್ ಸವಾರನಿಗೆ ವಿಚಾರಿಸಿ ನೋಡಲು ಅವನ ಹೆಸರು ಆಂಜನೆಯ ತಂದೆ ಮಲ್ಲಪ್ಪ ಮಾನವಿ ವಯಾ:25 ವರ್ಷ ಜಾತಿ:ಬೇಡರ ಸಾ:ಮಾನವಿ ಇದ್ದು, ಅವನಿಗೂ ಕೂಡಾ ಮೂಗಿಗೆ, ಬಲಗಡೆ ಕಣ್ಣಿನ ಹತ್ತಿರ, ಬಲಗಾಲಿಗೆ ತೆರಚಿದ ರಕ್ತಗಾಯವಾಗಿದ್ದು ಮೊಟಾರ ಸೈಕಲ್ ನಂಬರ ಕೆಎ-36, ಜೆ-4352 ಇರುತ್ತದೆ. ಗಾಯಗೊಂಡ ಇಬ್ಬರನ್ನು 108 ಅಂಬುಲೇನ್ಸ ವಾಹನ ಕರೆಯಿಸಿದ ಉಪಚಾರ ಕುರಿತು ಕರೆದುಕೊಂಡು ಹೊರಟಿದ್ದು, ಕಲಬುರಗಿಗೆ ಬರುತ್ತೆವೆ ಅಂತಾ ವಿಷಯ ತಿಳಿಸಿದ್ದು, ಇಬ್ಬರನ್ನು ಸುರಪುರ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು ದಿನಾಂಕ:13-02-2019 ರಂದು 2 ಎ.ಎಂ.ಸುಮಾರಿಗೆ ಕಲಬುರಗಿಯ ಜಯದೇವ ಆಸ್ಪತ್ರೆಗೆ ಬಂದಿದ್ದು ನಾನು ನಮ್ಮ ತಾಯಿಯಾದ ಶ್ರೀ ಮತಿ ರಾಜಶ್ರೀ ಮಾವನಾದ ಮಂಜುನಾಥ ಹೂಗಾರ ಎಲ್ಲರೂ ಕೂಡಿ ತಂದೆ ಶಿವರಾಜನಿಗೆ ನೋಡಲು ಮೇಲೆ ಹೇಳಿದಂತೆ ಗಾಯಗಳಾಗಿದ್ದನ್ನು ನೋಡಿದ್ದು ಇರುತ್ತದೆ. ಸದರಿ ಅಪಘಾತವು  ಮೊಟಾರ ಸೈಕಲ್ ಸವಾರನಾದ ಆಂಜನೇಯ ಈತನು ತನ್ನ ಮೊಟಾರ ಸೈಕಲ್ನ್ನು  ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ನಮ್ಮ ತಂದೆ ಡಿಕ್ಕಿ ಪಡಿಸಿದ್ದರಿಂದ ಸಂಬವಿಸಿದ್ದು ಇರುತ್ತದೆ. ವೈಧ್ಯಾಧಿಕಾರಿಗಳು ನಮ್ಮ ತಂದೆಯ ಕಾಲಿಗೆ ನಿನ್ನೆ ಆಪರಶನ್ ಮಾಡಿದ್ದರಿಂದ ನಾನು ಆಸ್ಪತ್ರೆಯಲ್ಲಿಯೆ ಇದ್ದು.ಠಾಣೆಗೆ ತಡವಾಗಿ ಬಂದಿದ್ದು ಇರುತ್ತದೆ. ಮೊಟಾರ ಸೈಕಲ್ ಚಾಲಕ ಆಂಜನೆಯ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!