ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 14-02-2019

By blogger on ಗುರುವಾರ, ಫೆಬ್ರವರಿ 14, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 14-02-2019 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 23/2019 ಕಲಂ 379 ಐಪಿಸಿ :- ದಿನಾಂಕ 13/02/2019 ರಂದು ಮಧ್ಯಾಹ್ನ 2-30 ಪಿ.ಎಂ.ಕ್ಕೆ ಹೊರುಂಚಾ  ಗ್ರಾಮದ ಸೀಮೆಯಲ್ಲಿ ಬರುವ ಸರಕಾರಿ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತನಾದ ಟ್ರ್ಯಾಕ್ಟರ ಮಾಲೀಕ ಮತ್ತು ಟ್ರ್ಯಾಕ್ಟರ ಚಾಲಕನಾದ ಅಜ್ಜಪ್ಪ ಇತನು ತನ್ನ ಟ್ರ್ಯಾಕ್ಟರ ಇಂಜಿನ ನಂ ಕೆ.ಎ-33-ಟಿಎ-4985 ಮತ್ತು ಟ್ರ್ಯಾಲಿಗೆ ನಂಬರ ಇರುವದಿಲ್ಲ ನೆದ್ದರಲ್ಲಿ ಮರಳು ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 36/2019 ಕಲಂ: 273, 284 ಐಪಿಸಿ ಮತ್ತು  32, 34 ಕೆ.ಇ ಆಕ್ಟ್ :- ದಿನಾಂಕ 13.02.2019 ರಂದು ಬೆಳಿಗ್ಗೆ 8:00 ಗಂಟೆಗೆ ಆರೋಪಿತರು ಚಂಡ್ರಕಿ ಗ್ರಾಮದ ಗಜಲಮ್ಮ ದೇವಿ ಗುಡಿಯ ಹತ್ತಿರ ರೋಡಿನ ಮೇಲೆ ಅಕ್ರಮವಾಗಿ ಮಾನವನು ಸೇವಿಸಿದರೆ ಜೀವಕ್ಕೆ ಹಾನಿಯುಂಟಾಗುವ ರಾಸಾಯನೀಕ ಸಿ.ಹೆಚ್. ಪುಡಿಯಿಂದ ತಯಾರಿಸಿದ ಹೆಂಡವನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆತನ ವಶದಲ್ಲಿದ್ದ ಒಟ್ಟು 80 ಲೀಟರ ಹೆಂಡ ಹೀಗೆ ಒಟ್ಟು 2400/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 36/2019 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆದಾಖಲಿಸಿಕೊಂಡೆನು.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:-37/2019 ಕಲಂ:143,147,323,354,504,506 ಸಂ 149 ಐಪಿಸಿ :- ದಿನಾಂಕ 13.02.2019 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಮಾನ ಭಂಗ ಮಾಡಲು ಯತ್ನಿಸಿದ್ದು ಹಾಗೂ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ಠಾಣೆಗೆ ಬಂದು ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 36/2019 ಕಲಂ ಕಲಂ:143, 147, 323, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 38/2019 ಕಲಂ: 323, 324, 504, 506 ಐಪಿಸಿ:-ದಿನಾಂಕ 13.02.2019 ರಂದು ಬೆಳಿಗ್ಗೆ 11:00 ಗಂಟೆಗೆ ಆರೋಪಿತಳು ಬೂದೂರು ಗ್ರಾಮದ ಅಂಬೇಡ್ಕರ ಮೂತರ್ಿಯ ಹತ್ತಿರ ಖೂಲ್ಲಾ ಸ್ಥಳದಲ್ಲಿ ಕಟ್ಟಿಗೆ ಹಾಕಿದ್ದು ಫಿರ್ಯಾದಿಯು ಅವುಗಳನ್ನು ತೆಗೆಯುತಿದ್ದಾಗ ಆರೋಪಿತಳು ಫಿರ್ಯಾದಿಗೆ ಅವಾಚ್ಯವಾಗಿ ಬೈದು, ಕಲ್ಲಿನಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 38/2019 ಕಲಂ: 323, 324, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 15/2019 ಕಲಂ: 279, 337, 338 ಐಪಿಸಿ :- ದಿನಾಂಕ: 13/02/2019 ರಂದು 01.30 ಪಿಎಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪುರ ದಿಂದ ದೂರವಾಣಿ ಮೂಲಕ ಆರ್.ಟಿ.ಎ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಭಿಮಣ್ಣ ಹೆಚ್.ಸಿ-146 ಆಹಾಪುರ ಆಸ್ಪತ್ರೆಗೆ ಬೇಟಿ ಮಾಡಿ ಎಲ್ಲಾ ಗಾಯಾಳುದಾರರಿಗೆ ಬೇಟಿ ಮಾಡಿ ಗಾಯಾಳುಪಿಯರ್ಾದಿ ನಾಗಮ್ಮ ಗಂಡ ಮಲ್ಲೇಶಿ ಲಗಳೆರು ವಯಾ; 28 ಜಾ: ಕುರುಬರ ಸಾ: ನಾಲವಡಗಿ ತಾ: ಶಹಾಪೂರ ಜಿ: ಯಾದಗಿರಿಹೇಳಿಕೆ ನೀಡಿದ್ದು ಸದರಿ ಹೇಳಿಕೆ ಸಾರಂಶ ಏನಂದರೆ, ನಾನು ಮೇಲಿನ ವಿಳಾಸದ ನಿವಾಸಿತಳಿದ್ದು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ನಮ್ಮ ತವರೂರಾದ ರಾಜಾಪೂರ ಗ್ರಾಮದಲ್ಲಿ ನಮ್ಮ ದೊಡ್ಡಪ್ಪನ ಮಗ ತಿಪ್ಪಣ್ಣ ತಂದೆ ಅಂಬ್ಲಪ್ಪ ದುರ್ಗದ ಇವರು ಸಗರ ಯಲ್ಲಮ್ಮ ದೇವಿಯ ದೇವರು ಕಾರ್ಯಕ್ರಮ ಮಾಡಿದ್ದರು. ಅದಕ್ಕಾಗಿ ನಾನು ಮತ್ತು ನನ್ನ ಮಗನಾದ ಶಿವು ತಂದೆ ಮಲ್ಲೇಶಿ ಲಗಳೇರ ವಯಾ:10 ವರ್ಷ ಈತನೊಂದಿಗೆ ರಾಜಾಪೂರ ಗ್ರಾಮಕ್ಕೆ ಬಂದಿದ್ದೆನು. ನಿನ್ನೆ ದಿನಾಂಕ:12/02/2019 ರಂದು ನಾನು ಮತ್ತು ನನ್ನ ಮಗ ಶಿವು, ನನ್ನ ತಂದೆ ನಾಗಪ್ಪ ತಂದೆ ಮಲ್ಲಪ್ಪ ಹುಲಕಲ ಎಲ್ಲರೂ ನಮ್ಮುರಿನ ಅಟೋದಲ್ಲಿ ಸಗರ ಯಲ್ಲಮ್ಮ ದೇವಿಯ ದೇವರು ಕಾರ್ಯಕ್ರಮಕ್ಕೆ ಹೋಗಿದ್ದೇವು. ನಿನ್ನೆ ರಾತ್ರಿ ದೇವರು ಕಾರ್ಯಕ್ರಮ ಮುಗಿಸಿಕೊಂಡು ಇಂದು ದಿನಾಂಕ;13/02/2019 ರಂದು ಮರಳಿ ರಾಜಾಪೂರಕ್ಕೆ ಸದರಿ ನಾವು ಹೊಗಿದ್ದ ಅಟೋ ಟಂಟಂ ನಂ: ಕೆಎ-33ಎ-8634 ನೆದ್ದರಲ್ಲಿ ಬರುತ್ತಿದ್ದಾಗ, ನಮ್ಮ ಅಟೋ ಚಾಲಕ ಹಣಮಂತ್ರಾಯ ತಂದೆ ಈರಣ್ಣ ಸಾ: ರಾಜಾಪೂರ ಈತನು ಗಂಗನಾಳ ದಾಟಿದ ನಂತರ ತನ್ನ ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಿದ್ದನು ಆಗ ನಾವು ನಿದಾನ ನಿದಾನ ಅಂತಾ ಹೇಳಿದರೂ ಕೇಳದೆ ಹಾಗೇ ನಡೆಸುತ್ತಿದ್ದನು. ಅಂದಾಜು 10.00 ಎಎಂ ಸುಮಾರಿಗೆ ಶೆಟ್ಟಿಕೇರಾ ಕೆರಿಯ ಒಡ್ಡಿನ ಮೇಲೆ ಬಂದಾಗ ಎದುರುಗಡೆಯಿಂದ ಒಂದು ಮೋಟಾರ ಸೈಕಲ್ ನೇದ್ದರ ಚಾಲಕನು ಕೂಡ ತನ್ನ ಮೋಟಾರ ಸೈಕಲ ಮೇಲೆ ಇನ್ನು ಇಬ್ಬರನ್ನು ಕೂಡಿಸಿಕೊಂಡು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತ ಬರುತ್ತಿದ್ದನು. ಇಬ್ಬರು ವಾಹನ ಚಾಲಕರು ತಮ್ಮ ತಮ್ಮ ವಾಹನಗಳನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತ ಮುಖಾಮುಖಿಯಾಗಿ ಡಿಕ್ಕಿ ಮಾಡಿದ್ದರಿಂದ ಮೋಟಾರ ಸೈಕಲ ಅಟೋಕ್ಕೆ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದು ಅದರಿಂದ ಅಟೋದಲ್ಲಿ ಕುಳಿತಿದ್ದ ನನಗೆ ಮೋಳಕಾಲಿಗೆ ಮತ್ತು ಎದೆಗೆ ಗುಪ್ತ ಪೆಟ್ಟಾಗಿದ್ದು ನನ್ನು 10 ವರ್ಷದ ಮಗ ಶಿವು ಈತನಿಗೆ ಎದೆಯ ಬಲಗಡೆ ಒಳಪೆಟ್ಟು ಆಗಿದ್ದು, ತಲೆಗೆ ಬಲಭಾಗದ ಕಿವಿ ಮೇಲಿನ ಭಾಗದಲ್ಲಿ ಒಳಪೆಟ್ಟು ಆಗಿರುತ್ತದೆ. ಮೋಟಾರ ಸೈಕಲ ಮೇಲೆ ಬಂದವರಲ್ಲಿ ವಿಚಾರಿಸಾದ ಮೋಟಾರ ಸೈಕಲ ನಡೆಸಿದಾತನ ಹೆಸರು ಬಲಭೀಮ ತಂದೆ ಬಾಬಣ್ಣ ಕರಿಗುಡ್ಡ ವಯಾ:25 ಸಾ: ಸಿದ್ದಾಪೂರ ತಾ: ಸುರಪೂರ ಅಂತಾ ತಿಳಿಸಿದ್ದು ಸದರಿಯವನಿಗೆ ಯಾವುದೆ ಗಾಯಗಳಾಗಿರಲಿಲ್ಲ. ಹಿಂದೆ ಕುಳಿತವರಿಗೆ ವಿಚಾರಿಸಿದಾಗ ಮದ್ಯದಲ್ಲಿ ಕುಳಿತವನ ಹೆಸರು ದೇವಪ್ಪ ತಂದೆ ಮರೆಪ್ಪ ಕಮತಗಿ ವಯಾ:26 ಸಾ: ಸಿದ್ದಾಪೂರ ತಾ:ಸುರಪೂರ ಅಂತಾ ಗೊತ್ತಾಗಿದ್ದು ಸದರಿಯವನಿಗೆ ಮುಖಕ್ಕೆ, ತುಟಿಗೆ ಮತ್ತು ಬಲಗೈ ಮೋಳಕೈ ಕೆಳಗೆ ತರಚಿದ ಗಾಯ ಆಗಿದ್ದು ಬಲಗಾಲಿನ ಮೊಳಕಾಲಿಗೆ ಭಾರಿ ರಕ್ತಗಾಯ ಆಗಿತ್ತು, ಹಾಗೂ ಬಲಗಾಲಿನ ಬೆಳುಗಳಿಗೆ, ಪಾದಕ್ಕೆ ರಕ್ತಗಾಯ ಆಗಿದ್ದವು. ಹಿಂದೆ ಕುಳಿತವನ ಹೆಸರು ಮೌನೇಶ ತಂದೆ ಮರೆಪ್ಪ ಕಮತಗಿ ವ;20 ವರ್ಷ ಸಾ; ಸಿದ್ದಾಪೂರ ಅಂತಾ ಗೊತ್ತಾಗಿದ್ದು, ಸದರಿಯವನಿಗೆ ಬಲಗಾಲಿನ ಮೊಳಕಾಲಿಗೆ ರಕ್ತಗಾಯ ಆಗಿತ್ತು, ಎಲ್ಲರು ಶಹಾಪುರ ಆಸ್ಪತ್ರೆಗೆ ಉಪಚಾರಕ್ಕೆ ಬಂದಿರುತ್ತೇವೆ. ಎದರಿನಿಂದ ಬಂದು ಅಪಘಾತ ಮಾಡಿದ ಮೋಟಾರ್ ಸೈಕಲ್ ನೋಡಲಾಗಿ ಅದರ ನಂ: ಕೆಎ-34-ಆರ್-2583 ಅಂತಾ ಇರುತ್ತದೆ. 1)ಅಟೋ ಟಂಟಂ ನಂ: ಕೆಎ-33 ಎ-8634 ನೆದ್ದರ ಚಾಲಕ ಹಣಮಂತ್ರಾಯ ತಂದೆ ಈರಣ್ಣ ಸಾ: ರಾಜಾಪುರ ಮತ್ತು ಮೋಟಾರ ಸೈಕಲ ಚಾಲಕ 2) ಮೋಟಾರ್ ಸೈಕಲ್ ನಂ: ಕೆಎ-34 ಎಫ್.2583 ನೇದ್ದರ ಚಾಲಕ ಬಲಭೀಮ ತಂದೆ ಬಾಬಣ್ಣ ಕರಿಗುಡ್ಡ ಸಾ: ಸಿದ್ದಾಪೂರ ಇವರು ಇಬ್ಬರು ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ಠಾಣೆಗೆ 06.30 ಪಿಎಂ ಕ್ಕೆ ಬಂದು ಠಾಣೆ ಗುನ್ನೆ ನಂ: 15/2019 ಕಲಂ:279,337,338 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಬಾವಿ ಪೊಲೀಸ್ ಠಾಣೆ ಗುನ್ನೆ ನಂ:- 18/2019 ಕಲಂ: ಮನುಷ್ಯ ಕಾಣೆಯಾದ ಬಗ್ಗೆ :- ದಿ: 13/02/19 ರಂದು ಶ್ರೀ ಗುತ್ತಪ್ಪ ತಂದೆ ಬಸಪ್ಪ ಕ್ಯಾತನಾಳ  ವಯಸ್ಸು 51 ಜಾತಿ: ಹಿಂದೂ ಕುರಬರ ಉ: ಒಕ್ಕಲುತನ ಸಾ: ಮುದನೂರ (ಕೆ) ತಾ: ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾಧಿ ಅಜರ್ಿ ಸಾರಾಂಶವೇನೆಂದರೆ, ನನಗೆ ನಾಲು ್ಕ ಜನ ಗಂಡು ಮಕ್ಕಳು ಇರುತ್ತಾರೆ. ಮೊದಲನೇಯವನು ಬಸವರಾಜ ತಂದೆ ಗುತ್ತಪ್ಪ ಕ್ಯಾತನಾಳ ವ|| 24 ಇದ್ದು ಸದರಿಯವನಿಗೆ ಸುಮಾರು ಎರಡು ವರ್ಷಗಳ ಹಿಂದೆ ಮದುವೆ ಮಾಡಿದ್ದು ಇರುತ್ತದೆ. ಮನೆಯಲ್ಲಿ ಏನಾದರೂ ವಿಷಯಕ್ಕೆ  ಬೈದರೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೇ ಹೋಗುತ್ತಿದ್ದನು ನಂತರ ಎರಡು ಮೂರು ದಿನಗಳಲ್ಲಿ ಮರಳಿ ಮನೆಗೆ ಬರುತ್ತಿದ್ದನು. ಹೀಗಿದ್ದು ದಿನಾಂಕ: 24/12/2018 ರಂದು ಬೆಳಿಗ್ಗೆ 11 ಗಂಟೆಗೆ ನನ್ನ ಮಗನಾದ ಬಸವರಾಜ ಈತನು ಸಂಸಾರದ ವಿಷಯದಲ್ಲಿ ಮನೆಯಲ್ಲಿ ನನ್ನೊಂದಿಗೆ ಜಗಳ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿಯವನು ಮರಳಿ ಮನೆಗೆ ಬಾರದೇ ಇರುವದರಿಂದ ಸದರಿಯವನು ಎಲ್ಲಿಯಾದರು ನಮ್ಮ ಸಂಬಂದಿಕರ ಊರಿಗೆ ಹೋಗಿರಬಹುದು ಅಂತ ತಿಳಿದು ಸುಮ್ಮನಿದ್ದು ಆದರೆ ನಮ್ಮ ಸಂಬಂದಿಕರಲ್ಲಿ ಫೋನ್ ಮಾಡಿ ವಿಚಾರಿಸಲು ಎಲ್ಲಿಯೂ ಬಂದಿರುವದಿಲ್ಲ ಅಂತ ತಿಳಿಸಿರುತ್ತಾರೆ.  ನಾನು ಸಹ ಶಹಾಪುರ, ಯಾದಗಿರಿ, ಸುರಪುರ ನಗರಗಳಿಗೆ ಭೇಟಿ ನೀಡಿ ಹುಡುಕಾಡಲಾಗಿ ಎಲ್ಲಿಯೂ ನನ್ನ ಮಗನು ಪತ್ತೆಯಾಗಿರುವದಿಲ್ಲ. ಇಲ್ಲಿಯವರೆಗೂ ನನ್ನ ಮಗನ ಪತ್ತೆ ಕುರಿತು ಎಲ್ಲ ಕಡೆ ಹುಡುಕಾಡಿದರೂ ಎಲ್ಲಿಯೂ ಸಿಗಲಿಲ್ಲವಾದ್ದರಿಂದ ಇಂದು ಮನೆಯಲ್ಲಿ  ವಿಚಾರಿಸಿ ತಡವಾಗಿ  ಠಾಣೆಗೆ ಹಾಜರಾಗಿ ಈ ಫಿಯರ್ಾದಿ ಅಜರ್ಿ ಸಲ್ಲಿಸಿದ್ದು ಇರುತ್ತದೆ. ನನ್ನ ಮಗ ಬಸವರಾಜ ಇವರ ಚಹರೆ ಪಟ್ಟಿ ಉದ್ದ ಮುಖ, ಗೋದಿ ಬಣ್ಣ, ನೀಟಾದ ಮೂಗು, ಸಾದಾರಣ ಮೈಕಟ್ಟು, ಎತ್ತರ 5.4 ಇದ್ದು ಸದರಿಯವನು ಮನೆಯಿಂದ ಹೋಗುವಾಗ  ತಿಳಿ ನೀಲಿ ಶರ್ಟ, ನೀಲಿ ಜೀನ್ಸ್ ಪ್ಯಾಂಟ್ ಉಟ್ಟುಕೊಂಡು ಹೋಗಿದ್ದು  ಇರುತ್ತದೆ.  ಕಾರಣ ನನ್ನ  ಮಗನು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋದವನು ಮರಳಿ ಬರದೆ ಎಲ್ಲಿಯೋ ಕಾಣೆಯಾಗಿದ್ದು ಸದರಿಯವನನ್ನು  ಹುಡುಕಿಕೊಡಲು ವಿನಂತಿ ಅಂತ ಕೊಟ್ಟ ಪಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 18/19 ಕಲಂ: ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು. 

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 09/2019 ಕಲಂ:78() ಕೆ ಪಿ ಆಕ್ಟ :- ದಿನಾಂಕ 12.02.2019 ರಂದು 6:30 ಪಿಎಮ್ ಕ್ಕೆ ಹುಣಸಗಿ ವೃತದ್ತ  ಸಿಪಿಐ ರವರಾದ  ಶ್ರೀ. ಪಂಡೀತ್  ಸಗರ ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಹಾಗೂ ತಾವು ಪೂರೈಸಿದ ಮಟಕಾ ಜೂಜಾಟದ ಅಸಲು ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ: 12.02.2019 ರಂದು 4:00 ಪಿ.ಎಮ್ ಗಂಟೆಗೆ ಉಪ-ಠಾಣೆ ಕಕ್ಕೆರಾದಲ್ಲಿದ್ದಾಗ  ಸೊನ್ನಾಪುರ ಸಣ್ಣ ತಾಂಡಾದಲ್ಲಿ ಮಹಿಬೂಬ ತಂದೆ ಸೋಪಿಸಾಬ್ ಸುರಪುರ ರವರ ಹೊಟೇಲ್ ಮುಂದಿನ ಸೊನ್ನಾಪುರ-ಏದಲಬಾವಿ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಬಾಂಬೆ ಮಟಕಾ ಎಂಬುವವ ಮಟಗಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದು. ಸದರಿ ದಾಳಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಬಸವರಾಜ ಪಿಸಿ-173 ರವರಿಗೆ ತಿಳೀಸಿದ್ದು ಬಸವರಾಜ ಪಿಸಿ ರವರು ಪಂಚರನ್ನಾಗಿ 1) ಟಿಪ್ಪುಸುಲ್ತಾನ ತಂದೆ ಅಲ್ಲಿಸಾಬ್ ಔರಾದಿ 2) ಸಾಹೇಬಣ್ಣ ತಂದೆ ನಿಂಗಪ್ಪ ಕ್ಯಾತನಾಳ ಸಾ: ಇಬ್ಬರೂ ಬಲಶೇಟ್ಟಿಹಾಳ ಇವರನ್ನು  4:10 ಪಿಎಮ್ ಕ್ಕೆ ಉಪ-ಠಾಣೆಗೆ ಕರೆದುಕೊಂಡಿ ಬಂದಿದ್ದು ಸದರಿಯವರಿಗೆ ವಿಷಯ ತಿಳಿಸಿ ಮಟಗಾ ಜುಜಾಟದ ಜಪ್ತಿ ಪಂಚನಾಮೆಗೆ ಪಂಚರಾಗಲು ಒಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರಾದ ಬಸವರಾಜ ಪಿಸಿ-173, ಶಿವರಾಜ ಪಿಸಿ-310, ಮತ್ತು ಜೀಪ್ ಚಾಲಕ ವಿಕಾಸ ಎಪಿಸಿ-144 ರವರನ್ನು ಮತ್ತು  ಪಂಚರೊಂದಿಗೆ ಉಪ-ಠಾಣೆಯಿಂದ 4.15 ಪಿಎಮ್ ಕ್ಕೆ ಬಿಟ್ಟು  ಬಾತ್ಮಿ ಬಂದ ಸ್ಥಳವಾದ ಸೊನ್ನಾಪುರ ಸಣ್ಣ ತಾಂಡಾದಲ್ಲಿ ಮಹಿಬೂಬ ತಂದೆ ಸೋಪಿಸಾಬ್ ಸುರಪುರ ರವರ ಹೊಟೇಲ್ ಮುಂದಿನ ಸೊನ್ನಾಪುರ-ಏದಲಬಾವಿ ರಸ್ತೆಯ ಮೇಲೆ  4.45 ಪಿಎಮ್ ಕ್ಕೆ ತಲುಪಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಎಲ್ಲರು ಕೆಳಗೆ ಇಳಿದು ಮರೆಮರೆಯಾಗಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ ಮಹಿಬೂಬ ಸುರಪುರ ರವರ ಹೊಟೇಲ್ ಮುಂದಿನ ರಸ್ತೆಯ ಮೇಲೆ ಒಬ್ಬನು ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಬರ್ರಿ ಒಂದು ರೂ.ಗೆ 80 ರೂಪಾಯಿ ಬಾಂಬೆ ಮಟಕಾ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಒಂದು ಚೀಟಿಯಲ್ಲಿ ನಂವರ್ ಬರೆದುಕೊಡುತ್ತಿದ್ದು ಖಾತರಿ ಆದ ಮೇಲೆ ನಾನು ಮತ್ತು ಸಿಬ್ಬಂದಿಯವರು 4.45 ಪಿಎಮ್ ಕ್ಕೆ ಓಡಿ ಹೋಗಿ ದಾಳಿ ಮಾಡಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ಹಿಡಿದಿದ್ದು ಮಟಕಾ ನಂಬರ್ ಬರೆಸುವವರು ಓಡಿ ಹೋಗಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಮುನಿರ್ಬಾಷಾ ತಂದೆ ಸೊಪಿಸಾಬ್ ಸುರಪುರ ವ: 45 ವರ್ಷ ಉ: ಒಕ್ಕಲುತನ ಜಾ: ಮುಸ್ಲಿಂ ಸಾ/ ಸೊನ್ನಾಪುರ ಸಣ್ಣ ತಾಂಡಾ ತಾ/ ಸುರಪುರ ಅಂತಾ ತಿಳಿಸಿದ್ದು ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ವಶದಲ್ಲಿ  ಒಂದು ಬಾಲ್ ಪೆನ್ನು, ಒಂದು ಅಂಕಿ-ಸಂಖ್ಯೆ ಬರೆದ ಮಟಗಾ ಚೀಟಿ, ಮತ್ತು ನಗದು ಹಣ 1150 ರೂಪಾಯಿಗಳು ದೊರೆತಿದ್ದು ಈ ಬಗ್ಗೆ ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆಯನ್ನು 4.45 ಪಿ.ಎಮ್ ದಿಂದ 5.45 ಪಿಎಮ್ ವರೆಗೆ  ಜರುಗಿಸಿ ಆರೋಪಿ ಹಾಗು ಮುದ್ದೇಮಾಲಿನೊಂದಿಗೆ ಠಾಣೆಗೆ 6:30 ಪಿ.ಎಮ್ ಕ್ಕೆ ಬಂದು ನಿಮಗೆ ನಾನು ಪೂರೈಸಿದ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನ ಪತ್ರದೊಂದಿಗೆ ತಮಗೆ ಹಾಜರುಪಡಿಸಿದ್ದು, ಮುಂದಿನ ಕ್ರಮ ಜರುಗಿಸಬೇಕು ಅಂತಾ ಇದ್ದು ಕಾರಣ ಸದರಿ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಕಲಂ 78 (3) ಕೆಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಬೇಕಾಗಿರುತ್ತದೆ, ಕಲಂ 78 (3) ಕೆಪಿ ಎಕ್ಟ ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಪರವಾನಿಗೆಗಾಗಿ ನಿನ್ನೆ ದಿನಾಂಕ: 12/02/2019 ರಂದು ಹಚ್ಸಿ-128 ಬಸನಗೌಡ ರವರು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದು ನಿವೇದಿಸಿಕೊಂಡಿದ್ದು. ಇಂದು ದಿನಾಂಕ: 13/02/2019 ರಂದು 4:00 ಪಿ ಎಂ ಕ್ಕೆ  ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಪರವಾನಿಗೆ ಯಾದಿಯನ್ನು ಹಾಜರಪಡಿಸಿದ್ದು. ನಿನ್ನ ಸಿಪಿಐ ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ: 09/2019 ಕಲಂ: 78 (111) ಕೆ.ಪಿ. ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!