ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-02-2019
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 41/2019. ಕಲಂ. 379. ಐ.ಪಿ.ಸಿ. :- ದಿನಾಂಕ 10/02/2019 ರಂದು ಮದ್ಯಾಹ್ನ 15-00 ಗಂಟೆಗೆ ಠಾಣೆಗೆ ಪಿರ್ಯದಿ ಶ್ರೀ ರಮೇಶ ತಂದೆ ಲೋಕು ರಾಠೋಡ ವ|| 26 ಜಾ|| ಲಂಬಾಣಿ ಉ|| ಕೂಲಿಕೆಲಸ ಸಾ|| ಮುಂದಿನ ತಾಂಡ ಹೋತಪೇಟ್ ಇವರು ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ, ಪಿಯರ್ಾದಿ ದಿನಾಂಕ 04/02/2019 ರಂದು ಬೇಳಿಗ್ಗೆ 9-30 ಗಂಟೆಗೆ ದಿನನಿತ್ಯದಂತೆ ನಾನು ಕೂಲಿಕೆಲಸಕ್ಕೆ ನನ್ನ ಮೋಟರ್ ಸೈಕಲ್ ನಂ ಕೆಎ-33ವಿ-1974 ನೇದ್ದು ತೆಗೆದುಕೊಂಡು ನಮ್ಮ ಮನೆಯಿಂದ ನಾನು ಶಹಾಪೂರದ ಗದ್ದೆರಾಯನ ಗುಡಿಯ ಮುಂದೆ ರಸ್ತೆಯ ಪಕ್ಕದಲ್ಲಿ ಬೆಳಿಗ್ಗೆ 10-00 ಗಂಟೆಗೆ ನಿಲ್ಲಿಸಿ ಅಲ್ಲೆ ಪಕ್ಕದಲ್ಲಿ ಇರುವ ಕಟ್ಟಡದಲ್ಲಿ ಕೆಲಸಕ್ಕೆ ಹೋಗಿ ಕೆಲಸ ಮಾಡುತ್ತಿದ್ದೆನು, ನನ್ನ ಹಾಗೆ ಕೆಲಸಕ್ಕೆ ಬಂದಿದ್ದ ನಮ್ಮ ತಾಂಡದ ತಾವರು ತಂದೆ ಧಮರ್ು ನಾಯಕ ರಾಠೋಡ, ಇವರು ನನ್ನ ಜೋತೆಯಲ್ಲಿ ಕೆಲಸ ಮಾಡುತ್ತಿದ್ದನು, ನಾನು ಮತ್ತು ತಾವರು ಇಬ್ಬರು ಮದ್ಯಾಹ್ನ 15-30 ಗಂಟೆಯ ಸುಮಾರಿಗೆ ನನ್ನ ಮೋಟರ್ ಸೈಕಲ್ ಹತ್ತಿರ ಬಂದು ನನ್ನ ಮೋಟರ್ ಸೈಕಲ್ ನೋಡಲಾಗಿ ಕಾಣಲಿಲ್ಲಾ ನಂತರ ನಾನು ಮತ್ತು ತಾವರು ಇಬ್ಬರು ಹುಡುಕಾಡಲಾಗಿ ಸಿಕ್ಕಿರುವದಿಲ್ಲಾ ಆಗ ನಾನು ನನ್ನ ಅಣ್ಣ ರವಿಂದ್ರ ತಂದೆ ಲೋಕು ರಾಠೋಡಗೆ ಪೋನ ಮಾಡಿ ಮೋಟರ್ ಸೈಕಲ್ ಕಳ್ಳತನವಾದ ಬಗೆ ತಿಳಿಸಿದೆನು, ಆಗ ನನ್ನ ಅಣ್ಣ ರವಿಂದ್ರನು ಗದ್ದೆರಾಯ ಗುಡಿಯ ಹತ್ತಿರ ಬಂದು ನೋಡಿ ವಿಚಾರಿಸಿದ್ದು ಇರುತ್ತದೆ, ನಂತರ ನಾನು ಮತ್ತು ರವಿಂದ್ರ, ತಾವರು, ಮೂರು ಜನರು ಹುಡಕಾಡಿದರು ಸಿಕ್ಕಿರುವದಿಲ್ಲಾ ನನ್ನ ಹಿರೋ ಸ್ಪ್ಲೇಂಡರ ಪ್ಲಸ್ ಕಂಪನಿಯ ಮೋಟರ್ ಸೈಕಲ್ ನಂ. ಏಂ-33ಗಿ-1974 ಇಓಉಓಇ ಓಔ-ಊಂ10ಂಉಊಊಅಇ2327. ಅಊಇಖಖ ಓಔ-ಒಃಐಊಂಖ088ಊಊಅ55652 ಅ:ಕಿ:49000=00 ರೂ ನ್ನೆದ್ದನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಮೋಟರ್ ಸೈಕಲ್ ಗದ್ದೆರಾಯನ ಗುಡಿಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಸಮಯದಲ್ಲಿ 10-00 ಗಂಟೆಯಿಂದ 15-30 ಗಂಟೆಯ ಅವದಿಯಲ್ಲಿ ಕಳ್ಳತನವಾಗಿರುತ್ತದೆ, ಕಳ್ಳತನವಾದ ನನ್ನ ಮೋಟರ್ ಸೈಕಲ್ ಹುಡುಕಾಡಿದರು ಸಿಗದೆ ಇದ್ದಾಗ ತಡವಾಗಿ ಇಂದು ದಿನಾಂಕ 10/02/2019 ರಂದು ಠಾಣೆಗೆ ಹಾಜರಾಗಿ ಕಳುವಾದ ನನ್ನ ಮೋಟರ್ ಸೈಕಲ್ ಪತ್ತೆ ಮಾಡಿಕೊಡಲು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 41/2019 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಕಲಿಸಿ ಕೊಂಡು ತನಿಕೆ ಕೈಕೊಂಡೆನು
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 42/2019 ಕಲಂ 454, 457, 380 ಐ.ಪಿ.ಸಿ :- ದಿನಾಂಕ: 10/02/2019 ರಂದು ರಾತ್ರಿ 21-00 ಗಂಟೆಗೆ ಫಿಯರ್ಾದಿ ಶ್ರೀ ಶೇಖ ಅಬ್ದುಲ್ ಅಜೀಜ್ ತಂದೆ ಶೇಖ ಬಡೇಸಾಬ ಜೋರಗಸ್ತಿ ಸಾ|| ದ್ಯಾವಮ್ಮ ಗುಡಿಯ ಹತ್ತಿರ ಸೈದರ ಓಣಿ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶ ಏನೆಂದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖಾವತಿಯಿಂದ ಬೆಂಗಳೂರಿನ ಯಲಹಂಕದಲ್ಲಿ ತರಬೇತಿ ನಿಗದಿಯಾಗಿದ್ದರಿಂದ ದಿನಾಂಕ:06/02/2019 ರಂದು ಮುಂಜಾನೆ 10-00 ಗಂಟೆಗೆ ನನ್ನ ಹೆಂಡತಿಗೆ ಬೆಂಗಳೂರಿಗೆ ತರಬೆೇತಿಗೆ ಕಳುಹಿಸುವ ಸಂಬಂಧ ಮನೆಯ ಬಾಗಿಲ ಕೀಲಿಗಳನ್ನು ಹಾಕಿಕೊಂಡು ಯಾದಗಿರಿಗೆ ಹೋದಾಗ ನನ್ನ ಹೆಂಡತಿ ತನ್ನ ಕೆಲಸಕ್ಕೆ ಹೋಗಿ ಸಾಯಂಕಾಲ ಮನೆಗೆ ಬಂದಳು ರಾತ್ರಿ 10-30 ಗಂಟೆಗೆ ನನ್ನ ಹೆಂಡತಿಗೆ ರೇಲ್ವೆ ಮುಖಾಂತರ ಬೆಂಗಳೂರಿಗೆ ಕಳುಹಿಸಿರುತ್ತೇನೆ. ನಂತರ ನಾನು ದಿನಾಂಕ:07/02/2019 ರಂದು ಕಡೆಚೂರ ಗ್ರಾಮಕ್ಕೆ ಹೋಗಿರುತ್ತೇನೆ. ಇಂದು ದಿನಾಂಕ:10/02/2019 ರಂದು ಬೆಳಿಗ್ಗೆ 08-30 ಗಂಟೆಗೆ ನನ್ನ ಹೆಂಡತಿ ಬೆಂಗಳೂರಿನಿಂದ ಯಾದಗಿರಿಗೆ ರೇಲ್ವೆ ಮುಖಾಂತರ ಬಂದ್ದಿದ್ದು, ಇಂದು ಸಾಯಂಕಾಲ ಯಾದಗಿರಿಯಿಂದ ಶಹಾಪೂರಕ್ಕೆ ಬಂದು, ಸಾಯಂಕಾಲ 6-45 ಗಂಟೆಗೆ ನಮ್ಮ ಮನೆಗೆ ಬಂದು ನೋಡಲಾಗಿ ಮನೆಯ ಮುಖ್ಯೆದ್ವಾರದ ಬಾಗಿಲ ಕೀಲಿ ಮುರಿದು ಸ್ವಲ್ಪ ಮುಂದಕ್ಕೆ ಮಾಡಿದ್ದರು. ಒಳಗಡೆ ಹೋಗಿ ನೋಡಲಾಗಿ ಮನೆಯ ಕಬ್ಬಿಣದ ಬಾಗಿಲ ಕೀಲಿ ಮುರಿದಿದ್ದು, ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾ ಪಿಲ್ಲೆಯಾಗಿಬಿದ್ದಿದ್ದವು, ಆಲ್ಮಾರಿಯ ಬಾಗಿಲು ತೆರೆದಿತ್ತು ಅದರಲ್ಲಿದ್ದ ಬಟ್ಟೆಗಳು ಕೆಳಗಡೆ ಬಿದ್ದಿದ್ದವು. ಅದರಲ್ಲಿಟ್ಟ ಬಂಗಾರದ ಆಭರಣಗಳು ನೋಡಲಾಗಿ 1) 35 ಗ್ರಾಂ ಬಂಗಾರದ ಲಾಂಗ್ ನಕ್ಲೇಸ್ ಅಂ.ಕಿ 75,000=00 ರೂಪಾಯಿ 2) 20 ಗ್ರಾಂ ಬಂಗಾರದ ಸಣ್ಣ ನಕ್ಲೇಸ್ ಅಂ.ಕಿ 50,000=00 ರೂಪಾಯಿ ಮತ್ತು ನಗದು ಹಣ 45,000=00 ರೂಪಾಯಿ ನೇದ್ದವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 42/2019 ಕಲಂ 454, 457, 380 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 38/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957:-ದಿನಾಂಕ:10-02-2019 ರಂದು 10 ಎ.ಎಂ. ಕ್ಕೆ ಠಾಣೆಯ ಎಸ್ ಹೆಚ್ ಡಿ ಕರ್ತವ್ಯದಲ್ಲಿರುವಾಗ ಶ್ರೀ ಆನಂದರಾವ್ ಎಸ್ ಎನ್ ಪಿ.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನೀಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:10-02-2019 ರಂದು 7-45 ಎ.ಎಮ್ ಸುಮಾರಿಗೆ ನಾನು ಠಾಣೆಯ ಸಿಬ್ಬಂಧಿಯವರಾದ ಶ್ರೀ ಮನೋಹರ ಹೆಚ್ಸಿ-105, ಶ್ರೀ ಸೋಮಯ್ಯಾ ಸಿಪಿಸಿ-235, ರವರು ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಕನರ್ಾಳ ಸೀಮಾಂತರ ಕೃಷ್ಣಾ ನದಿ ತೀರದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಕುಂಬಾರ ಪೇಠ ಮಾರ್ಗವಾಗಿ ಸುರಪುರ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರಾದ 1) ಪರಶುರಾಮ ತಂದೆ ಬೀಮಣ್ಣ ಗುಡ್ಡಕಾಯಿ ವಯಾ:25 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ಕುಂಬಾರಪೇಠ 2) ಶ್ರೀ ಅಶೋಕ ತಂದೆ ನಿಂಗಣ್ಣ ಬಾಕಲೆ ವಯಾ:32 ವರ್ಷ ಉ:ಕೂಲಿ ಜಾತಿ:ಕಬ್ಬಲಿಗ ಸಾ:ಕುಂಬಾರಪೇಠ ಇವರನ್ನು ಠಾಣೆಗೆ 8 ಎ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಸಿಬ್ಬಂಧಿಯೊಂದಿಗೆ ಎಲ್ಲರೂ ಒಂದು ಖಾಸಗಿ ವಾಹನದಲ್ಲಿ 8-15 ಎ.ಎಂ.ಕ್ಕೆ ಹೊರಟು ಸುರಪುರ- ಕುಂಬಾರ ಪೇಠ ಮುಖ್ಯ ರಸ್ತೆಯ ಬಿಎಸ್ಎನ್ ಆಪೀಸ ಹತ್ತಿರ 8-30 ಎ.ಎಂ.ಕ್ಕೆ ಕುಂಬಾರ ಪೇಠ ಕಡೆಗೆ ಹೋಗುತ್ತಿರುವಾಗ ಕುಂಬಾರ ಪೇಠ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ನಮ್ಮ ವಾಹನವನ್ನು ನಿಲ್ಲಿಸಿ ಕೆಳಗೆ ಇಳಿದು ಟ್ಯಾಕ್ಟರ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಸದರಿ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಡ್ರೆಸ್ಸನ್ನು ನೋಡಿ ಟ್ಯಾಕ್ಟರ ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದು ಓಡಿಹೋದನು. ನಂತರ ಸದರಿ ಟ್ಯಾಕ್ಟರನ್ನು ಪರೀಶಿಲಿಸಿ ನೋಡಲು ಒಂದು ಸ್ವರಾಜ್ಯ ಕಂಪನಿಯ ಟ್ಯಾಕ್ಟರ ಇದ್ದು ಅದರ ನಂಬರ ಕೆಎ-33, ಟಿಬಿ-0698 ಹಾಗೂ ಟ್ರಾಲಿಗೆ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರ ಟ್ರಾಲಿಯಲ್ಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಓಡಿ ಹೋದ ಟ್ಯಾಕ್ಟರ ಚಾಲಕನ ಹೆಸರು ಮಲ್ಲಯ್ಯಾ ತಂದೆ ಬಸವರಾಜ ಹುಬ್ಬಳ್ಳಿ ವಯಾ:23 ವರ್ಷ ಉ:ಡ್ರೈವರ ಜಾತಿ:ಬೇಡರ ಸಾ:ರುಕ್ಮಾಪೂರ ಅಂತಾ ಗೊತ್ತಾಗಿರುತ್ತದೆ.ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು, ಜಪ್ತಿ ಪಂಚನಾಮೆಯನ್ನು 08-30 ಎ.ಎಮ್ ದಿಂದ 09-30 ಎ.ಎಮ್ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using