ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-02-2019

By blogger on ಶುಕ್ರವಾರ, ಫೆಬ್ರವರಿ 8, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-02-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 17/2019 ಕಲಂ.323,504,506,355,448,109 ಸಂ.34 ಐಪಿಸಿ:-ದಿನಾಂಕ.07/02/2019 ರಂದು 8-30 ಪಿಎಂಕ್ಕೆ ಅಜರ್ಿದಾರರಾದ ಶ್ರೀ ಅಪ್ಪಾಸಾಹೇಬ ತಂದೆ ಭಗವಂತ ಸುತಾರ ಸಾ; ಸಾಯಿಪಾರ್ಕ ವಿಜಯಪುರ ಹಾ.ವ; ಓಅಅ ಲಿಮಿಟೆಡ ನಂ.5-5-377/207 ಹನುಮಾನ ಗುಡಿಯ ಹತ್ತಿರ ಚಿರಂಜೀವಿ ನಗರ ಯಾದಗಿರಿ ಠಾಣೆಗೆ ಹಾಜಗಾರಿ ಒಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾನು ಓಅಅ ಲಿಮಿಟೆಡ ಕಂಪನಿಯಲ್ಲಿ ಪ್ರೊಜೆಕ್ಟ ಮ್ಯಾನೇಜರ ಅಂತಾ ಕೆಲಸ ಮಾಡುತ್ತಿದ್ದೇನೆ. ಈ ಕೆಲಸವು ಆಆಗಉಗಎಙ-ಉಇಖಅಔಒ ಅಡಿಯಲ್ಲಿ  ಉಖಂ (ಉಡಿಚಿಟ ತಿಚಿಡಿಚಿರಿ ಚಿಛಥಿಚಿಟಿ) ಮನೆಗಳಿಗೇ ವಿದ್ಯುತ ಕೊಡುವ ಕೆಲಸವನ್ನು ಎಲ್.ವಿ. ಎಂಟರಪ್ರೈಸರ್ಸ ರವರಿಗೆ ನಾವು  ನಮ್ಮ ಕಂಪನಿಯಿಂದ ಕೊಟ್ಟಿರುತ್ತೇವೆ. ಈತನು ನಮ್ಮ ಕೆಲಸವನ್ನು ಮಾಡದೇ ಪೆಮೆಂಟ ಕೊಡಬೇಕೆಂದು ಕಿರಿಕಿರಿ ಮಾಡುತ್ತಾ ದಿನಾಂಕ; 07/02/2019 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಎಲ್.ವಿ. ಎಂಟರಪ್ರೈಸರ್ಸ ಮಾಲೀಕನಾದ ಲಾಗಿಶೆಟ್ಟಿ ವೆಂಕಟೇಶ್ವರಲು ಈತನು ತನ್ನ ಕೈಯಲ್ಲಿ ಕೆಲಸ ಮಾಡುವ ಶ್ರೀಧರ ಮತ್ತು ನಾಗೇಶ ಎಂಬುವವರನ್ನು ಚಿರಂಜೀವಿ ನಗರದಲ್ಲಿರುವ ನಮ್ಮ ಆಫೀಸಿಗೆ ನಮ್ಮೊಂದಿಗೆ ಜಗಳ ಮಾಡಲು ಕಳುಹಿಸಿ ಕೊಟ್ಟಿದ್ದು ಅವರು ಬಂದು ನಮ್ಮೊಂದಿಗೆ ಜಗಳ ತೆಗೆದು ನಾವು ಕೊಟ್ಟ ಕೆಲಸವನ್ನು ಪೂರ್ಣಗೊಳಿಸದೇ ನಮಗೆ ಹಣ ಕೊಡಬೇಕು ಇಲ್ಲದಿದ್ದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ನನಗೆ ಕೈಯಿಂದ ಹೊಡೆದರು. ಆಗ ನಮ್ಮ ಇಂಜಿನಿಯರಗಳಾದ ವಿನೋದ, ಸತೀಶ, ರಾಘವಲು ಮತ್ತು ಈತರರು ನಮ್ಮ ಸಿಬ್ಬಂದಿಯವರು ಜಗಳ ಬಿಡಿಸಲು ಬಂದಾಗ ಅವರಿಗು ಸಹಾ ಕೈಯಿಂದ ಹಲ್ಲೆ ಮಾಡಿ ನಂತರ ಶ್ರೀಧರ ಈತನು ತನ್ನ ಚಪ್ಪಲಿಯಿಂದ ನನ್ನ ಎಡಭುಜಕ್ಕೆ ಹೊಡೆದು ನನಗೆ ಅವಮಾನ ಮಾಡಿದನು.  ನಮಗೆ ಈ ರೀತಿ ಅವಮಾನ ಮಾಡಿ ಹಲ್ಲೆ ಮಾಡಿದರೇ ನಾವು ಹಣ ಕೊಡುತ್ತೇವೆಂದು ಎಲ್.ವಿ. ಎಂಟರಪ್ರೈಸರ್ಸ ಮಾಲೀಕನಾದ ಲಾಗಿಶೆಟ್ಟಿ ವೆಂಕಟೇಶ್ವರಲು ಈತನು ನಮಗೆ ಹಲ್ಲೆ ಮಾಡಿಸಿರುತ್ತಾನೆ.  ಶ್ರೀಧರ ಮತ್ತು ನಾಗೇಶ ಇವರು ನಮ್ಮ ಯಾವುದೇ ಅನುಮತಿ ಇಲ್ಲದೇ ನಮ್ಮ ಆಫೀಸಿನಲ್ಲಿ ಪ್ರವೇಶ ಮಾಡಿ ಆಫಿಸಿನಲ್ಲಿದ್ದ  ಡಾಕುಮೆಂಟಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಇದರಿಂದಾಗಿ ನಮಗೆ ನಾಳೆಯಿಂದ ನಮ್ಮ ಕೆಲಸ ಮಾಡಲು ಕಷ್ಟಕರವಾಗಿದ್ದು ಅವರಿಂದ ನಮಗೆ ಜೀವ ಭಯವಿದ್ದು ಆದ್ದರಿಂದ ಮೇಲ್ಕಂಡ ಮೂರು ಜನರ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.17/2019 ಕಲಂ.323,504,506,355,448,109 ಸಂ.34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 32/2019 ಕಲಂ 379 ಐಪಿಸಿ :- ದಿನಾಂಕ 07.02.2019 ರಂದು ಸಮಯ ಸಂಜೆ 4:00 ಗಂಟೆಗೆ ಕೆಂಪು ಬಣ್ಣದ ಮೆಸ್ಸಿ ಫರಗೂಶನ್ ಟ್ರ್ಯಾಕ್ಟರ ನಂ: ಕೆಎ-33-ಟಿಎ-9795 ಮತ್ತು ಟ್ರ್ಯಾಲಿ ನಂ: ಕೆಎ-33-ಟಿಎ-9796 ನೇದ್ದರ ಚಾಲಕ ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗ ಇಲ್ಲದೆ ಕಳ್ಳತನದಿಂದ ತನ್ನ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಗುರುಮಠಕಲ್ ಕಡೆಗೆ ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಮೆಯ ಮೂಲಕ ಜಪ್ತಿಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು. ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 32/2019 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 18/2019 ಕಲಂ: 379 ಐಪಿಸಿ:-ದಿನಾಂಕ: 07/02/2019 ರಂದು 9-30 ಎಎಮ್ ಕ್ಕೆ ಶ್ರೀ ಮಹಾದೇವಪ್ಪ ಬಿ. ದಿಡ್ಡಿಮನಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಎರಡು ಟಿಪ್ಪರಗಳನ್ನು ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದು ಸರಕಾರಿ ತಫರ್ೆಯಿಂದ ವರದಿ ಕೊಟ್ಟಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 07/02/2019 ರಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ 1) ಶ್ರೀ ವೆಂಕಟೇಶ ಪಿಸಿ 143, 2) ಶ್ರೀ ರಾಜಕುಮಾರ ಹೆಚ್.ಸಿ 179 ರವರೊಂದಿಗೆ ಸಕರ್ಾರಿ ಜೀಪ ನಂ. ಕೆಎ-33-ಜಿ-115 ನೆದ್ದರಲ್ಲಿ ಪೆಟ್ರೋಲಿಂಗ ಮಾಡುತ್ತಾ ಗುರುಸಣಗಿ ಕ್ರಾಸ ಹತ್ತಿರ ಇದ್ದಾಗ ನನಗೆ ಕುಮ್ನೂರು ಗ್ರಾಮದ ಭೀಮಾ  ನದಿಯಿಂದ ಕೆಲವರು ಟಿಪ್ಪರಗಳಲ್ಲಿ ಕಳ್ಳತನದಿಂದ ಮರಳನ್ನು ಯಾದಗಿರಿ ಕಡೆ ಸಾಗಿಸುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ 6-30 ಎಎಮ್ ಸುಮಾರಿಗೆ ನಾವು ವಡಗೇರಾ ಕ್ರಾಸ ಹತ್ತಿರ ಬಂದು ಕುಮ್ನೂರು ಕಡೆಯಿಂದ ಟಿಪ್ಪರಗಳು ಬರುವುದು ಕಾಯುತ್ತಾ ನಿಂತಾಗ ಕುಮ್ನೂರು ಕಡೆಯಿಂದ ಎರಡು ಟಿಪ್ಪರಗಳಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಹೋಗಿ ಎರಡು ಟಿಪ್ಪರಗಳನ್ನು ಕೈ ಮಾಡಿ ನಿಲ್ಲಿಸಿದಾಗ ಸದರಿ ಎರಡು ಟಿಪ್ಪರಗಳ ಚಾಲಕರು ತಮ್ಮ ಟಿಪ್ಪರಗಳನ್ನು ಒಂದರ ಹಿಂದೆ ಒಂದು ನಿಲ್ಲಿಸಿ ಓಡಿ ಹೋದರು. ಅವರ ಹಿಂದೆ ಬೆನ್ನತ್ತಿದರೂ ಕೂಡಾ ಸಿಗಲಿಲ್ಲ. ಸದರಿ ಟಿಪ್ಪರಗಳ ಚಾಲಕರಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಟಿಪ್ಪರಗಳ ನಂಬರ ನೋಡಲಾಗಿ 1] ಟಾಟಾ ಟಿಪ್ಪರ ನಂ. ಕೆಎ 32 ಬಿ 5430 ಮತ್ತು 2) ಭಾರತ ಬೆಂಜ್ ಟಿಪ್ಪರ ನಂ. ಕೆಎ 33 ಎ 4343 ಇರುತ್ತದೆ. ಸದರಿ ಎರಡು ಟಿಪ್ಪರಗಳು ಮರಳು ತುಂಬಿದ್ದು ಇತ್ತು. ಇವುಗಳ ಚಾಲಕರು ಮತ್ತು ಮಾಲಿಕರು ಸೇರಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ನಾವು ದಾಳಿ ಮಾಡಿದಾಗ ಟಿಪ್ಪರಗಳ ಚಾಲಕರು ತಮ್ಮ ಹತ್ತಿರ ರಾಯಲ್ಟಿ ವೈಗೆರೆ ದಾಖಲಾತಿ ಇಲ್ಲದ ಕಾರಣ ಮರಳು ತುಂಬಿದ ಟಿಪ್ಪರಗಳನ್ನು ಬಿಟ್ಟು ಓಡಿ ಹೋಗಿರುತ್ತಾರೆ. ಕಾರಣ ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು 9-30 ಎಎಮ್ ಕ್ಕೆ ಪೊಲೀಸ್ ಠಾಣೆಗೆ ಬಂದು ಈ ದೂರು ನೀಡುತ್ತಿದ್ದು, ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 18/2019 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 15/2019 ಕಲಂ: 87 ಕೆಪಿ ಆಕ್ಟ :- ದಿನಾಂಕ: 07/02/2019 ರಂದು 03-00 ಪಿಎಮ್ ಸುಮಾರಿಗೆ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಸದಬ ಗ್ರಾಮದ ಹನುಮಾನ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0074 ನೇದ್ದರಲ್ಲಿ ಸದಬ ಗ್ರಾಮಕ್ಕೆ ಹೋಗಿ ಹನುಮಾನ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ಜೂಜಾಟ ಆಡುವ ಬಗ್ಗೆ ಖಚಿಪಡಿಸಿಕೊಂಡು 04-10 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 06 ಜನರು ಸಿಕ್ಕಿದ್ದು ಹಾಗೂ ಒಟ್ಟು 1040/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳನ್ನು 04-10 ಪಿ.ಎಂ ದಿಂದ 05-10 ಪಿ.ಎಂದವರಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ಅಸಂಜ್ಞೆಯ ಅಪರಾಧ ವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸದರಿ ವರದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 15/2019 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 13/2019 78(3)  ಕೆ.ಪಿ ಯಾಕ್ಟ :- ದಿನಾಂಕ:06/02/2019 ರಂದು 19.40 ಗಂಟೆಯ ಸುಮಾರಿಗೆ ಆರೋಪಿತನು   ಹುಣಸಗಿ ಪಟ್ಟಣದ ನೀಲಕಂಠೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟವನ್ನು ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130, 184 ಪಿಸಿ-248 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತನಿಂದ 415=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 08/20198 ಕಲಂ:323, 324, 504, 506, ಸಂಗಡ 34 ಐಪಿಸಿ :- ದಿನಾಂಕ:0702.2019 ರಂದು ಮದ್ಯಾಹ್ನ 12:30 ಗಂಟೆಗೆ ಫಿಯರ್ಾದಿ ರಾತ್ರೆಪ್ಪ ತಂದೆ ಪರಮಣ್ಣ ಗುಡಿ ಪೂಜಾರಿ ವಯ:60, ಉ:ಒಕ್ಕಲುತನ, ಜಾ:ಹಿಂದೂ ಕುರುಬ, ಸಾ:ಮಂಜಲಾಪೂರ ದೊಡ್ಡಿ ಕಕ್ಕೇರಾ ತಾ:ಸುರಪೂರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದು ಫಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ, ನಿನ್ನೆ ರಾತ್ರಿ 9.00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ಗೌರಮ್ಮ ನನ್ನ ಮಗ ಸೋಮನಿಂಗಪ್ಪ ಮೂರು ಜನರು ಕೂಡಿ  ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಿರುವಾಗ. ನನ್ನ ಅಣ್ಣನ ಮಗನಾದ ನಂದಪ್ಪ, ನನ್ನ ಅಣ್ಣನ ಹೆಂಡತಿ ಅಮ್ಮವ್ವ, ನನ್ನ ಅಣ್ಣನ ಸೊಸೆಯಾದ ಸಿದ್ದಮ್ಮ @ ಕಂಠೆಮ್ಮ   ಈ ಮೂರು ಜನರು ನಾವು ಕುಳಿತಲ್ಲಿಗೆ ಬಂದು ಎಲೆ ಸೂಳ ಮಕ್ಕಳೆ  ನೀವು ನಮ್ಮ ಮೇಲೆ ಪಂಪ್ಸಟ್ ನೀರಿನಲ್ಲಿ ಹಾಕಿದ್ದೇವಿ ಅಂತಾ ಸುಳ್ಳು ಕೇಸ್ ಮಾಡಿದ್ದಿರಿ ಅಂದಿದ್ದು ಅದಕ್ಕೆ  ನಾನು ನೀವು ನನ್ನ ಪಂಪ್ಸೆಟ್ ನೀರಿನಲ್ಲಿ ಹಾಕಿ ಹಾಳು ಮಾಡ್ಡದಲ್ಲದೆ ನನ್ನ ಸ್ಟಾಟರ್ನ್ನು ತೆಗೆದುಕೊಂಡು ಹೋಗಿದಿ  ಅಂತಾ ಅನ್ನುತ್ತಿರುವಾಗಲೇ  ನಂದಪ್ಪ  ತಂದೆ ಮಲ್ಲಪ್ಪ ಇತನು  ನಾನು ಎಲ್ಲಿ ನಿನ್ನ ಸ್ಟಾಟರ್  ತೆಗೆದುಕೊಂಡು ಹೋಗಿಲ್ಲ ಸೂಳೆ ಮಗನ್ಯಾ ಸುಳ್ಳು ಹೇಳುತ್ತಿದಿ ಅಂತಾ ಅಂದವನೇ ಅಲ್ಲಿಯೇ ಬಿದ್ದ ಬಡಿಗೆಯನ್ನು ತೆಗೆದುಕೊಂಡು ನನಗೆ  ಎಡಗೈ ಕಿರುಬೆರಳಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿದನು  ನನ್ನ ಅಣ್ಣನ ಹೆಂಡತಿ ಅಮ್ಮವ್ವ  ಇವಳು  ಅಲ್ಲಿಯೇ ಬಿದ್ದು ಕಲ್ಲನ್ನು ತೆಗೆದುಕೊಂಡು ನನ್ನ ಮೊಲಕಾಲು ಕೆಳಗೆ ಹೊಡೆದು ರಕ್ತಗಾಯ  ಪಡಿಸಿದ್ದು. ನನ್ನ ಅಣ್ಣನ ಮಗನ ಹೆಂಡತಿ ಸಿದ್ದಮ್ಮ @ ಕಂಠೆಮ್ಮ ಇವಳು  ಅಲ್ಲಿಯೇ ಬಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಮಗ ಸೋಮನಿಂಗಪ್ಪನಿಗೆ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಮತ್ತು ಮೂರು ಜನರು ಕೂಡಿ ನನಗೆ ಮತ್ತು ನನ್ನ ಮಗ ಸೋಮನಿಂಗಪ್ಪನಿಗೆ ತೆಕ್ಕಿಗೆ ಬಿದ್ದು  ಹೊಡೆ ಬಡೆ ಮಾಡುತ್ತಿರುವಾಗ ನಾವು ಚಿರಾಡಲು ಅಲ್ಲಿಯೇ ಇದ್ದ ಸಿದ್ದಮ್ಮ ಗಂಡ ಭೀಮರಾಯ ಗೋಧಿಕಲರ ಮತ್ತು ನಮ್ಮ ಮನೆಗೆ ಬಂದಿದ್ದು ನನ್ನ ಹೆಂಡತಿಯ ತಮ್ಮನಾದ ಹಣಮಂತ ತಂದೆ ಬಸಣ್ಣ  ಜಂಪಾ ಸಾ: ಜಂಪರದೊಡ್ಡಿ ಕಕ್ಕೇರಾ ಇವರಿಬ್ಬರೂ ಕೂಡಿ ಬಿಡಿಸಿದ್ದು ಅವರು ಬಂದು ಬಿಡಿಸದಿದ್ದರೆ ಇನ್ನೂ ಹೊಡೆಯುತ್ತಿದ್ದರು ನನ್ನ ಅಣ್ಣನ ಮಗಬ ನಂದಪ್ಪ ಅವನ ಹೆಂಡತಿ ಸಿದ್ದಮ್ಮ  @ ಕಂಠೆಮ್ಮ ಮತ್ತು ನನ್ನ ಅಣ್ನನ ಹೆಂಡತಿ ಅಮ್ಮವ್ವ ಈ ಮೂರು ಜನರು ಹೋಗುವಾಗ ಸುಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿರಿ ಇನ್ನೂಂದು ಸಲ ಸಿಕ್ಕರೆ ನಿಮಗೆ ಜೀವಂತ ಬಿಡುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋದರು ಕಾರಣ ನಾನು  ಈ ಜಗಳದ ವಿಷಯವಾಗಿ ನಮ್ಮ ಸಂಬಂದಿಕರಲ್ಲಿ ವಿಚಾರ ಮಾಡಿಕೊಂಡು ತಡವಾಗಿ ಬಂದಿದ್ದು. ನಮಗೆ ಈ ಜಗಳದಲ್ಲಿ ಅಷ್ಟೇನು ಪೆಟ್ಟಾಗಿರುವದಿಲ್ಲಾ ಕಾರಣ ನಾವು ಆಸ್ಪತ್ರೆಗೆ ಹೋಗುವದಿಲ್ಲಾ  ನಮಗೆ ಹೊಡೆ-ಬಡೆ ಮಾಡಿ ಜೀವಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:08/2019 ಕಲಂ:323, 324, 504, 506, ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 35/2019 ಕಲಂ. ಹುಡುಗಕಾಣಿಯಾದ ಬಗ್ಗೆ :- ದಿನಾಂಕ:07-02-2019 ರಂದು 10 ಎ.ಎಂ.ಕ್ಕೆ ಠಾಣೆಯಎಸ್ಹೆಚ್ಡಿಕರ್ತವ್ಯದಲ್ಲಿರುವಾಗ ಶ್ರೀ ಆನಂದಕುಮಾರತಂದೆಆದಪ್ಪ ಹೂಗಾರ ಸಾ:ಕಬಾಡಗೇರಾ ಸುರಪುರಇವರುಠಾಣೆಗೆ ಬಂದುಒಂದು ಗಣಕೀಕರಿಸಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಮ್ಮತಂದೆತಾಯಿಯವರಿಗೆ ಮೂರುಜನಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಗಂಡು ಮಕ್ಕಳಲ್ಲಿ ಕಿರಿಯವನಾದ ನನ್ನತಮ್ಮಅರುಣಕುಮಾರತಂದೆಆದಪ್ಪ ಹೂಗಾರ ವಯಾ: 28 ವರ್ಷಈತನು ಸುರಪುರದ ವಿಜಯಶ್ರೀ ಪೈನಾನ್ಸನಲ್ಲಿ ಸುಮಾರು 10 ವರ್ಷಗಳಿಂದ ಪಿಗ್ಮಿಎತ್ತುವ ಕೆಲಸ ಮಾಡಿಕೊಂಡಿದ್ದು ದಿನಾಲು ಕೆಲಸಕ್ಕೆ ಹೋಗಿ  ಮನೆಗೆ ಬರುತ್ತಿದ್ದನು. ಹೀಗಿರುವಾಗ ದಿನಾಂಕ:28-01-2019 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿಯಾದ ಶ್ರೀಮತಿ ಭಾರತಿಇಬ್ಬರು ಮನೆಯಲ್ಲಿರುವಾಗತಮ್ಮನಾದಅರುಣಕುಮಾರಈತನುಕೆಸದಿಂದ ಮನೆಗೆ ಬಂದಾಗ ನಾನು ಅವನಿಗೆ ಊಟ ಮಾಡುಅಂತಾ ಹೇಳಿದಾಗ ಅವನು ಸುರಪುರದಕನ್ನಿಕಾ ಪರಮೇಶ್ವರಿದೇವಸ್ಥಾನದಲ್ಲಿಕಾರ್ಯಕ್ರಮಇದೆಅಲ್ಲೆ ಊಟ ಮಾಡತಿನಿ ಅಂತಾ ಹೇಳಿ ಮನೆಯಿಂದ ಹೋದವನು ಮರಳಿ ಮನೆಗೆ ಬರದೆಇರುವಾಗ ನಾವು ಎಲ್ಲಾಕಡೆ ನಮ್ಮ ಸಂಬಂಧಿಕರಲ್ಲಿ ವಿಚಾರ ಮಾಡಿ ಹುಡುಕಾಡಲುಇಲ್ಲಿಯವರೆಗೆಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ತಮ್ಮನಾದಅರುಣಕುಮಾರಈತನು ಸಾಧಾರಣ ಮೈಕಟ್ಟು, ಗೊದಿ ಬಣ್ಣಎತ್ತರ 5,7'' ಇರುತ್ತದೆ. ಅರುಣಕುಮಾರಈತನು ಮನೆಯಿಂದ ಹೋಗುವಾಗ ಬದಾಮಿ ಬಣ್ಣದ ಚೆಕ್ಕ ಶರ್ಟ, ಬೂದು ಬಣ್ಣದ ಪ್ಯಾಂಟ ಧರಿಸಿದ್ದು, ಕನ್ನಡ, ಹಿಂದಿ ಬಾಷೆ ಬಲ್ಲವನಾಗಿರುತ್ತಾನೆ. ಸದರಿ ನನ್ನತಮ್ಮಕಾಣಿಯಾದ ಬಗ್ಗೆ ಪ್ರಕರಣ ದಾಖಲಿಸಿ ತಮ್ಮನ ಪತ್ತೆ ಮಾಡಿಕೊಡಲು ವಿನಂತಿಅಂತಾಕೊಟ್ಟ ಸಾರಾಂಶದ ಮೇಲಿಂದಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 04/2019  ಕಲಂ 279,  337, 338 ಐಪಿಸಿ :- ದಿನಾಂಕ 07/02/2019 ರಂದು 07.40 ಪಿಎಮ್ ಕ್ಕೆ ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಆರ್ ಟಿ ಎ ಎಮ್ ಎಲ್ ಸಿ ವಸೂಲಾದ ಬಗ್ಗೆ ಮಾಹಿತಿ ಬಂದಿದ್ದರಿಂದ ಆಸ್ಪತ್ರೆಗೆ 07.50 ಪಿಎಮ್ ಕ್ಕೆ ಹೋಗಿದ್ದು ಅಲ್ಲಿ ಹಾಜರಿದ್ದ ಗಾಯಾಳು ಫಿರ್ಯಾದಿ ಅಶೋಕ ತಂದೆ ನರಸಿಂಗ್ ಚವ್ಹಾಣ ಸಾ: ಅಲಿಪುರ ತಾಂಡಾ ಇವರು ತಮ್ಮ ಹೇಳಿಕೆ ನೀಡಿದ್ದೇನೆಂದರೆ, ನಾನು ನನ್ನ ಖಾಸಗಿ ಕೆಲಸದ ನಿಮಿತ್ಯ ಯಾದಗಿರಿಗೆ ಬಂದಿದ್ದು ಕೆಲಸ ಮುಗಿದ ತರುವಾಯ ನಾನು ನಮ್ಮೂರಿಗೆ ಹೋಗಲು ನಮ್ಮ ತಾಂಡಾದ  ಆಟೋ ಟಂ ಟಂ ನಂ ಕೆಎ-33 ಎ-8590 ನೇದ್ದರ ಚಾಲಕನಾದ ಆನಂದ ತಂದೆ ಸುರೇಶ ರಾಠೋಡ ಇವನು ನಮ್ಮ ಆಟೋವು   ಅಲಿಪುರ ತಾಂಡಾಕ್ಕೆ ಹೋಗುತ್ತದೆ ಅಂತ ಸದರಿ ಆಟೋದ ಚಾಲಕನು ತಿಳಿಸಿದ್ದರಿಂದ ನಾನು ಸದರಿ ಆಟೋದಲ್ಲಿ ಕುಳಿತುಕೊಂಡೆ ನನ್ನೊಂದಿಗೆ ನಮ್ಮ ತಾಂಡಾದ 1) ದೇವಕುಮಾರ ತಂದೆ ಸಜ್ಜನ ಚೌವಾಣ ನಮ್ಮ ಅಲಿಪುರ ಗ್ರಾಮದವರಾದ 2) ಭಾಗಮ್ಮ ಗಂಡ ಮೋನಪ್ಪ ಪೂಜಾರಿ 3) ನರಸಮ್ಮ ಗಂಡ ಹಣಮಂತ ಪೂಜಾರಿ ಹಾಗೂ ನರಸಮ್ಮಳ ಸುಮಾರು 07 ತಿಂಗಳ ಮಗುವಾದ ಭೀಮರಡ್ಡಿ ನಾವೆಲ್ಲರೂ ಸದರಿ ಆಟೋದಲ್ಲಿ ಕುಳಿತುಕೊಂಡು ನಮ್ಮ ಅಲಿಪುರ ತಾಂಡಾಕ್ಕೆ 06:30 ಪಿಎಮ್ ಸುಮಾರಿಗೆ ಯಾದಗಿರಿಯಿಂದಹೊರಟೆವು ಅಲಿಪುರ ಗೇಟ್ ಹತ್ತಿರ ನಮ್ಮ ಆಟೋವು ಅಲಿಪುರ ಗ್ರಾಮಕ್ಕೆ ಟರ್ನ ಮಾಡುತ್ತಿದ್ದಾಗ ವಾಡಿ ಕಡೆಯಿಂದ ಕಾರ್ ನಂ ಟಿ.ಎಸ್09 ಇಇ-6563 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಜೋರಾಗಿ ನಡೆಸಿಕೊಂಡು  ಬಂದು ನಮ್ಮ ಆಟೋಕ್ಕೆ ಡಿಕ್ಕಿಪಡಿಸಿದ್ದರಿಂದ ನಮ್ಮ ಆಟೋವು ಪಲ್ಟಿಯಾಗಿದ್ದರಿಂದ ನನಗೆ ಎದೆಗೆ ಭಾರಿ ಗುಪ್ತಗಾಯ, ಹಣೆಗೆ ಮತ್ತು ಎರಡು ಮೊಳಕಾಲುಗಳಿಗೆ ತರಚಿದ ರಕ್ತಗಾಯಗಳಾಗಿದ್ದು ನನ್ನ ಜೊತಿಗಿದ್ದ ದೇವಕುಮಾರ ಈತನಿಗೆ ಹಣೆಗೆ, ಮುಖಕ್ಕೆ ತರಚಿದ ರಕ್ತಗಾಯಗಳಾಗಿದ್ದು ಅಲ್ಲದೆ ಕುತ್ತಿಗೆಯ ಹಿಂದೆ ಭಾರಿ  ಗಉಪ್ತಗಾಯವಾಗಿದ್ದು, ಚಾಲಕನಾದ ಆನಂದ ಈತನಿಗೆ ಬಲಗಾಲಿನ ಮೊಳಕಾಲಿಗೆ ಭಾರಿ ರಕ್ತಗಾಯ, ಹಣೆಗೆ, ಬಲ ಕೈನ ಮಣಿಕಟ್ಟಿಗೆ ತರಚಿದ ರಕ್ತಗಾಯವಾಗಿದ್ದು ಹಾಗೂ ನಮ್ಮ ಅಲಿಪುರ ಗ್ರಾಮದವರಾದ ಭಾಗಮ್ಮ ಇವರಿಗೆ ಎಡಗಾಲಿನ ಮೊಳಕಾಲಿಗೆ ಭಾರಿ ರಕ್ತಗಾಯ, ಎದೆಯ ಎಡಭಾಗಕ್ಕೆ ಗುಪ್ತಗಾಯ, ತಲೆಯ ಹಿಂದೆ ಗುಪ್ತಗಾಯವಾಗಿದ್ದು ಅಲ್ಲದೆ ನರಸಮ್ಮ ಇವರಿಗೆ ಬಲ ಹಣೆಗೆ ರಕ್ತಗಾಯ ಮೊಳಕಾಲಿಗೆ ತರಚಿದ ರಕ್ತಗಾಯವಾಗಿದ್ದು ಮತ್ತು ಆಕೆಯ ಮಗುವಾದ ಭೀಮರಡ್ಡಿ ಈತನಿಗೆ ತಲೆಯ ಹಿಂದೆ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಘಟನೆಯನ್ನು ನಮ್ಮ ತಾಂಡಾದವರಾದ ವಿಕ್ರಮ ತಂದೆ ಸುರೇಶ ರಾಠೋಡ ಮತ್ತು ಪತ್ತು ತಂದೆ ಗೋಮು ರಾಠೋಡ ಸಾ: ಮುದ್ನಾಳ ತಾಂಡಾ ಇವರು ಬಂದು ನಮಗೆ ಎಬ್ಬಿಸಿದ್ದು ಸದರಿ ಘಟನೆಗೆ ಕಾರ್ ನಂ ಟಿ.ಎಸ್09 ಇಇ-6563 ನೇದ್ದರ ಚಾಲಕನಾದ ಎಸ್  ರಮೇಶ ಚಂದ್ ತಂದೆ ಎಸ್ ಗೋವರ್ಧನ್ ದಾಸ್ ಸಾ:ಹೈದ್ರಾಬಾದ  ಈತನ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮಗೆ ಅಪಘಾತಪಡಿಸಿದ್ದರಿಂದ ಸದರಿ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ 04/2019  ಕಲಂ 279,  337, 338 ಐಪಿಸಿ   ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 ಮಹಿಳಾ ಪೊಲೀಸ್ ಠಾಣೆ :- 03/2019 ಕಲಂ: 498(ಎ) 323, 504, 506, 355 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ ಅಕ್ಟ:- ದಿನಾಂಕ 07/02/2019 ರಂದು ಪಿಯರ್ಾದಿದಾರಳಾದ ಶ್ರೀಮತಿ ಲಲಿತಾ ಗಂಡ ನಿಂಗಣ್ಣಗೌಡ ವ-29 ವರ್ಷ ಜಾ- ಲಿಂಗಾಯತ ಸಾ-ಯಾದಗಿರಿ  ತಾ:ಜಿ: ಯಾದಗಿರಿ ಇದ್ದು ಈ ಮೂಲಕ ತಮ್ಮಲಿ ವಿನಂತಿಸಿಕೊಳ್ಳುವುದೆನಂದರೆ ನಾನು ಸುಮಾರು 6 ವರ್ಷಗಳ ಹಿಂದೆ ನಿಂಗಣ್ಣ ಗೌಡ ಎಂಬುವರ ಜೊತೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಗುರು ಹಿರಿಯರು ಹಾಗೂ ಬಂದು ಬಳಗದವರ ಸಮಕ್ಷಮದಲ್ಲಿ  ವಿದ್ಯಾಮಂಗಲ ಕಾಯರ್ಾಲಯ ಯಾದಗಿರಿಯಲ್ಲಿ ವಿವಾಹವನ್ನು  ಮಾಡಿಕೋಡಿರುತ್ತೇನೆ. ನನ್ನ ಮದುವೆಯಾದ ನಂತರ ನನ್ನ ಗಂಡನ  ಮನೆಯಲ್ಲಿ  ಅಂದರೆ ಯಾದಗಿರಿಯ ಹೊಸಳ್ಳಿ ಕ್ರಾಸ  ಹತ್ತರದಲಿರುವ ಮನೆಯಲ್ಲಿ ವಾಸವಿದ್ದು  ಅದರೆ ಮದುವೆಯಾದ ನಂತರ ಒಂದು ತಿಂಗಳು ನನ್ನ ಗಂಡನ ಮನೆಯಲಿ ಚೆನ್ನಾಗಿದ್ದಾಗ ನನ್ನ ತ್ತಿರವಿದ್ದ ಬಂಗಾರವನ್ನು ಒತ್ತಾಯ ಪೂರ್ವಕವಾಗಿ ಕರೆದುಕೊಂಡು  ಮಾರಾಟ ಮಾಡಿಕೊಂಡಿರುತ್ತಾನೆ. ನನ್ನ ಗಂಡ ಮೈದುನ ಮತ್ತು ನನ್ನ ಮಾವ ಅತ್ತೆ ಮತ್ತು ನಾದಿನಿಯವರು ದಿನೇ ದಿನೇ ಕಿರಕುಳ ನೀಡುತ್ತಿದ್ದರೂ  ಕೂಡಾ ಅದನ್ನು ಸಹಿಸಿಕೊಂಡು ನನ್ನ ಗಂಡನ ಮನೆಯಲ್ಲಿ ವಾಸವಾಗಿದ್ದೇನೆ.  ನಮ್ಮ ದಾಂಪತ್ಯ ಜೀವನದ ಪ್ರತಿ ಫಲಪಲವಾಗಿ  ಇಬ್ಬರು ಮಕ್ಕಳು ಜನಿಸಿದ್ದು 1 ಗಂಡು ಮತ್ತು 1 ಹೆಣ್ಣು ಮಕ್ಕಳು ಇರುತ್ತಾರೆ.ನಮಗೆ ಮಕ್ಕಳಾದ ಮೇಲೆ ನಾವಿಬ್ಬರು 1 ವರ್ಷದ ಹಿಂದೆ ಬೆಂಗಳೂರಿಗೆ ದುಡಿಯಲು ವಲಸೆ ಹೋಗಿರುತ್ತೇವೆ ನಾನು ಬೆಂಗಳೂರಿನಲ್ಲಿ ನನ್ನ ಗಂಡನ ಜೋತೆಯಲ್ಲಿ ಸಂಸಾರ ಮಾಡುತ್ತಿರುವಾಗ ನನಗೆ ನನ್ನ ಗಂಡ ನನ್ನ ಗಂಡನ ಅಕ್ಕ ಇವರುಗಳು ಕೂಡಿಕೊಂಡು  ನನಗೆ ಹೊಡೆ ಬಡೆ ಮಾಡಿದ್ದು ಇರುತ್ತದೆ. ಆದರೂ ಕೂಡಾ ಅದನ್ನು ಸಹಿಸಿಕೊಂಡು  ನನ್ನ ಮಕ್ಕಳ ಸಲುವಾಗಿ ಜೀವಿಸಬೇಕೆಂದು ಮಕ್ಕಳೊಂದಿಗೆ ಇರುತ್ತಿದ್ದೆನು. ಒಂದು ದಿನ ನನ್ನ ಗಂಡನು ನಿಮ್ಮ ತವರೂರಿಗೆ ಹೋಗಿ ನಿಮ್ಮ ಅವ್ವನ ಹೆಸರಿನಲ್ಲಿರುವ ಹೊಲ ನನ್ನ ಹೆಸರಿಗೆ ಮಾಡು 5 ತೊಲೆ ಬಂಗಾರ ಮತ್ತು 100000/- ರೂಪಾಯಿಗಳನ್ನು ಬಂಗಾರ ಹಣ ತರದೆ ಇದ್ದಲ್ಲಿ ನಿನನಗೆ ವಿವಾಹ ವಿಚ್ಛೇದನೆ ನೀಡುತ್ಥೇನೆಂದು ನನಗೆ ಪದೆ ಪದೆ ಹೇಳುತ್ತಾ ನೀನು ನನ್ನ ಮನೆಯ ಬಿಟ್ಟು ಹೋಗಲೇ ಬೋಸಡಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಆದರೂ ಸಹಿಸಿಕೊಂಡು ನನ್ನ  ಗಂಡನ ಮನೆಯಲ್ಲಿ ಇದ್ದೇನೆ. ತದನಂತರ  ಯಾದಗಿರಿಗೆ ನನ್ನ ಅಣ್ಣನ ಮನೆಯಿದ್ದು ನನ್ನ ಅಣ್ಣನ ಮನೆಗೆ ಸಂಕ್ರಾಂತಿ  ಹಬ್ಬಕ್ಕೆ ದಿನಾಂಕ 14-01-2019 ರಂದು ಬಂದಾಗ ನನ್ನ ಗಂಡ ,ಅತ್ತೆ , ಮೈದುನ ಮತ್ತು ನಾದನೀಯ ನನ್ನ ಅಣ್ಣನ  ಮನೆಗೆ ಬಂದು ನಿನಗೆ ನಾನು ಏನು ಹೇಳಿದ್ದಳೇ ಸೂಳಿ ಮಗಳೇ ನೀನು ಬಂಗಾರ ಮತ್ತು ಹಣ ಹಾಗೂ ನಿಮ್ಮ ತಾಯಿ ಹೆಸರಿನಲ್ಲಿರುವ ಹೊಲ ನನ್ನ ಹೆಸರಿಗೆ ಮಾಡು ಅಂತಾ ಹೇಳಿದನು ಏನು ಮಾಡಿದಿ ಅಂತಾ ಅವಾಚ್ಯವಾಗಿ ಬೈಯ್ದು ನನಗೆ ಮನ ಬಂದಂತೆ ಕೈಯಿಂದ  ಮತ್ತು ಚಪ್ಪಲಿಯಿಂದ ನನ್ನ ಗಂಡನಾದ ನಿಗಣ್ಣಗೌಡ ತಂದೆ ಶರಣಪ್ಪ ಹೊಡಯುತ್ತಿರುವಾಗ ನನ್ನ ಅತ್ತೆಯಾದ ದೇವಿಂದ್ರಮ್ಮ ಗಂಡ ಶರಣಪ್ಪ  ನಾದಿನಿಯಾದ ಬಸಲಿಂಗಮ್ಮ ಈಶಮ್ಮ ಇವರಿಬ್ಬರೂ ನನ್ನ ಕೂದಲನ್ನು ಹಿಡಿದು ಜಗ್ಗಾಡುವಾಗ ನನ್ನ ಮೈದನಾದ ಬಸವರಾಜ ಇತನು ತನ್ನ ಎಡಗಾಲಿನಿಂದ ನನಗೆ ಒದ್ದನು ಆಗ ನನಗೆ ಹೊಡಯುತ್ತಾ ಲೇ ರಂಡಿ ಬೋಸಡಿ ಅಂತಾ ಅವಾಚ್ಯವಾಗಿ ಬೈದು ನೀನು ಹಣ ಮತ್ತು ಬಂಗಾರ ತರುವರೆಗೂ ನಮ್ಮ ಮನೆಗೆ   ಬರಬಾರದು ಮತ್ತು ನೀನು ಬಂದರೆ ನಿನ್ನನ್ನು ಖಲಸ ಮಾಡುತ್ತೇವೆ ಎಂದು ಹೇಳಿ ಹೋಡೆಯುತ್ತಿರುವಾಗ ನನ್ನ ಅಣ್ಣನಾದ ಸಾಬರೆಡ್ಡಿ ತಂದೆ ಮಲ್ಲಣ್ಣ ಮತ್ತು ನನ್ನ ತಾಯಿ ಶಂಕ್ರಮ್ಮ ಇವರಿಬ್ಬರೂ ಜಗಳ ಬಿಡಿಸಿ ಸಮಜಾಯಿಸುತಿರುವಾಗ ಲೇ ಬೋಸಡಿ ನೀನು ಹಣ ಬಂಗಾರ ತರಲಿಲ್ಲಂದರೆ ನಿನ್ನನ್ನು ಖಲಸ ಮಾಡುತ್ತೇವೆಂದು ಹೇಳಿ ನನಗೆ ವರದಕ್ಷಿಣೆ ಮಾನಸಿಕ ಕಿರುಕೂಳ ಮತ್ತು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಈ ಎಲ್ಲಾ ವಿಷಯಗಳ ಕುರಿತಾಗಿ ನಾನು ದಿನಾಂಕ 03-02-2018 ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬೆಂಗಳೂರು ಹಾಗೂ ದಿನಾಂಕ 08/10/2018 ರಂದು ಮಹಿಳಾ ಪೊಲೀಸ್ ಠಾಣೆ ಯಾದಗಿರಿಯಲ್ಲಿ ದೂರಗಳನ್ನು ಸಲಿಸಿರುತ್ತೇನೆ. ಈ ಬಗ್ಗೆ ಹಿರಿಯರಿಗೆ ಮತ್ತು ಸಂಬಂದಿಕರಿಗೆ ವಿಚಾರಿಸಿದ್ದು ನನ್ನ ಗಂಡನ ಮನೆಯವರು ಒಪ್ಪದೆ ಇರುವ ಕಾರಣ ಈ ದಿನ ತಡವಾಗಿ ಬಂದು ದೂರು ಸಲ್ಲಿಸಿರುತ್ತೇನೆ. ಆದಕಾರಣ ಮಾನ್ಯರಾದ ತಾವುಗಳು ನನಗೆ ವರದಕ್ಷಿಣಿ ಮಾನಸಿಕ ಕಿರುಕುಳ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ನನ್ನ ಗಂಡ ನನ್ನ ಅತ್ತೆ , ನನ್ನ ಮೈದುನ ಮತ್ತು ನನ್ನ  ನಾದಿನಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೂಂಡು ನನಗೆ ನ್ಯಾಯ ಒದಗಿಸಿಕೊಡಬೇಕೆಮದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.  ಅಂತಾ ಕೊಟ್ಟ ದೂರಿನ ಮೇಲೆ ಠಾಣೆ ಗುನ್ನೆ ನಂ 03/2019 ಕಲಂ 498(ಎ) 323 ,504, 506, 355, ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ.ಅಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!