ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 06-02-2019

By blogger on ಬುಧವಾರ, ಫೆಬ್ರವರಿ 6, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 06-02-2019 

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 16/2019 ಕಲಂ 279,304(ಎ) ಐ.ಪಿ.ಸಿ :- ದಿನಾಂಕ: 05/02/2019 ರಂದು 2.45 ಪಿಎಮ್ ಕ್ಕೆ ಫಿರ್ಯಾದಿದಾರ ಪುರೇಶ ತಂದೆ ತುಕಾರಾಮ ರಾಠೋಡ ವ:42 ಜಾ:ಲಂಬಾಣಿ ಉ:ಕೂಲಿ ಸಾ:ಹೋತಪೇಟ ಮೇಲಿನ ತಾಂಡಾ ಇವರು  ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆಯಿಸಿದ ಫಿರ್ಯಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ಫಿರ್ಯಾದಿದಾರನ ತಮ್ಮನಾದ ಉಮೇಶ ವ:32 ಈತನು ಇಂದು ದಿನಾಂಕ 05/02/2019 ರಂದು 2.15 ಪಿಎಮ್ ಕ್ಕೆ ತನ್ನ ಅಟೋ ನಂ ಕೆಎ:33 ಎ:0129 ನೇದ್ದನ್ನು ನಡೆಯಿಸಿಕೊಂಡು ಹುಲಕಲ್ ದಿಂದ ಭೀ.ಗುಡಿ ಕಡೆಗೆ ಬರುತ್ತಿರುವಾಗ ಹುಲಕಲ್ ಸೀಮಾಂತರ ಮಣಿಕಂಠ ಕಾಟನ್ ಮಿಲ್ ಹತ್ತಿರ ರೋಡಿನ ಮೇಲೆ ಎದುರಿನಿಂದ ಅಂದರೆ ಭೀ.ಗುಡಿ ಕಡೆಯಿಂದ ಬಸ್ ನಂ ಕೆಎ:33 ಎಫ್:0178 ನೇದ್ದರ ಚಾಲಕ ಈರಣ್ಣ ತಂದೆ ಚಂದಪ್ಪ ಸಿಂಪಿಗೇರ ಇತನು ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಮೃತ ಉಮೇಶ ಈತನ ಅಟೋ ಟಂಟಂ ಕ್ಕೆ ಡಿಕ್ಕಿ ಪಡಿಸಿದ್ದರಿಂದ ಅಪಘಾತದಲ್ಲಿ ಉಮೇಶ ಈತನ ತಲೆಯ ಮೇಲೆ ಬಸ್ಸಿನ ಚಕ್ರ ಹಾಯ್ದು ತಲೆಗೆ ಭಾರಿ ರಕ್ತಗಾಐವಾಗಿ ಹಾಗು ಎರಡೂ ಕಾಳುಗಳು ತೊಡೆಯಲ್ಲಿ ಮತ್ತು ಎರಡೈ ಕೈಗಳು ಮುಂಗೈ ಹತ್ತಿರ ಮುರಿದು ಸ್ಥಳದಲ್ಲಿಯೇ  ಮೃತಪಟ್ಟಿದ್ದು ಇರುತ್ತದೆ. ಸದರಿ ಉಮೇಶ ಈತನ ಸಾವಿಗೆ ಬಸ್ ಚಾಲಕನೇ ಕಾರಣನಿದ್ದು ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಅಜರ್ಿಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:16/2019 ಕಲಂ 279,304(ಎ) ಐಪಿಸಿ ನೇದ್ದರಡಿಯಲ್ಲಿ  ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆ. 

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 30/2019 ಕಲಂ: 341, 504, 506 ಸಂಗಡ 34 ಐಪಿಸಿ :- ದಿನಾಂಕ 04.02.2019 ರಂದು ಸಂಜೆ 4:00 ಗಂಟೆಗೆ ಸುಮಾರಿಗೆ ಫಿರ್ಯಾದಿ ತನ್ನ ವೈಯಕ್ತಿಕೆ ಕೆಲಸದ ಮೇಲೆ ಯಾದಗಿರಿಗೆ ಹೋಗಿ ನಂತರ ಮರಳಿ ತನ್ನ ಊರಿಗೆ ಹೋಗುವ ಸಲುವಾಗಿ ಸೇಡಂ ಬಸ್ಗೆ ಬಂದು ನಮ್ಮೂರಿಗೆ ಹೋಗವ ಗೇಟ್ನಲ್ಲಿ ಇಳಿದುಕೊಂಡು ತನ್ನ ತಮ್ಮನಿಗೆ ಫೋನ್ ಮಾಡಿ ಬರುವಂತೆ ತಿಳಿಸಿದ ನಂತರ ತಾನೊಬ್ಬನೆ ಅಲ್ಲಿಂದ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತರೆಲ್ಲಾರು ಸೇರಿ ಫಿರ್ಯಾದಿಯನ್ನು ತಡೆದು ನಿಲ್ಲಿಸಿ ಅವಾವ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ತನ್ನ ಮನೆಯಲ್ಲಿ ವಿಚಾರ ಮಾಡಿದ ನಂತರ ತಡವಾಗಿ ಇಂದು ದಿನಾಂಕ 05.02.2019 ರಂದು ಸಂಜೆ 7:10 ಗಂಟೆಗೆ ಠಾಣೆಗೆ ಬಂದು ಒಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 30/2019 ಕಲಂ: 341, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 07/2019 ಕಲಂ:341, 323, 324, 504, 506 ಸಂಗಡ 34 ಐಪಿಸಿ :- ದಿನಾಂಕ 05.02.2019 ರಂದು 4:00 ಪಿ.ಎಂ ಕ್ಕೆ ಪಿಯರ್ಾದಿ ಶ್ರೀ ದೇವಪ್ಪ ತಾಯಿ ಪರಮವ್ವ ಹೊಸಮನಿ ವಯ:38, ಉ:ಒಕ್ಕಲುತನ, ಜಾ:ಮಾದರ, ಸಾ:ನಾಗರದೊಡ್ಡಿ ಮಂಜಲಾಪೂರ ತಾ:ಸುರಪೂರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಫಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ  ನಾನು ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ, ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನನಗೆ ನಮ್ಮೂರ ನಮ್ಮ ಜಾತಿಯ ರಾಮಪ್ಪ ತಂದೆ ವೀರಭದ್ರಪ್ಪ ಜಾಲಿಬೆಂಚಿ, ಈರಪ್ಪ ತಂದೆ ರಾಮಪ್ಪ ಜಾಲಿಬೆಂಚಿ ರವರ ಪರಿಚಯವಿದ್ದು, ಇಬ್ಬರೂ ತಂದೆ ಮಗ ಇದ್ದು, ಇಬ್ಬರೂ ನಮ್ಮೂರಲ್ಲಿ ವಿನಾಕಾರಣ ಜನರಿಗೆ ಬೈಯುವದು ಜಗಳ ಮಾಡುವದು ಮಾಡುತ್ತಿದ್ದು, ನಾನು ಅವರಿಗೆ ಈ ರೀತಿ ಊರ ಜನರಿಗೆ ಬೈಯುವದು ಜಗಳ ಮಾಡುವದು ಸರಿಯಲ್ಲ. ಒಳ್ಳೆಯ ರೀತಿಯಿಂದ ಇರಬೇಕು ಅಂತ  ಬುದ್ದಿ ಮಾತು ಹೇಳಿದ್ದಕ್ಕೆ ನನ್ನ ಮೇಲೆ ಸಿಟ್ಟಾಗಿದ್ದ ಇರುತ್ತದೆ. ಹೀಗಿದ್ದು, ನಿನ್ನೆ ದಿನಾಂಕ:04.02.2019 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ನಾನು ಮಂಜಲಾಪೂರದಿಂದ ನಮ್ಮ ನಾಗರದೊಡ್ಡಿಗೆ ಹೋಗಲು ಎಲ್ಲಮ್ಮ ಗಂಡ ಮಲ್ಲಪ್ಪ ನಾಗರ ರವರ ಹೊಟೇಲ್ ಮುಂದಿನ ರಸ್ತೆಯ ಮೇಲಿಂದ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿ ನಮ್ಮೂರ ರಾಮಪ್ಪ ತಂದೆ ವೀರಭದ್ರಪ್ಪ ಜಾಲಿಬೆಂಚಿ ಹಾಗು ಅವರ ಮಗ ಈರಪ್ಪ ತಂದೆ ರಾಮಪ್ಪ ಜಾಲಿಬೆಂಚಿ ರವರು ನಿಂತಿದ್ದು ಇಬ್ಬರೂ ನನ್ನನ್ನು ನೋಡಿದವರೇ ಬೋಸಡಿ ಮಗ ದೇವ್ಯಾ ಒಬ್ಬನೇ ಹೊರಟಿದ್ದಾನೆ ಈ ಸೂಳೆ ಮಗನಿಗೆ ಇವತ್ತು ಬಿಡುವದು ಬೇಡ ಅಂತಾ ಅನ್ನುತ್ತ ನನ್ನ ಹತ್ತಿರ ಬಂದು ಮುಂದೆ ಹೋಗುತ್ತಿದ್ದ ನನಗೆ ತಡೆದು ನಿಲ್ಲಿಸಿ ಇಬ್ಬರೂ ಕೂಡಿ ನನ್ನ ತೆಕ್ಕೆಗೆ ಬಿದ್ದು ಮೈಮೇಲಿನ ಅಂಗಿಯನ್ನು ಹಿಡಿದು ಜಗ್ಗಾಡಿ ಹರಿದು ಹಾಕಿ ನನ್ನನ್ನು ನೆಲಕ್ಕೆ ಕೆಡವಿದ್ದು ಅಲ್ಲದೇ ಇಬ್ಬರೂ ಬೋಸಡಿ ಮಗನೇ ಸುಮ್ಮ ಸುಮ್ಮನೇ ನಾನು ಊರ ಜನರಿಗೆ ಬೈಯುತ್ತೇವೆ ಜಗಳ ಮಾಡುತ್ತೇವೆ ಅಂತಾ ನಮ್ಮ ತಂಟೆಗೆ ಬರುತ್ತಿಯಾ ಅಂತಾ ಅಂದವರೇ ಅವರಲ್ಲಿಯ ಈರಪ್ಪ ತಂದೆ ರಾಮಪ್ಪ ಜಾಲಿಬೆಂಚಿ ಈತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಸೊಂಟದ ಮೇಲೆ ಹೊಡೆದು ಗುಪ್ತಗಾಯಗಳು ಮಾಡಿದ್ದು, ರಾಮಪ್ಪನು ನನಗೆ ಕಾಲಿನಿಂದ ಮೈಮೇಲೆ ಒದ್ದು ತುಳಿದು ಗುಪ್ತಗಾಯಗಳು ಮಾಡಿದ್ದು, ಆಗ ನಾನು ಚೀರಾಡಲು ಅಲ್ಲಿಯೇ ಹೋಟೆಲ್ ಮುಂದೆ ಇದ್ದ ಸೋಮಣ್ಣ ತಂದೆ ಮಲ್ಲಪ್ಪ ನಾಗರ್ ಮತ್ತು ಹುಲಗಪ್ಪ ತಂದೆ ಪರಮಪ್ಪ ಹರಿಜನ ರವರು ಬಂದು ನೋಡಿ ಬಿಡಿಸಿದ್ದು, ಹೋಗುವಾಗ ರಾಮಪ್ಪ ಮತ್ತು ಈರಪ್ಪ ಇಬ್ಬರೂ ನನಗೆ ಬೋಸಡಿ ಮಗನೇ ದೇವ್ಯಾ ಇವತ್ತ ನಮ್ಮ ಕೈಯಲ್ಲಿ ಉಳಿದೀದಿ ಇನ್ನೊಂದು ಸಲ ಸಿಕ್ಕರೇ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ನಾನು ನಿನ್ನೆ ದಿನ ಮನೆಗೆ ಹೋಗಿ ಈ ದಿವಸ ಮುಂಜಾನೆ ಈ ಬಗ್ಗೆ ನಮ್ಮ ಸಮಾಜದ ಹಿರಿಯರೊಂದಿಗೆ ವಿಚಾರ ಮಾಡಿ ತಡವಾಗಿ ಬಂದು ದೂರು ಕೊಡುತ್ತಿದ್ದು, ಈ ಘಟನೆಯಲ್ಲಿ ನನಗೆ ಅಷ್ಟೇನು ಪೆಟ್ಟಾಗಿರುವದಿಲ್ಲ. ಉಪಚಾರಕ್ಕೆ ಆಸ್ಪತ್ರೆಗೆ ಹೋಗುವದಿಲ್ಲ ಮೇಲೆ ನಮೂದಿಸಿದ ಇಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:07/2019 ಕಲಂ:341, 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 15/2019 ಕಲಂ: 279,337,338 ಐಪಿಸಿ ಸಂ. 187 ಐಎಮ್ವಿ ಎಕ್ಟ್:- ದಿನಾಂಕ: 05/02/2019 ರಂದು 5-30 ಪಿಎಮ್ ಕ್ಕೆ ಶ್ರೀ ಮೌನೇಶ ತಂದೆ ಭೀಮಪ್ಪ ಕುಂಬಾರ, ವ:29, ಜಾ:ಕುಂಬಾರ, ಉ:ಗೌಂಡಿ ಕೆಲಸ ಸಾ:ಗೊಂದೆನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಗೌಂಡಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ: 01/12/2018 ರಂದು ಕುರುಕುಂದಿ ಗ್ರಾಮದಲ್ಲಿ ಮನೆ ಕಟ್ಟುವ ಕೆಲಸ ನಡೆದಿದ್ದರಿಂದ ನಾನು ಮತ್ತು ನನ್ನೊಂದಿಗೆ ಬಸವರಾಜ ತಂದೆ ಗಣಪತಿ ಗೌಡಗೇರಿ ಸಾ:ಕೊಂಕಲ್ ಇಬ್ಬರೂ ಕುರುಕುಂದಿಗೆ ಹೋಗಿ ಕೆಲಸ ಮುಗಿಸಿಕೊಂಡು ಸಾಯಂಕಾಲ ನನ್ನ ಮೋಟರ್ ಸೈಕಲ್ ನಂ. ಕೆಎ 33 ಡಬ್ಲೂ 0979 ನೇದ್ದರ ಮೇಲೆ ವಾಯ ವಡಗೇರಾ ಮುಖಾಂತರ ನಮ್ಮೂರಿಗೆ ಹೊರಟೆವು. ನಾನು ಮೋಟರ್ ಸೈಕಲ್ ಚಲಾಯಿಸುತ್ತಿದ್ದು, ಬಸವರಾಜನು ಹಿಂದುಗಡೆ ಕುಳಿತುಕೊಂಡಿದ್ದನು. ವಡಗೇರಾ-ತೇಕರಾಳ ರೋಡ ವಡಗೇರಾ ಗ್ರಾಮದ ದಗರ್ಾದ ಹತ್ತಿರ ನಮ್ಮ ಸೈಡಿಗೆ ನಾವು ನಿಧಾನವಾಗಿ ಹೋಗುತ್ತಿದ್ದಾಗ ಸಾಯಂಕಾಲ 4-15 ಪಿಎಮ್ ಸುಮಾರಿಗೆ ಎದುರುಗಡೆಯಿಂದ ಯಾವುದೋ ಒಂದು ಗೂಡ್ಸ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ವಾಹನವನ್ನು ಕಟ್ ಹೊಡೆದು ನಮಗೆ ಡಿಕ್ಕಿಪಡಿಸಿದಾಗ ನಾವು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದುಬಿಟ್ಟೇವು. ಅಫಘಾತದಲ್ಲಿ ನನ್ನ ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಎಲುಬು ಮುರಿದಿತ್ತು, ಬಲಭುಜಕ್ಕೆ ಭಾರಿ ಒಳಪೆಟ್ಟಾಗಿತ್ತು. ಎಡಗೈಗೆ ತರಚಿದಗಾಯವಾಗಿತ್ತು. ಬಸವರಾಜನಿಗೆ ಎದೆಗೆ ಗುಪ್ತಗಾಯ ಮತ್ತು ಎಡ ಮೊಳಕಾಲಿಗೆ ರಕ್ತಗಾಯವಾಗಿತ್ತು. ಆಗ ಯಾರೋ ದಾರಿ ಮೇಲೆ ಹೋಗುವವರು ನಮಗೆ ನೋಡಿ 108 ಅಂಬ್ಯುಲೇನ್ಸಗೆ ಫೋನ ಮಾಡಿ ಹೇಳಿದ್ದರಿಂದ 108 ಅಂಬ್ಯುಲೇನ್ಸನವರು ನಮಗೆ ಉಪಚಾರ ಕುರಿತು ವಡಗೇರಾ ಸರಕಾರಿ ಆಸ್ಪತ್ರೆಗೆ ತಂದಾಗ ಆಸ್ಪತ್ರೆಯವರು ನೋಡಿ ಪ್ರಥಮ ಉಪಚಾರ ಮಾಡಿ, ಬಹಳ ಗಾಯವಾಗಿದೆ ಬೇರೆ ದೊಡ್ಡ ಆಸ್ಪತ್ರೆಗೆ ಬೇಗ ಕರೆದುಕೊಂಡು ಹೋಗಿ ಎಂದು ಅದೇ ಅಂಬ್ಯುಲೇನ್ಸನಲ್ಲಿ ಕಳುಹಿಸಿಕೊಟ್ಟಾಗ ಅಲ್ಲಿಂದ ರಾಯಚೂರು ಧನ್ವಂತರಿ ಆಸ್ಪತ್ರೆಗೆ ಬಂದು ಸೇರಿಕೆ ಆದೆವು. ವಾಹನದ ಚಾಲಕನು ನಮಗೆ ಅಪಘಾತ ಮಾಡಿ ಸ್ವಲ್ಪ ಮುಂದೆ ಹೋಗಿ ವಾಹನವನ್ನು ನಿಲ್ಲಿಸಿ, ನಮಗೆ ಗಾಯವಾಗಿದ್ದನ್ನು ನೋಡಿ ನಂತರ ತನ್ನ ವಾಹನೊಂದಿಗೆ ಪರಾರಿಯಾದನು. ಸದರಿ ವಾಹನ ಮತ್ತು ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಧನ್ವಂತರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದ್ದರು. ಈಗ ನಾನು ಆಸ್ಪತ್ರೆಯಲ್ಲಿ ಉಪಚಾರ ಪಡೆದು ಗುಣಮುಖನಾಗಿ ಊರಿಗೆ ಬಂದಾಗ ನಮಗೆ ಅಪಘಾತವಾದ ಬಗ್ಗೆ ಪೊಲೀಸ್ ಕೇಸ ಆಗಿರುವುದಿಲ್ಲವೆಂದು ಗೊತ್ತಾಗಿದ್ದರಿಂದ ಈ ದಿವಸ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಅಪಘಾತಪಡಿಸಿ ಓಡಿ ಹೋದ ಗೂಡ್ಸ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಜರ್ಿ ಇರುತ್ತದೆ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 15/2019 ಕಲಂ: 279,337,338 ಐಪಿಸಿ ಸಂ. 187 ಐಎಮ್ವಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 16/2019 ಕಲಂ: 143, 147, 504, 323, 324, 355, 506 ಸಂ 149  ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989:- ದಿನಾಂಕ: 05/02/2019 ರಂದು 8-45 ಪಿಎಮ್ ಕ್ಕೆ ಶ್ರೀ ಚಂದ್ರಡ್ಡಿ ತಂದೆ ನಿಂಗಪ್ಪ ಇಬ್ರಾಹಿಂಪೂರ, ವ:25, ಜಾ:ಎಸ್.ಸಿ ಹೊಲೆಯ ಸಾ:ಕಾಡಂಗೇರಾ (ಬಿ) ಇವರು ಪೊಲೀಸ್ ಠಾಣೆಗೆ ಬಂದು ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಮ್ಮ ಗ್ರಾಮದ ಸವರ್ೆ ನಂ. 175 ರಲ್ಲಿ 8 ಎಕರೆ ಸರಕಾರಿ ಜಮೀನು ಇದ್ದು, ಅದರಲ್ಲಿ ಅಂಬೇಡ್ಕರ ಭವನಕ್ಕೆ 30 ಗುಂಟೆ ಹಾಗೂ ರುದ್ರಭೂಮಿಗೆ 20 ಗುಂಟೆ ಜಮೀನನ್ನು ಜಿಲ್ಲಾಧಿಕಾರಿಗಳಿಂದ ಈಗಾಗಲೇ ಮಂಜೂರಿಯಾಗಿದೆ. ಈ ಜಾಗದಲ್ಲಿ ಸವರ್ೆ ಇಲಾಖೆಯವರು ಅಳತೆ ಮಾಡಿ ಹದ್ದಬಸ್ತು ಕಲ್ಲುಗಳನ್ನು ಹಾಕಿದ್ದರು. ಈಗ ಸದರಿ ಮಂಜೂರು ಆದ ಜಾಗದಲ್ಲಿ ಹಲ್ಲೆ ಮಾಡಿದ ಆರೋಪಿತರು ಟಿನಶೇಡಗಳನ್ನು ಅತಿಕ್ರಮವಾಗಿ ಹಾಕಿರುತ್ತಾರೆ. ಈ ರೀತಿ ಅತಿಕ್ರಮಿಸಿರುವ ಜನರನ್ನು ಖಾಲಿ ಮಾಡಿಸಿ ಎಂದು ಶಹಾಪೂರ ತಹಸೀಲ್ದಾರರಿಗೆ ಮನವಿ ಮಾಡಿದ್ದರಿಂದ ಅವರು ದಿನಾಂಕ: 30/01/2019 ರಂದು ಸ್ಥಳ ಪರಿಶೀಲಿಸಿ, ಅಲ್ಲಿರುವ ಶೇಡಗಳನ್ನು ಖಾಲಿ ಮಾಡಿ ಎಂದು ಜನರಿಗೆ ಹೇಳಿದರು. ಆದರೆ ಜನರು ತಹಸೀಲ್ದಾರ ಜೀಪಿಗೆ ಅಡ್ಡ ನಿಂತು ಇದು ಸರಕಾರಿ ಜಮೀನು ಇದೆ ನಾವು ಬಿಡುವುದಿಲ್ಲವೆಂದು ವಿರೋಧಿಸಿದರು. ನಂತರ ತಹಸೀಲ್ದಾರರು ಹೋದ ಮೇಲೆ ಅಲ್ಲೆ ಸಿಸಿ ರಸ್ತೆಯಲ್ಲಿ ಸಮಯ 1 ಗಂಟೆ ಸುಮಾರಿಗೆ ಅಲ್ಲಿರುವ ಜನರು ಏಕಾ ಏಕಿ ನಮ್ಮ ಮೇಲೆ ದಾಳಿ ಮಾಡಿ ಕಲ್ಲು, ಚಪ್ಪಲಿಗಳಿಂದ ಹೊಡೆಯುತ್ತಾ ಹೊಲೆ ಸೂಳೆ ಮಕ್ಕಳದು ಸೊಕ್ಕು ಬಹಳ ಆಗಿದೆ ಅವರೆ ಅಧಿಕಾರಿಗಳಿಗೆ ಹೇಳಿದ್ದರಿಂದ ನಮಗೆ ಜಾಗ ಬಿಡಲು ಹೇಳುತ್ತಿದ್ದಾರೆಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೂ ಮತ್ತು ನನ್ನ ಜೊತೆ ಇದ್ದ ಹಣಮಂತ ತಂದೆ ಅಮಾತೆಪ್ಪ 22 ವರ್ಷ ಜಾತಿ ಹೊಲೆಯ ಮೇಲೆ ನೆಲಕ್ಕೆ ಕೆಡವಿ ಕೈಯಿಂದ, ಚಪ್ಪಲಿಯಿಂದ ಹೊಡೆದದ್ದು ಅಲ್ಲದೆ ಒದ್ದಿರುತ್ತಾರೆ. ಆರೋಪಿಗಳು ಈ ಕೆಳಗಿನಂತೆ ಇರುತ್ತಾರೆ. 1) ಬಸಣ್ಣಗೌಡ ತಂದೆ ಚೆನ್ನಪ್ಪಗೌಡ ಲಿಂಗಾಯತ, 2) ಜೇಜಪ್ಪ ಗೊಲ್ಲರು, 3) ನಾಗಪ್ಪ ಸಿದ್ದಪ್ಪ ಉಲ್ಟಿ, 4) ಹಣಮಂತ ತಂದೆ ಸಿದ್ದಪ್ಪ ಉಲ್ಟಿ, 5) ಸಿದ್ದಮ್ಮ ಗಂಡ ಹಣಮಂತ ಉಲ್ಟಿ, 6) ಸಿದ್ದಪ್ಪ ತಂದೆ ಟೋಪಯ್ಯ, 7) ಸಿದ್ರಾಮಪ್ಪ ತಂದೆ ರಂಗಪ್ಪ ಗೋಡಿಹಾಳ, 8) ದೇವಿಂದ್ರಮ್ಮ ತಂದೆ ರಂಗಪ್ಪ ಗೋಡಿಹಾಳ, 9) ಸಿದ್ದಪ್ಪ ತಂದೆ ಹಣಮಂತ ಮೇಸ್ತ್ರಿ, 10) ಬಸಪ್ಪ ತಂದೆ ಸಿದ್ದಪ್ಪ ಸುಕಲಿ, 11) ಶಿವರಾಜ ತಂದೆ ಸಿದ್ದಪ್ಪ ಗೋಡಿಹಾಳ, 12) ಮಂಜುನಾಥ ತಂದೆ ಹಣಮಂತ ಉಲ್ಟಿ, 13) ದೇವಪ್ಪ ತಂದೆ ದವಲಪ್ಪ ಗೋಡಿಹಾಳ, 14) ಬಸಲಿಂಗಪ್ಪ ತಂದೆ ಸಿದ್ದಪ್ಪ (ದೌಲಪ್ಪ), 15) ದೇವಪ್ಪ ತಂದೆ ಮಲ್ಲಪ್ಪ ಗೊಡಿಹಾಳ, 16) ಸಿದ್ದಪ್ಪ ತಂದೆ ನಿಂಗಪ್ಪ ಬಂಗಾರಿ, 17) ಶರಣಪ್ಪ ತಂದೆ ನಿಂಗಣ್ಣ ದೇಸಾಯಿ, 18) ಜಗಪ್ಪ ತಂದೆ ಹಣಮಂತ ಉಲ್ಟಿ, 19) ನಾಗಪ್ಪ ತಂದೆ ಹುಲಗಪ್ಪ ಸುಕಲಿ ಹಾಗೂ ಇತರರು ಸೇರಿಕೊಂಡು ಕನ್ಯಾಕೋಳುರು ದಳಪತಿಗೆ ಹೊಡೆದಂಗೆ ಹೊಡೆದು ಬಿಡ್ರಲೆ ಏನು ಆಗುತ್ತದೆ ಒಂದು ಸಲ ಆಗಲಿ ಎಂದು ಕೂಗಾಡುತ್ತಾ ಈ ರೀತಿ ದೌರ್ಜನ್ಯ ಮಾಡಿರುತ್ತಾರೆ. ಆಗ ಅಲ್ಲಿರುವ ಬಿಡಿಸಲು ಬಂದ ರಾಮಣ್ಣನಿಗೂ ಕೂಡಾ ಹೊಡೆದಿರುತ್ತಾರೆ. ರಾಮಣ್ಣ ಜಗಳ ಬಿಡಿಸಿದ ನಂತರ ಜನರಿಗೆ ಹೆದರಿ ಅಡವಿ ಬಿದ್ದು, ಹುಂಡೆಕಲ್ ರಸ್ತೆ ಮೂಲಕ ವಡಗೇರಾ ಠಾಣೆಗೆ ಬಂದು ದೂರು ಕೊಟ್ಟಿರುತ್ತೇವೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 16/2019 ಕಲಂ: 143, 147, 504, 323, 324, 355, 506 ಸಂ 149  ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989 ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 17/2019 ಕಲಂ: 143, 147, 148, 504, 354, 323, 324, 506 ಸಂ 149 ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) (ಡಬ್ಲೂ) (2) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989 :- ದಿನಾಂಕ: 05/02/2019 ರಂದು 10-15 ಪಿಎಮ್ ಕ್ಕೆ ಶ್ರೀಮತಿ ದ್ಯಾವಮ್ಮ ಗಂಡ ಬಸಪ್ಪ ಉಲ್ಟಿ, ವ:40, ಜಾ:ಬೇಡರ (ಎಸ್.ಟಿ), ಉ:ಹೊಲಮನೆ ಕೆಲಸ ಸಾ:ಕಾಡಂಗೇರಾ (ಬಿ) ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಾನು ಊರಲ್ಲಿ ಹೊಲಮನೆ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಗ್ರಾಮದ ಸವರ್ೆ ನಂ. 175 ರಲ್ಲಿ 8 ಎಕರೆ ಸರಕಾರಿ ಜಮೀನು ಇದ್ದು, ಇದರಲ್ಲಿ ನಾನು ಪತ್ರಾಸ ಟೀನಶೆಡ ಹಾಕಿಕೊಂಡು ವಾಸವಾಗಿರುತ್ತೇನೆ. ನನ್ನಂತೆ ಇನ್ನು ಕೆಲವರು ಟಿನಶೇಡ ಹಾಕಿಕೊಂಡು ಇರುತ್ತಾರೆ. ಆದರೆ ನಮ್ಮೂರು ಮುಸ್ಲಿಂ ಮತ್ತು ಎಸ್.ಸಿ ಜನರು ವಿನಾಕಾರಣ ಈ ಜಮೀನಿನಲ್ಲಿ ನಮಗೆ ಅಂಬೇಡ್ಕರ ಭವನಕ್ಕೆ 30 ಗುಂಟೆ ಹಾಗೂ ರುದ್ರಭೂಮಿಗೆ 20 ಗುಂಟೆ ಜಮೀನನ್ನು ಜಿಲ್ಲಾಧಿಕಾರಿಗಳಿಂದ ಮಂಜೂರಿಯಾಗಿರುತ್ತದೆ. ನಮಗೆ ರುದ್ರಭೂಮಿ ಮಾಡಬೇಕು ಖಾಲಿ ಮಾಡಿರೆಂದು ನಮ್ಮೊಂದಿಗೆ ದಿನಾಲೂ ತಕರಾರು ಮಾಡುತ್ತಾ ಬರುತ್ತಿದ್ದಾರೆ. ನಾವು ಊರ ಮದ್ಯ ರುದ್ರಭೂಮಿ ಮಾಡುವುದು ಸರಿಯಲ್ಲ ಬೇರೆ ಕಡೆ ಮಂಜೂರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಮಂಜುರು ಮಾಡಿಸಿಕೊಂಡರಾಯಿತು ಅಂದರು ಕೇಳದೆ. ಕಂದಾಯ ಅಧಿಕಾರಿಗಳಿಗೆ ಅಜರ್ಿ ಸಲ್ಲಿಸುತ್ತಾ ಬರುತ್ತಿದ್ದಾರೆ. ಹೀಗಿದ್ದು ದಿನಾಂಕ: 30/01/2019 ರಂದು ತಹಸೀಲ್ದಾರರು ಶಹಾಪೂರ ರವರು ಬಂದು ಪರಿಶೀಲನೆ ಮಾಡಿಕೊಂಡು ಹೋದರು. ಅವರು ಹೊದ ಸ್ವಲ್ಪ ಹೊತ್ತಿನ ನಂತರ ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ಮತ್ತು ದೇವಿಂದ್ರಮ್ಮ ಗಂಡ ಶಿವಪ್ಪ, ಗಂಗಮ್ಮ ಗಂಡ ಬಸಪ್ಪ ಹಲಗಿ, ದ್ಯಾವಮ್ಮ ಗಂಡ ಬಸಪ್ಪ ಗಡ್ಡೆಸೂಗೂರು, ದಂಡಮ್ಮ ಗಂಡ ಮರೆಪ್ಪ ಗೋಡಿಹಾಳ, ಲಕ್ಷ್ಮೀ ಗಂಡ ಗುರುಲಿಂಗಪ್ಪ ಕೌಳೂರು, ರಂಗಮ್ಮ ಗಂಡ ಸಿದ್ದಪ್ಪ ಕಾವಲಿ ಮತ್ತು ದುರುಗಮ್ಮ ಗಂಡ ಶರಣಪ್ಪ ವಡಗೇರಿ ಮತ್ತು ಇತರರು ನಮ್ಮ ಮೇಲ್ಕಂಡ ಟಿನ ಶೆಡಗಳ ಹತ್ತಿರ ಇದ್ದಾಗ ನಮ್ಮೂರಿನವರಾದ 1) ಅಜಮೀರ ತಂದೆ ಮೊಹ್ಮದ ಚೌದ್ರಿ, 2) ಸಾಲರ ತಂದೆ ಮೊಹ್ಮದ ಚೌದ್ರಿ, 3) ಚಂದ್ರಾಮಪ್ಪ @ ಚಂದ್ರಾರೆಡ್ಡಿ ತಂದೆ ನಿಂಗಪ್ಪ ಇಬ್ರಾಹಿಂಪೂರ, 4) ಹಣಮಂತ ತಂದೆ ಸಿದ್ದಪ್ಪ ಇಬ್ರಾಹಿಂಪೂರ, 5) ನಾಗಪ್ಪ ತಂದೆ ನಿಂಗಪ್ಪ ಇಬ್ರಾಹಿಂಪೂರ, 6) ರೇಣುಕಮ್ಮ ಗಂಡ ನಿಂಗಪ್ಪ ಇಬ್ರಾಹಿಂಪೂರ, 7) ಚಂದ್ರಮ್ಮ ಗಂಡ ಮರಿಲಿಂಗಪ್ಪ ಇಬ್ರಾಹಿಂಪೂರ, 8) ರಾಮಪ್ಪ ತಂದೆ ಅಮಾತೆಪ್ಪ ಒಂಟೂರು, 9) ಹಣಮಂತ ತಂದೆ ಅಮಾತೆಪ್ಪ ಒಂಟುರು, 10) ಮೋನಪ್ಪ ತಂದೆ ಅಮಾತೆಪ್ಪ ಒಂಟುರು, 11) ಭೀಮವ್ವ ಗಂಡ ಅಮಾತೆಪ್ಪ ಒಂಟೂರು, 12) ಶೇಖಪ್ಪ ತಂದೆ ಬಸಪ್ಪ ಇಬ್ರಾಹಿಂಪೂರ, 13) ರೇಣಮ್ಮ ಗಂಡ ಶೇಖಪ್ಪ ಇಬ್ರಾಹಿಂಪೂರ, 14) ಹಣಮಂತ ತಂದೆ ಬಸಪ್ಪ ಕಾಕಲವಾರ, 15) ಮಲ್ಲಪ್ಪ ತಂದೆ ಶೆಖಪ್ಪ ಇಬ್ರಾಹಿಂಪೂರ, 16) ಬಸಪ್ಪ ತಂದೆ ನಿಂಗಪ್ಪ ಕೋಳಿ, 17) ಹುಲಗಮ್ಮ ತಂದೆ ನಿಂಗಪ್ಪ ಕೋಳಿ, 18) ಮರಿಲಿಂಗಪ್ಪ ತಂದೆ ನಿಂಗಪ್ಪ ಇಬ್ರಾಹಿಂಪೂರ, 19) ಮಹಾದೇವಪ್ಪ ತಂದೆ ಮರೆಪ್ಪ ಬಿಳ್ಹಾರ, 20) ಅಮಾತೆಪ್ಪ ತಂದೆ ಮಲ್ಲಪ್ಪ ಒಂಟೂರ, 21) ನಿಂಗಪ್ಪ ತಂದೆ ಶರಣಪ್ಪ ಇಬ್ರಾಹಿಂಪೂರ ಮತ್ತು ಇತರರು ಸೇರಿ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಬಂದವರೆ ನಮಗೆ ಎಲೆ ಬ್ಯಾಡ ಸೂಳೆರೆ ನಿಮ್ಮ ಸೊಕ್ಕು ಜಾಸ್ತಿಯಾಗಿದೆ ನಮ್ಮ ರುದ್ರಭೂಮಿ ಜಾಗ ಖಾಲಿ ಮಾಡ್ರಿ ಎಂದರೆ ಮಾಡುತ್ತಿಲ್ಲ. ನಿಮಗೆ ಖಲಾಸ ಮಾಡೆ ಬಿಡುತ್ತೇವೆ ಎಂದು ಜಗಳ ತೆಗೆದವರೆ ನನಗೆ ಚಂದ್ರಾರೆಡ್ಡಿ ಮತ್ತು ಹಣಮಂತ ಇಬ್ರಾಹಿಂಪೂರ ಇಬ್ಬರೂ ನನ್ನ ಸೀರೆ ಸೆರಗು ಹಿಡಿದು ಜಗ್ಗಿ ಮಾನಭಂಗ ಮಾಡಿದಾಗ ನಾಗಪ್ಪ ಮತ್ತು ರಾಮಪ್ಪ ಇವರು ಕಲ್ಲಿನಿಂದ ಹೊಡೆದರು. ಬಿಡಿಸಲು ಬಂದ ಇತರ ಹೆಣ್ಣುಮಕ್ಕಳಾದ ದೇವಿಂದ್ರಮ್ಮ ಗಂಡ ಶಿವಪ್ಪ, ಗಂಗಮ್ಮ ಗಂಡ ಬಸಪ್ಪ ಹಲಗಿ, ದ್ಯಾವಮ್ಮ ಗಂಡ ಬಸಪ್ಪ ಗಡ್ಡೆಸೂಗೂರು, ದಂಡಮ್ಮ ಗಂಡ ಮರೆಪ್ಪ ಗೋಡಿಹಾಳ, ಲಕ್ಷ್ಮೀ ಗಂಡ ಗುರುಲಿಂಗಪ್ಪ ಕೌಳೂರು, ರಂಗಮ್ಮ ಗಂಡ ಸಿದ್ದಪ್ಪ ಕಾವಲಿ ಮತ್ತು ದುರುಗಮ್ಮ ಗಂಡ ಶರಣಪ್ಪ ವಡಗೇರಿ ಇವರಿಗೆ ಕೂಡಾ ಎಲ್ಲರೂ ಸೇರಿ ಮಾನಭಂಗ ಮಾಡಿ ಸೆರಗುಗಳನ್ನು ಜಗ್ಗಾಡಿ ನಮಗೆಲ್ಲ ಓಡಾಡಿಸಿ, ಮನಸ್ಸಿಗೆ ಬಂದಂಗೆ ಕಲ್ಲು ಬಡಿಗೆಗಳಿಂದ, ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿದರು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮ ಗ್ರಾಮದ ಬಸಲಿಂಗಪ್ಪ ತಂದೆ ಸಿದ್ದಯ್ಯ ಗೋಡಿಹಾಳ, ಹಣಮಂತ ತಂದೆ ರಂಗಪ್ಪ ಕಿರಿ ಹೈಯಾಳ ಮತ್ತು ಇತರರು ಬಂದು ನಮಗೆ ಹೊಡೆಯವುದು ಬಿಡಿಸಿದರು. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಭೊಸಡೆರೆ ಈ ಜಾಗ ಖಾಲಿ ಮಾಡಲಿಲ್ಲ ಅಂದ್ರೆ ನಿಮಗೆ ಖಲಾಸ ಮಾಡೆ ಬಿಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಕಾರಣ ಸರಕಾರಿ ಜಾಗದಲ್ಲಿ ನಾವು ವಾಸ ಇದ್ದವರಿಗೆ ತೆರವು ಮಾಡ್ರಿ ಎಂದು ಜಗಳ ತೆಗೆದು ಅಕ್ರಮಕೂಟ ಕಟ್ಟಿಕೊಂಡು ಬಂದು ಕಲ್ಲುಬಡಿಗೆಗಳಿಂದ ಹೊಡೆದು, ನಮ್ಮ ಸೀರೆ ಸೆರಗು ಹಿಡಿದು ಜಗ್ಗಿ ಮಾನಭಂಗ ಮಾಡಿ ಜೀವದ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಬಡ ಹೆಣ್ಣುಮಕ್ಕಳಾದ ನಮಗೆ ರಕ್ಷಣೆ ಕೊಡಬೇಕಾಗಿ ಮಾನ್ಯರವರಲ್ಲಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 17/2019 ಕಲಂ: 143, 147, 148, 504, 354, 323, 324, 506 ಸಂ 149 ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) (ಡಬ್ಲೂ) (2) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989 ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!