ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-02-2019

By blogger on ಮಂಗಳವಾರ, ಫೆಬ್ರವರಿ 5, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-02-2019 

ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 08/2019  ಕಲಂ 279, 338, 304(ಎ) ಐಪಿಸಿ :- ದಿನಾಂಕ:04.02.2019 ರಂದು 7.15 ಎಎಂ ಕ್ಕೆ ಫಿಯರ್ಾದಿ ನಿಂಗಪ್ಪ ತಂದೆ ಸಾಬಣ್ಣ ಗೂಗಲ್, ವಯಾ|| 37ವರ್ಷ, ಜಾ||ಕುರುಬರು, ಉ||ಒಕ್ಕಲುತನ, ಸಾ||ಸೈದಾಪೂರ ಗ್ರಾಮ, ತಾ||ಜಿ||ಯಾದಗಿರಿ ಈತನು ಠಾಣೆಗೆ ಹಾಜರಾಗಿ ನೀಡಿದ ಫಿಯರ್ಾದಿ ಹೇಳಿಕೆ ಏನೆಂದರೆ, ನಾನು ಈ ಮೇಲ್ಕಂಡ ಹೆಸರು ಮತ್ತು ವಿಳಾಸದವನಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ ತಾಯಿಗೆ ನಾವು 2 ಜನ ಗಂಡು ಮಕ್ಕಳು ಮತ್ತು 3 ಜನ ಹೆಣ್ಣು ಮಕ್ಕಳು ಹೀಗೆ ಒಟ್ಟು 5 ಜನ ಮಕ್ಕಳಿರುತ್ತೇವೆ. ನಾನು ಹಿರಿಯ ಮಗನಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ:03.02.2019 ರಂದು ಸಾಯಂಕಾಲ 5.30 ಗಂಟೆ ಸುಮಾರಿಗೆ ನಮ್ಮ ತಂದೆಯಾದ ಸಾಬಣ್ಣ ತಂದೆ ನಿಂಗಪ್ಪ ಗೂಗಲ್ ವಯಾ|| 55ವರ್ಷ ಇವರು ಹೊಲಕ್ಕೆ ಹೋಗಿ ಬರಬೇಕೆಂದು ನಮ್ಮೂರಿನ ಹುಸೇನಪ್ಪ ತಂದೆ ತಿಮ್ಮಯ್ಯ ವಡ್ಡರ ಇವರ ಮೋಟರ್ ಸೈಕಲ್ ನಂಬರ ಕೆಎ-05, ಜೆಜಿ-6229 ನೇದ್ದರ ಮೇಲೆ ನನ್ನ ತಂದೆ ಹಿಂದೆ ಕುಳಿತುಕೊಂಡಾಗ ಸೈಕಲ್ ಮೋಟರನ್ನು ಹುಸೇನಪ್ಪ ಚಲಾಯಿಸಿಕೊಂಡು ನಮ್ಮ ಹೊಲದ ಕಡೆಗೆ ಹೊರಟರು. ನಿನ್ನೆ ಸಾಯಂಕಾಲ 6.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನಗೆ ನಮ್ಮ ಹುಡುಗರು ಬಂದು ತಿಳಿಸಿದ್ದೇನೆಂದರೆ, ಸಾಬಣ್ಣ ತಾತ ಇವರಿಗೆ ಅಪಘಾತವಾಗಿ ಗಾಯಗೊಂಡು ರಾಚನಳ್ಳಿ ಕ್ರಾಸ್ ಹತ್ತಿರ ರೋಡಿನ ಮೇಲೆ ಬಿದ್ದಿರುತ್ತಾನೆ ಅಂತಾ ತಿಳಿಸಿದರು. ಕೂಡಲೇ ನಾನು ಮತ್ತು ನಮ್ಮ ಸಂಬಂಧಿಯಾದ ಶಿವಪ್ಪ ತಂದೆ ಯಲ್ಲಪ್ಪ ಗೂಗಲ್ ಮತ್ತಿತರರು ಕೂಡಿಕೊಂಡು ರಾಚನಳ್ಳಿ ಕ್ರಾಸ್ ಹತ್ತಿರ ಹೋಗಿ ನೋಡಲಾಗಿ ನನ್ನ ತಂದೆ ತಲೆಯ ಹಿಂದೆ ಭಾರೀ ರಕ್ತಗಾಯ, ಹಣೆಯ ಎಡಗಡೆ ರಕ್ತಗಾಯ ಮತ್ತು  ಎಡಭುಜಕ್ಕೆ ತೆರಚಿದ ರಕ್ತಗಾಯಗಳಾಗಿದ್ದವು. ಮೋಟರ್ ಸೈಕಲ್ ಚಲಾಯಿಸುತ್ತಿದ್ದ ನಮ್ಮುರಿನ ಹುಸೇನಪ್ಪ ತಂದೆ ತಿಮ್ಮಯ್ಯ ವಡ್ಡರ ಇವರಿಗೆ ಬಲಗಾಲಿಗೆ ಮೊಣಕಾಲಿನ ಕೆಳಗೆ ಭಾರೀ ರಕ್ತಗಾಯ ಮತ್ತು ತಲೆಗೆ ಗುಪ್ತಗಾಯವಾಗಿದ್ದವು. ನಮ್ಮ ತಂದೆಯವರ ಮೋಟರ್ ಸೈಕಲ್ಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಲಾರಿಯನ್ನು ನೋಡಲು ಲಾರಿ ನಂ:ಟಿಎನ್-88, ಎ-9577 ನೇದ್ದು ಇದ್ದು, ಲಾರಿಯ ಹತ್ತಿರ ಇದ್ದವರಿಗೆ ವಿಚಾರಿಸಲು ಅಪಘಾತಪಡಿಸಿದ ಚಾಲಕನ ಹೆಸರು ಪನ್ನೀರ್ ಸೆಲ್ವಂ ತಂದೆ ಸುಬ್ರಮಣ್ಯಂ ತಮಿಳುನಾಡು ಅಂತಾ ಗೊತ್ತಾಯಿತು. ಆಗ ನಾವು ಒಂದು ಖಾಸಗಿ ವಾಹನವನ್ನು ಮಾಡಿಕೊಂಡು ನಮ್ಮ  ತಂದೆ ಸಾಬಣ್ಣ ಇವರಿಗೆ ಉಪಚಾರ ಕುರಿತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೆವು. ನಮ್ಮಂತೆ ಹುಸೇನಪ್ಪನಿಗೆ ಅವರ ಸಂಬಂಧಿಕರು ಇನ್ನೊಂದು ವಾಹನದಲ್ಲಿ ಉಪಚಾರ ಕುರಿತು ರಾಯಚೂರು ಕಡೆಗೆ ಕರೆದುಕೊಂಡು ಹೋದರು. ನಮ್ಮ ತಂದೆ ಸಾಬಣ್ಣ ಇವರಿಗೆ ರಾಯಚೂರು ರಿಮ್ಸ ಆಸ್ಪತ್ರೆಯಲ್ಲಿ  ವೈದ್ಯಾಧಿಕಾರಿಗಳು ತಲೆಗೆ ಭಾರೀ ಪೆಟ್ಟಾಗಿದ್ದರಿಂದ ಹೆಚ್ಚಿನ ಉಪಚಾರಕ್ಕಾಗಿ ಬಳ್ಳಾರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ನಾವು ಅಂಬ್ಯುಲೆನ್ಸ ವಾಹನದಲ್ಲಿ ರಾಯಚೂರಿನಿಂದ ಬಳ್ಳಾರಿಗೆ ಕರೆದುಕೊಂಡು ಹೋಗುತ್ತಿದ್ದೆವು. ನಾವು ಬಳ್ಳಾರಿಗೆ ಕರೆದುಕೊಂಡು ಹೋಗುವಾಗ ದಿನಾಂಕ:04.02.2019 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಾರ್ಗಮಧ್ಯದಲ್ಲಿ ನಮ್ಮ ತಂದೆ ಮೃತಪಟ್ಟರು. ಆಗ ನಾವು ನಮ್ಮ ತಂದೆಯ ಶವವನ್ನು ಮರಳಿ ರಾಯಚೂರು ರಿಮ್ಸ ಆಸ್ಪತ್ರೆಗೆ ತಂದು ಶವಗಾರ ಕೋಣೆಯಲ್ಲಿ ತಂದು ಇರಿಸಿದೆವು. ನಿನ್ನೆ ದಿನಾಂಕ:03.02.2019 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ರಾಯಚೂರು-ಯಾದಗಿರಿ ಮುಖ್ಯ ರಸ್ತೆಯ ಮೇಲೆ ರಾಚನಳ್ಳಿ ಕ್ರಾಸ್ ಹತ್ತಿರ ನಮ್ಮ ತಂದೆ ಮತ್ತು ಹುಸೇನಪ್ಪ ವಡ್ಡರ ಇವರು ಕುಳಿತು ಹೊರಟ ಮೋಟರ್ ಸೈಕಲ್ ನಂ:ಕೆಎ-05, ಜೆಜಿ-6229 ನೇದ್ದಕ್ಕೆ ಯಾದಗಿರಿ ಕಡೆಯಿಂದ ಬಂದ ಒಂದು ಲಾರಿ ನಂ:ಟಿಎನ್-88, ಎ-9577 ನೇದ್ದರ ಚಾಲಕನಾದ ಪನ್ನೀರ್ ಸೆಲ್ವಂ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ಅಪಘಾತಪಡಿಸಿದ್ದರಿಂದ ನನ್ನ ತಂದೆ ಸಾಬಣ್ಣ ಮತ್ತು ಹುಸೇನಪ್ಪ ಇವರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ನನ್ನ ತಂದೆಯವರು ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಅಪಘಾತಪಡಿಸಿದ ಲಾರಿ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ನೀಡಿದ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:08/2019 ಕಲಂ 279, 338, 304(ಎ) ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 29/2019 ಕಲಂ 379 ಐಪಿಸಿ :- ದಿನಾಂಕ 04.02.2019 ರಂದು ಸಮಯ ಸಂಜೆ 5:20 ಗಂಟೆಗೆ ಗಂಟೆಗೆ ಎ-1 ಈತನು ಎ-2 ಹೇಳಿದಂತೆ ಎ-2 ಈತನ ಟ್ರ್ಯಾಕ್ಟರನಲ್ಲಿ ಎ-3 ಈತನಿಗೆ 1000/- ರೂ ಹಣವನ್ನು ಕೊಟ್ಟು ಯಂಪಾಡ ಸಿಮಾಂತರದಲ್ಲಿಯ ಮರಳನ್ನು ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗ ಇಲ್ಲದೆ ಕಳ್ಳತನದಿಂದ ತನ್ನ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಗುರುಮಠಕಲ್ ಕಡೆಗೆ ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಎ-1 ಮತ್ತು ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಮೆಯ ಮೂಲಕ ಜಪ್ತಿಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು. ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 29/2019 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 14/2019 ಕಲಂ, 87 ಕೆ.ಪಿ.ಆ್ಯಕ್ಟ್ :- ದಿನಾಂಕ: 04/02/2019ರಂದು06.10 ಪಿಎಮ್ ಕ್ಕೆ ಸರಕಾರಿತಪರ್ೆ ಪಿರ್ಯಾದಿದಾರರಾದ ಮಾನ್ಯಸುರೇಶ ಬಾಬು ಪಿಎಸ್ಐ ಗೋಗಿ ಪೊಲೀಸ್ಠಾಣೆ.ರವರುಇಬ್ಬರೂ ಪಂಚರು, ಸಿಬ್ಬಂದಿಯವರು, ಮತ್ತುಠಾಣೆಯ ಸಿಬ್ಬಂದಿಯವರೊಂದಿಗೆ ಸರಕಾರಿಜೀಪ್ ನಂ: ಕೆಎ-33 ಜಿ-160  ಮತ್ತುಒಂದು ಖಾಸಗಿ ವಾಹನದಲ್ಲಿಉಕ್ಕನಾಳ ಸೀಮಾಂತರದಲ್ಲಿ ದೋರಿಗುಡ ಹತ್ತಿರಇರುವ ಸರಕಾರಿಗೌಂಟಾಣದ  ಹತ್ತಿರ ಸಾರ್ವಜನಿಕಖುಲ್ಲಾಜಾಗದಲ್ಲಿಕೆಲವು ಜನರುಕೂಡಿಕೊಂಡುದುಂಡಾಗಿ ಕುಳಿತುಕೊಂಡು ಮದ್ಯದಲ್ಲಿ ಹುಂಜಗಳೀಗೆ ಪಂಜೆ ಹಚ್ಚಿ ನಿನ್ನ ಹುಂಜಗೆದ್ದರೆ 200 ರೂಪಾಯಿಗೆ ನನ್ನ ಹುಂಜಗೆದ್ದರೆ 400 ರೂಪಾಯಿಕೊಡಬೇಕುಅಂತಾಅವರವರಲ್ಲಿಯೇ ಮಾತನಾಡುತ್ತಾ ಹುಂಜದ ಪಂಜೆದ ಮುಖಾಂತರಜೂಜಾಟಆಡುತ್ತಿರುವಾಗ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿದ್ದುಇಬ್ಬರೂ ಪಂಚರ ಸಮಕ್ಷಮಜಪ್ತಿ ಪಂಚನಾಮೆಯನ್ನು04.10 ಪಿಎಮ್ ದಿಂದ05.10 ಪಿಎಮ್ದವರೆಗೆಕೈಕೊಂಡು ಮುದ್ದೇಮಾಲು ವಶಪಡಿಸಿಕೊಂಡು ಆರೋಪಿತರೊಂದಿಗೆ ಮುಂದಿನ ಕ್ರಮಕುರಿತು06.10 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ನೀಡಿ ಸೂಕ್ತ ಕ್ರಮ ಕೈಕೊಳ್ಳುವಂತೆ ಆದೇಶಿಸಿದ ಮೇರೆಗೆ ಪ್ರಕರಣದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ.ಎಮ್.ಎಪ್.ಸಿ ನ್ಯಾಯಾಲಯದಅನುಮತಿ ಪಡೆದುಕೊಂಡುಠಾಣೆಗುನ್ನೆ ನಂ: 14/2019 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!