ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-02-2019

By blogger on ಶುಕ್ರವಾರ, ಫೆಬ್ರವರಿ 1, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-02-2019 

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 28/2019 ಕಲಂ: 323, 504, 506 ಸಂಗಡ 34 ಐಪಿಸಿ ಮತ್ತು 3(1)(ಆರ್)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ -1989 :- ದಿನಾಂಕ 31.01.2019 ರಂದು ಸಂಜೆ 4:00 ಗಂಟೆಗೆ ಫಿರ್ಯಾಧಿದಾರನಾದ ಚಂದ್ರಪ್ಪ ತಂದೆ ರಾಮಣ್ಣ ಬಡುಸು ವ|| 55 ವರ್ಷ ಜಾ||ಚಿಂತಕುಂಟಾ ತಾ||ಗುರುಮಠಕಲ್ ಜಿ||ಯಾದಗಿರಿ ಈತನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ  ದೂರು ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಾನು ಚಂದ್ರಪ್ಪ ತಂದೆ ರಾಮಣ್ಣ ಬಡುಸು ವ|| 55 ವರ್ಷ ಜಾ||ಚಿಂತಕುಂಟಾ ಗ್ರಾಮ ಪಂಚಾಯತಿ ಮೊಟ್ನಳ್ಳಿ ಅಧ್ಯಕ್ಷರಾಗಿರುತ್ತೇವೆ. ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದುದೇನೆಂದರೆ, ದಿನಂಕ 23.01.2019 ರಂದು ಮಧ್ಯಾಹ್ನ 3-00 ಗಂಟೆಗೆ ಚಿಂತಕುಂಟಾ ಗ್ರಾಮದಲ್ಲಿ ಮನೆಗಳ ಸಂಬಂಧ ಗ್ರಾಮ ಸಭೆ ನಡೆದ ಸಮಯದಲ್ಲಿ ನನಗೆ ನಮ್ಮ ಗ್ರಾಮದವರಾದ ] ನಾಗೇಂದ್ರಪ್ಪ ತಂದೆ ರಾಮಣ್ಣ ಬೋಯಿನ್, 2] ತಿಪ್ಪಣ್ಣ ತಂದೆ ಶಿವಪ್ಪ ಶಾಪಲ್ ,3] ದೇವಿಂದ್ರಪ್ಪ ತಂದೆ ರಾಮಣ್ಣ ಪೋಳಂ, 4]ಯಲ್ಲಾಲಿಂಗ ತಂದೆ ಹಣಮಂತ ಮುತ್ಯಾಲ ಇವರು ನನಗೆ ಸಭೇ ನಡೆದ ಸಮಯದಲ್ಲಿ ನನ್ನ ಮೇಲೆ ಜಗಳ ತೆಗೆದು ಲೇ ಮಾದಿಗ ಸೂಳೆ ಮಗನೆ ರಂಡಿ ಮಗನೆ ಬೋಸಿಡಿ ಮಗನೆ ನೀನು ಹಣಮನ್ ದೇವರ ಗುಡಿಯಲ್ಲಿ ಗ್ರಾಮ ಸಭೆ ಮಾಡುಸುತ್ತಿಯಾ? ಈ ಗುಡಿಯೋಳಗೆ ನೀನು ಬರುತ್ತಿಯಾ? ನೀನು ಮಾದಿಗ ಸೂಳೆ ಮಗನ ಇದ್ದು ಗುಇಯೋಳಗೆ ಬರುತ್ತಿಯಾ ಎಂದು ನನ್ನ ಮೆಲೆ ಜಗಳಕ್ಕೆ ಬಂದು ನನ್ನ ಎದೆಯ ಮೇಲೆ ಅಂಗಿ ಹಿಡಿದು ತಿಪ್ಪಣ್ಣ ತಂದೆ ಶಿವಪ್ಪ ಮತ್ತು ಯಲ್ಲಾಲಿಂಗ ತಂದೆ ಹಣಮಂತ ಮುತ್ಯಾಲ ಇವರು ನನನ್ನು ಹೊಡೆದಿದ್ದಾರೆ ಮತ್ತು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಏಕೆಂದರೆ ನಾನು ಪರಿಶಿಷ್ಟ ಜಾರಿಯ ಮಾದಿಗ ಜನಾಂಗಕ್ಕೆ ಸೇರಿದವನಾಗಿದ್ದು ನಾನು ಅಧ್ಯಕ್ಷ ಆಗಿದ್ದು ಇವರಿಗೆ ಇಷ್ಟವಲ್ಲ ಮತ್ತು ಸರಕಾರದ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಮತ್ತು ದಿನಾಂಕ 29.01.2019 ರಂದು ಮುಂಜಾನೆ 10-30 ಗಂಟೆಗೆ ಹನುಮಾನ ಮಂದಿರಕ್ಕೆ ದರ್ಶನಮಾಡಿಕೊಳ್ಳಲು ಹೋದಗ ಅಲಿಲಯೂ ಸಹ ಈ ಮೇಲ್ಕಾಣಿಸಿದ ಆರೋಪಿಗಳು ನನ್ನನ್ನು ಹೊಡೆಯಲು ಬಂದರು ಅಷ್ಟರಲ್ಲಿ ನಾನು ಪಾರಾಗಿ ಗುರುಮಠಕಲ್ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದೇನೆ. ಕಾರಣ ನನಗೆ ಜಾರಿ ನಿಂದನೆ ಮಾಡಿ ಕೊಲೆ ಮಾಡಲು ಬಂದಿರುವ ಮತ್ತು ಸರಕಾರದ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮಕೈಗೊಂಡು ನನಗೆ ನ್ಯಾಯ ಒದಗಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೆನೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 28/2019 ಕಲಂ: 323, 504, 506 ಸಂಗಡ 34 ಐಪಿಸಿ ಮತ್ತು 3(1)(ಆರ್)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ -1989 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 27/2019 ಕಲಂ 379 ಐಪಿಸಿ :- ದಿನಾಂಕ 31.01.2019 ರಂದು ಸಮಯ 7:00 ಎ.ಎಮ್ಕ್ಕೆ ಗಂಟೆಗೆ 1] ಕೆಂಪು ಬಣ್ಣದ ಮಹಿಂದ್ರ ಭೂಮಿಪುತ್ರ ಟ್ರ್ಯಾಕ್ಟರ ಇಂಜಿನ ನಂ: ಕೆಎ-33-ಟಿಎ-2895 ಮತ್ತು ಟ್ರ್ಯಾಲಿ ಚಸ್ಸಿ ನಂ: 34/2012-13 ಅಂತಾ ಇದ್ದು ಟ್ರ್ಯಾಲಿಗೆ ನಂಬರ್ ಇಲ್ಲದಿರುವುದು ನೇದ್ದರ ಚಾಕ ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗ ಇಲ್ಲದೆ ಕಳ್ಳತನದಿಂದ ತನ್ನ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಗುರುಮಠಕಲ್ ಕಡೆಗೆ ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಮೆಯ ಮೂಲಕ ಜಪ್ತಿಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು. ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 27/2019 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 12/2019 ಕಲಂ: 32,34 ಕೆ.ಇ ಎಕ್ಟ್ 1965 :- ದಿನಾಂಕ: 31/01/2019 ರಂದು 6-15 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 31/01/2019 ರಂದು ಮದ್ಯಾಹ್ನ  ನಾನು ಮತ್ತು ರಾಜಕುಮಾರ ಹೆಚ್.ಸಿ 179, ಮಹೇಂದ್ರ ಪಿಸಿ 254 ಮತ್ತು ರಾಜಶೇಖರ ಪಿಸಿ 177 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಜೋಳದಡಗಿ ಗ್ರಾಮದ ಜೋಳದಡಗಿ ಬ್ರಿಡ್ಜ್ ಕಮ್ ಬ್ಯಾರೆಜ್-ಬೆಂಡೆಬೆಂಬಳ್ಳಿ ರೋಡಿನ ಸೂಗೂರು ಗ್ರಾಮಕ್ಕೆ ಹೋಗುವ ಚೌಕ ರೋಡಿನಲ್ಲಿ ಒಂದು ಕಿರಾಣಾ ಅಂಗಡಿ ಪಕ್ಕದ ಖಾಲಿ ಸ್ಥಳದಲ್ಲಿ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಬಿಯರ ಮತ್ತು ಕ್ವಾಟರ ಪೌಚುಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ದಾಳಿ ಬಗ್ಗೆ ತಿಳಿಸಿ, ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕರೆದುಕೊಂಡು ಹೊರಟು 4 ಪಿ.ಎಮ್ ಕ್ಕೆ ಜೋಳದಡಗಿ ಗ್ರಾಮದ ಬಸ್ ಸ್ಟಾಪ ಹತ್ತಿರ ಹೋಗಿ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಸೂಗೂರು ಚೌಕ ಹತ್ತಿರ ಬಂದು ಅಲ್ಲಿರುವ ಒಂದು ಕಿರಾಣಿ ಅಂಗಡಿಯನ್ನು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ 150/- ರೂ. ಗೆ ಒಂದು ಬಿಯರ ಮತ್ತು 40/- ರೂ. ಗೆ ಒಂದು ಪೌಚು ಕುಡಿಯಿರಿ ಬರ್ರಿ ಎಂದು ಕೂಗಿ ಕರೆದು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಹಿಡಿಯಬೇಕು ಎನ್ನುವಷ್ಟರಲ್ಲಿ ಆ ಮನುಷ್ಯನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಅಶೋಕ ತಂದೆ ಚಂದ್ರಯ್ಯಗೌಡ ಕೊತ್ತಾಪಲ್ಲಿ, ವ:28, ಜಾ:ಲಿಂಗಾಯತ, ಉ:ವ್ಯಾಪಾರ ಸಾ:ಜೋಳದಡಗಿ ಎಂದು ಹೇಳಿದರು. ಅವನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಎರಡು ಕಾಟನ ಬಾಕ್ಸಗಳು ಇದ್ದು, ಒಂದು ಕಾಟನ ಬಾಕ್ಸ ತೆರೆದು ನೋಡಲಾಗಿ ಅದರಲ್ಲಿ 90 ಎಮ್.ಎಲ್ ದ ಓರಿಜಿನಲ್ ಚಾಯ್ಸ್ ವ್ಹಿಸ್ಕಿ ಪೌಚುಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ 90 ಎಮ್.ಎಲ್ ದ ಒಟ್ಟು 96 ಪೌಚುಗಳು ಇದ್ದು, ಒಟ್ಟು 90ಘಿ96=8 ಲೀಟರ 640 ಎಮ್.ಎಲ್ ಮದ್ಯ ಆಗುತ್ತಿದ್ದು, ಸದರಿ ಪೌಚುಗಳ ಮೇಲೆ ಎಮ್.ಆರ್.ಪಿ ಬೆಲೆ 30.32ಘಿ96=2910=00 ರೂ. 72 ಪೈಸೆ ಆಗುತ್ತಿದ್ದು, ಮತ್ತೊಂದು ಕಾಟನ ಬಾಕ್ಸದಲ್ಲಿ 650 ಎಮ್.ಎಲ್ ದ ಕಿಂಗಫಿಶಯರ್ ಸ್ಟ್ರಾಂಗ ಬಿಯರ ಬಾಟಲಿಗಳು ಇದ್ದು, ಎಣಿಕೆ ಮಾಡಿ  ನೋಡಲಾಗಿ ಒಟ್ಟು 18 ಬಾಟಲಿಗಳು ಇದ್ದು, ಒಟ್ಟು 650ಘಿ18=11 ಲೀಟರ್ 700 ಎಮ್.ಎಲ್ ಮದ್ಯ ಆಗುತ್ತಿದ್ದು, ಸದರಿ ಬಾಟಲಗಳ ಮೇಲೆ ಎಮ್.ಆರ್.ಪಿ ಬೆಲೆ 130/- ರೂ. ಇದ್ದು 130ಘಿ18=2340=00 ರೂ. ಆಗುತ್ತಿದ್ದು.  ಸದರಿಯವುಗಳಲ್ಲಿಂದ ರಸಾಯನಿಕ ಪರೀಕ್ಷೆ ಮತ್ತು ಸ್ಯಾಂಪಲ್ ಕುರಿತು ತಲಾ ಒಂದು ಪ್ರತ್ಯೇಕ ಪಡೆದುಕೊಂಡು ನಮ್ಮ ಸಮಕ್ಷಮ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ನಾವು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿಪಡಿಸಿಕೊಂಡರು ಮತ್ತು ಉಳಿದ ಎಲ್ಲಾ ಪೌಚು ಹಾಗೂ ಬಿಯರ ಬಾಟಲಿಗಳನ್ನು ಕೂಡ ಕೇಸಿನ ಮುಂದಿನ ಪುರಾವೆ ಕುರಿತು ತಮ್ಮ ತಾಬಾಕ್ಕೆ ತೆಗೆದುಕೊಂಡು 4 ಪಿಎಮ್ ದಿಂದ 5 ಪಿಎಮ್ ದ ವರೆಗೆ ಪಂಚನಾಮೆ ಜರುಗಿಸಿ, 6-15 ಪಿಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆ ಪ್ರಿಂಟ ಹಾಕಿ ವರದಿ ತಯಾರಿಸಿ, ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 12/2019 ಕಲಂ: 32,34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 38/2019.ಕಲಂಃ 78(3) ಕೆ.ಪಿ.ಆ್ಯಕ್ಟ :- ದಿನಾಂಕಃ 31-01-2019 ರಂದು 16-30 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ನಾಗರಾಜ. ಜಿ. ಪಿ.ಐ. ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 31/01/2019 ರಂದು ಮದ್ಯಾಹ್ನ 13-00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ದೋರನಳ್ಳಿ ಗ್ರಾಮದ ಅಂಬಾಭವಾನಿ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದಾನೆ. ಅಂತ ಮಾಹಿತಿ ಬಂದಮೇರೆಗೆ ಠಾಣೆಯ ರಾಜಕುಮಾರ ಪಿ.ಎಸ್.ಐ.(ಎಲ್.&ಓ), ಸಿಬ್ಬಂದಿಯವರಾದ ಮಲ್ಲಣ್ಣ ಹೆಚ್,ಸಿ, 79, ಶರಣಪ್ಪ ಹೆಚ್,ಸಿ, 164, ಬಾಗಣ್ಣ ಪಿ,ಸಿ,194, ಜೀಪಚಾಲಕ ನಾಗರೆಡ್ಡಿ ಎ.ಪಿ.ಸಿ. 161, ರವರಿಗೆ  ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ಬಾಗಣ್ಣ ಪಿ,ಸಿ,194, ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 13-20 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿ.ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಸಿಬ್ಬಂದಿಯವರು ಠಾಣೆಯ ಜೀಪ್ ನಂ ಕೆಎ-33ಜಿ-0138 ನ್ನೆದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 13-30 ಗಂಟೆಗೆ ಹೊರಟು ಸದರಿ ಜೀಪನ್ನು ನಾಗರೆಡ್ಡಿ ಎ.ಪಿ.ಸಿ. ರವರು ಚಲಾಯಿಸುತ್ತ ದೋರನಳ್ಳಿ ಗ್ರಾಮದ ಇಬ್ರಾಯಿಂಪೂರ ಕ್ರಾಸ್ ಹತ್ತಿರ ದೂರದಲ್ಲಿ 14-00 ಗಂಟೆಗೆ ಹೊಗಿ ಜೀಪನಿಲ್ಲಿಸಿ ಜೀಪಿನಿಂದ ಎಲ್ಲರು ಇಳಿದು ನಡೆದುಕೊಂಡು 14-10 ಗಂಟೆಗೆ ಅಂಬಾಭವಾನಿ ಗುಡಿಹತ್ತಿರ ಹೋಗಿ ನಿಗಾಮಾಡಿ ನೊಡಲಾಗಿ ಅಂಬಾಭವಾನಿ ಗುಡಿಯ ಮುಂದೆ ಇರುವ ಸಾರ್ವಜನಿಕ ಕುಲ್ಲಾ ಜಾಗೆಯಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದನು. ಆಗ ನಾವೆಲ್ಲರೂ ಸದರಿಯವನು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು 14-20 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಸಾರ್ವಜನಿಕರಿಗೆ ಕೂಗಿ ಹೇಳುತ್ತ, ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿವನು ಸಿಕ್ಕಿಬಿದ್ದಿದ್ದು. ಅಲ್ಲದೆ ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ. ಆಗ ನಾನು ಪಂಚರ ಸಮಕ್ಷಮದಲ್ಲಿ ದಾಳಿಯಲ್ಲಿ ಸಿಕ್ಕ ಸಾರ್ವಜನಿಕರಿಗೆ ಕೂಗಿ ಹೇಳುತ್ತ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಗುರುಮಹಾಂತಪ್ಪ ತಂದೆ ಬಸಪ್ಪ ರೆಡ್ಡಿ ವ|| 35 ಜಾ||ಪ.ಜಾತಿ. ಉ|| ಮಠಕಾಬರೆದುಕೊಳ್ಳೂವದು ಸಾ|| ದೋರನಳ್ಳಿ ಅಂತ ಹೇಳಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 520/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ:00-00 ರೂ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 14-30 ರಿಂದ 15-30 ರವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 16-00 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ 16-30 ಗಂಟೆಗೆ ವರದಿಯನ್ನು ತಯ್ಯಾರಿಸಿ ಮುಂದಿನ ಕ್ರಮಕೈಕೊಳ್ಳುವಂತೆ ವರದಿ ಹಾಜರಪಡಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ,ನಂ 12/2019 ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ದಾಖಲಿಸಿಕೊಂಡು. ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಹುಲಗಪ್ಪ ಪಿ.ಸಿ.344 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 17-00 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ. ಶಹಾಪೂರ ಠಾಣೆಯ ಗುನ್ನೆ ನಂ 38/2019 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 10/2019 ಕಲಂ: 78(3) ಕೆಪಿ ಯಾಕ್ಟ :- ದಿನಾಂಕ: 31.01.2019 ರಂದು ಪಿರ್ಯಾಧಿದಾರರಿಗೆ ಕಿರದಳ್ಳಿ ಗ್ರಾಮದ ಗ್ರಾಮ ದೇವತೆ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ 4.45 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ರಮೇಶ ತಂದೆ ಗಂಗಾಧರ ವಿಶ್ವಕರ್ಮ ವ|| 48 ಜಾ|| ವಿಶ್ವಕರ್ಮ ಉ|| ಕೂಲಿಕೆಲಸ ಸಾ|| ಕಿರದಳ್ಳಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 2710/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಸದರಿ ಮುದ್ದೇಮಾಲು ಹಾಗೂ ಆರೋಪಿತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸುವ ಕುರಿತು ವರದಿ ನಈಡಿದ್ದು ಸದರಿ ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 10/2019 ಕಲಂ 78[3] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 11/2019 ಕಲಂ: 87 ಕೆಪಿ ಆಕ್ಟ :- ದಿನಾಂಕ: 31/01/2019 ರಂದು 03-00 ಪಿಎಮ್ ಸುಮಾರಿಗೆ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಚಿಗರಿಹಾಳ ಗ್ರಾಮದ ಹನುಮಾನ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0074 ನೇದ್ದರಲ್ಲಿ ಚಿಗರಿಹಾಳ ಗ್ರಾಮಕ್ಕೆ ಹೋಗಿ ಹನುಮಾನ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ಜೂಜಾಟ ಆಡುವ ಬಗ್ಗೆ ಖಚಿಪಡಿಸಿಕೊಂಡು 04-10 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 04 ಜನರು ಸಿಕ್ಕಿದ್ದು ಹಾಗೂ ಒಟ್ಟು 4560/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳನ್ನು 04-10 ಪಿ.ಎಂ ದಿಂದ 05-10 ಪಿ.ಎಂದವರಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಕ್ರಮ ಜರುಗಿಸಲು ಆದೇಶಿಸಿದ್ದು ಅಂತಾ ವರದಿಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 11/2019 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 12/2019 ಕಲಂ: 78(3) ಕೆಪಿ ಯಾಕ್ಟ :- ದಿನಾಂಕ 31.01.2019 ರಂದು 04.45 ಪಿ.ಎಂಕ್ಕೆ ಸದರಿ ಆರೋಪಿತನು ಚಿಗರಿಹಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಜನರಿಂದ ಹಣ ಪಡದು ಮಟಕಾ ನಂಬರ ಬರೆದುಕೊಳುತ್ತಿದ್ದಾಗ ಫಿಯರ್ಾದಿದಾರರು, ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದು ದಾಳಿಯಲ್ಲಿ ಆರೋಪಿತನನ್ನು ಸಿಕ್ಕ ವ್ಯಕ್ತಿಯನ್ನು ವಶಕ್ಕೆ ಪಡೆದು 1020/- ನಗದು ಹಣ, ಒಂದು ಪೆನ್ನು ಮತ್ತು ಒಂದು ಮಟಕಾ ಚೀಟಿಯನ್ನು ಜಪ್ತಿ ಪಡಿಸಿಕೊಂಡು ಬಂದು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸುವಂತೆ ಆದೇಶಿಸಿದ್ದರಿಂದ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 12/2019 ಕಲಂ 78(3) ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 31/2019 ಕಲಂ 379 ಐ.ಪಿ.ಸಿ. :- ದಿನಾಂಕ: 31-01-2019 ರಂದು 12-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಶಿವಪ್ಪ ತಂದೆ ಯಲ್ಲಪ್ಪ ನಾಯ್ಕೋಡಿ ವಯಾ: 42 ವರ್ಷ ಉದ್ಯೋಗ:ವಕೀಲ ವೃತ್ತಿ ಜಾತಿ:ಕಬ್ಬಲಿಗ ಸಾ: ರಸ್ತಾಪೂರ ಹಾವ:ಇಂದಿರಾ ನಗರ ಶಹಾಪೂರ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಾನು ದಿನಾಂಕ:31-12-2018 ರಂದು ನನ್ನ ಹೆಸರಿನಿಂದ ಇರುವ ನನ್ನ ಬೈಕ್ ತೆಗೆದುಕೊಂಡು ಶಹಾಪೂರದಿಂದ ಮಾಚಗುಂಡಾಳದ ನಮ್ಮ ಅಳಿಯನಾದ ಶ್ರೀ ಮಾನಪ್ಪ ತಂದೆ ದೇವಿಂದ್ರಪ್ಪ ಬಾಕಲಿ ಸಾ:ಮಾಚಂಗುಂಡಾಳ ಇವರ ಮನೆಗೆ ದೇವರ ಕಾರ್ಯಕ್ರಮಕ್ಕೆ ಬಂದು ಸದರಿ ನನ್ನ ಮೋಟಾರ ಸೈಕಲ್ನ್ನು ಮನೆ ಮುಂದೆ ನಿಲ್ಲಿಸಿ ಲಾಕ ಮಾಡಿದ್ದು ಅಂದು ರಾತ್ರಿ ಅಲ್ಲೆ ಇದ್ದು ದಿನಾಂಕ:01-01-2019 ರಂದು ಬೆಳಿಗ್ಗೆ 7 ಗಂಟೆಗೆ ಎದ್ದು ನಾನು ಊರಿಗೆ ಹೋಗಬೇಕು ಅಂತಾ ನಮ್ಮ ಅಳಿಯನ ಮನೆಯ ಮುಂದೆ ನಿಲ್ಲಿಸಿದ  ನನ್ನ ಬೈಕ್ ನೋಡಲು ಮನೆಯ ಮಂದೆ ಇರಲಿಲ್ಲ. ನಾನು ನನ್ನ ಅಳಿಯ ಮಾನಪ್ಪ ಇಬ್ಬರು ಕೂಡಿ ಅಕ್ಕಪಕ್ಕದಲ್ಲಿ ಹಾಗೂ ಊರಲ್ಲಿ  ವಿಚಾರಿಸಿದರು ಯಾವುದೆ ಮಾಹಿತಿ ಸಿಗಲಿಲ್ಲ  ನನ್ನ ಬೈಕ  ನಂ. ಕೆಎ-33, ಹೆಚ್-7363 ಇರುತ್ತದೆ. ನಾನು ಇಲ್ಲಿಯವರೆಗೆ ಎಲ್ಲಾ ಕಡೆ ವಿಚಾರ ಮಾಡಿದರು ನನ್ನ ಬೈಕ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ ಇಲ್ಲಿಯವರೆಗೆ ಹುಡುಕಾಡಿ ಠಾಣೆಗೆ ತಡವಾಗಿ ಬಂದು ಅಜರ್ಿ ನಿಡುತ್ತಿದ್ದು ಇರುತ್ತದೆ. ದಿನಾಂಕ:31-12-2018 ರಂದು ರಾತ್ರಿ 11-30 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ಮಧ್ಯದ ಸಮಯದಲ್ಲಿ ಯಾರೋ ಕಳ್ಳರು ಮೊಟಾರ ಸೈಕಲ್ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನನ್ನ ಬೈಕಿನ ಅಂದಾಜು ಕಿಮ್ಮತ್ತು 15 ಸಾವಿರ ರೂಗಳು ಆಗಬಹುದು ಮಾನ್ಯರು ನನ್ನ ಬೈಕನ್ನು ಹುಡುಕಿಕೊಡಬೇಕೆಂದು ತಮ್ಮಲ್ಲಿ ವಿನಂತಿ ನನ್ನ ಬೈಕ್ ಬ್ಲಾಕ್ ಕಲರ್ ಮತ್ತು ಬಿಳಿ ಗೆರೆ ಬಣ್ಣದ ಸ್ಪ್ಲೆಂಡರ್ ಪ್ಲಸ್ ಬೈಕ್ ಇರುತ್ತದೆ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!