ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 24-01-2019

By blogger on ಗುರುವಾರ, ಜನವರಿ 24, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 24-01-2019 
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 21(3) (4) ಎಂ.ಎಂ.ಆರ್.ಡಿ ಕಾಯ್ದೆ & 379 ಐಪಿಸಿ :- 22/01/2019 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಯಿಸುವ ಟಿಪ್ಪರ ನಂ. ಕೆಎ-51 ಬಿ-6723 ನೇದ್ದರಲ್ಲಿ ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪ್ರಕರಣದ ಪಿಯರ್ಾದಿ ಪಂಚನಾಮೆಯಲ್ಲಿ ನಮೂದ ಮಾಡಿದ ಪಂಚರು ಮತ್ತು ಸಿಬ್ಬಂದಿ ಹೆಚ್.ಸಿ-130, ಪಿಸಿ-290, 288 ರವರು ದಾಳಿ ಮಾಡಿ ಹಿಡಿದು ಪಂಚನಾಮೆ ಮಾಡಿಕೊಂಡು ಮರಳಿ ಠಾಣೆಗೆ ಬಂದು ಪಿಯರ್ಾದಿ ನೀಡದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.   

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 09/2019 ಕಲಂ: 379 ಐಪಿಸಿ:-ದಿನಾಂಕ: 23/01/2019 ರಂದು 12-30 ಪಿಎಮ್ ಕ್ಕೆ ಶ್ರೀಧರ ತಂದೆ ಕುಬೇರಪ್ಪ ಸುಣಗಾರ ಆಡಳಿತಾಧಿಕಾರಿ ರಿನಿವ ವಿಂಡ ಎನಜರ್ಿ (ಬುದ್ಧ-3) ಪ್ರೈ ಲಿ. ಐಕೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಮ್ಮ ಸೋಲಾರ ಘಟಕದಲ್ಲಿ 20 ಟತಿ ವಿದ್ಯುತ ಉತ್ಪಾದನೆ ನಡೆಯುತ್ತಿದ್ದು, ಉತ್ಪಾದನೆಯ ಸಲುವಾಗಿ ಮ್ಯಾಡ್ಯೂಲಗಳನ್ನು (ಪ್ಯಾನಲ್) ಅಳವಡಿಸಿದ್ದು, ಸದರಿ ಮ್ಯಾಡ್ಯುಲಗಳಿಗೆ 6 ಖಡ ಟಟ ಕಾಪರ ಕೇಬಲ್ ವಾಯರ ಜೋಡಿಸಿ, ಅದರಿಂದ ವಿದ್ಯುತ ಉತ್ಪಾದನೆ ಆಗುತ್ತಿದೆ. ಮುಂಜಾತ್ರವಾಗಿ ಹೆಚ್ಚಿನ ಸೆಕ್ಯೂರಿಟಿ ಗಾರ್ಡಗಳನ್ನು ಹಾಗೂ ವಿದ್ಯುತ ಲೈಟಗಳನ್ನು ಸಹ ಅಳವಡಿಸಿ, ಅದರ ಸುತ್ತಲು ಕಂಪೌಂಡ 6 ಅಡಿ ಎತ್ತರ ಇದ್ದು, ಅದರ ಮೇಲೆ ತಂತಿ ಬೇಲಿಯನ್ನು ಆ್ಯಂಗ್ಲರಗೆ ಜೋಡಿಸಿದ್ದು ಇರುತ್ತದೆ. ದಿನಾಂಕ: 11/01/2019 ರಂದು ಬೆಳಗ್ಗೆ 4-30 ಸುಮಾರಿನಿಂದ 5-30 ರ ವರೆಗೆ 6 ಎಸ್ಕ್ಯೂ ಎಮ್.ಎಮ್ ಕೆಬಲ್ ವ್ಯಾಯರ ಮಾಡ್ಯೂಲಗೆ ಅಳವಡಿಸಿದ್ದು, 407 ಮ್ಯಾಡುಲಗಳಿಗೆ ಜೋಡಿಸಿದ ಐಸಿಆರ್-4 ರ ಬಳಿ ಕಳ್ಳತನವಾಗಿದ್ದು, ಅದರ ಅಂದಾಜು ಬೆಲೆ 3,28,500=00 ಆಗಿರುತ್ತದೆ. ದಿನಾಂಕ: 22/12/2018 ರಂದು ಐಸಿಆರ್-1 ದಲ್ಲಿ 6 ಖಡ ಟಟ ಕಾಪರ ಕೆಬಲ್ ಅಳವಡಿಸಿದ 381 ಪ್ಯಾನಲ್ (ಮಾಡ್ಯೂಲ್) ಕೆಬಲ್ ವ್ಯಾಯರ ಕಳುವು ಮಾಡಿಕೊಂಡು ಹೋಗಿದ್ದು, ಅದರ ಬೆಲೆ 3 ಲಕ್ಷ ರೂ. ಆಗುತ್ತದೆ. ದಿನಾಂಕ: 09/12/2018 ರಂದು ನಮ್ಮ ವಿದ್ಯುತ ಘಟಕದಲ್ಲಿ ಇರುವ ಸ್ಟೋರದಲ್ಲಿಯ 6 ಖಡ ಟಟ 8 ಕೆಬಲ್ ಡ್ರಮಗಳು ತಾಮ್ರದ ತಂತಿ ಕಳುವು ಆಗಿದ್ದು, ಅದರಲ್ಲಿ 6 ಡ್ರಮಗಳು ಸುಮಾರು ಪ್ಲಾಂಟಿನಿಂದ 1 ಕಿ. ಮೀ ದೂ ಬಿಸಾಡಿದ್ದನ್ನು ಗಾಡ್ರ್ಸ ಮತ್ತು ಕೆಲಸಗಾರರ ಸಹಾಯದಿಂದ ಅವುಗಳು ದೊರೆತ್ತಿದ್ದು, ಅವುಗಳನ್ನು ಸ್ಟೋರಗಳಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಇದರ ಬೆಲೆ 49,125=00 ಆಗಿರುತ್ತೆ. ಈ ರೀತಿಯಾಗಿ 6 ಖಡ ಟಟ ತಾಮ್ರದ ಕೆಬಲ್ ವ್ಯಾಯರ ಕಳ್ಳತನವಾಗಿದ್ದರಿಂದ ಇದರಿಂದ ವಿದ್ಯುತ ಉತ್ಪಾದನೆ ಕುಂಠಿತವಾಗಿದ್ದು, ಇದರಿಂದ ಕಂಪನಿಗೆ ಸುಮಾರು ಲಕ್ಷಗಟ್ಟಲೆ ನಷ್ಟವಾಗಿರುತ್ತೆ. ಮೇಲ್ಕಂಡ ಕೆಬಲ್ ವಾಯಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 09/2019 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 10/2019 ಕಲಂ: 420 ಐಪಿಸಿ ಮತ್ತು 78(3) ಕೆ.ಪಿ.ಆ್ಯಕ್ಟ್ :- ದಿನಾಂಕ: 23/01/2019 ರಂದು 13-15 ಎಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಸುರೇಶ ಬಾಬು ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ,  ಇಂದು ದಿನಾಂಕ: 23/01/2019 ರಂದು 01.30 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಹೋಸ್ಕೇರಾ ಬೀಟ್ ಹೆಚ್.ಸಿ-146 ರವರ ಮೂಖಾಂತರ ಬಾತ್ಮಿ ಬಂದಿದ್ದೇನಂದರೆ. ಹೋಸ್ಕೇರಾ ಗ್ರಾಮದ ಕಕ್ಕಸಗೇರಾ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಸಾರ್ವ ಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ ಕಲ್ಯಾಣ ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾರೆ. ಅಂತಾ ಬಾತ್ಮೀ ಬಂದಿದ್ದು, ಇಬ್ಬರು ಪಂಚರು, ಸಿಬ್ಬಂದಿಯವರೊಂದಿಗೆ ಹೊಗಿ ಹೋಸ್ಕೇರಾ ಗ್ರಾಮದ ಕಕ್ಕಸಗೇರಾ ಕ್ರಾಸ್ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಗೆ ಬಾಂಬೆ, ಕಲ್ಯಾಣ ಮಟಕಾ ಆಡಿರಿ 10 ರೂ ಜೋಯಿಂಟ್ ಹತ್ತಿದರೆ 800 ರೂಪಾಯಿ ಕೊಡುತ್ತೇವೆ, 01 ರೂ ಓಪನ ಹತ್ತಿದರೆ 80 ರೂ. ಕೊಡುತ್ತೇವೆ ಅಂತಾ ಕರೆಯುತ್ತಾ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡುವದಕ್ಕಾಗಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದರು ಹಣ ಪಡೆದುಕೊಳ್ಳುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು 02.25 ಪಿ.ಎಮ್ ಕ್ಕೆ ದಾಳಿ ಆರೋಪಿತರಿಂದ 1) ನಗದು ಹಣ 45,000=00 2) ಎರಡು ಮಟಕಾ ಚೀಟಿ ಮತ್ತು 3) ಎರಡು ಬಾಲ ಪೆನ ವಶಪಡೆಸಿಕೊಂಡು ಆರೋಪಿತನು, ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲಿನೊಂದಿಗೆ  04.10 ಪಿಎಮ್ ಕ್ಕೆ  ಠಾಣೆಗೆ ಬಂದು ವರದಿ ನೀಡಿದ್ದು ಆರೋಪಿತರ ವಿರುದ್ದ ಕಲಂ: 420 ಐಪಿಸಿ ಮತ್ತು ಕಲಂ: 78(3) ಕೆ.ಪಿ. ಆಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 10/2019 ಕಲಂ: 420 ಐಪಿಸಿ ಮತ್ತು ಕಲಂ; 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 10/2019 ಕಲಂ 457,380 ಐಪಿಸಿ :- ದಿನಾಂಕ;23/01/2019 ರಂದು ಸಾಯಂಕಾಲ 5-00 ಗಂಟೆಗೆ ಪಿರ್ಯಾಧಿ ಶ್ರೀ ಮಹ್ಮದ್ ಹುಸೇನ್ ತಂದೆ ನಬಿಸಾಬ ಆನಿ ವ|| 41 ವರ್ಷ, ಜಾ|| ಮುಸ್ಲಿಂ ಉ|| ಚಾಲಕ ಕಂ. ನಿವರ್ಾಹಕ ಸಾ|| ನಗನೂರ ತಾ|| ಸುರಪೂರ ಜಿ|| ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ದೂರು ನೀಡಿದ್ದರ ಸಾರಾಂಶವೆನೆಂದರೆ,  ನಾನು 2009 ನೇ ಸಾಲಿನಿಂದ ಇಲ್ಲಿಯ ವರೆಗೆ ಕೆ.ಎಸ್.ಆರ್.ಟಿ.ಸಿ ಘಟಕ ಸುರಪೂರದಲ್ಲಿ ಚಾಲಕ ಮತ್ತು ನಿವರ್ಾಹಕ (ಬಿಲ್ಲೆ ಸಂಖ್ಯೆ-432) ಅಂತಾ ಕೆಲಸ ಮಾಡಿಕೊಂಡು ಇರುತ್ತೇನೆ. ನಿನ್ನೆ ನಾನು ಹಾಗೂ ಚಾಲಕ ಅಮೀನಮೀಯ ಬಿಲ್ಲೆ ಸಂಖ್ಯೆ 5485 ಇಬ್ಬರು ಕೂಡಿ ಸುರಪೂರದಿಂದ ಯಾದಗಿರಿಗೆ ಬಂದು ವಸತಿ ಮಾಡುವ ಕುರಿತು ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.ಎ 33 ಎಫ್ 0204 ನೇದ್ದನ್ನು ತೆಗೆದುಕೊಂಡು ದಿನಾಂಕ 22/01/2019 ರಂದು 07-30 ಗಂಟೆಗೆ ಸುರಪೂರದಿಂದ ಹೊರಟು, ದಿನಾಂಕ 22/01/2019 ರ ರಾತ್ರಿ 9-15 ಗಂಟೆಗೆ ಯಾದಗಿರಿ ಬಸ್ ನಿಲ್ದಾಣಕ್ಕೆ ಬಂದೆವು. ಬಸ್ ನಿಲ್ದಾಣದಲ್ಲಿ ನಮ್ಮ ವಾಹನ ನಿಲ್ಲಿಸಿ, ಖಾನಾವಳಿಯಲ್ಲಿ ಊಟ ಮಾಡಿಕೊಂಡು ಬಂದು ರಾತ್ರಿ 10-00 ಗಂಟೆಗೆ ಯಾದಗಿರಿ ಬಸ್ ನಿಲ್ದಾಣದ ಸಿಬ್ಬಂಧಿ ಜನರ ವಿಶ್ರಾಂತಿ ಗೃಹದಲ್ಲಿ ಮಲಗಿಕೊಂಡೆವು. ಮಲಗಿಕೊಳ್ಳುವಾಗ ಇಲಾಖೆ ವದಗಿಸಿದ ಇ.ಟಿ.ಎಂ ಮಸೀನ್ ಹಾಗೂ ನನ್ನ ಶಟರ್್ನ್ನು ನನ್ನ ಬ್ಯಾಗನಲ್ಲಿ ಇಟ್ಟು ಬ್ಯಾಗ ನನ್ನ ತಲೆ ಹತ್ತಿರ ಇಟ್ಟುಕೊಂಡು ಮಲಗಿಕೊಂಡೆವು. ನಂತರ ಬೆಳಿಗ್ಗೆ 04-45 ಗಂಟೆ ಸುಮಾರಿಗೆ ನಾನು ಹಾಗೂ ಚಾಲಕ ಅಮೀನಮೀಯ ಇಬ್ಬರು ಕೂಡಿ ಎದ್ದು ನೋಡಿದಾಗ ನಮ್ಮ ಬ್ಯಾಗ ಇರಲಿಲ್ಲ. ಯಾವು ಅಲ್ಲಿಯೇ ಅಕ್ಕ ಪಕ್ಕದಲ್ಲಿ ಹುಡುಕಾಡಿದರೂ ಬ್ಯಾಗ ಕಾಣಲಿಲ್ಲ. ಬ್ಯಾಗ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದಂತೆ ಕಂಡು ಬಂದಿರುತ್ತದೆ. ಬ್ಯಾಗದಲ್ಲಿ ಇ.ಟಿ.ಎಂ ಮಸೀನ್ ಅ.ಕಿ 6500/ ರೂ|| ನೇದ್ದು, ಮತ್ತು ನನ್ನ ಇಲಾಖಾ ಗುತರ್ಿನ ಚೀಟಿ, ಆಧಾರ ಕಾಡರ್್, ಚುನಾವಣಾ ಗುತರ್ಿನ ಚೀಟಿ, ಮತ್ತು 02 ಎ.ಎಟಿ.ಎಂ ಕಾಡರ್್ಗಳು ಇದ್ದವು.  ಕಾರಣ ದಿನಾಂಕ 22/01/2019 ರ ರಾತ್ರಿ 10-00 ಗಟೆಯಿಂದ ದಿನಾಂಕ 23/01/2019 ರ ಬೆಳಗಿನ ಜಾವ 4-45 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಯಾದಗಿರಿ ಬಸ್ ನಿಲ್ದಾಣದ ಸಿಬ್ಬಂದಿ ಜನರ ವಿಶ್ರಾಂತಿ ಕೋಣೆಯಲ್ಲಿ ಒಂದ ಬ್ಯಾಗದಲ್ಲಿ ಇಟ್ಟಿದ್ದ ಇಲಾಖೆ ವದಗಿಸಿದ ಇ.ಟಿ.ಎಂ ಮಸೀನ್ ಹಾಗೂ ನನ್ನ ದಾಖಲಾತಿಗಳು ಕಳ್ಳತನ ಮಾಡಿಕೊಂಡು ಹೋಗಿದ್ದು, ನಾನು ಈ ಬಗ್ಗೆ ನಮ್ಮ ಮೇಲಾಧಿಕಾರಿಗಳೊಂದಿಗೆ ವಿಚಾರಿಸಿ ಇಂದು ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಸದರಿಯವುಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.10/2019 ಕಲಂ.457,380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 11/2019 ಕಲಂ 379 ಐಪಿಸಿ:-ದಿನಾಂಕ; 24/01/2019 ರಂದು 00-25 ಎಎಂಕ್ಕೆ ಶ್ರೀ ಎನ್.ಎಸ್ ಜನಗೌಡ ಪಿ.ಎಸ್.ಐ, ಸಿ.ಇ.ಎನ್ ಪೊಲೀಸ್ ಠಾಣೆ ಯಾದಗಿರಿ ಜಿಲ್ಲಾ ರವರು ಯಾದಗಿರಿ ನಗರ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಗೂ ಒಂದು ಜ್ಞಾಪನಾ ಪತ್ರವನ್ನು ಹಾಜರುಪಡಿಸಿದ್ದು ಸದರಿ ಸಾರಾಂಶವೆನೆಂದರೆ, ಇಂದು ದಿನಾಂಕ: 23/01/2019 ರಂದು ರಾತ್ರಿ 10:45 ಗಂಟೆ ಸುಮಾರಿಗೆ ಕಛೇರಿಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ವಡಗೇರಾ ಹತ್ತಿರದ ಕೃಷ್ಣಾ ನದಿಯಿಂದ ಅಕ್ರಮ ಮರಳನ್ನು ಟಿಪ್ಪರುಗಳಿಗೆ ತುಂಬಿಸಿ ಯಾದಗಿರಿ ಕಡೆಗೆ ಮರಳನ್ನು ಸಾಗಿಸುತ್ತಿರುವುದಾಗಿ ಬಾತ್ಮಿ ಬಂದ ಮೇರೆಗೆ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ನಾನು ನಮ್ಮ ಸಿಬ್ಬಂದಿಯವರಾದ 1) ಶ್ರೀ ಈರಣ್ಣ ಹೆಚ್.ಸಿ-144 2) ಶ್ರೀ  ಸಾಬಣ್ಣ ಪಿ.ಸಿ-145 ರವರೊಂದಿಗೆ ಹೊರಟು ಯಾದಗಿರಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಬಾಪುಗೌಡ ಪಾಟೀಲ್ ರವರಿಗೆ ಮಾಹಿತಿ ತಿಳಿಸಿ ಪಿ.ಎಸ್.ಐ ಮತ್ತು ಅವರ ಜೀಪ್ ಚಾಲಕ ಬಸಣ್ಣ ಸಿ.ಪಿ.ಸಿ-109 ರವರೊಂದಿಗೆ ಯಾದಗಿರಿ ನಗರ ಠಾಣೆಯ ಸರಕಾರಿ ಜೀಪ್ ನಂಬರ ಕೆ.ಎ-33-ಜಿ-0075 ನೇದ್ದರಲ್ಲಿ ಡಾನ್ ಬಾಸ್ಕೋ ಶಾಲೆಯ ಮಾರ್ಗವಾಗಿ ಓವರ ಬ್ರಿಡ್ಜ ರಸ್ತೆಯ ಮುಖಾಂತರ ಗುರಸಣಿಗಿ ಕಡೆಗೆ ಹೊರಟು ಭೀಮಾ ಬ್ರೀಜ್ಗಿಂತ ಮೊದಲು ಹೊರಟಿದ್ದಾಗ ಸಮಯ 11:35 ಪಿಎಮ್ ಸುಮಾರಿಗೆ ಒಂದು ಟಿಪ್ಪರ್ ಗುರಸಣಿಗಿ  ಕ್ರಾಸ್ ಕಡೆಯಿಂದ ಭೀಮಾ ಬ್ರಿಡ್ಜ ದಾಟಿ ಬಂದಿದ್ದು ಸದರಿ ಟಿಪ್ಪರನ್ನು ನಿಲ್ಲಿಸಿ ನೋಡಲಾಗಿ, ಸದರಿ ಟಿಪ್ಪರ ಭಾರತ್ ಬ್ರೇಂಜ್ ಕಂಪನಿಯದಿದ್ದು ಟಿಪ್ಪರ ನಂ. ಕೆಎ-33-ಎ-8712 ಅಂತಾ ಇದ್ದು, ಪರಿಶೀಲಿಸಿ ನೋಡಲಾಗಿ ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇರುತ್ತದೆ. ಓಪ್ಪರ ಚಾಲಕನಿಗೆ ಆತನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು  ಹಣಮಂತ್ರಾಯ ತಂದೆ ನಿಂಗಪ್ಪ ಸಲ್ದಾಪೂರ ವಯ: 25 ವರ್ಷ ಜಾತಿ:ಕುರುಬ ಉ: ಡ್ರೈವರ್ ಸಾ: ವಿಭೂತಹಳ್ಳಿ ತಾ: ಶಹಾಪೂರ ಜಿ: ಯಾದಗಿರಿ ಅಂತಾ ತಿಳಿಸಿದ್ದು ಸದರಿ ಚಾಲಕನಿಗೆ ಮರಳು ತುಂಬಲು ಯಾವುದಾದರು ರಾಯಲಿಟಿ ಅಥವಾ ರಾಜಧನ ತುಂಬಿದ ಬಗ್ಗೆ ದಾಖಲಾತಿಗಳು ಇವೆಯೆ ಹೇಗೆ ಅಂತಾ ವಿಚಾರಿಸಿದಾಗ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿ, ನಮ್ಮ ಮಾಲೀಕರಾದ ರುಕ್ಮಯ್ಯ ತಂದೆ ಸಕೇರಪ್ಪ   ಜಾತಿ: ಇಳಿಗೇರ ಸಾ:ವಡಗೇರಾ ಜಿ: ಯಾದಗಿರಿ ರವರು ಹೇಳಿದಂತೆ ನಾವು ನಮ್ಮ ಟಿಪ್ಪರ್ದಲ್ಲಿ ವಡಗೇರಾ ಹತ್ತಿರದ ಕೃಷ್ಣ ನದಿಯಲ್ಲಿ ಮರಳು ತುಂಬಿ ಗುರಸಣಗಿ ಕ್ರಾಸ್ ಮಾರ್ಗವಾಗಿ ಯಾದಗಿರಿಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದೇವೆ ಅಂತಾ ತಿಳಿಸಿದನು. ನಂತರ ಸದರಿ ಟಿಪ್ಪರನ ಚಾಲಕ  ಹಣಮಂತ್ರಾಯ ತಂದೆ ನಿಂಗಪ್ಪ ಸಲ್ದಾಪೂರ ವಯ: 25 ವರ್ಷ ಜಾತಿ:ಕುರುಬ ಉ: ಡ್ರೈವರ್ ಸಾ:ವಿಭೂತಹಳ್ಳಿ ತಾ: ಶಹಾಪೂರ ಜಿ: ಯಾದಗಿರಿ ಈತನನ್ನು  ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆಗೆ ಈ ದಿನ ದಿನಾಂಕ:24/01/2019 ರಂದು 00-25 ಎಎಮ್ ಕ್ಕೆ  ಸದರಿ ಟಿಪ್ಪರಿನ ಚಾಲಕ ಮತ್ತು ಮರಳು ತುಂಬಿದ ಟಿಪ್ಪರನೊಂದಿಗೆ ಠಾಣೆಗೆ ತಂದು ವರದಿ ಒಪ್ಪಿಸಿದ್ದು ಸದರಿ ಭಾರತ್ ಬ್ರೇಂಜ್ ಕಂಪನಿಯ  ಟಿಪ್ಪರ್ ನಂಬರ್ ನಂ. ಕೆಎ-33-ಎ-8712 ಇದ್ದು ಅದರ ಚಾಲಕ ಮತ್ತು ಮಾಲಿಕನು ಯಾವುದೇ ರಾಯಲಿಟಿ, ರಾಜಧನ ತುಂಬದೆ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನೀಡಿದ್ದು ಸದರಿ ವರದಿಯ ಆಧಾರದ ಮೇಲಿಂದ ಠಾಣೆ ಗುನ್ನೆ ನಂ.11/2019 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!