ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-01-2019

By blogger on ಬುಧವಾರ, ಜನವರಿ 23, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-01-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 8/2019, ಕಲಂ:302, 201 ಐಪಿಸಿ :- ದಿನಾಂಕ:22/01/2019 ರಂದು ಬೆಳಗ್ಗೆ 10:00 ಗಂಟೆಗೆ ಫಿಯರ್ಾದಿ ರಾಜು ತಂದೆ ಮಲ್ಕಪ್ಪ ಬಶೆಟ್ಟಿ, ವಯ:21 ವರ್ಷ, ಜಾ|| ಉಪ್ಪಾರ, ಉ||ವಿದ್ಯಾಥರ್ಿ ಸಾ||ಖೈನೂರ ತಾ||ಸಿಂಧಗಿ, ಜಿ||ವಿಜಯಪೂರ ಇವರು ಹೇಳಿಕೆ ಫಿರ್ಯಾಧಿ ಏನೆಂದರೆ, ನಾನು ಈಗಾಗಲೇ ತಮ್ಮ ಠಾಣೆಯ ಯು.ಡಿ.ಆರ್ ನಂ: 22/2018 ಕಲಂ:174(ಸಿ) ಸಿ.ಆರ್.ಪಿ.ಸಿ. ಪ್ರಕರಣದಲ್ಲಿ ದಿನಾಂಕ:15/01/2019 ರಂದು ಕೊಟ್ಟ ನನ್ನ ಹೇಳಿಕೆ ಓದಿ ನೋಡಿದೆನು ಅದು ಸರಿ ಇರುತ್ತದೆ. ನಾನು ಕೊಟ್ಟ ಹೇಳಿಕೆಯ ಮೇರೆಗೆ ನನ್ನ ಅಣ್ಣ ಅಂಬರೀಶನ ಮರಣದ ನಾನು ಸಂಶಯ ವ್ಯಕ್ತಪಡಿಸಿದಂತೆ, ತಾವು ನನ್ನ ಅಣ್ಣ ಅಂಬರೀಶನ ಗೆಳೆಯ ವಿನೋದ@ಮೆಂಟಲ್ ತಂದೆ ವೆಂಕಟೇಶ ಸಾ||ಎಗ್ನಳ್ಳಿ ಕ್ರಾಸ್, ಸುಂಕದ ಕಟ್ಟೆ, ಬೆಂಗಳೂರು ಈತನನ್ನು ಬೆಂಗಳೂರದಿಂದ ಕರೆದುಕೊಂಡು ಬಂದಿರುವ ಸುದ್ದಿ ತಿಳಿದು ನಾನು ಇಂದು ಠಾಣೆಗೆ ಬಂದು ನೋಡಲು ಈತನು ನನ್ನ ಅಣ್ಣನ ಗೆಳೆಯನಿದ್ದು, ವಿಚಾರಿಸಲು ಆತನು ಹೇಳಿದ್ದೇನೆಂದರೆ, ನಾನು ಮತ್ತು ನಿನ್ನ ಅಣ್ಣ ಅಂಬರೀಶ ಕೂಡಿಕೊಂಡು ಹುಬ್ಬಳ್ಳಿಯಿಂದ ಸೋಲಾಪೂರಕ್ಕೆ ಬಂದು ಅಲ್ಲಿಂದ ನಿಮ್ಮೂರಿಗೆ ಹೋಗಲೆಂದು ದಿನಾಂಕ:08/11/2018 ರಂದು ಬೆಳಗ್ಗೆ ಯಾದಗಿರಿಗೆ ಬಂದೆವು. ಯಾದಗಿರಿಯಿಂದ ಬಸ್ಸಿಗೆ ನಿಮ್ಮೂರಿಗೆ ಹೋಗಬೇಕೆಂದಾಗ ನನಗೆ ಮನಸ್ಸಿಲ್ಲದ್ದರಿಂದ ನಾನು ವಾಪಸ್ ಬೆಂಗಳೂರಿಗೆ ಹೋಗುತ್ತೇನೆ, ನನಗೆ ಹಣ ಕೊಡು ಅಂತಾ ಅಂಬರೀಶನಿಗೆ ಕೇಳಿದಾಗ ಅಂಬರೀಶನು ನನಗೆ ಹಣ ಕೊಡದೆ ನನ್ನನ್ನು ಭೀಮಾ ನದಿಯ ದಂಡೆಗೆ ಸ್ನಾನ ಮಾಡಲೆಂದು ಕರೆದುಕೊಂಡು ಹೋದನು. ಅಲ್ಲಿ ನಾವಿಬ್ಬರು ಸ್ನಾನ ಮಾಡಿದೆವು. ನಂತರ ನಾನು ವಾಪಸ ಹೋಗುತ್ತೇನೆ ಅಂತಾ ಅಂದಾಗ ಅಂಬರೀಶನು ನನಗೆ ಕೈಯಿಂದ ತಲೆಗೆ ಹೊಡೆದು ಸುಮ್ಮನೆ ಕೂಡು ಮಗನೆ, ಇಲ್ಲಂದ್ರೆ ಸಾಯಿಸ್ತಿನಿ ನೋಡು ಅಂತಾ ನನಗೆ ಬೈದಿದ್ದು ಅಲ್ಲದೇ ನನಗೆ ಯಾವಾಗಲೂ ವಿನಾ ಕಾರಣವಾಗಿ ತೊಂದರೆ ಕೊಡುವುದು ಮತ್ತು ನನಗೆ ಎಲ್ಲಿಗೂ ಹೋಗಲೂ ಬಿಡದೆ ತನ್ನ ಹತ್ತಿರವೇ ಇರಬೇಕು ಅಂತಾ ಒತಾಯಿಸುತ್ತಿದ್ದರಿಂದ ನಾನು ಆತನ ತೊಂದರೆಯನ್ನು ತಪ್ಪಿಸಿಕೊಳ್ಳಬೇಕಾದರೆ, ಆತನಿಗೆ ಒಂದು ಗತಿ ಕಾಣಿಸಬೇಕೆಂಬ ಉದ್ದೇಶದಿಂದ ಅಲ್ಲಿಯೇ ಪಕ್ಕದಲ್ಲಿ ಬಿದ್ದಿದ್ದ ಒಂದು ಕಲ್ಲನ್ನು ಎತ್ತಿ ಅಂಬರೀಶನ ತಲೆಯ ಮೇಲೆ ಹಾಕಿದೆನು. ಆಗ ಸಮಯ ಮಧ್ಯಾಹ್ನ 3:30 ಗಂಟೆ ಆಗಿತ್ತು. ಅಷ್ಟಕ್ಕೆ ಅಂಬರೀಶನು ಸತ್ತಿದ್ದು, ನಾನು ಗಾಭರಿಗೊಂಡು ಅಲ್ಲಿಂದ ಯಾದಗಿರಿ ರೈಲ್ವೇ ಸ್ಟೇಶನ್ಗೆ ಬಂದು ಟ್ರೇನ್ ಹತ್ತಿಕೊಂಡು ಬೆಂಗಳೂರಿಗೆ ಹೋಗಿರುತ್ತೇನೆ ಅಂತಾ ಹೇಳಿರುತ್ತಾನೆ. ಕಾರಣ ದಿನಾಂಕ:08/11/2018 ರಂದು ಮಧ್ಯಾಹ್ನ 3:30 ಗಂಟೆಗೆ ನನ್ನ ಅಣ್ಣ ಅಂಬರೀಶನನ್ನು ಕೊಲೆ ಮಾಡಿ ಸಾಕ್ಷಿನಾಶಪಡಿಸಿದ ವಿನೋದ@ಮೆಂಟಲ್ ತಂದೆ ವೆಂಕಟೇಶ, ಸಾ||ಎಗ್ನಳ್ಳಿ ಕ್ರಾಸ್, ಸುಂಕದ ಕಟ್ಟೆ, ಬೆಂಗಳೂರು ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:08/2019 ಕಲಂ:302, 201 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 09/2019 ಕಲಂ.143, 323,354,504,506,195 (?) ಸಂ.149 ಐಪಿಸಿ : ದಿನಾಂಕ.22/01/2019 ರಂದು 1-15 ಪಿಎಂಕ್ಕೆ ಪಿರ್ಯಾದಿ ರೇಣುಕಮ್ಮ ಗಂಡ ಮಲ್ಲಪ್ಪ ಹುಂಬರಿಕೆರ ವ;30 ಜಾ; ಕಬ್ಬಲಿಗ ಉ; ಹೊಲಮನೆಗೆೆಲಸ ಸಾ; ಅರಿಕೇರಾ (ಬಿ) ತಾ;ಜಿ; ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ಈ ಹಿಂದೆ ನಮ್ಮ ನಾದಿನಿ ಮಾಳಮ್ಮ ಇವಳು ಕೋಟರ್ಿನಲ್ಲಿ ಕೌಟಂಬಿಕ ಕಲಹ ಪ್ರಕರಣ ಹೂಡಿದ್ದರಿಂದ ಭಾಗಪ್ಪ ತಂದೆ ಮಲ್ಲಪ್ಪ ಚಾಮನಳ್ಳಿ ಮತ್ತು ಈತರರು ಸೇರಿ ನನ್ನ ಗಂಡ ಮಲ್ಲಪ್ಪ ಈತನಿಗೆ ನಿನ್ನ ತಂಗಿ ಕೋಟರ್ಿನಲ್ಲಿ ಕೇಸು ಹಾಕುತ್ತಾಳೆ ಮಗನೇ ಅಂತಾ ಹೊಡೆಬಡೆ ಮಾಡಿದ್ದರಿಂದ ನಾವು ಯಾದಗಿರಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದು ಅವರು ಸಹಾ ನಮ್ಮ ವಿರುದ್ಧ ಯಾದಗಿರಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಕೇಸು ದಾಖಲಿಸಿದ್ದು ಇರುತ್ತದೆ. ನಂತರ ಸುಮಾರು ಒಂದುವರೆ ವರ್ಷದ ಹಿಂದೆ ನಮ್ಮ ಬನ್ನಿಗಿಡದ ಪಟ್ಟಿ ಹೊಲದ ಊಳುಮೆ ವಿಚಾರವಾಗಿ ಜಗಳವಾಗಿದ್ದು ಜಗಳದಲ್ಲಿ ಭಾಗಪ್ಪ ತಂದೆ ಮಲ್ಲಪ್ಪ ಚಾಮನಳ್ಳಿ ಮತ್ತು ಈತರರು ಸೇರಿ ನನ್ನ ಗಂಡನಾದ ಮಲ್ಲಪ್ಪ ಮತ್ತು ಮೈದುನ ಮೋನಪ್ಪ ಈತನಿಗೆ ಕೊಲೆ ಮಾಡಿದ್ದು ಇರುತ್ತದೆ. ಹಿಗಿದ್ದು ನಿನ್ನೆ ದಿನಾಂಕ; 21/01/2019 ರಂದು ಈ ಹಿಂದೆ ನನ್ನ ಗಂಡನಿಗೆ ಹೊಡೆಬಡೆ ಮಾಡಿದ ಪ್ರಕರಣದಲ್ಲಿ ಸಾಕ್ಷಿ ನುಡಿಯಲು ಮತ್ತು ನನ್ನ ಗಂಡ ಮತ್ತು ಮೈದುನನಿಗೆ ಕೊಲೆ ಮಾಡಿದ ಪ್ರಕರಣದಲ್ಲಿ  ಪಿಪಿ ಸಾಹೇಬರಲ್ಲಿ ಭೇಟಿಯಾಗಲು  ನಾನು ಮತ್ತು ನನ್ನ ಮಾವ ಸಾಬಣ್ಣ ತಂದೆ ಮರೆಪ್ಪ, ಅತ್ತೆ ಯಂಕಮ್ಮ ಗಂಡ ಸಾಬಣ್ಣ ಎಲ್ಲರೂ ಯಾದಗಿರಿ ಕೋಟರ್ಿಗೆ ಬಂದಿದ್ದು ಸಾಕ್ಷಿ ಮುಗಿಸಿದ ನಂತರ ನಮ್ಮ ಅತ್ತೆ ಮಾವ ಕೋರ್ಟ ಆವರಣದಲ್ಲಿ ಇದ್ದರು. ನಾನು  ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಊಟ ಮಾಡಲು ಕೋರ್ಟ ಮುಂದಿನ ರಸ್ತೆಯಲ್ಲಿರುವ ಹೋಟೆಲಗೆ ಹೊರಟಿದ್ದಾಗ ಈ ಹಿಂದೆ ನನ್ನ ಗಂಡನಿಗೆ ಹೊಡೆಬಡೆ ಮಾಡಿದ ಮತ್ತು ನನ್ನ ಗಂಡ, ಮೈದುನನಿಗೆ ಕೊಲೆ ಮಾಡಿದ ನಮ್ಮೂರಿನ 1)ಭಾಗಪ್ಪ ತಂದೆ ಮಲ್ಲಪ್ಪ ಚಾಮನಳ್ಳಿ 2)ದೊಡ್ಡಬಸಪ್ಪ ತಂದೆ ಲಕ್ಷ್ಮಣ 3) ಸಣ್ಣಬಸಪ್ಪ ತಂದೆ ಲಕ್ಷ್ಮಣ 4)ಭೀಮರಾಯ ತಂದೆ ಲಕ್ಷ್ಮಣ ಲಾಡಪಡದೋರ 5)ದೇವಪ್ಪ ತಂದೆ ಭೀಮರಾಯ 6)ಮರೆಪ್ಪ ತಂದೆ ಭೀಮರಾಯ ಅಚ್ಚೋಲಿ 7) ಸಿದ್ದಪ್ಪ ತಂದೆ ಭೀಮರಾಯ ಅಚ್ಚೋಲಿ 8) ಸಾಬಪ್ಪ ತಂದೆ ಸಿದ್ದಪ್ಪ 9)ಭೀಮಪ್ಪ ತಂದೆ ಸಿದ್ದಪ್ಪ 10)ಗೌರಮ್ಮ ಗಂಡ ಸಿದ್ದಪ್ಪ 11)ಸಿದ್ದಮ್ಮ ಗಂಡ ಸಣ್ಣಮಲ್ಲಪ್ಪ 12)ಸಿದ್ದಪ್ಪ ತಂದೆ ಮಾಣಿಕಪ್ಪ 13)ಸಿದ್ದಪ್ಪ ತಂದೆ ಭೀಮಪ್ಪ 14)ಸಾಬಣ್ಣ ತಂದೆ ಲಕ್ಷ್ಮಪ್ಪ 15)ಸಣ್ಣಬಸಪ್ಪ ತಂದೆ ಮಲ್ಲಪ್ಪ 16)ಮಲ್ಲಪ್ಪ ತಂದೆ ಸಣ್ಣಬಸಪ್ಪ 17)ಲಚಮಣ್ಣ ತಂದೆ ಮಲ್ಲಪ್ಪ 18)ನಂದಪ್ಪ ತಂದೆ ಲಚಮಣ್ಣ 19)ಚಂದಪ್ಪ ತಂದೆ ಲಚಮಣ್ಣ ಇವರೆಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಬಂದು ಲೇ ಸುಳೀ ನಮ್ಮ ವಿರುದ್ಧ ಸುಳ್ಳು ಸಾಕ್ಷಿ ನುಡಿಯುವುದನ್ನು ಬಿಟ್ಟು ಸತ್ಯ ಹೇಳುತ್ತೀಯಾ ನೀನ್ನದು ಬಹಳ ಆಗಿದೆ ನೀನು ನಮ್ಮ ವಿರುದ್ಧವೇ ಸಾಕ್ಷಿ ಹೇಳುತ್ತೀಯಾ ನಿನ್ನ ಗಂಡ ಮತ್ತು ಮೈದುನನಿಗೆ  ಕೊಲೆ ಮಾಡಿದರು ಕೂಡಾ ಇನ್ನು ನಿಮಗೆ ಬುದ್ಧಿ ಬಂದಿಲ್ಲ ಅಂತಾ ಅಂದವರೇ ಅದರಲ್ಲಿ ನಂದಪ್ಪ ತಂದೆ ಲಚಮಣ್ಣ, ಚಂದಪ್ಪ ತಂದೆ ಲಚಮಣ್ಣ ಇವರು ನನ್ನ ಕೈ ಹಿಡಿದು ಎಳೆದಾಡಿ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜಗ್ಗಾಡಿ ಕೆಳಗೆ ಕೆಡವಿದರು. ಆಗ ದೊಡ್ಡಬಸಪ್ಪ ತಂದೆ ಲಚಮಣ್ಣ ಹಾಗೂ ಸಣ್ಣಬಸಪ್ಪ ತಂದೆ ಲಚಮಣ್ಣ ಇವರು ನನ್ನ ಸೀರೆ ಹಿಡಿದು ಎಳೆದಾಡಿ ನನ್ನ ಕಪಾಳಕ್ಕೆ ಹೊಡೆಬಡೆ ಮಾಡಿದರು. ಹಾಗೂ ಊಳಿದವರು ಸಹಾ ನನಗೆ ಕೈಯಿಂದ ಹೊಡೆಬಡೆ ಮಾಡಿದರು ಆಗ ನಾನು ಚಿರಾಡುತ್ತಿದ್ದಾಗ ನನ್ನ ಚಿರಾಟ ಕೇಳಿ ಜನರು ಬರುವುದು ನೋಡಿ ಇವತ್ತು ನೀನು ಬದುಕಿದೇ ಸುಳೀ ಮುಂದೆ ನಿನಗೆ ಜೀವ ಸಹಿತ ಬಿಡುವುದಿಲ್ಲ. ಅಂತಾ ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ. ನಮ್ಮ ಹಿರಿಯರೊಂದಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಕಾರಣ ಅಕ್ರಮ ಕೂಟ ಕಟ್ಟಿಕೊಂಡು ಬಂದು ನನಗೆ ಕೈ ಮತ್ತು ಸೀರೆ ಹಿಡಿದು ಜಗ್ಗಾಡಿ ಸುಳ್ಳು ಸಾಕ್ಷಿ ನುಡಿಯುವಂತೆ ಬೆದರಿಸಿ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.09/2019 ಕಲಂ.143,323,354,504,506,195(ಎ) ಸಂ.149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 04/2019 ಕಲಂ 279.338 ಐ ಪಿ ಸಿ :- ದಿನಾಂಕ 22-01-2019 ರಂದು 13-10  ಗಂಟೆಯ ಸುಮಾರಿಗೆ ಸರಕಾರಿ ಆಸ್ಪತ್ರೆ  ಸೈದಾಪೂರ ದಿಂದ ಒಂದು ಅರ್.ಟಿ.ಎ ಎಮ್.ಎಲ್.ಸಿ ದೂರವಾಣಿ ಮೂಲಕ ವಸೂಲಾಗಿದ್ದು.ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುವಿನ ಅಕ್ಕಳಾದ ಶ್ರೀಮತಿ  ಮಹಾದೇವಮ್ಮ @ ಲಕ್ಷ್ಮಿ ಗಂಡ ದೇವಿಂದ್ರಪ್ಪ ಮಕ್ತಲ್ ವಯಾ|| 26 ವರ್ಷ ಜಾ|| ಕಬ್ಬಲಿಗೇರ ಉ|| ಮನೆಗೆಲಸ ಸಾ|| ಬಾಡಿಯಾಳ. ತಾ|| ಜಿಲ್ಲಾ|| ಯಾದಗಿರಿ. ಲ್ಯಾಪ್ಟ್ಯಾಪ್ದಲ್ಲಿ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ಪಿಯರ್ಾದಿ ಪಡೆದುಕೊಂಡಿದ್ದು ಅದರ ಸಾರಾಂಶವೇನಂದರೆ.ನಾನು ಈ ಮೇಲ್ಕಾಣಿಸಿದ ವಿಳಾಸದ ನಿವಾಸಿತಳಿದ್ದು, ಹೊಲಮನೆ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ಇದ್ದು, ಉಪ ಜೀವಿಸುತ್ತೇನೆ. ನನ್ನ ತವರು ಮನೆ ಗ್ರಾಮ ಸೈದಾಪೂರ ಇದ್ದು, ಇಂದು ದಿನಾಂಕ: 22-01-2019 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಮಲ್ಲಪ್ಪ ತಂದೆ ಸಾಬಣ್ಣ ರಾಚನಳ್ಳೋರ ಈತನು ಒಂದು ಸೈಕಲ್ ಮೋಟಾರ್ ನಂ.ಎಮ್.ಹೆಚ್-14-ಸಿಹೆಚ್-3513 ನೇದ್ದನ್ನು ತೆಗೆದುಕೊಂಡು ಗ್ರಾಮ ಸೈದಾಪೂರ ದಿಂದ ಬಾಡಿಯಾಳಕ್ಕೆ ಬಂದಿದ್ದನು ನಂತರ ಊಟ ಮಾಡಿ ಎಲ್ಲರಿಗೆ ಮಾತಾಡಿಸಿ 12 ಗಂಟೆಯ ಸುಮಾರಿಗೆ ಮನೆಯಿಂದ ಆತನು ತಂದ ಸೈಕಲ್ ಮೋಟಾರ್ ಮೇಲೆ ಗ್ರಾಮ ಸೈದಾಪೂರ ಕಡೆಗೆ ಹೋದನು. ನಾನು ಇಂದು ದಿನಾಂಕ: 22-01-2019 ರಂದು 12.30 ಪಿ.ಎಂ ಸುಮಾರಿಗೆ ನಾನು ಸೈದಾಪೂರಕ್ಕೆ ಹೋಗಿ ಬರಬೇಕೆಂದು ತಯ್ಯಾರಾಗಿದ್ದೇ ಅಷ್ಟರಲ್ಲಿ ನನಗೆ ನಮ್ಮ ಭಾವನಾದ ಭೀಮಶಪ್ಪ ತಂದೆ ಹಣಮಂತ್ರಾಯ ಮಕ್ತಲ್ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿನ್ನ ತಮ್ಮನಾದ ಮಲ್ಲಪ್ಪ ಬಾಡಿಯಾಳದಿಂದ ಸೈದಾಪೂರಕ್ಕೆ ಹೋಗುವಾಗ ಇಂದು ದಿನಾಂಕ: 22-01-2019 ರಂದು 12.15 ಪಿ.ಎಂ ಸುಮಾರಿಗೆ ಬಾಡಿಯಾಳ ಮತ್ತು ಕೊಂಡಾಪೂರ ಮದ್ಯ ರೋಡಿನಲ್ಲಿ ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಸೈಕಲ್ ಮೋಟಾರ್ ನಡೆಸಿದ್ದರಿಂದ ಸೈಕಲ್ ಮೋಟಾರ್ ಸ್ಕೀಡ್ಡಾಗಿ ಕೆಳಗೆ ಬಿದ್ದಿರುತ್ತಾನೆ ಅಂತಾ ತಿಳಿಸಿದರು ತಕ್ಷಣ ನಾನು ಒಂದು ಖಾಸಗಿ ವಾಹನದಲ್ಲಿ ಸ್ಥಳಕ್ಕೆ ಬರುವಷ್ಟರಲ್ಲಿ ಆತನಿಗೆ ಉಪಚಾರಕ್ಕಾಗಿ ಸೈದಾಪೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ಸುದ್ದಿ ತಿಳಿದು ನಾನು ಸೈದಾಪೂರ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ತಮ್ಮ ಮಲ್ಲಪ್ಪ ಬಲಗಡೆ ಮೆಲಕು ಮತ್ತು ತಲೆಗೆ ತರಚಿದಂತೆ ಆಗಿ ತಲೆಗೆ ಒಳಗಡೆ ಭಾರಿ ಗುಪ್ತ ಗಾಯವಾಗಿದ್ದು ಮತ್ತು ಬಲ ತೊಡೆಗೆ ಭಾರಿ ಒಳ ಪೆಟ್ಟಾಗಿ ಮಾತಾಡುವ ಸ್ಥಿತಿಯಲ್ಲಿರಲಿಲ್ಲ ನನ್ನ ತಮ್ಮನಿಗೆ ನನ್ನ ಭಾವನಾದ ಭೀಮಶಪ್ಪ ಮಕ್ತಲ್ ಮತ್ತು ನನ್ನ ಗಂಡ ದೇವಿಂದ್ರಪ್ಪ ತಂದೆ ಹಣಮಂತ್ರಾಯ ಮಕ್ತಲ್ ಹಾಗೂ ಅಂಜಪ್ಪ ತಂದೆ ಹಣಮಂತ್ರಾಯ ಮಕ್ತಲ್ ಇವರು ಘಟನಾ ಸ್ಥಳದಿಂದ ಉಪಚಾರಕ್ಕೆ ಅಂಬುಲೆನ್ಸ್ನಲ್ಲಿ ಸೈದಾಪೂರ ಸಕರ್ಾರಿ ಆಸ್ಪತ್ರೆಗೆ ಹಾಕಿಕೊಂಡು ಬಂದಿರುತ್ತಾರೆ. ನನ್ನ ತಮ್ಮನಾದ ಮಲ್ಲಪ್ಪ ತಂದೆ ಸಾಬಣ್ಣ ರಾಚನಳ್ಳೋರ ಇತನು ಸೈಕಲ್ ಮೋಟಾರ್ ನಂ.ಎಮ್.ಹೆಚ್-14-ಸಿಹೆಚ್-3513 ನೇದ್ದನ್ನು ಅತೀ ವೇಗದಿಂದ ಹಾಗೂ ನಿರ್ಲಕ್ಷತನದಿಂದ ಓಡಿಸಿದ ಕಾರಣ ಗಾಡಿ ಸ್ಕೀಡ್ಡಾಗಿ ಬಿದ್ದು. ಅಪಗಾತವಾದ ವಾಹನ ಮತ್ತು ಚಾಲಕನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಗಣಕೀಕರಣ ಮಾಡಿಸಿದ ಹೇಳಿಕೆ ಪಿಯರ್ಾದಿ ನಿಜವಿದೆ.

ಗುರಮಟಕಲ್ ಪೊಲೀಸ್ ಠಾಣೆ ಗುನ್ನೆ ನಂ:- 16/2019 ಕಲಂ 379 ಐಪಿಸಿ :- ದಿನಾಂಕ 22.01.2019 ರಂದು ಸಮಯ ಸಂಜೆ 4:15 ಗಂಟೆಗೆ ಎ-1 ಆರೋಪಿತನು ಎ-2 ಹೇಳಿದಂತೆ ಎ-2 ಇವರ  ಟ್ರ್ಯಾಕ್ಟರನಲ್ಲಿಯ ಮರಳನ್ನು ಟ್ರ್ಯಾಕ್ಟರ ಇಂಜಿನ ನಂ: 39.1357/ಖಙಊ11845 ಮತ್ತು ಅದರ ಚಸ್ಸಿ ನಂ: ಘಖಖಿಊ28432107059 ಹಾಗೂ ಟ್ರ್ಯಾಲಿಯ ಚಸ್ಸಿ ನಂ: 18/2009 ನೇದ್ದರಲ್ಲಿ ತುಂಬಿಕೊಂಡು ಅಕ್ರಮವಾಗಿ ಕಳ್ಳತನದಿಂದ ಹತ್ತಿಕುಣಿ ಸಿಮಾಂತರದಲ್ಲಿಯ ಮರಳನ್ನು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಎ-1 ಈತನ ವಶದಲ್ಲಿದ್ದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಎ-1 ನನ್ನು ಹಾಗೂ ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು. ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 16/2019 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರಮಟಕಲ್ ಪೊಲೀಸ್ ಠಾಣೆ ಗುನ್ನೆ ನಂ:- 17/2019 ಕಲಂ 379 ಐಪಿಸಿ :- ದಿನಾಂಕ 22.01.2019 ರಂದು ಸಮಯ ಸಂಜೆ 6:20 ಗಂಟೆಗೆ ಎ-1 ಆರೋಪಿತನು ಎ-2 ಹೇಳಿದಂತೆ ಎ-2 ಇವರ  ಟ್ರ್ಯಾಕ್ಟರನಲ್ಲಿಯ ಮರಳನ್ನು ಟ್ರ್ಯಾಕ್ಟರ ಟ್ರ್ಯಾಕ್ಟರ ನಂ: ಕೆಎ-33-ಟಿಎ-1208 ಮತ್ತು ಟ್ರ್ಯಾಲಿಯ ಚಸ್ಸಿ ನಂ: 11/2011,  ನೇದ್ದರಲ್ಲಿ ತುಂಬಿಕೊಂಡು ಅಕ್ರಮವಾಗಿ ಕಳ್ಳತನದಿಂದ ಹತ್ತಿಕುಣಿ ಸಿಮಾಂತರದಲ್ಲಿಯ ಮರಳನ್ನು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಎ-1 ಈತನ ವಶದಲ್ಲಿದ್ದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಎ-1 ನನ್ನು ಹಾಗೂ ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು. ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 17/2019 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 07/2019 ಕಲಂ: 379 ಐಪಿಸಿ :- ದಿನಾಂಕ: 22/01/2019 ರಂದು 7-30 ಎಎಮ್ ಕ್ಕೆ ಶ್ರೀ ಬಸವರಾಜ ತೇಲಿ ಪಿ.ಐ ಡಿ.ಸಿ.ಐ.ಬಿ ಘಟಕ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 22/01/2019 ರಂದು ನಾನು ಮತ್ತು ಸಿಬ್ಬಂದಿಯವರಾದ ಮಹೇಶ ಎಪಿಸಿ 111 ಮತ್ತು ವಾಹನ ಚಾಲಕ ಅಂಬ್ರೇಶ ಎಪಿಸಿ 80 ರವರೊಂದಿಗೆ ಸರಕಾರಿ ವಾಹನ ಸಂಖ್ಯೆ ಕೆಎ 33 ಜಿ 0127 ನೇದ್ದರಲ್ಲಿ ಮುಂಜಾನೆ 00:30 ಗಂಟೆಗೆ ಯಾದಗಿರಿಯಿಂದ ವಡಗೇರಾ ಕಡೆಗೆ ಹೋಗುತ್ತಿರುವಾಗ ಗಡ್ಡೆಸೂಗೂರು ಕ್ರಾಸ ಹತ್ತಿರ ಮುಂಜಾನೆ ಸುಮಾರು 01-30 ಗಂಟೆಗೆ ಒಂದು ಟಿಪ್ಪರ ಮರಳು ತುಂಬಿಕೊಂಡು ಎದುರುಗಡೆಯಿಂದ ಬರುತ್ತಿದ್ದು, ಅದನ್ನು ತಡೆದು ನಿಲ್ಲಿಸಿ, ವಾಹನ ಚಾಲಕನನ್ನು ಸದರಿ ವಾಹನವು ಯಾರಿಗೆ ಸೇರಿದ್ದು, ಅಂತಾ ವಿಚಾರಿಸಲಾಗಿ ರಘುಪತಿ ಸಾ:ಯಾದಗಿರಿ ರವರಿಗೆ ಸೇರಿದ್ದು ಅಂತಾ ತಿಳಿಸಿರುತ್ತಾನೆ. ಮತ್ತು ಮರಳಿಗೆ ಯಾವುದೇ ರಾಜಧನ ತುಂಬಿದ ಬಗ್ಗೆ ದಾಖಲಾತಿಗಳನ್ನು ಹಾಜರಪಡಿಸಿರುವುದಿಲ್ಲ. ನಾವು ವಾಹನದ ನಂಬರ ನೋಡಲು ಮುಂದೆ ಹೋದಾಗ ವಾಹನ ಚಾಲಕನು ಕತ್ತಲಲ್ಲಿ ವಾಹನ ಬಿಟ್ಟು ಪರಾರಿಯಾಗಿರುತ್ತಾನೆ. ಸದರಿ ವಾಹನ ಸಂಖ್ಯೆ ಕೆಎ 33 ಎ 9453 ಇರುತ್ತದೆ. ಸದರಿ ವಾಹನವನ್ನು ತಮ್ಮ ಠಾಣೆಗೆ ಒಪ್ಪಿಸಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 07/2019 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 08/2019 ಕಲಂ: 143,147,504,341,323,506 ಸಂ 149 ಐಪಿಸಿ :- ದಿನಾಂಕ: 22/01/2019 ರಂದು 3-30 ಪಿಎಮ್ ಕ್ಕೆ ಶ್ರೀ ರಾಚಪ್ಪ ತಂದೆ ಮಲ್ಲಯ್ಯ ಪೊಲೀಸ್ ಪಾಟಿಲ್, ವ:30, ಜಾ:ಕುರುಬರ, ಉ:ಒಕ್ಕಲುತನ ಸಾ:ಟೇಕರಾಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ದಿನಾಂಕ: 15/01/2019 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ನಮ್ಮೂರ ಆಂಜನೇಯ ಗುಡಿ ಹತ್ತಿರ ನಮ್ಮ ಮನೆ ಕಡೆ ಹೋಗುತ್ತಿದ್ದಾಗ 1) ದೇವಿಂದ್ರಪ್ಪ ತಂದೆ ಭೀಮರಾಯ ವಡಗೇರಿ, 2) ಹಣಮಂತ ತಂದೆ ಭೀಮರಾಯ ವಡಗೇರಿ, 3) ಬಸಣ್ಣಗೌಡ ತಂದೆ ಹಣಮಂತ್ರಾಯಗೌಡ ಮಾಲಿಪಾಟಿಲ್, 4) ಮಾಳಪ್ಪ ತಂದೆ ಮಲ್ಲಪ್ಪ ವಡಗೇರಿ, 5) ಮಲ್ಲಪ್ಪ ತಂದೆ ಶಂಕ್ರೆಪ್ಪ ವಡಗೇರಿ, 6) ಹಣಮಂತ ತಂದೆ ಮಲ್ಲಣ್ಣ ಹೊಸಮನಿ, 7) ಶೇಖಪ್ಪ ತಂದೆ ಮಲ್ಲಣ್ಣ ಹೊಸಮನಿ ಎಲ್ಲರೂ ಸಾ:ಟೇಕರಾಳ ಇವರುಗಳು ಅಕ್ರಮಕೂಟ ಕಟ್ಟಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಏ ಮಗನೆ ರಾಚ್ಯಾ ಎಲ್ಲಿಗೆ ಹೋಗುತ್ತಿ ನಿಲ್ಲು ಸೂಳೆ ಮಗನೆ ನಿನ್ನ ಆಳು ಮಕ್ಕಳು ನಮ್ಮ ಹೊಲದಲ್ಲಿ ಆಡುಗಳು ಮೇಯಿಸಿರುತ್ತಾರೆ, ನಮ್ಮ ಹೊಲದ ಕಡೆ ಯಾಕೆ ಬರುತ್ತಿರಲೇ ಭೊಸಡಿ ಮಕ್ಕಳೆ ಎಂದು ಜಗಳ ತೆಗೆದವರೆ ಬಸಣ್ಣಗೌಡ, ಹಣಮಂತ ಹೊಸಮನಿ ಮತ್ತು ಶೇಖಪ್ಪ ಇವರು ನನಗೆ ತೆಕ್ಕೆ ಕುಸ್ತಿಗೆ ಬಿದ್ದು ಹಿಡಿದುಕೊಂಡಾಗ ದೇವಿಂದ್ರಪ್ಪ, ಮಾಳಪ್ಪ ಇಬ್ಬರೂ ಬಂದು ಕೈಯಿಂದ ನನಗೆ ಮನಸ್ಸಿಗೆ ಬಂದಂಗೆ ಮೈಕೈಗೆ, ಎದೆಗೆ, ಬೆನ್ನಿಗೆ ಹೊಡೆದರು. ಬಿಡಿಸಲು ಬಂದ ನಮ್ಮಣ್ಣ ಹಣಮಂತ ತಂದೆ ಮಲ್ಲಯ್ಯನಿಗೆ ಮಾಳಪ್ಪನು ಬಂದು ಕೈ ಮುಷ್ಠಿ ಮಾಡಿ ಗುದ್ದಿ ಕಾಲಿನಿಂದ ಒದ್ದಿರುತ್ತಾನೆ. ಬಿಡಿಸಲು ಬಂದ ಮಾಳಪ್ಪ ತಂದೆ ಮಲ್ಲಯ್ಯ ಮತ್ತು ಸುರೇಶ ತಂದೆ ಮಲ್ಲಯ್ಯ ಇವರಿಗೆ ಹಣಮಂತ ವಡಗೇರಿ, ಮಲ್ಲಪ್ಪ ವಡಗೇರಿ ಇವರು ನೆಲಕ್ಕೆ ಕೆಡವಿ ಕೈಯಿಂದ ಗುದ್ದಿರುತ್ತಾರೆ. ಆಗ ಜಗಳವನ್ನು ಭೀಮಾಶಂಕರ ತಂದೆ ದ್ಯಾವಣ್ಣ ಹೇಮನೂರ, ಸಾಹೇಬಗೌಡ ತಂದೆ ಹಣಮಂತ, ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಕೆಂಭಾವಿ ಮತ್ತು ಚಂದ್ರಾಮ ತಂದೆ ಹಣಮಂತ್ರಾಯ ಹೊಸಮನಿ ಇವರು ಬಂದು ಬಿಡಿಸಿದಾಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿ ಸೂಳೆ ಮಗನೆ ಇನ್ನೊಮ್ಮೆ ನಮ್ಮ ಹೆಸರಿಗೆ ಬಂದರೆ ನಿಮಗೆ ಜೀವಂತ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಕಾರಣ ನಮ್ಮ ಆಳುಗಳು ಆಡುಗಳು ಮೇಯಿಸಲು ಹೊದರೆ ನಮ್ಮ ಹೊಲದ ಕಡೆಗೆ ಏಕೆ ಬರುತ್ತಿರಿ ಎಂದು ಜಗಳ ತೆಗೆದು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನಗೆ ಕೈಯಿಂದ ಹೊಡೆದಿದ್ದು ಈಗ ಮಾಯ್ದಿರುವುದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಹೋಗುವುದಿಲ್ಲ ಅಂತಾ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 08/2019 ಕಲಂ: 143,147,504,341,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 28/2019.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್ :- ದಿನಾಂಕ 22/01/2019 ರಂದು ಸಾಯಂಕಾಲ 19-40 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ನಾಗಾರಾಜ ಜಿ. ಪಿ.ಐ. ಸಾಹೇಬರು. ಇವರು ಠಾಣೆಗೆ ಹಾಜರಾಗಿ ಒಂದು ಸ್ವಲ್ಪ ಮರಳು ಇರುವ ಟ್ರ್ಯಾಕ್ಟರ, ಹಾಜರಪಡಿಸಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 22/01/2019 ರಂದು ಮದ್ಯಾಹ್ನ 15-15 ಗಂಟೆಗೆ ನಾನು ಮತ್ತು ರಾಜಕುಮಾರ ಪಿ.ಎಸ್.ಐ. (ಎಲ್&ಓ) ಮತ್ತು ಠಾಣೆಯ ಸಿಬ್ಬಂದಿಯವರಾದ ನಾರಾಯಣ ಹೆಚ್,ಸಿ,49, ಗೋಕುಲ್ ಹುಸೇನ ಪಿ,ಸಿ,172, ನಿಂಗಪ್ಪ ಪಿ.ಸಿ.260, ಜೀಪ ಚಾಲಕ ನಾಗರೆಡ್ಡಿ ಎ.ಪಿ.ಸಿ.161. ರವರಿಗೆ ಕರೆದು ಕೊಂಡು ಠಾಣೆಯ ಜೀಪ್ ನಂ ಕೆ.ಎ-33-ಜಿ-0138 ನ್ನೇದ್ದರಲ್ಲಿ ಅಕ್ರಮ ಮರಳು ತಡೆಗಟ್ಟುವ ಕುರಿತು ಹೋರಟು ಸದರಿ ಜೀಪನ್ನು ನಾಗರೆಡ್ಡಿ ಎ.ಪಿ.ಸಿ. ಇವರು ಚಲಾಯಿಸುತ್ತಿದ್ದರು, ಹತ್ತಿಗುಡೂರ ಹತ್ತಿರದ ಹೈಯಾಳ (ಬಿ) ಕ್ರಾಸ್ ಹತ್ತಿರ 15-50 ಗಂಟೆಗೆ ಇದ್ದಾಗ ಹೈಯಾಳ (ಬಿ) ಗ್ರಾಮದ ಕೃಷ್ಣಾ ನದಿಯಲ್ಲಿ ಅಕ್ರಮವಾಗಿ ಟ್ರ್ಯಾಕ್ಟರನಲ್ಲಿ ಮರಳು ಲೊಡಮಾಡಿಕೊಂಡು ಸಾಗಿಸುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಜೀಪಿನಲ್ಲಿ ಇದ್ದ ಸಿಬಂದಿಯವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ಹೇಳಿ ಮಾನ್ಯ ಡಿವೈ.ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋರಟೆವು. ನೇರವಾಗಿ ಹೈಯಾಳ (ಬಿ) ಗ್ರಾಮದ ಕೃಷ್ಣಾನದಿಯಲ್ಲಿ 16-30 ಗಂಟೆಗೆ ನದಿಯ ದಂಡೆಯಲ್ಲಿ ಹೋಗುತ್ತಿರುವಾಗ ನದಿಯಲ್ಲಿ ಒಂದು ಟ್ರ್ಯಾಕ್ಟರ ಇದ್ದು ಅದರಲ್ಲಿ ಇಬ್ಬರು ವ್ಯೆಕ್ತಿಗಳು ಟ್ರ್ಯಾಕ್ಟರನಲ್ಲಿ ಮರಳು ಲೋಡಮಾಡುತ್ತಿದ್ದರು ನಾವು ಜೀಪಿನಿಂದ ಎಲ್ಲರು ಇಳಿದು ಸದರಿಯವರ ಮೇಲೆ ದಾಳಿ ಮಾಡಲು ಹೋಗುತ್ತಿರುವಾಗ ಸದರಿಯವರು ನಮ್ಮನ್ನು ನೋಡಿ ಟ್ರ್ಯಾಕ್ಟರ್ ಬಿಟ್ಟು ನದಿಯ ದಂಡೆಯಲ್ಲಿ ಜಾಲಿ ಕಂಟಿಯ ಮರೆಯಲ್ಲಿ ಓಡಿ ಹೋದರು ಸದರಿಯವರಿಗೆ ಬೆನ್ನು ಹತ್ತಿ ಇಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ. ಸದರಿಯವರನ್ನು ಪುನ: ನೋಡಿದಲ್ಲಿ ನಾವು ಗುರುತಿಸುತ್ತೆವೆೆ. ನಂತರ ಟ್ರ್ಯಾಕ್ಟರ್ದಲ್ಲಿ ಮರಳು ತುಂಬುತ್ತಿದ್ದ ಸ್ಥಳದ ಹತ್ತಿರ ಬಂದು ನೋಡಲಾಗಿ ಒಂದು ಟ್ರ್ಯಾಕ್ಟರ ಇದ್ದು ಸದರಿ ಟ್ರ್ಯಾಕ್ಟರ್ನಲ್ಲಿ ಸ್ವಲ್ಪ ಮರಳು ಇದ್ದು ಅಂದಾಜು 1/4 ಬ್ರಾಸ್ ನಷ್ಟು ಮರಳು ಹಾಕಿದು ಇತ್ತು, ಸದರಿ ವಾಹನವನ್ನು ಪರಿಸಿಲಿಸಿ ನೋಡಲಾಗಿ ಕೆಂಪು ಬಣ್ಣದ ಮಾಸ್ಸಿ ಪರಗುಷನ್ 241 ಡಿ.ಐ. ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ನಂ ಕೆಎ-33ಟಿಎ-1989 ಅದರ ಇಂಜೀನ್ ನಂ. ಖ325.1ಆ70001 ಚೆಸ್ಸಿ ನಂ 707733-ಂಂಂಃ ನೇದ್ದರ ಅಂದಾಜು ಕಿಮ್ಮತ್ತು 100000=00 ರೂ ಮತ್ತು ಸದರಿ ಟ್ರ್ಯಾಕ್ಟರಕ್ಕೆ ಹೊಂದಿಕೊಂಡು ಕೆಂಪುಬಣ್ಣದ ಟ್ರ್ಯಾಲಿ ನಂಬರ ಇರುವದಿಲ್ಲಾ ಅ:ಕಿ: 20000 ರೂ ಸದರಿ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಅಂದಾಜು 1/4 ಬ್ರಾಸ್ ಮರಳು ಇದ್ದು ಅದರ ಅ:ಕಿ:200=00 ರೂ ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕರು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದು ಇರುತ್ತದೆ. ನಾರಾಯಾಣ ಹೆಚ್.ಸಿ 49 ರವರಿಗೆ ಒಬ್ಬ ಚಾಲಕನನ್ನು ಕರೆದುಕೊಂಡ ಬರಲು ತಿಳಿಸಿದ್ದರಿಂದ ಸದರಿಯವರು ಗ್ರಾಮದಲ್ಲಿ ಹೋಗಿ ಒಬ್ಬ ಚಾಲಕನನ್ನು ಕರೆದುಕೊಂಡು ಬಂದ್ದಿದ್ದು ಸದರಿ ಚಾಲಕನ ಸಹಾಯದಿಂದ ಟ್ರ್ಯಾಕ್ಟರ್ನ್ನು ಠಾಣೆಗೆ ತೆಗೆದುಕಲೊಂಡು 19-00 ಗಂಟೆಗೆ ಬಂದು. ಠಾಣೆಯಲ್ಲಿ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೋಳ್ಳಲು 19-40 ಪಿ.ಎಂ.ಕ್ಕೆ ಸ||ತ|| ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 28/2019 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

 ಶಹಾಪೂರ ಪೊಲೀಸ್ ಠಾಣೆ :- 26/2019 ಕಲಂ 379  ಐ.ಪಿ.ಸಿ  ಮತ್ತು 44[1] ಕೆ.ಎಮ್.ಎಮ್.ಸಿ.ಆರ್ :- ದಿನಾಂಕ 22/01/2019 ರಂದು  ಬೆಳಗಿನ ಜಾವ 04-45 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ರಾಜಕುಮಾರ ಪಿ.ಎಸ್.ಐ(ಕಾಸು) ಶಹಾಪೂರ ಪೊಲೀಸ್ ಠಾಣೆ  ರವರು ಠಾಣೆಗೆ ಹಾಜರಾಗಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಎರಡು ಟ್ಯಾಕ್ಟರ ವಾಹನಗಳನ್ನು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 22/01/2019 ರಂದು 00-45 ಗಂಟೆಗೆ ಶಹಾಪೂರದ ಬಸವೇಶ್ವರ ವೃತ್ತದಲ್ಲಿ ಎನ್.ಆರ್.ಸಿ ಕರ್ತವ್ಯದ ಮೇಲೆ ಇದ್ದಾಗ ಹೈಯ್ಯಾಳ (ಬಿ) ಗ್ರಾಮದ ಕೃಷ್ಣಾ ನದಿಯಲ್ಲಿ ಟ್ಯಾಕ್ಟರದಲ್ಲಿ ಮರಳು ಲೋಡ ಮಾಡಿ ಅಕ್ರಮವಾಗಿ ಸಾಗಿಸುತಿದ್ದಾರೆ ಅಂತ ಖಚಿತ ಮಾಹಿತಿಯ ಮೇರೆಗೆ ದಾಳಿ ಕುರಿತು ಫಿಯಾದಿಯವರು ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-618 ನೇದ್ದರಲ್ಲಿ ಸಿಬ್ಬಂದಿಯವರೊಂದಿಗೆ ಹೈಯ್ಯಾಳ(ಬಿ) ಗ್ರಾಮದ ಕೃಷ್ಣಾ ನದಿಗೆ ಬೆಳಗಿನ ಜಾವ 01-45 ಗಂಟೆಗೆ ಹೋದಾಗ ಎರಡು ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ಲೋಡ ಮಾಡುತಿದ್ದರು, ಸದರಿಯವರು ಪೊಲೀಸ ವಾಹನ ಬರುವದನ್ನು ಕಂಡು ಮರಳು ತುಂಬಿದ ಟ್ಯಾಕ್ಟರ ವಾಹನ ಬಿಟ್ಟು ಓಡಿಹೋಗಿದ್ದು, ಸದರಿ ಟ್ಯಾಕ್ಟರ ವಾಹನ ಚಾಲಕರು ಮತ್ತು ಮಾಲಿಕರು ಸೇರಿ ಸರಕಾರಕ್ಕೆ ಸೇರಿದ ಮರಳು ಮರಳು ಸಾಗಾಣಿಕೆ ಪರವಾನಿಗೆ ಪತ್ರ ಪಡೆಯದೆ ಕಳ್ಳತನದಿಂದ ಸಾಗಿಸುತಿದ್ದ ಬಗ್ಗೆ ದೃಡ ಪಟ್ಟಿದ್ದರಿಂದ ಎರಡು ಟ್ಯಾಕ್ಟರಗಳ್ನನು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 26/2019 ಕಲಂ 379 ಐ.ಪಿ.ಸಿ ಮತ್ತು 44(1) ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ :- 09/2019 ಕಲಂ 87  ಕೆ.ಪಿ ಯಾಕ್ಟ :- ದಿನಾಂಕ:22/01/2019 ರಂದು 12.00 ಗಂಟೆಯ ಸುಮಾರಿಗೆ ಆರೋಪಿತರು ಹುಣಸಗಿ ಹರಿಜವಾಡದ ಮರಿಗೆಮ್ಮ ದೇವಿಯ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪರಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಭದ ಇಸ್ಲೀಟ್ ಜೂಜಾಟವನ್ನು ಆಡುತ್ತಿದ್ದಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130 ಪಿಸಿ-233, 317 290 288 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತರಿಂದ 5800=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 08/2019 ಕಲಂ: 279, 337, 338 ಐಪಿಸಿ :- ದಿ: 22/01/19 ರಂದು 5.15 ಪಿಎಮ್ಕ್ಕೆ ಗಾಯಾಳುದಾರರಾದ ಶ್ರೀಮತಿ ಮಲ್ಲಮ್ಮ ಗಂಡ ಹುಲಗಪ್ಪ ಗೋನಾಳ ಸಾ|| ಕಿರದಳ್ಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಹೇಳೀಕೆ ಸಾರಾಂಶವೇನೆಂದರೆ, ದಿನಾಂಕ 20/01/2019 ರಂದು ಮಲ್ಲಾ ಸೀಮಾಂತರದಲ್ಲಿ ಹತ್ತಿ ಬಿಡಿಸುವ ಕೂಲಿಕೆಲಸ ಇದ್ದ ನಿಮಿತ್ಯ ನಾನು ಹಾಗು ನಮ್ಮೂರ ನಮ್ಮ ಜನಾಂಗದವರೇ ಆದ 1] ತಾಯಮ್ಮ ಗಂಡ ಗೌಡಪ್ಪ ಕಕ್ಕೇರಿ 2] ಲಕ್ಷ್ಮೀ ಗಂಡ ಶೆಖಪ್ಪ ಗೋನಾಲ 3] ಬಸಮ್ಮ ತಂದೆ ಈರಣ್ಣ ಇಂಗಳಗಿ 4] ಶಾಂತಮ್ಮ ತಂದೆ ಶಿವಪ್ಪ ಟಣಕೇದಾರ 5] ಪದ್ಮಾ ಗಂಡ ಶಿವರಾಜ ಟಣಕೇದಾರ 6] ನರಸಮ್ಮ ಗಂಡ ಭಾಗಣ್ಣ ಗೋನಾಲ 7] ಪದ್ದಮ್ಮ ಗಂಡ ವೆಂಕಟೇಶ ಬಂಟನೂರ 8] ಈರಮ್ಮ ಗಂಡ ಜಠ್ಟೆಪ್ಪ ಇಜೇರಿ 9] ಭೀಮಬಾಯಿ ತಂದೆ ಜಠ್ಟೆಪ್ಪ ಇಜೇರಿ ಎಲ್ಲರೂ ಕೂಡಿಕೊಂಡು ನಮ್ಮೂರಿನಿಂದ 09-30 ಎಎಮ್ ಕ್ಕೆ ಮಲ್ಲಾದಿಂದ ಟಂ ಟಂ ನಂಬರ ಕೆಎ-33 ಎ- 838 ನೇದ್ದರಲ್ಲಿ ನಾವೆಲ್ಲರೂ ಕುಳಿತು ಹೊರಟೆವು. ಸದರಿ ಟಂ ಟಂನ್ನು ನಮಗೆ ಪರಿಚಯದವನಾದ ಹಣಮಂತ ತಂದೆ ಬಸಪ್ಪ ಟಣಕೇದಾರ ಸಾ|| ಕಿರದಳ್ಳಿ ಈತನು ಇದ್ದನು. ಹೀಗಿರುತ್ತಾ ನಾವು ಟಂಟಂದಲ್ಲಿ ಕುಳಿತು ಕೆಂಭಾವಿ ದಾಟಿ ಮಲ್ಲಾ - ಕೆಂಭಾವಿ ರೋಡಿನ ಮದ್ಯ ಇರುವ ಪುರಸಭೆ ಕಮಾನ ಹತ್ತಿರ ಹೋಗುತ್ತಿದ್ದಾಗ ನಮ್ಮ ಟಂ ಟಂ ಚಾಲಕನು ತನ್ನ ಟಂ ಟಂನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮಲೆ ಬಲಭಾಗಕ್ಕೆ ಕಟ್ ಮಾಡಿದಾಗ ಟಂ ಟಂ ಪಲ್ಟಿಯಾಗಿ ಬಿದ್ದು ನಾವೆಲ್ಲರೂ ಕೆಳಗೆ ಬಿದ್ದು ನನಗೆ ತಲೆಗೆ ಒಳಪೆಟ್ಟಾಗಿರುತ್ತದೆ. ತಾಯಮ್ಮ ಕಕ್ಕೇರಿ ಇವಳಿಗೆ ಎಡಗಾಲ ತೊಡೆಯಲ್ಲಿ ಕಾಲು ಮುರಿದು ರಕ್ತಗಾಯವಾಗಿ ಬಲಗೈ ಮೊಳಕ್ಯ ಹತ್ತಿರ ಕೈ ಮುರಿದು ಒಳಪೆಟ್ಟಾಗಿರುತ್ತದೆ. ಲಕ್ಷ್ಮೀ ಗೋನಾಲ ಇವಳಿಗೆ ಎಡಗೈ ಮೊಳಕೈಗೆ, ಹಸ್ತಕ್ಕೆ, ಬಲಗೈ ರಟ್ಟಿಗೆ, ಎಡಕಪಾಳಕ್ಕೆ, ಹಾಗು ಹೊಟ್ಟೆಗೆ ಭಾರೀ ತರಚಿದ ರಕ್ತಗಾಯವಾಗಿರುತ್ತದೆ. ಬಸಮ್ಮ ಬೀಬಿ ಇಂಗಳಗಿ ಇವಳಿಗೆ ಎಡಕಪಾಳಕ್ಕೆ, ಎಡಗೈ ಹಸ್ತಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ಶಾಂತಮ್ಮ ಟಣಕೇದಾರ ಇವಳಿಗೆ ಎಡಗಲ್ಲಕ್ಕೆ ರಕ್ತಗಾಯವಾಗಿ ಹಲ್ಲು ಮುರಿದಿರುತ್ತವೆ. ಪದ್ಮಾ ಟಣಕೇದಾರ ಇವಳಿಗೆ ಎಡಗೈ ಹಸ್ತದ ಮೇಲೆ ಮತ್ತು ಬಲಗೈ ಮೊಳಕೈ ಹತ್ತಿರ ತರಚಿದ ಗಾಯವಾಗಿರುತ್ತದೆ. ನರಸಮ್ಮ ಗೋನಾಲ ಇವಳಿಗೆ ತಲೆಗೆ ಒಳಪೆಟ್ಟಾಗಿರುತ್ತದೆ. ಪದ್ದಮ್ಮ ಬಂಟನೂರ ಇವಳಿಗೆ ಬಲಗಾಲ ಪಾದಕ್ಕೆ ತರಚಿದ ಗಾಯವಾಗಿರುತ್ತದೆ. ಈರಮ್ಮ ಇಜೇರಿ ಇವರಿಗೆ ಎಡಗಾಲ ಹಿಂಬಡಿಗೆ ತರಚಿದ ಗಾಯವಾಗಿರುತ್ತದೆ. ಹಾಗು ಭೀಮಬಾಯಿ ಇಜೇರಿ ಇವಳಿಗೆ ಎಡಗೈ ಮೊಳಕೈ ಹತ್ತಿರ ಗುಪ್ತಗಾಯವಾಗಿರುತ್ತದೆ. ತಾಯಮ್ಮ, ಲಕ್ಷ್ಮೀ, ಬಸಮ್ಮ, ಹಾಗು ಶಾಂತಮ್ಮ ಇವರಿಗೆ ಭಾರೀ ಗಾಯಗಳಾಗಿದ್ದರಿಂದ ಸದರಿ ನಾಲ್ಕು ಜನರನ್ನು ಹೆಚ್ಚಿನ ಉಪಚಾರ ಕುರಿತು ವಿಜಯಪುರದ ಬಿ ಎಲ್ ಡಿ ಈ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ತಡವಾಗಿ ಇಂದು ಠಾಣೆಗೆ ಬಂದುಟ್ಟೀ ಹೇಳಿಕೆ ನೀಡಿದ್ದು ಇರುತ್ತದೆ ಅಂತ ಕೊಟ್ಟ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 08/2019 ಕಲಂ: 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
   
ಕೆಂಭಾವಿ  ಪೊಲೀಸ್ ಠಾಣೆ ಗುನ್ನೆ ನಂ:- 29/2019 ಕಲಂ 379 ಐಪಿಸಿ, 41(ಡಿ), 102 ಸಿಆರ್ಪಿಸಿ :- ದಿನಾಂಕ 22/01/2019 ರಂದು 10.30 ಪಿಎಂ ಕ್ಕೆ ಶ್ರೀ ನಾಗರಾಜ ಜಿ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆರವರು ಒಬ್ಬ ಆರೋಪಿ ಮತ್ತು ಒಂದು ವರದಿಯನ್ನು ನೀಡಿದ್ದು ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ: 22/01/2019 ರಂದು 8.15 ಪಿಎಮ್ಕ್ಕೆ ಪೆಟ್ರೋಲಿಂಗ ಕರ್ತವ್ಯ ಕುರಿತು ನಾನು ಜೊತೆಯಲ್ಲಿ ಠಾಣೆಯ ರಾಜಕುಮಾರ ಪಿಎಸ್ಐ(ಕಾ.ಸು), ಸಿಬ್ಬಂದಿಯವರಾದ ಹೊನ್ನಪ್ಪ ಹೆಚ್ಸಿ 101, ಬಾಬು ಹೆಚ್ಸಿ 162,  ಗಣೇಶ ಪಿಸಿ 294, ಮತ್ತು ಗಜೇಂದ್ರ ಪಿಸಿ 313 ರವರೆಲ್ಲರನ್ನು ಕರೆದುಕೊಂಡು ಠಾಣೆಯ ಜೀಪ್ ನಂ ಕೆಎ 33 ಜಿ 138 ನೇದ್ದರಲ್ಲಿ ಠಾಣೆಯಿಂದ ಹೊರಟೆವು. ವಾಹನವನ್ನು ನಾಗರಡ್ಡಿ ಎಪಿಸಿ 161 ಇವರು ಚಲಾಯಿಸುತ್ತಿದ್ದು ಹತ್ತಿಗುಡೂರ ಕಡೆಗೆ 8.25 ಪಿಎಮ್ ಸುಮಾರಿಗೆ ಶಹಾಪೂರ ನಗರದ ರಾಖಂಗೇರಾ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ಅಲ್ಲಿ ಒಬ್ಬ ವ್ಯಕ್ತಿ ನಮ್ಮ ಜೀಪನ್ನು ನೋಡಿ ಓಡಿ ಹೋಗಲು ಪ್ರಾರಂಭಿಸಿದನು. ಆಗ ನಮಗೆ ಆ ವ್ಯಕ್ತಿಯ ಬಗ್ಗೆ ಸಂಶಯ ಬಂದಿದ್ದರಿಂದ ಸಿಬ್ಬಂದಿಯವರ ಸಹಾಯದಿಂದ ಸದರಿ ಓಡಿ ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಳಾಸವನ್ನು ವಿಚಾರಿಸಲಾಗಿ ವಾಸು@ ಧನುಷ್ ತಂದೆ ಚಂದಪ್ಪ ಚವ್ಹಾಣ ವ|| 24ವರ್ಷ ಜಾ|| ಲಂಬಾಣಿ ಉ|| ಕೂಲಿ ಸಾ|| ಕನ್ಯಾಕೋಳೂರ ತಾಂಡಾ ತಾ|| ಶಹಾಪೂರ ಅಂತಾ ತಿಳಿಸಿದ್ದು ಅವನ ಕೈಯಲ್ಲಿ ಒಂದು ಪ್ಲಾಸ್ಟಿಕ್ ಚೀಲ ಇದ್ದು ಅದನ್ನು ಚೆಕ್ ಮಾಡಿ ನೋಡಲಾಗಿ ಅದರಲ್ಲಿ 3 ನೋಕಿಯಾ ಕಂಪನಿಯ ಕಪ್ಪು ಬಣ್ಣದ ಆಂಡ್ರೈಡ್ ಮೊಬೈಲ್ ಸೆಟ್ಗಳು, ಮತ್ತು 10 ಲೆನೋವಾ ಕಂಪನಿಯ ಕಪ್ಪು ಬಣ್ಣದ ಟ್ಯಾಬ್ಗಳು ಇದ್ದು ಅವುಗಳನ್ನು ಎಲ್ಲಿ ತಂದಿದ್ದಿಯಾ ಅವುಗಳ ರಸೀದಿ ಎಲ್ಲಿವೆ ಅಂತಾ ಕೇಳಿದಾಗ ಸದರಿ ವ್ಯಕ್ತಿಯು ಅವನ ಸ್ನೇಹಿತರಾದ ಮುನ್ನಾ @ ಮುನ್ನೆ ತಂದೆ ಪತ್ತು ಚವ್ಹಾಣ ಹಾಗೂ ಇನ್ನಿತರರು ಎಲ್ಲಿಯೋ ಕಳ್ಳತನ ಮಾಡಿಕೊಂಡು ತಂದು ಮಾರಾಟ ಮಾಡಲು ನನಗೆ ಕೊಟ್ಟಿದ್ದು ನಾನು ಅವುಗಳನ್ನು ಮಾರಾಟ ಮಾಡಲು ತೆಗದುಕೊಂಡು ಹೋಗುತ್ತಿದ್ದು ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ರಸೀದಿ ಇರುವುದಿಲ್ಲ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯು ಕಳ್ಳತನ ಮಾಡಿ ಕಳ್ಳತನದ ಮಾಲನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ಖಚಿವಾಗಿದ್ದರಿಂದ 8.30 ಪಿಎಮ್ ಕ್ಕೆ ಸದರಿ ವ್ಯಕ್ತಿಯನ್ನು ನಮ್ಮ ತಾಬೆಗೆ ತೆಗೆದುಕೊಂಡು ಸದರಿ ಮೊಬೈಲ್ ಮತ್ತು ಟ್ಯಾಬ್ಗಳ ಜಪ್ತಿ ಕುರಿತು ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಸಂಗಡ ಇದ್ದ ಬಾಬು ಹೆಚ್ಸಿ 162 ರವರಿಗೆ ಹೇಳಿದಾಗ 8.40 ಪಿಎಮ್ಕ್ಕೆ ಇಬ್ಬರು ವ್ಯಕ್ತಿಗಳಾದ 1) ಶ್ರೀ ಅಮಲಪ್ಪ ತಂದೆ ನಿಂಗಪ್ಪ ನಾರಾಯಣಿ ವ|| 25ವರ್ಷ ಜಾ|| ಪ.ಪಂಗಡ ಉ|| ಕೂಲಿ ಸಾ|| ಹಳಿಸಗರ ಶಹಾಪೂರ 2) ಶ್ರೀ ಮಹಾಂತೇಶ ತಂದೆ ನಾಗಪ್ಪ ಹೊಸಮನಿ ವ|| 28ವರ್ಷ ಜಾ|| ಪ.ಜಾತಿ ಉ|| ಕೂಲಿಕೆಲಸ ಸಾ|| ಬೇವಿನಳ್ಳಿ ತಾ|| ಶಹಾಪೂರ ಇವರಿಗೆ ಕರೆದುಕೊಂಡು ಬಂದು ಹಾಜರುಪಡಿಸಿದಾಗ ಸದರಿಯವರಿಗೆ ಪಂಚರಾಗಲು ಕೋರಿಕೊಂಡ ಪ್ರಯುಕ್ತ ಸದರಿಯವರು ಪಂಚರಾಗಲು ಒಪ್ಪಿಕೊಂಡಿದ್ದರಿಂದ, ಆರೋಪಿ ವಾಸು @ ಧನುಷ್ ತಂದೆ ಚಂದಪ್ಪ ಚವ್ಹಾಣ ಈತನ ಹತ್ತಿರ ದೊರೆತ 3 ಮೊಬೈಲಗಳ ಅಂ|| ಕಿ|| 45,000/- ರೂಪಾಯಿ ಹಾಗೂ 10 ಟ್ಯಾಬ್ಗಳ ಅಂ|| ಕಿ|| 75,000/- ರೂಪಾಯಿ ನೇದ್ದು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ 8.45 ಪಿಎಂ ದಿಂದ 9.45 ಪಿಎಂ ದವರೆಗೆ ಟಾರ್ಚ ಲೈಟಿನ ಬೆಳಕಿನ ಸಹಾಯದಿಂದ ಜಪ್ತಿ ಪಂಚನಾಮೆ ಮಾಡಿ ಜಪ್ತಿ ಪಂಚನಾಮೆಯ ಮೂಲಕ ಮುದ್ದೆಮಾಲನ್ನು ತಾಬೆಗೆ ತೆಗೆದುಕೊಂಡು ಮರಳಿ ಠಾಣೆಗೆ 10.00 ಪಿಎಂಕ್ಕೆ ಬಂದು ವರದಿಯನ್ನು ತಯಾರಿಸಿ 3 ಮೊಬೈಲ್ ಮತ್ತು 10 ಟ್ಯಾಬ್ಗಳನ್ನು ಹಾಗೂ ಒಬ್ಬ ಆರೋಪಿತನನ್ನು ಜಪ್ತಿ ಪಂಚನಾಮೆ ಸಮೇತ ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ 10.30 ಪಿಎಂಕ್ಕೆ ವರದಿ ಸಲ್ಲಿಸಿರುತ್ತೇನೆ ಅಂತಾ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 29/2019 ಕಲಂ 379 ಐಪಿಸಿ 41(ಡಿ),102 ಸಿಆರ್ಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.  
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 06/2019 ಕಲಂ: 379 ಐಪಿಸಿ :- ದಿನಾಂಕ:23.01.2019 ರಂದು 00:45 ಎಎಮ್ ಕ್ಕೆ ಶ್ರೀ ಎನ್.ಎಸ್ ಜನಗೌಡ ಪಿಎಸ್ಐ, ಸಿ.ಇ.ಎನ್ ಪೊಲೀಸ್ ಠಾಣೆ ಯಾದಗಿರಿ ರವರು ಠಾಣೆಗೆ ಹಾಜರಾಗಿ  ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಗಣಕೀಕರಿಸಿದ ತಮ್ಮ ವರದಿಯನ್ನು  ಹಾಗೂ ಟಿಪ್ಪರ್ ಚಾಲಕ  ಮುತ್ತು ತಂದೆ ನಿಂಗಪ್ಪ ಚೌವನಬಾಯಿ ಟಿಪ್ಪರ ಹೆಲ್ಪರ್ ಹಣಮಂತ ತಂದೆ ಗೋಪಾಲಪ್ಪ ಹಾದಿಮನಿ, ಹಾಗು ಮರಳು ತುಂಬಿ ಟಿಪ್ಪರ್ ನಂ: ಕೆಎ-28 ಸಿ-4572 ನೇದರೊಂದಿಗೆ ಹಾಜರ ಪಡಿಸಿದ್ದು, ಪಿಎಸ್ಐ ರವರು ಹಾಜರುಪಡಿಸಿದ ವರದಿ ಸಾರಾಂಶವೆನೆಂದರೆ ನಾನು ಎನ್.ಎಸ್ ಜನಗೌಡ ಪಿ.ಎಸ್.ಐ, ಸಿ.ಇ.ಎನ್ ಪೊಲೀಸ್ ಠಾಣೆ ಯಾದಗಿರಿ ಜಿಲ್ಲಾ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಂದು ದಿನಾಂಕ: 22/01/2019 ರಂದು ಮಧ್ಯಾಹ್ನ 4:15 ಗಂಟೆ ಸುಮಾರಿಗೆ ಕಛೇರಿಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಬುಂಕುಲ್ ದೋಡ್ಡಿ ಹತ್ತಿರ ಕೃಷ್ಣಾ ನದಿಯಿಂದ ಅಕ್ರಮ ಮರಳನ್ನು ಟಿಪ್ಪರುಗಳಿಗೆ ತುಂಬಿಸಿ ಕಕ್ಕೆರಾ ಕಡೆಗೆ ಮರಳನ್ನು ಸಾಗಿಸುತ್ತಿರುವುದಾಗಿ ತಿಳಿದು ಬಂದ ಬಾತ್ಮಿಯನ್ನು ನನಗೆ ತಿಳಿಸಿದಾಗ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ನಾನು ನಮ್ಮ ಸಿಬ್ಬಂದಿಯವರಾದ 1) ಶ್ರೀ ಈರಣ್ಣ ಹೆಚ್.ಸಿ 144, 2) ಶ್ರೀ ಮೌನೇಶ್ವರ  ಹೆಚ್.ಸಿ-59, 3)ಶ್ರೀ  ಹರಿನಾಥರೆಡ್ಡಿ ಪಿ.ಸಿ 267 4) ಶ್ರೀ  ಸಾಬಣ್ಣ ಪಿ.ಸಿ-145 ರವರೊಂದಿಗೆ ಕಕ್ಕೆರಾ ಗ್ರಾಮದ ಕಡೆಗೆ ಹೊರಟು. ಕಕ್ಕರಾ ಗ್ರಾಮದ ವಾಲ್ಮಿಕಿ ವೃತ್ತದ ಹತ್ತಿರ ಸಮಯ 11:10 ಸುಮಾರಿಗೆ ಸಮಯ ಹೋಗುತ್ತಿರುವಾಗ ಒಂದು ಟಿಪ್ಪರ್ ಶಾಂತಪೂರ ಕ್ರಾಸ್ ಕಡೆಯಿಂದ ಬಂದಿದ್ದು ಸದರಿ ಟಿಪ್ಪರನ್ನು ನಿಲ್ಲಿಸಿ ನೋಡಲಾಗಿ, ಅಶೋಕ್ ಲಯಿಲಂಡ್ ಕಂಪನಿಯದಿದ್ದು ಟಿಪ್ಪರ ನಂ. ಕೆಎ-28-ಸಿ-4572 ಅಂತಾ ಇದ್ದು, ಪರಿಶೀಲಿಸಿ ನೋಡಲಾಗಿ ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇರುತ್ತದೆ. ಚಾಲಕನಿಗೆ ಆತನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮುತ್ತು ತಂದೆ ನಿಂಗಪ್ಪ ಚೌವನಬಾಯಿ ಜಾತಿ: ಕುರಬರ್ ವಯ:22 ವರ್ಷ ಸಾ: ಜೋಗುಂಡಬಾವಿ ತಾ: ಹುಣಸಿಗಿ ಜಿ:ಯಾಧಗಿರಿ ಅಂತಾ ತಿಳಿಸಿದ್ದು ಮತ್ತು ಟಿಪ್ಪರದಲ್ಲಿ ಇದ್ದ ಹೆಲ್ಪರ್ನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಹಣಮಂತ ತಂದೆ ಗೋಪಾಲಪ್ಪ ಆದಿಮನಿ ವಯ:20 ವರ್ಷ ಜಾತಿ ಎಸ್.ಸಿ ಸಾ: ಮಂಜಲಪೂರಹಳ್ಳಿ ತಾ: ಹುಣಸಿಗಿ ಜಿ: ಯಾಧಗಿರಿ ಅಂತಾ ತಿಳಿಸಿದನು. ಸದರಿ ಚಾಲಕ ಮತ್ತು ಹೇಲ್ಪರ್ಗೆ ಮರಳು ತುಂಬಲು ಯಾವುದಾದರು ರಾಯಲಿಟಿ ಅಥವಾ ರಾಜಧನ ತುಂಬಿದ ಬಗ್ಗೆ ದಾಖಲಾತಿಗಳು ಇವೆಯೆ ಅಂತಾ ವಿಚಾರಿಸಿದಾಗ ಯಾವುದೇ ದಾಖಲಾತಿಗಳು ಇರುವುದಿಲ್ಲ ನಮ್ಮ ಮಾಲೀಕರು ಹೇಳಿದಂತೆ ನಾವು ನಮ್ಮ ಟಿಪ್ಪರ್ದಲ್ಲಿ ಬುಂಕುಲ್ ದೋಡ್ಡಿ ಹತ್ತಿರ ಕೃಷ್ಣ ನದಿಯಲ್ಲಿ ಮರಳು ತುಂಬಿ ಕಕ್ಕೆರಾ ಮಾರ್ಗವಾಗಿ ತಾಳಿಕೋಟಿಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದು ಇರುತ್ತದೆ ಅಂತಾ ತಿಳಿಸಿದರು. ಚಾಲಕ ಮತ್ತು ಹೇಲ್ಪರ್ಗೆ ವಿಚಾರಿಸಲಾಗಿ ಟಿಪ್ಪರ್ ಮಾಲೀಕನ ಹೆಸರು ರಾಘವೇಂದ್ರ ತಂದೆ ಅಮಲಪ್ಪ ಆದಿಮನಿ ಸಾ:ಮಂಜಲಪೂರ ಹಳ್ಳಿ ತಾ:ಹುಣಸಿಗಿ ಜಿ: ಯಾದಗಿರಿ  ಇವರು ಇರುತ್ತಾರೆ ಅಂತಾ ತಿಳಿಸಿದರು. ಮಾಲಕರು ಹೇಳಿದಂತೆ ನಾವು ಟಿಪ್ಪರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಬುಂಕುಲ್ ದೋಡ್ಡಿ ಹತ್ತಿರದ ಕೃಷ್ಣ ನದಿಯಲ್ಲಿನ ಮರಳನ್ನು ನಮ್ಮ ಸ್ವಂತ ಲಾಭಕ್ಕಾಗಿ ನಮ್ಮ ವಾಹನದಲ್ಲಿ ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದ್ದು ಸದರಿ ಟಿಪ್ಪರನ ಚಾಲಕ  ಮುತ್ತು ತಂದೆ ನಿಂಗಪ್ಪ ಚೌವನಬಾಯಿ ಜಾತಿ: ಕುರಬರ್ ವಯ:22 ವರ್ಷ ಸಾ: ಜೋಗುಂಡಬಾವಿ ತಾ: ಹುಣಸಿಗಿ ಜಿ:ಯಾಧಗಿರಿ ಮತ್ತು ಹೆಲ್ಪರ್ ಹಣಮಂತ ತಂದೆ ಗೋಪಲಪ್ಪ ಆದಿಮನಿ ವಯ:20 ವರ್ಷ ಜಾತಿ ಎಸ್.ಸಿ ಸಾ: ಮಂಜಲಪೂರಹಳ್ಳಿ ತಾ: ಹುಣಸಿಗಿ ಜಿ: ಯಾಧಗಿರಿ ಇವರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಕೊಡೇಕಲ್ ಪೊಲೀಸ್ ಠಾಣೆಗೆ ಈ ದಿನ ದಿನಾಂಕ:23/01/2019 ರಂದು ಬಂದು ಸಮಯ 00:45 ಎಎಮ್ಕ್ಕೆ, ನಿಮಗೆ ಈ ವರದಿಯೊಂದಿಗೆ ಒಪ್ಪಿಸಿದ್ದು, ಸದರಿ ಟಿಪ್ಪರ್ ನಂಬರ್ ಕೆ.ಎ-28 ಸಿ-4572 ಅಶೋಕ್ ಲಯಿಲಂಡ್ ಕಂಪನಿಯೆದ್ದರ ಚಾಲಕ, ಹೇಲ್ಪರ್, ಮಾಲಿಕನು ಯಾವುದೇ ರಾಯಲಿಟಿ, ರಾಜಧನ ತುಂಬದೆ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದು ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ಪಿಎಸ್ಐ ರವರು ಹಾಜರ ಪಡಿಸಿದ ವರದಿಯ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ: 06/2019 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!