ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-01-2019

By blogger on ಮಂಗಳವಾರ, ಜನವರಿ 22, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-01-2019 

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 06/2019 ಕಲಂ: 143,147,504,341,323,506 ಸಂ 149 ಐಪಿಸಿ :- ದಿನಾಂಕ: 21/01/2019 ರಂದು 7-25 ಪಿಎಮ್ ಕ್ಕೆ ಶ್ರೀ ದೇವಿಂದ್ರಪ್ಪ ತಂದೆ ಭೀಮರಾಯ ವಡಗೇರಿ, ವ:35, ಜಾ:ಕುರುಬರ, ಉ:ಒಕ್ಕಲುತನ ಸಾ:ಟೇಕರಾಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ದಿನಾಂಕ: 15/01/2019 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಮ್ಮ ಹತ್ತಿ ಹೊಲದಲ್ಲಿ ನಮ್ಮೂರ ರಾಚಪ್ಪ ತಂದೆ ಮಲ್ಲಯ್ಯ ಪೊಲೀಸ್ ಪಾಟಿಲ್ ಈತನು ತನ್ನ ಆಡುಗಳನ್ನು ಬಿಟ್ಟು ಮೇಯಿಸುತ್ತಿದ್ದಾಗ ನಾನು ಹೋಗಿ ನೋಡಿ ಹೊಲದಲ್ಲಿ ಆಡುಗಳನ್ನು ಏಕೆ ಖುಲ್ಲಾ ಬಿಟ್ಟು ಮೇಯಿಸುತ್ತಿದ್ದಿರಿ ಇನ್ನು ಹತ್ತಿ ಬಿಡಿಸುವುದು ಬಾಕಿ ಇದೆ ಎಂದು ಹೇಳಿ ಬೈದಾಗ ಅವರು ಆಡುಗಳನ್ನು ಹೊಡೆದುಕೊಂಡು ಹೊದರು. ನಂತರ ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ನಮ್ಮೂರ ಆಂಜನೇಯ ಗುಡಿ ಹತ್ತಿರ ನಮ್ಮ ಮನೆ ಕಡೆ ಹೋಗುತ್ತಿದ್ದಾಗ 1) ರಾಚಪ್ಪ ತಂದೆ ಮಲ್ಲಯ್ಯ ಪೊಲೀಸ್ ಪಾಟಿಲ್, 2) ಮಾಳಪ್ಪ ತಂದೆ ಮಲ್ಲಯ್ಯ ಪೊಲೀಸ್ ಪಾಟಿಲ್, 3) ಸುರೇಶ ತಂದೆ ಮಲ್ಲಯ್ಯ ಪೊಲೀಸ್ ಪಾಟಿಲ್, 4) ಹಣಮಂತ ತಂದೆ ಮಲ್ಲಯ್ಯ ಪೊಲೀಸ್ ಪಾಟಿಲ್ (ಜೋಗಿ), 5) ಹಣಮಂತ್ರಾಯಗೌಡ ತಂದೆ ಬಸಣ್ಣಗೌಡ ಪೊಲೀಸ್ ಪಾಟಿಲ್, 6) ಮರಿಲಿಂಗಪ್ಪಗೌಡ ತಂದೆ ಬಸಣ್ಣಗೌಡ ಪೊಲೀಸ್ ಪಾಟಿಲ್, 7) ಭೀಮಣ್ಣಗೌಡ ತಂದೆ ಬಸಣ್ಣಗೌಡ ಪೊಲೀಸ್ ಪಾಟಿಲ್, 8) ನಿಂಗಣ್ಣಗೌಡ ತಂದೆ ಬಸಣ್ಣಗೌಡ ಪೊಲೀಸ್ ಪಾಟಿಲ್ ಎಲ್ಲರೂ ಸಾ:ಟೇಕರಾಳ ಇವರುಗಳು ಅಕ್ರಮಕೂಟ ಕಟ್ಟಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಏ ಮಗನೆ ದೇವ್ಯಾ ಎಲ್ಲಿಗೆ ಹೋಗುತ್ತಿ ನಿಲ್ಲು ಸೂಳೆ ಮಗನೆ ಹೊಲದಲ್ಲಿ ಆಡುಗಳು ಹೊಕ್ಕೊಂಡರೆ ನಮ್ಮವರಿಗೆ ಬಾಯಿಗೆ ಬಂದಂಗೆ ಬೈದಿರುವಿಯಂತೆ ಎಂದು ಜಗಳ ತೆಗೆದವರೆ ನಿಂಗಣ್ಣಗೌಡ, ಭೀಮಣ್ಣಗೌಡ ಮತ್ತು ಮರಿಲಿಂಗಪ್ಪಗೌಡ ಇವರು ನನಗೆ ತೆಕ್ಕೆ ಕುಸ್ತಿಗೆ ಬಿದ್ದು ಹಿಡಿದುಕೊಂಡಾಗ ರಾಚಪ್ಪ, ಹಣಮಂತ ಮತ್ತು ಸುರೇಶ ಈ ಮೂರು ಜನರು ಬಂದು ಕೈಯಿಂದ ನನಗೆ ಮನಸ್ಸಿಗೆ ಬಂದಂಗೆ ಮೈಕೈಗೆ, ಎದೆಗೆ, ಬೆನ್ನಿಗೆ ಹೊಡೆದರು. ಬಿಡಿಸಲು ಬಂದ ನಮ್ಮಣ್ಣ ಹಣಮಂತ್ರಾಯ ತಂದೆ ಭೀಮರಾಯನಿಗೆ ಹಣಮಂತ್ರಾಯಗೌಡ ತಂದೆ ಬಸಣ್ಣಗೌಡನು ಹಿಡಿದುಕೊಂಡಾಗ ಮಾಳಪ್ಪ ತಂದೆ ಮಲ್ಲಯ್ಯನು ನಮ್ಮಣ್ಣನಿಗೆ ಕಾಲಿನಿಂದ ಒದ್ದಿರುತ್ತಾನೆ. ಆಗ ಜಗಳವನ್ನು ಬಸಣ್ಣಗೌಡ ತಂದೆ ಹಣಮಂತ್ರಾಯಗೌಡ ಮಾ|| ಪಾ||, ನಿಂಗಯ್ಯ ತಂದೆ ಭೀಮರಾಯ ನಾಯ್ಕೋಡಿ, ದೇವಪ್ಪ ತಂದೆ ನಿಂಗಪ್ಪ ಸಗರ ಮತ್ತು ಸಾಹೇಬಗೌಡ ತಂದೆ ನಿಂಗಪ್ಪ ಶಿವಣ್ಣೋರ ಇವರು ಬಂದು ಬಿಡಿಸಿದಾಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿ ಸೂಳೆ ಮಗನೆ ಇನ್ನೊಮ್ಮೆ ನಮ್ಮ ಹೆಸರಿಗೆ ಬಂದರೆ ನಿಮಗೆ ಜೀವಂತ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಕಾರಣ ನಮ್ಮ ಹೊಲದಲ್ಲಿ ಆಡುಗಳು ಏಕೆ ಬಿಟ್ಟಿರುವಿರಿ ಎಂದು ಕೇಳಿದರೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನಗೆ ಕೈಯಿಂದ ಹೊಡೆದಿದ್ದು ಈಗ ಮಾಯ್ದಿರುವುದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಹೋಗುವುದಿಲ್ಲ ಅಂತಾ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 06/2019 ಕಲಂ: 143,147,504,341,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 27/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 :- ದಿನಾಂಕ:21-01-2019 ರಂದು 11-30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ  ಶ್ರೀ ಟಿ.ಆರ್.ರಾಘವೇಂದ್ರ ಪಿ.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿಪಂಚನಾಮೆ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು ವರದಿ ನಿಡಿದ್ದು  ಸಾರಾಂಶವೆನೆಂದರೆ ಇಂದು ದಿನಾಂಕ:21-01-2019 ರಂದು 9 ಎ.ಎಮ್ ಸುಮಾರಿಗೆ ನಾನು ಠಾಣೆಯ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ಹಾಗೂ ಸಿಬ್ಬಂಧಿಯವರಾದ ಶ್ರೀ ಮನೋಹರ ಹೆಚ್ಸಿ-105, ಶ್ರೀ ಸೋಮಯ್ಯಾ ಸಿಪಿಸಿ-235 ಹಾಗೂ ಜೀಪ ಚಾಲಕ ಶ್ರೀ ಮಹಾಂತೇಶ ಎಪಿಸಿ-48 ಹಾಗೂ ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:38 ಉ: ಡ್ರೈವರ ಜಾತಿ: ಮುಸ್ಲಿಂ ಸಾ:ದೇವಾಪೂರ 2) ಶ್ರಿ ವೆಂಕಟೇಶ ತಂದೆ ರಾಮಣ್ಣ ಕಿಲಾರಿ ವಯಾ:33 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ವೆಂಕಟಾಪೂರ ಎಲ್ಲರೂ ಠಾಣೆಯಲ್ಲಿದ್ದದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಹೇಮನೂರ ಸೀಮಾಂತರ ಕೃಷ್ಣಾ ನದಿಯ ತೀರದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಶಖಾಪೂರ  ಕಡೆಗೆ ಸಾಗಿಸುತ್ತಿದ್ದಾರೆ ಮಾಹಿತಿ ತಿಳಿದು ಸದರಿ ಹಾಜರಿದ್ದ ಪಂಚರಿಗೂ ಹಾಗೂ ಸಿಬ್ಬಂಧಿಯವರಿಗೆ ವಿಷಯ ತಿಳಿಸಿ ಎಲ್ಲರೂ ಕೂಡಿ ಠಾಣೆಯ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ  ಹೊರಟು 9-45 ಎ.ಎಂ.ಕ್ಕೆ ಸುಮಾರಿಗೆ ಶಖಾಪೂರ ಹತ್ತಿರ ಹೋಗಿ ನಿಂತುಕೊಂಡಾಗ ಅದೇ ಸಮಯಕ್ಕೆ ಹೇಮನೂರ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಕೈ ಮಾಡಿ ನಿಲ್ಲಿಸಿಸಲು ಸದರಿ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಟ್ಯಾಕ್ಟರನ್ನು ನಿಲ್ಲಿಸಿ ಕೆಳಗೆ ಇಳಿದು ಓಡಿ ಹೊಗಿದ್ದು,  ಸದರಿ ಟ್ಯಾಕ್ಟರನ್ನು ಪರೀಶಿಲಿಸಲು ನೋಡಲು ಒಂದು ಮಹೇಂದ್ರ ಕಂಪನಿಯ ಟ್ಯಾಕ್ಟರ ಇದ್ದು ಅದರ ನಂಬರ ಇರುವದಿಲ್ಲ, ಅದರ ಇಂಜಿನ ನಂಬರ ಓಊಆ2ಒಃಇ0083 ಚೆಸ್ಸಿ ನಂಬರ ಒಃಓಎಂಂಐಂಃಊಓಆ00396 ಇರುತ್ತವೆ ಟ್ರಾಲಿಗೆ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕನು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಜಪ್ತಿ ಪಂಚನಾಮೆಯನ್ನು 9-45 ಎ.ಎಮ್ ದಿಂದ 10-45 ಎ.ಎಮ್ ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 26/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 :- ದಿನಾಂಕ:21-01-2019 ರಂದು 9 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ  ಶ್ರೀ ಟಿ.ಆರ್.ರಾಘವೇಂದ್ರ ಪಿ.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿಪಂಚನಾಮೆ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು ವರದಿ ನಿಡಿದ್ದು  ಸಾರಾಂಶವೆನೆಂದರೆ ಇಂದು ದಿನಾಂಕ:21-01-2019 ರಂದು 6 ಎ.ಎಮ್ ಸುಮಾರಿಗೆ ನಾನು ಠಾಣೆಯ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ಹಾಗೂ ಸಿಬ್ಬಂಧಿಯವರಾದ ಶ್ರೀ ಮನೋಹರ ಹೆಚ್ಸಿ-105, ಶ್ರೀ ಸೋಮಯ್ಯಾ ಸಿಪಿಸಿ-235 ಹಾಗೂ ಜೀಪ ಚಾಲಕ ಶ್ರೀ ಮಹಾಂತೇಶ ಎಪಿಸಿ-48 ರವರೆಲ್ಲರೂ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಹೇಮನೂರ ಸೀಮಾಂತರ ಕೃಷ್ಣಾ ತೀರದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಲಕ್ಷ್ಮಿಪೂರ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:38 ಉ: ಡ್ರೈವರ ಜಾತಿ: ಮುಸ್ಲಿಂ ಸಾ:ದೇವಾಪೂರ 2) ಶ್ರಿ ವೆಂಕಟೇಶ ತಂದೆ ರಾಮಣ್ಣ ಕಿಲಾರಿ ವಯಾ:33 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ವೆಂಕಟಾಪೂರ ಇವರನ್ನು ಠಾಣೆಗೆ 6-30 ಎ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಸಿಬ್ಬಂಧಿಯೊಂದಿಗೆ ಎಲ್ಲರೂ ಠಾಣೆಯ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ  ಹೊರಟು 7 ಎ.ಎಂ.ಕ್ಕೆ ಲಕ್ಷ್ಮಿಪೂರ ಕ್ರಾಸ ಹತ್ತಿರ ಹೋಗಿ ನಿಂತುಕೊಂಡಾಗ 7-15 ಎ.ಎಂ.ಕ್ಕೆ ಲಕ್ಷ್ಮಿಪೂರ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಕೈ ಮಾಡಿ ನಿಲ್ಲಿಸಿಸಲು ಸದರಿ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಟ್ಯಾಕ್ಟರನ್ನು ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದು ಓಡಿ ಹೊದನು.  ಸದರಿ ಟ್ಯಾಕ್ಟರನ್ನು ಪರೀಶಿಲಿಸಲು ನೋಡಲು ಒಂದು ಸ್ವರಾಜ್ಯ 735 ಈಇ  ಕಂಪನಿಯ ಟ್ಯಾಕ್ಟರ ಇದ್ದು ಅದರ ನಂಬರ ಕೆಎ-33 ಟಿ-0099 ನೇದ್ದು, ಅದರ ಇಂಜಿನ ನಂಬರ 39.1354/ಖಚಂ00547 ಚೆಸ್ಸಿ ನಂಬರ ಘಚಖಿಂ31419120760 ಇರುತ್ತವೆ ಟ್ರಾಲಿಗೆ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕನು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಜಪ್ತಿ ಪಂಚನಾಮೆಯನ್ನು 7-15 ಎ.ಎಮ್ ದಿಂದ 8-15 ಎ.ಎಮ್ ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 09/2019 ಕಲಂ: 20(ಚಿ) & (ಛ)ಎನ್.ಡಿ.ಪಿ.ಎಸ್. ಆಕ್ಟ್-1985 :- ದಿನಾಂಕ:21/01/2019 ರಂದು 06.30 ಪಿಎಂ ಕ್ಕೆ ಶ್ರೀ ಸುರೇಶ ಬಾಬು ಪಿಎಸ್ಐ ಸಾಹೇಬರುಒಬ್ಬಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆ ಹಾಜರಾಗಿಒಂದು ವರದಿ ನೀಡಿದ್ದರ ಸಾರಂಶಏನಂದರೆ, ನಾನು ಸುರೇಶಬಾಬು ಪಿ.ಎಸ್.ಐ ಗೋಗಿ ಪೊಲೀಸ್ಠಾಣೆ, ವರದಿ ಕೊಡುವದೇನೆಂದರೆಇಂದು ದಿನಾಂಕ 21/01/2019 ರಂದು 3:10 ಪಿ.ಎಂ.ಕ್ಕೆ ನಾನು ಠಾಣೆಯಲ್ಲಿದ್ದಾಗಖಚಿತ ಬಾತ್ಮೀ ಬಂದಿದ್ದೇನೆಂದರೆ ಹಾರಣಗೇರಾ ಸೀಮಾಂತರದ ತಾಂಡದಾಟಿದ ನಂತರ ಹಳ್ಳದ ಪಕ್ಕದಲ್ಲಿರುವ ಹೋಲದಲ್ಲಿಒಬ್ಬ ವ್ಯಕ್ತಿಯುಅನಧಿಕೃತವಾಗಿಗಾಂಜಾವನ್ನು ಮಾರಟಮಾಡುವಉದ್ದೇಶದಿಂದ ಬೇಳೆದು ಬೇಳೆ ಕಿಳಲು ಹೋಗಿದ್ದಾನೆಅಂತಾಖಚಿತ ಬಾತ್ಮಿ ಬಂದಿದ್ದರಿಂದ ಪಂಚರಾದ 1). ಶ್ರೀ. ಶರಣಪ್ಪತಂದೆಗುರಪ್ಪಯಂಕಂಚಿ ವಯಾ:54 ಉ: ಸಹ ಶಿಕ್ಷಕರು ಸರಕಾರಿಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಗೋಗಿ ಪೇಠಜಾ: ನೇಕಾರ ಸಾ: ಅರಳಗುಂಡಗಿ, ತಾ: ಜೇವಗರ್ಿ. 2). ಶ್ರೀ. ಎಂ.ಡಿ ಮೋಸಿನ ಖಾನ  ತಂದೆ ಮುತರ್ುಜಾಸಾಬ ಘ್ರಾಸ್ಮಂಡಿ ವಯಾ;30 ಉ: ಸಹ ಶಿಕ್ಷಕರು ಸರಕಾರಿಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಗೋಗಿ ಪೇಠ ಸಾ; ವಿಜಯಪೂರತಾ;ಜಿ; ವಿಜಯಪೂರ. ಇವರನ್ನುಠಾಣೆಗೆ ಕರೆಯಿಸಿಕೊಂಡು ಅವರಿಗೆ ಪೊಲೀಸ್ ನೊಟೀಸ್ ನೀಡಿಒಪ್ಪಿಗೆ ಪತ್ರ ಪಡೆದುಕೊಂಡು ಮತ್ತು ಸಮಕ್ಷಮಅಧಿಕಾರಿಕುರಿತು ಪತ್ರಾಂಕಿತ ಅಧಿಕಾರಿಗಳಾದ ಡಾ: ಸಂಜಯ ವೈಧ್ಯಾಧಿಕಾರಿಗಳು ಪ್ರಾಥಮಿಕಆರೋಗ್ಯಕೇಂದ್ರ ವನದುಗರ್ಾರವರನ್ನು ಬರಮಾಡಿಕೊಂಡು ಪೊಲೀಸ್ ನೊಟೀಸ್ ಮೂಲಕ ವಿನಂತಿಸಿಕೊಂಡು ಒಪ್ಪಿಗೆ ಪಡೆದುಕೊಂಡು ಹಾಗೂ ಗ್ರಾಮದ ಶ್ರೀ. ಲವಕುಮಾರತಂದೆ ಗುರುಸಿದ್ದಪ್ಪ ದೋತ್ರೆ  ಉ: ವ್ಯಾಪಾರ ಸಾ: ಗೋಗಿ ಪೇಠರವರನ್ನು ಬರಮಾಡಿಕೊಂಡು ವಶಪಡಿಸಿಕೊಂಡ ಮುದ್ದೆಮಾಲನ್ನುತೂಕ ಮಾಡಲು ಪೊಲೀಸ್ ನೊಟೀಸ್ ನೀಡಿಒಪ್ಪಿಗೆ ಪಡೆದುಕೊಂಡು ದಾಳಿಯ ಬಗ್ಗೆ ತಿಳಿಸಿ ನಾನು ಮತ್ತು ನಮ್ಮಠಾಣೆಯ ಪೊಲೀಸ್ ಸಿಬ್ಬಂಧಿಯವರಾದ ಶ್ರೀ, ಸೊಮಲಿಂಗಪ್ಪ ಹೆಚ್.ಸಿ-10, ಶ್ರೀ. ಮಲ್ಲಿಕಾಜರ್ುನ ಬಂಡಿ ಹೆಚ್.ಸಿ-35, ಶ್ರೀ. ಪ್ರೇಮಸಿಂಗ ಸಿ.ಪಿ.ಸಿ-318, ಶ್ರೀ. ವೀರೆಂದ್ರ ಸಿ.ಪಿ.ಸಿ-264, ಮಾಳಪ್ಪ ಸಿಪಿಸಿ-120. ರವರು ಲ್ಯಾಪಟಾಪಆಪರೇಟರ ಶರಣಗೌಡ ಹೆಚ್.ಸಿ-155 ಕೂಡಿಕೊಂಡುಜೀಪ್ ನಂ: ಕೆ.ಎ-33 ಜಿ-160 ನೇದ್ದರಲ್ಲಿ ಕುಳಿತುಕೊಂಡು 03.30 ಪಿ.ಎಮ್.ಕ್ಕೆ ಹೊರಟು 04.30 ಪಿ.ಎಮ್.ಕ್ಕೆ ಬಾತ್ಮಿ ಬಂದ ಸ್ಥಳವಾದ ಹಾರಣಗೇರಾ ಸೀಮಾಂತರದ ಹಾರಣಗೇರಾತಾಂಡಾದಾಟಿದ ನಂತರ ಹಳ್ಳದ ಪಕ್ಕದಲ್ಲಿನಒಂದು ಹೊಲದಲ್ಲಿಒಬ್ಬ ವ್ಯಕ್ತಿ ಹತ್ತಿ ಹೊಲದಲ್ಲಿ ಬೆಳೆ ಕಿತ್ತುವದನ್ನು ಸ್ವಲ್ಪದೂರಇರುವಾಗಜೀಪ್ ನಿಲ್ಲಿಸಿ ಎಲ್ಲರುಜೀಪಿನಿಂದ ಇಳಿದು ನಡೆದುಕೊಂಡು ಹೋಗಿ ಜಾಲಿ ಮರೆಯಲ್ಲಿ ನಿಂತು ನೋಡಲಾಗಿಒಬ್ಬ ವ್ಯಕ್ತಿಯುತನ್ನ ಹೊಲದಲ್ಲಿ ಹತ್ತಿ ಬೆಳೆಯ ಮದ್ಯದಲ್ಲಿ ಹಾಕಿದಗಾಂಜಾ ಬೆಳೆಯನ್ನು ಮಾರಾಟ ಮಾಡುವಉದ್ದೇಶದಿಂದಕಿತ್ತುವುದನ್ನು ನೋಡಿಖಚಿತ ಪಡಿಸಿಕೊಂಡು 04.45 ಪಿ.ಮ್.ಕ್ಕೆ ನಾನು ಮತ್ತು  ಪತ್ರಾಂಕಿತಅಧಿಕಾರಿ ಸಮಕ್ಷಮ, ಸಿಬ್ಬಂಧಿಯವರೊಂದಿಗೆ ದಾಳಿ ಮಾಡಿಗಾಂಜಾ ಮಾರಾಟ ಮಾಡುವಉದ್ದೇಶದಿಂದಕಿತ್ತುತ್ತಿದ್ದ ವ್ಯಕ್ತಿಯನ್ನು ನಾನು ಸಿಬ್ಬಂದಿ ಸಹಾಯದಿಂದ ಹಿಡಿದು, ಆತನ ಹೆಸರು, ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಲ್ಲಿಕಾಜರ್ುನತಂದೆಚನ್ನಬಸಪ್ಪ ಬೆವಿನಕಟ್ಟಿ ವಯಾ: 55 ವರ್ಷ ಉ:ಒಕ್ಕಲುತನ ಜಾ: ಮಾದರ ಸಾ: ಹಾರಣಗೇರಾಅಂತಾ ತಿಳಿಸಿದ್ದು ತನ್ನ ಮುಂದೆಇರುವಗಾಂಜಾಗಿಡವನ್ನುತನ್ನ ಹೊಲ ಸವರ್ೇ ನಂ: 99 ನೇದ್ದರಲ್ಲಿ 3 ಎಕರೆ 36 ಗುಂಟೆ ನೆದ್ದರಲ್ಲಿ ಹತ್ತಿ ಬೆಳೆಯ ಮಧ್ಯದಲ್ಲಿತಾನೇ ಸಾರ್ವಜನಿಕರಿಗೆ ಮಾರಾಟ ಮಾಡುವಉದ್ದೇಶದಿಂದ ಹಾಕಿದ್ದೇನೆೆಅಂತಾ ತಿಳಿಸಿದನು. ಸದರಿಗಾಂಜಾ ಮಾರಾಟಕುರಿತು ಬೆಳೆಯಲು ಪರವಾನಿಗೆ ಕೇಳಲಾಗಿ, ಪರವಾನಿಗೆಇಲ್ಲವೆಂದು ತಿಳಿಸಿದನು. ನಾನು ಆತನ ಅಂಗ ಜಪ್ತಿ ಮಾಡಲು ನೊಟೀಸ್ ನೀಡಿ ಸದರಿಯವನಒಪ್ಪಿಗೆ ಪಡೆದುಕೊಂಡು ಅಂಗ ಜಪ್ತಿ ಮಾಡಿದಾಗ ಅವನ ಹತ್ತಿರಕಿತ್ತಿರುವ ಹಸಿ ಗಾಂಜಾಗಿಡ ಸಿಕ್ಕದ್ದು, ಸದರ ಪ್ರಮಾಣ ತಿಳಿಯಲು ಲವಕುಮಾರತಂದೆ ಗುರುಸಿದ್ದಪ್ಪ ದೋತ್ರೆ  ಉ: ವ್ಯಾಪಾರ ಸಾ: ಗೋಗಿ ಪೇಠಇವರಿಂದತೂಕ ಮಾಡಿಸಿದ್ದು ಸದರಿ ಹಸಿಯಾಗಿರುವ ಗಾಂಜಾ ಗಿಡಗಳು 2.590 ಕಿ.ಗ್ರಾಂಆಗಿರುತ್ತದೆ. ಸದರಿಗಾಂಜಾದಅಂದಾಜುಕಿಮ್ಮತ್ತು 600=00 ರೂ. ಆಗುತ್ತದೆ. ನಾನು  0.195ಗ್ರಾಂಗಾಂಜಾದಒಂದು ಹಸಿ ಗಿಡವನ್ನುರಾಸಾಯನಿಕ ಪರೀಕ್ಷೆಕುರಿತುಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಶೀಲ್ ಮಾಡಿ ಜಿ.ಪಿ.ಎಸ್ಅಂತಾ ಶೀಲ್ ಮಾಡಿ ಪಂಚರ ಸಹಿ ನಿಶನೆ ಮಾಡಿದಚೀಟಿ ಅಂಟಿಸಿ ಜಪ್ತಿ ಮಾಡಿ, ನಮ್ಮ ವಶಕ್ಕೆ ತೆಗೆದುಕೊಂಡಿದ್ದು. ಉಳಿದ ಗಾಂಜಾಗಿಡವನ್ನುಒಂದುಚೀಲದಲ್ಲಿ ಹಾಕಿ ನಮ್ಮತಾಬಾಕ್ಕೆತೆಗದುಕೊಂಡಿದ್ದುಇರುತ್ತದೆ.ಸದರಿಜಪ್ತಿ ಮಾಡಿದ ಹೊಲವು ಹಾರಣಗೇರಾ ಸಿಮಾಂತರದಲ್ಲಿಯ ಆರೋಪಿತನ ಹೊಲ ಸವರ್ೇ ನಂ:99 ನೆದ್ದರಲ್ಲಿಇದ್ದು ಸದರಿಜಾಗೆಯಚೆಕ್ ಬಂದಿ ಈ ಕೆಳಗಿನಂತೆ ಇರುತ್ತದೆ. ಪೂರ್ವಕ್ಕೆ: 200 ಫೀಟ್ಅಂತರದಲ್ಲಿಆರೋಪಿ ಹೊಲ ದಾಟಿದ ನಂತರ ಬಸಣ್ಣಗೌಡ ಸಿಂಗನಳ್ಳಿಗೆ ಇವರ ಹೊಲ ಇರುತ್ತದೆ. ಪಶ್ಚಿಮಕ್ಕೆ: 15 ಪೀಟಅಂತರದಲ್ಲಿ ಹಳ್ಳ ಇದ್ದುಅದರ ಆಚೆಗೆ ಭೀಮರಾಯ ಪೂಜಾರಿಇವರ ಹೊಲ ಇರುತ್ತದೆ. ಉತ್ತರಕ್ಕೆ: 300 ಫೀಟ್ಅಂತರದಲ್ಲಿ ಬಸಣ್ಣಗೌಡ ಸಿಂಗನಳ್ಳಿ ಇವರ ಹೊಲ ಇರುತ್ತದೆ. ದಕ್ಷಿಣಕ್ಕೆ: 50 ಪೀಟಅಂತರದಲ್ಲಿಆರೋಪಿತನ ಕವಳಿ ತಗ್ಗುಇದ್ದುಅದರ ಆಚೆಗೆ ನಿಂಗಣ್ಣಗೌಡತಂದೆ ಬಸಣ್ಣಗೌಡ ಮಾಲಿಗೌಡರಇವರ ಹೊಲ ಇರುತ್ತದೆ. ಸದರಿ ಪಂಚನಾಮೆಯನ್ನುಇಂದು ದಿನಾಂಕ 21/01/2019 ರಂದು ಮದ್ಯಾಹ್ನ 04.45 ಪಿ.ಎಮ್.ದಿಂದ 05.45 ಪಿ.ಎಮ್.ದ ವೆರೆಗೆ ಸ್ಥಳದಲ್ಲಿ ಕುಳಿತು ಲ್ಯಾಪಟಾಪದಲ್ಲಿ ಶ್ರೀ ಶರಣಗೌಡ ಹೆಚ್.ಸಿ-155 ರವರಿಂದಟೈಪ ಮಾಡಿಸಿ ಕನೆಕ್ಟಿವಿಟಿ ಮೂಲಕ ಪ್ರಿಂಟತಗೆಯಲಾಯಿತು. ನಂತರಠಾಣೆಗೆ ಮರಳಿ 06.15 ಪಿ.ಎಮ್.ಕ್ಕೆ ಕೇಸಿನ ಸದರಿಒಬ್ಬಆರೋಪಿತ ಮತ್ತು ಮುದ್ದೆ ಮಾಲಿನೊಂದಿಗೆ ಮುಂದಿನ ಕ್ರಮಕುರಿತು ವರದಿ ಇರುತ್ತದೆ. ಅಂತಾ ವರದಿ ಸಾರಂಶದ ಮೇಲಿಂದಠಾಣೆಗುನ್ನೆ ನಂ: 09/2018 ಕಲಂ: 20(ಂ) ಂಟಿಜ (ಃ) ಎನ್.ಡಿ.ಪಿ.ಎಸ್. ಆಕ್ಟ್-1985 ಅಡಿ ಪರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 09/2019 ಕಲಂ 279, 337,338 ಐ.ಪಿ.ಸಿ :- ದಿನಾಂಕ: 20/01/2019 ರಂದು ಸಾಯಂಕಾಲ ಗಾಯಾಳು ಪ್ರಿಯಾಂಕಾ ಹಾಗು ಅಶ್ವಿನಿ ಇವರು ಭೀ.ಗುಡಿಯ ಬಲಭೀಮೇಶ್ವರ ಜಾತ್ರೆ ಮುಗಿಸಿಕೊಂಡು ಶಹಾಪೂರಕ್ಕೆ ಹೋಗುವ ಕುರಿತು ಅಟೋ ನಂ ಕೆಎ:33 ಎ: 8781 ನೇದ್ದರಲ್ಲಿ ಕುಳಿತು ಹೊರಟಾಗ ಅಟೋ ಚಾಲಕ ಲಿಂಗರಾಜ ಈತನು ಸಾಯಂಕಾಲ 6.30 ಗಂಟೆಗೆ ಭೀ.ಗುಡಿಯ ಅಗ್ರಿ ಕಾಲೇಜ್ ಐಬಿಯ ಮುಂದೆ ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮುಂದೆ ಹೋಗುತ್ತಿದ್ದ ವಾಹನಗಳಿಗೆ ಓವರ್ ಟೇಕ್ ಮಾಡಲು ಹೋಗಿ ಒಮ್ಮೆಲೆ ಕಟ್ ಹೊಡೆದಿದ್ದರಿಂದ ನಿಯಂತ್ರಣ ತಪ್ಪಿ ಅಟೋ ಪಲ್ಟಿ ಮಾಡಿದ್ದರಿಂದ  ಅಪಘಾತದಲ್ಲಿ ಅಟೋದಲ್ಲಿದ್ದ ಪ್ರಿಯಾಂಕಾ ಇವಳಿಗೆ ಎರಡೂ ಕಾಲುಗಳು ತೊಡೆಯಲ್ಲಿ ಮುರಿದಿದ್ದು, ಅದರಂತೆ ಅಶ್ವಿನಿ ಇವಳಿಗೆ ಕೈಗೆ ಪೆಟ್ಟಾಗಿರುತ್ತದೆ. ಸದರಿ ಗಾಯಾಳು ಪ್ರಿಯಾಂಕಾ ಇವಳಿಗೆ ಫಿಯರ್ಾದಿದಾರರು ಉಪಚಾರಕ್ಕಾಗಿ ಕಲಬುರಗಿಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು  ಕಾರಣ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಫಿಯರ್ಾದಿ ಇರುತ್ತದೆ. 

ಕೋಡೆಕಲ್ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ: 01/2019 ಕಲಂ 174 (ಸಿ) ಸಿ.ಆರ್.ಪಿ.ಸಿ :- ದಿನಾಂಕ:21.01.2019 ರಂದು 3:00 ಗಂಟೆಗೆ ಪಿರ್ಯಾಧಿ ಶ್ರೀ. ದೊಡ್ಡವ್ವ ಗಂಡ ಹುಲಿಗೆಪ್ಪ ಬಿರಾದಾರ ವಯ:60, ಉ:ಮನೆಗೆಲಸ, ಜಾ:ಬೇಡರ್, ಸಾ:ಕುರೇಕನಾಳ ತಾ:ಹುಣಸಗಿ, ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿರ್ಯಾಧಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ ಒಂದು ಗಂಡು ಮಗ ಆರು ಹೆಣ್ಣ ಮಕ್ಕಳಿದ್ದು, ಎಲ್ಲಾ ಆರು ಹೆಣ್ನುಮಕ್ಕಳಿಗೂ ಮದುವೆ ಮಾಡಿಕೊಟ್ಟಿದ್ದು, ಗಂಡು ಮಗನಾದ ಜುಮ್ಮಣ್ಣ ಈತನಿಗೆ ನನ್ನ ಹಿರಿಯ ಮಗಳಾದ ಸಾಬವ್ವಳ ಮಗಳಿಗೆ ತೆಗೆದುಕೊಂಡು ಮದುವೆ ಮಾಡಿದ್ದುಇರುತ್ತದೆ. ನನ್ನ ಮಗನಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇದ್ದು, ನನ್ನ ಮಗನು ನನ್ನೊಂದಿಗೆ ಸೊಸೆಯಾದ ಜಗದೇವಿ ಹಾಗು ನಾಲ್ಕು ಜನ ಮೊಮ್ಮಕ್ಕಳುಗಳು ಒಟ್ಟಿಗೆ ಇರುತ್ತಿದ್ದೇವು. ಹೀಗಿರುವಾಗ ನನ್ನ ಜೊಸೆಯಾದ ಜಗದೇವಿ ಇವಳು ಸುಮಾರು ಎರಡು ತಿಂಗಳುಗಳ ಹಿಂದೆ ನನ್ನಮಗನೊಂದಿಗೆ ತಕರಾರು ಮಾಡಿಕೊಂಡು ಹೋಗಿ ತನ್ನ ತಂದೆಯ ಹತ್ತಿರ ಮಕ್ಕಳೊಂದಿಗೆ ಇದ್ದಳು. ಮನೆಯಲ್ಲಿಯೇ ನಾನು ನನ್ನ ಮಗ ಜುಮ್ಮಣ್ಣ ಇಬ್ಬರು ಇದ್ದೇವು. ಶನಿವಾರ ದಿವಸ ನಾನು ಮನೆಯಲ್ಲಿದ್ದಾಗ ನನ್ನ ಮಗನು ಕೊಡೇಕಲ್ ಬ್ಯಾಂಕಿಗೆ ಹೋಗಿ ಬರುವದಾಗಿ ಹೇಳಿ ಬೆಳಿಗ್ಗೆ 09:00 ಗಂಟೆಯ ಸುಮಾರಿಗೆ ಹೋಗಿದ್ದನು. ಆ ದಿನ ಸಂಜೆಯಾದರೂ ನನ್ನ ಮಗ ಮನೆಗೆ ಬರದೇ ಇದ್ದಾಗ ನಾನು ಗಾಭರಿಗೊಂಡು ಆ ಕಡೆ ಈ ಕಡೆ ನೋಡಿದ್ದು, ಎಲ್ಲಿಯೂ ನನ್ನ ಮಗನು ಇರುವ ಬಗ್ಗೆ ಗೊತ್ತಾಗಲಿಲ್ಲ. ನಂತರ ಮರುದಿವಸ ನಮ್ಮೂರ ಹಣಿಮೇಲಿನ ತಾಂಡಾಕ್ಕೆ ಹೋಗಿ ನನ್ನ ಮಗನ ಬಗ್ಗೆ ತಾಂಡಾದಲ್ಲಿ ವಿಚಾರಿಸಿದ್ದು, ನನ್ನ ಮಗ ಜುಮ್ಮಣ್ಣನು ಬಂದಿರುವದಿಲ್ಲ ಅಂತಾ ಪತ್ತೇನಾಯಕ ತಿಳಿಸಿದನು. ನಂತರ ನಮ್ಮೂರಿಗೆ ಬಂದಾಗ ನಮ್ಮೂರಿನ ಬಸನಗೌಡ ಮತ್ತು ಶಾಂತಗೌಡ ಪೊಲೀಸ್ಪಾಟೀಲ್ ಮತ್ತು ನಿಂಗಪ್ಪ ಮಾಲಿಪಾಟೀಲ್ ಇವರಿಗೆ ತಿಳಿಸಿದಾಗ ಇವರು ನಿನ್ನಮಗ ದಿನಾಲೂ ಕುಡಿಯುತ್ತಾನೆ. ಎಲ್ಲಿಯಾದರೂ ಕುಡಿದು ಬಿದ್ದಿರುತ್ತಾನೆ ಬರಬಹುದು ಅಂತಾ ಹೇಳಿದ್ದರಿಂದ ನಾನೂ ಕೂಡಾ ನನ್ನ ಮಗನು ದಿನಾಲೂ ಕುಡಿಯುತ್ತಿರುವದರಿಂದ ಬರಬಹುದು ಅಂತಾ ಸುಮ್ಮನಾಗಿದೇನು. ಇಂದು ದಿನಾಂಕ:21.01.2019 ಮದ್ಯಾಹ್ನ 1:30 ಪಿ.ಎಮ್ ಸುಮಾರಿಗೆ ನಾನು ಊರಲ್ಲಿ ಇದ್ದಾಗ ನಮ್ಮೂರಿನ ಜನರು ನನ್ನ ಮಗ ಬರದೇವನಾಳ ಹಣಿ ಮೇಲಿನ ತಾಂಡಾದ ಸಮೀಪ ಸತ್ತಿರುತ್ತಾನೆ ಅಂತಾ ಸುದ್ದಿ ಗೊತ್ತಾಗಿ ಊರಿನ ಜನರೊಂದಿಗೆ ನಾನು, ನನ್ನ ಮಗ ಸತ್ತು ಬಿದ್ದಿದ್ದ ಸ್ಥಳಕ್ಕೆ ಹೋಗಿ ನೋಡಲು ಬರದೇವನಾಳ ಹಣಿ ಮೇಲಿನ ತಾಂಡಾದಲ್ಲಿ ಸತ್ತಿದ್ದು ನಿಜವಿತ್ತು. ನನ್ನ ಮಗನಿಗೆ ನೋಡಲು ಹಣೆಯ ಮೇಲೆ ಬಲಗಣ್ಣಿನ ಹತ್ತಿರ ತೊಗಲು ಸುಲಿದ ಗಾಯವಾಗಿದ್ದು, ಮೂಗು ಮತ್ತು ಬಾಯಿಯಿಂದ ರಕ್ತ ಬಂದಿದ್ದು, ಮೈಮೇಲೆ ಅಲ್ಲಲ್ಲಿ ತೊಗಲು ಸುಲಿದ, ತರಚಿದ ಗಾಯವಾಗಿದ್ದು ಕಂಡುಬಂದಿದ್ದು, ನನ್ನ ಮಗನು ದಿನಾಲು ಸರಾಯಿ ಕುಡಿಯುವ ಚಟದವನಿದ್ದು, ಕುಡಿದು ಮನೆಗೆ ಬರುತ್ತಿದ್ದು, ನಾನು ನನ್ನ ಮಗನಿಗೆ ಎಷ್ಟು ಬುದ್ದಿ ಹೇಳಿದರೂ ಕುಡಿಯುವದನ್ನು ಬಿಟ್ಟಿರುವದಿಲ್ಲ. ಹಣಿ ಮೇಲಿನ ತಾಂಡಾಕ್ಕೆ ಹೋಗಿ ಕುಡಿಯುತ್ತಿದ್ದನು. ತಾಂಡಾದಿಂದ ಕುಡಿದು ಬರುವಾಗ ಹಣಿಯ ಮೇಲಿನ ತಾಂಡಾದ ಹತ್ತಿರ ಸತ್ತಿದ್ದು, ಆದರೆ ನನ್ನ ಮಗನ ಮೈಮೇಲೆ ಮತ್ತು ಕಣ್ಣಿನ ಮೇಲೆ ತರಚಿದ ಗಾಯವಾಗಿದ್ದು, ನೋಡಿದರೆ ನನ್ನ ಮಗನ ಸಾವಿನಲ್ಲಿ ನನಗೆ ಸಂಶಯ ಇರುತ್ತದೆ. ಕಾರಣ ಮಾನ್ಯರವರು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಾರಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ:01/2019 ಕಲಂ 174 (ಸಿ) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತೆನಿಖೆ ಕೈಗೊಂಡೇನು. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!